ಭಾರತೀಯ ನ್ಯಾಯ ಶಾಸ್ತç ಮತ್ತು ಮಿತಾಕ್ಷರಿ

ಪ್ರಪಂಚದ ಯಾವುದೇ ಭಾಗದಲ್ಲಿ ನ್ಯಾಯಶಾಸ್ತç ಪ್ರತ್ಯೇಕವಾಗಿ ಬೆಳಿದುಬಂದಿಲ್ಲ. ಆಯಾ ದೇಶದ  ಧಾರ್ಮಿಕ ನೆಲೆಯಲ್ಲಿಯೇ ನ್ಯಾಯಶಾಸ್ತç ಬೆಳೆದುಬಂದದ್ದು ಕಂಡು ಬರುತ್ತದೆ.ಭಾರತೀಯ ನ್ಯಾಯ ಪಧ್ಧತಿಯಂತೂ ಧಾರ್ಮಿಕ ನೆಲೆಗಟ್ಟಿನ ಭದ್ರ ಬುನಾದಿಯ ಮೇಲೆ ಬೆಳೆದು ಬಂದಿದೆ. ನ್ಯಾಯವೂ ಧರ್ಮದ ಒಂದು ಭಾಗವಾಗಿರುವುದರಿಂದ ಮಾನವರ ನಡೆ ನುಡಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ವಿಶ್ವದ ನ್ಯಾಯ ಶಾಸ್ತçದಲ್ಲಿ ಭಾರತೀಯ ನ್ಯಾಯ ಶಾಸ್ತçವು ಪ್ರಾಚೀನವಾದದ್ದೆಂದು ವಿದ್ವಾಂಸರು ಸಂಶೋಧಿಸಿ ಹೇಳಿರುವುದು ಭಾರತೀಯರ ಹೆಗ್ಗಳಿಕೆಯಾಗಿದೆ.

ಕಾಲ ಮತ್ತು ಇತಿಹಾಸದ ದೃಷ್ಟಿಯಿಂದ ಹಿಂದು ನ್ಯಾಯ ಬೆಳವಣಿಗೆಯನ್ನು ಹಲವು ವಿದ್ವಾಂಸರು ಹಲವು ಘಟ್ಟಗಳಲ್ಲಿ ವಿಂಗಡಿಸಿದ್ದಾರೆ.ಅವುಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು.

೧)ಕಾನೂನು ಹಾಗು ನ್ಯಾಯಶಾಸ್ತçಕ್ಕೆ ಸಂಬAಧಿಸಿದAತೆ ತತ್ವಗಳನ್ನು ಒಳಗೊಂಡ ಧಾರ್ಮಿಕ ಗ್ರಂಥಗಳು. ಈ ಗ್ರಂಥಗಳ ತತ್ವಗಳೇ ಮುಂದೆ ಕಾನೂನುಗಳಾದವು.

೨ ಸ್ಮೃತಿಗಳು, ಧರ್ಮ ಶಾಸ್ತçಗಳು ಮತ್ತು ವ್ಯಾಖ್ಯಾನಗಳು ನಿರ್ದುಷ್ಟವಾಗಿ ನಾಗರೀಕ ಮತ್ತು ಅಪರಾಧ ಸಂಹಿತೆಯ ಅಂಶಗಳನ್ನು ಒಳಗೊಂಡಿವೆ. ಅವುಗಳನ್ನು ಹೀಗೆ ಗುರುತಿಸ ಬಹುದಾಗಿದೆ.

ಭಾರತದ ಸನಾತನ ಧರ್ಮಗಳಲ್ಲಿ ಹಿಂದೂ ಧರ್ಮವೂ ಒಂದು. ಹಿಂದು ಎಂದರೆ ಸಿಂಧು ನದಿಯ ತಟದಲ್ಲಿರುವ ಭಾಗ, ಅದು ಹಿಂದುಸ್ಥಾನ. ಹಿಂದುಸ್ಥಾನದಲ್ಲಿ ವಾಸಿಸುವವರು ಹಿಂದುಗಳು. ಪರ್ಶೀಯನ್ನರು ಸಿಂಧು ನದಿಗೆ ಹಿಂದು ಎಂದು ಕರೆಯುತ್ತಿದ್ದರು. ಆದ್ದರಿಂದ ಹಿಂದು ಶಬ್ದ ಜಾರಿಯಲ್ಲಿ ಬಂದಿದೆ. ಪ್ರಸ್ತುತ ಹಿಂದು ಧರ್ಮವು ವಿಶಾಲಾರ್ಥದಲ್ಲಿ ಬಳಕೆ ಗೊಳ್ಳುತ್ತಿದೆ. ಹಿಂದು ಧರ್ಮವೆಂದರೆ ಸನಾತನ, ಶಾಶ್ವತ, ವೇದಾಂತ ಜ್ಞಾನ ಹೊಂದಿರುವುದು ಎಂದು ಮುಂತಾಗಿ ಅರ್ಥೈಸಲಾಗುತ್ತದೆ.

ಪ್ರತಿಯೊಂದು ಧರ್ಮಕ್ಕೂ ಅದರೆದೇ ಆದ ಧರ್ಮ ಗ್ರಂಥಗಳಿರುತ್ತವೆ. ಹಣ್ಣಿನ ರಕ್ಷಣೆಗೆ ಸಿಪ್ಪೆಯಿರುವಂತೆ ಸರಿಯಾದ ಮಾರ್ಗದಲ್ಲಿ ಚಲಿಸಲು ಗ್ರಂಥಗಳ ಅವಶ್ಯಕತೆ ಇರುತ್ತದೆ ಎಂದು ರಾಮಕೃಷ್ಣಪರಮಹಂಸರು ಹೇಳುತ್ತಾರೆ. ಹಿಂದುಗಳಿಗೆ ಅನೇಕ ಧರ್ಮಗ್ರಂಥಗಳಿವೆ. ಅವುಗಳಲ್ಲಿ ಯಾವುದು ಶ್ರೇಷ್ಠ ಯಾವುದು ಕನಿಷ್ಠ ಎಂದು ಹೇಳುವಂತಿಲ್ಲಾ. ಹಿಂದು ಧರ್ಮದ ತತ್ವಗಳೆಲ್ಲಾ ವೇದಗಳಲ್ಲಿ ಸಂಗ್ರಹಿಸಿರುವುದರಿAದ ವೇದಗಳನ್ನು ಹಿಂದು ಧರ್ಮದ ಆಧಾರ ಗ್ರಂಥಗಳೆAದು ಗುರುತಿಸಲಾಗುತ್ತದೆ. ಇವು ಅಪೌರುಷೇಯ ಗ್ರಂಥಗಳು. ಎಂದರೆ ಸಾಕ್ಷಾತ್ ಪರಮಾತ್ಮನೇ ಇವುಗಳನ್ನು ಹೇಳಿದ್ದಾನೆ ಎಂಬ ಅಭಿಪ್ರಾಯವಿದೆ.. ಈ ವಾಣಿಯನ್ನು ಕೇಳಿದ್ದು `ಶ್ರುತಿ,’ಅದನ್ನು ನೆನಪಿನಲ್ಲಿ ಇಟ್ಟುಕೊಂಡದ್ದು `ಸ್ಮೃತಿ’ ಎಂದು ಹೇಳಲಾಗುತ್ತದೆ.

ಶ್ರುತಿ ಎಂದರೆ ಕೇಳಿಸಿಕೊಂಡದ್ದು, ಜ್ಞಾನ, ವೇದ ಎಂಬ ಅರ್ಥಗಳಿವೆ. ಶ್ರುತಿಯಲ್ಲಿಯ ಜ್ಞಾನವನ್ನು ಋಷಿಮುನಿಗಳು ಕಂಡುಕೊAಡರು. ಇವರನ್ನು ಮಂತ್ರ ದೃಷ್ಟಾರರೆಂದು ಕರೆಯುತ್ತಾರೆ. ಇವುಗಳ ಸಂಗ್ರಹವೇ ವೇದಗಳು. ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವೆಂದು ವಿಭಾಗಿಸಲಾಗಿದೆ.

ಋಗ್ವೇದ- ಈ ಗ್ರಂಥವು ಅತ್ಯಂತ ಪ್ರಾಚೀನವಾದದ್ದು. ಇದರಲ್ಲಿ ದೇವ-ದೇವತೆಗಳ ಪ್ರಾರ್ಥನೆ ಇದೆ. ಇದರಲ್ಲಿ ಸೃಷ್ಟಿ ಸ್ಥಿತಿ, ಲಯಗಳ ಕುರಿತು, ಭೂಲೋಕ, ದೇವಲೋಕ ಪಿತೃಲೋಕ ಮುಂತಾಗಿ ಹೇಳಲಾಗಿದೆ. ಇಲ್ಲಿಯ ವಿಚಾರಗಳು ಗಹನವೂ ಗಂಭೀರವೂ ಆಗಿವೆ. ಸಾಯಣಾಚಾರ್ಯರು, ಮಧ್ವಾಚಾರ್ಯರು ಈ ಗ್ರಂಥದ ಮೇಲೆ ಭಾಷ್ಯ ರಚಿಸಿದ್ದಾರೆ.

ಯಜುರ್ವೇದ-ಇದರಲ್ಲಿ ಯಜ್ಞಯಾಗಾದಿಗಳ ಕುರಿತು ಮಾಹಿತಿಗಳು ಇವೆ. ರಾಜಸೂಯಾಗ, ಅಶ್ವಮೇಧಯಾಗಗಳ ವಿವರಣೆ ಇದೆ. ಋತ್ವಿಜರು, ಅಧ್ವೆöÊರ್ಯರು ಹೇಳುವ ಮಂತ್ರಗಳ ಕುರಿತಾದ ವಿವರಣೆಗಳಿವೆ. ಇದರಲ್ಲಿ ಶುಕ್ಲಯಜುರ್ವೇದ, ಕೃಷ್ಣಯಜುರ್ವೇದ ಎಂಬ ಪ್ರಕಾರಗಳಿವೆ.

ಸಾಮವೇದ- ಸಾಮ ಎಂದರೆ ಗಾನ. ಇದರಲ್ಲಿಯ ಮಂತ್ರಗಳನ್ನು ಗಾನರೂಪದಲ್ಲಿ  ದೇವತೆಗಳನ್ನು ಸ್ತುತಿಸಲಾಗುತ್ತದೆ. ಮಂತ್ರಗಳನ್ನು ಸ್ವರ ಲಯ ಬಧ್ಧವಾಗಿ ಹೇಳಬೇಕಾಗುತ್ತದೆ.

ಅಥರ್ವಣ ವೇದ-; ಇದು ಪದ್ಯ ಗದ್ಯದಲ್ಲಿ ರೂಪಗೊಂಡ ಶೈಲಿಯನ್ನು ಹೊಂದಿದೆ. ಇದರಲ್ಲಿ ವಿವಾಹ ಪಧ್ಧತಿ, ಶವಸಂಸ್ಕಾರ ಪಧ್ಧತಿ, ಗೃಹನಿರ್ಮಾಣದ ಪಧ್ಧತಿ, ರಾಜನನ್ನು ಆಯ್ಕೆಮಾಡುವ ವಿಧಾನ, ಯುಧ್ಧಗಳ ಕುರಿತು, ತಸ್ಕರ ವಿದ್ಯಗಳ ಕುರಿತು ಆಯುಷ್ಯವರ್ಧನ, ಶ್ರೇಯಸ್ಸು ಇತ್ಯಾದಿ ವಿಷಯಗಳಿವೆ. ಇದನ್ನು ಬ್ರಹ್ಮವೇದವೆಂದೂ ಕರೆಯಲಾಗುತ್ತದೆ. ಇವೆಲ್ಲವುಗಳನ್ನು ವಿಷಯಾಧಾರಿತವಾಗಿ ಕರ್ಮಕಾಂಡ,   ಉಪಾಸನಕಾಂಡ, ಜ್ಞಾನಕಾಂಡವೆAದು ವಿಭಾಗಿಸಲಾಗುತ್ತದೆ.

ಪ್ರತಿಯೊಂದು ವೇದಗಳನ್ನು ಮೂರು ಭಾಗವಾಗಿ ವಿಭಾಗಿಸಲಾಗುತ್ತದೆ. ೧) ಮಂತ್ರಗಳು,  ೨) ಬ್ರಾಹ್ಮಣಕಗಳು ೩)ಉಪನಿಷತ್ತುಗಳು. ಇವುಗಳು ಸ್ತುತಿ ಪದ್ಯಗಳು. ಅಗ್ನಿ.ವರುಣ ಇಂದ್ರಾದಿದೇವತೆಗಳನ್ನು ಹೊಗಳುವ ಪದ್ಯಗಳು. ಬ್ರಾಹ್ಮಣಕಗಳೆಂದರೆ ಯಜ್ಞ-ಯಾಗಾದಿಗಳನ್ನು ಮಾಡುವಾಗ ಹೇಳುವ ಮಂತ್ರಗಳು. ಯಜ್ಞದ ಮಹತ್ವ ಅದರ ಅವಶ್ಯಕತೆ, ಮಾಡುವ ವಿಧಾನವನ್ನು ಹೇಳುತ್ತವೆ. ಉಪನಿಷತ್ತುಗಳೆಂದರೆ ಜ್ಞಾನ ಕಾಂಡಗಳು. `ಉಪ’ ಎಂದರೆ ಹತ್ತಿರ `ನಿ’ ಕೆಳಗೆ (ಷತ್) ಕೆಳಗೆ ಕುಳಿತು ಕಲಿಯುವ ವಿದ್ಯ ಎಂದು ಅರ್ಥ. ಸ್ಥೂಲವಾಗಿ ಹೇಳುವುದಾದರೆ ನಮ್ಮನ್ನು ಪರಮಾತ್ಮನ ಕಡೆಗೆ ಕರೆದೊಯ್ಯುವ ವಿದ್ಯಯಾಗಿದೆ. ಇವು ಧರ್ಮಗ್ರಂಥಗಳ ಆಧಾರ ಸ್ಥಂಭಗಳು. ಇವುಗಳನ್ನು ವೇದಾಂತಗಳೆAದೂ ಕರೆಯಲಾಗುತ್ತದೆ. ಪ್ರಸ್ತುತ ೨೨೦ ಉಪನಿಷತ್ತುಗಳೆವೆಯಂದು ವಿದ್ವಾಂಸರು ಹೇಳುತ್ತಾರೆ. ಅವುಗಳಲ್ಲಿ ೧೦೮ ಪ್ರಾಚೀನ ಉಪನಿಷತ್ತುಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಈಶಾವಾಸ್ಯ, ಕೇನ, ಕಠ,  ಪ್ರಶ್ನ, ಮುಂಡಕ, ಮಾಂಡೂಕ್ಯ, ಐತ್ಯರೇಯ, ತೈತ್ಯರೇಯ, ಛಾಂಡೂಕ್ಯ, ಬೃಹದಾರಣ್ಯಕ, ಕೌಶಿತಕಿ ಮತ್ತು ಶ್ವೇತಾಶ್ವತರ ಬಹು ಮುಖ್ಯವಾದವುಗಳಾಗಿವೆ. ಇವುಗಳಲ್ಲಿ ಹಿಂದೂ ಧರ್ಮದ ಬಹು ಮುಖ್ಯ ಸಾರದ ಅಂಶಗಳು ಇಲ್ಲಿ ವಿವರಿಸಲ್ಪಟ್ಟಿವೆ. ಅತ್ಮ ಸಾಕ್ಷಾತ್ಕಾರದ ವಿಚಾರಗಳನ್ನು ವಿವರಿಸಲಾಗಿದೆ.

ಸ್ಮೃತಿ ಎಂದರೆ ನೆನಪಿಟ್ಟುಕೊಳ್ಳುವುದು ಎಂದರ್ಥ. ಶ್ರುತಿಯು ಅನುಭೂತಿಯಾದರೆ ಸ್ಮೃತಿಯು ಅದರ ಸ್ಮರಣೆಯಾಗಿದೆ. ವೇದ ಉಪನಿಷತ್ತಿನಲ್ಲಿರುವ ವಿಚಾರಗಳು ನಮ್ಮ ನಡೆ-ನುಡಿಯಲ್ಲಿ ಬರಲು ಅನೇಕ ರೂಢಿ ಸಂಪ್ರದಾಯಗಳು ಹುಟ್ಟಿಕೊಂಡವು. ಅವುಗಳೆ ಸ್ಮೃತಿಗಳಾದವು. ಇವು ಪೌರುಷೇಯಗಳು. ವೇದಗಳೇ ಇವುಗಳಿಗೆ ಮೂಲ ಆಧಾರವಾಗಿರುವುದರಿಂದ ಇವು ಹಿಂದು ಧರ್ಮದ ಮಹತ್ವದ ಗ್ರಂಥಗಳೆAದು ಗುರುತಿಸಿಕೊಂಡವು. ಇವುಗಳಲ್ಲಿ ಐದು ಭಾಗಗಳಿವೆ ಅವುಗಳೆಂದರೆ ಆಚಾರಸಂಹಿತೆ, ಇತಿಹಾಸ, ಪುರಾಣಗಳು, ಆಗಮಗಳು, ದರ್ಶನಗಳು.

ವೇದಗಳು ಶ್ರುತಿಗಳು ಧರ್ಮಗ್ರಂಥಗಳಾಗಿದ್ದರೂ ನ್ಯಾಯ ಪಧ್ಧತಿಯ ಮೂಲಭೂತ ಅಂಶÀಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮಾನವನ ಉನ್ನತ ನಡುವಳಿಕೆಯ ಮೌಲ್ಯಗಳನ್ನು ಕಾಣಬಹುದು.ಸತ್ಯಂ ವದ,ಧರ್ಮಂ ಚರ ಧರ್ಮದಲ್ಲಿ ನಡೆ. `ಮಾತೃದೇವೋ ಭವ’, `ಪಿತೃ ದೇವೋ ಭವ’ ಹೀಗೆ ಈ ಮಾತುಗಳು ಜಾತಿಮತ ಪಂಥವನ್ನು ಮೀರಿ ನಿಲ್ಲುತ್ತವೆ. ಇವು ಸಹಜ ಮತ್ತು ಉದಾತ್ತ ಮಾನವ ಧರ್ಮಗಳಾಗಿವೆ. ಇಂಥ ಮಾತುಗಳೇ ನ್ಯಾಯ ಶಾಸ್ತçದ ಆಧರ ಸ್ತಂಭಗಳಾಗಿವೆ.

ಧರ್ಮಶಾಸ್ತçಗಳಲ್ಲಿ ಧರ್ಮಸೂತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಇವುಗಳು ತತ್ವ ಮತ್ತು ಆಚರಣೆಗಳಿಗಾಗಿ ಪ್ರತ್ಯೇಕವಾಗಿ ರೂಪಿಸಲ್ಪಟ್ಟವು. ವಿಷಯಗಳನ್ನು ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಹೇಳುವುದು ಇವುಗಳ ಲಕ್ಷಣವಾಗಿದೆ. ಇವು ಶಾಸ್ತç ಬೋಧಕರಿಗೆ ಕೈಪಿಡಿಗಳಿದ್ದಂತೆ. ಇವುಗಳ ಸಹಾಯದಿಂದಲೆ ಧರ್ಮಜ್ಞರು ನ್ಯಾಯಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವುಗಳ ನಂತರದ ಸ್ಥಾನವೇ ಸ್ಮೃತಿಯದು.

ನ್ಯಾಯಶಾಸ್ತç ಬೆಳವಣಿಗೆಯಲ್ಲಿ ಸ್ಮೃತಿಗಳು ಅಧಾರ ಸ್ತಂಭಗಳಾಗಿವೆ. ಇವು ಆಧುನಿಕ ನ್ಯಾಯ ಸಂಹಿತೆಯನ್ನು ಹೋಲುತ್ತವೆ. ಇವುಗಳನ್ನು ಹಿಂದು ನ್ಯಾಯೇತಿಹಾಸದ ಸುವರ್ಣ  ಯುಗವೆಂದು ಕರೆಯಲಾಗಿದೆ. ಯಾಕೆಂದರೆ “ಇವುಗಳು ನ್ಯಾಯ ಸಂಹಿತೆಯೊAದಿಗೆ, ನ್ಯಾಯಾಲಯಗಳ ರೂಪರೇಶೆ, ನ್ಯಾಯಾಲಯಗಳ ವರ್ಗೀಕರಣ, ನ್ಯಾಯಾಧೀಶರ ನೇಮಕ, ಅವರ ಅರ್ಹತೆಗಳು, ಕಾನೂನು ಜಾರಿಯ ನಿಯಮಗಳು’’ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಕ್ರಮಬಧ್ಧವಾಗಿ ಬೆಳೆದುಬಂದ ಭಾರತದ ಪಾಚೀನ ನ್ಯಾಯ ಶಾಸ್ತçದ ಪಧ್ದತಿಯನ್ನು ಸ್ಮೃತಿಗಳು ತಿಳಿಸಿಕೊಡುತ್ತವೆ.

 ಇವರ ಕಾಲವನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಸ್ಮೃತಿಕಾರರಲ್ಲಿ ಮನುವೆ ಅಗ್ರಗಣ್ಯನೆಂದು ಹೇಳಲಾಗುತ್ತದೆ. ಮನುಸ್ಮೃತಿಯ ಕಾಲವನ್ನು ಕ್ರಿ.ಪೂ.೨೦೦ ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಹಲವಾರು ಸ್ಮೃತಿಗಳು ರಚನೆಯಾಗಿದ್ದರೂ ಪ್ರಮುಖವಾಗಿ ಆರು ಸ್ಮçತಿಗಳನ್ನು ಗುರುತಿಸಲಾಗಿದೆ. ಮನುಸ್ಮೃತಿ,ಯಾಜ್ಞವಲ್ಕಸ್ಮೃತಿ,  ನಾರದ ಸ್ಮೃತಿ, ಪರಾಶರ ಸ್ಮೃತಿ, ಬ್ರಹ್ಮಸ್ಮೃತಿ, ಕಾತ್ಯಾಯನ ಸ್ಮೃತಿ. ಇವುಗಳಲ್ಲಿ ವ್ಯಾವಹಾರಿಕ ವಿಚಾರಗಳಿಗೆ ಹೆಚ್ಚಾಗಿ ಮಹತ್ವ ಕೊಟ್ಟಿಲ್ಲಾ. ಆನಂತರ ಕಾಲಾನುಕ್ರಮದಲ್ಲಿ ಜನರಲ್ಲಿ ಬೆಳೆದು ಬಂದ ರೂಡಿ ಸಂಪ್ರದಾಯಗಳಿಗೆ ಅನುಗುಣವಾಗಿ  ಸ್ಥಾನ ನೀಡಿದ್ದಾರೆ. ಆತ್ಮಸಾಕ್ಷಿಯ ನಡುವಳಿಕೆ ಜ್ಞಾನಿಗಳ ಸದ್ವಿವೇಕವು ನ್ಯಾಯ ಶಾಸ್ತçದ ವ್ಯವಹಾರಿಕ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಿವೆ.

ಸ್ಮೃತಿಗಳು ಗಂಭಿರವಾದ ಕಠಿಣವಾದ ಶ್ಲೋಕಗಳನ್ನು ಒಳಗೊಂಡಿದ್ದವು. ಅವುಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿರಲಿಲ್ಲಾ. ಅವುಗಳನ್ನು ಅರ್ಥಮಾಡಿಸಲು ವ್ಯಾಖ್ಯಾನಕಾರರು ಬಂದರು. ಇವರು ಸ್ಮೃತಿಗಳಲ್ಲಿರುವ ಆ ಕಾಲಕ್ಕೆ ಸಂಬAಧಿಸಲಾರದ ವಿರೋಧಾಭಾಸ ವಿಚಾರಗಳನ್ನು ತೆಗೆದು ಸರಿಯಾದ ಅರ್ಥಬರುವಂತೆ ವಿವರಿಸುವ ಕೆಲಸ ಮಾಡಿದರು. ಆಯಾ ಕಾಲಕ್ಕೆ ಪ್ರಸ್ತುತವಾಗುವ ವಿಚಾರವನ್ನು ವಿಶದೀಕರಿಸಿ ಪ್ರಸ್ತುತ ಪಡಿಸಿದರು. ಇದು ಹಿಂದು ನ್ಯಾಯಾಧಿಕರಣದ ಬೆಳವಣಿಗೆಗೆ ಕಾರಣವಾಯಿತು. ವ್ಯಾಖ್ಯಾನಕಾರರು ಬರದೇ ಹೋಗಿದ್ದರೆ ಸ್ಮೃತಿಕಾರರ ಮತ್ತು ಜನರ ನಡುವೆ ಕಂದಕವೇ ಏರ್ಪಡುತ್ತಿತ್ತು. ಸಾಧಾರಣವಾಗಿ ಎಲ್ಲಾ ಸ್ಮೃತಿಗಳಿಗೆ ವ್ಯಾಖ್ಯಾನ ಬರೆಯಲಾಗಿದೆ. ಆದರೆ ಕೆಲವು ಟೀಕೆ ಟಿಪ್ಪಣೆಗಳನ್ನು ಜನ ಒಪ್ಪಿಕೊಂಡಿಲ್ಲಾ. ಕೆಲವನ್ನು ಮನಸಾ ಒಪ್ಪಿಕೊಂಡಿದ್ದಾರೆ. ಅಂಥದರಲ್ಲಿ ವಿಜ್ಞಾನೇಶ್ವರರು ಯಾಜ್ಞವಲ್ಕರ ಸ್ಮೃತಿಗೆ ಬರೆದ ವ್ಯಾಖ್ಯಾನ . ಆ ವ್ಯಾಖ್ಯಾವೇ `ಮಿತಾಕ್ಷರ’.

 ಇದು ಹನ್ನೆರಡನೆಯ ಶತಮಾನದಲ್ಲಿ ರÀಚನೆಯಾಗಿ ವಿಶ್ವದಾದ್ಯಂತ ಖ್ಯಾತಿ ಪಡೆದುಕೊಂಡಿತ್ತು. ಆದರೆ ಈ ವ್ಯಾಖ್ಯಾನ ಯಾರದು ಎಂದು ತಿಳಿದಿರಲಿಲ್ಲಾ. ಮರತೂರಿನಲ್ಲಿ ದೊರೆತ ಶಾಸನದಲ್ಲಿಯ ವಿಜ್ಞಾನೇಶ್ವರನ ವಿಚಾರವನ್ನು ಮೊಟ್ಟ ಮೊದಲು ಗುರುತಿಸಿದ್ದು ಪಿ.ಬಿ.ದೇಸಾಯಿಯವರು. ಅವರು ಪ್ರಾಚೀನ ಕರ್ನಾಟಕ ಹೊಸಬೆಳಕು ಎಂದು ೧೯೩೨ ರಲ್ಲಿ ಪ್ರಕಟಿಸಿದರು. ಆನಂತರ ಡಾ.ವಿ.ಎಸ್.ಕುಲಕರ್ಣಿಯವರು ೧೯೮೧ ರ ಕರ್ನಾಟಕ ಇತಿಹಾಸ ಅಕಾಡೆಮಿಯ ಮುಖಪುಟ ಇತಿಹಾಸ ದರ್ಶನದಲ್ಲಿ ಪ್ರಕಟಿಸಿದರು. ಅನಂತರ ಲಿಪಿಶಾಸ್ತçಜ್ಞರಾದ ಸೀತಾರಾಮ ಜಾಹಗಿರದಾರ ಅವರು ಶಾಸ್ತಿçÃಯವಾಗಿ ಅಧ್ಯಯನ ಮಾಡಿ ಅದರಲ್ಲಿಯ ಅಂಶಗಳನ್ನು ಪ್ರಕಟಿಸಿದರು. ಮುಂದೆ ಸಂಶೋಧಕರಾದ ಸೂರ್ಯನಾಥ ಕಾಮತ ಅವರು ನಿವೃತ್ತನ್ಯಾಮುರ್ತಿಗಳಾದ ಶ್ರೀರಾಮಾಜೋಯಿಸರ ಗಮನ ಸೆಳೆದರು.ಆಗ ಅವರು ೧೯೯೦ರಲ್ಲಿ ಮರತೂರಿನಲ್ಲಿ `ರಾಷ್ಟಿçಯ ವಿಜ್ಞಾನೇಶ್ವರ ಸ್ಮಾರಕ ಹಾಗೂ ಸಂಶೋಧನ ಕೆಂದ್ರವನ್ನು ಸ್ಥಾಪಿಸಿದರು. ಮರತೂರಿನಲ್ಲಿ ದೊರೆತ ಶಾಸನವು ಭಾರತೀಯ ನ್ಯಾಯಶಾಸ್ತçದ ಮೇಲೆ ಬೆಳಕು ಚಲ್ಲುವ ಮಹತ್ವದ ದಾಖಲೆಯಾಗಿದೆ.

ಕ್ರಿ. ಶ. ೧೧೨೩ ಜನೆವರಿ ೬ ನೇ ತಾರೀಕಿನಂದು ಬರೆಯಲಾದ ಈ ಶಾಸನವು ನ್ಯಾಯಶಾಸ್ತçಕ್ಕೆ ಹಾಗೂ ವಿಜ್ಞಾನೇಶ್ವರನ ಕುರಿತಾಗಿ ಮಹತ್ವದ ಅಂಶವನ್ನು ಬೆಳಕಿಗೆ ತಂದಿದೆ. ವಿಜ್ಞಾನೇಶ್ವರನು ಇಂದಿನ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಸಿಮಡು ಎಂಬ ಗ್ರಾಮದಲ್ಲಿ ಜನಿಸಿದ್ದಾನೆ. ಇವರ ತಂದೆತಾಯಿ ಕೌಶಿಕ ಗೋತ್ರದ ಸೋಮರಾಜ ಮತ್ತು ಭಾಗ್ಯವಂತೆ. ಈತನ ನಿಜನಾಮ ಕಂಚ.  ವಿಜ್ಞಾನೇಶ್ವರ ಎಂಬುದು ಈತನ ಬಿರುದು ಆಗಿರಬಹುದು. ವಿಜ್ಞಾನೇಶ್ವರನ ಹೆಂಡತಿ ಕೇತಿಕಬ್ಬೆ. ಇವರಿಗೆ ನಾಲ್ಕು ಮಕ್ಕಳು. ಅದರಲ್ಲಿ ಕೊನೆಯ ಮಗ ಬೀಚಿರಾಜನು. ಈತನು ಪೆರ್ಗಡೆಯಾಗಿದ್ದು ಅಲಂದೆ ಸಾವಿರ ಉಪವಿಭಾಗದ ಗೊಂಕನಾಡಿನ ಮರತೂರಿನಲ್ಲಿದ್ದು ಶಾಸನ ಬರೆಸಿದುದಾಗಿ ತಿಳಿದು ಬರುತ್ತದೆ. ವಿಜ್ಞಾನೇಶ್ವರ ಬರಿಶಾಸ್ತç ಪಂಡಿತನಲ್ಲಾ, ಶಸ್ತçಪಂಡಿತನೂ ಆಗಿದ್ದ. ವಿಕ್ರಮಾದಿತ್ಯನ ಆಸ್ಥಾನದಲ್ಲಿ ಗೌರವಾನ್ವಿತನಾಗಿದ್ದ ಎಂಬುದು ತಿಳಿದು ಬರುತ್ತದೆ. ಒಟ್ಟಿನಲ್ಲಿ ಕನ್ನಡಿಗರು ಹೆಮ್ಮೆ ಪಡುವ ವ್ಯಕ್ತಿ ಎಂಬುವುದರಲ್ಲಿ ಸಂಶÀಯವಿಲ್ಲ.

         ಮಿತಾಕ್ಷರ ಹೆಸರೇ ಹೆಳುವಂತೆ ಕಡಿಮೆ ಅಕ್ಷರಗಳಲ್ಲಿ ಕಾನೂನಿನ ಸೂಕ್ಷö್ಮತೆಯನ್ನು, ಸಂಕೀರ್ಣತೆಯನ್ನು, ಆಳ-ವಿಸ್ತಾರವನ್ನು, ಮತ್ತು ಸಂಕೀರ್ಣತೆಯನ್ನು ಸಂಶಯಾತೀತವಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ ಸಾರ್ವಕಾಲಿಕ ಶ್ರೇಷ್ಠಗ್ರಂಥ. ಇದು  ಧರ್ಮಸೂತ್ರಗಳನ್ನು ಹೋಲುತ್ತದೆ.

      ಹನ್ನೆರಡನೆಯ ಶತಮಾನದ ಸಂದರ್ಭದಲ್ಲಿ ಸಂವಹನ ಸಂಕರ್ಪಕವಿಲ್ಲದೇ ಇದ್ದ ಸಂದರ್ಭದಲ್ಲಿ ಇಡೀ ಭಾರತವನ್ನು ವ್ಯಾಪಿಸಿದ್ದು ಮತ್ತು ಜನಮಾನಸದಲ್ಲಿ ಉಳಿದಿದ್ದು ವಿಶೇಷವೇ ಸರಿ. ಹನ್ನೊಂದುನೂರು ವರ್ಷಗಳ ನಂತರವೂ ಕೌಟಿಲ್ಯನ ಅರ್ಥಸಾಸ್ತçದ ನಂತರ ನ್ಯಾಯಶಾಸ್ತç ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಮಿತಾಕ್ಷರ ಉಳಿದು ಬಂದಿರುವುದು ವಿಶೇಷವಾಗಿದೆ. ಕಾಲಗರ್ಭದಲ್ಲಿ ನಾಶವಾಗದೆ, ಪರಕೀಯರದಾಳಿಗೆ ಬಲಿಯಾಗದೆ, ಬೇರೆ ಸಂಸ್ಕೃತಿಯ ಪ್ರಭಾವಕ್ಕೆ ಬಲಿಯಾಗದೆ ಪ್ರಸ್ತುತತೆಯನ್ನು ಕಳೆದುಕೊಳ್ಳದೇ ಇರುವುದು ವಿಶೇಷವಾಗಿದೆ. ಮಿತಾಕ್ಷರ ವಿಲ್ಲದೆ ಭಾರತೀಯ ನ್ಯಾಯಶಾಸ್ತçವನ್ನು ಊಹಿಸುವುದು ಕಷ್ಟವಾಗಿದೆ. ಇಂದಿಗೂ ನ್ಯಾಯಾಧೀಶರು  ಮಿತಾಕ್ಷರ ಗ್ರಂಥವನ್ನು ಆಕರ ಗ್ರಂಥವನ್ನಾಗಿ ನೋಡುತ್ತಾರಂತೆ.

  ಮಿತಾಕ್ಷರ `ಯಾಜ್ಞವಲ್ಕö್ಯಸ್ಮçತಿ’ ಗೆ ಬರೆದ ವ್ಯಾಖ್ಯಾನ. ಇದು ಮನುಸ್ಮೃತಿಯ ನಂತರ ಬಂದ ಮಹತ್ವದ ಸ್ಮೃತಿಯಾಗಿದೆ. ಇದರಲ್ಲಿ ಭಾರತೀಯರ ಸಾಮಾಜಿಕ, ರಾಜಕೀಯ, ನ್ಯಾಯಿಕ ಪಧ್ಧತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸುವ ಅತ್ಯಂತ ಮಹತ್ವದ ಸ್ಮೃತಿಯಾಗಿದೆ. ರಾಜ್ಯಾಂಗ,ನ್ಯಾಯಾAಗ ಕಾರ್ಯಾಂಗ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸಾರುತ್ತದೆ. ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಎಲ್ಲಾ ಅಗತ್ಯ ಅಂಶಗಳನ್ನು ಪ್ರತಿಪಾದಿಸುತ್ತದೆ. ಆಚಾರ ವಿಚಾರ, ವ್ಯವಹಾರ ಧಾರ್ಮಿಕ ನಡುವಳಿಕೆ,  ಪ್ರಾಯಶ್ಚಿತ,ಮಾಲಿಕ -ನೌಕರನ ಸಂಬAಧ, ತೆರಿಗೆಪದ್ಧತಿ, ಮದುವೆ ಮುಂಜಿ ಮುಂತಾದ ವಿಧಿ ವಿಧಾನಗಳ ಕುರಿತು ಪ್ರತಿಪಾದಿಸುತ್ತದೆ. ಯಾಜ್ಞವಲ್ಕರು ಮನುವಿನ ನಂತರ ಬರುವ ಸ್ಮೃತಿಕಾರರಲ್ಲಿ ಅಗ್ರಗಣ್ಯರು. ಚತುರ್ವೇದಿಗಳು, ಯೋಗಶಾಸ್ತç ವಿಶಾರದರು. ತಮ್ಮ ಜ್ಞಾನಸಂಪತ್ತಿನಿAದ ಅಪಾರ ಸಂಪತ್ತನ್ನು ಸಂಗ್ರಹಿಸಿದ ಯಾಜ್ಞವಲ್ಕö್ಯರು ಕೊನೆಯ ದಿನದಲ್ಲಿ ತಮ್ಮ ಇಬ್ಬರು ಹೆಂಡತಿಯರಿಗೆ ಆಸ್ತಿಯನ್ನು ಸಮಾನವಾಗಿ ಹಂಚುತ್ತಾರೆ. ಕಾತ್ಯಾಯನಿ ಒಪ್ಪಿಕೊಳ್ಳುತ್ತಾಳೆ. ಅದರೆ ಮೈತ್ರೇಯಿ ಇದನ್ನು ಒಪ್ಪುವುದಿಲ್ಲಾ. ಈ ಸಂಪ್ಪತ್ತಿನಿAದ ಆತ್ಮೋಧ್ಧಾರ ಸಾಧ್ಯವೇ ಎಂದು ಕೇಳುತ್ತಾಳೆ. ಆಗ ಅವರು ಆತ್ಮಜ್ಞಾನದಿಂದ ಸಾಧ್ಯವೆಂದು ಹೇಳುತ್ತಾರೆ. ಈ   ಸಂದರ್ಭ ಎರಡು ಅಂಶವನ್ನು ತಿಳಿಸುತ್ತದೆ. ಒಂದು ಹೆಂಡತಿಯರಿಗೆ ಆಸ್ತಿ ಹಕ್ಕು ನೀಡುವುದು ಇನ್ನೊಂದು ಮಹಿಳೆಯರಿಗೆ ಶಿಕ್ಷಣದ ಅವಕಾಶ ಒದಗಿಸುವುದು. ಈ ರೀತಿಯ ಕಾನೂನಾತ್ಮಕ ವಿಚಾರಗಳು ಯಾಜ್ಷವಲ್ಕö್ಯರಲ್ಲಿ ಪ್ರಗತಿ ಪರವಾಗಿದ್ದವು ಎಂಬುದು ತಿಳಿದು ಬರುತ್ತದೆ. ಅವರು ರಚಿಸಿದ ಬ್ರಹದಾರಣ್ಯಕೋಪನಿಷತ್ನಲ್ಲಿ ಜನಕಮಹಾರಾಜ- ಯಾಜ್ಞವಲ್ಕö್ಯ-ಮೈತ್ರೇಯಿ – ಗಾಗಿಯರು ಆತ್ಮಪರಮಾತ್ಮಗಳ ಕುರಿತಾಗಿ ಮಾಡಿದ ತತ್ವಜ್ಞಾನದ ಚರ್ಚೆಯಾಗಿದೆ ವಿನೂತನವಾಗಿದೆ.

      ಯಾಜ್ಞವಲ್ಕö್ಯರ ಮತ್ತೊಂದು ಕೃತಿ ಯಾಜ್ಞವಲ್ಕö್ಯ ಸ್ಮೃತಿ.ಇದು೧೦೧೦ ಶ್ಲೋಕಗಳ ಮೂರು ಅಧ್ಯಾಯವನ್ನು ಒಳಗೊಂಡಿದೆ. ೩೬೮  ಆಚಾರ ಧಾರ್ಮಿಕ ವಿಧಿವಿಧಾನ,೩೦೭ವ್ಯವಹಾರ ಮತ್ತು ನಾಗರೀಕ ಮತ್ತು ಅಪರಾಧಿಕ ನ್ಯಾಯ, ೩೩೫ ಪ್ರಾಯಚ್ಛಿತ ಮತ್ತು ದಂಡನೆಯ ಕುರಿತಾದ ಶ್ಲೋಕಗಳಿವೆ. ಜೆ,ಸಿ ಘೋಷ್ ಅವರು ಯಾಜ್ಞವಲ್ಕಯ ಸ್ಮೃತಿಯು ಮನುಸ್ಮೃತಿಯಂತೆ ಇದ್ದರೂ ಶೂದ್ರರು,ಮಹಿಳೆಯರವಿಷಯದಲ್ಲಿ ತಪ್ಪತಸ್ಥರ ವಿಷಯದಲ್ಲಿ ಇವರ ಧೋರಣೆ ಮೃದುವಾಗಿದೆ ಮತ್ತು ಪ್ರಗತಿಪರವಾಗಿದೆಯಂತೆ. ಮಹಿಳೆಯರ ಹಕ್ಕು ಮತ್ತು ಪಿತ್ರಾರ್ಜಿತ ಆಸ್ತಿಯ ಉತ್ತರಾದಿಕಾರ ಹಾಗು ವಿತರಣೆ ,ಖಚಿತವಾದ ದಾಖಲೆಗಳ ಸೃಷ್ಠಿ.ಭೊಗಕ್ಕೆ ಸಂಭAಧಿಸಿದ ಕಾಯ್ದೆ, ಪಾಲುಗಾರಿಕೆಯ ಕುರಿತಾಗಿವಿವರವಾಗಿ ಚರ್ಚಿಸುತ್ತದೆ. ಆಸ್ತಿ ಪಾಲುಮಾಡುವಾಗ ಹೆಂಡತಿ ಮತ್ತು ಮಕ್ಕಳಿಗೆ ಸಮಾನವಾದ ಹಕ್ಕು ಇರುತ್ತದೆ. ಆದರೆ ಮಾವನಿಂದ ಪತಿಯಿಂದ ಈಗಾಗಲೆ ಪಡೆದುಕೊಂಡಿದ್ದರೆ ಅದನ್ನು ಕಡಿಮೆಗೊಳಿಸಬೇಕಾಗುತ್ತದೆ.ಒಬ್ಬಳಿಗಿಂತಾ ಹೆಚ್ಚಿನ ಹೆಂಡತಿಯರಿದ್ದರೆ ಅವರಿಗೆಲ್ಲಾ ಆಸ್ತಿಯಲ್ಲಿ  ಸಮಪಾಲು ಬರುತ್ತದೆ. ಆಸ್ತಿ ಹಂಚುವಾಗ ತಂದೆ,  ಅಣ್ಣ,ಸೋದರಮಾವನಿಂದ ಆಸ್ತಿಬಂದಿದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲಾ. ಹೀಗೆ ಸ್ತಿçÃಯರಿಗೆ ರಕ್ಷಣೆ ನೀಡಿದ್ದಾರೆ. ರಾಜಧರ್ಮದ ಕುರಿತು,“ರಾಜನಾದವನು ಪರಿಶುಧ್ಧನೂ, ಸದಾಚಾರಿಯೂ, ಸಮಭಾವುಳ್ಳವನೂ, ಪ್ರಾಮಾಣಿಕನು ಆಗಿರಬೇಕು. ನ್ಯಾಯ ವಿಚಾರಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಬಂಧುಬಾAಧÀವ ಎಂದು ದಾಕ್ಷಿಣ್ಯಕ್ಕೆ ಒಳಗಾಗಬಾರದೆಂದು ಹೇಳುತ್ತಾರೆ. ಮನುಸ್ಮೃತಿಗೆ ಹೋಲಿಸಿದರೆ ಯಾಜ್ಞವಲ್ಕö್ಯ ಸ್ಮೃತಿಯು ಸಂಕ್ಷಿಪ್ತವೂ, ಪ್ರಾಮಾಣಿಕವೂ, ವೈಜ್ಞಾನಿಕವೂ, ಪ್ರಾಯೋಗಿಕವೂ ಆಗಿದೆ. ಇಂಥಾ ಮಾನವೀಯ ಸಂವೇದನೆಯ ಸ್ಮೃತಿ ಜ್ಞಾನೇಶ್ವರನನ್ನು ಆಕರ್ಷಿಸಿದ್ದು ವಿಶೇಷವಾಗಿದೆ. ಹೀಗಾಗಿ ಮಿತಾಕ್ಷರ ಭಾರತದಾದ್ಯಂತ ಮಾನ್ಯತೆ ಪಡೆದಿದೆ. ಮಿತಾಕ್ಷರ ಯಾಜ್ಞವಲ್ಕö್ಯರ ಸ್ಮೃತಿಗೆ ವ್ಯಾಖ್ಯಾನವಾದರು ವಿಜ್ಞಾನೆಶ್ವರ ಇರತ ಸ್ಮೃತಿಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿದ್ದನು ಎಂದರೆ ತಪ್ಪಾಗಲಿಕ್ಕಿಲ್ಲಾ.

         ಮಿತಾಕ್ಷರವನ್ನು ಭಾರತದ ಬೇರೆಬೇರೆ ಭಾಗದಲ್ಲಿ ಅಲ್ಲಿಯ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಂಡು ಬಳಸಿಕೊಳ್ಳಲಾಗುತ್ತದೆ.

೧)ಉತ್ತರ ಭಾರತದಲ್ಲಿ ಬನಾರಸ ಪಧ್ಧತಿ

೨)ಬಿಹಾರ ಭಾಗದಲ್ಲಿ ಮಿಥಿಲಾ ಪಧ್ದತಿ.

೩)ಕೊಂಕಣ ಪಶ್ಚಿಮ ಭಾಗದಲ್ಲಿ ಮುಂಬೈ ಪಧ್ಧತಿ.

೪)ದಕ್ಷಿಣಭಾರತದಲ್ಲಿ ದ್ರಾವಿಡ ಅತವಾ ಮದ್ರಾಸ ಪಧ್ಧತಿ.

       ಈ ಎಲ್ಲಾ ಪಧ್ಧತಿಗಳು ಪ್ರಾದೇಶಿಕತೆಯ ಅವಶ್ಯಕತೆಗನುಗುನವಾಗಿ ಬದಲಾವಣೆ ಮಾಡಿಕೊಂಡಿವೆ. ಅದರೆ ಸಮಗ್ರತೆಗೆ ದಕ್ಕೆ ಬಂದಿಲ್ಲಾ. ವಿಶೇಷವಾಗಿ ಉತ್ತರಾಧಿಕಾರಿಯ ಆಯ್ಕೆ ಮತ್ತು ಪಿತ್ರಾರ್ಜಿತ ಆಸ್ತಿಯ ಹಕ್ಕಿನ ವಿಷಯದಲ್ಲಿ ಕೆಲ ಬದಲಾವಣೆಗಳು ಬಂದಿವೆ.

 ಮಿತಾಕ್ಷರದ ಮೇಲೂ ವ್ಯಾಖ್ಯಾನ ಬೆಳೆದು ಬಂದಿವೆ.

ಸುಬೋಧಿನಿ,ಬಾಳAಭಟ್ಟ,,ವೈಜAತಿದತ್ತಕಮಿಮಾAಸ, ಈ ಮೂರು ಪ್ರಮುಖವಾದ ವ್ಯಾಖ್ಯಾನಗಳು.ಇದಲ್ಲದೆ ಮಧುಸೂದನ, ಗೋಸ್ವಾಮಿನ್,ಮುಕುಂದಲಾಲ್,ರಾಧಾಮೋಹನವರ್ಮಾ, ಹಯವದನಭಟ್ಟ ಎಂಬುವವರು ವ್ಯಾಖ್ಯಾನ ರಚಿಸಿದ್ದಾರೆ.

ಮಿತಾಕ್ಷರ ಮತ್ತು ಮಹಿಳೆ-:ಭಾರತದ ಮಹಿಳೆ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ವ ಪಡೆದುಕೊಂಡಿದ್ದರೂ ಸಾಮಾಜಿಕವಾಗಿ ಅನೇಕ ಸಂದಿಗ್ಧತೆಯನ್ನು ಹೊಂದಿದ್ದಾಳೆ. ಅನೇಕ ಜವಬ್ದಾರಿಗಳು ಆಕೆಯ ಮೇಲಿದ್ದರೂ ಸಾಮಾಜಿಕವಾಗಿ ನೇಪಥ್ಯಕ್ಕೆ ಸರಿದದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದರೆ ವೇದಕಾಲದಲ್ಲಿಯೆ ಮಹಿಳೆಗೆ ಅನೇಕ ಅವಕಾಶಗಳು ಇದ್ದದ್ದು÷್ದ ಕಂಡು ಬರುತ್ತದೆ. ಮಹಿಳೆಗೆ ಪುನರ್ವಿವಾಹವಾಗಲು ಅವಕಾಶವಿತ್ತು. ಪತಿಯು ನಷ್ಟವಾದರೆ, ಸನ್ಯಾಸ ಸ್ವೀಕರಿಸಿದರೆ, ದೇಶಾಂತರ ಹೊರಟು ಹೋದರೆ, ಷಂಡನಾಗಿದ್ದರೆ, ಜಾತಿ ಬ್ರಷ್ಟನಾಗಿದ್ದರೆ ಮರು ಮದುವೆಯಾಗಲು ಅವಕಾಶವಿತ್ತು. ಮುಂದುವರೆದು ಪುರುಷನು ಮರುಮದುವೆಗೆ ನಿರ್ಭಂಧವಿತ್ತು. ಹೆಂಡತಿ ಧರ್ಮದಲ್ಲಿ ಆಸಕ್ತಿ ಉಳ್ಳವಳಾಗಿದ್ದು ಗಂಡು ಸಂತಾನ ಹೊಂದಿದದರೆ ಪುರುಷ ಮರುಮದುವೆ ಆಗುವಂತಿರಲಿಲ್ಲಾ ಎಂದು ಗೌತಮರು ಸೂಚಿಸುತ್ತಾರೆ. ಕೌಟಿಲ್ಯನು `ದುರ್ನಡತೆ ಹೊಂದಿದ್ದರೆ, ದೇಶಾಂತರ ಹೋಗಿದ್ದರೆ, ರಾಜದ್ರೋಹಿಯಾಗಿದ್ದರೆ, ಜಾತಿಬ್ರಷ್ಟನಾಗಿದ್ದರೆ, ಹೆಂಡತಿಯ ಪ್ರಾಣಕ್ಕೆ ಅತಂಕತರುವAತವನಾಗಿದ್ದರೆ ಅಂತಹವನನ್ನು ಹೆಂಡತಿ ತ್ಯಜಿಸಬಹುದೆಂದು ಹೆಳುತ್ತಾರೆ. ವಿಧವಾವಿವಾಹದ ಕುರಿತು `ಮೊದಲ ಪತಿಯಿಂದ ಸಂತಾನ ಇಲ್ಲದೇ ಹೋದಾಗ ಪತಿ ತೀರಿಕೊಂಡರೆ ಒಂದು ವರ್ಷದ ನಂತರ ಮೈದುನನಿಂದ ಮಗುವನ್ನು ಪಡೆಯಬಹುದು ಮತ್ತು ವಿವಾಹವಾಗಬಹುದೆಂದು ತಿಳಿಸಲಾಗಿದೆ. ಈ ವಿಚಾರವನ್ನು ಇಟ್ಟು ಕೊಂಡು ರಾಜಾರಾಮ ಮೋಹನರಾಯ ಮತು ಈಶ್ವರಚಂದ್ರವಿದ್ಯಾಸಾಗರ ಅವರು ವಿಧವಾ ವಿವಾಹ ಕುರಿತು ಹೋರಾಟ ಮಾಡಿ ೧೯೫೭ ರಲ್ಲಿ ಪುನರ್‌ವಿವಾಹ ಕಾನೂನು ಜಾರಿಗೆ ಬರುವಂತೆ ಮಾಡಿದರು

ಮಹಿಳೆಯರಿಗೆ ಆಸ್ತಿ ಹಕ್ಕು ಇರಲಿಲ್ಲಾ ಆದರೆ ಯಾಜ್ಞವಲ್ಕö್ಯರು ಗೌತಮರು ನಾರದರು, ಕಾತ್ಯಾಯನರು ಮಹಿಳೆಗೆ ಆಸ್ತಿಹಕ್ಕು ಕೊಡಿಸುವಲ್ಲಿ ದಿಟ್ಟತನದ ಹೆಜ್ಜೆ ಇಟ್ಟರು, ಹೀಗಾಗಿ ಮಿತಾಕ್ಷರರು ಮುಂದುವರಿಸಿದರು. ಮಗಳಿಗೆ ಹೆಂಡತಿಗೆ ತಾಯಿಗೆ ಆಸ್ತಿಯಲ್ಲಿ ಉತ್ತರಾದಿಕಾರಿಯಾಗುವ ಹಕ್ಕನ್ನು ನೀಡಿದರು.ಆದರೆ ನೀತಿ ಬ್ರಷ್ಟಳಾದರೆ ಆಸ್ತಿಹಕ್ಕು ಇರುತ್ತಿರಲಿಲ್ಲಾ. ಅದರೆ ಅನ್ನ ಬಟ್ಟೆಗೆ ಆಶ್ರಯ ಮಾತ್ರ ನೀಡಲಾಗುತ್ತಿತ್ತು.. ಉಚ್ಛನ್ಯಾಯಲಯವು ಈ ವಿಚಾರವನ್ನು ಗಮನಿಸಿ ನ್ಯಾಯನೀಡಿದೆ. ಪ್ರತಿಲೋಮ ಪಧ್ಧತಿ ಮಾನ್ಯವಾಗಿಲ್ಲದಿದ್ದರೂ ಹುಟ್ಟಿದ ಮಕ್ಕಳಿಗೆ ತಂದೆಯ ಸಂಪತ್ತಿನಲ್ಲಿ ಪಾಲು ಕೊಡಬೇಕಾಗಿತ್ತು. ಸಗೊತ್ರ ಹೆಂಡತಿ ಮತ್ತು ಕೆಳವರ್ಗದ ಹೆಂಡತಿಯಿAದ ಹುಟ್ಟಿದ ಮಕ್ಕಳಿಗೆ ತಂದೆ ತನ್ನ ಆಸ್ತಿಯಲ್ಲಿ ಪಾಲು ನೀಡಬೇಕಾಗಿತ್ತು. ಅಕ್ಕತಂಗಿಯರ ವಿವಾಹಕ್ಕೆ ಹಣ ತೆಗೆದಿಟ್ಟು ಆ ಮೇಲೆ ಆಸ್ತಿ ಹಂಚಿಕೆ ಮಾಡಿಕೊಳ್ಳಬಾಕಾಗಿತ್ತು. ಗಂಡುಮಕ್ಕಳು ಇಲ್ಲದೇ ಒಬ್ಬಳೇ ಮಗಳು ಇದ್ದಾಗ ಪುತ್ರಿಕಾ ಎಂಬ ಪಧ್ಧತಿ ಜಾರಿಯಲ್ಲಿತ್ತು.ಮದುವೆ ಯಾದರೂ ಆಕೆ ತಂದೆಯ ವಂಶವನ್ನೇ ಮುಂದುವರೆಸುತ್ತಾಳೆ. ಆಕೆಯ ಮಕ್ಕಳುÀ ಪುತ್ರಿಕಾಪುತ್ರ ಎಂದು ಅಜ್ಜನ ಮನೆಯನ್ನೇ ಬೆಳಗುತ್ತಾನೆ, ಹಾಗೂ ಮಗಳ ಮದುವೆ ಮಾಡಿದ ಮೇಲೆ ಅಳಿಯನನ್ನೂ ಮನೆಯಲ್ಲಿ ಇಟ್ಟುಕೊಳ್ಳುವ ಪಧ್ಧತಿ ಜಾರಿಯಲ್ಲಿತ್ತು. ಸಂತಾನ ವಿಲ್ಲದೇ ಪತಿ ತೀರಿಕೊಂಡರೆ ಆ ಆಸ್ತಿಗೆ ಹೆಂಡತಿಯೇ ಹಕ್ಕುದಾರಳಾಗುತ್ತಾಳೆ. ಇವಳು ಇಲ್ಲದೇ ಹೋದರೆ ತಂದೆತಾಯಿ, ಹೆಣ್ಣುಮಕ್ಕಳು, ಇವರ ಮಕ್ಕಳು ವಾರಸುದಾರರಾಗುತ್ತಾರೆ.ವಿದ್ಯುಕ್ತವಾಗಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಗೆ ಅರ್ಧಾಂಗಿ ಎಂದು ಕರೆಯಲಾಗುತ್ತದೆ.ಎಲ್ಲಾ ಕಾರ್ಯಚಟುವಟಿಕೆಗೆ  ಈಕೆಯೇ ವಾರಸುದಾರಳು. ಗಂಡನ ಮರಣಾನಂತರವು ಈಕೆಯೆ ಅಧಿಕಾರಸ್ಥಳು.  ಯಾಜ್ಞವಲ್ಕö್ಯರು ತಮ್ಮ ಸ್ಮೃತಿಯಲ್ಲಿ ಅರ್ಧಾಂಗಿಯಾ ಅಧಿಕಾರಸ್ಥಳು ಎಂದು ಪ್ರತಿಪಾದಿಸಿದ್ದಾರೆ. ಮುಂದುವರೆದು ಸಂಯುಕ್ತ ಕುಟುಂಬದಲ್ಲಿ ಹೆಂಡತಿಗೂ ತಾಯಿಗೂ ಪಾಲು ದೊರೆಯಬೇಕೆಂದು ಪ್ರತಿಪದಿಸಿದ್ದಾರೆ. ಸ್ವತ್ತು ವಿಭಾಗವಾದ ನಂತರ ಪತಿಯ ಸ್ವತ್ತಿನಲ್ಲಿ ವಿಧವೆ ಹೆಂಡತಿಯರು ಪಾಲುದಾರರಾಗುತ್ತಾರೆ. ಮುಂದುವರೆದು ಮಲತಾಯಿಗೆ ಸ್ವತ್ತಿನಲ್ಲಿ ಪಾಲು ಕೊಟ್ಟಲ್ಲವಾದರೂ ಜೀವನಾಂಶ ಕೊಡಲು ಸೂಚಿಸಿದ್ದಾರೆ. ಮಗನಿಂದ ಪಡೆದ ಉತ್ತರಾಧಿಕಾರವು ತಾಯಿಯ ಸ್ವತ್ತಾಗಿದ್ದು ಅದು ಸ್ತಿçà ಧನವೆಂದು ಪರಿಗಣಿಸಬೇಕೆಂದು ತಿಳಿಸುತ್ತಾರೆ. ಮೃತನ ಸ್ವತ್ತಿನ ಅಧಿಕಾರ ಮೊದಲು ತಂದೆತಾಯಿಗೆ ಆ ನಂತರ ಅಣ್ಣತಮ್ಮಂದಿರಗೆ ಸಲ್ಲಬೇಕೇಂದು ಹೇಳಲಾಗಿದೆ. ಗಂಡನಾಗಲಿ, ಮಾವನಾಗಲಿ ಸ್ತಿçÃಧನ ನೀಡದೇ ಹೋದರೆ ಸ್ವತ್ತಿನಲ್ಲಿ ಆಕೆಗೂ ಪಾಲುದೊರೆಯುತ್ತದೆ. ತಾಯಿಯ ಆಸ್ತಿಯಲ್ಲಿ ಮದುವೆಯಾಗದ ಹೆಣ್ಣುಮಗಳಿಗೆ ಮೊದಲ ಆದ್ಯತೆ. ಒಂದುವೆಳೆ ಮದುವೆಯಾದ ಅನೇಕ ಸಹೊದರಿಯರಿದ್ದರೆ ಅವರಲ್ಲಿ ಯಾರು ಆರ್ಥಿಕವಾಗಿ ದುರ್ಬಲರೋ ಅವರಿಗೆ ಸೇರುತ್ತದೆ. ಹೆಣ್ಣು ಮಕ್ಕಳು ಇಲ್ಲದಿದ್ದಲ್ಲಿ ಆ ಆಸ್ತಿ ಗಂಡುಮಕ್ಕಳಿಗೆ ಸೇರುತ್ತದೆ. ಮಹಿಳೆ ಗಂಡ ಇದ್ದಾಗ ತೊಡುತ್ತಿದ್ದ ಅಭರಣಗಳು ಅತನ ಮರಣಾನಂತರ ಆಕೆಯ ಸ್ವತ್ತಾಗುತ್ತದೆ. ತಂದೆಯ ಸ್ವತ್ತಿನಮೆಲೆ ಅಧಿಕಾರ ಮಗಳಿಗೆ ರಕ್ತಸಂಬAಧದಿAದ ಆಗುತ್ತದೆಯೇ ಹೊರತು ಸಾಮಾಜಿಕ ಸ್ಥಾನಮಾನದಿಂದಲ್ಲ. ಮಗಳು ಗಂಡು ಸಂತಾನ ಹೊಂದಿದ್ದರೆ ಮಾತ್ರ ಅಸ್ತಿಯಲ್ಲಿ ಪಾಲು ಎಂಬುದನ್ನು ವಿರೊಧಿಸಿ ಹೆಣ್ಣು ಸÀಂತಾನವಿದ್ದರು ಮಗಳಿಗೆ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಿದರು. ಒಬ್ಬಮಗ ತನ್ನ ವಾರಸುದಾರ ಇಲ್ಲದೇ ತಿರಿಕೊಂಡರೆ ಆತನ ಸ್ವತ್ತಿನಲ್ಲಿ ತಾಯಿಗೆ ಮೊದಲ ಆದ್ಯತೆ ಆನಂತರ ತಂದೆಗೆ ಆದ್ಯತೆ.

ಸ್ತಿçಧನ-;ಇದು ಹೆಸರೇ ಸೂಚಿಸುವಂತೆ ಹೆಣ್ಣುಮಕ್ಕಳಿಗಗಿ ಕಾಯ್ದಿಟ್ಟ ಸ್ವತ್ತು. ಬಾಲಕಿಯಾಗಿದ್ದಾಗ ತಂದೆತಾಯಿ ಸಹೊದರ ಸಹೋದರಿಯರು ಬಂದುಬAಧವರು ಪತಿಯ ಮನೆಯ ಬಂಧುಬಾAಧವರು ಉಡುಗೊರೆಯಾಗಿ ನೀಡಿದ ಹಣ, ಹೈನು, ವಸ್ತುಗಳು, ಆಭರಣಗಳು ಎಲ್ಲವೂ ಹೆಣ್ಣುಮಗಳ ಸ್ವತ್ತಾಗುತ್ತದೆ. ಈ ಹಣÀಕ್ಕೆ ಉತ್ತರಾದಿಕಾರಿಯೆಂದರೆ ಹೆಣ್ಣುಮಕ್ಕಳೆ ಒಂದುವೇಳೆ ಹೆಣ್ಣುಮಕ್ಕಳು ಇಲ್ಲದೇ ಹೋದರೆ ಅವಿವಾಹಿತ ಹೆಣ್ಣು ಮಕ್ಕಳು,ಬಡ ಹೆಣ್ಣುಮಕ್ಕಳು ಸುಸ್ಥಿತಿಯಲ್ಲಿರುವ ಹೆಣ್ಣು ಮಕ್ಕಳು, ಹೆಣ್ಣುಮಕ್ಕಳ ಹೆಣ್ಣುಮಕಳು ಗಂಡುಮಕ್ಕಳು ಗಂಡುಮಕ್ಕಳ ಮಕ್ಕಳು ,ಗಂಡ, ಗಂಡನ ಸಪಿಂಡರರಿಗೆ ಹೋಗಬೇಕೆಂದು ತಿಳಿಸುತ್ತಾರೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಕ್ಕಾಗಿ, ವ್ಯಬಿಚಾರ ನಡೆಸುವವರಿಗೆ ಸಾವಿರ ಪಣಕ್ಕಿಂತಲೂ ಹೆಚ್ಚು ದಂಡ ಮತ್ತು ಆಸ್ತಿ ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ.ವಿಧವೆ ಮತ್ತು ಗರ್ಭಿಣಿ ಸ್ತಿçಯ ಮೆಲೆ ನಡೆಸುವ ಹಲ್ಲೆಗೆ ಅತ್ಯುಗ್ರ ಶಿಕ್ಷೆನೀಡಬೇಕೆಂದು ಸೂಚಿಸಲಾಗಿದೆ. ಮಹಿಳೆಯರ ನಿಂದನೆ ಮತ್ತು ದೂಷಣೆಯನ್ನು ದಂಡನಾರ್ಹಅಪರಾಧವೆAದು ಸೂಚಿಸಲಾಗಿದೆ..ಮಹಿಳೆಯ ದೈಹಿಕ ಮಾನಸಿಕ ಹಿಮಸೆಗೆ ಎರಡುಪಟ್ಟು ಶಿಕ್ಷೆನೀಡಲು ಸೂಚಿಸಲಾಗಿದೆ. ಮಹಿಳೆಯರ ಮೇಲಿನ ದೌಜ್ನö್ಯಕ್ಕೆ ನ್ಯಾಯಾಲಯದಲ್ಲಿ ತೀವ್ರ ವಿಚಾರಣೆ ನಡೆಸಬೇಕು.ಕುಲೀನ ಸ್ತಿç ಮತ್ತು ಬಾಣಂತಿ ಸ್ತಿçಯಾಗಿದ್ದರೆ ಆಕೆಯನ್ನು ವಿಚಾರಣೆಗೆ ಕರೆಯಬಾರದು. ಗಂಡನು ಸಾಲಮಾಡಿದಲ್ಲಿ ಹೆಂಡತಿ ಸಾಲತೀರಿಸಬೇಕು. ಆದರೆ ಆತ ಜೂಜಾಟ ಮುಂತಾದ ವ್ಯಸನಗಳಿಗಾಗಿ ಸಾಲಮಾಡಿದ್ದರೆ ಅದನ್ನು ಹೆಮಡತಿ ತೀರಿಸಬೇಕಾಗಿಲ್ಲಾ. ಹೀಗೆ ಮಹಿಳೆಯರಿಗೆ ಯಾಜ್ಞವಲ್ಕö್ಯರು ಪ್ರಗತಿಗಾಮಿಯಾಗಿ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರೆ.

ಜಸನಪರಕಾಳಜಿಗಳು-ಗ್ರ‍್ರಾಹಕರ ಕಾಳಜಿ, ಕಾರ್ಮಿಕರ ಕಾಳಜಿ, ಪರಿಸರ ಕಾಳಜಿ, ಪಶುಪ್ರೇಮ,, ನ್ಯಾಯದ ಕಾಳಜಿ, ವ್ಯವಹಾರ, ಸತ್ಯವೊಂದೆಪವಿತ್ರ, ಕ್ಷÄಲ್ಲಕವಿಚಾರಗಳು ವಿಶೇಷರಕ್ಷಣೆ, ಸಾಕ್ಷಿಗಳು, ಲಿಖಿತದೂರುಗಳು, ಮರಣಾನಂvರದ ದೂರುಗಳು, ನ್ಯಾಯವಿಲಂಬ, ಕಳೆದುಕೊಂಡವರಿಗೆ ನಷ್ಟ ಭರ್ತಿ,  ಅವಿಭಕ್ತ ಕುಟುಂಬ,ದತ್ತಕ ಪಧ್ಧತಿ. ಮುಂತಾದವುಗಳು.

ಮಾನವ ಹಕ್ಕುಗಳು-:ಹೆಣ್ಣುಮಕ್ಕಳ ಹಕ್ಕು, ಮಕ್ಕಳ ಹಕ್ಕು, ಪಾರದರ್ಶಕ ನ್ಯಾಯ, ವಾತ್ಸಲ್ಯದ ಹಕ್ಕು,ಜೀವನಾಂಶÀದ ಹಕ್ಕು,

ಹೀಗೆ ಯಾಜ್ಞವಲ್ಕö್ಯ ಸ್ಮೃತಿಯ ಕುರಿತಾಗಿ ಬಂದ ಮಿತಾಕ್ಷರಿಯ ವ್ಯಾಖ್ಯಾನ ಮಹತ್ವದ ಪಾತ್ರ ವಹಿಸಿದೆ. ಈ ಕೃತಿಯನ್ನು ಅಧ್ಯಯನ ಮಾಡಿದ ನಂತರ ಯಾಜ್ಞವಲ್ಕö್ಯ ಗುರುಗಳ ವೈಚಾರಿಕತೆ, ಸಮಾಜಿಕ,ಆರ್ಥಿಕ,ನ್ಯಾಯಿಕ ವಿಚಾರಗಳಕುರಿತಾಗಿ ಇರುವ ಕಾಳಜಿ ಎದ್ದು ಕಾಣುತ್ತದೆ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.