ನಾ ಕಂಡoತೆ ಡಾ.ಎಸ್.ಎಲ್. ಭೈರಪ್ಪನವರು

                        

ಕನ್ನಡದ ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು  ದೈವಾಧೀನರಾದದ್ದು ಕನ್ನಡ ಸಾರಸ್ವತಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಬಾಲ್ಯದಿಂದಲೇ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ ಜೀವನಾನುಭವವನ್ನು ವಿಸ್ತರಿಸಿಕೊಂಡವರು. ಕೆಲವರಿಗೆ ಕಷ್ಟನಷ್ಟಗಳು ಜೀವನದಲ್ಲಿ ನಿರುತ್ಸಾಹ ತಂದರೆ ಇವರಿಗೆ ಆ ಕಷ್ಟನಷ್ಟಗಳು ಸಾಧನೆಗೆ ಮೆಟ್ಟಿಲುಗಳಾದವು. ಜೀವಿತದ ಪ್ರತಿ ಕ್ಷಣವೂ ಅರ್ಥವತ್ತಾಗಿ ಕಳೆದು ಸಾಹಿತ್ಯದ ಮೂಲಕ ಜೀವನದ ಮೌಲ್ಯವನ್ನು ಸಾರಿದರು. ಭಾರತದ ಒಳಗೆ ಹೊರಗೆ,ಅನೇಕ ಓದುಗರನ್ನು ಪಡೆದ ಜನಪ್ರೀಯ ಸಾಹಿತಿಗಳು.ಅನೇಕ ಭಾಷೆಗಳಲ್ಲಿ ಇವರ ಕೃತಿಗಳು ತರ್ಜುಮೆಗೊಂಡಿವೆ.ಹೀಗೆ ಅಪಾರ ಅನುಭವ,ಅಪಾರ ಜನಪ್ರೀಯತೆ ಹೊಂದಿದ ಇವರು ಸರಳ ಜೀವನ, ಉನ್ನತ ವಿಚಾರವನ್ನು ಲವಡಿಸಿಕೊಂಡವರು ಎಂಬುದು ವಿಶೇಷವಾಗಿದೆ. ಇಂಥವರು ನನ್ನ ಮನೆಯಲ್ಲಿ ವಾಸ್ತವ್ಯ ಮಾಡಿದ್ದು ನನಗೆ ಮರೆಯಲಾರದ ಅನುಭವ.

     ೧೯೯೯ ರಲ್ಲಿ ರಾಯಚೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಆದರೆ ಅವರು ಹೋಟಲಲ್ಲಿ ಇರಲು ಒಪ್ಪಲಿಲ್ಲ.ಯಾರ ಮನೆಯಲ್ಲಾದರೂ ವ್ಯವಸ್ಥೆ ಮಾಡಲು ಹೇಳಿದರು.ಅದರಂತೆ ಅವರು ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಲಾಯಿತು. ನನಗೆ ಏನೂ ಆತಂಕವಾಗಲಿಲ್ಲ. ಯಾಕೆಂದರೆ ಬಾಲ್ಯದಿಂದಲೂ ಅತಿಥಿಗಳು ನಮ್ಮ ಮನೆಗೆ ಬರುವುದು ಸಹಜವಾಗಿತ್ತು. ಆಗ ಬೆಳಗಾವಿ,ಬಾಗಲಕೋಟೆ ಇಲಕಲ್ಲು, ಬಿಜಾಪುರ ಮುಂತಾದ ಊರುಗಳಿಂದ ಮಂತ್ರಲಯಕ್ಕೆ ಹೊಗಿ ಮೃತ್ತಿಕೆ ತಂದು ಬೃಂದಾವನ ಸ್ಥಾಪಿಸುತ್ತಿದ್ದರು. ಆ ಎಲ್ಲ ಪಾದಯಾತ್ರಿಗಳು ನಮ್ಮ ಮನೆಗೆ ಬರುತ್ತಾ ಇದ್ದರು. ಅವರಿಗೆಲ್ಲಾ ನನ್ನಮ್ಮ ಸ್ವತಃ ತಾನೇ ಅಡುಗೆಮಡುತ್ತಿದ್ದಲು. ಕೆಲವರು ಉಪಹಾರ ಮಡುತ್ತಿದ್ದರು. ನನಗೆ ಮಂತೆಆಲಯಕ್ಕೆ ಹೋಗಿ ಸೇವೆ ಮಾಡಲು ಆಗುತ್ತಿ. ಅದಕ್ಕೆ ಗುರುಗಲು ನನಗೆ ಇಲ್ಲೇ ಸೇವೆ ನೀಡಿದ್ದಾರೆಂದು ಸಂತೋ಼ ಪಡುತ್ತಿದ್ದಲು. ಕೊಪ್ಪಲದ ವಿದ್ಯಾ ಪೀಠದ ವಿದ್ಯಾರ್ಥಿಗಳು ಬೇರೆ ಕಡೆ ಪ್ರಯಾಣ ಮಾಡಬೇಕಾದರೆ ನಮ್ಮ ಮನೆಯಲ್ಲಿ ಉಪಹಾರ ಮಡಿ ಹೋಗುತ್ತಿದ್ದರು.ದಾಸಸಾಹಿತ್ಯ ಅಧ್ಯಯನಕೇಂದ್ರದಿAದ ನಡೆಸುವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಡಾ.ಮಂದಾಕಿನಿಬಾಯಿಯವರ ಮನೆಯಲ್ಲಿ ಅಥವಾ ನಮ್ಮ ಮನೆಯಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೆವು. ಅತಿತಿದೇವೋ ಬವ ಎಂಬ ಮಾತನ್ನು ನಾವು ಬಲವಾಗಿ ನಂಬಿದ್ದೇವೆ. ಒಬ್ಬ ಅತಿಥಿಗೆ ಸತ್ಕಾರ ಮಾಡಿದರೆ ಪಂಚಯಜ್ಙಮಾಡಿದ್ದಕ್ಕೆ ಸಮ ಎಂಬುದು ಹಿರಿಯರು ಹೇಳಿದ ನೀತಿ. ಹೀಗಾಗಿ ನಮಗೇನೂ ಆತಂಕವಾಗಲಿಲ್ಲ. ಅವರು ನಮ್ಮ ಮನೆಯಲ್ಲಿ ನಾಲ್ಕು ದಿನ ಇದ್ದರು.ಇದ್ದಷ್ಟು ಕಾಲವನ್ನು ನಮ್ಮ ರಾಯಚೂರಿನ ಕುರಿತಾಗಿ ಮಾತುಮಾತಿನಲ್ಲಿ ಮಾಹಿತಿ ಪಡೆಯುತ್ತಿದ್ದರು.

     ನಾವು ಆಗಿನ್ನು ಹೊಸದಾಗಿ ಮನೆ ಕಟ್ಟಿದ್ದೆವು. ನಮ್ಮ ಮನೆಸುತ್ತ ಮುತ್ತ ಮನೆಗಳು ಇರಲಿಲ್ಲ. ಪ್ರಶಾಂತವಾದ ವಾತಾವರಣ ಅವರಿಗೆ ಇಷ್ಟವಾಯಿತು. `ನಾನು ಈ ಶಾಂತತೆಯನ್ನು ಪು.ತಿ.ನ. ಅವರ ಮನೆಯಲ್ಲಿ ಕಂಡಿದ್ದೆ. ಮನಸ್ಸಿಗೆ ಬೇಸರವಾದಾಗ ಶಾಂತತೆಯನ್ನು ಹುಡುಕಿಕೊಂಡು ಅವರ ಮನೆಗೆ ಹೋಗುತ್ತಿದ್ದೆ. ಅದೇ ಅನುಭವ ನನಗೆ ಇಲ್ಲಿ ಆಗುತ್ತಿದೆ’ ಎಂದು ಹೇಳಿ ನನ್ನನ್ನು ಮಾತಿಗೆಳೆದರು. ಅಲ್ಲಿಯ ವರೆಗೆ ಸಂಕೋಚದಿAದ ಇದ್ದ ಅವರು ಆತ್ಮೀಯವಾಗತೊಡಗಿದರು. ಅಷ್ಟರಲಿ ದನ,ಕುರಿಕಾಯುವ ಹುಡುಗರ ದಂಡು ಬಂದು ಇವರನ್ನು ಕುತೋಹಲದಿಂದ ನೋಡತೊಡಗಿದವು. ಆಮಕ್ಕಳನ್ನು ಕಂಡು ಇವರೇನು ಹೀಗೆ ನನ್ನನ್ನು ನೋಡುತ್ತಿದ್ದಾರೆ ಎಂದರು,ನಾನೆAದೆ ಮಕ್ಕಳು ದನಕಾಯಲು ಬಂದಾಗ ಸುತ್ತಮುತ್ತಲು ಕೂಡಲು ಅವರಿಗೆ ನೆರಳಿಲ್ಲ.ನಮ್ಮ ಮನೆಯ ಟೆರಸ್ ನಲ್ಲಿ ಕುಳಿತುಕೊಂಡು ಕಾಲ ಕಳೆಯುತ್ತಾರೆಂದೆ.ತಕ್ಷಣ ಅವರು ನಮ್ಮ ಕಡೆ ಈ ರೀತಿ ಮನೆ ಮುಂದೆ ಕುಳಿತುಕೊಳ್ಳಲು ಬಿಡುವುದಿಲ್ಲ. ನಾನು ಬಾಲ್ಯದಲ್ಲಿ ಯಾರಮನೆ ಮುಂದೆ ಕುಳಿತರೆ ಬೈದು ಕಳಿಸುತ್ತಿದ್ದರು. ನನ್ನ ಸಮಯ ಕಳೆಯಲು ದೇವಸ್ಥಾನಗಳ ಮೊರೆ ಹೋಗುತ್ತಿದ್ದೆ ಎಂದು ಹಿಂದಿನ ದಿನಗಳನ್ನು ಮೆಲಕು ಹಾಕಿದರು. ಇಲ್ಲಿ ಗಿಡ ಮರಗಳನ್ನು ಯಾಕೆ ಬೆಳಸೋದಿಲ್ಲ? ಎಂದು ಪರಿಸರದ ಕುರಿತು ಚರ್ಚಿಸತೊಡಗಿದರು. ರಾಯಚೂರಿನ ಇತಿಹಾಸದ ಕುರಿತು ಚರ್ಚೆ ಮಾಡಿದರು.ಅಶೋಕಶಾಸನದ ಕುರಿತು,ದಾಸರು ಶರಣರ ಕುರಿತು.ಕೃಷ್ಣಾ-ತುಂಗಾ ನದಿಯ ಕುರಿತು, ಜಿಲ್ಲೆಯ ಕೆರೆಗಳ ಕುರಿತು,ಇಲ್ಲಿಯ ಪ್ರಮುಖ ಬೆಲೆಗಳ ಕುರಿತು,ವ್ಯಾಪಾರ ವಹಿವಾಟಿನ ಕುರಿತು ವಿವರ ಪಡೆದುಕೊಂಡರು. ನಾನು ಮಾರನಡುತ್ತ ನಾಳೆ ದಿನದ ಊಟ ಉಪಹಾರದ ಮಾಹಿತಿ ಪಡೆದುಕೊಂಡೆ. ಅವರು ಮುಂಜಾನೆ ನಾಲ್ಕು ಗಂಟೆಗೆ ಏಳುವುದು,ಅರ್ಧಗಂಟೆ ವಾಕಿಂಗ್ ಆನಂತರ ಸ್ನಾನ.ತಮಗೆ ಮುಂಜಾನೆ ಬಿಸಿನೀರಿನ ವ್ಯವಸ್ಥಮಾಡಬೇಕೆಂದು ತಿಳಿಸಿದರು. ಅದರಂತೆ ಒಂದು ದಿನ ಅವರಿಗೆ ವ್ಯವಸ್ಥೆ ಮಾಡಿದೆ. ಮರುದಿನದಿಂದ ತಾವೇ ಬಿಸಿನೀರು ಕಾಯಿಸಿಕೊಂಡು ನಮಗೂ ಬಿಸಿನೀರು ಕಾಯಿಸಿ ಇಡುತ್ತಿದ್ದರು. ಅಷ್ಟೊಂದು ಆತ್ಮೀಯವಾಗತೊಡಗಿದರು. ಸ್ವತಃ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆಂಬ ವ್ಯಕ್ತಿತ್ವ ಅವರದು. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು.ಕೆಸದವರಿಗೆ ಕೊಡಲು ಒಪ್ಪಲಿಲ್ಲ. ಮುಂಜಾನೆ ಉಪಹಾರ ಏನು ಮಾಡಬೇಂದು ಕೇಳಿದೆ. ಅದಕ್ಕೆ ನೀವೇನು ಮಾಡುತ್ತೀರೋ ಅದೇ ನನಗಾಗಿ ಇರಲಿ. ನನಗಂತ ಬೇರೆ ಮಾಡುವುದು ಬೇಡಾ ಎಂದರು. ನಾವು ದಿನಾ ಜೋಳದ ಹಿಟ್ಟಿನ ಭಕ್ರಿ ಮಾಡುತ್ತೇವೆ.ನಿಮಗೆ ರೂಢಿ ಇರಲ್ಲ ಎಂದು ಹೇಳಿದೆ. ಇರಲಿ ನಾನು ಅದನ್ನೇ ಉಪಹಾರ ಮಾಡುತ್ತೇನೆಂದರು. ಸರಿ ಭಕ್ಕರಿ ,ಪಚಡಿ, ಬೆಂಡಿಕಾಯಿ ಪಲ್ಯಮಾಡಿ ಅವರಿಗೆ ಉಪಹಾರಕ್ಕೆ ಸಿದ್ಧಮಾಡಿದೆ. ಅವರು ಅದನ್ನು ಸೇವಿಸಿ ಪಚಡಿಯ ಕುರಿತು ವಿವರಣೆ ಕೇಳಿದರು.ಇದು ಏನು ಇದನ್ನು ಹೇಗೆ ಮಾಡಿದಿರಿ ಎಂದು. ಇದು ಹಸಿ ತರಕಾರಿಯಿಂದ ಮಾಡಿದ್ದು ಸೌತಿಕಾಯಿ, ಗೆಜ್ಜರಿ, ಟಮಾಟೋಹಣ್ಣುನ್ನು ಸಣ್ಣಗೆ ಹೆರೆದು ಇದಕ್ಕೆ ಗುರೆಳ್ಳು ಪುಡಿ ಹುಣಸೇ ತೊಕ್ಕು ಮತ್ತು ಮೊಸರು ಹಾಕಿ ಕಲಸಿ ಇಂಗಿನ ಒಗ್ಗರಣೆ ಕೊಟ್ಟಿದ್ದಿನಿ’ ಎಂದು ವಿವರಿಸಿದೆ. ತುಂಬಾ ರುಚಿ ಇದೆ ಎಂದು ತಿಳಿಸಿದರು, ವiಧ್ಯಾಹ್ನಕ್ಕೆ ಬಿಸಿಬೇಳೆ ಭಾತು ಮೊಸರನ್ನ ಮಾಡಿದೆ. ಬಿಸಿಬೇಳೆ ಭಾತಿನ ವಿವರ ಕೇಳಿದರು ನಮ್ಮಲ್ಲಿ ಬಿಸಿಬೇಳೆ ಭಾತ ಎಂದರೆ ಕರಿಬೇವು ಕೊತಂಬರಿ ಬಿಟ್ಟರೆ ಯಾವ ತರಕಾರಿಯೂ ಇರಲ್ಲ. ನೀವು ಇಷ್ಟು ತರಕಾರಿ ಹಾಕಿದ್ದಿರಲ್ಲ. ನನಗಾಗಿ ಮಾಡಿದ್ದೂ  ಅಥವಾ ಪ್ರತಿಬಾರಿ ಹೀಗೆ ಮಾಡೊದಾ? ನಿಮಗಂತ ಅಲ್ಲಾ ಪ್ರತೀಬಾರಿ ನಾವು ಹೀಗೇ ಮಾಡೋದು ಅಂತ ಹೇಳದಾಗ ಇದು ದೇಶೀ ಬಿಸಿಬೇಳೆ ಭಾತ್ ಎಂದು ಹೆಸರಿಸಿದರು, ಭಕ್ರಿ ಮಾಡುವಾಗ ಅಡುಗೆ ಮನಿಗೆ ಬಂದು ಮಾಡುವ ವಿಧಾನವನ್ನು ಕಂಡು ರೊಟ್ಟಿ ಮಾಡುವ ವಿಧಾನ ಸಂಗೀತಮಯವಾಗಿದೆ ಎಂದು ಬಣ್ಣಿಸಿದರು. ದಿನಾಲು ನಮ್ಮ ಭಾಗದ ಬೇರೆ ಬೇರೆ ಉಪಹಾರ ಅಡುಗೆ ಮಾಡುತ್ತಿದ್ದೆ.ಥಾಲಿಪಟ್ಟು, ಮೆಂತ್ಯೆಪಲ್ಯ ಕಡಬು, ಕಾಳುಪಲ್ಯ, ಮುದ್ದಿಪಲ್ಯಾ, ಹಸಿಮೆಣಸಿನಕಾಯಿ ಟಮೋಟ ಚಟ್ನಿ, ಉಪ್ಪನಕಾಯಿ,ಸೇಂಗಾ ಪುಡಿ,ಕುಸಬಿ ಪುಡಿ,ಯಳ್ಳುಪುಡಿ,ಚಟ್ನಿಪುಡಿ, ಖೀರು,ಪಾಯಸ ಹೀಗೆ ನಮ್ಮ ಪ್ರದೇಶದ ತಿನುಸುಗಳನ್ನು ಇಷ್ಟ ಪಟ್ಟರು. ಈ ಪ್ರದೇಶದಲ್ಲಿ ಸಜ್ಜಿ ಮತ್ತು ಜೋಳ,ಅಕ್ಕಿ ಪ್ರಮುಖ ಆಹಾರ. ಗೋದಿ ಹಿಟ್ಟನ್ನು ಅಮವಾಸೆ ಮತ್ತು ಹುಣ್ಣುವಿಗೆ ಮಾತ್ರ ಬಳಸುತ್ತೇವೆ.ವಿಶೇಷವಾಗಿ ಸೊಪ್ಪನ್ನು ಬಳಸುತ್ತೇವೆ ಎಂದು ಮಾಹಿತಿಯನ್ನು ನೀಡಿದೆ.ಇದು ಬರೀ ಊಟಕ್ಕಾಗಿ ಅಲ್ಲ. ಈ ಪ್ರದೇಶದ ಆಹಾರ ಪದ್ಧತಿ ತಿಳಿದುಕೊಳ್ಳುವುದಕ್ಕಾಗಿ. ಅವರು ಬರುವಾಗ ಬಾಟಲ್ ನಲ್ಲಿ ಕಾವೇರಿ ನೀರು ತಂದಿದ್ದರು. ಹೋಗುವವರೆಗೂ ಕಾವೇರಿ ನೀರನ್ನೆ ಕುಡಿದರು. ನಮ್ಮ ಮನೆಯ ನೀರನ್ನು ಅವರು ಕುಡಿಯಲೇ ಇಲ್ಲ.  ಎಲ್ಲಿ ಹೋದರೂ ನಾನು ಕಾವೇರಿ ನೀರನ್ನು ಜೊತೆಯಲ್ಲಿ ಒಯ್ಯುತ್ತೇನೆ. ಆ ನೀರನ್ನು ಮಾತ್ರ ಕುಡಿಯುತ್ತೇನೆಂದು ತಿಳಿಸಿದರು. ನನಗೆ ನಮ್ಮ ಮಹಾವಿದ್ಯಾಲಯದ ಹಿಂದಿ ವಿಷಯದ ಪ್ರಾಧ್ಯಾಪಕರಾದ ಗೌರಿಭಟ್ ಮೇಡಮ್ ನೆನಪಾದರು. ಅವರು ತುಳಸಿ ಗಿಡಕ್ಕೆ ಕೊಡಗಿನ ಮಣ್ಣು ಹಾಕಿದ್ದರು. ನಾನು ಅವರ ಮನೆಗೆ ಹೋದಾಗ ಇದು ಕೊಡಗಿನ ಮಣ್ಣು ಅಂತಾ ಅಭಿಮಾನದಿಂದ ಹೇಳುತ್ತಿದ್ದರು..ಅವರ ಅಭಿಮಾನ ಮೆಚ್ಚುವಂತದ್ದು. ಹೀಗೆ ಖ್ಯಾತ ಕಾದಂಬರಿ ಕಾರರಾದ ಭೈರಪ್ಪನವರು ನನ್ನಪತಿ ಜಿ.ನರಸಿಂಗರಾವ ಮಕ್ಕಳಾದ ಕಾವ್ಯ,ಕೃಷ್ಣ ಅವರೊಂದಿಗೆ ಕುಟುಂಬದ ಸದಸ್ಯರಂತೆ  ಕಳೆದದ್ದು ಅವಿಸ್ಮರಣೀಯವಾಗಿದೆ.

        ಭೈರಪ್ಪನವರು ಬಂದಿದ್ದಾರೆAದು ಅನೇಕರು ಭೇಟಿಯಾಗಲು ಬಂದರು. ಅದರೆ ಅವರು ಯಾರನ್ನು ಭೇಟಿಯಾಗಲು ಬಯಸಲಿಲ್ಲ. ರಾಯಚೂರುವಾಣಿ ಪತ್ರಿಕೆಯಿಂದ ನಡೆದ ಸಂದರ್ಶನಕ್ಕೆ ಮಾತ್ರ ಒಪ್ಪಿಕೊಂಡರು. ಸಂದರ್ಶಕರಾಗಿ ಪಾಂಡುರAಗಗುಡಿ ಮತ್ತು ಶ್ರೀನಿವಾಸ ಗಟ್ಟು ಅಗಮಿಸಿದ್ದರು. ಅವರ ಸಾಹಿತ್ಯದ ಕುರಿತಾಗಿ ಸುಮಾರು ಎರಡು ತಾಸು ಚರ್ಚೆ ಮಾಡಿದರು.

     ಸಮಯ ಸಿಕ್ಕಾಗಲೆಲ್ಲಾ ಒಂದೊAದು ವಿಚಾರದ ಮಾಹಿತಿ ಪಡೆಯುತ್ತಿದ್ದರು. ಈ ಭಾಗದ ಕುಟುಂಬ ವ್ಯವಸ್ಥೆ, ಮದುವೆಯ ಪದ್ಧತಿಯ ಕುರಿತಾಗಿ, ಮಹಿಳೆಯರ ಸ್ಥಿಗತಿಯ ಕುರಿತಾಗಿ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಪದ್ಧತಿ, ಕೃಷಿ, ರೈತರ ಸಮಸ್ಯೆ, ಶಿಕ್ಷಣದ ವ್ಯವಸ್ಥೆ, ಹಿಂದು-ಮುಸ್ಲಿಮ ಸೌಹಾರ್ದತೆ, ಜಮೀನದಾರಿ ಪದ್ಧತಿ ಹೀಗೆ ರಾಯಚೂರು ಜಿಲ್ಲೆಯ ಸಾಮಾಜಿಕ ಜೀವನದ ಮಾಹಿತಿಯನ್ನು ಪಡೆದುಕೊಂಡರು.

      ಅವರಿಗೆ ಸಂಗೀತ ಎಂದರೆ ಎಲ್ಲಿಲ್ಲದ ಪ್ರೀತಿ. ಸದಾ ರೇಡಿಯೋದಲ್ಲಿ ಶಾಸ್ತಿçÃಯ ಸಂಗೀತ ಕೇಳುತ್ತಿದ್ದರು. ನನಗೂ ನಿಮಗೆ ಸಂಗೀತದಲ್ಲಿ ಆಸಕ್ತಿ ಇದೆಯಾ? ಎಂದರು. ಹೌದು ಇದೆ ಎಂದೆ. ಅದಕ್ಕೆ ಅವರು ಕಲಾವಿದರೆಲ್ಲಾ ಸಂಗೀತ ಕೇಳಲೇಬೇಕು. ಎಲ್ಲಾ ಕಲೆಗಳಿಗೆ ಸಂಗೀತವೇ ಮೂಲ ನೆಲೆ. ತಾವು ಇಷ್ಟ ಪಡುವ ಕಲೆಯಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಸಂಗೀತ ಕೇಳಲೇ ಬೇಕು. ಸಂಗೀತ ಭಾವನೆಗಳನ್ನು ಉದ್ದೀಪನ ಗೊಳಿಸುತ್ತದೆ, ಭಾವನೆಗಳಿಗೆ ಪುಷ್ಠಿ ಕೊಡುತ್ತದೆ, ಮತ್ತು ಸಂಸ್ಕಾರ ಕೊಡುತ್ತದೆ. ಸೃಜನಶೀಲ ಬರಹಗಾರನಾಗಬೇಕಾದರೆ ಮಾತು ಕಡಿಮೆ ಮಾಡಬೇಕು. ಮಾತನಾಡಿದರೆ ಭಾವದ ತೀವ್ರತೆ ಕಡಿಮೆಯಾಗಿ ಬರವಣಿಗೆ ಶಿಥಿಲವಾಗುತ್ತದೆ. ಮೊದಲು ಬರೆದು ಆ ನಂತರ ಮಾತನಾಡಬಹುದೆಂದು ಬರಹಗಾರರಿಗೆ ಬರವಣಿಗೆಯ ಗಂಭೀರತೆಯ ಗುಟ್ಟನ್ನು ತಿಳಿಸಿಕೊಟ್ಟರು. ಮುಂದುವರೆದು ಬರಹಗಾರ ಯಾರ ಮುಲಾಜಿಗೂ ಬೀಳಬೇಕಾಗಿಲ್ಲ. ಒಮ್ಮೊಮ್ಮೆ ಎಲ್ಲರೂ ನಮನ್ನು ಹೊಗಳುತ್ತಾರೆ.ಒಮ್ಮೊಮ್ಮೆ ತೆಗಳುತ್ತಾರೆ. ಅದು ಅವರ ವ್ಯಕ್ತಿತ್ವ. ಲೇಖಕ ತಾನು ಹೇಳಬೇಕಾದದ್ದು ಹೇಳಲೇಬೇಕು. ಅದು ಲೇಖಕನ ಜವಬ್ದಾರಿ. ಅವರೊಂದಿಗೆ ನಾಲ್ಕು ದಿನ ಕಳೆದದ್ದೇ ತಿಳಿಯಲಿಲ್ಲ. ನನ್ನ ಪತಿ ಮತ್ತು ನನ್ನಮಕ್ಕಳೂ ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಊರಿಗೆ ಹೋಗುವಾಗ ನಮ್ಮೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಹೋದರು. ನಾನು ಅವರ ಪತ್ನಿಯವರಿಗಾಗಿ ವೆಂಕಟಗಿರಿ ಕಾಟನ್ ಸೀರೆ ಅವಲಕ್ಕಿ ಉಂಡಿ ಕಳಿಸಿಕೊಟ್ಟೆ. ಇದೆಲ್ಲಾ ಬೇಡಾ ಎಂದರು. ಇದು ನಮ್ಮ ಪದ್ಧತಿ. ಹಾಗೆ ಕಳಿಸುವುದಿಲ್ಲಾ ಎಂದೆ. ಅದಕ್ಕೆ ಸುಮ್ಮನಾದರು. ಊರಿಗೆ ಹೋಗಿ ನಮಗೆ ಧನ್ಯವಾದದ ಪತ್ರವನ್ನೂ ಬರೆದು ತಾವು ಕೊಟ್ಟಸೀರೆ,ಅವಲಕ್ಕಿ ಉಂಡಿ ನನ್ನ ಪತ್ನಿಗೆ ಇಷ್ಟವಾಯಿತೆಂದು ತಿಳಿಸಿದ್ದರು.ಮೈಸೂರಿಗೆ ಬಂದರೆ ಮನೆಗೆ ಬರಲು ಹೇಳಿದ್ದರು. ಅದರಂತೆ ಒಮ್ಮೆ ಅವರ ಮನೆಗೆ ಹೋಗಿಯೂ ಬಂದೆವು. ಅದೇ ಅವರೊಂದಿಗೆ ಆಡಿದ ಕೊನೆಯ ಮಾತುಗಳು.

       ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರಕಾಶ ಬೆಳವಾಡಿಯವರು ಪರ್ವ ಕಾದಂಬರಿಯನ್ನು ರಂಗಭೂಮಿಗೆ ಅಳವಡಿಸಿ ಎಂಟುತಾಸು ಅಭಿನಯಿಸಿ ಪ್ರದರ್ಶಿಸಿದರು. ಪ್ರದರ್ಶನ ಬಹಳ ಅದ್ಭುತವಾಗಿತ್ತು. ಆಗ ಅವರನ್ನು ಭೇಟಿಯಾಗಬಹುದೆಂದು ಅಂದುಕೊAಡಿದ್ದೆ. ಅದರೆ ಅದಿನ ಅವರು ಬಂದಿರಲಿಲ್ಲ.ಮರುದಿನ ಬಂದಿರುವುದಾಗಿ ವರದಿಗಳನ್ನು ಓದಿದ್ದೆ. ಅವರು ದೈವಾಧೀನವಾಗಿರುವುದು ಕನ್ನಡ ತಾಯಿಯ ಮಡಲು ಬರಿದಾಗಿದೆ. ಓದುಗ ಬಳಗ ಅನಾಥವಾಗಿದೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇರದೇ ಹೋದರೂ ಪುಸ್ತಕಗಳ ಮೂಲಕ ನಮ್ಮ ಜೊತೆಗಿದ್ದಾರೆಂದು ಸಮಾಧಾನ ಮಾಡಿಕೊಳ್ಳಬೇಕಾಗಿದೆ. ಇಷ್ಟು ವರ್ಷಗಳ ಕಾಲ ಬಚ್ಚಿಟ್ಟುಕೊಂಡ ಭಾವಗಳು ಮೂರ್ತರೂಪ ಪಡೆದಿವೆ. ಈ ಬರವಣಿಗೆಯ ಮುಖಾಂತರ ಅವರಿಗೆ ನನ್ನ ನುಡಿನಮನಗಳನ್ನು ಸಲ್ಲಿಸುತ್ತೇನೆ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.