ಜಿ.ಕೃಷ್ಣರಾವ

                   

             “ ಬದುಕಬೇಕು ಬೇಸಿಗೆ ಬಿಸಿಲಿನ ಝಳಕ್ಕುರಿದು

              ಧಾತು ಒಳಗಿದನೆಲ್ಲ ಅಗಿದು ಹೊರವೊಗೆದು

              ಸಿಪ್ಪೆಮಾಡಿ, ಕಸ ಕಡ್ಡಿಗಿಡ್ಡಿ ಪುಡಿಮಾಡಿ

              ಬೆತ್ತಲೆಗೊಳಿಸಿದ ಆಕಾಶಕ್ಕೆ ಬೋರಲಾಗಿ

              ಬೇವಿನ ಮರದಿಂದ ಉದರುವ ಹನಿಗಳಂತೆ

              ಗಳಿಗೆಗಳ ಗುಣಿಸುತ್ತ ಬದುಕಬೇಕು’’ (ಬದುಕಬೇಕು)

           ಎಂದು ಹೈದ್ರಾಬಾದ ಕರ್ನಾಟಕದ ಪರಿಸರದ ವಸ್ತು  ನಿಷ್ಠ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ ಕವಿ ಜಿ.ಕೃಷ್ಣರಾಯರು.

                       ಆಧುನಿಕ ಕಾವ್ಯದ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕದ ರಾಯಚೂರಿನ  ನೆಲದಲ್ಲಿ ಅನೇಕ ಸೃಜನಶೀಲ ಕನ್ನಡ ಕವಿಗಳು ಕಾವ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂಥಹ ಮಹನೀಯರಲ್ಲಿ. ಜಿ.ಕೃಷ್ಣರಾಯರೂ ಒಬ್ಬರು. ಇವರು ಮೂಲತಃ ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದವರು. ಕ್ರಿ.ಶ.೧೯೩೩ರಲ್ಲಿ ಜನಿಸಿದರು. ಇವರ ತಂದೆಯವರು.ಜಿ. ನರಸಿಂಗರಾಯರು.ತಾಯಿ ಶ್ರೀಮತಿ ತುಂಗಾಬಾಯಿಯವರು. ಜಿ.ಕೊಪ್ರೇ಼ಶರಾವ ಮತ್ತು ಜಿ.ಬಿಂದೂಮಾಧವ ರಾವ ಇವರ ಸಹೋದರರು.

     ಇವರು ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ರಾಯಚೂರಿನ ಟ್ಯಾಗೂರು ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿ ಬಿ.ಎ ಮತ್ತು ಎಮ್.ಎ. ಕನ್ನಡ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೂರೈಸಿ ಸರಕಾರಿ ಶಾಲೆಯಲ್ಲಿ ಹದಿನೈದು ವರ್ಷ ಶಿಕ್ಷಕರಾಗಿ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷಿö್ಮÃವೆಂಕಟೇಶದೇಸಾಯಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಕ್ರಿಶ.೧೯೯೧ ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕ್ರಿ ಶ. ೧೯೯೫ ನವೆಂಬರ ತಿಂಗಳಲ್ಲಿ ದೈವಾಧೀನರಾಗಿದ್ದಾರೆ.              

                ಬಾಲ್ಯದಿಂದಲೂ ಅಧ್ಯಯನದಲ್ಲಿ ಅಸಕ್ತಿ ಹೊಂದಿದ ಇವರು ತಮ್ಮ ಅದ್ಯಯನದ ಕಾಲದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪ್ರಶಸ್ತಿ-ಪದಕಗಳನ್ನು ಪಡೆದು ಕೊಂಡಿದ್ದಾರೆ. ಇವರ ಪತ್ನಿ ಶ್ರೀಮತಿ ಗೀತಾಬಾಯಿ ಮಕ್ಕಳಾದ ಸುರೇಖಾ, ವಿಜಯಾ, ಶಾರದಾ, ಅಶ್ವತ್ಥನಾರಾಯಣ ಮತ್ತು ಕರುಣಾ ಎಂಬಾ ಐದು ಮಕ್ಕಳು. ಮೊಮ್ಮಕ್ಕಳು ಅಳಿಯಂದಿರು,ಸೊಸೆ ಒಟ್ಟಿನಲ್ಲಿ ಸುಂದರ ಸುಸಂಸ್ಕೃತ ಕುಟುಂಬ ಇವರದು. ಸ್ವವಭಾವದಲ್ಲಿ ಕಟ್ಟುನಿಟ್ಟು. ಶಿಸ್ತಿನ ಸಿಪಾಯಿಯಾಗಿದ್ದರು.

            ಇವರು ಸಾಹಿತ್ಯ ರಚ£ಗಿಂತ ಸಾಹಿತ್ಯಕ ಚಟುವಟಿಕೆಯನ್ನು ರೂಪಿಸುವಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರೆ. ಆದರೂ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯದ ಅವಲೋಕನ ಮಾಡೋಣ. ಅವರ ಮೊದಲ ಕವನ ಸಂಕಲನ `ಕೇದಾರ’. ಸಧ್ಯಕ್ಕೆ ಈ ಕೃತಿಯು ಅಧ್ಯಯನಕ್ಕೆ  ಲಭ್ಯವಿಲ್ಲ.

         ರಾಯಚೂರು ಜಿಲ್ಲೆ ಹರಿದಾಸರ ತವರೂರು. ದ್ವಿತೀಯ ಘಟ್ಟದ ದಾಸ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರೆಂದರೆ ಮಂತ್ರಾಲಯದ ಶ್ರೀರಾಘವೇಂದ್ರತೀರ್ಥರು. ಇವರ ಕುರಿತಾಗಿ “ಮಂತ್ರಾಲಯ ಮಹಿಮೆ’’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯೂ ಓದಿಗೆ ಲಭ್ಯವಿಲ್ಲ.

                    ಇವರ ಮತ್ತೊಂದು ಕೃತಿ `ಕಾದ್ಹಂಚು ಮೇಲಿನ ನೀರು’ ಇದರಲ್ಲಿಯ ಕವನಗಳು ಕನ್ನಡಪ್ರಭಾ, ಪ್ರತೀಕ, ಸಾಕ್ಷಿ, ಸಂಕ್ರಮಣ, ಕರ್ನಾಟಕ ಭಾರತಿ, ಆಂದೋಲನದAತಹ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವುಗಳ ಸಂಗ್ರಹವೇ `ಕಾದ್ಹಂಚು ಮೇಲಿನ ನೀರು’ ಈ ಕವನ ಸಂಕಲನ. ಇದರಲ್ಲಿ ಒಟ್ಟು ಇಪ್ಪತ್ತಾರು ಕವನಗಳಿವೆ. ಈ ಕವನ ಸಂಕಲನವು ಪಿ.ಬಸಣ್ಣ ಅವರ ಜನತಾ ಪ್ರಿಂಟರಿ ನಲ್ಲಿ ೧೯೭೩ ರಲ್ಲಿ ಸತ್ಯಸ್ನೇಹ ಪ್ರಕಾಶನದಿಂದ ಪ್ರಕಟÀವಾಗಿದೆ.

       ಇವರು ತಮ್ಮ ಕವನಗಳಲ್ಲಿ ಸಮಾಜದಲ್ಲಿಯ ಗೋಮುಖ ವ್ಯಾಘ್ರತನವನ್ನು ಹಿಡಿದಿಟ್ಟಿದ್ದಾರೆ. ಸಮಾಜವನ್ನು ಮುನ್ನಡೆಸುವ ನಾಯಕರು, ಬಂಧುಗಳು, ಸ್ನೇಹಿತರು ಮಾಡುವ ಮೋಸಕ್ಕೆ ಅಮಾಯಕರು ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಕಟು ಸತ್ಯವನ್ನು `ಇನ್ನೆಲ್ಲಿ ಮಲ್ಹಾರ’ ಎಂಬ ಕವನದಲ್ಲಿ ಹಿಡಿದಿಟ್ಟಿದ್ದಾರೆ.

     `ನಾಯಕರ ಕಣ್ಣೋಳಗೆ ಕುರ್ಚಿ, ದೇವರ ಮುಖದ ಮೇಲೆ ಪ್ರಶ್ನೆ

      ಅಣ್ಣತಮ್ಮೊಂದಿರೊಳು ಶಕುನಿ, ಗೆಳೆಯರೊಳು ಬ್ರೂಟಸ್

      ಬಾಜಾರದೊಳು ಕ್ಲಿಯೋ ಪಾತ್ರಾ,ಸಾಮಾಜಿಕರೊಳು ಮ್ಯಾಕ್ ಬೆತ್ತರನ್ನು’’

 ನೆಲಮಾಳಿಗೆಯಲೋ, ಉಪ್ಪರಿಗೆಯಲೋ, ಗೀತೆ ಓದಿ ವಿಸ್ಕಿಕುಡಿಯುವವರ ಕುರಿತು ಮಾರ್ಮಿಕವಾಗಿ ತಿಳಿಸುತ್ತಾರೆ. ಆದರ್ಶದ ಬೆನ್ನು ಹತ್ತಿ ಆದರ್ಶವಾಗಿ ಇರಲು ಆಗದ ಜನರ ದೊಂಬರಾಟವನ್ನು ಚಿತ್ರಿಸಿದ್ದಾರೆ.

       `ದೇವರಿಗೆ’ ಎಂಬ ಕವನವು ರಚನಾತ್ಮಕವಾಗಿ ವಿಶೇಷವಾಗಿದೆ. (ಈ ಕವನವು ಅಕ್ಕಮಹಾದೇವಿಯ `ಭಿಕ್ಷೆ ಬೇಡುವಂತೆ ಮಾಡು, ಭಿಕ್ಷೆ ನಾಯಿತಿಂಬುವAತೆ ಮಾಡು ಎಂಬ ವಚನವನ್ನು ನೆನಪಿಸುತ್ತದೆ.) ತನ್ನನ್ನು ಬದುಕಿನ ಸಮಸ್ಯಯ ಸಮುದ್ರದೊಳು ಒದ್ದಾಡುವಂತೆ ಮಾಡಲು ವಿನಂತಿಸಿಕೊಳ್ಳುತ್ತಾರೆ. ಕಷ್ಟಗಳು ಬರಲಿ ಕಷ್ಟಗಳನ್ನು ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳುವ ಆಶಯ ಕವಿಯದು.

        `ದೇವರೆ ನಿನ್ನ ಕೃಪೆಯಿರಲಿ

       ಗಳಿಗೆ ಗಳಿಗೆಗೂ ಬೆಕ್ಕಿನ ಕೈಯೊಳಗಿರುವಿಲಿಯಂತೆ

       ವಿಲಿವಿಲಿ ಒದ್ದಾಡಿಸುತಿರು’’ ಸತ್ಯವನು ಮರೆಮಾಚದಂತೆ ಮಾಡು, ಕ್ಷಣಕ್ಷಣಕ್ಕೂ ತ್ರಾಸು ಪಡುವಂತೆ ಮಾಡು. ಇರುಳಲಿ ಕಣ್ಣಿಗೆ ನಿದ್ದೆ ಬರದಂತೆ ಮಾಡು, ದೇವರೆ ನೀನು ನನ್ನವನಾಗ ಗೊಡಬೇಡ, ಎಂದು ಹೇಳುವಲ್ಲಿ ಎಲ್ಲವನ್ನು ಕಾಣದ ದೇವರ ಮೇಲೆ ಹಾಕಿ ಬಚಾವ ಆಗುವ ಮೈಗಳ್ಳರನ್ನೂ ಚಿತ್ರಿಸಿದ್ದಾರೆ. ಇನ್ನೂ ಮುಂದುವರೆದು ಮನದೊಳಗೆ ಅನೇಕ ಕಾಮನೆಗಳಿದ್ದರೂ ಸಮಾಜದ ಎದುರಿಗೆ ಸಾಚಾತನದ ಸೋಗು ಹಾಕುವ ಜನರ ಕುರಿತು ಬೆಳಕು ಚಲ್ಲುತ್ತಾರೆ.“ಒಳಗಿರುವ ರಾವಣತ್ವ ಭಾವನೆಗಳನು ಹರಿವ ನೀರಿಗೆಸೆಯದೆ ರೀಮಿನೊಳಗಿನ ಹಾಳೆಯಂತೆ ಮನದವಸ್ಥೆಯನು ಕಾಪಾಡಿ ಅನಿಸಿಕೆಯ ಅಲಾರಾಮಿಗೆ ಓಗೊಟ್ಟು ಸುಮ್ಮನಾದೆ. ಸಂಭಾವಿತನದ ಹೆಸರು ಪಡೆದು ಸಾಚಾತನವ ಮೆರೆದೆ ಸಮಾಜದ ಲಕ್ಷö್ಮಣಗೆರೆ ದಾಟದೆ.’’ ಎಂದು ಹೇಳುತ್ತಾ ಸ್ವಾರ್ಥಿಗಳ ಮುಖವಾಡಗಳನ್ನು ಕಳಚುತ್ತಾರೆ. ಕಲುಶಿತಗೊಂಡ ಸಮಾಜಕ್ಕೆ ರೂಪಕವಾಗಿ ಬಾವಿಯನ್ನು ನೀಡಿದ್ದಾರೆ. ಈ ಹಿಂದೆ ಬಾವಿ ನೀರು ಸ್ಪಟಿಕದಂತೆ ಶುದ್ಧವಾಗಿದ್ದವು. ಅದರೆ ಈಗ ಆ ನೀರು ಕಲುಷಿತ ಗೊಂಡಿವೆ ಎಂದು ಬಸವಣ್ಣನಂತಹ ಸಮಾಜ ಸುಧಾರಕರು ಬಂದರೂ ಸಮಾಜ ಸುಧಾರಣೆ ಯಾಗಿಲ್ಲವೆಂದು ಖೇದದಿಂದ ನುಡಿಯುತ್ತಾರೆ. ಹೀಗೆ ಕವನ ಸಂಕಲನದ ಒಂದೊAದು ಕವನಗಳು ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಶ್ರಮಿಸುತ್ತವೆ

      ಎಪ್ಪತ್ತರ ದಶಕ ನವ್ಯ ಧೊರಣೆಯ ಉತ್ತುಂಗದ ಕಾಲ. ಅಡಿಗರು ಗೊಕಾಕರು ಪಾಶ್ಚಾತ್ಯರ ನವ್ಯ ಭಾಷೆಯ, ಘಮಲನ್ನು ಕನ್ನಡ ಸಾಹಿತ್ಯಕ್ಕೆ, ಕನ್ನಡ ಕವಿಗಳಿಗೆ ಲೇಪಿಸಿ ಹೊಸ ತನವನ್ನು ಮೂಡಿಸಿದ್ದರು. ಇದಕ್ಕೆ ಜಿ.ಕೃಷ್ಣರಾಯರು ಹೊರತಾಗಿಲ್ಲ. ನವ್ಯದ ತಂತ್ರವನ್ನು, ಭಾಷಾ ಪ್ರಯೋಗವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. `ಕೊಶಿಸ್ ಮಾಡತಿನಿ’ ಎಂಬ ಕವನದಲ್ಲಿ

             ’ಇವನವ್ವನ ಕಾಲ್ಹಿಡುದು ಜಗ್ತಾನ ಹೊಟ್ಟಿಗೇನ್ ತಿಂತಾನೋ

              ಖಿಂಗ್ಯಾಕ ಮಾಡ್ತಲೆ ಅಂದ್ರ ಸುಮ್ಕೆ ಕುಂಡ್ರಲೆ ಇಲ್ಲೆ ಅಂತ

              ಸತುವ್ಹಾಕಿ ಎಳಿತಾನ-ಗೆಜ್ಜೆಯೊಳ್ಗ ಲಬಲಬೋ ಹೊಯ್ಕೊಂಭಾAಗ

               ಬ್ಯಾನಿ ಆಗ್ತದ…”….ಹೀಗೆ ಕವನದ ತುಂಬ ಅನೇಕ ಸಂದರ್ಭಗಳನ್ನು ಉದಾಹರಿಸಬಹುದು.

            ನವೋದಯ ಸಾಹಿತ್ಯದ ಸಂದರ್ಭದಲ್ಲಿ ರಾಯಚೂರಿನ ನೆಲದಲ್ಲಿ ಆಧುನಿಕತೆಯ ಛಾಯೆ ತೀವ್ರವಾಗಿ ಮೂಡಿ ಬಂದಿತು. ಆ ಸಂದರ್ಭದಲ್ಲಿ ಹೆಸರುವಾಸಿ ಸಾಹಿತಿಗಳಾದ ಶ್ರೀಶಾಂತರಸರು, ಜಂಬಣ್ಣ ಅಮರಚಿಂತರು, ಚನ್ನಣ್ಣವಾಲೀಕಾರರು, ಜಿ.ಶ್ಯಾಮಾಚಾರ್ಯರು ಮುಂತಾದವರು ಇವರ ಸ್ನೇಹಿತರಾಗಿದ್ದರು. ಇದರೊಂದಿಗೆ ಹಿರಿಯ ವಿದ್ವಾಂಸರಾದ ಕಿ.ರಂ ನಾಗರಾಜ ರಂತಹ ಸಾಹಿತಿಗಳ ಸ್ನೇಹವೂ ಇತ್ತು. ರಾಯಚೂರುವಾಣಿ ದಿನ ಪತ್ರಿಕೆಯ ಸಂಪಾದಕರಾದ ಶ್ರೀಎನ್.ಕೆ ಕುಲಕರ್ಣಿಯವರ ಸ್ನೇಹ ಬಲವಾಗಿತ್ತು. ಹೀಗಾಗಿ ಇವರ ಸಾಹಿತ್ಯ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಇತ್ತು. ಜಿಲ್ಲಾ ಸಾಹಿತ್ಯ ಪರಿಷತ್ತು, ಕರ್ನಾಟಕ ಸಂಘದೊAದಿಗೆ ಹೆಚ್ಚಿನ ಒಡನಾಟ ಇತ್ತು. ಕನ್ನಡ ಸಾಹಿತ್ಯಕ್ಕೆ ಸಂಬAಧಪಟ್ಟAತೆ ವಿಚಾರ ಸಂಕಿರಣ,ವಿಶೇಷ ಉಪನ್ಯಾಸಗಳು, ಬೀದಿನಾಟಕಗಳು, ದಸರಾ ನವರಾತ್ರಿ ಉತ್ಸವಗಳು, ಇತರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ಉಪನ್ಯಾಸಕರಾಗಿ, ಸಂಘಟಕರಾಗಿ, ಪತ್ರಿಕೋದ್ಯಮದ ಕ್ಷೇತ್ರದಲ್ಲಿಯೂ ತಮ್ಮ ಬರವಣಿಗೆಯನ್ನು ವಿಸ್ತರಿಸಿ ಕೊಂಡಿದ್ದಾರೆ. ಹೆಚ್ಚಿನ ಆಡಂಬರ ಗೋಜಿಗೆ ಹೋಗದೆ ತಮ್ಮಷ್ಟಕ್ಕೆ ತಾವೇ ಸೌಮ್ಯವಾಗಿರುವುದು ಇವರ ವ್ಯಕ್ತಿತ್ವ. ಮಿತ್ರರೊಂದಿಗೆ, ವಿದ್ಯಾರ್ಥಿಗಳೋಂದಿಗೆ ಸ್ನೇಹದಿಂದ ವರ್ತಿಸುತ್ತ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಿದವರು. ನಿವೃತ್ತಿಯ ನಂತರ ರಾಯಚೂರಿನ ಶ್ರೀಯೋಗೇಶ್ವರ ಯಾಜ್ಞವಲ್ಕö್ಯ ಸಂಘದಲ್ಲಿ ಕಾರ್ಯದರ್ಶೀ ಯಾಗಿ ಸೇವೆ ಸಲ್ಲಿಸಿದ್ದರು. ಆತ್ಮೀಯರಲ್ಲಿ ಇವರು ಸದಾ ಸ್ಮರಣೀಯರು.

ಲೇ.ಡಾ.ಶೀಲಾದಾಸ,ರಾಂiÀಸುಚೂರು.

ಆಕರ ಗ್ರಂಥ-ಕಾದ್ಹAಚು ಮೇಲೆ ನೀರು,ಸತ್ಯಸ್ನೇಹ ಪ್ರಕಾಶನ, ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.