ಯಾಜ್ಞವಲ್ಕö್ಯ-ಕಣ್ವ ದರ್ಶನ

                         

            ಯಾಜ್ಞವಲ್ಕö್ಯರು ಭಾರತ ಕಂಡ ದಾರ್ಶನಿಕರಲ್ಲಿ ಪ್ರಮುಖರು. ಇವರು ಒಂದು ವೇದವನ್ನು, ಉಪನಿಷತ್ತನ್ನು, ಬ್ರಾಹ್ಮಣಕವನ್ನು ಸ್ಮೃತಿಯನ್ನು ನಾಡಿಗೆ ನೀಡಿದ ಮಹಾಜ್ಷಾನಿಗಳು.ಸಾವಿರಾರು ವರ್ಷಗಳು ಕಳೆದರೂ ಇವರು ಪ್ರಸ್ತಾಪಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದನ್ನು ಗಮನಿಸಬೇಕು. ಯಾಜ್ಞವಲ್ಕö್ಯರ ಕುರಿತು ಅನೇಕ ಸಂಶೋಧನೆಗಳು ದೇಶ ಮತ್ತು ವಿದೇಶದಲ್ಲಿ ಇಂದಿಗೂ ನಡೆಯುತ್ತಿವೆ. ಅವರವರ ಉದ್ದೇಶಕ್ಕನುಗುಣವಾಗಿ ಅವರ ವಿಚಾರಗಳ ಚಿಂತನ ಮತ್ತು ಮಂಥನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಅವರ ಪರಂಪರೆಯಲ್ಲಿ ಬರುವ ಕಣ್ವ ಋಷಿಗಳೂ ಸಹ ಪ್ರಾತಃಸ್ಮರಣೀಯರು. ಇವರ ಕುರಿತಾದ ಗ್ರಂಥವೆ “ಯಾಜ್ಞವಲ್ಕö್ಯ-ಕಣ್ವ ದರ್ಶನ”

         ಈ ಕೃತಿಯ ಲೇಖಕರು,ಪ್ರಕಾಶಕರು ಮತ್ತು ಸಂಪಾದಕರು ಶ್ರೀಸತ್ಯನಾರಾಯಣ ಮುಜಮದಾರ ಗುಡುಗುಂಟಿ,ರಾಯಚೂರು. ಪ್ರಾಯೋಜಕರು ಶ್ರೀ.ಎಸ್. ನಾಗರಾಜ,ಅಧ್ಯಕ್ಷರು ಶ್ರೀಯೋಗೀಶ್ವರ ಯಾಜ್ಞವಲ್ಕಾö್ಯ ಟ್ರಷ್ಟ(ರಿ) ಶ್ರೀಕ್ಷೇತ್ರ ಹಿರಣ್ಯಪಲ್ಲಿ, ಕೋನಕುಂಟ್ಲ ತಾ. ಚಿಂತಾಮಣಿ. ಜಿ.ಚಿಕ್ಕಬಳ್ಳಾಪುರ. ಈ ಕೃತಿಗೆ ಹಿರಿಯ ಸಾಹಿತಿಗಳಾದ ವಿ.ಎಸ್. ಕಾಂತನವರ ಮುನ್ನುಡಿ ಬರೆದಿದ್ದಾರೆ. ಈ ಕೃತಿಯನ್ನು ನಾಲ್ಕು ಭಾಗವಾಗಿ ನೋಡಬೇಕು. ಯಾಕೆಂದರೆ ಲೇಖಕರೊಂದಿಗೆ ಶ್ರೀಬಿಂದುಮಾಧವ ಕನಸಾವಿ, ಡಾ.ವಸಂತಲಕ್ಷಿö್ಮ.ಕೆ ಮತ್ತು ಶ್ರೀಸುಭಾಶ ಕಾಕ್ ಯು,ಎಸ್. ಎ.ಇವರ ಲೇಖನಗಳೂ ಸಂಗ್ರಹಿತವಾಗಿವೆ. ಇವರ ಲೇಖನಗಳೂ ಯಾಜ್ಞವಲ್ಕö್ಯರ ಕುರಿತಾಗಿವೆ.

          ಈ ಕೃತಿಯಲ್ಲಿ ಸತ್ಯನಾರಾಯಣಮುಜಮದಾರ ಅವರು ೫೭ ಬಿಡಿ ಬರಹಗಳನ್ನು ಸಂಗ್ರಹಿಸಿದ್ದಾರೆ. ತಾವು ಆಯಾ ಸ್ಥಳಗಳಿಗೆ ಸಂದರ್ಶಿಸಿ ಖಚಿತ ಮಾಹಿತಿಯನ್ನು ಛಾಯಾ ಚಿತ್ರಗಳ ಮೂಲಕ ನೀಡಿದ್ದಾರೆ. ಭಾರತದಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಿ ಸಂಶೋದಕರಿಗೆ, ಪ್ರವಾಸಿಗರಿಗೆ, ಹವ್ಯಾಸಿಗಳಿಗೆ ಮಾರ್ಗಸೂಚಿ ಸಿದ್ಧಪಡಿಸಿದ್ದಾರೆ.

         ಮೊದಲಿಗೆ ಯಾಜ್ಞವಲ್ಕö್ಯರ ಕುರಿತಾದ ಕೆಲವು ಬರಹಗಳನ್ನು ಅವಲೋಕಿಸೋಣ.ಜೈನ ಮತದ ಋಷಿಭಾಷಿತ ಸೂತ್ರದಲ್ಲಿ ಯಾಜ್ಞವಲ್ಕö್ಯರನ್ನು ಜಣ್ಣವಕ್ಕ ಎಂದು ಕರೆಯಲಾಗಿದೆ. ಇಲ್ಲಿ ಇವರ ಜೀವನ ಮತ್ತು ಸಾಧನೆಯ ಕುರಿತು ವಿವರಿಸಲಾಗಿದೆ. ಪ್ರತ್ಯೇಕ ಬುದ್ಧರಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಅಂದರೆ ಜೀವಂತವಿದ್ದಾಗಲೇ ಮೋಕ್ಷ ಪಡೆಯುವವರು ಎಂದು ಅರ್ಥ. ಇನ್ನು ಅವರೇ ರಚಿಸಿದ ಶತಪಥ ಬ್ರಾಹ್ಮಣ, ಬೃಹದಾರಣ್ಯ ಮುಂತಾದ ಗ್ರಂಥದಲ್ಲಿ ಅವರ ಕುರಿತಾಗಿ ವಿಚಾರಗಳು ತಿಳಿದು ಬರುತ್ತವೆ. ಸಹಜಮಾರ್ಗ ಸಂಸ್ಥಾಪಕರಾದ ಶ್ರೀರಾಮಚಂದ್ರಜಿ ಮಹರಾಜರವರು ತಮ್ಮ ಆತ್ಮಕಥೆಯಲ್ಲಿ“ ದಶರಥರಾಜನಿಗಿಂತ  ೭೨ ತಲೆಮಾರ ಮೊದಲು ಯಾಜ್ಞವಲ್ಕö್ಯರ ಅಂತಃಸಲ್ಲಾಪದ ಪದ್ಧತಿ ಪ್ರಚಲಿತವಗಿತ್ತೆಂದು ತಿಳಿಸುತ್ತಾರೆ.ಯಾಜ್ಞವಲ್ಕö್ಯರು ಮಹಾರಾಷ್ಟçದ ಲೋನಾರ ಸರೋವರದ ದಂಡೆಯ ಮೇಲೆ ಶಿಷ್ಯರಿಗೋಸ್ಕರ ಶಿವನನ್ನು ಕುರಿತು ತಪಸ್ಸುಮಾಡಿದರಂತೆ.ಅದರ ಸ್ಮರಣಾರ್ಥವಾಗಿ ಇಲ್ಲಿ ಯಾಜ್ಞವಲ್ಕೆö್ಯÃಶ್ವರ ದೇವಸ್ಥಾನವಿದೆ. ವಾರಣಾಸಿಯ ಗಂಗಾ ತಟದಲ್ಲಿ ಲೋಲಾರ್ಕ ಕ್ಷೇತ್ರದಲ್ಲಿ ಸೂರ್ಯದೇವನ ಆಜ್ಞೆಯಂತೆ ಸರಸ್ವತಿಯ ಸ್ಮರಣೆ ಮಾಡಿ ಸರಸ್ವತಿಯ ಸ್ತುತಿಯನ್ನು ರಚಿಸಿದ್ದಾರೆ. ಅದ್ದರಿಂದ ಇದನ್ನು ಆದಿತ್ಯ ಕ್ಷೇತ್ರವೆಂದು ಕರೆಯುತ್ತಾರೆ. ವಡೋದರಾ ಹತ್ತಿರದ ಕಾಯೋವರೋಹಣದಲ್ಲಿ ಯಾಜ್ಷವಲ್ಕö್ಯರು ತಪಸ್ಸು ಮಾಡಿದ ಶಿವಮಂದಿರವಿದೆ. ನೆಲಮಂಗಲದ ಆಲನಹಳ್ಳಿಯಲ್ಲಿ ಯಾಜ್ಞವಲ್ಕö್ಯರು ಧ್ಯಾನಸ್ಥರಾದಾಗ ರಂಗನಾಥಸ್ವಾಮಿ ಕಂಬದಲ್ಲಿ ದರ್ಶನವಿತ್ತ ಸ್ಥಳವಾಗಿದೆ. ಹರಿವಂಶದಲ್ಲಿ ವೈಶಂಪಾಯನರು ಭಗವಂತನ ದಶಾವತಾರದ ಕಲ್ಕಿ ಯೊಂದಿಗೆ ಯಾಜ್ಞವಲ್ಕö್ಯರು ಅವತರಿಸುತ್ತಾರೆಂಬುದನ್ನು ದಾಖಲಿಸಿದ್ದಾರೆ. ಗರ್ಗ ಸಂಹಿತೆಯಲ್ಲಿ ಮಕ್ಕಳಿಲ್ಲದ ವಿಮಲರಾಜನಿಗೆ ಕೃಷ್ಣನ ಜನ್ಮ ವೃತ್ತಾಂತವನ್ನು ತಿಳಿಸುವ ವಿಚಾರ ದಾಖಲಾಗಿದೆ.ಸ್ವಾಮಿನಾರಾಯಣ ಮಹರಾಜರು ಇವರು ಅನೇಕ ಗ್ರಂಥÀಗಳನ್ನು ರಚಿಸಿದರು. ಅದರಲ್ಲಿ ತಮಗೆ ಎಂಟು ಶಾಸ್ತçಗ್ರಂಥಗಳು ಇಷ್ಟ. ಅದರಲ್ಲಿ ಯಾಜ್ಞವಲ್ಕö್ಯಸ್ಮೃತಿ ಇಷ್ಟವೆಂದು ಪ್ರಸ್ತಾಪಿಸುತ್ತಾರೆ.ಯಾಜ್ಞವಲ್ಕö್ಯರು ಪ್ರತಿಪಾದಿಸಿದ ಸೂರ್ಯಕೇಂದ್ರಿತ ಸಿದ್ಧಾಂತವನ್ನು ನಿರೂಪಿಸಿದ್ದಾರೆ. ಯಾಜ್ಞವಲ್ಕö್ಯ ಅವರ್ತಕ ಚಕ್ರ ಎಂಬ ಲೇಖನ ಸೌರ ಮತ್ತು ಚಂದ್ರಮAಡಲಗಳ ಸಮನ್ವಯಿಸುವ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಇದು ಭಾರತೀಯರು ಕ್ಯಾಲೆಂಡರ್ ರಚಿಸುವಲ್ಲಿ ಸಹಾಯಕವಾಗಿದೆ. ಅಧಿಕಮಾಸದ ವಿವರವು ಇಲ್ಲಿ ಉಲ್ಲೆಖವಾಗಿದೆ. ಶ್ರೀರಾಮಾನುಜ ಸಂಪ್ರದಾಯದಲ್ಲಿ ಬರುವ ೧೨ ಜನ ಆಳ್ವಾರರಲ್ಲಿ ೭ನೆಯವರಾದ ಶ್ರೀಕುಲಶೇಖರ ಆಳ್ವಾರರು ರಚಿಸಿದ ಮುಕುಂದಮಾಲಾ ಸ್ತುತಿಯಲ್ಲಿ ಯಾಜ್ಞವಲ್ಕö್ಯರ ಉಲ್ಲೇಖವಿದೆ. ಇದರಲ್ಲಿ ರೋಗನಿವಾರಣೆಗಾಗಿ ಕೃಷ್ಣನೆಂಬ ನಾಮಸುಧಾರಸವನ್ನು ಪಾನಮಾಡಿ ಎಂದು ತಿಳಿಸುತ್ತಾರೆ, ಯಾಜ್ಞವಲ್ಕö್ಯರಿಗೆ ಸಂಬAಧಿಸಿದ ಸ್ಥಳ, ಶುಕ್ಲಯಜುವೇದ, ಆರಾಧ್ಯದೈವವಾದ ಸೂರ್ಯನಾರಾಯಣನ ದೇವಸ್ಥಾನಗಳು, ಯಾಜ್ಙವಲ್ಕö್ಯರ ಕುರಿತಾದ ಗ್ರಂಥಗಳು, ತಪಸ್ಸು ಮಾಡಿದ ಸ್ಥಳ ,ಗೋತ್ರಗಳ ವಿಚಾರ, ಬೇರೆಬೇರೆ ರಾಜ್ಯಗಳಲ್ಲಿ ಶುಕ್ಲಯಜುರ್ವೇದಿಗಳು ಗುರುತಿಸಿಕೊಳ್ಳುವ ಹೆಸರು ಹೀಗೆ ಅನೇಕ ದಾಖಲೆಗಳನ್ನು ನೀಡುತ್ತಾರೆ.

       ೨) ಇನ್ನು ಸುಭಾಶ ಕಾಕ್ ಯು.ಎಸ.ಎ ಅವರು ಯಾಜ್ಞವಲ್ಕö್ಯರ ಕುರಿತು ಸಂಶೋಧನಾತ್ಮಕ ಲೇಖನ ಪ್ರಕಟಿಸಿದ್ದಾರೆ. ಆಲೇಖನವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಯಾಜ್ಞವಲ್ಜö್ಯರು ಮತ್ತು ಪುರಾಣಗಳಲ್ಲಿಯ ವಿಶ್ವವಿಜ್ಞಾನದ ಕುರಿತು ಸಂಶೋಧನಾತ್ಮಕ ಲೇಖನ ಬರೆದಿದ್ದಾರೆ.ಬೃಹದಾರಣ್ಯ ಮತ್ತು ಶಥಪಥ ಬ್ರಾಹ್ಮಣಕದಲ್ಲಿಯ ಬ್ರಹ್ಮಾಂಡದ ರಚನೆ, ಅವುಗಳ ಸ್ವರೂಪ ಮುಂತಾದ ವಿಚಾರಗಳ ಕುರಿತು ಚರ್ಚಿಸಲಾಗಿದೆ.ಭೂಮಿಗೂ ಇತರ ಗ್ರಹಗಳಿಗೆ ಇರುವ ದೂರ, ಮಹರ್ಲೋಕ,ಜನಲಫಕ,ತಪೋಲೋಕ,,ತಪೋಲೋಕದಿಂದ ಸತ್ಸಲೋಕದ ದೂರದ ವಿವರಗಳು ಮೂಡಿಬಂದಿವೆ. ಇದರಿಂದ ಯಾಜ್ಞವಲ್ಕö್ಯರ ವ್ಯಕ್ತಿತ್ವದ ಪರಿಚಯ ಆಗುತ್ತದೆ.

         ೩) ಇನ್ನು ಡಾ,ವಸಂತಲಕ್ಷಿö್ಮ ಕೆ. ಅವರ “ಪ್ರಾಚೀನ ಕರ್ನಾಟಕದಶಾಸನೋಕ್ತ ವಾಜಿವಂಶÀದ ಬ್ರಾಹ್ಮಣರು’’ ಎಂಬ ಲೆಖನವನ್ನು ಸಂಗ್ರಹಿಸಲಾಗಿದೆ.ಈ ಲೇಖನವು ಯಾಜ್ಞವಲ್ಕö್ಯರ ಪರಂಪರೆಯಲ್ಲಿ ಬರುವ ವಾಜಿವಂಶದವರ ಕುರಿತಾದ ಶಾಸನಗಳನ್ನು ಉಲ್ಲೇಖಿಸಿ ಕರ್ನಾಟಕದಲ್ಲಿ  ೫ ನೇ ಶತಮಾನದಿಂದ ವಾಸವಾದ ಮನೆತನ ಇದಾಗಿದ್ದು, ಈ ಮನೆತನದವರು ವೇದಪಾರಂಗತರು ಶೂರರೂ ಆಗಿದ್ದರು, ಪ್ರತಿಷ್ಟಿತ ವಂಶಶ್ಥರಾಗಿದ್ದರು ಎಂದು ತಿಳಿಸುತ್ತಾರೆ.

  ೪).ಇನ್ನು ಬಿಂದುಮಾಧವ ಕನಸಾವಿಯವರು ರಚಿಸಿದ ೧೨ ಕಿರು ಲೆಕನಗಳನ್ನು ಇಲ್ಲಿ ಚಿತ್ರ ಸಹಿತ ಪ್ರಕಟಿಸಲಾಗಿದೆ. ಭಾರತದ ಉತ್ತರ ಭಾಗದಲ್ಲಿ ಅನೇಕ ತಪೋ ಭೂಮಿಗಳು ಕರ್ಮಭೂಮಿಗಳು ಸಿಗುತ್ತವೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ. ರಾಜಾಸ್ಥಾನದ ಜಾಗೇರಿಧಾಮ.ಇಲ್ಲಿ ಯಾಜ್ಞವಲ್ಕö್ಯರು ಯಜ್ಞ ಮಾಡಿದ ಕುಂಡಗಳನ್ನು ರಕ್ಷಿಸಲಾಗಿದೆ. ಶಿವನ ದೇವಾಲಯವಿದೆ. ಪ್ರತಿವ಼ರ್ಷ ಇಲ್ಲಿ ಜಾತ್ರೆ ನಡೆಯುತ್ತದೆ.ಬಿಹಾರದ ಗಯಾ ಕ್ಷೇತ್ರದ ಬಳಿ ನಾವಾದ ಜಿಲ್ಲೆಯ ರಾಜೌಲಿ ಎಂಬಲ್ಲಿ ಲೋಮಶ ಮತ್ತು ಯಾಜ್ಞವಲ್ಕö್ಯರ ಗುಹೆ ಇದೆ. ಇಲ್ಲಿಯ ಜನ ಭಕ್ತಿಯಿಂದ ಋಷಿಗಳನ್ನು ಆರಾದಿಸುತ್ತಾರೆ. ಉತ್ತರ ಪ್ರದೇಶÀದಕನೌಜ ಜಿಲ್ಲೆಯ ಗಂಗಾ ತಟದಲ್ಲಿ ಯಾಜ್ಞವಲ್ಕö್ಯ ಆಶ್ರಮವಿದೆ, ಜನರು ಆಡು ಭಾಷೆಯಲ್ಲಿ ಯಾಜ್ಞಬಲ್ಕಿ ಎಂದು ಕರೆಯುತ್ತಾರೆ.ಶ್ರೀಯಾಜ್ಞವಲ್ಕö್ಯರಿಂದ ಪ್ರಯಾಗರಾಜದಲ್ಲಿ ಸ್ಥಾಪಿತವಾದ ಶ್ರೀಕಲ್ಯಾಣಿದೇವಿ ಮಂದಿರವಿದೆ. ಯಾಜ್ಞವಲ್ಕö್ಯರು ತಪಸ್ಸನ್ನು ಆಚರಿಸಿದ ಶಕ್ತಿ ದೇವತೆಯಂದರೆ ಉಚ್ಚೃತ ದುರ್ಗಭಗವತಿ. ಇಲ್ಲಿಯೇ ಮಹಾಕವಿ ಕಾಳಿದಾಸ ದೇವಿಯ ಅನುಗ್ರಹ ಪಡೆದುಕೊಂಡದ್ದು. ಇದು ಜಗವನ ಕ್ಷೇತ್ರದಿಂದ ೩೫ ಕಿಲೋಮೀಟರ್ ಹತ್ತಿರವಿದೆ. ವ್ಯಾಸರು ರಚಿಸಿದ ಭವಿಷ್ಯ ಪುರಾಣದ ಬ್ರಹ್ಮ ಪರ್ವದಲ್ಲಿ ಬ್ರಹ್ಮ ಹಾಗು ಯಾಜ್ಞವಲ್ಕö್ಯರ ಉಲ್ಲೇಖ ಬರುತ್ತದೆ, ಈ ಸಂವಾದವನ್ನು ಕೃಷ್ಣ ತನ್ನ ಮಗನಿಗೆ ತಿಳಿಸಿದನಂತೆ. ಇಲ್ಲಿ ಬಿಹಾರದ ಜಗದಿಶಪುರದಲ್ಲಿ ಯಾಜ್ಞವಲ್ಕö್ಯರು ತಪಸ್ಸನ್ನು ಆಚರಿಸಿದ ಸ್ಥಳವಿದೆ, ಬ್ರಹ್ಮರು ಯಾಜ್ಞವಲ್ಕö್ಯರಿಗೆ ಸೂರ್ಯೋಪಾಸನೆ ಮಾಡುವ ವಿಧಾನವನ್ನು ತಿಳಿಸಿದ್ದಾರೆ. ಬಿಹಾರದ ಜಗದೀಶÀಪುರದಲ್ಲಿ ಶಿವನ ದೇವಸ್ಥಾನವಿದೆ. ಶ್ರೀಕೃಷ್ಣನು ಯಾಜ್ಞವಲ್ಕö್ಯರ ಆಣತಿಯಂತೆ ತಪಸ್ಸುಮಾಡಿ ಬಾಣಾಸುರನ ಸಂಹಾರಮಾಡಿದನAತೆ.ಇಲ್ಲಿ ಅಶ್ವತ್ಥ ವೃಕ್ಷವಿದ್ದು ಯಾಜ್ಞವಲ್ಕರ ತಪೋಭೂಮಿ ಎಂದು ಪ್ರಸಿದ್ಧವಾಗಿದೆ. ತಮಿಳುನಾಡಿನ ಕೋಟೇಶ್ವರ ದೇವಾಲಯವು ಯಾಜ್ಞವಲ್ಕö್ಯರ ಗುರುಸೇವೆಗೆ ಸಂದ ಗೌರವವಾಗಿದೆ. ಸೂರ್ಯನಿಗೆ ದೋಷಬಂದಾಗ ಶಿವನ ದೇವಾಲಯದಲ್ಲಿ ಪ್ರದೋಶವ್ರತವನ್ನು ಮಾಡಿ ದೋಷ ಪರಿಹಾರ ಮಾಡಿದನಂತೆ.ಕರ್ನಾಟಕದ ಪಟ್ಟದಕಲ್ಲು ದೇವಾಲಯದಲ್ಲಿ ಯಾಜ್ಞವಲ್ಕö್ಯರ ಕೆತ್ತನೆ ಇದೆ. ಸಪ್ತಾಶ್ವ ಉಳ್ಳ ಸೂರ್ಯನಾರಾಯಣ ಮತ್ತು ಯಾಜ್ಞವಲ್ಕö್ಯರು ವೇದ ಕಲಿಯುವ ರೀತಿಯಲ್ಲಿ ಕೆತ್ತಲಾಗಿದೆ. ಹೀಗೆ ನಾಲ್ಕುಜನ ವಿದ್ವಾಂಸರು ಯಾಜ್ಷವಲ್ಕö್ಯರ ವ್ಯಕ್ತಿತ್ವಕ್ಕೆ ಚರಿತ್ರೆಗೆ ಸಂಬAದ ಪಟ್ಟ ಅಪರೂಪದ ಮಾಹಿತಿಯನ್ನು ದಾಖಲಿಸಿದ್ದಾರೆ.

           ಇನ್ನು ಕಣ್ವಋಷಿಗಳ ಕುರಿತಾದ ವಿಚಾರಗಳನ್ನು ಗಮನಿಸೋಣ. ಕಣ್ವರು ಯಾಜ್ಞವಲ್ಕö್ಯರ ಶಿಷ್ಯರು. ಇವರ ಚರಿತ್ರೆ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ. ಕರ್ನಾಟಕ ಮತ್ತು ಭಾರತದ ಇತರ ಪ್ರದೇಶಗಳಲ್ಲಿ ಕಣ್ವರ ನೆಲೆಗಳು ಕಂಡು ಬರುತ್ತವೆ. ಉತ್ತರಖಾಂಡಾದ ಕೋಟದ್ವಾರವನ್ನು ಕಣ್ವನಗರಿ ಎಂದು ಸರಕಾರ ಮರು ನಾಮಕರಣ ಮಾಡಿದ್ದಾರೆ. ಇದು ಭರತನ ಜನ್ಮಸ್ಥಳ ಕಣ್ವಾಶ್ರಮವಾಗಿದೆ.ಕೊರನಗೆರೆ ಚನ್ನರಾಯನ ಪಟ್ಟಣ, ರಾಮನಗರ ಜಿಲ್ಲೆಯಲ್ಲಿ ನರಸಿಂಹ ಕ್ಷೇತ್ರವಿದೆ. ಇಲ್ಲಿ ಕಣ್ವರು ತಪಸ್ಸುಮಾಡಿರುವುದು ತಿಳಿದು ಬರುತ್ತದೆ. ಮಾಗಡಿ ಜಿಲ್ಲಾ ರಾಮನಗರದಲ್ಲಿ ರಂಗನಾಥಸ್ವಾಮಿಯ ದೇವಸ್ಥಾನದ ಎದುರಿಗೆ ಪುಷ್ಕರಣಿ ಇದೆ ಇದಕ್ಕೆ ಕಣ್ವತೀರ್ಥ ಎಂದು ಕರೆಯಲಾಗುತ್ತದೆ. ಮೈಸೂರಿನ ಹೆದ್ದಾರೆಯ ಚನ್ನರಾಯಪಟ್ಟಣದ ಹತ್ತಿರ ಕಣ್ವ ಜಲಾಶಯವಿದೆ.ರಾಜಸ್ಥಾನದ ಕೋಟಾದ ಕನ್ಸುವಾಧಾಮದಲ್ಲಿ ಕಣ್ವ ಋಷಿಗಳು ತಪ್ಪಸ್ಸನ್ನು ಆಚರಿಸಿದ್ದಾರೆ. ಉತ್ತರ ಪ್ರದೇಶದ ಗಾಜೀಪುರ ಜಿಲ್ಲೆಯಲ್ಲಿ, ಮದ್ಯಪ್ರದೇಶದ ಬದನಾವರ ತಹಸೀಲ ಜಿಲ್ಲಾ ಧಾರಾದಲ್ಲಿ, ಡೆಂಕನಿಕೋಟೈ ಕರಷ್ಣಗಿರಿ ಜಿಲ್ಲೆ ತಮಿಳುನಾಡಿನಲ್ಲಿ ಕಣ್ವರ ಅಶ್ರಮವಿದೆ. ಕಣ್ವರ ಮಕ್ಕಳಾದ ಮೇಧಾತಿದಿ ಎಂಬುವವರು ಅಸ್ತಿಸಂಧಾನ ಮಂತ್ರ ರಚಿಸಿದ್ದಾರೆ. ಅದನ್ನು ಪಠಿಸಿದರೆ. ಅಸ್ತಿದೋಷಗಳು ನಿವಾರಣೆಯಾಗುತ್ತವೆ.ಪ್ರಸ್ಕನ್ವ ಎಂಬುವವರು ಕಾಣ್ವರ ಮಗನಾಗಿದ್ದು ಇವರು ಮಂತ್ರದೃಷ್ಟಾರ ಋಷಿಯಂದು ಗುರುತಿಸಿಕೊಂಡಿದ್ದಾರೆ. ವೇದಶಾಖೆಯಲ್ಲಿಯ ಸಂಪ್ರದಾಯಗಳ ಭಿನ್ನತೆ,  ಕಣ್ವ ಬ್ರಾಹ್ಮಣರ ಮಹತ್ವ ಮುಂತಾದ ಅನೇಕ ವಿಚಾರಗಳು ಇಲ್ಲಿ ದಾಖಲಾಗಿವೆ.

           ಈ ಕೃತಿಯನ್ನು ಪ್ರವೇಶ ಮಾಡಲಗಿ ಸನಾತನ ಸಂಸ್ಕರತಿಯ ದರ್ಶನವಾಗುತ್ತಾ ಹೋಗುತ್ತದೆ, ಋಷಿಗಳು ಸಾಧುಸಂತರು ಸಾಧನೆ ಮಾಡಿದ ವಿಚಾರ ಅವುಗಳ ಮಹತ್ವ , ಅವುಗಳ ಇಂದಿನ ದಿನದ ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ, ಒಟ್ಟಿನಲ್ಲಿ ಈ ಕಾಲದ ಹೊಸ ಮದರಿಯ ಗ್ರಂಥÀವಾಗಿದೆ,

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.