ಹೆನ್ನೆರಂಗವಿಠಲದಾಸರು

ಭಾರತದ  ಪ್ರಮುಖ ಸಂಸ್ಥಾನಗಳಲ್ಲಿ ಸುರುಪುರದ ಸಂಸ್ಥಾನವೂ ಒಂದು. ಈ ಸಂಸ್ಥಾನವು ನೀಡಿದ ಸಾಂಸ್ಕೃತಿಕ ಕೊಡುಗೆ ಅನನ್ಯವಾಗಿದೆ. ಅನೇಕ ಮಠಾಧೀಶರು ಇಲ್ಲಿಗೆ ಆಗಮಿಸಿ ಪೂಜಾದಿ ಕೈಂಕರ್ಯವನ್ನು ಮಾಡಿ ಸನ್ಮಾನಿತರಾಗಿದ್ದಾರೆ. ಹರಿದಾಸರು, ಕಲಾವಿದರು ಸಂಸ್ಥಾನದ ಆಶ್ರಯವನ್ನು ಪಡೆದುಕೊಂಡಿದ್ದಾರೆ. ಅಂತಹ ಹರಿದಾಸರಲ್ಲಿ ಹೆನ್ನೆರಂಗವಿಠಲದಾಸರೂ ಪ್ರಮುಖರಾಗಿದ್ದಾರೆ.

        ಇವರನ್ನು ಹೊನ್ನಪ್ಪದಾಸರು, ಹೆನ್ನೆರಂಗದಾಸ, ಹೆನ್ನೆರಂಗವಿಠಲದಾಸ ಎಂದು ಮುಂತಾಗಿ ಕರಿಯುವ ರೂಡಿಯಿದೆ. ಇವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವಜ್ರಕರೂರು ಮಂಡಲದ ಗಡೇಹೂತೂರು ಎಂಬ ಗ್ರಾಮದಲ್ಲಿ ಜನಿಸಿದರು. ಪೆನ್ನಾಅಹೋಬಿಲ ಎಂಬುದು ಪ್ರಸಿದ್ಧ ನರಸಿಂಹ ಕ್ಷೇತ್ರವಾಗಿದೆ. ಈ ಕ್ಷೇತ್ರದ ಪ್ರಭಾವ ಹೆನ್ನೆರಂಗದಾಸರ ಮೇಲಾಗಿದೆ. ಇವರು ನರಸಿಂಹದೇವರ ಪರಮ ಭಕ್ತರು. ಈ ಕಾರಣದಿಂದಾಗಿ “ಹೆನ್ನೆರಂಗವಿಠಲ,ಹೆನ್ನೆಪುರವಾಸ’’ ಎಂಬ ಅಂಕಿತದಿAದ ಕೀರ್ತನೆಗಳನ್ನು ಶತಕ ಮತ್ತು ಸೀಸ ಪದ್ಯಗಳನ್ನು ರಚಿಸಿದ್ದಾರೆ. ಇವರ ಕೀರ್ತನ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕರ್ನಾಟಕ ಸರಕಾರ ಬೆಂಗಳೂರು ಇವರು ಸಮಗ್ರದಾಸ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟಿಸಿದ್ದಾರೆ.ಸಂಪಾದಕರು ಡಾ,ಬಸವರಾಜ ಸಬರದ ಮತ್ತು ಡಾ.ಜಯಲಕ್ಷಿö್ಮಮಂಗಳಮೂರ್ತಿ.ಸA.೨೯ ಭಾಗ-೧ ,ಭಾಗ -೨.

         ಇವರ ವೈಯಕ್ತಿಕ ಜೀವನದ ವಿಚಾರಗಳು ಮತ್ತು ಅಂಕಿತ ಪ್ರದಾನದ ವಿಚಾರಗಳು ತಿಳಿದು ಬಂದಿಲ್ಲ. ಅದರೂ ಇವರು ಕೆಲಕಾಲ ಗಡೇಹೂತೂರಿನಿಂದ ಕಡಮಲಕುಂಟ ಗ್ರಾಮಕ್ಕೆ ಬಂದು ನೆಲಸಿದ್ದರು. ಆಗ ಸುರುಪುರದ ದೊರೆ ವಾಸುದೇವನಾಯಕರ ಆಗ್ರಹದ ಮೇರೆಗೆ ಸುರಪುರದ ಮುದೇನೂರಿಗೆ ಆಗಮಿಸಿದರು.  ಈ ಗ್ರಾಮದಲ್ಲಿ ಸ್ವಯಂಭೂ ರುಕ್ಮಿಣಿ ಪಾಂಡುರAಗಸ್ವಾಮಿ, ವೇಣುಗೋಪಾಲಸ್ವಾಮಿ, ನರಸಿಂಹಸ್ವಾಮಿಯ ನಿತ್ಯಪೂಜೆಯನ್ನು ನೆರವೇರಿಸುತ್ತಾ ಅಲ್ಲಿಯೇ ಕೆಲಕಾಲ ಉಳಿದುಕೊಂಡರೆAದು ತಿಳಿದು ಬರುತ್ತದೆ. ಇದರಿಂದ ಇವರ ಕಾಲವನ್ನು ಸು. ೧೭ನೆಯ ಶತಮಾನ ಎಂದು ಗುರುತಿಸಲಾಗಿದೆ.

       ಎಲ್ಲಾ ಹರಿದಾಸರಂತೆ ಇವರೂ ಹರಿಸರ್ವೋತ್ತಮತ್ವವನ್ನು ಸಾರಿದರು. ಕೀರ್ತನೆಗಳಲ್ಲಿ ವೇದವೇದಾಂತದ ಪರಿಮಳ ಭರಿತ ಕುಸುಮಗಳನ್ನಾಗಿ ರೂಪಿಸಿ  ತಮ್ಮ ಆರಾಧ್ಯದೈವ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಅಕ್ಷರಮಾಲೆಯನ್ನಾಗಿ ಮಾಡಿ ಸಮರ್ಪಿಸಿದ್ದಾರೆ.ಇವರು ರಚಿಸಿದ ಕೀರ್ತನೆಗಳ ಕೆಲವನ್ನು ಇಲ್ಲಿ ಉದಾಹರಿಸುತ್ತೇನೆ. ಇವರಿಗೆ “ಪೆನ್ನಾಅಹೋಬಿಲ ಅನ್ನಮಯ್ಯ’’ ಎಂದು ಭಕ್ತರು ಕರೆಯುತ್ತಾರೆ. ನರಸಿಂಹಸ್ವಾಮಿಯ ಕುರಿತು “ನರಸಿಂಹಾ ನರಸಿಂಹಾ ದರಣಿಧರ ಪರಮ ಕೃಪಾಕರ’ ಎಂದು ನರಸಿಂಹದೇವರ ಭೀಕರ ರೂಪಾ ಮತ್ತು ದುಷ್ಟರ ಸಂಹಾರ ಭಕ್ತರಿಗೆ ಕರುಣಾಕರ ಎಂದು ಬಣ್ಣಿಸುತ್ತಾರೆ. ವಿಷ್ಣುವಿನ ಕುರಿತು“ ವಿಷ್ಣೋ ಭೋ ಸಂಸೇವಿತ ಜಿಷ್ಣೋ ಉಷ್ಣಾಂಶಾಯುತ ಪುರುರೋಚಿಷ್ಣೋ’ ಎಂದು ಸ್ತುತಿಸಿದ್ದಾರೆ. ಇದಲ್ಲದೆ ಮುದೇನೂರು ವೇಣುಗೋಪಾಲಸ್ವಾಮಿ ಕುರಿತು “ ಇದು ರಕ್ಷಿಸುವಂಥಾ ಕಾಲಾ, ಚಿಕ್ಕ ಮುದೇನೂರಗೋಪಾಲ ಮುನಿಜನಲೋಲಾ’’, “ಪಾಲಿಸೋಗೋಪಾಲ ಆಲಿಸೋವೇಣುಗೋಪಾಲ ಮೊರೆಲಾಲಿಸೋ ಭಕ್ತವತ್ಸಲಾ ರುಕ್ಮಿಣಿಲೋಲಾ ಕರುಣಾಲೀಲಾ ಸದ್ಗುಣಶೀಲ” ಎಂದು ಸ್ತುತಿಸಿದ್ದಾರೆ. ರುಕ್ಮಿಣಿಪಾಂಡುರAಗನ ಕುರಿತು ಸ್ತುತಿಸಿದ್ದರೆ.ಶ್ರೀರಾಮಚಂದ್ರನ ಕುರಿತು“ ಜಗನ್ನಿವಾÀಸ  ಜಾನಕಿರಮಣ, ಜಯ ರಘುರಾಮ ಜಾನಕಿ ಪ್ರೇಮ ಭಯ ಭವ ಪರಿಹಾರ ಪಾವನ ನಾಮ’’, “ದಶರಥರಾಮ ಹರೇ ಸೀತಾಪತೆ ದಶರಥರಾಮ ಸುಧಾಕರವದನ ಪರಶುರಾಮ ಬಾಹುಪರಾಕ್ರಮ ಜಿತಶ್ರೀ,`’ಸ “ರಾಮರಾಮರಾಮ ಹರೇ ರಘು’’ , “ಶ್ರೀರಾಮ ಜಯರಾಮ ಶ್ರೀರಾಮ ರಾಮ ಕಾರುಣ್ಯನಿದಿ ರಾಮ ಕೌಸಲ್ಯರಾಮ’’ ಎಂಬ ಕೀರ್ತನೆ ೩೫ ನುಡಿಗಳ ದೀರ್ಘ ಕೃತಿಯಾಗಿದೆ. ಇದರಲ್ಲಿ ರಾಮಾಯಣದ ಕಥೆಯೊಂದಿಗೆ ಶ್ರೀರಾಮನ ನಾಮದ ಮಹಿಮೆಯನ್ನು ಸಾರಲಾಗಿದೆ. ರಾಮನ ಸ್ವಭಾವ, ರೂಪ, ಸೇತುಬಂದದ ಪ್ರಸಂಗ,ಅಸುರರ ಸಂಹಾರದ ಪ್ರಸಂಗವನ್ನು ಕೊಂಡಾಡಿದ್ದಾರೆ. ಶ್ರೀಕೃಷ್ಣನ ಕುರಿತು“ದೇವಕಿನಂದನ ಕೃಷ್ಣಾ ದೇವಕಿನಂದನ ಧೇನುಕಭಂಜನ ಭಾವಜಪಿತ ಶ್ರೀಕೃಷ್ಣಾ,`’ “ಬಾರೋ ರಂಗಯ್ಯ, ಬಾರೋ ಕೃಷ್ಣಯ್ಯ ಬಾರೋ ರಂಗ ನವನೀರದ ನಿಭಾಂಗ’’, “ರಂಗಬAದಾನೋ ಮೋಹನಾಂಗಬAದಾನೋ ರಂಗಬAದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ”, “ಬಂದನು ಕೃಷ್ಣ ಗೋವಿಂದ ಮುಕುಂದ ಬಂದನು ಕೃಷ್ಣ ಭವಬಂಧನ ಪರಿಹಾರ,’ ಎಂದು ಬೇರೆ ಬೇರೆ ಕೀರ್ತನೆಗಳಲ್ಲಿ ಶ್ರೀಕೃಷ್ಣನ ಲೀಲೆಗಳು ಮತ್ತು ಭಕ್ತರ ಹೃತ್ಕಮಲವಾಸಿ ಕೃಷ್ಣನನ್ನು ಬಗೆಬಗೆಯಾಗಿ ಬಣ್ಣಿಸಿದ್ದಾರೆ. ತಿರುಪತಿಯ ವೆಂಕಟರಮಣನ ಕುರಿತಾಗಿ `ಶೇಷಗಿರಿಯವಾಸ ಶ್ರೀವೆಂಕಟೇಶಾ ಶಾಸ್ವತ ಜಗದೀಶ,……ಹರಿನಾರದವರದ ಅಗಣಿತ ಮಹಿಮನ ಆನಂದನಿಲಯನ,’’ ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಈ ಕೀರ್ತನೆಯಲ್ಲಿ ತಿರುಪತಿ ವೆಂಕಟೇಶನ ಮಹಿಮೆ ಮತ್ತು ದಶಾವತಾರದ ವರ್ಣನೆಯನ್ನು ಕಾಣಬಹುದು. ಲಕ್ಷಿö್ಮ,ಹನುಮಂತ ದೇವರು,ಸರಸ್ವತಿ,ಭಾರತಿ,ಗರುಡ,ರುದ್ರ,ಪಾರ್ವತಿ,ಗಣಪತಿಯ  ಪರಿವಾರ ದೇವತೆಗಳ ಕುರಿತಾದ ಕೀರ್ತನೆಗಳನ್ನು ರಚಸಿದ್ದಾರೆ.

ಇವರ ಕೀರ್ತನೆಗಳಲ್ಲಿ ಆತ್ಮನಿವೇದನೆಯ ಭಾವಗಳು ಮೂಡಿಬಂದಿವೆ. “ಹೀಗೆ ನಿರ್ದಯೆ ಮಾಡುವರೇ ಶ್ರೀಮನೃಹರೆ’’, “ಲೋಕನಾಯಕಾ ಭಕ್ತರೊಡೆಯನೆಂಬ ಬಿರುದು ಬೇಕಿಲ್ಲವೇನು ನಿನಗೆ,’` “ಸಾಕಲಾರದಿರೆ ನನ್ನ ಯಾಕೆ ಪುಟ್ಟಿಸಿದೆಯೋ ಹರಿಯೆ,`’ “ಸಂದುಹೋಯಿತೀ ಕಾಲವು ವ್ಯರ್ಥ ಸ್ಮರಿಸದೆ ಶ್ರೀಹರಿಯ ಒಂದುಬಾರಿ ಗೋವಿಂದಾ ಎನದೆ ಮಂದನಾಗಿ ಅತಿಮಾತಿಗೆ ಒಳಗಾಗಿ’’ ಮುಂತಾದ ಅನೇಕ ಕೀರ್ತನೆಗಳನ್ನು ನೋಡಬಹುದು.

       ಇವರ ಕೀರ್ತನೆಗಳಲ್ಲಿ ಲೋಕನೀತಿಯನ್ನು ಕಾಣುತ್ತೇವೆ.“ಅನವರತ ಜಿವ್ಹದಿ ಆದಿನಾರಾಯಣಾ ಕೃಷ್ಣಾ ಎನಬಾರದೆ” “ಅನುದಿನ ಮನದಲ್ಲಿ ನೆನೆಯೋ ಮನುಜಾ,ಎಲೆಎಲೆ ನೆನೆಯೋ ನೆನೆಯದೆ ಇರಬೇಡಾ ಎಂದಿಗು ಶ್ರೀಹರಿಯ;“ “ಚಿತ್ತದೊಳಗೆ ಹರಿ ಚಿಂತನೆ ಮಾಡಿ ಚಿಂತಿಗಳನು ಬಿಡ್ವುದುತ್ತಮವು”, “ನಂಬಿಗಿಟ್ಟಸAಸಾರ ಇದು ನಂಬಿ ಹಂಬಲಿಸದಿರು ಪೂರಾ”, ಎಂದು ಸಂಸಾರದ ನಿಸ್ಸಾರವನ್ನು  ತಿಳಿಸುತ್ತಾರೆ.

        ಒಂದುನೂರಾ ಇಪ್ಪತ್ತೇಳು ನುಡಿಗಳ ಶತಕವನ್ನು ರಚಿಸಿದ್ದಾರೆ. ಪ್ರತಿಯೊಂದು ನುಡಿಗೂ ಹೆನ್ನೆರಂಗ ಎಂಬ ಅಂಕಿತ ಬರುತ್ತದೆ.  ಈ ಶತಕವನ್ನು ನಾಲ್ಕು ಭಾಗವಾಗಿ ವಿಂಗಡಿಸಬಹುದು.ಆರAಬದಲ್ಲಿ ದೇವರ ಸ್ತುತಿಯನ್ನು ಮಾಡುತ್ತಾರೆ. ಎರಡನೆಯದಾಗಿ ಆತ್ಮನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಮೂರನೆಯದಾಗಿ ಬಗವಂತನ ಮಹಿಮೆಗಳನ್ನು ಬಣ್ಣಿಸುತ್ತಾರೆ. ಕೊನೆಯದಾಗಿ ಫಲಶ್ರುತಿಯನ್ನು ಹೇಳುತ್ತಾರೆ. ಈ ಶತಕದಲ್ಲಿ ದಾಸರ ಕವಿತ್ವವನ್ನು ಮತ್ತು ಭಕ್ತಿಯ ಪರಾಕಾಷ್ಟೆಯನ್ನು ಕಾಣುತ್ತೇವೆ.

      ಇವರ ಕುರಿತಾದ ಅನೇಕ ಮಹಿಮೆಗಳು ಜನರ ಮನದಾಳದಲ್ಲಿವೆ. ಗಡೇಹೂತೂರಿನಿಂದ ಪೆನ್ನಾಅಹೋಬಿಲಕ್ಕೆ ಸುರಂಗಮಾರ್ಗವಾಗಿ ಹೋಗಿ ನರಸಿಂಹದೇವರ ನಿತ್ಯ ದರುಶನ ಪಡೆಯುತ್ತಿದ್ದರಂತೆ. ಇವರ ಪ್ರಸಿದ್ಧಿಯನ್ನು ಕಂಡ ಕೆಲ ಕುಹಕಿಗಳು ಗೋ ಹತ್ಯಾ ಆರೋಪಣೆ ಮಾಡಿದರಂತೆ.ಆಗ ದಾಸರು ದ್ವಾದಶಸ್ತೋತ್ರಪಠಸಿ ಹಸುವನ್ನು ಬದುಕಿಸಿದರಂತೆ. ಆದಿಶೇ಼ಷನೊಂದಿಗೆ ಮಾತನಾಡುತ್ತಿದ್ದರಂತೆ. ಆದಿಶೇ಼ಷ ಇವರ ಸಹೋದರನೆಂದು ಭಕ್ತರ ಅಚಲವಾದ ನಂಬಿಕೆಯಾಗಿದೆ. ಇದರಿಂದ ಇವರಿಗೆ ಭೂಮಿ ದೊರೆಯಿತಂತೆ. ಅದಕ್ಕೆ ಆ ಪ್ರದೇಶವನ್ನು ನಾಗಪ್ಪಮಾನ್ಯಂ ಎಂದು ಕರೆಯುತ್ತಾರೆ. ಈ ವಿಷಯ ಸರಕಾರಿ ಕಡತದಲ್ಲಿ ದಾಖಲಾಗಿದೆಯಂತೆ.

      ಇವರ ಆರಾಧನೆಯನ್ನು ಇವರ ಹೆಣ್ಣುಮಕ್ಕಳ ವಂಶಸ್ಥರಾದ ಶ್ರೀಕೊಪ್ಪರೇಶಾಚಾರ,(ವೇಣು) ಆದೋನಿ ಸಾಕಿನ್ ಹೈದರಾಬಾದ ಅವರು ಬಂಧು ಬಾಂಧವರೊAದಿಗೆ ಸುಮಾರು ೨೫ ವರ್ಷಗಳಿಂದ ವಿಜೃಂಭಣೆಯಿAದ ಮಾಘ ಶುದ್ಧ ಸಪ್ತಮಿ ,ಅಷ್ಟಮಿ ಮತ್ತು ನವಮಿಯಂದು   ಆಚರಿಸುತ್ತಿದ್ದಾರೆ. ಹವನ ಹೋಮಾದಿಗಳು,ಪ್ರವಚನ,ಭಜನೆ,ದಾಸವಾಣಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ.  ಇವರು ಬಾಲ್ಯದಲ್ಲಿದ್ದಾಗ ಇವರ ತಂದೆಯವರು ದಾಸರ ಕಟ್ಟೆಗೆ ಕರೆದುಕೊಂಡು ಹೋಗಿ ನೈವೇದ್ಯಮಾಡಿ ಕೊಂಡು ಬರುತ್ತಿದ್ದರಂತೆ. ಒಮ್ಮೆ ಊರಿನ ಜನ ನೀವು ಭಕ್ತಿಯಿಂದ ದಾಸರ ಕೈಂಕರ್ಯ ಮಾಡುತ್ತೀರಿ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರಿ ಎಂದು ಸೂಚಿಸಿದರಂತೆ.ಅದರAತೆ ಊರ ಜನರ ಸಹಕಾರದಿಂದ ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ.

        ದಾಸರ ಕಟ್ಟೆ ಇರುವುದು ನಿರ್ಜನ ಪ್ರದೇಶದಲ್ಲಿ. ಊರಿನಿಂದ ದೂರವಿದೆ. ಗುಂತಕಲ್ಲ ಷ್ಟೇಷನ್ ನಿಂದ ಬಸ್ ಅಥವಾ ಖಾಸಗಿವಾಹನದ ಮುಖಾಂತರ ಈ ಸ್ಥಳಕ್ಕೆ ಹೋಗಬಹುದಾಗಿದೆ. ಆರಾಧನೆಯ ಸಮಯದಲ್ಲಿ ವಸತಿ ವ್ಯವಸ್ಥೆ ಮಾಡಿರುತ್ತಾರೆ. ಇವರ ಆರಾಧನೆ ಆರಂಭವಾಗಿನಿAದ ಪ್ರತಿವರ್ಷ ಹೆಚ್ಚಿನ  ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.  ಮುಂದುವರೆದು ಹೆನ್ನೆರಂಗವಿಠಲದಾಸರ ವೈಯಕ್ತಿಕ ಜೀವನದ ಕುರಿತಾಗಿ ವಿಷಯ ಸಂಗ್ರಹಿಸಲು ಕ್ಷೇತ್ರಕಾರ್ಯವನ್ನೂ ಮಾಡುತ್ತಿದ್ದಾರೆ. ಹೆನ್ನೆರಂಗದಾಸರು ಪೂಜಿಸಿದ ಶ್ರೀದೇವಿ- ಭೂದೇವಿ ಸಹಿತ ವೆಂಕಟರಮಣ ,ವೇಣುಗೋಪಾಲಸ್ವಾಮಿ, ಮತ್ತು ದಾಸರ ಗೋಪಾಳಪುಟ್ಟಿ ಕೊಪ್ಪರೇಶಾಚಾರ ಅವರ ಸೊದರಮಾವನ ಮನೆಯಲ್ಲಿ ನೋಡಲು ಸಿಗುತ್ತವೆ. ಇವರು ರಚಿಸಿದ ಸಾಹಿತ್ಯದ ಕುರಿತಾಗಿ, ಇವರ ವೈಯಕ್ತಿಕ ವಿಚಾರವಾಗಿ ಶೋಧನೆ ನಡೆಯಬೇಕಿದೆ.

ಡಾ.ಶೀಲಾದಾಸ

ರಾಯಚೂರು.   

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.