ಜಿ.ಕೃಷ್ಣರಾವ

                                 “ ಬದುಕಬೇಕು ಬೇಸಿಗೆ ಬಿಸಿಲಿನ ಝಳಕ್ಕುರಿದು               ಧಾತು ಒಳಗಿದನೆಲ್ಲ ಅಗಿದು ಹೊರವೊಗೆದು               ಸಿಪ್ಪೆಮಾಡಿ, ಕಸ ಕಡ್ಡಿಗಿಡ್ಡಿ ಪುಡಿಮಾಡಿ               ಬೆತ್ತಲೆಗೊಳಿಸಿದ ಆಕಾಶಕ್ಕೆ ಬೋರಲಾಗಿ               ಬೇವಿನ ಮರದಿಂದ ಉದರುವ ಹನಿಗಳಂತೆ               ಗಳಿಗೆಗಳ ಗುಣಿಸುತ್ತ ಬದುಕಬೇಕು’’ (ಬದುಕಬೇಕು)            ಎಂದು ಹೈದ್ರಾಬಾದ ಕರ್ನಾಟಕದ ಪರಿಸರದ ವಸ್ತು  ನಿಷ್ಠ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ ಕವಿ ಜಿ.ಕೃಷ್ಣರಾಯರು.                        ಆಧುನಿಕ ಕಾವ್ಯದ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕದ ರಾಯಚೂರಿನ  ನೆಲದಲ್ಲಿ ಅನೇಕ ಸೃಜನಶೀಲ ಕನ್ನಡ ಕವಿಗಳು ಕಾವ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂಥಹ ಮಹನೀಯರಲ್ಲಿ. ಜಿ.ಕೃಷ್ಣರಾಯರೂ ಒಬ್ಬರು. ಇವರು ಮೂಲತಃ ರಾಯಚೂರು ತಾಲ್ಲೂಕಿನ ಗಧಾರ ಗ್ರಾಮದವರು. ಕ್ರಿ.ಶ.೧೯೩೩ರಲ್ಲಿ ಜನಿಸಿದರು. ಇವರ ತಂದೆಯವರು.ಜಿ. ನರಸಿಂಗರಾಯರು.ತಾಯಿ ಶ್ರೀಮತಿ ತುಂಗಾಬಾಯಿಯವರು. ಜಿ.ಕೊಪ್ರೇ಼ಶರಾವ ಮತ್ತು ಜಿ.ಬಿಂದೂಮಾಧವ ರಾವ ಇವರ ಸಹೋದರರು.      ಇವರು ತಮ್ಮ ಪ್ರಾಥಮಿಕ, ಪ್ರೌಢಶಿಕ್ಷಣವನ್ನು ರಾಯಚೂರಿನ ಟ್ಯಾಗೂರು ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿ ಬಿ.ಎ ಮತ್ತು ಎಮ್.ಎ. ಕನ್ನಡ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪೂರೈಸಿ ಸರಕಾರಿ ಶಾಲೆಯಲ್ಲಿ ಹದಿನೈದು ವರ್ಷ ಶಿಕ್ಷಕರಾಗಿ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುಂದೆ ತಾರಾನಾಥ ಶಿಕ್ಷಣ ಸಂಸ್ಥೆಯ ಲಕ್ಷಿö್ಮÃವೆಂಕಟೇಶದೇಸಾಯಿ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಕ್ರಿಶ.೧೯೯೧ ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕ್ರಿ ಶ. ೧೯೯೫ ನವೆಂಬರ ತಿಂಗಳಲ್ಲಿ ದೈವಾಧೀನರಾಗಿದ್ದಾರೆ.                               ಬಾಲ್ಯದಿಂದಲೂ ಅಧ್ಯಯನದಲ್ಲಿ ಅಸಕ್ತಿ ಹೊಂದಿದ ಇವರು ತಮ್ಮ ಅದ್ಯಯನದ ಕಾಲದಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪ್ರಶಸ್ತಿ-ಪದಕಗಳನ್ನು ಪಡೆದು ಕೊಂಡಿದ್ದಾರೆ. ಇವರ ಪತ್ನಿ ಶ್ರೀಮತಿ ಗೀತಾಬಾಯಿ ಮಕ್ಕಳಾದ ಸುರೇಖಾ, ವಿಜಯಾ, ಶಾರದಾ, ಅಶ್ವತ್ಥನಾರಾಯಣ ಮತ್ತು ಕರುಣಾ ಎಂಬಾ ಐದು ಮಕ್ಕಳು. ಮೊಮ್ಮಕ್ಕಳು ಅಳಿಯಂದಿರು,ಸೊಸೆ ಒಟ್ಟಿನಲ್ಲಿ ಸುಂದರ ಸುಸಂಸ್ಕೃತ ಕುಟುಂಬ ಇವರದು. ಸ್ವವಭಾವದಲ್ಲಿ ಕಟ್ಟುನಿಟ್ಟು. ಶಿಸ್ತಿನ ಸಿಪಾಯಿಯಾಗಿದ್ದರು.             ಇವರು ಸಾಹಿತ್ಯ ರಚ£ಗಿಂತ ಸಾಹಿತ್ಯಕ ಚಟುವಟಿಕೆಯನ್ನು ರೂಪಿಸುವಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರೆ. ಆದರೂ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯದ ಅವಲೋಕನ ಮಾಡೋಣ. ಅವರ ಮೊದಲ ಕವನ ಸಂಕಲನ `ಕೇದಾರ’. ಸಧ್ಯಕ್ಕೆ ಈ ಕೃತಿಯು ಅಧ್ಯಯನಕ್ಕೆ  ಲಭ್ಯವಿಲ್ಲ.          ರಾಯಚೂರು ಜಿಲ್ಲೆ ಹರಿದಾಸರ ತವರೂರು. ದ್ವಿತೀಯ ಘಟ್ಟದ ದಾಸ ಸಾಹಿತ್ಯಕ್ಕೆ ಪ್ರೇರಣೆ ನೀಡಿದವರೆಂದರೆ ಮಂತ್ರಾಲಯದ ಶ್ರೀರಾಘವೇಂದ್ರತೀರ್ಥರು. ಇವರ ಕುರಿತಾಗಿ “ಮಂತ್ರಾಲಯ ಮಹಿಮೆ’’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯೂ ಓದಿಗೆ ಲಭ್ಯವಿಲ್ಲ.                     ಇವರ ಮತ್ತೊಂದು ಕೃತಿ `ಕಾದ್ಹಂಚು ಮೇಲಿನ ನೀರು’ ಇದರಲ್ಲಿಯ ಕವನಗಳು ಕನ್ನಡಪ್ರಭಾ, ಪ್ರತೀಕ, ಸಾಕ್ಷಿ, ಸಂಕ್ರಮಣ, ಕರ್ನಾಟಕ ಭಾರತಿ, ಆಂದೋಲನದAತಹ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವುಗಳ ಸಂಗ್ರಹವೇ `ಕಾದ್ಹಂಚು ಮೇಲಿನ ನೀರು’ ಈ ಕವನ ಸಂಕಲನ. ಇದರಲ್ಲಿ ಒಟ್ಟು ಇಪ್ಪತ್ತಾರು ಕವನಗಳಿವೆ. ಈ ಕವನ ಸಂಕಲನವು ಪಿ.ಬಸಣ್ಣ ಅವರ ಜನತಾ ಪ್ರಿಂಟರಿ ನಲ್ಲಿ ೧೯೭೩ ರಲ್ಲಿ ಸತ್ಯಸ್ನೇಹ ಪ್ರಕಾಶನದಿಂದ ಪ್ರಕಟÀವಾಗಿದೆ.        ಇವರು ತಮ್ಮ ಕವನಗಳಲ್ಲಿ ಸಮಾಜದಲ್ಲಿಯ ಗೋಮುಖ ವ್ಯಾಘ್ರತನವನ್ನು ಹಿಡಿದಿಟ್ಟಿದ್ದಾರೆ. ಸಮಾಜವನ್ನು ಮುನ್ನಡೆಸುವ ನಾಯಕರು, ಬಂಧುಗಳು, ಸ್ನೇಹಿತರು ಮಾಡುವ ಮೋಸಕ್ಕೆ ಅಮಾಯಕರು ಹೇಗೆ ಬಲಿಯಾಗುತ್ತಿದ್ದಾರೆ ಎಂಬ ಕಟು ಸತ್ಯವನ್ನು `ಇನ್ನೆಲ್ಲಿ ಮಲ್ಹಾರ’ ಎಂಬ ಕವನದಲ್ಲಿ ಹಿಡಿದಿಟ್ಟಿದ್ದಾರೆ.      `ನಾಯಕರ ಕಣ್ಣೋಳಗೆ ಕುರ್ಚಿ, ದೇವರ ಮುಖದ ಮೇಲೆ ಪ್ರಶ್ನೆ       ಅಣ್ಣತಮ್ಮೊಂದಿರೊಳು ಶಕುನಿ, ಗೆಳೆಯರೊಳು ಬ್ರೂಟಸ್       ಬಾಜಾರದೊಳು ಕ್ಲಿಯೋ ಪಾತ್ರಾ,ಸಾಮಾಜಿಕರೊಳು ಮ್ಯಾಕ್ ಬೆತ್ತರನ್ನು’’  ನೆಲಮಾಳಿಗೆಯಲೋ, ಉಪ್ಪರಿಗೆಯಲೋ, ಗೀತೆ ಓದಿ ವಿಸ್ಕಿಕುಡಿಯುವವರ ಕುರಿತು ಮಾರ್ಮಿಕವಾಗಿ ತಿಳಿಸುತ್ತಾರೆ. ಆದರ್ಶದ ಬೆನ್ನು ಹತ್ತಿ ಆದರ್ಶವಾಗಿ ಇರಲು ಆಗದ ಜನರ ದೊಂಬರಾಟವನ್ನು ಚಿತ್ರಿಸಿದ್ದಾರೆ.        `ದೇವರಿಗೆ’ ಎಂಬ ಕವನವು ರಚನಾತ್ಮಕವಾಗಿ ವಿಶೇಷವಾಗಿದೆ. (ಈ ಕವನವು ಅಕ್ಕಮಹಾದೇವಿಯ `ಭಿಕ್ಷೆ ಬೇಡುವಂತೆ ಮಾಡು, ಭಿಕ್ಷೆ ನಾಯಿತಿಂಬುವAತೆ ಮಾಡು ಎಂಬ ವಚನವನ್ನು ನೆನಪಿಸುತ್ತದೆ.) ತನ್ನನ್ನು ಬದುಕಿನ ಸಮಸ್ಯಯ ಸಮುದ್ರದೊಳು ಒದ್ದಾಡುವಂತೆ ಮಾಡಲು ವಿನಂತಿಸಿಕೊಳ್ಳುತ್ತಾರೆ. ಕಷ್ಟಗಳು ಬರಲಿ ಕಷ್ಟಗಳನ್ನು ಗೆಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳುವ ಆಶಯ ಕವಿಯದು.         `ದೇವರೆ ನಿನ್ನ ಕೃಪೆಯಿರಲಿ        ಗಳಿಗೆ ಗಳಿಗೆಗೂ ಬೆಕ್ಕಿನ ಕೈಯೊಳಗಿರುವಿಲಿಯಂತೆ        ವಿಲಿವಿಲಿ ಒದ್ದಾಡಿಸುತಿರು’’ ಸತ್ಯವನು ಮರೆಮಾಚದಂತೆ ಮಾಡು, ಕ್ಷಣಕ್ಷಣಕ್ಕೂ ತ್ರಾಸು ಪಡುವಂತೆ ಮಾಡು. ಇರುಳಲಿ ಕಣ್ಣಿಗೆ ನಿದ್ದೆ ಬರದಂತೆ ಮಾಡು, ದೇವರೆ ನೀನು ನನ್ನವನಾಗ ಗೊಡಬೇಡ, ಎಂದು ಹೇಳುವಲ್ಲಿ ಎಲ್ಲವನ್ನು ಕಾಣದ ದೇವರ ಮೇಲೆ ಹಾಕಿ ಬಚಾವ ಆಗುವ ಮೈಗಳ್ಳರನ್ನೂ ಚಿತ್ರಿಸಿದ್ದಾರೆ. ಇನ್ನೂ ಮುಂದುವರೆದು ಮನದೊಳಗೆ ಅನೇಕ ಕಾಮನೆಗಳಿದ್ದರೂ ಸಮಾಜದ ಎದುರಿಗೆ ಸಾಚಾತನದ ಸೋಗು ಹಾಕುವ ಜನರ ಕುರಿತು ಬೆಳಕು ಚಲ್ಲುತ್ತಾರೆ.“ಒಳಗಿರುವ ರಾವಣತ್ವ ಭಾವನೆಗಳನು ಹರಿವ ನೀರಿಗೆಸೆಯದೆ ರೀಮಿನೊಳಗಿನ ಹಾಳೆಯಂತೆ ಮನದವಸ್ಥೆಯನು ಕಾಪಾಡಿ ಅನಿಸಿಕೆಯ ಅಲಾರಾಮಿಗೆ ಓಗೊಟ್ಟು ಸುಮ್ಮನಾದೆ. ಸಂಭಾವಿತನದ ಹೆಸರು ಪಡೆದು ಸಾಚಾತನವ ಮೆರೆದೆ ಸಮಾಜದ ಲಕ್ಷö್ಮಣಗೆರೆ ದಾಟದೆ.’’ ಎಂದು ಹೇಳುತ್ತಾ ಸ್ವಾರ್ಥಿಗಳ ಮುಖವಾಡಗಳನ್ನು ಕಳಚುತ್ತಾರೆ. ಕಲುಶಿತಗೊಂಡ ಸಮಾಜಕ್ಕೆ ರೂಪಕವಾಗಿ ಬಾವಿಯನ್ನು ನೀಡಿದ್ದಾರೆ. ಈ ಹಿಂದೆ ಬಾವಿ ನೀರು ಸ್ಪಟಿಕದಂತೆ ಶುದ್ಧವಾಗಿದ್ದವು. ಅದರೆ ಈಗ ಆ ನೀರು ಕಲುಷಿತ ಗೊಂಡಿವೆ ಎಂದು ಬಸವಣ್ಣನಂತಹ ಸಮಾಜ ಸುಧಾರಕರು ಬಂದರೂ ಸಮಾಜ ಸುಧಾರಣೆ ಯಾಗಿಲ್ಲವೆಂದು ಖೇದದಿಂದ ನುಡಿಯುತ್ತಾರೆ. ಹೀಗೆ ಕವನ ಸಂಕಲನದ ಒಂದೊAದು ಕವನಗಳು ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಶ್ರಮಿಸುತ್ತವೆ       ಎಪ್ಪತ್ತರ ದಶಕ ನವ್ಯ ಧೊರಣೆಯ ಉತ್ತುಂಗದ ಕಾಲ. ಅಡಿಗರು ಗೊಕಾಕರು ಪಾಶ್ಚಾತ್ಯರ ನವ್ಯ ಭಾಷೆಯ, ಘಮಲನ್ನು ಕನ್ನಡ ಸಾಹಿತ್ಯಕ್ಕೆ, ಕನ್ನಡ ಕವಿಗಳಿಗೆ ಲೇಪಿಸಿ ಹೊಸ ತನವನ್ನು ಮೂಡಿಸಿದ್ದರು. ಇದಕ್ಕೆ ಜಿ.ಕೃಷ್ಣರಾಯರು ಹೊರತಾಗಿಲ್ಲ. ನವ್ಯದ ತಂತ್ರವನ್ನು, ಭಾಷಾ ಪ್ರಯೋಗವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. `ಕೊಶಿಸ್ ಮಾಡತಿನಿ’ ಎಂಬ ಕವನದಲ್ಲಿ              ’ಇವನವ್ವನ ಕಾಲ್ಹಿಡುದು ಜಗ್ತಾನ ಹೊಟ್ಟಿಗೇನ್ ತಿಂತಾನೋ               ಖಿಂಗ್ಯಾಕ ಮಾಡ್ತಲೆ ಅಂದ್ರ ಸುಮ್ಕೆ ಕುಂಡ್ರಲೆ ಇಲ್ಲೆ ಅಂತ               ಸತುವ್ಹಾಕಿ ಎಳಿತಾನ-ಗೆಜ್ಜೆಯೊಳ್ಗ ಲಬಲಬೋ ಹೊಯ್ಕೊಂಭಾAಗ                ಬ್ಯಾನಿ ಆಗ್ತದ…”….ಹೀಗೆ ಕವನದ ತುಂಬ ಅನೇಕ ಸಂದರ್ಭಗಳನ್ನು ಉದಾಹರಿಸಬಹುದು.             ನವೋದಯ ಸಾಹಿತ್ಯದ ಸಂದರ್ಭದಲ್ಲಿ ರಾಯಚೂರಿನ ನೆಲದಲ್ಲಿ ಆಧುನಿಕತೆಯ ಛಾಯೆ ತೀವ್ರವಾಗಿ ಮೂಡಿ ಬಂದಿತು. ಆ ಸಂದರ್ಭದಲ್ಲಿ ಹೆಸರುವಾಸಿ ಸಾಹಿತಿಗಳಾದ ಶ್ರೀಶಾಂತರಸರು, ಜಂಬಣ್ಣ ಅಮರಚಿಂತರು, ಚನ್ನಣ್ಣವಾಲೀಕಾರರು, ಜಿ.ಶ್ಯಾಮಾಚಾರ್ಯರು ಮುಂತಾದವರು ಇವರ ಸ್ನೇಹಿತರಾಗಿದ್ದರು. ಇದರೊಂದಿಗೆ ಹಿರಿಯ ವಿದ್ವಾಂಸರಾದ ಕಿ.ರಂ ನಾಗರಾಜ ರಂತಹ ಸಾಹಿತಿಗಳ ಸ್ನೇಹವೂ ಇತ್ತು. ರಾಯಚೂರುವಾಣಿ ದಿನ ಪತ್ರಿಕೆಯ ಸಂಪಾದಕರಾದ ಶ್ರೀಎನ್.ಕೆ ಕುಲಕರ್ಣಿಯವರ ಸ್ನೇಹ ಬಲವಾಗಿತ್ತು. ಹೀಗಾಗಿ ಇವರ ಸಾಹಿತ್ಯ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ಇತ್ತು. ಜಿಲ್ಲಾ ಸಾಹಿತ್ಯ ಪರಿಷತ್ತು, ಕರ್ನಾಟಕ ಸಂಘದೊAದಿಗೆ ಹೆಚ್ಚಿನ ಒಡನಾಟ ಇತ್ತು. ಕನ್ನಡ ಸಾಹಿತ್ಯಕ್ಕೆ ಸಂಬAಧಪಟ್ಟAತೆ ವಿಚಾರ ಸಂಕಿರಣ,ವಿಶೇಷ ಉಪನ್ಯಾಸಗಳು, ಬೀದಿನಾಟಕಗಳು, ದಸರಾ ನವರಾತ್ರಿ ಉತ್ಸವಗಳು, ಇತರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ಉಪನ್ಯಾಸಕರಾಗಿ, ಸಂಘಟಕರಾಗಿ, ಪತ್ರಿಕೋದ್ಯಮದ ಕ್ಷೇತ್ರದಲ್ಲಿಯೂ ತಮ್ಮ ಬರವಣಿಗೆಯನ್ನು ವಿಸ್ತರಿಸಿ ಕೊಂಡಿದ್ದಾರೆ. ಹೆಚ್ಚಿನ ಆಡಂಬರ ಗೋಜಿಗೆ ಹೋಗದೆ ತಮ್ಮಷ್ಟಕ್ಕೆ ತಾವೇ ಸೌಮ್ಯವಾಗಿರುವುದು ಇವರ ವ್ಯಕ್ತಿತ್ವ. ಮಿತ್ರರೊಂದಿಗೆ, ವಿದ್ಯಾರ್ಥಿಗಳೋಂದಿಗೆ ಸ್ನೇಹದಿಂದ ವರ್ತಿಸುತ್ತ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಿದವರು. ನಿವೃತ್ತಿಯ ನಂತರ ರಾಯಚೂರಿನ ಶ್ರೀಯೋಗೇಶ್ವರ ಯಾಜ್ಞವಲ್ಕö್ಯ ಸಂಘದಲ್ಲಿ ಕಾರ್ಯದರ್ಶೀ ಯಾಗಿ ಸೇವೆ ಸಲ್ಲಿಸಿದ್ದರು. ಆತ್ಮೀಯರಲ್ಲಿ ಇವರು ಸದಾ ಸ್ಮರಣೀಯರು. ಲೇ.ಡಾ.ಶೀಲಾದಾಸ,ರಾಂiÀಸುಚೂರು. ಆಕರ ಗ್ರಂಥ-ಕಾದ್ಹAಚು ಮೇಲೆ ನೀರು,ಸತ್ಯಸ್ನೇಹ ಪ್ರಕಾಶನ, ರಾಯಚೂರು.

ನಾ ಕಂಡoತೆ ಡಾ.ಎಸ್.ಎಲ್. ಭೈರಪ್ಪನವರು

                         ಕನ್ನಡದ ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪನವರು  ದೈವಾಧೀನರಾದದ್ದು ಕನ್ನಡ ಸಾರಸ್ವತಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಬಾಲ್ಯದಿಂದಲೇ ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ ಜೀವನಾನುಭವವನ್ನು ವಿಸ್ತರಿಸಿಕೊಂಡವರು. ಕೆಲವರಿಗೆ ಕಷ್ಟನಷ್ಟಗಳು ಜೀವನದಲ್ಲಿ ನಿರುತ್ಸಾಹ ತಂದರೆ ಇವರಿಗೆ ಆ ಕಷ್ಟನಷ್ಟಗಳು ಸಾಧನೆಗೆ ಮೆಟ್ಟಿಲುಗಳಾದವು. ಜೀವಿತದ ಪ್ರತಿ ಕ್ಷಣವೂ ಅರ್ಥವತ್ತಾಗಿ ಕಳೆದು ಸಾಹಿತ್ಯದ ಮೂಲಕ ಜೀವನದ ಮೌಲ್ಯವನ್ನು ಸಾರಿದರು. ಭಾರತದ ಒಳಗೆ ಹೊರಗೆ,ಅನೇಕ ಓದುಗರನ್ನು ಪಡೆದ ಜನಪ್ರೀಯ ಸಾಹಿತಿಗಳು.ಅನೇಕ ಭಾಷೆಗಳಲ್ಲಿ ಇವರ ಕೃತಿಗಳು ತರ್ಜುಮೆಗೊಂಡಿವೆ.ಹೀಗೆ ಅಪಾರ ಅನುಭವ,ಅಪಾರ ಜನಪ್ರೀಯತೆ ಹೊಂದಿದ ಇವರು ಸರಳ ಜೀವನ, ಉನ್ನತ ವಿಚಾರವನ್ನು ಲವಡಿಸಿಕೊಂಡವರು ಎಂಬುದು ವಿಶೇಷವಾಗಿದೆ. ಇಂಥವರು ನನ್ನ ಮನೆಯಲ್ಲಿ ವಾಸ್ತವ್ಯ ಮಾಡಿದ್ದು ನನಗೆ ಮರೆಯಲಾರದ ಅನುಭವ.      ೧೯೯೯ ರಲ್ಲಿ ರಾಯಚೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಆದರೆ ಅವರು ಹೋಟಲಲ್ಲಿ ಇರಲು ಒಪ್ಪಲಿಲ್ಲ.ಯಾರ ಮನೆಯಲ್ಲಾದರೂ ವ್ಯವಸ್ಥೆ ಮಾಡಲು ಹೇಳಿದರು.ಅದರಂತೆ ಅವರು ನಮ್ಮ ಮನೆಯಲ್ಲಿ ವಾಸ್ತವ್ಯ ಮಾಡಲು ನಿರ್ಧರಿಸಲಾಯಿತು. ನನಗೆ ಏನೂ ಆತಂಕವಾಗಲಿಲ್ಲ. ಯಾಕೆಂದರೆ ಬಾಲ್ಯದಿಂದಲೂ ಅತಿಥಿಗಳು ನಮ್ಮ ಮನೆಗೆ ಬರುವುದು ಸಹಜವಾಗಿತ್ತು. ಆಗ ಬೆಳಗಾವಿ,ಬಾಗಲಕೋಟೆ ಇಲಕಲ್ಲು, ಬಿಜಾಪುರ ಮುಂತಾದ ಊರುಗಳಿಂದ ಮಂತ್ರಲಯಕ್ಕೆ ಹೊಗಿ ಮೃತ್ತಿಕೆ ತಂದು ಬೃಂದಾವನ ಸ್ಥಾಪಿಸುತ್ತಿದ್ದರು. ಆ ಎಲ್ಲ ಪಾದಯಾತ್ರಿಗಳು ನಮ್ಮ ಮನೆಗೆ ಬರುತ್ತಾ ಇದ್ದರು. ಅವರಿಗೆಲ್ಲಾ ನನ್ನಮ್ಮ ಸ್ವತಃ ತಾನೇ ಅಡುಗೆಮಡುತ್ತಿದ್ದಲು. ಕೆಲವರು ಉಪಹಾರ ಮಡುತ್ತಿದ್ದರು. ನನಗೆ ಮಂತೆಆಲಯಕ್ಕೆ ಹೋಗಿ ಸೇವೆ ಮಾಡಲು ಆಗುತ್ತಿ. ಅದಕ್ಕೆ ಗುರುಗಲು ನನಗೆ ಇಲ್ಲೇ ಸೇವೆ ನೀಡಿದ್ದಾರೆಂದು ಸಂತೋ಼ ಪಡುತ್ತಿದ್ದಲು. ಕೊಪ್ಪಲದ ವಿದ್ಯಾ ಪೀಠದ ವಿದ್ಯಾರ್ಥಿಗಳು ಬೇರೆ ಕಡೆ ಪ್ರಯಾಣ ಮಾಡಬೇಕಾದರೆ ನಮ್ಮ ಮನೆಯಲ್ಲಿ ಉಪಹಾರ ಮಡಿ ಹೋಗುತ್ತಿದ್ದರು.ದಾಸಸಾಹಿತ್ಯ ಅಧ್ಯಯನಕೇಂದ್ರದಿAದ ನಡೆಸುವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಡಾ.ಮಂದಾಕಿನಿಬಾಯಿಯವರ ಮನೆಯಲ್ಲಿ ಅಥವಾ ನಮ್ಮ ಮನೆಯಲ್ಲಿ ಇಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೆವು. ಅತಿತಿದೇವೋ ಬವ ಎಂಬ ಮಾತನ್ನು ನಾವು ಬಲವಾಗಿ ನಂಬಿದ್ದೇವೆ. ಒಬ್ಬ ಅತಿಥಿಗೆ ಸತ್ಕಾರ ಮಾಡಿದರೆ ಪಂಚಯಜ್ಙಮಾಡಿದ್ದಕ್ಕೆ ಸಮ ಎಂಬುದು ಹಿರಿಯರು ಹೇಳಿದ ನೀತಿ. ಹೀಗಾಗಿ ನಮಗೇನೂ ಆತಂಕವಾಗಲಿಲ್ಲ. ಅವರು ನಮ್ಮ ಮನೆಯಲ್ಲಿ ನಾಲ್ಕು ದಿನ ಇದ್ದರು.ಇದ್ದಷ್ಟು ಕಾಲವನ್ನು ನಮ್ಮ ರಾಯಚೂರಿನ ಕುರಿತಾಗಿ ಮಾತುಮಾತಿನಲ್ಲಿ ಮಾಹಿತಿ ಪಡೆಯುತ್ತಿದ್ದರು.      ನಾವು ಆಗಿನ್ನು ಹೊಸದಾಗಿ ಮನೆ ಕಟ್ಟಿದ್ದೆವು. ನಮ್ಮ ಮನೆಸುತ್ತ ಮುತ್ತ ಮನೆಗಳು ಇರಲಿಲ್ಲ. ಪ್ರಶಾಂತವಾದ ವಾತಾವರಣ ಅವರಿಗೆ ಇಷ್ಟವಾಯಿತು. `ನಾನು ಈ ಶಾಂತತೆಯನ್ನು ಪು.ತಿ.ನ. ಅವರ ಮನೆಯಲ್ಲಿ ಕಂಡಿದ್ದೆ. ಮನಸ್ಸಿಗೆ ಬೇಸರವಾದಾಗ ಶಾಂತತೆಯನ್ನು ಹುಡುಕಿಕೊಂಡು ಅವರ ಮನೆಗೆ ಹೋಗುತ್ತಿದ್ದೆ. ಅದೇ ಅನುಭವ ನನಗೆ ಇಲ್ಲಿ ಆಗುತ್ತಿದೆ’ ಎಂದು ಹೇಳಿ ನನ್ನನ್ನು ಮಾತಿಗೆಳೆದರು. ಅಲ್ಲಿಯ ವರೆಗೆ ಸಂಕೋಚದಿAದ ಇದ್ದ ಅವರು ಆತ್ಮೀಯವಾಗತೊಡಗಿದರು. ಅಷ್ಟರಲಿ ದನ,ಕುರಿಕಾಯುವ ಹುಡುಗರ ದಂಡು ಬಂದು ಇವರನ್ನು ಕುತೋಹಲದಿಂದ ನೋಡತೊಡಗಿದವು. ಆಮಕ್ಕಳನ್ನು ಕಂಡು ಇವರೇನು ಹೀಗೆ ನನ್ನನ್ನು ನೋಡುತ್ತಿದ್ದಾರೆ ಎಂದರು,ನಾನೆAದೆ ಮಕ್ಕಳು ದನಕಾಯಲು ಬಂದಾಗ ಸುತ್ತಮುತ್ತಲು ಕೂಡಲು ಅವರಿಗೆ ನೆರಳಿಲ್ಲ.ನಮ್ಮ ಮನೆಯ ಟೆರಸ್ ನಲ್ಲಿ ಕುಳಿತುಕೊಂಡು ಕಾಲ ಕಳೆಯುತ್ತಾರೆಂದೆ.ತಕ್ಷಣ ಅವರು ನಮ್ಮ ಕಡೆ ಈ ರೀತಿ ಮನೆ ಮುಂದೆ ಕುಳಿತುಕೊಳ್ಳಲು ಬಿಡುವುದಿಲ್ಲ. ನಾನು ಬಾಲ್ಯದಲ್ಲಿ ಯಾರಮನೆ ಮುಂದೆ ಕುಳಿತರೆ ಬೈದು ಕಳಿಸುತ್ತಿದ್ದರು. ನನ್ನ ಸಮಯ ಕಳೆಯಲು ದೇವಸ್ಥಾನಗಳ ಮೊರೆ ಹೋಗುತ್ತಿದ್ದೆ ಎಂದು ಹಿಂದಿನ ದಿನಗಳನ್ನು ಮೆಲಕು ಹಾಕಿದರು. ಇಲ್ಲಿ ಗಿಡ ಮರಗಳನ್ನು ಯಾಕೆ ಬೆಳಸೋದಿಲ್ಲ? ಎಂದು ಪರಿಸರದ ಕುರಿತು ಚರ್ಚಿಸತೊಡಗಿದರು. ರಾಯಚೂರಿನ ಇತಿಹಾಸದ ಕುರಿತು ಚರ್ಚೆ ಮಾಡಿದರು.ಅಶೋಕಶಾಸನದ ಕುರಿತು,ದಾಸರು ಶರಣರ ಕುರಿತು.ಕೃಷ್ಣಾ-ತುಂಗಾ ನದಿಯ ಕುರಿತು, ಜಿಲ್ಲೆಯ ಕೆರೆಗಳ ಕುರಿತು,ಇಲ್ಲಿಯ ಪ್ರಮುಖ ಬೆಲೆಗಳ ಕುರಿತು,ವ್ಯಾಪಾರ ವಹಿವಾಟಿನ ಕುರಿತು ವಿವರ ಪಡೆದುಕೊಂಡರು. ನಾನು ಮಾರನಡುತ್ತ ನಾಳೆ ದಿನದ ಊಟ ಉಪಹಾರದ ಮಾಹಿತಿ ಪಡೆದುಕೊಂಡೆ. ಅವರು ಮುಂಜಾನೆ ನಾಲ್ಕು ಗಂಟೆಗೆ ಏಳುವುದು,ಅರ್ಧಗಂಟೆ ವಾಕಿಂಗ್ ಆನಂತರ ಸ್ನಾನ.ತಮಗೆ ಮುಂಜಾನೆ ಬಿಸಿನೀರಿನ ವ್ಯವಸ್ಥಮಾಡಬೇಕೆಂದು ತಿಳಿಸಿದರು. ಅದರಂತೆ ಒಂದು ದಿನ ಅವರಿಗೆ ವ್ಯವಸ್ಥೆ ಮಾಡಿದೆ. ಮರುದಿನದಿಂದ ತಾವೇ ಬಿಸಿನೀರು ಕಾಯಿಸಿಕೊಂಡು ನಮಗೂ ಬಿಸಿನೀರು ಕಾಯಿಸಿ ಇಡುತ್ತಿದ್ದರು. ಅಷ್ಟೊಂದು ಆತ್ಮೀಯವಾಗತೊಡಗಿದರು. ಸ್ವತಃ ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕೆಂಬ ವ್ಯಕ್ತಿತ್ವ ಅವರದು. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು.ಕೆಸದವರಿಗೆ ಕೊಡಲು ಒಪ್ಪಲಿಲ್ಲ. ಮುಂಜಾನೆ ಉಪಹಾರ ಏನು ಮಾಡಬೇಂದು ಕೇಳಿದೆ. ಅದಕ್ಕೆ ನೀವೇನು ಮಾಡುತ್ತೀರೋ ಅದೇ ನನಗಾಗಿ ಇರಲಿ. ನನಗಂತ ಬೇರೆ ಮಾಡುವುದು ಬೇಡಾ ಎಂದರು. ನಾವು ದಿನಾ ಜೋಳದ ಹಿಟ್ಟಿನ ಭಕ್ರಿ ಮಾಡುತ್ತೇವೆ.ನಿಮಗೆ ರೂಢಿ ಇರಲ್ಲ ಎಂದು ಹೇಳಿದೆ. ಇರಲಿ ನಾನು ಅದನ್ನೇ ಉಪಹಾರ ಮಾಡುತ್ತೇನೆಂದರು. ಸರಿ ಭಕ್ಕರಿ ,ಪಚಡಿ, ಬೆಂಡಿಕಾಯಿ ಪಲ್ಯಮಾಡಿ ಅವರಿಗೆ ಉಪಹಾರಕ್ಕೆ ಸಿದ್ಧಮಾಡಿದೆ. ಅವರು ಅದನ್ನು ಸೇವಿಸಿ ಪಚಡಿಯ ಕುರಿತು ವಿವರಣೆ ಕೇಳಿದರು.ಇದು ಏನು ಇದನ್ನು ಹೇಗೆ ಮಾಡಿದಿರಿ ಎಂದು. ಇದು ಹಸಿ ತರಕಾರಿಯಿಂದ ಮಾಡಿದ್ದು ಸೌತಿಕಾಯಿ, ಗೆಜ್ಜರಿ, ಟಮಾಟೋಹಣ್ಣುನ್ನು ಸಣ್ಣಗೆ ಹೆರೆದು ಇದಕ್ಕೆ ಗುರೆಳ್ಳು ಪುಡಿ ಹುಣಸೇ ತೊಕ್ಕು ಮತ್ತು ಮೊಸರು ಹಾಕಿ ಕಲಸಿ ಇಂಗಿನ ಒಗ್ಗರಣೆ ಕೊಟ್ಟಿದ್ದಿನಿ’ ಎಂದು ವಿವರಿಸಿದೆ. ತುಂಬಾ ರುಚಿ ಇದೆ ಎಂದು ತಿಳಿಸಿದರು, ವiಧ್ಯಾಹ್ನಕ್ಕೆ ಬಿಸಿಬೇಳೆ ಭಾತು ಮೊಸರನ್ನ ಮಾಡಿದೆ. ಬಿಸಿಬೇಳೆ ಭಾತಿನ ವಿವರ ಕೇಳಿದರು ನಮ್ಮಲ್ಲಿ ಬಿಸಿಬೇಳೆ ಭಾತ ಎಂದರೆ ಕರಿಬೇವು ಕೊತಂಬರಿ ಬಿಟ್ಟರೆ ಯಾವ ತರಕಾರಿಯೂ ಇರಲ್ಲ. ನೀವು ಇಷ್ಟು ತರಕಾರಿ ಹಾಕಿದ್ದಿರಲ್ಲ. ನನಗಾಗಿ ಮಾಡಿದ್ದೂ  ಅಥವಾ ಪ್ರತಿಬಾರಿ ಹೀಗೆ ಮಾಡೊದಾ? ನಿಮಗಂತ ಅಲ್ಲಾ ಪ್ರತೀಬಾರಿ ನಾವು ಹೀಗೇ ಮಾಡೋದು ಅಂತ ಹೇಳದಾಗ ಇದು ದೇಶೀ ಬಿಸಿಬೇಳೆ ಭಾತ್ ಎಂದು ಹೆಸರಿಸಿದರು, ಭಕ್ರಿ ಮಾಡುವಾಗ ಅಡುಗೆ ಮನಿಗೆ ಬಂದು ಮಾಡುವ ವಿಧಾನವನ್ನು ಕಂಡು ರೊಟ್ಟಿ ಮಾಡುವ ವಿಧಾನ ಸಂಗೀತಮಯವಾಗಿದೆ ಎಂದು ಬಣ್ಣಿಸಿದರು. ದಿನಾಲು ನಮ್ಮ ಭಾಗದ ಬೇರೆ ಬೇರೆ ಉಪಹಾರ ಅಡುಗೆ ಮಾಡುತ್ತಿದ್ದೆ.ಥಾಲಿಪಟ್ಟು, ಮೆಂತ್ಯೆಪಲ್ಯ ಕಡಬು, ಕಾಳುಪಲ್ಯ, ಮುದ್ದಿಪಲ್ಯಾ, ಹಸಿಮೆಣಸಿನಕಾಯಿ ಟಮೋಟ ಚಟ್ನಿ, ಉಪ್ಪನಕಾಯಿ,ಸೇಂಗಾ ಪುಡಿ,ಕುಸಬಿ ಪುಡಿ,ಯಳ್ಳುಪುಡಿ,ಚಟ್ನಿಪುಡಿ, ಖೀರು,ಪಾಯಸ ಹೀಗೆ ನಮ್ಮ ಪ್ರದೇಶದ ತಿನುಸುಗಳನ್ನು ಇಷ್ಟ ಪಟ್ಟರು. ಈ ಪ್ರದೇಶದಲ್ಲಿ ಸಜ್ಜಿ ಮತ್ತು ಜೋಳ,ಅಕ್ಕಿ ಪ್ರಮುಖ ಆಹಾರ. ಗೋದಿ ಹಿಟ್ಟನ್ನು ಅಮವಾಸೆ ಮತ್ತು ಹುಣ್ಣುವಿಗೆ ಮಾತ್ರ ಬಳಸುತ್ತೇವೆ.ವಿಶೇಷವಾಗಿ ಸೊಪ್ಪನ್ನು ಬಳಸುತ್ತೇವೆ ಎಂದು ಮಾಹಿತಿಯನ್ನು ನೀಡಿದೆ.ಇದು ಬರೀ ಊಟಕ್ಕಾಗಿ ಅಲ್ಲ. ಈ ಪ್ರದೇಶದ ಆಹಾರ ಪದ್ಧತಿ ತಿಳಿದುಕೊಳ್ಳುವುದಕ್ಕಾಗಿ. ಅವರು ಬರುವಾಗ ಬಾಟಲ್ ನಲ್ಲಿ ಕಾವೇರಿ ನೀರು ತಂದಿದ್ದರು. ಹೋಗುವವರೆಗೂ ಕಾವೇರಿ ನೀರನ್ನೆ ಕುಡಿದರು. ನಮ್ಮ ಮನೆಯ ನೀರನ್ನು ಅವರು ಕುಡಿಯಲೇ ಇಲ್ಲ.  ಎಲ್ಲಿ ಹೋದರೂ ನಾನು ಕಾವೇರಿ ನೀರನ್ನು ಜೊತೆಯಲ್ಲಿ ಒಯ್ಯುತ್ತೇನೆ. ಆ ನೀರನ್ನು ಮಾತ್ರ ಕುಡಿಯುತ್ತೇನೆಂದು ತಿಳಿಸಿದರು. ನನಗೆ ನಮ್ಮ ಮಹಾವಿದ್ಯಾಲಯದ ಹಿಂದಿ ವಿಷಯದ ಪ್ರಾಧ್ಯಾಪಕರಾದ ಗೌರಿಭಟ್ ಮೇಡಮ್ ನೆನಪಾದರು. ಅವರು ತುಳಸಿ ಗಿಡಕ್ಕೆ ಕೊಡಗಿನ ಮಣ್ಣು ಹಾಕಿದ್ದರು. ನಾನು ಅವರ ಮನೆಗೆ ಹೋದಾಗ ಇದು ಕೊಡಗಿನ ಮಣ್ಣು ಅಂತಾ ಅಭಿಮಾನದಿಂದ ಹೇಳುತ್ತಿದ್ದರು..ಅವರ ಅಭಿಮಾನ ಮೆಚ್ಚುವಂತದ್ದು. ಹೀಗೆ ಖ್ಯಾತ ಕಾದಂಬರಿ ಕಾರರಾದ ಭೈರಪ್ಪನವರು ನನ್ನಪತಿ ಜಿ.ನರಸಿಂಗರಾವ ಮಕ್ಕಳಾದ ಕಾವ್ಯ,ಕೃಷ್ಣ ಅವರೊಂದಿಗೆ ಕುಟುಂಬದ ಸದಸ್ಯರಂತೆ  ಕಳೆದದ್ದು ಅವಿಸ್ಮರಣೀಯವಾಗಿದೆ.         ಭೈರಪ್ಪನವರು ಬಂದಿದ್ದಾರೆAದು ಅನೇಕರು ಭೇಟಿಯಾಗಲು ಬಂದರು. ಅದರೆ ಅವರು ಯಾರನ್ನು ಭೇಟಿಯಾಗಲು ಬಯಸಲಿಲ್ಲ. ರಾಯಚೂರುವಾಣಿ ಪತ್ರಿಕೆಯಿಂದ ನಡೆದ ಸಂದರ್ಶನಕ್ಕೆ ಮಾತ್ರ ಒಪ್ಪಿಕೊಂಡರು. ಸಂದರ್ಶಕರಾಗಿ ಪಾಂಡುರAಗಗುಡಿ ಮತ್ತು ಶ್ರೀನಿವಾಸ ಗಟ್ಟು ಅಗಮಿಸಿದ್ದರು. ಅವರ ಸಾಹಿತ್ಯದ ಕುರಿತಾಗಿ ಸುಮಾರು ಎರಡು ತಾಸು ಚರ್ಚೆ ಮಾಡಿದರು.      ಸಮಯ ಸಿಕ್ಕಾಗಲೆಲ್ಲಾ ಒಂದೊAದು ವಿಚಾರದ ಮಾಹಿತಿ ಪಡೆಯುತ್ತಿದ್ದರು. ಈ ಭಾಗದ ಕುಟುಂಬ ವ್ಯವಸ್ಥೆ, ಮದುವೆಯ ಪದ್ಧತಿಯ ಕುರಿತಾಗಿ, ಮಹಿಳೆಯರ ಸ್ಥಿಗತಿಯ ಕುರಿತಾಗಿ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಪದ್ಧತಿ, ಕೃಷಿ, ರೈತರ ಸಮಸ್ಯೆ, ಶಿಕ್ಷಣದ ವ್ಯವಸ್ಥೆ, ಹಿಂದು-ಮುಸ್ಲಿಮ ಸೌಹಾರ್ದತೆ, ಜಮೀನದಾರಿ ಪದ್ಧತಿ ಹೀಗೆ ರಾಯಚೂರು ಜಿಲ್ಲೆಯ ಸಾಮಾಜಿಕ ಜೀವನದ ಮಾಹಿತಿಯನ್ನು ಪಡೆದುಕೊಂಡರು.       ಅವರಿಗೆ ಸಂಗೀತ ಎಂದರೆ ಎಲ್ಲಿಲ್ಲದ ಪ್ರೀತಿ. ಸದಾ ರೇಡಿಯೋದಲ್ಲಿ ಶಾಸ್ತಿçÃಯ ಸಂಗೀತ ಕೇಳುತ್ತಿದ್ದರು. ನನಗೂ ನಿಮಗೆ ಸಂಗೀತದಲ್ಲಿ ಆಸಕ್ತಿ ಇದೆಯಾ? ಎಂದರು. ಹೌದು ಇದೆ ಎಂದೆ. ಅದಕ್ಕೆ ಅವರು ಕಲಾವಿದರೆಲ್ಲಾ ಸಂಗೀತ ಕೇಳಲೇಬೇಕು. ಎಲ್ಲಾ ಕಲೆಗಳಿಗೆ ಸಂಗೀತವೇ ಮೂಲ ನೆಲೆ. ತಾವು ಇಷ್ಟ ಪಡುವ ಕಲೆಯಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಸಂಗೀತ ಕೇಳಲೇ ಬೇಕು. ಸಂಗೀತ ಭಾವನೆಗಳನ್ನು ಉದ್ದೀಪನ ಗೊಳಿಸುತ್ತದೆ, ಭಾವನೆಗಳಿಗೆ ಪುಷ್ಠಿ ಕೊಡುತ್ತದೆ, ಮತ್ತು ಸಂಸ್ಕಾರ ಕೊಡುತ್ತದೆ. ಸೃಜನಶೀಲ ಬರಹಗಾರನಾಗಬೇಕಾದರೆ ಮಾತು ಕಡಿಮೆ ಮಾಡಬೇಕು. ಮಾತನಾಡಿದರೆ ಭಾವದ ತೀವ್ರತೆ ಕಡಿಮೆಯಾಗಿ ಬರವಣಿಗೆ ಶಿಥಿಲವಾಗುತ್ತದೆ. ಮೊದಲು ಬರೆದು ಆ ನಂತರ ಮಾತನಾಡಬಹುದೆಂದು ಬರಹಗಾರರಿಗೆ ಬರವಣಿಗೆಯ ಗಂಭೀರತೆಯ ಗುಟ್ಟನ್ನು ತಿಳಿಸಿಕೊಟ್ಟರು. ಮುಂದುವರೆದು ಬರಹಗಾರ ಯಾರ ಮುಲಾಜಿಗೂ ಬೀಳಬೇಕಾಗಿಲ್ಲ. ಒಮ್ಮೊಮ್ಮೆ ಎಲ್ಲರೂ ನಮನ್ನು ಹೊಗಳುತ್ತಾರೆ.ಒಮ್ಮೊಮ್ಮೆ ತೆಗಳುತ್ತಾರೆ. ಅದು ಅವರ ವ್ಯಕ್ತಿತ್ವ. ಲೇಖಕ ತಾನು ಹೇಳಬೇಕಾದದ್ದು ಹೇಳಲೇಬೇಕು. ಅದು ಲೇಖಕನ ಜವಬ್ದಾರಿ. ಅವರೊಂದಿಗೆ ನಾಲ್ಕು ದಿನ ಕಳೆದದ್ದೇ ತಿಳಿಯಲಿಲ್ಲ. ನನ್ನ ಪತಿ ಮತ್ತು ನನ್ನಮಕ್ಕಳೂ ಅವರೊಂದಿಗೆ ಆತ್ಮೀಯವಾಗಿ ಸಮಯ ಕಳೆದರು. ಊರಿಗೆ ಹೋಗುವಾಗ ನಮ್ಮೊಂದಿಗೆ ಒಂದು ಫೋಟೋ ತೆಗೆಸಿಕೊಂಡು ಹೋದರು. ನಾನು ಅವರ ಪತ್ನಿಯವರಿಗಾಗಿ ವೆಂಕಟಗಿರಿ ಕಾಟನ್ ಸೀರೆ ಅವಲಕ್ಕಿ ಉಂಡಿ ಕಳಿಸಿಕೊಟ್ಟೆ. ಇದೆಲ್ಲಾ ಬೇಡಾ ಎಂದರು. ಇದು ನಮ್ಮ ಪದ್ಧತಿ. ಹಾಗೆ ಕಳಿಸುವುದಿಲ್ಲಾ ಎಂದೆ. ಅದಕ್ಕೆ ಸುಮ್ಮನಾದರು. ಊರಿಗೆ ಹೋಗಿ ನಮಗೆ ಧನ್ಯವಾದದ ಪತ್ರವನ್ನೂ ಬರೆದು ತಾವು ಕೊಟ್ಟಸೀರೆ,ಅವಲಕ್ಕಿ ಉಂಡಿ ನನ್ನ ಪತ್ನಿಗೆ ಇಷ್ಟವಾಯಿತೆಂದು ತಿಳಿಸಿದ್ದರು.ಮೈಸೂರಿಗೆ ಬಂದರೆ ಮನೆಗೆ ಬರಲು ಹೇಳಿದ್ದರು. ಅದರಂತೆ ಒಮ್ಮೆ ಅವರ ಮನೆಗೆ ಹೋಗಿಯೂ ಬಂದೆವು. ಅದೇ ಅವರೊಂದಿಗೆ ಆಡಿದ ಕೊನೆಯ ಮಾತುಗಳು.        ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರಕಾಶ ಬೆಳವಾಡಿಯವರು ಪರ್ವ ಕಾದಂಬರಿಯನ್ನು ರಂಗಭೂಮಿಗೆ ಅಳವಡಿಸಿ ಎಂಟುತಾಸು ಅಭಿನಯಿಸಿ ಪ್ರದರ್ಶಿಸಿದರು. ಪ್ರದರ್ಶನ ಬಹಳ ಅದ್ಭುತವಾಗಿತ್ತು. ಆಗ ಅವರನ್ನು ಭೇಟಿಯಾಗಬಹುದೆಂದು ಅಂದುಕೊAಡಿದ್ದೆ. ಅದರೆ ಅದಿನ ಅವರು ಬಂದಿರಲಿಲ್ಲ.ಮರುದಿನ ಬಂದಿರುವುದಾಗಿ ವರದಿಗಳನ್ನು ಓದಿದ್ದೆ. ಅವರು ದೈವಾಧೀನವಾಗಿರುವುದು ಕನ್ನಡ ತಾಯಿಯ ಮಡಲು ಬರಿದಾಗಿದೆ. ಓದುಗ ಬಳಗ ಅನಾಥವಾಗಿದೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇರದೇ ಹೋದರೂ ಪುಸ್ತಕಗಳ ಮೂಲಕ ನಮ್ಮ ಜೊತೆಗಿದ್ದಾರೆಂದು ಸಮಾಧಾನ ಮಾಡಿಕೊಳ್ಳಬೇಕಾಗಿದೆ. ಇಷ್ಟು ವರ್ಷಗಳ ಕಾಲ ಬಚ್ಚಿಟ್ಟುಕೊಂಡ ಭಾವಗಳು ಮೂರ್ತರೂಪ ಪಡೆದಿವೆ. ಈ ಬರವಣಿಗೆಯ ಮುಖಾಂತರ ಅವರಿಗೆ ನನ್ನ ನುಡಿನಮನಗಳನ್ನು ಸಲ್ಲಿಸುತ್ತೇನೆ. ಡಾ.ಶೀಲಾದಾಸ, ರಾಯಚೂರು.

ಲಿಂಗದಳ್ಳಿ ರಾಮದಾಸರು

                                                                  ರಾಯಚೂರು ಜಿಲ್ಲೆ ಹರಿದಾಸಸಾಹಿತ್ಯಕ್ಕೆ ಅನನ್ಯಕೊಡುಗೆನೀಡಿದೆ.ವಿಜಯದಾಸರಾದಿಯಾಗಿ ಗೊಪಾಲದಾಸರು,ಜಗನ್ನಾಥದಾಸರು,ಪ್ರಾಣೇಶದಾಸರು ಮುಂತಾದ ಹರಿದಾಸರು   ದಾಸಪರಂಪರೆಯನ್ನು ಮುಂದುವರೆಸಿದ್ದಾರೆ.ವಿಶೇಷವಾಗಿ ಆಧುನಿಕ ದಾಸಸಾಹಿತ್ಯದ ಘಟ್ಟದ ಪ್ರವರ್ತಕರಾದ ಪ್ರಾಣೇಶದಾರು ಲಿಂಗಸೂಗೂರು ಪ್ರದೇಸದಲ್ಲಿ ಪ್ರಭಾವಿ ಹರಿದಾಸರಾಗಿದ್ದರು. ಪ್ರಸ್ತುತದಲ್ಲೂ ಅವರ ಪ್ರಭಾವ ಹಚ್ಚ ಹಸಿರಾಗಿದೆ. ಇವರ ಪರಿಸರದಲ್ಲಿ ಅನೇಕ ಹರಿದಾಸರು ದಾಸಸಾಹಿತ್ಯ ಕೃಷಿ ಮಾಡಿದ್ದಾರೆ. ಅಂಥವರಲ್ಲಿ ಆಧುನಿಕ ಹರಿದಾಸರಾದ ಶ್ರೀರಾಮಾಂಕಿತ ರಾಮದಾಸರೂ ಒಬ್ಬರು. ರಾಯಚೂರು ಜಿಲ್ಲೆಯ ದೇವದುರ್ಗಾ ತಾಲ್ಲೂಕಿನ ಜೋಳದಹೆಡೆಗೆ ಎಂಬಗ್ರಾಮದಲ್ಲಿ ಬಡೇಸಾಬರು ೧೮೮೨ರಲ್ಲಿ ಜನಿಸಿದರು.ತಂದೆ ಖಾಜಾಸಾಹೇಬ ತಾಯಿ ಪೀರಮ್ಮ. ಬಡತನದ ಬವಣೆಯಲ್ಲೂ ವಿದ್ಯಾಭ್ಯಾಸ ಮಾಡಿದರು. ಕನ್ನಡಓದಲು, ಬರೆಯಲು ಕಲೆತರು. ಗುಮಾಸ್ತರಾಗಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.ಹುಸೇನಮ್ಮ ಎಂಬ ಕನ್ನೆಯೊಂದಿಗೆ ಮದುವೆಯಾಯಿತು. ಸಂಸಾರ ನಿರ್ವಹಣೆ ಕಷ್ಟವಾದಾಗ ಪತ್ನಿಯೊಂದಿಗೆ ಗೊನವಾರಕ್ಕೆ ಬರುತ್ತಾರೆ. ಆ ಊರಿನಲ್ಲಿ ಶಿಕ್ಷಕರಾಗಿ ಅಕ್ಷರದಾನದ ಕಾರ್ಯನಿರ್ವಸುತ್ತಾರೆ. ಜನಮನ ಗೆಲ್ಲತ್ತಾರೆ. ವಿಶೇಷವಾಗಿ ಆ ಊರಿನ ಜೋಯಿಸ ಮನೆತನದ ಶ್ರೀವೆಂಕಟಭೀಮಾಚಾರ್ಯ,ಶ್ರೀಗೋವಿAದಾಚಾರ ಗೋನವಾರ, ಶ್ರೀಹನುಮಂತಾಚಾರ್ಯ.ಶ್ರೀನಿವಾಸರಾವ ಕುಲಕರ್ಣಿಯವರ ಸ್ನೇಹವಾಯಿತು. ಇವರು ತಮ್ಮ ಸಭ್ಯತೆಯ ನಡುವಳಿಕೆ ಮತ್ತು ಜ್ಞಾನದಾºದಿಂದÀ ಎಲ್ಲರ ಮನಸ್ಸನ್ನು ಗೆಲ್ಲುvತ್ತಾರೆ. ಇವರೊಂದಿಗೆ ಭಜನೆ ,ಪುರಾಣ, ಪ್ರವಚನ.ಸಂಸ್ಕೃತ ಅಧ್ಯಯನದಲಿ ್ಲನಿರತರಾಗುತ್ತಾರೆ.ಇಲ್ಲಿಂದ ಅವರ ದಾಸ ಸಾಹಿತ್ಯ ಕೃಷಿ ಆರಂಭವಾಗುತ್ತದೆ.ವರಕವಿಗಳಾದ ರಾಮದಾಸರಿಗೆ ಒಳ್ಳೆಯ ಪರಿಸರದೊರೆತು. ಹುಲುಸಾದ ದಾಸಸಾಹಿತ್ಯ ರಚಿಸಲು ಪೂರಕವಾಯಿತು.ಇವರಿಗೆ ಹಂಪೆಯಲ್ಲಿ ಶ್ರೀರಾಮಾವಧೂತರಿಂದ’ ಶ್ರೀರಾಮ’ ಎಂದು ಅಂಕಿತದೊರೆಯುತ್ತದೆ.                                                 ಹರಿದಾಸಪರAಪರೆಯAತೆ ರಾಮದಾಸರಿಗೆ ಮಧ್ವಸಿಧ್ಧಾಂತವೇ ತಳಹದಿ.ಇವರು ಏಳುನೂರಕ್ಕೂ ಹೆಚ್ಚು ಕೀರ್ತನೆಗಳನ್ನು,ನೂರು ಉಗಾಭೋಗಗಳನ್ನು,ನಾಲ್ಕುನೊರಾ ಅರವತ್ತು ನುಡಿಯ ರಾಮ ಭಜನೆಯನ್ನು,ಐದು ಶತಾಷ್ಟಕಗಳನ್ನು ಉರ್ದು,ಸಂಸ್ಕುçತದಲ್ಲಿ ಕೀರ್ತನೆಗಳನ್ನು ರಚಿಸಿದಾರೆ. ರಾಮಶತಾಷ್ಟಕ-; ಇದು ನೂರಾಎಂಟು ಚರಣಗಳಲ್ಲಿದೆ’ಈಶಶ್ರಿಶಜಗತ್ಪೋಷ’ ಎಂದು ಆರಂಭವಾಗುವ ಈ ಅಷ್ಟಕ ಪ್ರತಿ ಚರಣದ ಕೊನೆಯಲ್ಲಿ ‘ರಾಮನಮೊ’ ಎಂದು ಕೊನೆಗೊಳ್ಳುತ್ತದೆ ಈ ಅಷ್ಟಕದಲ್ಲಿ ರಾಮನ ಗುಣ ಕಾರ್ಯಗಳನ್ನು ವಿವರಿಸಲಾಗಿದೆ..ಶ್ರಿರಾಮನು ನಿಖಿಲ ಚರಾಚರಸೃಷ್ಟಿಗೆ ಒಡೆಯನು,ಭಕುತಾಭಿಷ್ಟಪೂರ್ಣ ಆದಿ ಲಕುಮಿನಾಥನು,ವೇದವೇದಾಗಮ್ಯನು, ವೇದವೇದಾಂತಗುಪ್ತ ,ವೇದಾತೀತ, ಅನಾದಿ ವಸ್ತು, ಆದಿಮೂರ್ತಿ, ಪತಿತ ಪಾವನಾಂಗ ಎಂದು ಬಣ್ಣಿಸುತ್ತಾರೆ. ಪರಕೆ ಪರಮನಾದ ಭಗವಂತ ಶರಣರ ಅರಸ, ದಾಸರದಾಸ, ದುಷ್ಟಕಾಲ,ಶಿಷ್ಟಪಾಲ ಎಂದು ಗುಣಗಳನ್ನು ಹೇಳುತ್ತಾ ದಶಾವತಾರದ ವಿಚಾರವನ್ನು ಹೇಳುತ್ತಾರೆ.’ಜೀವನದಲ್ಲಿ ಉಣ್ಣಬಾರದನ್ನು ಉಂಡು ,ನಿನ್ನ ಸ್ಮರಣೆ ಮರೆತು ಪಡಬಾರದ ಕಷ್ಟ ಪಟ್ಟು ಮಂದಮತಿಯಾದೆ.’ಮAದಮತಿಯ ಛಿಂದಿಸೆನಗಾನAದ ಮತಿ ದೇ’ ಎಂದು ಬೇಡಿಕೊಳ್ಳುತ್ತಾರೆ.ದುರಿತ ಕರ್ಮದೊಳಗೆ ನಿರುತನಾದ ನನಗೆ ಮರವೆ ಮಾಯವ ತೊರೆ, ಮಂಕು ವಿಷಯಲಂಪಟವೆAಬ ಸಂಕೋಲೆಯ ಕಡಿ, ನಿನ್ನಪಾದ ದಾಸರೊಳಗೆ ಕೂಡಿಸೋ, ಎನ್ನ ಮನದ ಭಿನ್ನ ಬಿಡಿಸಿ ನಿನ್ನ ಧ್ಯಾಸದೊಳಗೆ ಇರಿಸು ಎಂದು ತಮ್ಮನ್ನು ಆವರಿಸಿದ ದೋಷ ರಾಶಿಗಳಿಂದ ಮುಕ್ತ ಗೊಳಿಸಲು ವಿನಂತಿಸಿಕೊಳ್ಳುತ್ತಾರೆ. ತಮ್ಮನ್ನು ಸಮರ್ಪಿಸಿ ಕೊಳ್ಳತ್ತಾ , ಯಾರು ರಾಮ ಸ್ಮರಣೆ ಮಾಡುತ್ತಾರೊ ಅವರು ನಿತ್ಯಸತ್ಯ ಸಯಖಪಡುತ್ತಾರೆಂದು ಫಲ ಶೃತಿಯನ್ನೂ ಹೇಳುತ್ತಾರೆ. ಗೋವಿಂದ ಶತಷ್ಟಕ-; ಇದು ಒಂದು ನೂರಾ ಎಂಟು ನುಡಿಯಲ್ಲಿದೆ. ಒಂದೊAದು ನುಡುಯಲ್ಲಿ ಮೂರು ಚರಣಗಳಿದ್ದು, ಎರಡನೆಯ ಚರಣದ ಕೊನೆಗೆ’ ಗೋವಿಂದ ನಮೋ ‘ ಎಂದು ಮೂರನೆಯ ಚರಣದ ಕೊನೆಗೆ ‘ಸಿರಿಗೊವಿಂದ ’ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ಶ್ರಿಕೃಷ್ಣನ ಲೀಲೆಗಳು, ಚಮತ್ಕಾರಗಳು ಚಿತ್ರಿತವಾಗಿವೆ.’ಪಾತಕ ಹರವುಧಿತಾತ ವಿಮಲ ಸುಖದಾತ ಜಗನ್ನಾಥ ಗೋವಿಂದ ನಮೋ ಮುಕ್ತಿದಾಯಕ ಸಿರಿಗೋವಿಂದ’ ಎಂದು ಕೃಷ್ಣನನ್ನು ಚಿತ್ರಿಸುತ್ತಾರೆ.ರಮಾಲೋಲನಾದ ಗೋವಿಂದ ಭಕ್ತ ಕ್ಷಮಾಶೀಲ ,ಭವಭ್ರಮಜಾಲಹರ,ಮುಕ್ತಿದಾಯಕನಾಗಿದ್ದಾನೆ.ಭಕ್ತರಿಗಾಗಿ ವೇದಗಳನ್ನು ತಂದಿದ್ದಾನೆ, ಮಂಧರಗಿರಿ ಬೆನ್ನಲ್ಲಿ ಪೊತ್ತಿದ್ದಾನೆ,ಸುಂದರ ಸ್ತಿçÃಯಾಗಿ ಸುರರಿಗೆ ಅಮ್ರತ ಉಣಿಸಿದ್ದಾನೆ, ಅಮರರಿಗೆ ಬಂದ ಕಂಟಕ ಪರಿಹರಿಸಿದ್ದಾನೆ,ನರಸಿಂಹನಾಗಿ ಬಾಲಕನನ್ನು ಕಾಯ್ದಿದ್ದಾನೆ, ಪಥದಿ ಶಿಲೆಯ ಒದ್ದು ಸತಿಯನ್ನು ಪಾವನ ಗೋಳಿಸಿದ್ದಾನೆ.ದಶಾವತಾರದ ವಿಚಾರ ಹೇಳುತ್ತ ರಾಮಾವತಾರದ ವಿಚಾರವನ್ನು ವಿವರವಾಗಿ ಹೇಳುತ್ತಾರೆ. ಭಕ್ತರಕ್ಷಕನಾದ ಹರಿಯ ನಾಮವನ್ನು ದಿನದಿನದಿ ಪಠಿಸಲು ಅಪೇಕ್ಷಿತ ಫಲವನ್ನು ನೀಡುತ್ತಾನೆಂದು ಸೂಚಿಸಿತ್ತಾರೆ. ಹನುಮಂತ ಶತಾಷ್ಟಕ-; ಈ ಅಷ್ಟಕವು ಕೂಡಾ ಒಂದುನೂರಾ ಎಂಟು ನುಡಿಗಳಲ್ಲಿದೆ. ಪ್ರತಿ ನುಡಿಯು ಮೂರು ಚರಣಗಳನ್ನು ಹೊಂದಿದೆ. ಎರಡನೆಯ ಚರಣದಲ್ಲಿ’ಧೀಮಂತ’ ಮೂರನೆಯ ಚರಣದಲ್ಲಿ ‘ಜೈ ಶ್ರೀರಾಮನ ದೂತ್ಹನುಮಂತ’ ಎಂಬ ಪದದೊಂದಿಗೆ ಮುಕ್ತಾಯಗೊಳ್ಳುತ್ತವೆ.ರಾಮಾವತಾರದ ಆಂಜನೇಯನ ಭಕ್ತಿಯ ಚಿತ್ರಣ ಇಲ್ಲಿದೆ.ಹನುಮಂತನ ಜನನ ,ಬಾಲ್ಯದಲೀಲೆಗಳ ಕುರಿತಾಗಿ ಹೇಳುತ್ತಾರೆ. ಬಾಲತನದಿ ಘನಲಿಲೆ ತೋರಿದ ಸುಶೀಲ ಅಸಮಬಲ ಧೀಮಂತ,ತಿಳಿಯದ್ಹಣ್ಣುಯೆAದು ನಳಿನಮಿತ್ರನನು ಸೆಳೆದು ನುಂಗಿದನು, ಆನಂತರ ಸಪ್ತಧ್ವಿಭುವನಗಳ್ಹೊತ್ತು ಆಳುವನಂ ಹೊತ್ತು ಹಾರಿದನು ಧೀಮಂತ, ಮೋಡಗಳಿಕ್ಕಡಿ ಮಾಡುತ ಪೊಕ್ಕನು ಗಾಢಸಾಮರ್ಥದಿ, ಮೈನಾಕಪರ್ವತದೈನ್ಯಪಡಲು ಸನ್ಮಾನವಿತ್ತನು, ಧಾತ್ರಿ ಜಾತೆಗೆ ಮಹಾ ಖಾತ್ರಿ ತೊರಿಸಿ ಕೃಪಾ ಪಾತ್ರನಾದ,ಮಂಕು ದಾನವರ ಬಿಂಕಬಿಡಿಸಿದನು, ಭಕ್ತಿಯಿಂದ ಜಗದಾಪ್ತನ ಮನಸಿಗೆ ತೃಪ್ತಿಯ ನಿತ್ತನು ಧೀಮಂತ’ ಎಂದು ರಾಮಾಯಣದಲ್ಲಿ ಹನುಮಂತನು ನಿರ್ವಹಿಸಿದ ಕಾರ್ಯಗಳೆನ್ನಲ್ಲಾ ಸ್ವಾರಸ್ಯವಾಗಿ ಹೇಳುತ್ತಾರೆ. ಶಿವಾಶತಾಷ್ಟಕ-;ಈ ಅಷ್ಟಕವೂ ಒಂದುನೂರಾ ಎಂಟು ನುಡಿಯನ್ನು ಹೊಂದಿದೆ. ಪ್ರತಿ ನುಡಿಯಲ್ಲಿ ಮೂರು ಚರಣಗಳಿದ್ದು ಎರಡನೆಯ ಚರಣದಲ್ಲಿ ಶಂಭು ನಮೋ, ಮೂರನೇ ಚರಣದಲ್ಲಿ ಶಿವ ಸಂಭೋ, ಎಂಬ ಪದಗಳು ನಿಯತವಾಗಿ ಬರುತ್ತವೆ.’ ನೀಲಕಂಠ ಭವ ಮಾಲ ಹರಂ’ ಎಂಬುದು ಆರಂಭದ ಚರಣ. ಶಿವ ಸ್ಮರಣೆ ಜೀವಿಗಳ ಭವ ಜನುಮಗಳನ್ನು ನಾಶ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಲುತ್ತಾರೆ.’ಶಿವನು ಸೂಲಪಾಣಿ,ರುಂಡಮಾಲ, ಉರಗಭೂಷಣ, ಕಾಲ ಸಂಹರ, ಅಂಭುಧಿಧರ, ಗಜಚರ್ಮಾಂಬರ, ಸುಜನಸುಖಂಕರ,ನAದಿ ರೂಢ, ಮುಂತಾಗಿ ಸ್ತುತಿಸಿದ್ದಾರೆ. ಕುಂಬಾರನಿಗೊಲಿದ ಪ್ರಸಂಗ,ಮಾದರ ಚನ್ನಯ್ಯನ ಪ್ರಸಾದ ಸ್ವೀಕರಿಸಿದ ಪ್ರಸಂಗ, ಬಕ್ತಮಾರ್ಕಂಡಯ್ಯನ ಪ್ರಸಂಗ, ಚನ್ನಕ್ಕನ ವ್ರತಕ್ಕೆ ಮೆಚ್ಚಿದ ಪ್ರಸಂಗಗಳನ್ನು ಬಣ್ಣಿಸಿದ್ದಾರೆ.ದಕ್ಷಬ್ರಹ್ಮನ ಯಜ್ಞದ ಪ್ರಸಂಗ, ಗಿರಿಜೆಯ ಅವತಾರ, ಗಿರಿಜಕಲ್ಯಾಣದವಿಚಾರತಾರಕಾರನ ಸಂಹಾರ  ಮುಂತಾದ ಪ್ರಸಂಗಗಳನ್ನು ಹೇಳುತ್ತ ,ಅವರಂತೆ ನನ್ನಮೇಲೂ ಕರುಣೆತೋರು,ಪಾರಮಾರ್ಥ ಪತತೋರಿಸೆಂದು ಬೇಡಿಕೂಳ್ಳುತ್ತಾರೆ. ವಿಠಲಶತಾಷ್ಟಕ-;ವಿಠಲಾಷ್ಟಕವು ಕುಡಾ ಒಂದು ನುರಾಎಂಟು ನುಡಿಯ ಅಷ್ಟಕ.ಇದರಲ್ಲಿ ಒಂದೊAದು ನುಡಿಯಲ್ಲಿ ಮೂರುಚರಣಗಳಿವೆ. ಎರಡನೆಯ ಚರಣದಲ್ಲಿ ಪ್ರೇಮ, ಮೂರನೆಯ ಚರಣದಲ್ಲಿ ಜಯಜಯವಿಠಲನಾಮ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ದಶಾವತಾರದ ವಿಚಾರಗಳು, ಭಾಗವತದ ಪ್ರಸಂಗಗಳು ಬರುತ್ತವೆ.ಈ ಅಷ್ಟಕದ ವಿಶೇಷವೆಂದರೆ ಕನಕದಾಸ, ಪುರಂದರದಾಸ, ವಿಜಯದಾಸ, ಗೋಪಾಲದಾಸ, ಶ್ರೀರಾಘವೇಂದ್ರ ಗುರುಗಳ, ಪುಂಡರೀಕ, ಸಂತ ತುಕಾರಾಮರ ವಿಚಾರಗಳು ಬಂದಿರುವುದು.                                                 ರಾಮದಾಸರ ಈ ಅಷ್ಟಕಗಳು,ಕೀರ್ತನೆಗಳು ಭಗವಂತನ ಲೀಲೆಗಳನ್ನು ಹೇಳುವುದರ ಜೂತೆಗೆ ರಾಮದಾಸರ ಅಧ್ಯಯನಶೀಲತೆಯನ್ನು ಕವಿತ್ವ ಶಕ್ತಿಯನ್ನು ಸೂಚಿಸಿತ್ತವೆ.ಸಂಪ್ರದಾಯಕವಾಗಿ ಭಜನೆಮಾಡುವ ಭಕ್ತರಿಗೆ ಸಾಧನಕಲ್ಪಗಳಾಗಿವೆ. ಉಪಮೆ, ದೃಷ್ಟಾಂತ, ಶ್ಲೇಷಾಲಂಕಾರಗಳು,ಪ್ರಾಸಾನುಪ್ರಾಸಗಳು ನಾದ-ಲಯಗಳಗೆ ಪೂರಕವಾಗಿಬಂದಿವೆ.            ಇನ್ನು ಇವರು ಏಳುನೂರಕ್ಕೂ ಅಧಿಕ ಕೀರ್ತನೆಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಗಣಪತಿ,ಪಾರ್ವತಿ,ಶಿವ,ವಾಯುದೇವರು ಭಾರತಿ ಸರಸ್ವತಿ ಮತ್ತು ತಾರತಮ್ಯೋಕ್ತವಾಗಿ ಎಲ್ಲಾ ದೇವತೆಗಳ ಸ್ತೋತ್ರವನ್ನು ಕಾಣುತ್ತೇವೆ,`ಪಾದಕಂಡು ಪಾವನಾದೆನೋ ಶ್ರೀಗಿರಿನಿಲಯನ ಪಾದಕಂಡು ಪಾವನಾದೆನೋ’ ಎಂಬಕೀರ್ತನೆ ಭಕ್ತವೃಂದದಲ್ಲಿ ಬಹು ಜನಜನಿತವಗಿದೆ,ತಿರುಪತಿ ವೆಂಟರಮಣನವೈಭವ ವೈಭವವನ್ನು ಸುಂದರವಾಗಿ ಬಣ್ಣಿಸಿದ್ದಾರೆ. ಮಾದವತೀರ್ಥರ ಮತ್ತು ರಾಘವೇಂದ್ರತೀರ್ಥರ ಕುರಿತು ಕೀರ್ತನೆಗಳನ್ನು ರಚಿಸಿದ್ದಾರೆ.ಇವರು ಉಡಪಿ,ಪಂಢರಾಪುರ, ಕೊಲ್ಲಾಪುರ,ಕಾಶಿ,ತಿರುಪತಿ ರಾಮೇಶ್ವರ ಮಂತ್ರಾಲಯ, ಬುದ್ದಿನ್ನಿ ಮುಂತಾದ ಕ್ಷೇತ್ರಗಳನ್ನು ಸಂದರ್ಶೀಸಿದ್ದಾರೆ ಸಾಮಾಜಿಕ ಕಳಕಳಿಉಳ್ಳಕೀರ್ತನೆಗಳನ್ನು ರಚಿಸಿದ್ದಾರೆ. ಕನ್ನಡ ಉರ್ದಮಿಶ್ರಿತ ಭಾಷೆಯನ್ನು ಬಳಸಿದ್ದಾರೆ. ಭಾಷಿಕವಾಗಿ ಅಧ್ಯಯನ ಮಾಡುವವರಿಗೆ ಇವರ ಕೀರ್ತನೆಗಳು ಆಕ಼ರ್ಷಸಕವಾಗಿವೆ. ಇವರು ತಮ್ಮ ಜೀವನಾವದಿಯಲ್ಲಿ ಸಜ್ಜನರೊಂದಿಗೆ ಜೀವಿಸಿ,ಸುಸಂಸ್ಕರತ ವಿಚಾರಗಳನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಧಾರೆ ಎರೆದು ಜೀವನ ಸಾರ್ಥಕಮಾಡಿಕೊಂಡಿದ್ದಾರೆ. ಇವರ ಜೀವನ ಸಾಧನೆ ಭಾರತೀಯರಿಗೆ ಅದರಣೀಯ ಮತ್ತು ಅನುಕರಣೀಯವಾಗಿದೆ. ಇವರು ಮಾರ್ಗಶಿರ ಬಹುಳ ದಶಮಿಯಂದು ದೈವಾಧೀನವಾಗುತ್ತಾರೆ. ಇವರ ಆರಾಧನೆಯನ್ನು ಗೋನವಾರ ಮತ್ತು ಲಿಂಗದಳ್ಳಿಯಲ್ಲಿ ಆಚರಿಸಲಾಗುತ್ತದೆ. ಲಿಂಗದಳ್ಳಿಯಲ್ಲಿ ಹವನ ಹೋಮಗಳೊಂದಿಗೆ ಪ್ರವಚನ, ದಾಸವಾಣಿ,ಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ರಾಮಾಂಕಿತ ರಾಮದಾಸರು ಎಂಬ ವಾಟ್ಸಪ್ ಗ್ರೂಪಿನ ಮುಖಾಂತರ ರಾಮದಾಸರ ಕೀರ್ತನೆಗಳ ಅರ್ಥವಿಶ್ಲೇಷ಼£ಣೆ,ಹಾಡುಗಾರಿಕೆಯಂತಹ ಚಟುವಟಿಕೆಯನ್ನು ಶ್ರೀಕೃಷ್ಟಾಚಾರ ಗುಡುಗುಂಟಿಯವರು ಹಮ್ಮಿಕೊಳ್ಳುತ್ತಾ ರಾಮದಾಸರ ಸಾಹಿತ್ಯದ ವಿಶೇಷತೆಯನ್ನು ಜನರಿಗೆ ತಲುಪಿಸುತ್ತಿದ್ದಾರೆ.            ಇವರ ಕುರಿತಾಗಿ ಡಾ.ಸ್ವಾಮಿರಾವ ಕುಲಕರ್ಣಯವರು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.ಇವರ ಕೀರ್ತನೆಗಳನ್ನು ಡಾ.ಟಿ.ಎನ್ ನಾಗರತ್ನಾ,ಪ್ರಸಾರಾಂಗ ,ಮೈ¸ಸೂರು ವಿಶ್ವವಿದ್ಯಾಲಯದಿಂದ ಪ್ರಕಟೆಸಿದ್ದಾರೆ. ಆನಂತರ ಕನ್ನಡಮತ್ತು ಸಂಸ್ರೃತಿ ಇಲಾಖೆ ಬೆಂಗಳೂರು,ಕರ್ನಾಟಕ ಸರಕಾರದಿಂದ ಪ್ರಕಟಸಲಾಗಿದೆ. ಇವರ ಕೆಲ ಕೀರ್ತನೆಗಳು ಇಂಗ್ಲೀಷಿಗೂ ತರ್ಜುಮೆ ಗೊಂಡಿವೆ.ಇವರ ಸಾಹಿತ್ಯದ,ಭಾಷೆಯ,ವಿವಿಧ ಆಯಾಮದ ಕುರಿತಾಗಿ  ಕುರಿತಾಗಿ ಇನ್ನೂ ಸಂಶೋಧನೆಗಳು ಆಗಬೇಕಾಗಿದೆ. ಇಬರ ಸಾಹಿತ್ಯ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ. ಡಾ.ಶೀಲಾದಾಸ, ರಾಯಚೂರು.

ಯಾಜ್ಞವಲ್ಕö್ಯ-ಕಣ್ವ ದರ್ಶನ

                                      ಯಾಜ್ಞವಲ್ಕö್ಯರು ಭಾರತ ಕಂಡ ದಾರ್ಶನಿಕರಲ್ಲಿ ಪ್ರಮುಖರು. ಇವರು ಒಂದು ವೇದವನ್ನು, ಉಪನಿಷತ್ತನ್ನು, ಬ್ರಾಹ್ಮಣಕವನ್ನು ಸ್ಮೃತಿಯನ್ನು ನಾಡಿಗೆ ನೀಡಿದ ಮಹಾಜ್ಷಾನಿಗಳು.ಸಾವಿರಾರು ವರ್ಷಗಳು ಕಳೆದರೂ ಇವರು ಪ್ರಸ್ತಾಪಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂಬುದನ್ನು ಗಮನಿಸಬೇಕು. ಯಾಜ್ಞವಲ್ಕö್ಯರ ಕುರಿತು ಅನೇಕ ಸಂಶೋಧನೆಗಳು ದೇಶ ಮತ್ತು ವಿದೇಶದಲ್ಲಿ ಇಂದಿಗೂ ನಡೆಯುತ್ತಿವೆ. ಅವರವರ ಉದ್ದೇಶಕ್ಕನುಗುಣವಾಗಿ ಅವರ ವಿಚಾರಗಳ ಚಿಂತನ ಮತ್ತು ಮಂಥನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಅವರ ಪರಂಪರೆಯಲ್ಲಿ ಬರುವ ಕಣ್ವ ಋಷಿಗಳೂ ಸಹ ಪ್ರಾತಃಸ್ಮರಣೀಯರು. ಇವರ ಕುರಿತಾದ ಗ್ರಂಥವೆ “ಯಾಜ್ಞವಲ್ಕö್ಯ-ಕಣ್ವ ದರ್ಶನ”          ಈ ಕೃತಿಯ ಲೇಖಕರು,ಪ್ರಕಾಶಕರು ಮತ್ತು ಸಂಪಾದಕರು ಶ್ರೀಸತ್ಯನಾರಾಯಣ ಮುಜಮದಾರ ಗುಡುಗುಂಟಿ,ರಾಯಚೂರು. ಪ್ರಾಯೋಜಕರು ಶ್ರೀ.ಎಸ್. ನಾಗರಾಜ,ಅಧ್ಯಕ್ಷರು ಶ್ರೀಯೋಗೀಶ್ವರ ಯಾಜ್ಞವಲ್ಕಾö್ಯ ಟ್ರಷ್ಟ(ರಿ) ಶ್ರೀಕ್ಷೇತ್ರ ಹಿರಣ್ಯಪಲ್ಲಿ, ಕೋನಕುಂಟ್ಲ ತಾ. ಚಿಂತಾಮಣಿ. ಜಿ.ಚಿಕ್ಕಬಳ್ಳಾಪುರ. ಈ ಕೃತಿಗೆ ಹಿರಿಯ ಸಾಹಿತಿಗಳಾದ ವಿ.ಎಸ್. ಕಾಂತನವರ ಮುನ್ನುಡಿ ಬರೆದಿದ್ದಾರೆ. ಈ ಕೃತಿಯನ್ನು ನಾಲ್ಕು ಭಾಗವಾಗಿ ನೋಡಬೇಕು. ಯಾಕೆಂದರೆ ಲೇಖಕರೊಂದಿಗೆ ಶ್ರೀಬಿಂದುಮಾಧವ ಕನಸಾವಿ, ಡಾ.ವಸಂತಲಕ್ಷಿö್ಮ.ಕೆ ಮತ್ತು ಶ್ರೀಸುಭಾಶ ಕಾಕ್ ಯು,ಎಸ್. ಎ.ಇವರ ಲೇಖನಗಳೂ ಸಂಗ್ರಹಿತವಾಗಿವೆ. ಇವರ ಲೇಖನಗಳೂ ಯಾಜ್ಞವಲ್ಕö್ಯರ ಕುರಿತಾಗಿವೆ.           ಈ ಕೃತಿಯಲ್ಲಿ ಸತ್ಯನಾರಾಯಣಮುಜಮದಾರ ಅವರು ೫೭ ಬಿಡಿ ಬರಹಗಳನ್ನು ಸಂಗ್ರಹಿಸಿದ್ದಾರೆ. ತಾವು ಆಯಾ ಸ್ಥಳಗಳಿಗೆ ಸಂದರ್ಶಿಸಿ ಖಚಿತ ಮಾಹಿತಿಯನ್ನು ಛಾಯಾ ಚಿತ್ರಗಳ ಮೂಲಕ ನೀಡಿದ್ದಾರೆ. ಭಾರತದಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಿ ಸಂಶೋದಕರಿಗೆ, ಪ್ರವಾಸಿಗರಿಗೆ, ಹವ್ಯಾಸಿಗಳಿಗೆ ಮಾರ್ಗಸೂಚಿ ಸಿದ್ಧಪಡಿಸಿದ್ದಾರೆ.          ಮೊದಲಿಗೆ ಯಾಜ್ಞವಲ್ಕö್ಯರ ಕುರಿತಾದ ಕೆಲವು ಬರಹಗಳನ್ನು ಅವಲೋಕಿಸೋಣ.ಜೈನ ಮತದ ಋಷಿಭಾಷಿತ ಸೂತ್ರದಲ್ಲಿ ಯಾಜ್ಞವಲ್ಕö್ಯರನ್ನು ಜಣ್ಣವಕ್ಕ ಎಂದು ಕರೆಯಲಾಗಿದೆ. ಇಲ್ಲಿ ಇವರ ಜೀವನ ಮತ್ತು ಸಾಧನೆಯ ಕುರಿತು ವಿವರಿಸಲಾಗಿದೆ. ಪ್ರತ್ಯೇಕ ಬುದ್ಧರಲ್ಲಿ ಇವರನ್ನು ಉಲ್ಲೇಖಿಸಲಾಗಿದೆ. ಅಂದರೆ ಜೀವಂತವಿದ್ದಾಗಲೇ ಮೋಕ್ಷ ಪಡೆಯುವವರು ಎಂದು ಅರ್ಥ. ಇನ್ನು ಅವರೇ ರಚಿಸಿದ ಶತಪಥ ಬ್ರಾಹ್ಮಣ, ಬೃಹದಾರಣ್ಯ ಮುಂತಾದ ಗ್ರಂಥದಲ್ಲಿ ಅವರ ಕುರಿತಾಗಿ ವಿಚಾರಗಳು ತಿಳಿದು ಬರುತ್ತವೆ. ಸಹಜಮಾರ್ಗ ಸಂಸ್ಥಾಪಕರಾದ ಶ್ರೀರಾಮಚಂದ್ರಜಿ ಮಹರಾಜರವರು ತಮ್ಮ ಆತ್ಮಕಥೆಯಲ್ಲಿ“ ದಶರಥರಾಜನಿಗಿಂತ  ೭೨ ತಲೆಮಾರ ಮೊದಲು ಯಾಜ್ಞವಲ್ಕö್ಯರ ಅಂತಃಸಲ್ಲಾಪದ ಪದ್ಧತಿ ಪ್ರಚಲಿತವಗಿತ್ತೆಂದು ತಿಳಿಸುತ್ತಾರೆ.ಯಾಜ್ಞವಲ್ಕö್ಯರು ಮಹಾರಾಷ್ಟçದ ಲೋನಾರ ಸರೋವರದ ದಂಡೆಯ ಮೇಲೆ ಶಿಷ್ಯರಿಗೋಸ್ಕರ ಶಿವನನ್ನು ಕುರಿತು ತಪಸ್ಸುಮಾಡಿದರಂತೆ.ಅದರ ಸ್ಮರಣಾರ್ಥವಾಗಿ ಇಲ್ಲಿ ಯಾಜ್ಞವಲ್ಕೆö್ಯÃಶ್ವರ ದೇವಸ್ಥಾನವಿದೆ. ವಾರಣಾಸಿಯ ಗಂಗಾ ತಟದಲ್ಲಿ ಲೋಲಾರ್ಕ ಕ್ಷೇತ್ರದಲ್ಲಿ ಸೂರ್ಯದೇವನ ಆಜ್ಞೆಯಂತೆ ಸರಸ್ವತಿಯ ಸ್ಮರಣೆ ಮಾಡಿ ಸರಸ್ವತಿಯ ಸ್ತುತಿಯನ್ನು ರಚಿಸಿದ್ದಾರೆ. ಅದ್ದರಿಂದ ಇದನ್ನು ಆದಿತ್ಯ ಕ್ಷೇತ್ರವೆಂದು ಕರೆಯುತ್ತಾರೆ. ವಡೋದರಾ ಹತ್ತಿರದ ಕಾಯೋವರೋಹಣದಲ್ಲಿ ಯಾಜ್ಷವಲ್ಕö್ಯರು ತಪಸ್ಸು ಮಾಡಿದ ಶಿವಮಂದಿರವಿದೆ. ನೆಲಮಂಗಲದ ಆಲನಹಳ್ಳಿಯಲ್ಲಿ ಯಾಜ್ಞವಲ್ಕö್ಯರು ಧ್ಯಾನಸ್ಥರಾದಾಗ ರಂಗನಾಥಸ್ವಾಮಿ ಕಂಬದಲ್ಲಿ ದರ್ಶನವಿತ್ತ ಸ್ಥಳವಾಗಿದೆ. ಹರಿವಂಶದಲ್ಲಿ ವೈಶಂಪಾಯನರು ಭಗವಂತನ ದಶಾವತಾರದ ಕಲ್ಕಿ ಯೊಂದಿಗೆ ಯಾಜ್ಞವಲ್ಕö್ಯರು ಅವತರಿಸುತ್ತಾರೆಂಬುದನ್ನು ದಾಖಲಿಸಿದ್ದಾರೆ. ಗರ್ಗ ಸಂಹಿತೆಯಲ್ಲಿ ಮಕ್ಕಳಿಲ್ಲದ ವಿಮಲರಾಜನಿಗೆ ಕೃಷ್ಣನ ಜನ್ಮ ವೃತ್ತಾಂತವನ್ನು ತಿಳಿಸುವ ವಿಚಾರ ದಾಖಲಾಗಿದೆ.ಸ್ವಾಮಿನಾರಾಯಣ ಮಹರಾಜರು ಇವರು ಅನೇಕ ಗ್ರಂಥÀಗಳನ್ನು ರಚಿಸಿದರು. ಅದರಲ್ಲಿ ತಮಗೆ ಎಂಟು ಶಾಸ್ತçಗ್ರಂಥಗಳು ಇಷ್ಟ. ಅದರಲ್ಲಿ ಯಾಜ್ಞವಲ್ಕö್ಯಸ್ಮೃತಿ ಇಷ್ಟವೆಂದು ಪ್ರಸ್ತಾಪಿಸುತ್ತಾರೆ.ಯಾಜ್ಞವಲ್ಕö್ಯರು ಪ್ರತಿಪಾದಿಸಿದ ಸೂರ್ಯಕೇಂದ್ರಿತ ಸಿದ್ಧಾಂತವನ್ನು ನಿರೂಪಿಸಿದ್ದಾರೆ. ಯಾಜ್ಞವಲ್ಕö್ಯ ಅವರ್ತಕ ಚಕ್ರ ಎಂಬ ಲೇಖನ ಸೌರ ಮತ್ತು ಚಂದ್ರಮAಡಲಗಳ ಸಮನ್ವಯಿಸುವ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಇದು ಭಾರತೀಯರು ಕ್ಯಾಲೆಂಡರ್ ರಚಿಸುವಲ್ಲಿ ಸಹಾಯಕವಾಗಿದೆ. ಅಧಿಕಮಾಸದ ವಿವರವು ಇಲ್ಲಿ ಉಲ್ಲೆಖವಾಗಿದೆ. ಶ್ರೀರಾಮಾನುಜ ಸಂಪ್ರದಾಯದಲ್ಲಿ ಬರುವ ೧೨ ಜನ ಆಳ್ವಾರರಲ್ಲಿ ೭ನೆಯವರಾದ ಶ್ರೀಕುಲಶೇಖರ ಆಳ್ವಾರರು ರಚಿಸಿದ ಮುಕುಂದಮಾಲಾ ಸ್ತುತಿಯಲ್ಲಿ ಯಾಜ್ಞವಲ್ಕö್ಯರ ಉಲ್ಲೇಖವಿದೆ. ಇದರಲ್ಲಿ ರೋಗನಿವಾರಣೆಗಾಗಿ ಕೃಷ್ಣನೆಂಬ ನಾಮಸುಧಾರಸವನ್ನು ಪಾನಮಾಡಿ ಎಂದು ತಿಳಿಸುತ್ತಾರೆ, ಯಾಜ್ಞವಲ್ಕö್ಯರಿಗೆ ಸಂಬAಧಿಸಿದ ಸ್ಥಳ, ಶುಕ್ಲಯಜುವೇದ, ಆರಾಧ್ಯದೈವವಾದ ಸೂರ್ಯನಾರಾಯಣನ ದೇವಸ್ಥಾನಗಳು, ಯಾಜ್ಙವಲ್ಕö್ಯರ ಕುರಿತಾದ ಗ್ರಂಥಗಳು, ತಪಸ್ಸು ಮಾಡಿದ ಸ್ಥಳ ,ಗೋತ್ರಗಳ ವಿಚಾರ, ಬೇರೆಬೇರೆ ರಾಜ್ಯಗಳಲ್ಲಿ ಶುಕ್ಲಯಜುರ್ವೇದಿಗಳು ಗುರುತಿಸಿಕೊಳ್ಳುವ ಹೆಸರು ಹೀಗೆ ಅನೇಕ ದಾಖಲೆಗಳನ್ನು ನೀಡುತ್ತಾರೆ.        ೨) ಇನ್ನು ಸುಭಾಶ ಕಾಕ್ ಯು.ಎಸ.ಎ ಅವರು ಯಾಜ್ಞವಲ್ಕö್ಯರ ಕುರಿತು ಸಂಶೋಧನಾತ್ಮಕ ಲೇಖನ ಪ್ರಕಟಿಸಿದ್ದಾರೆ. ಆಲೇಖನವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಯಾಜ್ಞವಲ್ಜö್ಯರು ಮತ್ತು ಪುರಾಣಗಳಲ್ಲಿಯ ವಿಶ್ವವಿಜ್ಞಾನದ ಕುರಿತು ಸಂಶೋಧನಾತ್ಮಕ ಲೇಖನ ಬರೆದಿದ್ದಾರೆ.ಬೃಹದಾರಣ್ಯ ಮತ್ತು ಶಥಪಥ ಬ್ರಾಹ್ಮಣಕದಲ್ಲಿಯ ಬ್ರಹ್ಮಾಂಡದ ರಚನೆ, ಅವುಗಳ ಸ್ವರೂಪ ಮುಂತಾದ ವಿಚಾರಗಳ ಕುರಿತು ಚರ್ಚಿಸಲಾಗಿದೆ.ಭೂಮಿಗೂ ಇತರ ಗ್ರಹಗಳಿಗೆ ಇರುವ ದೂರ, ಮಹರ್ಲೋಕ,ಜನಲಫಕ,ತಪೋಲೋಕ,,ತಪೋಲೋಕದಿಂದ ಸತ್ಸಲೋಕದ ದೂರದ ವಿವರಗಳು ಮೂಡಿಬಂದಿವೆ. ಇದರಿಂದ ಯಾಜ್ಞವಲ್ಕö್ಯರ ವ್ಯಕ್ತಿತ್ವದ ಪರಿಚಯ ಆಗುತ್ತದೆ.          ೩) ಇನ್ನು ಡಾ,ವಸಂತಲಕ್ಷಿö್ಮ ಕೆ. ಅವರ “ಪ್ರಾಚೀನ ಕರ್ನಾಟಕದಶಾಸನೋಕ್ತ ವಾಜಿವಂಶÀದ ಬ್ರಾಹ್ಮಣರು’’ ಎಂಬ ಲೆಖನವನ್ನು ಸಂಗ್ರಹಿಸಲಾಗಿದೆ.ಈ ಲೇಖನವು ಯಾಜ್ಞವಲ್ಕö್ಯರ ಪರಂಪರೆಯಲ್ಲಿ ಬರುವ ವಾಜಿವಂಶದವರ ಕುರಿತಾದ ಶಾಸನಗಳನ್ನು ಉಲ್ಲೇಖಿಸಿ ಕರ್ನಾಟಕದಲ್ಲಿ  ೫ ನೇ ಶತಮಾನದಿಂದ ವಾಸವಾದ ಮನೆತನ ಇದಾಗಿದ್ದು, ಈ ಮನೆತನದವರು ವೇದಪಾರಂಗತರು ಶೂರರೂ ಆಗಿದ್ದರು, ಪ್ರತಿಷ್ಟಿತ ವಂಶಶ್ಥರಾಗಿದ್ದರು ಎಂದು ತಿಳಿಸುತ್ತಾರೆ.   ೪).ಇನ್ನು ಬಿಂದುಮಾಧವ ಕನಸಾವಿಯವರು ರಚಿಸಿದ ೧೨ ಕಿರು ಲೆಕನಗಳನ್ನು ಇಲ್ಲಿ ಚಿತ್ರ ಸಹಿತ ಪ್ರಕಟಿಸಲಾಗಿದೆ. ಭಾರತದ ಉತ್ತರ ಭಾಗದಲ್ಲಿ ಅನೇಕ ತಪೋ ಭೂಮಿಗಳು ಕರ್ಮಭೂಮಿಗಳು ಸಿಗುತ್ತವೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ. ರಾಜಾಸ್ಥಾನದ ಜಾಗೇರಿಧಾಮ.ಇಲ್ಲಿ ಯಾಜ್ಞವಲ್ಕö್ಯರು ಯಜ್ಞ ಮಾಡಿದ ಕುಂಡಗಳನ್ನು ರಕ್ಷಿಸಲಾಗಿದೆ. ಶಿವನ ದೇವಾಲಯವಿದೆ. ಪ್ರತಿವ಼ರ್ಷ ಇಲ್ಲಿ ಜಾತ್ರೆ ನಡೆಯುತ್ತದೆ.ಬಿಹಾರದ ಗಯಾ ಕ್ಷೇತ್ರದ ಬಳಿ ನಾವಾದ ಜಿಲ್ಲೆಯ ರಾಜೌಲಿ ಎಂಬಲ್ಲಿ ಲೋಮಶ ಮತ್ತು ಯಾಜ್ಞವಲ್ಕö್ಯರ ಗುಹೆ ಇದೆ. ಇಲ್ಲಿಯ ಜನ ಭಕ್ತಿಯಿಂದ ಋಷಿಗಳನ್ನು ಆರಾದಿಸುತ್ತಾರೆ. ಉತ್ತರ ಪ್ರದೇಶÀದಕನೌಜ ಜಿಲ್ಲೆಯ ಗಂಗಾ ತಟದಲ್ಲಿ ಯಾಜ್ಞವಲ್ಕö್ಯ ಆಶ್ರಮವಿದೆ, ಜನರು ಆಡು ಭಾಷೆಯಲ್ಲಿ ಯಾಜ್ಞಬಲ್ಕಿ ಎಂದು ಕರೆಯುತ್ತಾರೆ.ಶ್ರೀಯಾಜ್ಞವಲ್ಕö್ಯರಿಂದ ಪ್ರಯಾಗರಾಜದಲ್ಲಿ ಸ್ಥಾಪಿತವಾದ ಶ್ರೀಕಲ್ಯಾಣಿದೇವಿ ಮಂದಿರವಿದೆ. ಯಾಜ್ಞವಲ್ಕö್ಯರು ತಪಸ್ಸನ್ನು ಆಚರಿಸಿದ ಶಕ್ತಿ ದೇವತೆಯಂದರೆ ಉಚ್ಚೃತ ದುರ್ಗಭಗವತಿ. ಇಲ್ಲಿಯೇ ಮಹಾಕವಿ ಕಾಳಿದಾಸ ದೇವಿಯ ಅನುಗ್ರಹ ಪಡೆದುಕೊಂಡದ್ದು. ಇದು ಜಗವನ ಕ್ಷೇತ್ರದಿಂದ ೩೫ ಕಿಲೋಮೀಟರ್ ಹತ್ತಿರವಿದೆ. ವ್ಯಾಸರು ರಚಿಸಿದ ಭವಿಷ್ಯ ಪುರಾಣದ ಬ್ರಹ್ಮ ಪರ್ವದಲ್ಲಿ ಬ್ರಹ್ಮ ಹಾಗು ಯಾಜ್ಞವಲ್ಕö್ಯರ ಉಲ್ಲೇಖ ಬರುತ್ತದೆ, ಈ ಸಂವಾದವನ್ನು ಕೃಷ್ಣ ತನ್ನ ಮಗನಿಗೆ ತಿಳಿಸಿದನಂತೆ. ಇಲ್ಲಿ ಬಿಹಾರದ ಜಗದಿಶಪುರದಲ್ಲಿ ಯಾಜ್ಞವಲ್ಕö್ಯರು ತಪಸ್ಸನ್ನು ಆಚರಿಸಿದ ಸ್ಥಳವಿದೆ, ಬ್ರಹ್ಮರು ಯಾಜ್ಞವಲ್ಕö್ಯರಿಗೆ ಸೂರ್ಯೋಪಾಸನೆ ಮಾಡುವ ವಿಧಾನವನ್ನು ತಿಳಿಸಿದ್ದಾರೆ. ಬಿಹಾರದ ಜಗದೀಶÀಪುರದಲ್ಲಿ ಶಿವನ ದೇವಸ್ಥಾನವಿದೆ. ಶ್ರೀಕೃಷ್ಣನು ಯಾಜ್ಞವಲ್ಕö್ಯರ ಆಣತಿಯಂತೆ ತಪಸ್ಸುಮಾಡಿ ಬಾಣಾಸುರನ ಸಂಹಾರಮಾಡಿದನAತೆ.ಇಲ್ಲಿ ಅಶ್ವತ್ಥ ವೃಕ್ಷವಿದ್ದು ಯಾಜ್ಞವಲ್ಕರ ತಪೋಭೂಮಿ ಎಂದು ಪ್ರಸಿದ್ಧವಾಗಿದೆ. ತಮಿಳುನಾಡಿನ ಕೋಟೇಶ್ವರ ದೇವಾಲಯವು ಯಾಜ್ಞವಲ್ಕö್ಯರ ಗುರುಸೇವೆಗೆ ಸಂದ ಗೌರವವಾಗಿದೆ. ಸೂರ್ಯನಿಗೆ ದೋಷಬಂದಾಗ ಶಿವನ ದೇವಾಲಯದಲ್ಲಿ ಪ್ರದೋಶವ್ರತವನ್ನು ಮಾಡಿ ದೋಷ ಪರಿಹಾರ ಮಾಡಿದನಂತೆ.ಕರ್ನಾಟಕದ ಪಟ್ಟದಕಲ್ಲು ದೇವಾಲಯದಲ್ಲಿ ಯಾಜ್ಞವಲ್ಕö್ಯರ ಕೆತ್ತನೆ ಇದೆ. ಸಪ್ತಾಶ್ವ ಉಳ್ಳ ಸೂರ್ಯನಾರಾಯಣ ಮತ್ತು ಯಾಜ್ಞವಲ್ಕö್ಯರು ವೇದ ಕಲಿಯುವ ರೀತಿಯಲ್ಲಿ ಕೆತ್ತಲಾಗಿದೆ. ಹೀಗೆ ನಾಲ್ಕುಜನ ವಿದ್ವಾಂಸರು ಯಾಜ್ಷವಲ್ಕö್ಯರ ವ್ಯಕ್ತಿತ್ವಕ್ಕೆ ಚರಿತ್ರೆಗೆ ಸಂಬAದ ಪಟ್ಟ ಅಪರೂಪದ ಮಾಹಿತಿಯನ್ನು ದಾಖಲಿಸಿದ್ದಾರೆ.            ಇನ್ನು ಕಣ್ವಋಷಿಗಳ ಕುರಿತಾದ ವಿಚಾರಗಳನ್ನು ಗಮನಿಸೋಣ. ಕಣ್ವರು ಯಾಜ್ಞವಲ್ಕö್ಯರ ಶಿಷ್ಯರು. ಇವರ ಚರಿತ್ರೆ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ. ಕರ್ನಾಟಕ ಮತ್ತು ಭಾರತದ ಇತರ ಪ್ರದೇಶಗಳಲ್ಲಿ ಕಣ್ವರ ನೆಲೆಗಳು ಕಂಡು ಬರುತ್ತವೆ. ಉತ್ತರಖಾಂಡಾದ ಕೋಟದ್ವಾರವನ್ನು ಕಣ್ವನಗರಿ ಎಂದು ಸರಕಾರ ಮರು ನಾಮಕರಣ ಮಾಡಿದ್ದಾರೆ. ಇದು ಭರತನ ಜನ್ಮಸ್ಥಳ ಕಣ್ವಾಶ್ರಮವಾಗಿದೆ.ಕೊರನಗೆರೆ ಚನ್ನರಾಯನ ಪಟ್ಟಣ, ರಾಮನಗರ ಜಿಲ್ಲೆಯಲ್ಲಿ ನರಸಿಂಹ ಕ್ಷೇತ್ರವಿದೆ. ಇಲ್ಲಿ ಕಣ್ವರು ತಪಸ್ಸುಮಾಡಿರುವುದು ತಿಳಿದು ಬರುತ್ತದೆ. ಮಾಗಡಿ ಜಿಲ್ಲಾ ರಾಮನಗರದಲ್ಲಿ ರಂಗನಾಥಸ್ವಾಮಿಯ ದೇವಸ್ಥಾನದ ಎದುರಿಗೆ ಪುಷ್ಕರಣಿ ಇದೆ ಇದಕ್ಕೆ ಕಣ್ವತೀರ್ಥ ಎಂದು ಕರೆಯಲಾಗುತ್ತದೆ. ಮೈಸೂರಿನ ಹೆದ್ದಾರೆಯ ಚನ್ನರಾಯಪಟ್ಟಣದ ಹತ್ತಿರ ಕಣ್ವ ಜಲಾಶಯವಿದೆ.ರಾಜಸ್ಥಾನದ ಕೋಟಾದ ಕನ್ಸುವಾಧಾಮದಲ್ಲಿ ಕಣ್ವ ಋಷಿಗಳು ತಪ್ಪಸ್ಸನ್ನು ಆಚರಿಸಿದ್ದಾರೆ. ಉತ್ತರ ಪ್ರದೇಶದ ಗಾಜೀಪುರ ಜಿಲ್ಲೆಯಲ್ಲಿ, ಮದ್ಯಪ್ರದೇಶದ ಬದನಾವರ ತಹಸೀಲ ಜಿಲ್ಲಾ ಧಾರಾದಲ್ಲಿ, ಡೆಂಕನಿಕೋಟೈ ಕರಷ್ಣಗಿರಿ ಜಿಲ್ಲೆ ತಮಿಳುನಾಡಿನಲ್ಲಿ ಕಣ್ವರ ಅಶ್ರಮವಿದೆ. ಕಣ್ವರ ಮಕ್ಕಳಾದ ಮೇಧಾತಿದಿ ಎಂಬುವವರು ಅಸ್ತಿಸಂಧಾನ ಮಂತ್ರ ರಚಿಸಿದ್ದಾರೆ. ಅದನ್ನು ಪಠಿಸಿದರೆ. ಅಸ್ತಿದೋಷಗಳು ನಿವಾರಣೆಯಾಗುತ್ತವೆ.ಪ್ರಸ್ಕನ್ವ ಎಂಬುವವರು ಕಾಣ್ವರ ಮಗನಾಗಿದ್ದು ಇವರು ಮಂತ್ರದೃಷ್ಟಾರ ಋಷಿಯಂದು ಗುರುತಿಸಿಕೊಂಡಿದ್ದಾರೆ. ವೇದಶಾಖೆಯಲ್ಲಿಯ ಸಂಪ್ರದಾಯಗಳ ಭಿನ್ನತೆ,  ಕಣ್ವ ಬ್ರಾಹ್ಮಣರ ಮಹತ್ವ ಮುಂತಾದ ಅನೇಕ ವಿಚಾರಗಳು ಇಲ್ಲಿ ದಾಖಲಾಗಿವೆ.            ಈ ಕೃತಿಯನ್ನು ಪ್ರವೇಶ ಮಾಡಲಗಿ ಸನಾತನ ಸಂಸ್ಕರತಿಯ ದರ್ಶನವಾಗುತ್ತಾ ಹೋಗುತ್ತದೆ, ಋಷಿಗಳು ಸಾಧುಸಂತರು ಸಾಧನೆ ಮಾಡಿದ ವಿಚಾರ ಅವುಗಳ ಮಹತ್ವ , ಅವುಗಳ ಇಂದಿನ ದಿನದ ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ, ಒಟ್ಟಿನಲ್ಲಿ ಈ ಕಾಲದ ಹೊಸ ಮದರಿಯ ಗ್ರಂಥÀವಾಗಿದೆ, ಡಾ.ಶೀಲಾದಾಸ, ರಾಯಚೂರು.

ಅಂತರAಗದಿ ಬ್ರಹ್ಮಾನಂದನಾಗಿ ನೀನಿರಲು

                ( ವ್ಯಾಸರಾಜರು ವಿರಚಿತ ಸುಳಾದಿ- ವಿಶ್ಲೇಷಣೆ)                 “ವ್ಯಾಸರಾಯರ ಚರಣಕಮಲ ದರ್ಶನವೆ ನನ                 ಗೇಸು ಜನ್ಮದ ಸುಕೃತಫಲದೊರಕಿತೋ ಎನ್ನ                 ಸಾಸಿರ ಕುಲಕೋಟಿ ಪಾವನ್ನವಾಯಿತು”       ಎಂದು ಪುರಂದರದಾಸರು ತಮ್ಮ ಸಾಕ್ಷಾತ ಗುರುಗಳನ್ನು ಭಕ್ತಿಪೂರ್ವಕವಾಗಿ ಕೊಂಡಾಡಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹರಿದಾಸ ಸಾಹಿತ್ಯವು ಜನಪರವಾದ ಸಾಹಿತ್ಯವಾಗಿದೆ. ಇದಕ್ಕೆ ನರಹರಿತೀರ್ಥರಂತೆ, ಶ್ರೀಪಾದರಾಜರಂತೆ ವ್ಯಾಸರಾಜರ ಕೊಡುಗೆ ಅನುಪಮವಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಗುರುವಾಗಿ ದಾಸಸಾಹಿತ್ಯದ ಸಂಪಾದನೆ, ಪ್ರಕಟಣೆ ಒಂದು ಕಡೆಯಾದರೆ ಪುರಂದರದಾಸರು, ಕನಕದಾಸರು, ವಾದಿರಾಜರು, ವಿಜಯೀಂದ್ರರAತಹ ಶಿಷ್ಯರನ್ನು ರೂಪಿಸಿದ್ದೂ ಇನ್ನೊಂದು ವಿಶೇಷವಾಗಿದೆ. ಇಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಅಂದೇ ಮಾಡಿ ತೋರಿಸಿದವರು ವ್ಯಾಸರಾಜರು. ಶ್ರೀಪಾದರಾಜರ ಪ್ರೀತಿಯ ಶಿಷ್ಯರು, ಇವರು ಹಾಕಿದ ದಾಸಸಾಹಿತ್ಯದ ಪರಂಪರೆಗೆ ಭದ್ರಬುನಾದಿ ಹಾಕಿದವರು.         ವ್ಯಾಸರಾಜರು ಶ್ರೀಪಾದರಾಜರಂತೆ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದವರು. ಇವರ ಕುರಿತಾಗಿ ಅವರ ಸಮಕಾಲೀನರಾದ ಸೋಮನಾಥಕವಿಯ `ವ್ಯಾಸಯೋಗಿ ಚರಿತ್ರೆ” ಹಾಗೂ ಶ್ರೀನಿವಾಸತೀರ್ಥರು ರಚಿಸಿದ `ಶ್ರೀವ್ಯಾಸನಿಲಯ” ಎಂಬ ಕೃತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಮತ್ತು ಅವರ ಶಿಷ್ಯರಿಂದ ಸಂಗ್ರಹಿಸಲಾಗಿದೆ. ಅದರಂತೆ ಸಂಗೀತ ಶಾಸ್ತçಜ್ಞರಾದ ತುಳಜಾಜಿ ಮಹರಾಜರು ಸಂಗೀತ ಸಾರಮೃತದಲ್ಲಿ`ಸಂಗೀತ ವಿದ್ಯಾ ಸಂಪ್ರದಾಯ ಪ್ರವರ್ತಕರೆಂದು ಗೌವರಿಸಿದ್ದಾರೆ.         ತಂದೆ ಬಲ್ಲಣ್ಣ, ತಾಯಿ ಲಕ್ಷಿö್ಮದೇವಿ.ಜನ್ಮಸ್ಥಳ ಬನ್ನೂರು. ಇವರು ಶ್ರೀಪಾದರಾಜರ ಶಿಷ್ಯತ್ವವಹಿಸಿ ಮಧ್ವಶಾಸ್ತçದಲ್ಲಿ ವಿದ್ವಾಂಸರಾದರು. ಶ್ರೀಕೃಷ್ಣ ಅಂಕಿತದಿAದ ಕೀರ್ತನೆ,ಸುಳಾದಿ,ಉಗಾಭೋಗ,ವೃತ್ತನಾಮ ಹಾಗೂ ಅನುಪಮವಾದ ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ.ನ್ಯಾಯಾಮೃತ,ಚಂದ್ರಿಕ,ತರ್ಕತಾAಡವಗಳಿಗೆ ವ್ಯಾಸತ್ರಯ ಎಂದು ಕರೆಯಲಾಗುತ್ತದೆ.ಹೀಗೆ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.       ಸುಳಾದಿಗಳು ವಿವರಣಾತ್ಮಕವಾಗಿರದೆ ತಾತ್ವಿಕವಾಗಿರುತ್ತದೆ. ಮೊದಲಿಗೆ ಧ್ರುವತಾಳದಿಂದ ಆರಂಭವಾಗಿ ಎರಡು ಸಾಲಿನ ಜತೆಗೆ ಪೂರ್ಣಗೊಳ್ಳುತ್ತವೆೆ. ಪ್ರತಿ ತಾಳದಲ್ಲು ಅಂಕಿತವಿರುತ್ತದೆ. ಈ ಸುಳಾದಿಯಲ್ಲಿ ಸಪ್ತತಾಳಗಳು ಮತ್ತು ಒಂದು ಜತೆ ಇದೆ. ಈ ಸುಳಾದಿಯಲ್ಲಿ ಅಂತರAಗದ ಶುದ್ಧಿ ಮತ್ತು ಅಂತರAಗದ ಭಕ್ತರ ಕುರಿತು ಬಣ್ಣಸಲಾಗಿದೆ.               `ಅಂತರAಗದಿ ಬ್ರಹ್ಮಾನಂದನಾಗಿ ನೀನಿರಲು               ಅಂತಕನ ಭಯವೇನಯ್ಯ ಶ್ರೀಹರಿಯೆ               ಪಂಥದಿ ದನುಜನು ಬಾಧಿಸಲು ಸುತನ       ಚಿಂತೆ ಯಾರಿಗೋ ಎಂದಿರದೆ ಸಾಕಿದೆ ಉದಯಾದ್ರಿ ಶ್ರೀಕೃಷ್ಣಾ’’ ಇದು ಧ್ರುವ ತಾಳದಲ್ಲಿದೆ. ಭಕ್ತನ ಅಂತರAಗದಲ್ಲಿ ಭಗವಂತ ನೆಲೆಗೊಳ್ಳಿಕೊಳ್ಳಬೇಕೆಂದರೆ ಅಂತರAಗ ಶುದ್ಧವಾಗಿರಬೇಕು. ಗುರುವೆಂಬ ಕೀಲೀಕೈಯಿಂದ ಕದವ ತೆರೆದು ಭಕ್ತಿಯಂಬ ಕಕ್ಕಡವಿಡಿದು ಹೃದಯಕಮಲದಲ್ಲಿ ಭಗವಂತನನ್ನು ನೆಲೆಗೊಳ್ಳಿಸಿಕೊಳ್ಳಬೇಕು. ಆಗ ಯಾರ ಭಯವೂ ಇರುವದಿಲ್ಲ. ಪ್ರಖರವಾದ ಬೆಳಕಿದ್ದಲ್ಲಿ ತಮಕ್ಕೇನು ಕೆಲಸ? ಭಗವಂತ ಕರುನಾಳು. ಈ ಹಿಂದ ಹಿರಣ್ಯಕಶ್ಯಪು ನಾರಾಯಣ ನಾಮ ನುಡಿಯದಂತೆ ಮಗ ಪ್ರಲ್ಹಾದನಿಗೆ ಅನೇಕ ಕಷ್ಟ ಕೊಟ್ಟರೂ ಪ್ರಲ್ಹಾದ ನಾಮಸ್ಮರಣೆ ಬಿಡಲಿಲ್ಲ. ಆಗ ಭಗವಂತ ಕಂದನನ್ನು ಕಾಪಾಡಿ ತಂದೆಗೆ ಮೊಕ್ಷ ನೀಡಿದ. ತಂದೆಯ ಪಂಥಕ್ಕೆ ಮಗನನ್ನು ಬಲಿಪಶು ಮಾಡಲಿಲ್ಲ. ಇದು ಭಗವಂತನ ಕಾರುಣ್ಯವಾಗಿದೆ ಎಂಬುದು ಈ ತಾಳದ ಭಾವವಾಗಿದೆ.                   ಮುರಹರಾ ನರಹರಿ ಸಿರಿವರ ಗಿರಿಧರಯೆಂದು                    ಕರೆಯಲು ಕರುಣದಿ  ಬಂದು                    ಕರಿಯ ಕಾಯಿದೆ ಸಂತೋಷದಿ ಕಾಯಿದೆ                    ನರಕಾಂತಕ ಉದಯಾದ್ರಿ ಶ್ರೀಕೃಷ್ಣ. ಎಡನೆಯದಾಗಿ ಮಠ್ಯತಾಳದಲ್ಲಿ ಮುರಹರನನ್ನು ಸಂಹಾರಮಾಡಿದ ಪ್ರಸಂಗ, ಪ್ರಲ್ಹಾದನ ಪ್ರಸಂಗ, ಸಿರಿಗೆ ಪ್ರೀಯನಾದ ನಾರಾಯಣ, ಭಯಂಕರ ಮೆಳೆಯಿಂದ ಗೋವುಗಳನ್ನು ಕಾಯ್ದ ಗಿರಿಧರನ ಮಹಿಮೆಯನ್ನು ಹೇಳಿ ಗಜೇಂದ್ರಮೋಕ್ಷದ ಸಂದರ್ಭವನ್ನು ವಿವರಿಸುತ್ತಾರೆ. ಗಜೇಂದ್ರನು ಕೂಗಲು ಸಂತೋಷದಿAದ ಕಾಯ್ದೆ ಎಂದು ಭಗವಂತ ಭಕ್ತವತ್ಸಲಾ, ಆಪತ್ಭಾಂಧವ ಎಂಬ ಭಾವವನ್ನು ಇಲ್ಲಿ ಸೂಚಿಸುತ್ತಾರೆ. ಮೂರನೆಯದಾಗಿ ತ್ರಿಪುಟತಾಳದಲ್ಲಿ `ತನ್ನತಾ ಅರಿಯದೆ ತಗಿಲಿದ ಕಾಳಿಯನು                          ನಿನ್ನಪರಾಕ್ರಮತೋರಿ ಕಾಯಿದೆಶ್ರೀಹರಿಯೇ                          ಮುನ್ನ ನಾ ನಿನ್ನ ಡಿಂಗರಿಗನಯ್ಯಾ                          ಪನ್ನಗಾನತುರಗ ಪಾಲಿಸು ಉದಯಾದ್ರಿಶ್ರೀಕೃಷ್ಣ’ ಕಾಳಿಯ ಪ್ರಸಂಗವನ್ನು ಉಲ್ಲೇಖಿಸುತ್ತಾರೆ.ಇಲ್ಲಿ ಗರುಡ-ನಾಗನ ಕಥೆಯನ್ನು ಉಲ್ಲೆಕಿಸುತ್ತಾರೆ. ಕಾಳಿಂಗ ರಮಣಕ ದ್ವೀಪಕ್ಕೆ ಅಧಿಪತಿಯಾಗುತ್ತಾನೆ. ಆಗ ನಾಗಗಳು ಬಂದು ಪ್ರತಿ ತಿಂಗಳು ಒಂದು ನಾಗದ ಬಲಿ ಕೊಡುವ ಸಂಪ್ರದಾಯವಿದೆ. ಹೇಗಾದರೂ ನೀನು ಅಧಿಪತಿಯಾಗಿರುವೆ, ಅದನ್ನು ನಿಲ್ಲಿಸು ಎಂದು ಬೇಡಿಕೊಳ್ಳುತ್ತವೆ.ಆಗ ಕಾಳಿಂಗನು ಆ ಪದ್ಧತಿಯನ್ನು ನಿಲ್ಲಿಸುತ್ತಾನೆ, ಆಗ ಗರುಡನಿಗೆ ಕಾಳಿಂಗನಿಗೆ ಯುದ್ಧವಾಗುತ್ತದೆ. ಕಾಳಿಂಗ ಸೋತು ಹೋಗುತ್ತಾನೆ. ಗರುಡನಿಗೆ ಹೆದರಿ ತನ್ನ ಹೆಂಡತಿ ನಾಗಿಣಿಯೊಡನೆ ಓಡಿಹೋಗುತ್ತಾನೆ. ಹಿಂದೆ ಸೌಭರಿ ಮಹರ್ಷಿಗಳು ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಆಗ ಗರುಡನು ಬಂದು ಮೀನುಗಳನ್ನು ತಿನ್ನುತ್ತಾ ಮಹರ್ಷಿಗಳಿಗೆ ತೊಂದರೆ ಕೊಡುತ್ತಾನೆ. ಅಗ ಮಹರ್ಷಿಗಳು ಕೊಪಗೊಂಡು ಇನ್ನು ಮುಂದೆ ನೀನು ಇಲ್ಲಿಗೆ ಮೀನು ತಿನ್ನಲು ಬಂದರೆ ತಕ್ಷಣ ಸತ್ತು ಹೋಗು ಎಂದು ಶಾಪಕೊಡುತ್ತಾರೆ. ಈ ವಿಷಯ ಕಾಳಿಂಗನಿಗೆ ಗೊತ್ತಿರುತ್ತದೆ. ಅದು ತನ್ನ ಪತ್ನಿ ನಾಗಿಣಿಯೊಡನೆ ಯಮುನಾ ನದಿಯಲ್ಲಿ ವಾಸಮಾಡತೊಡಗುತ್ತದೆ. ಇದರಿಂದ ಗಾಳಿ,ನೀರು ವಿಷಪೂರಿತವಾಗುತ್ತದೆ. ಪಸುಪಕ್ಷಿಗಳು ವಿಷದಿಂದ ಮೂರ್ಛೆಹೋಗತೊಡಗುತ್ತವೆ. ಕೃಷ್ಣ ತನ್ನ ಕೊಳಲನೂದಿ ಅವುಗಳನ್ನು ಎಚ್ಚರಿಸಿ ಆರೈಕೆ ಮಾಡಿದನು. ಹಾಗೆಯೇ ನದಿಗೆ ದುಮಿಕಿದನು. ಇಬ್ಬರಿಗೂ ಯುದ್ಧವಾಯಿತು.ಕಾಳಿಂಗನು ನದಿಯಿಂದ ಹೊರಬಂದರೆ ಗರುಡ ನಮ್ಮನ್ನು ಸಾಯಿಸುತ್ತಾನೆ ಕಾಪಾಡು ಎಂದು ಬೇಡಿಕೊಳ್ಳುತ್ತಾನೆ. ಅಗ ಕೃಷ್ಣನು `ಗರುಡ ಈಗ ನಿನಗೇನು ಮಾಡಲಾರ. ಏಕೆಂದರೆ ನಿನ್ನ ಹೆಡೆಯಮೇಲೆ ನನ್ನ ಕಾಲಿನ ಗುರುತುಗಳಿವೆ ಎಂದು ಹೇಳಿ ಅವುಗಳನ್ನು ಪತಾಳಕ್ಕೆ ಕಳುಹಿಸುತ್ತಾನೆ. ಅಂದಿನಿAದ ನಾಗಗಳು ಪಾತಾಳದಲ್ಲಿ ವಾಸಮಾಡತೊಡಗಿದವು. ಈ ರೀತಿ ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರೂ ಪಸುಪಕ್ಷಿಗಳಿಗೆ ತೊಂದರೆ ಕೊಟ್ಟರೂ ಅವುಗಳನ್ನು ರಕ್ಷಣೆ ಮಾಡಿರುವು. ಕಾಳಿಂಗನAತಹ ಅನೇಕ ಕಾಮನೆಗಳು ನನ್ನನ್ನು ಕಾಡುತ್ತಿವೆ. ನಾನು ಮೊದಲಿನಿಂದಲೂ ನಿನ್ನ ಸೇವಕನೆ. ನನ್ನನ್ನು ಕಾಪಡುಎಂದು ಬೇಡಿಕೊಳ್ಳುತ್ತಾರೆ.       ಮುಂದುವರೆದು ನಾಲ್ಕನೆಯ ಅಟ್ಟತಾಳದಲ್ಲಿ                       “ ನಿನ್ನ ಮೃದುಪಾದ ನೋಯದಂತೆ                         ಎನ್ನಶಿರಸ್ಸಿನಲ್ಲಿಡೋ                          ರನ್ನ ಕಾಲಂದಿಗೆ ಗೆಜ್ಜೆಯನಾದದಿಂ                          ಧಿನ್ನುಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ” ಅಂದು ಕಾಳಿಂಗನ ಹೆಡೆಯಮೆಲೆ ನಾಟ್ಯಮಾಡಿದಂತೆ ನಿನ್ನ ಮೃದುವಾದ ಪಾದಗಳನ್ನು ನನ್ನ ಶೀರಸ್ಸಿನ ಮೇಲಿಡು. ನಿನ್ನ ಕಾಲ್ಗೆಜ್ಜಯ ದನಿಗೆ ಧೀಂ ಧೀಂ ಎಂದು ಕುಣಿಸುವೆ ಎಂದು ಅಪೇಕ್ಷೆ ಪಡುತ್ತಾರೆ. ಅವರು ಪ್ರತಿದಿನವೂ ಭಕ್ತಿಯಿಂದ ಪೂಜೆಮಾಡುವಾಗ ಕೃಷ್ಣನು ನರ್ತನಮಾಡುತ್ತಿದ್ದನು ಎಂಬುದು ಸರ್ವವಿದಿತವಾಗಿದೆ.  ಇನ್ನು ಐದನೆಯದಾಗಿ ಏಕತಾಳದಲಿ”ಎನ್ನ ಧೃಡವ ನೀ ಕಂಡೆ ಯಾದವ ಕೃಷ್ಣಾ                            ನಿನ್ನಧೃಢವ ನಾ ಕಾಣೆ                            ಎನ್ನಧೃಢ ನಿನ್ನಧೃಢವೆರಡನು ಕಂಡರೆ                            ಧಿನ್ನುಧಿನ್ನಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ” ನನ್ನ ಭಕ್ತಿಯ ಸ್ವರೂಪ ನೀನು ತಿಳಿದಿದ್ದೀಯಾ. ಆದರೆ ನಿಮ್ಮ ಭಕ್ತಿ ಎಂತಹದೆAದು ನನಗೆ ತಿಳಿದಿಲ್ಲ.ನೀನು ಸರ್ವಂತರ್ಯಾಮಿ. ವೇದಗಳಿಗೆ ನಿಲುಕದವನು. ನಿನ್ನಾನುಗ್ರಹವಾದರೆ ಸಾಕು ಎಂದು ಬೇಡಿಕೊಳ್ಳುತ್ತಾನೆ. ಇನ್ನು ಆರನೆಯದಾಗಿ ತ್ರಿಪುಟತಾಳದಲ್ಲಿ              “ಎನ್ನ ಗುಣದೋಷಗಳೆಣೆÉಸುವರೇನೋ ಶ್ರೀಹರಿ               ನಿನ್ನ ಬಿರುದಾಪನ್ನ ರಕ್ಷಕನೆಂದು ವಿಭೀಷಣ               ಕೀರ್ತಿಸಲು ಆ ಆ ಆ               ಅನ್ಯಥಾ ಶರಣಂ ನಾಸ್ತಿ ಅನಾಥನಾಥನೆ ಆರ್ತಬಂಧುವೆ               ನಿನ್ನ ಚರಣವ ನಂಬಿದೆನೋ ಸಾಕ್ಷಿ ಉದಯಾದ್ರಿಶ್ರೀಕೃಷ್ಣ” ಭಗವಂತ ಆರ್ತರ ನಿರ್ಗತಿಕರ,ಅನಾಥರ ನಾಥನಾಗಿದ್ದೀಯ. ನಾನು ಅಜ್ಞಾನಿ. ನನ್ನಲ್ಲಿ ಅನೇಕ ದೋಷಗಳಿವೆ. ಅವುಗಳನ್ನು ಕ್ಷಮಿಸಿ ನನ್ನನು ರಕ್ಷಿಸು. ಈ ಹಿಂದೆ ವಿಭೀಷಣನು ನಿನ್ನನ್ನು ಮೊರೆಹೋಗಲು ರಕ್ಷಿಸಿರುವೆ. ಆಪದ್ರಕ್ಷಕ ಎಂಬ ನಿನ್ನದಲ್ಲವೆ.ನಿನ್ನಹೊರತು ನನಗೆ ಅನ್ಯರು ಯಾರಿಲ್ಲ ಎಂದು ಸರ್ವ ಸಮರ್ಪಣೆ ಮಾಡಿಕೊಳ್ಳುತ್ತಾರೆ. ಈಗಾಗಲೆ ವಿವರಿಸಿದ ಸಂದರ್ಭಗಳೆಲ್ಲವೂ ಅನಾಥರಕ್ಷಕ ಎಂಬ ಬಿರುದನ್ನೇ ಬಣ್ಣಿಸಿವೆ.  ಏಳನೆಯದಾಗಿ ರೂಪಕತಾಳದಲ್ಲಿ                   ಶರಣಾಗತಜನ ಪರಿಪಾಲನೆಂಬ                   ಬಿರುದು ನಿಷ್ಕಾರಣವೆ ಫಲದಾಯಕವೆನುತ                   ವರುಣಿಸುತಿಹ ಕುಚೇಲನುದಿನ                   ಕರುಣಾಕರ ಎನ್ನ ಕಾಯೋ ಉದಯಾದ್ರಿ ಶ್ರೀಕೃಷ್ಣ  ಎಂದು ಭಗವಂತನ ಶರಣಾಗತ ವತ್ಸಲದ ಬಿರುದನ್ನು ವಿವರಿಸುತ್ತಾರೆ. ನೀನು ರಕ್ಷಿಸದೆ ಹೋದರೆ ನಿನ್ನ ಬಿರುದಾವಳಿಗೆ ಕುಂದು ಬರುತ್ತದೆ. ನಿನ್ನ ಕಾರುಣ್ಯವನ್ನು ಕುಚೇಲನು ಮನದುಂಬಿ ಹಾಡಿದ್ದಾನೆ. ಸಹಾಯ ಕೇಳಲು ಬಂದರೂ ಸಹಾಯ ಕೇಳದೆ ಹಾಗೀ ಹೊರಟುಹೋದ. ಆದರೆ ನೀನು ಮನದ ಇಂಗಿತ ಅರಿತು ಆತನ ಮನಕಾಮನೆಗಳನ್ನು ಪೂರ್ಣಗೊಳಿಸಿದೆ. ಅಂಥಹ ಕರುಣಾಳು ನಾನು ನಿನ್ನ ಮೊರೆಹೊಕ್ಕೆ. ದಯಮಾಡಿ ನನ್ನನ್ನು ಕಾಪಾಡು ಎಂಬ ದೀನ ಭಾವವನ್ನು ಕಾಣುತ್ತೇವೆ. ಜತೆಯಲ್ಲಿ` ಭಗವಂತ ನಿರ್ಮೋಹದಿಂದ ಭಜಿಸುವವರಿಗೆ ಸುಲಭನಾಗಿದ್ದಾನೆ. ಭಗವಂತನಿಗೆ ಮೊದಲು ಶುದ್ಧಮನಸ್ಸು ಬೇಕು. ಡಂಭಾಚಾರಕ್ಕೆ ಮರುಳಾಗುವವನಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.ಅದಕ್ಕೆ ದಾಸರು ಚಿಂತೆಯಾಕೆ ಮಾಡುತೀಯ ಚಿನ್ಮಯನಿದ್ದಾನೆಂದು ಹಾಡಿದ್ದಾರೆ. ನಮ್ಮ ಇಹ-ಪರದ ಕಾಳಜಿ ಮಾಡಿವವನು ಭಗವಂತ ಮಾತ್ರ ಎಂಬ ಭಾವವನ್ನು ಭಕ್ತರಾದವರು ಅರಿಯಬೇಕೆಂಬುದೇ ಇಲ್ಲಿಯ ತಾತ್ಪರ್ಯ.       ಡಾ.ಶೀಲಾದಾಸ,ರಾಯಚೂರು.       ಮೊ. ೯೪೪೮೯೭೩೬೭೦

ವಂದಲಿ ಮಾರುತೇಶನ ಚರಿತೆ

                                                              ಹಳ್ಳಿ ಊರಿಗೆ ಹನುಮಪ್ಪ ಚಂದ’ ಊರಿಗೊಬ್ಬ ಹನುಮಪ್ಪಾ’ ಎಂಬ ಅನೇಕ ಮಾತುಗಳು ಜನಪದರಲ್ಲಿ  ಜನಜನಿತವಾಗಿವೆ. ಭಾರತದಲ್ಲಿ ಎಂತಹ ಸಣ್ಣ ಊರಾದರೂ ಅಲ್ಲಿ ಆಂಜನೇಯನ ಗುಡಿ ಇದ್ದೇ ಇರುತ್ತದೆ. ಇದಕ್ಕೆ ಕಾರಣವೇನು? ಈ ವಿಚಾರ ಸಾಂಸ್ಕೃತಿಕ ಸಂಶೋಧನೆಯನ್ನು ಬಯಸುತ್ತದೆ. ಪ್ರಸ್ತುತ ಕನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ  ಹೊಸ್ತಲಿ ಹುಣ್ಣಿಮೆ ಆಂಜನೇಯನ ಭಕ್ತರಿಗೆ ಪರಮ ಪೂಜ್ಯವಾದ, ಪರಮ ಪವಿತ್ರವಾದ, ಸಂಭ್ರಮದ ದಿನ. ಯಾಕೆಂದರೆ ಈ ದಿನದಂದು ಕರ್ನಾಟಕದ ಬಹುತೇಕ ಊರುಗಳಲ್ಲಿ ಆಂಜನೇಯನ ಜಾತ್ರೆಗಳು ನಡೆಯುತ್ತವೆ. ಒಂದೇ ದಿನ ಒಂದುನೂರಾ ಒಂದು ಆಂಜನೇಯನ ಜಾತ್ರೆಗಳು ನಡೆಯುತ್ತವೆ ಎಂಬ ಪ್ರತೀತಿ ಇದೆ. ಇಷ್ಟೊಂದು ಸಂಖ್ಯೆಯಲ್ಲಿ ಜಾತ್ರೆಗಳ ನಡೆಯುವದು ವಿಶೇಷವಾಗಿದೆ. ಅಂತಹ ಜಾತ್ರೆಯಲ್ಲಿ ವಂದಲಿ ಮಾರುತೇಶನ ಜಾತ್ರೆಯೂ ಒಂದಾಗಿದೆ.          ವಂದಲಿ ಗ್ರಾಮವು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿದೆ. ಹಟ್ಟಿ ಚಿನ್ನದ ಗಣಿಯ ಹತ್ತಿರವಿದೆ. `ಹೊನ್ನುಇಲ್ಲಿ” ಎಂಬ ಪದದ ನಿಷ್ಪತ್ತಿ ಹೊನ್ನಲಿ> ವನ್ನಲಿ>ವಂದಲಿ ಎಂದಾಗಿದೆ ಎಂಬ ಅಭಿಪ್ರಾಯವಿದೆ. ಈ ಕ್ಷೇತ್ರಕ್ಕೆ ಪ್ರತೀ ಅಮವಾಸೆ -ಹುಣ್ಣಿಮೆಯಂದು ಜಾತಿ- ಮತ- ಪಂಥ ಮರೆತು ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ. ಇದು ಜಾಗ್ರತ ಕ್ಷೇತ್ರ ಎಂಬ ನಂಬಿಕೆ ಭಕ್ತರದು. ಅಲ್ಲದೆ ಬಳಗಾನೂರು ಹನುಮಪ್ಪ, ಕಸಬಾಲಿಂಗಸಗೂರು ಕುಪ್ಪೆರಾಯ, ವಂದಲಿ ಮಾರುತಿರಾಯ ಸಹೋದರರು ಎಂಬ ಪ್ರತೀತಿಯೂ ಇದೆ. ಈ ಮಾತನ್ನು ಸ್ವಲ್ಪ ಆಳವಾಗಿ ವಿಚಾರಿಸಿದರೆ ಹನುಮಾ , ಭೀಮಾ, ಮಧ್ವರ ಪ್ರತೀಕವಾಗಿರಬಹುದು ಎಂಬ ವಿಚಾರ ಮನಸ್ಸಿಗೆ ಬರುತ್ತದೆ. ಇರಲಿ.          ವಂದಲಿ ಮಾರುತಿರಾಯನ ಕುರಿತು ಅನೇಕ ದಂತಕಥೆಗಳು,ಐತಿಹ್ಯಗಳು ಇವೆ. ಇವುಗಳೊಂದಿಗೆ ‘ವಂದಲಿ ಶ್ರೀಮಾರುತೇಶ್ವರ ಪುರಾಣ” ಎಂಬ ಷಟ್ಪದಿ ಕಾವ್ಯ ರಚನೆಗೊಂಡಿದೆ. ಈ ಕೃತಿಯನ್ನು ಶ್ರೀವೇದಮೂರ್ತಿಶರಭಯ್ಯಸ್ವಾಮಿ ಗಣಾಚಾರಮಠ ಬಳಗಾನೂರು ಇವರು ರಚಿಸಿದ್ದಾರೆ. ಇವರು ಮನೆತನದಿಂದ ಕೃಷಿ ಮತ್ತು ಆಯುರ್ವೇದ ವೈದ್ಯರು. ಈ ಕೃತಿಗೆ ಮೂಲ ಆಕರವೆಂದರೆಶ್ರೀ ಓಂ ಸಿದ್ಧಲಿಂಗೇಶ್ವರ ಸ್ವಾಮೀಜಿಯವರು ರಚಿಸಿದ `ಶ್ರೀಪಂಪಾ ಮಹಾತ್ಯೆö’್ಮಯಾಗಿದೆ ಎಂದು ಲೇಕಕರು ದಾಕಲಿಸಿದ್ದಾರೆ. ಕೃತಿಗೆ ಶ್ರೀಶ್ರೀಶ್ರೀ೧೦೦೮ಜಗದ್ಗುರು ಭೀಮಾಶಂಕರಲಿAಗ ಶಿವಾಚಾರ್ಯಾ ಮಹಾಸ್ವಾಮಿಗಳು, ಶ್ರೀಮತ್ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾ ಮಹಾಸಂಸ್ಥಾನಪೀಠ ಊಖೀಮಠ, ಜಿಲ್ಲಾ ರುದ್ರಪ್ರಯಾಗ, ಉತ್ತರಾಖಂಡ. ಹಾಗೂ .ಶ್ರೀಜಗದಾರಾಧ್ಯ ಜಯಶಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು ,ಮಹಾಸಂಸ್ಥಾನ ಬೃಹನ್ಮಠ ಜಾಲಹಳ್ಳಿ ತಾ.ದೇವದುರ್ಗ.ಜಿ.ರಾಯಚೂರು,ಇವರು ಶುಭಾಶಿರ್ವಾದ ಸಂದೇಶ ನೀಡಿದ್ದಾರೆ. .ಮುನ್ನುಡಿಯನ್ನು ಶ್ರೀಶರಣಪ್ಪ ತಂದೆ ವೀರನಗೌಡಾ ಪ್ರಭಾರಿ ಪ್ರಾಂಶುಪಾಲರು ಮುರಾರ್ಜದೇಸಾಯಿ ಮಾದರಿ ವಸತಿ ಶಾಲೆ ರಾಜಲಬಂಡಾ ಜಿ.ರಾಯಚೂರು, ಬೆನ್ನುಡಿಯನ್ನು ಶ್ರೀವೇದಮೂರ್ತಿಕಿಡಿಗಣಯ್ಯಸ್ವಾಮಿ ಹಿರೇಮಠ (ಉ) ಹೊಸೂರು,ಸಂಪಾದಕರು ಶರಣವಿಚಾರಮಂಥನ ಮಾಸ ಪತ್ರಿಕೆ. ಪ್ರಸ್ತುತ ಶ್ರೀಮಾರುತೇಶ್ವರ ಪುರಾಣ’ ಎಂಬ ಕೃತಿಯನ್ನು ಡಾ.ವಿ.ಎ.ಮಾಲೀಪಾಟೀಲ್ ಅವರು ತಮ್ಮ ತಂದೆ ಅಮರೇಗೌಡಾ ತಾಯಿ ಮಹದೇವಮ್ಮ ಇವರ ಸ್ಮರಣಾರ್ಥ ೨೦೧೫ ಪ್ರಕಟಿಸಿದ್ದಾರೆ. ಈ ಕೃತಿ ನನಗೆ ದೊರಕಿಸಿ ಕೊಟ್ಟದ್ದು ಡಾ.ಪದ್ಮಾ ಶ್ರೀರಾಜಶೇಖರ ದಂಪತಿಗಳು. ಇವರೀರ್ವರಿಗೂ ಧನ್ಯವಾದಗಳು. ಯಾಕೆಂದರೆ ಒಂದು ಕಾವ್ಯದ ರಚನೆ ಎಷ್ಟು ಮುಖ್ಯವೋ ಅ ಕಾವ್ಯದ ಪ್ರಕಟಣೆ ಮತ್ತು ರಕ್ಷಣೆ ಅಷ್ಟೇ ಮುಖ್ಯವಾಗುತ್ತದೆ.           ಈ ಕೃತಿಯು ಹದಿಮೂರು ಅಧ್ಯಾಯದಲ್ಲಿ ರಚನೆಗೊಂಡಿದೆ. ಈ ಕೃತಿಯಲ್ಲಿ ವಂದಲಿ ಕ್ಷೇತ್ರದ ಕುರಿತು ಬರೆಯುವ ಮುನ್ನ ರಾಮಾಯಣ, ಮಹಾಭಾರತ, ಭಗವದ್ಗೀತಾ, ಅದರಂತೆ ವೀರಶೈವ ಗ್ರಂಥಗಳಾದ ಸಿದ್ದಾಂತಶಿಖಾಮಣಿ, ಅನಾದಿವೀರಶೈವ, ವೀರೇಶಚರಿತೆ ಗ್ರಂಥಗಳು ಆಕರವಾಗಿವೆ. ಉಲ್ಲೇಖವಾದ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಲ್ಲಿ ಉಲ್ಲೆಖಿಸಿದ ವಿಚಾರಗಳನ್ನು ತಮ್ಮ ಕವಿತ್ವದ ಮುಖಾಂತಾರ ಸಾಕರಗೊಳಿಸಿದ್ದಾರೆ. ಆರಂಭದ ಅಧ್ಯಾಯದಲ್ಲಿ ಗುರುಸ್ತುತಿ,ಶಿವಸ್ತುತಿ, ಶಕ್ತಿಸ್ತುತಿ,ಗಣಪತಿ,ಸರಸ್ವತಿ,ಲಕ್ಷಿö್ಮ,ಷಣ್ಮುಖ, ವೀರಭದ್ರಸ್ತುತಿ,ಪಂಚಾಚಾರ್ಯರ ಸ್ತುತಿ,ಬಸವಸ್ತುತಿ, ಅಲ್ಲಮಪ್ರಭುಸ್ತುತಿ, ಚನ್ನಬಸವ, ಸಿದ್ಧರಾಮರ ಸ್ತುತಿ, ಅಭವ ಶರಣರಸ್ತುತಿ, ಈ ಕೃತಿ ರಚನೆಗೆ ಪ್ರೋತ್ಸಾಹಿಸಿದ ವಿರುಪಾಕ್ಷಯ್ಯ ಗವಾಯಿಗಳನ್ನು, ಈ ಕೃತಿ ರಚನೆಗೆ ಕಾರಣರಾದ ಗುರು ಹಿರಿಯರನ್ನು ವಂದಲಿಯ ಭಕ್ತರನ್ನು ಸ್ಮರಿಸಿಕೊಂಡಿದ್ದಾರೆ. ಕಾವ್ಯದ ಪ್ರೇರಣೆ ಮತ್ತು ಧೋರಣೆಯನ್ನು ವಿಶದವಾಗಿ ವಿವರಿಸಿದ್ದಾರೆ.           ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಆಂಜನೇಯನು ಲೋಕಕಲ್ಯಾಣಕ್ಕಾಗಿ ಶಿವನ ಸಾತ್ವಿಕ ಅಂಶದಿAದ ಅವತರಿಸುತ್ತಾನೆ. ಅಹಲ್ಯಾ ಮತ್ತು ಗೌತಮಮುನಿಯರ ಪ್ರಸಂಗವನ್ನು , ಆಂಜನೇಯನ ಹುಟ್ಟಿನ ವೃತ್ತಾಂತ, ಬಾಲ್ಯದ ಚಿತ್ರಣವನ್ನು ವಿನೂತನವಾಗಿ ಚಿತ್ರಿಸಿದ್ದಾರೆ. ಶ್ರೀರಾಮನ ಪರಮ ಬಂಟನಾಗಿ, ದುಷ್ಟರನ್ನು ನಿಗ್ರಸಿಸುತ್ತ ಭಕ್ತರನ್ನು ರಕ್ಷಿಸುವವನಾಗಿ, ಸ್ವಾಮಿನಿಷ್ಠೆಯಲ್ಲಿ ವಿನಮ್ರನಾಗಿ, ಶ್ರೀರಾಮನಿಗೆ ಬಂದ ಬ್ರಹ್ಮಹತ್ಯದೋಷವನ್ನು ಪರಿಹರಿಸಿದ ಮಹಾಪುರುಷನಾಗಿದ್ದಾನೆ. ಧೃಢ ಭಕ್ತಿಗೆ ಅನ್ವರ್ಥಕನಾಗಿದ್ದಾನೆ. ಗಾನ ವಿದ್ಯಯಲ್ಲಿ ಪಾರಂಗತನಾಗಿ ಶಿವಪಾರ್ವತಿಯರನ್ನು ಸ್ತುತಿಸಿ ಮನ ಸೂರೆಗೊಳ್ಳುತ್ತಾನೆ. ಹನುಮಂತನು ಸೂರ್ಯೋಪಾಸಕನು. ಸೂರ್ಯನಿಂದ ವಿದ್ಯಯನ್ನು ಪಡೆದುಕೊಳ್ಳುತ್ತಾನೆ. ಸೀತೆಯನ್ನು ಲಂಕೆಯಿAದ ಕರೆತಂದ ಮೇಲೆ ಶ್ರೀರಾಮನು ಎಲ್ಲಾ ವೀರರನ್ನು ಗೌರವಿಸುತ್ತಾನೆ. ಅದರಂತೆ ಹನುಮನಿಗೂ ಪಾರಿತೋಷP Àನೀಡಲು ಹನುಮನು ನನಗೆ ಕೃತಕ ಪಾರಿತೋಷ ಬೇಡಾ ಸಾಯುಜ್ಯ ಪದವಿ ನೀಡಲು ಬೇಡಿಕೊಳ್ಳುತ್ತಾನೆ. ಹಾಗೆಯೇ ಗುರುದೀಕ್ಷೆಯನ್ನು ವೀಭದ್ರನಲ್ಲಿ ಪಡೆದುಕೊಳ್ಳುತ್ತಾನೆ. ಗುರುಶೀಷ್ಯರು ಭೂಮಿಯಲ್ಲಿ ಶಾಶ್ವತವಾಗಿ ಪೂಜೆಗೊಳ್ಳಿರಿ ಎಂಬ ವರ ಶಿವನಿಂದ ಪಡೆದುಕೊಳ್ಳುತ್ತಾರೆ. ಆ ಕಾರಣಕ್ಕಾಗಿ ಪ್ರತಿ ಗ್ರಾಮದಲ್ಲೂ ಹನುಮಂತನ ದೇವಸ್ಥಾನಗಳು ನಿರ್ಮಾಣವಾಗಿವೆ ಮತ್ತು ಆಂಜನೇಯನ ಪೂಜೆ ನಿರಂತರವಾಗಿ ನಡೆಯುತ್ತಿವೆ. ಅದರಂತೆ ವಂದಲಿಯಲ್ಲೂ ಮಾರುತೇಶ್ವರನು ಪೂಜೆಗೊಳ್ಳುತ್ತಿದ್ದಾನೆ.           ಐತಿಹಾಸಿಕವಾಗಿ ಈ ದೇವಸ್ಥಾನದ ಕುರಿತು ಹೇಳುವುದಾದರೆ, ಈ ದೇವಸ್ಥಾನವು ಕಲ್ಯಾಣಚಾಲುಕ್ಯರ ಹದಿನಾಲ್ಕನೆಯ ಶತಮಾನದ ಕಾಲದಲ್ಲಿ ನಿರ್ಮಾಣವಾಗಿರಬಹುದು. ಯಾಕೆಂದರೆ ಆ ಊರಿನ ಬಸವಣ್ಣ ದೇವರ ಗುಡಿಯ ಗಂಟೆಯ ಮೇಲೆ ಆ ಶಕೆಯನ್ನು  ದಾಖಲಿಸಲಾಗಿದೆ.         ಮಹಾಮಹಿವiನಾದ ಮಾರುತೀಶ್ವರನು ವಂದಲಿಗೆ ಬಂದ ಕಥೆ ರೋಚಕವಾಗಿದೆ. ಡಪಳಾಪುರವೆಂಬುದ ಒಂದು ಗ್ರಾಮ ಈ ಗ್ರಾಮದ ಗುಳುಗಿನವರು ಮನೆತನ ಪ್ರಸಿದ್ಧವಾದದ್ದು.ಈ ಮನೆತನದವರು ಕಾರಣಾಂತರದಿAದ ಹಿರೇಬುದ್ದಿನ್ನಿಯಲ್ಲಿ ಬಂದು ವಾಸ ಮಾಡುತ್ತಾರೆ. ಒಮ್ಮೆ ಗುಳುಗಿನವರು ಮನೆತನದ ಗೃಹಿಣಿ ಶಿವಗಂಗಾ ಏನೋ ಕಾರಣದಿಮದ ಡಪಳಾಪುರಕ್ಕೆ ಹೋಗಿ ಮರಳಿ ಬರುವಾಗ ಕೃಷ್ಣಾನದಿ ತೀರದಲ್ಲಿಯ ಒಂದು ಶಿಲೆಯಮೇಲೆ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆಯುತ್ತಾಳೆ. ಕೆಲ ಸಮಯವಾದ  ಬಳಿಕ ಎದ್ದು ಹೋಗಬೇಕೆಂದರೆ ಕಣ್ಣು ಕಾಣಿಸುವುದಿಲ್ಲ. ಕಲ್ಲಮೇಲೆ ಕುಳಿತರೆ ಕಣ್ಣು ಕಾಣುವುದು.ಎದ್ದರೆ ಕಾಣುವುದಿಲ್ಲ. ಎರಡು ಹೆಜ್ಜೆ ಮುಂದೆ ಹೋದರೆ ಬರೀ ಕಲ್ಲು ಕಾಣುವುದು.ಹೀಗೆ ಅನೇಕಬಾರಿ ಅಗುತ್ತದೆ. ಈ ದೃಶ್ಯವನ್ನು ಹೊಲದಲ್ಲಿ ಕೆಲಸ ಮಾಡುವ ವ್ಯಕ್ತಿ ಹೀಗೇಕೆ ಮಾಡುತ್ತಿರುವಿ ಎಂದು ಕೇಳಲಾಗಿ ತನಗಾದ ಅನುಭವವನ್ನು ಹೇಳುತ್ತಾಳೆೆ. ಆಗ ಆ ವ್ಯಕ್ತಿ ಊರಿನ ಜನರನ್ನು ಕರಿಸಿ ಕಲ್ಲು ತಿರುವಿ ಹಾಕಲು ಅಲ್ಲಿ ಹನುಮಂತನಮೂರ್ತಿ ಇದ್ದಿತು. ಅಗ ಊರಿನವರು ಅಮ್ಮಾ ನೀನು ಈ ದೇವರಲ್ಲಿ ಏನನ್ನಾದರು ಬೇಡಿಕೊ ಎನ್ನಲು ನಾನು ಈ ಮೂರ್ತಿಯನ್ನು ಹೀರಾಬುದ್ದಿನ್ನಿಗೆ ಒಯ್ದು ಪ್ರತಷ್ಠಾಪಿಸಿ ಪೂಜಿಸುತ್ತೇನೆ ಎಂದು ಬೇಡಿಕೊಳ್ಳಲು ಕಣ್ಣುಕಾಣಿಸತೊಡಗಿದವು. ಗರತಿಯ ಮಾತಿನಂತೆ ಎತ್ತಿನ ಬಂಡಿತAದು ಮೂರ್ತಿಯನ್ನು ಭಕ್ತಿಯಿಂದ ಹೀರಾ ಗ್ರಾಮಕ್ಕೆ ಕರೆದುಕೊಂಡು ಹೋಗುವಾಗ ವಂದಲಿ ಸೀಮೆ ಬರುತ್ತದೆ. ಅಲ್ಲಿ ಹನುಮಂತನ ಮೂರ್ತಿ ಬಹಳ ಭಾರವಾಗುತ್ತದೆ. ಊರಿನ ಎಲ್ಲಾ ಎತ್ತುಗಳನ್ನು ಸೇರಿಸಿ ಎಳದರೂ ಮೂರ್ತಿ ಅಲಗಾಡುವುದಿಲ್ಲ.. ಊರ ಮುಂದೆ ಎರಡು ಪಾದ ಮೂಡುತ್ತವೆ. ಮೂರ್ತಿ ಬಂಡಿಯಿAದ ಜಾರಿ ಕೆಳಗೆ ಬೀಳುತ್ತದೆ. ಏನು ಮಾಡಿದರೂ ಶಿಲಾಮೂರ್ತಿ ಮೇಲೇಳುವುದಿಲ್ಲ. ಆಗ ಆಸಾದ್ವಿಯು ಊರಿನ ಮಾಲೀಪಾಟಿಲ ಮತ್ತು ಕುಲಕರ್ಣಿ ಮುಂತಾದ ಪ್ರಮುಖರಲ್ಲಿ ಬಂದು ದೇವರನ್ನು ಇಲ್ಲೇ ಪ್ರತಿಷ್ಟಾಪಿಸಿ ಪೂಜಿಸುತ್ತೇವೆ. ಸ್ಥಳಾವಕಾಶಮಾಡಿಕೊಡಿ ಎಂದು ವಿಜ್ಞಾಪಿಸಿಕೊಳ್ಲುತ್ತಾಳೆ. ಅಗ ಊರಿನ ಜನರೆಲ್ಲಾ ಒಪ್ಪಿಕೊಂಡು ದೇವರ ಪ್ರತಿಷ್ಟಾಪನಕ್ಕೆ ಅನುವುಮಾಡಿ ಕೊಡುತ್ತಾರೆ. ಊರಿನ ಸೋಮಪ್ಪ ಮಾಲೀಗೌಡರ ಹೊಲದಲ್ಲಿ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಲಾಗುತ್ತದೆ. ದೇವಸ್ಥಾನದ ನಿರ್ಮಾಣಕಾರ್ಯ ಭರದಿಂದ ಸಾಗುತ್ತದೆ. ಶಿಲ್ಪಿಗಳು ಹೊಲದ ತುಂಬಾ ಶಿಲೆಗಳನ್ನು ಹರಡಿದರು. ಆಸ್ಥಳಕ್ಕೆ ಉಪ್ಪು ಮಾರುವ ಉಪ್ಪ್ಪಾರ ಕುಟುಂಬವು ಬಂದು ವಾಸ ಮಾಡಿತ್ತು. ಅ ಕುಟುಂಬದ ಮಹಿಳೆಯು ತಿಳಿದೆ ದೇವರ ಶಿಲೆಯ ಮೇಲೆ ರೊಟ್ಟಿ ಮಾಡುತ್ತಾಳೆ. ಅವಳ ಕಣ್ಣು ಹೋಗುತ್ತವೆ. ಊರ ಜನರು ದೇವರಲ್ಲಿ ಕ್ಷಮೆಕೇಳಲು ಹೇಳುತ್ತಾರೆ. ಆಗ ಅವರು  ದಂಡ ಭರಿಸುವುದಾಗಿ ಒಪ್ಪಿಕೊಳ್ಳುತ್ತಾರೆ. ಅಂದು ಸಂಜೆ  ಬಣಜಿಗರ ಸಿದ್ದಪ್ಪÀ ಗುಡಿಗೆ ಬಂದ ನಮಸ್ಕರಿಸಿ ಕೇಕೆ ಹಾಕುತ್ತಾನೆ. `ತಾವು ತಪ್ಪು ಮಾಡಿದ್ದಿರಿ ಅದಕ್ಕಾಗಿ ನೀವು ಸತತ ನನ್ನ ಪೂಜೆ ಮಾಡಬೇಕೆಂದು ಆಜ್ಞೆ ಮಾಡುತ್ತಾನೆ.ಅದರಂತೆ ಅವರು ಒಪ್ಪಿಕೊಂಡು ಇಂದಿಗೂ ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ. ಬಣಜಿಗ ಸಿದ್ದಣ್ಣನ ಮನೆತನದವರು ಹೇಳಿಕೆ ನೀಡುತ್ತಿದ್ದಾರೆ. ಮಾಲೀಗೌಡರ ಹೊಲದಲ್ಲಿ ವಿಜೃಂಭಣೆಯಿAದ ಮಾರ್ಗಶಿರ ಮಾಸದ ಪೌರ್ಣಿಮೆಯ ದಿನ ಜಾತ್ರೆ ನಡೆಯುತ್ತದೆ. ಮಾರುತಿರಾಯ ಕೃಷ್ಣಾ ನದಿಯಲ್ಲಿ ದೊರೆತ ಸ್ಮರಣೆಗಾಗಿ ಶ್ರಾವಣಮಾಸದ ಬೆನಕನ ಅಮವಾಸೆಯಂದು ದೇವರನ್ನು ಕರೆದುಕೊಂಡು ಅಭಿಶೇಕ ಮಾಡಿಕೊಂಡು ವಿವಿದ ವಾದ್ಯಗಳೊಂದಿಗೆ ಕರೆತರುತ್ತಾರೆ. ಅಂದು ಮಳೆ ಬೆಳೆಯ ಕುರಿತಾಗಿ ಹೇಳಿಕೆಯು ನಡೆಯುತ್ತದೆ. ಕಾರ್ತಿಕಮಾಸದಲ್ಲಿ ದೀಪೋತ್ಸವ ನಡೆಯುತ್ತವೆ. ಮದುವೆ ಮುಂಜವಿ, ಜವಳ ಮುಂತಾದ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುತ್ತವೆ. ಹೀಗೆ ಭಕ್ತರು ತಮ್ಮ ಆರಾಧ್ಯ ದೈವದ ಆರಾಧನೆ ಮಾಡಿ ಧನ್ಯರಾಗುತ್ತಿದ್ದಾರೆ. ಡಾ.ಶೀಲಾದಾಸ, ರಾಯಚೂರು.

ಲಿಂಗದಳ್ಳಿ ರಾಮದಾಸರು

                                               ರಾಯಚೂರು ಜಿಲ್ಲೆ ಹರಿದಾಸಸಾಹಿತ್ಯಕ್ಕೆ ಅನನ್ಯಕೊಡುಗೆನೀಡಿದೆ.ವಿಜಯದಾಸರಾದಿಯಾಗಿ ಗೊಪಾಲದಾಸರು,ಜಗನ್ನಾಥದಾಸರು,ಪ್ರಾಣೇಶದಾಸರು ಮುಂತಾದ ಹರಿದಾಸರು   ದಾಸಪರಂಪರೆಯನ್ನು ಮುಂದುವರೆಸಿದ್ದಾರೆ.ವಿಶೇಷವಾಗಿ ಆಧುನಿಕ ದಾಸಸಾಹಿತ್ಯದ ಘಟ್ಟದ ಪ್ರವರ್ತಕರಾದ ಪ್ರಾಣೇಶದಾರು ಲಿಂಗಸೂಗೂರು ಪ್ರದೇಸದಲ್ಲಿ ಪ್ರಭಾವಿ ಹರಿದಾಸರಾಗಿದ್ದರು. ಪ್ರಸ್ತುತದಲ್ಲೂ ಅವರ ಪ್ರಭಾವ ಹಚ್ಚ ಹಸಿರಾಗಿದೆ. ಇವರ ಪರಿಸರದಲ್ಲಿ ಅನೇಕ ಹರಿದಾಸರು ದಾಸಸಾಹಿತ್ಯ ಕೃಷಿ ಮಾಡಿದ್ದಾರೆ. ಅಂಥವರಲ್ಲಿ ಆಧುನಿಕ ಹರಿದಾಸರಾದ ಶ್ರೀರಾಮಾಂಕಿತ ರಾಮದಾಸರೂ ಒಬ್ಬರು. ರಾಯಚೂರು ಜಿಲ್ಲೆಯ ದೇವದುರ್ಗಾ ತಾಲ್ಲೂಕಿನ ಜೋಳದಹೆಡೆಗೆ ಎಂಬಗ್ರಾಮದಲ್ಲಿ ಬಡೇಸಾಬರು ೧೮೮೨ರಲ್ಲಿ ಜನಿಸಿದರು.ತಂದೆ ಖಾಜಾಸಾಹೇಬ ತಾಯಿ ಪೀರಮ್ಮ. ಬಡತನದ ಬವಣೆಯಲ್ಲೂ ವಿದ್ಯಾಭ್ಯಾಸ ಮಾಡಿದರು. ಕನ್ನಡಓದಲು, ಬರೆಯಲು ಕಲೆತರು. ಗುಮಾಸ್ತರಾಗಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.ಹುಸೇನಮ್ಮ ಎಂಬ ಕನ್ನೆಯೊಂದಿಗೆ ಮದುವೆಯಾಯಿತು. ಸಂಸಾರ ನಿರ್ವಹಣೆ ಕಷ್ಟವಾದಾಗ ಪತ್ನಿಯೊಂದಿಗೆ ಗೊನವಾರಕ್ಕೆ ಬರುತ್ತಾರೆ. ಆ ಊರಿನಲ್ಲಿ ಶಿಕ್ಷಕರಾಗಿ ಅಕ್ಷರದಾನದ ಕಾರ್ಯನಿರ್ವಸುತ್ತಾರೆ. ಜನಮನ ಗೆಲ್ಲತ್ತಾರೆ. ವಿಶೇಷವಾಗಿ ಆ ಊರಿನ ಜೋಯಿಸ ಮನೆತನದ ಶ್ರೀವೆಂಕಟಭೀಮಾಚಾರ್ಯ,ಶ್ರೀಗೋವಿAದಾಚಾರ ಗೋನವಾರ, ಶ್ರೀಹನುಮಂತಾಚಾರ್ಯ.ಶ್ರೀನಿವಾಸರಾವ ಕುಲಕರ್ಣಿಯವರ ಸ್ನೇಹವಾಯಿತು. ಇವರು ತಮ್ಮ ಸಭ್ಯತೆಯ ನಡುವಳಿಕೆ ಮತ್ತು ಜ್ಞಾನದಾºದಿಂದÀ ಎಲ್ಲರ ಮನಸ್ಸನ್ನು ಗೆಲ್ಲುvತ್ತಾರೆ. ಇವರೊಂದಿಗೆ ಭಜನೆ ,ಪುರಾಣ, ಪ್ರವಚನ.ಸಂಸ್ಕೃತ ಅಧ್ಯಯನದಲಿ ್ಲನಿರತರಾಗುತ್ತಾರೆ.ಇಲ್ಲಿಂದ ಅವರ ದಾಸ ಸಾಹಿತ್ಯ ಕೃಷಿ ಆರಂಭವಾಗುತ್ತದೆ.ವರಕವಿಗಳಾದ ರಾಮದಾಸರಿಗೆ ಒಳ್ಳೆಯ ಪರಿಸರದೊರೆತು. ಹುಲುಸಾದ ದಾಸಸಾಹಿತ್ಯ ರಚಿಸಲು ಪೂರಕವಾಯಿತು.ಇವರಿಗೆ ಹಂಪೆಯಲ್ಲಿ ಶ್ರೀರಾಮಾವಧೂತರಿಂದ’ ಶ್ರೀರಾಮ’ ಎಂದು ಅಂಕಿತದೊರೆಯುತ್ತದೆ.                                                 ಹರಿದಾಸಪರAಪರೆಯAತೆ ರಾಮದಾಸರಿಗೆ ಮಧ್ವಸಿಧ್ಧಾಂತವೇ ತಳಹದಿ.ಇವರು ಏಳುನೂರಕ್ಕೂ ಹೆಚ್ಚು ಕೀರ್ತನೆಗಳನ್ನು,ನೂರು ಉಗಾಭೋಗಗಳನ್ನು,ನಾಲ್ಕುನೊರಾ ಅರವತ್ತು ನುಡಿಯ ರಾಮ ಭಜನೆಯನ್ನು,ಐದು ಶತಾಷ್ಟಕಗಳನ್ನು ಉರ್ದು,ಸಂಸ್ಕುçತದಲ್ಲಿ ಕೀರ್ತನೆಗಳನ್ನು ರಚಿಸಿದಾರೆ. ರಾಮಶತಾಷ್ಟಕ-; ಇದು ನೂರಾಎಂಟು ಚರಣಗಳಲ್ಲಿದೆ’ಈಶಶ್ರಿಶಜಗತ್ಪೋಷ’ ಎಂದು ಆರಂಭವಾಗುವ ಈ ಅಷ್ಟಕ ಪ್ರತಿ ಚರಣದ ಕೊನೆಯಲ್ಲಿ ‘ರಾಮನಮೊ’ ಎಂದು ಕೊನೆಗೊಳ್ಳುತ್ತದೆ ಈ ಅಷ್ಟಕದಲ್ಲಿ ರಾಮನ ಗುಣ ಕಾರ್ಯಗಳನ್ನು ವಿವರಿಸಲಾಗಿದೆ..ಶ್ರಿರಾಮನು ನಿಖಿಲ ಚರಾಚರಸೃಷ್ಟಿಗೆ ಒಡೆಯನು,ಭಕುತಾಭಿಷ್ಟಪೂರ್ಣ ಆದಿ ಲಕುಮಿನಾಥನು,ವೇದವೇದಾಗಮ್ಯನು, ವೇದವೇದಾಂತಗುಪ್ತ ,ವೇದಾತೀತ, ಅನಾದಿ ವಸ್ತು, ಆದಿಮೂರ್ತಿ, ಪತಿತ ಪಾವನಾಂಗ ಎಂದು ಬಣ್ಣಿಸುತ್ತಾರೆ. ಪರಕೆ ಪರಮನಾದ ಭಗವಂತ ಶರಣರ ಅರಸ, ದಾಸರದಾಸ, ದುಷ್ಟಕಾಲ,ಶಿಷ್ಟಪಾಲ ಎಂದು ಗುಣಗಳನ್ನು ಹೇಳುತ್ತಾ ದಶಾವತಾರದ ವಿಚಾರವನ್ನು ಹೇಳುತ್ತಾರೆ.’ಜೀವನದಲ್ಲಿ ಉಣ್ಣಬಾರದನ್ನು ಉಂಡು ,ನಿನ್ನ ಸ್ಮರಣೆ ಮರೆತು ಪಡಬಾರದ ಕಷ್ಟ ಪಟ್ಟು ಮಂದಮತಿಯಾದೆ.’ಮAದಮತಿಯ ಛಿಂದಿಸೆನಗಾನAದ ಮತಿ ದೇ’ ಎಂದು ಬೇಡಿಕೊಳ್ಳುತ್ತಾರೆ.ದುರಿತ ಕರ್ಮದೊಳಗೆ ನಿರುತನಾದ ನನಗೆ ಮರವೆ ಮಾಯವ ತೊರೆ, ಮಂಕು ವಿಷಯಲಂಪಟವೆAಬ ಸಂಕೋಲೆಯ ಕಡಿ, ನಿನ್ನಪಾದ ದಾಸರೊಳಗೆ ಕೂಡಿಸೋ, ಎನ್ನ ಮನದ ಭಿನ್ನ ಬಿಡಿಸಿ ನಿನ್ನ ಧ್ಯಾಸದೊಳಗೆ ಇರಿಸು ಎಂದು ತಮ್ಮನ್ನು ಆವರಿಸಿದ ದೋಷ ರಾಶಿಗಳಿಂದ ಮುಕ್ತ ಗೊಳಿಸಲು ವಿನಂತಿಸಿಕೊಳ್ಳುತ್ತಾರೆ. ತಮ್ಮನ್ನು ಸಮರ್ಪಿಸಿ ಕೊಳ್ಳತ್ತಾ , ಯಾರು ರಾಮ ಸ್ಮರಣೆ ಮಾಡುತ್ತಾರೊ ಅವರು ನಿತ್ಯಸತ್ಯ ಸಯಖಪಡುತ್ತಾರೆಂದು ಫಲ ಶೃತಿಯನ್ನೂ ಹೇಳುತ್ತಾರೆ. ಗೋವಿಂದ ಶತಷ್ಟಕ-; ಇದು ಒಂದು ನೂರಾ ಎಂಟು ನುಡಿಯಲ್ಲಿದೆ. ಒಂದೊAದು ನುಡುಯಲ್ಲಿ ಮೂರು ಚರಣಗಳಿದ್ದು, ಎರಡನೆಯ ಚರಣದ ಕೊನೆಗೆ’ ಗೋವಿಂದ ನಮೋ ‘ ಎಂದು ಮೂರನೆಯ ಚರಣದ ಕೊನೆಗೆ ‘ಸಿರಿಗೊವಿಂದ ’ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ಶ್ರಿಕೃಷ್ಣನ ಲೀಲೆಗಳು, ಚಮತ್ಕಾರಗಳು ಚಿತ್ರಿತವಾಗಿವೆ.’ಪಾತಕ ಹರವುಧಿತಾತ ವಿಮಲ ಸುಖದಾತ ಜಗನ್ನಾಥ ಗೋವಿಂದ ನಮೋ ಮುಕ್ತಿದಾಯಕ ಸಿರಿಗೋವಿಂದ’ ಎಂದು ಕೃಷ್ಣನನ್ನು ಚಿತ್ರಿಸುತ್ತಾರೆ.ರಮಾಲೋಲನಾದ ಗೋವಿಂದ ಭಕ್ತ ಕ್ಷಮಾಶೀಲ ,ಭವಭ್ರಮಜಾಲಹರ,ಮುಕ್ತಿದಾಯಕನಾಗಿದ್ದಾನೆ.ಭಕ್ತರಿಗಾಗಿ ವೇದಗಳನ್ನು ತಂದಿದ್ದಾನೆ, ಮಂಧರಗಿರಿ ಬೆನ್ನಲ್ಲಿ ಪೊತ್ತಿದ್ದಾನೆ,ಸುಂದರ ಸ್ತಿçÃಯಾಗಿ ಸುರರಿಗೆ ಅಮ್ರತ ಉಣಿಸಿದ್ದಾನೆ, ಅಮರರಿಗೆ ಬಂದ ಕಂಟಕ ಪರಿಹರಿಸಿದ್ದಾನೆ,ನರಸಿಂಹನಾಗಿ ಬಾಲಕನನ್ನು ಕಾಯ್ದಿದ್ದಾನೆ, ಪಥದಿ ಶಿಲೆಯ ಒದ್ದು ಸತಿಯನ್ನು ಪಾವನ ಗೋಳಿಸಿದ್ದಾನೆ.ದಶಾವತಾರದ ವಿಚಾರ ಹೇಳುತ್ತ ರಾಮಾವತಾರದ ವಿಚಾರವನ್ನು ವಿವರವಾಗಿ ಹೇಳುತ್ತಾರೆ. ಭಕ್ತರಕ್ಷಕನಾದ ಹರಿಯ ನಾಮವನ್ನು ದಿನದಿನದಿ ಪಠಿಸಲು ಅಪೇಕ್ಷಿತ ಫಲವನ್ನು ನೀಡುತ್ತಾನೆಂದು ಸೂಚಿಸಿತ್ತಾರೆ. ಹನುಮಂತ ಶತಾಷ್ಟಕ-; ಈ ಅಷ್ಟಕವು ಕೂಡಾ ಒಂದುನೂರಾ ಎಂಟು ನುಡಿಗಳಲ್ಲಿದೆ. ಪ್ರತಿ ನುಡಿಯು ಮೂರು ಚರಣಗಳನ್ನು ಹೊಂದಿದೆ. ಎರಡನೆಯ ಚರಣದಲ್ಲಿ’ಧೀಮಂತ’ ಮೂರನೆಯ ಚರಣದಲ್ಲಿ ‘ಜೈ ಶ್ರೀರಾಮನ ದೂತ್ಹನುಮಂತ’ ಎಂಬ ಪದದೊಂದಿಗೆ ಮುಕ್ತಾಯಗೊಳ್ಳುತ್ತವೆ.ರಾಮಾವತಾರದ ಆಂಜನೇಯನ ಭಕ್ತಿಯ ಚಿತ್ರಣ ಇಲ್ಲಿದೆ.ಹನುಮಂತನ ಜನನ ,ಬಾಲ್ಯದಲೀಲೆಗಳ ಕುರಿತಾಗಿ ಹೇಳುತ್ತಾರೆ. ಬಾಲತನದಿ ಘನಲಿಲೆ ತೋರಿದ ಸುಶೀಲ ಅಸಮಬಲ ಧೀಮಂತ,ತಿಳಿಯದ್ಹಣ್ಣುಯೆAದು ನಳಿನಮಿತ್ರನನು ಸೆಳೆದು ನುಂಗಿದನು, ಆನಂತರ ಸಪ್ತಧ್ವಿಭುವನಗಳ್ಹೊತ್ತು ಆಳುವನಂ ಹೊತ್ತು ಹಾರಿದನು ಧೀಮಂತ, ಮೋಡಗಳಿಕ್ಕಡಿ ಮಾಡುತ ಪೊಕ್ಕನು ಗಾಢಸಾಮರ್ಥದಿ, ಮೈನಾಕಪರ್ವತದೈನ್ಯಪಡಲು ಸನ್ಮಾನವಿತ್ತನು, ಧಾತ್ರಿ ಜಾತೆಗೆ ಮಹಾ ಖಾತ್ರಿ ತೊರಿಸಿ ಕೃಪಾ ಪಾತ್ರನಾದ,ಮಂಕು ದಾನವರ ಬಿಂಕಬಿಡಿಸಿದನು, ಭಕ್ತಿಯಿಂದ ಜಗದಾಪ್ತನ ಮನಸಿಗೆ ತೃಪ್ತಿಯ ನಿತ್ತನು ಧೀಮಂತ’ ಎಂದು ರಾಮಾಯಣದಲ್ಲಿ ಹನುಮಂತನು ನಿರ್ವಹಿಸಿದ ಕಾರ್ಯಗಳೆನ್ನಲ್ಲಾ ಸ್ವಾರಸ್ಯವಾಗಿ ಹೇಳುತ್ತಾರೆ. ಶಿವಾಶತಾಷ್ಟಕ-;ಈ ಅಷ್ಟಕವೂ ಒಂದುನೂರಾ ಎಂಟು ನುಡಿಯನ್ನು ಹೊಂದಿದೆ. ಪ್ರತಿ ನುಡಿಯಲ್ಲಿ ಮೂರು ಚರಣಗಳಿದ್ದು ಎರಡನೆಯ ಚರಣದಲ್ಲಿ ಶಂಭು ನಮೋ, ಮೂರನೇ ಚರಣದಲ್ಲಿ ಶಿವ ಸಂಭೋ, ಎಂಬ ಪದಗಳು ನಿಯತವಾಗಿ ಬರುತ್ತವೆ.’ ನೀಲಕಂಠ ಭವ ಮಾಲ ಹರಂ’ ಎಂಬುದು ಆರಂಭದ ಚರಣ. ಶಿವ ಸ್ಮರಣೆ ಜೀವಿಗಳ ಭವ ಜನುಮಗಳನ್ನು ನಾಶ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಲುತ್ತಾರೆ.’ಶಿವನು ಸೂಲಪಾಣಿ,ರುಂಡಮಾಲ, ಉರಗಭೂಷಣ, ಕಾಲ ಸಂಹರ, ಅಂಭುಧಿಧರ, ಗಜಚರ್ಮಾಂಬರ, ಸುಜನಸುಖಂಕರ,ನAದಿ ರೂಢ, ಮುಂತಾಗಿ ಸ್ತುತಿಸಿದ್ದಾರೆ. ಕುಂಬಾರನಿಗೊಲಿದ ಪ್ರಸಂಗ,ಮಾದರ ಚನ್ನಯ್ಯನ ಪ್ರಸಾದ ಸ್ವೀಕರಿಸಿದ ಪ್ರಸಂಗ, ಬಕ್ತಮಾರ್ಕಂಡಯ್ಯನ ಪ್ರಸಂಗ, ಚನ್ನಕ್ಕನ ವ್ರತಕ್ಕೆ ಮೆಚ್ಚಿದ ಪ್ರಸಂಗಗಳನ್ನು ಬಣ್ಣಿಸಿದ್ದಾರೆ.ದಕ್ಷಬ್ರಹ್ಮನ ಯಜ್ಞದ ಪ್ರಸಂಗ, ಗಿರಿಜೆಯ ಅವತಾರ, ಗಿರಿಜಕಲ್ಯಾಣದವಿಚಾರತಾರಕಾರನ ಸಂಹಾರ  ಮುಂತಾದ ಪ್ರಸಂಗಗಳನ್ನು ಹೇಳುತ್ತ ,ಅವರಂತೆ ನನ್ನಮೇಲೂ ಕರುಣೆತೋರು,ಪಾರಮಾರ್ಥ ಪತತೋರಿಸೆಂದು ಬೇಡಿಕೂಳ್ಳುತ್ತಾರೆ. ವಿಠಲಶತಾಷ್ಟಕ-;ವಿಠಲಾಷ್ಟಕವು ಕುಡಾ ಒಂದು ನುರಾಎಂಟು ನುಡಿಯ ಅಷ್ಟಕ.ಇದರಲ್ಲಿ ಒಂದೊAದು ನುಡಿಯಲ್ಲಿ ಮೂರುಚರಣಗಳಿವೆ. ಎರಡನೆಯ ಚರಣದಲ್ಲಿ ಪ್ರೇಮ, ಮೂರನೆಯ ಚರಣದಲ್ಲಿ ಜಯಜಯವಿಠಲನಾಮ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ದಶಾವತಾರದ ವಿಚಾರಗಳು, ಭಾಗವತದ ಪ್ರಸಂಗಗಳು ಬರುತ್ತವೆ.ಈ ಅಷ್ಟಕದ ವಿಶೇಷವೆಂದರೆ ಕನಕದಾಸ, ಪುರಂದರದಾಸ, ವಿಜಯದಾಸ, ಗೋಪಾಲದಾಸ, ಶ್ರೀರಾಘವೇಂದ್ರ ಗುರುಗಳ, ಪುಂಡರೀಕ, ಸಂತ ತುಕಾರಾಮರ ವಿಚಾರಗಳು ಬಂದಿರುವುದು.                                                 ರಾಮದಾಸರ ಈ ಅಷ್ಟಕಗಳು,ಕೀರ್ತನೆಗಳು ಭಗವಂತನ ಲೀಲೆಗಳನ್ನು ಹೇಳುವುದರ ಜೂತೆಗೆ ರಾಮದಾಸರ ಅಧ್ಯಯನಶೀಲತೆಯನ್ನು ಕವಿತ್ವ ಶಕ್ತಿಯನ್ನು ಸೂಚಿಸಿತ್ತವೆ.ಸಂಪ್ರದಾಯಕವಾಗಿ ಭಜನೆಮಾಡುವ ಭಕ್ತರಿಗೆ ಸಾಧನಕಲ್ಪಗಳಾಗಿವೆ. ಉಪಮೆ, ದೃಷ್ಟಾಂತ, ಶ್ಲೇಷಾಲಂಕಾರಗಳು,ಪ್ರಾಸಾನುಪ್ರಾಸಗಳು ನಾದ-ಲಯಗಳಗೆ ಪೂರಕವಾಗಿಬಂದಿವೆ.            ಇನ್ನು ಇವರು ಏಳುನೂರಕ್ಕೂ ಅಧಿಕ ಕೀರ್ತನೆಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಗಣಪತಿ,ಪಾರ್ವತಿ,ಶಿವ,ವಾಯುದೇವರು ಭಾರತಿ ಸರಸ್ವತಿ ಮತ್ತು ತಾರತಮ್ಯೋಕ್ತವಾಗಿ ಎಲ್ಲಾ ದೇವತೆಗಳ ಸ್ತೋತ್ರವನ್ನು ಕಾಣುತ್ತೇವೆ,`ಪಾದಕಂಡು ಪಾವನಾದೆನೋ ಶ್ರೀಗಿರಿನಿಲಯನ ಪಾದಕಂಡು ಪಾವನಾದೆನೋ’ ಎಂಬಕೀರ್ತನೆ ಭಕ್ತವೃಂದದಲ್ಲಿ ಬಹು ಜನಜನಿತವಗಿದೆ,ತಿರುಪತಿ ವೆಂಟರಮಣನವೈಭವ ವೈಭವವನ್ನು ಸುಂದರವಾಗಿ ಬಣ್ಣಿಸಿದ್ದಾರೆ. ಮಾದವತೀರ್ಥರ ಮತ್ತು ರಾಘವೇಂದ್ರತೀರ್ಥರ ಕುರಿತು ಕೀರ್ತನೆಗಳನ್ನು ರಚಿಸಿದ್ದಾರೆ.ಇವರು ಉಡಪಿ,ಪಂಢರಾಪುರ, ಕೊಲ್ಲಾಪುರ,ಕಾಶಿ,ತಿರುಪತಿ ರಾಮೇಶ್ವರ ಮಂತ್ರಾಲಯ, ಬುದ್ದಿನ್ನಿ ಮುಂತಾದ ಕ್ಷೇತ್ರಗಳನ್ನು ಸಂದರ್ಶೀಸಿದ್ದಾರೆ ಸಾಮಾಜಿಕ ಕಳಕಳಿಉಳ್ಳಕೀರ್ತನೆಗಳನ್ನು ರಚಿಸಿದ್ದಾರೆ. ಕನ್ನಡ ಉರ್ದಮಿಶ್ರಿತ ಭಾಷೆಯನ್ನು ಬಳಸಿದ್ದಾರೆ. ಭಾಷಿಕವಾಗಿ ಅಧ್ಯಯನ ಮಾಡುವವರಿಗೆ ಇವರ ಕೀರ್ತನೆಗಳು ಆಕ಼ರ್ಷಸಕವಾಗಿವೆ. ಇವರು ತಮ್ಮ ಜೀವನಾವದಿಯಲ್ಲಿ ಸಜ್ಜನರೊಂದಿಗೆ ಜೀವಿಸಿ,ಸುಸಂಸ್ಕರತ ವಿಚಾರಗಳನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಧಾರೆ ಎರೆದು ಜೀವನ ಸಾರ್ಥಕಮಾಡಿಕೊಂಡಿದ್ದಾರೆ. ಇವರ ಜೀವನ ಸಾಧನೆ ಭಾರತೀಯರಿಗೆ ಅದರಣೀಯ ಮತ್ತು ಅನುಕರಣೀಯವಾಗಿದೆ. ಇವರು ಮಾರ್ಗಶಿರ ಬಹುಳ ದಶಮಿಯಂದು ದೈವಾಧೀನವಾಗುತ್ತಾರೆ. ಇವರ ಆರಾಧನೆಯನ್ನು ಗೋನವಾರ ಮತ್ತು ಲಿಂಗದಳ್ಳಿಯಲ್ಲಿ ಆಚರಿಸಲಾಗುತ್ತದೆ. ಲಿಂಗದಳ್ಳಿಯಲ್ಲಿ ಹವನ ಹೋಮಗಳೊಂದಿಗೆ ಪ್ರವಚನ, ದಾಸವಾಣಿ,ಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ರಾಮಾಂಕಿತ ರಾಮದಾಸರು ಎಂಬ ವಾಟ್ಸಪ್ ಗ್ರೂಪಿನ ಮುಖಾಂತರ ರಾಮದಾಸರ ಕೀರ್ತನೆಗಳ ಅರ್ಥವಿಶ್ಲೇಷ಼£ಣೆ,ಹಾಡುಗಾರಿಕೆಯಂತಹ ಚಟುವಟಿಕೆಯನ್ನು ಶ್ರೀಕೃಷ್ಟಾಚಾರ ಗುಡುಗುಂಟಿಯವರು ಹಮ್ಮಿಕೊಳ್ಳುತ್ತಾ ರಾಮದಾಸರ ಸಾಹಿತ್ಯದ ವಿಶೇಷತೆಯನ್ನು ಜನರಿಗೆ ತಲುಪಿಸುತ್ತಿದ್ದಾರೆ.            ಇವರ ಕುರಿತಾಗಿ ಡಾ.ಸ್ವಾಮಿರಾವ ಕುಲಕರ್ಣಯವರು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.ಇವರ ಕೀರ್ತನೆಗಳನ್ನು ಡಾ.ಟಿ.ಎನ್ ನಾಗರತ್ನಾ,ಪ್ರಸಾರಾಂಗ ,ಮೈ¸ಸೂರು ವಿಶ್ವವಿದ್ಯಾಲಯದಿಂದ ಪ್ರಕಟೆಸಿದ್ದಾರೆ. ಆನಂತರ ಕನ್ನಡಮತ್ತು ಸಂಸ್ರೃತಿ ಇಲಾಖೆ ಬೆಂಗಳೂರು,ಕರ್ನಾಟಕ ಸರಕಾರದಿಂದ ಪ್ರಕಟಸಲಾಗಿದೆ. ಇವರ ಕೆಲ ಕೀರ್ತನೆಗಳು ಇಂಗ್ಲೀಷಿಗೂ ತರ್ಜುಮೆ ಗೊಂಡಿವೆ.ಇವರ ಸಾಹಿತ್ಯದ,ಭಾಷೆಯ,ವಿವಿಧ ಆಯಾಮದ ಕುರಿತಾಗಿ  ಕುರಿತಾಗಿ ಇನ್ನೂ ಸಂಶೋಧನೆಗಳು ಆಗಬೇಕಾಗಿದೆ. ಇಬರ ಸಾಹಿತ್ಯ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ. ಡಾ.ಶೀಲಾದಾಸ, ರಾಯಚೂರು.

ಹೆನ್ನೆರಂಗವಿಠಲದಾಸರು

ಭಾರತದ  ಪ್ರಮುಖ ಸಂಸ್ಥಾನಗಳಲ್ಲಿ ಸುರುಪುರದ ಸಂಸ್ಥಾನವೂ ಒಂದು. ಈ ಸಂಸ್ಥಾನವು ನೀಡಿದ ಸಾಂಸ್ಕೃತಿಕ ಕೊಡುಗೆ ಅನನ್ಯವಾಗಿದೆ. ಅನೇಕ ಮಠಾಧೀಶರು ಇಲ್ಲಿಗೆ ಆಗಮಿಸಿ ಪೂಜಾದಿ ಕೈಂಕರ್ಯವನ್ನು ಮಾಡಿ ಸನ್ಮಾನಿತರಾಗಿದ್ದಾರೆ. ಹರಿದಾಸರು, ಕಲಾವಿದರು ಸಂಸ್ಥಾನದ ಆಶ್ರಯವನ್ನು ಪಡೆದುಕೊಂಡಿದ್ದಾರೆ. ಅಂತಹ ಹರಿದಾಸರಲ್ಲಿ ಹೆನ್ನೆರಂಗವಿಠಲದಾಸರೂ ಪ್ರಮುಖರಾಗಿದ್ದಾರೆ.         ಇವರನ್ನು ಹೊನ್ನಪ್ಪದಾಸರು, ಹೆನ್ನೆರಂಗದಾಸ, ಹೆನ್ನೆರಂಗವಿಠಲದಾಸ ಎಂದು ಮುಂತಾಗಿ ಕರಿಯುವ ರೂಡಿಯಿದೆ. ಇವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವಜ್ರಕರೂರು ಮಂಡಲದ ಗಡೇಹೂತೂರು ಎಂಬ ಗ್ರಾಮದಲ್ಲಿ ಜನಿಸಿದರು. ಪೆನ್ನಾಅಹೋಬಿಲ ಎಂಬುದು ಪ್ರಸಿದ್ಧ ನರಸಿಂಹ ಕ್ಷೇತ್ರವಾಗಿದೆ. ಈ ಕ್ಷೇತ್ರದ ಪ್ರಭಾವ ಹೆನ್ನೆರಂಗದಾಸರ ಮೇಲಾಗಿದೆ. ಇವರು ನರಸಿಂಹದೇವರ ಪರಮ ಭಕ್ತರು. ಈ ಕಾರಣದಿಂದಾಗಿ “ಹೆನ್ನೆರಂಗವಿಠಲ,ಹೆನ್ನೆಪುರವಾಸ’’ ಎಂಬ ಅಂಕಿತದಿAದ ಕೀರ್ತನೆಗಳನ್ನು ಶತಕ ಮತ್ತು ಸೀಸ ಪದ್ಯಗಳನ್ನು ರಚಿಸಿದ್ದಾರೆ. ಇವರ ಕೀರ್ತನ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಕರ್ನಾಟಕ ಸರಕಾರ ಬೆಂಗಳೂರು ಇವರು ಸಮಗ್ರದಾಸ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟಿಸಿದ್ದಾರೆ.ಸಂಪಾದಕರು ಡಾ,ಬಸವರಾಜ ಸಬರದ ಮತ್ತು ಡಾ.ಜಯಲಕ್ಷಿö್ಮಮಂಗಳಮೂರ್ತಿ.ಸA.೨೯ ಭಾಗ-೧ ,ಭಾಗ -೨.          ಇವರ ವೈಯಕ್ತಿಕ ಜೀವನದ ವಿಚಾರಗಳು ಮತ್ತು ಅಂಕಿತ ಪ್ರದಾನದ ವಿಚಾರಗಳು ತಿಳಿದು ಬಂದಿಲ್ಲ. ಅದರೂ ಇವರು ಕೆಲಕಾಲ ಗಡೇಹೂತೂರಿನಿಂದ ಕಡಮಲಕುಂಟ ಗ್ರಾಮಕ್ಕೆ ಬಂದು ನೆಲಸಿದ್ದರು. ಆಗ ಸುರುಪುರದ ದೊರೆ ವಾಸುದೇವನಾಯಕರ ಆಗ್ರಹದ ಮೇರೆಗೆ ಸುರಪುರದ ಮುದೇನೂರಿಗೆ ಆಗಮಿಸಿದರು.  ಈ ಗ್ರಾಮದಲ್ಲಿ ಸ್ವಯಂಭೂ ರುಕ್ಮಿಣಿ ಪಾಂಡುರAಗಸ್ವಾಮಿ, ವೇಣುಗೋಪಾಲಸ್ವಾಮಿ, ನರಸಿಂಹಸ್ವಾಮಿಯ ನಿತ್ಯಪೂಜೆಯನ್ನು ನೆರವೇರಿಸುತ್ತಾ ಅಲ್ಲಿಯೇ ಕೆಲಕಾಲ ಉಳಿದುಕೊಂಡರೆAದು ತಿಳಿದು ಬರುತ್ತದೆ. ಇದರಿಂದ ಇವರ ಕಾಲವನ್ನು ಸು. ೧೭ನೆಯ ಶತಮಾನ ಎಂದು ಗುರುತಿಸಲಾಗಿದೆ.        ಎಲ್ಲಾ ಹರಿದಾಸರಂತೆ ಇವರೂ ಹರಿಸರ್ವೋತ್ತಮತ್ವವನ್ನು ಸಾರಿದರು. ಕೀರ್ತನೆಗಳಲ್ಲಿ ವೇದವೇದಾಂತದ ಪರಿಮಳ ಭರಿತ ಕುಸುಮಗಳನ್ನಾಗಿ ರೂಪಿಸಿ  ತಮ್ಮ ಆರಾಧ್ಯದೈವ ಪೆನ್ನಾ ಅಹೋಬಿಲ ನರಸಿಂಹಸ್ವಾಮಿಯ ಅಕ್ಷರಮಾಲೆಯನ್ನಾಗಿ ಮಾಡಿ ಸಮರ್ಪಿಸಿದ್ದಾರೆ.ಇವರು ರಚಿಸಿದ ಕೀರ್ತನೆಗಳ ಕೆಲವನ್ನು ಇಲ್ಲಿ ಉದಾಹರಿಸುತ್ತೇನೆ. ಇವರಿಗೆ “ಪೆನ್ನಾಅಹೋಬಿಲ ಅನ್ನಮಯ್ಯ’’ ಎಂದು ಭಕ್ತರು ಕರೆಯುತ್ತಾರೆ. ನರಸಿಂಹಸ್ವಾಮಿಯ ಕುರಿತು “ನರಸಿಂಹಾ ನರಸಿಂಹಾ ದರಣಿಧರ ಪರಮ ಕೃಪಾಕರ’ ಎಂದು ನರಸಿಂಹದೇವರ ಭೀಕರ ರೂಪಾ ಮತ್ತು ದುಷ್ಟರ ಸಂಹಾರ ಭಕ್ತರಿಗೆ ಕರುಣಾಕರ ಎಂದು ಬಣ್ಣಿಸುತ್ತಾರೆ. ವಿಷ್ಣುವಿನ ಕುರಿತು“ ವಿಷ್ಣೋ ಭೋ ಸಂಸೇವಿತ ಜಿಷ್ಣೋ ಉಷ್ಣಾಂಶಾಯುತ ಪುರುರೋಚಿಷ್ಣೋ’ ಎಂದು ಸ್ತುತಿಸಿದ್ದಾರೆ. ಇದಲ್ಲದೆ ಮುದೇನೂರು ವೇಣುಗೋಪಾಲಸ್ವಾಮಿ ಕುರಿತು “ ಇದು ರಕ್ಷಿಸುವಂಥಾ ಕಾಲಾ, ಚಿಕ್ಕ ಮುದೇನೂರಗೋಪಾಲ ಮುನಿಜನಲೋಲಾ’’, “ಪಾಲಿಸೋಗೋಪಾಲ ಆಲಿಸೋವೇಣುಗೋಪಾಲ ಮೊರೆಲಾಲಿಸೋ ಭಕ್ತವತ್ಸಲಾ ರುಕ್ಮಿಣಿಲೋಲಾ ಕರುಣಾಲೀಲಾ ಸದ್ಗುಣಶೀಲ” ಎಂದು ಸ್ತುತಿಸಿದ್ದಾರೆ. ರುಕ್ಮಿಣಿಪಾಂಡುರAಗನ ಕುರಿತು ಸ್ತುತಿಸಿದ್ದರೆ.ಶ್ರೀರಾಮಚಂದ್ರನ ಕುರಿತು“ ಜಗನ್ನಿವಾÀಸ  ಜಾನಕಿರಮಣ, ಜಯ ರಘುರಾಮ ಜಾನಕಿ ಪ್ರೇಮ ಭಯ ಭವ ಪರಿಹಾರ ಪಾವನ ನಾಮ’’, “ದಶರಥರಾಮ ಹರೇ ಸೀತಾಪತೆ ದಶರಥರಾಮ ಸುಧಾಕರವದನ ಪರಶುರಾಮ ಬಾಹುಪರಾಕ್ರಮ ಜಿತಶ್ರೀ,`’ಸ “ರಾಮರಾಮರಾಮ ಹರೇ ರಘು’’ , “ಶ್ರೀರಾಮ ಜಯರಾಮ ಶ್ರೀರಾಮ ರಾಮ ಕಾರುಣ್ಯನಿದಿ ರಾಮ ಕೌಸಲ್ಯರಾಮ’’ ಎಂಬ ಕೀರ್ತನೆ ೩೫ ನುಡಿಗಳ ದೀರ್ಘ ಕೃತಿಯಾಗಿದೆ. ಇದರಲ್ಲಿ ರಾಮಾಯಣದ ಕಥೆಯೊಂದಿಗೆ ಶ್ರೀರಾಮನ ನಾಮದ ಮಹಿಮೆಯನ್ನು ಸಾರಲಾಗಿದೆ. ರಾಮನ ಸ್ವಭಾವ, ರೂಪ, ಸೇತುಬಂದದ ಪ್ರಸಂಗ,ಅಸುರರ ಸಂಹಾರದ ಪ್ರಸಂಗವನ್ನು ಕೊಂಡಾಡಿದ್ದಾರೆ. ಶ್ರೀಕೃಷ್ಣನ ಕುರಿತು“ದೇವಕಿನಂದನ ಕೃಷ್ಣಾ ದೇವಕಿನಂದನ ಧೇನುಕಭಂಜನ ಭಾವಜಪಿತ ಶ್ರೀಕೃಷ್ಣಾ,`’ “ಬಾರೋ ರಂಗಯ್ಯ, ಬಾರೋ ಕೃಷ್ಣಯ್ಯ ಬಾರೋ ರಂಗ ನವನೀರದ ನಿಭಾಂಗ’’, “ರಂಗಬAದಾನೋ ಮೋಹನಾಂಗಬAದಾನೋ ರಂಗಬAದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ”, “ಬಂದನು ಕೃಷ್ಣ ಗೋವಿಂದ ಮುಕುಂದ ಬಂದನು ಕೃಷ್ಣ ಭವಬಂಧನ ಪರಿಹಾರ,’ ಎಂದು ಬೇರೆ ಬೇರೆ ಕೀರ್ತನೆಗಳಲ್ಲಿ ಶ್ರೀಕೃಷ್ಣನ ಲೀಲೆಗಳು ಮತ್ತು ಭಕ್ತರ ಹೃತ್ಕಮಲವಾಸಿ ಕೃಷ್ಣನನ್ನು ಬಗೆಬಗೆಯಾಗಿ ಬಣ್ಣಿಸಿದ್ದಾರೆ. ತಿರುಪತಿಯ ವೆಂಕಟರಮಣನ ಕುರಿತಾಗಿ `ಶೇಷಗಿರಿಯವಾಸ ಶ್ರೀವೆಂಕಟೇಶಾ ಶಾಸ್ವತ ಜಗದೀಶ,……ಹರಿನಾರದವರದ ಅಗಣಿತ ಮಹಿಮನ ಆನಂದನಿಲಯನ,’’ ಎಂಬ ಕೀರ್ತನೆಯನ್ನು ರಚಿಸಿದ್ದಾರೆ. ಈ ಕೀರ್ತನೆಯಲ್ಲಿ ತಿರುಪತಿ ವೆಂಕಟೇಶನ ಮಹಿಮೆ ಮತ್ತು ದಶಾವತಾರದ ವರ್ಣನೆಯನ್ನು ಕಾಣಬಹುದು. ಲಕ್ಷಿö್ಮ,ಹನುಮಂತ ದೇವರು,ಸರಸ್ವತಿ,ಭಾರತಿ,ಗರುಡ,ರುದ್ರ,ಪಾರ್ವತಿ,ಗಣಪತಿಯ  ಪರಿವಾರ ದೇವತೆಗಳ ಕುರಿತಾದ ಕೀರ್ತನೆಗಳನ್ನು ರಚಸಿದ್ದಾರೆ. ಇವರ ಕೀರ್ತನೆಗಳಲ್ಲಿ ಆತ್ಮನಿವೇದನೆಯ ಭಾವಗಳು ಮೂಡಿಬಂದಿವೆ. “ಹೀಗೆ ನಿರ್ದಯೆ ಮಾಡುವರೇ ಶ್ರೀಮನೃಹರೆ’’, “ಲೋಕನಾಯಕಾ ಭಕ್ತರೊಡೆಯನೆಂಬ ಬಿರುದು ಬೇಕಿಲ್ಲವೇನು ನಿನಗೆ,’` “ಸಾಕಲಾರದಿರೆ ನನ್ನ ಯಾಕೆ ಪುಟ್ಟಿಸಿದೆಯೋ ಹರಿಯೆ,`’ “ಸಂದುಹೋಯಿತೀ ಕಾಲವು ವ್ಯರ್ಥ ಸ್ಮರಿಸದೆ ಶ್ರೀಹರಿಯ ಒಂದುಬಾರಿ ಗೋವಿಂದಾ ಎನದೆ ಮಂದನಾಗಿ ಅತಿಮಾತಿಗೆ ಒಳಗಾಗಿ’’ ಮುಂತಾದ ಅನೇಕ ಕೀರ್ತನೆಗಳನ್ನು ನೋಡಬಹುದು.        ಇವರ ಕೀರ್ತನೆಗಳಲ್ಲಿ ಲೋಕನೀತಿಯನ್ನು ಕಾಣುತ್ತೇವೆ.“ಅನವರತ ಜಿವ್ಹದಿ ಆದಿನಾರಾಯಣಾ ಕೃಷ್ಣಾ ಎನಬಾರದೆ” “ಅನುದಿನ ಮನದಲ್ಲಿ ನೆನೆಯೋ ಮನುಜಾ,ಎಲೆಎಲೆ ನೆನೆಯೋ ನೆನೆಯದೆ ಇರಬೇಡಾ ಎಂದಿಗು ಶ್ರೀಹರಿಯ;“ “ಚಿತ್ತದೊಳಗೆ ಹರಿ ಚಿಂತನೆ ಮಾಡಿ ಚಿಂತಿಗಳನು ಬಿಡ್ವುದುತ್ತಮವು”, “ನಂಬಿಗಿಟ್ಟಸAಸಾರ ಇದು ನಂಬಿ ಹಂಬಲಿಸದಿರು ಪೂರಾ”, ಎಂದು ಸಂಸಾರದ ನಿಸ್ಸಾರವನ್ನು  ತಿಳಿಸುತ್ತಾರೆ.         ಒಂದುನೂರಾ ಇಪ್ಪತ್ತೇಳು ನುಡಿಗಳ ಶತಕವನ್ನು ರಚಿಸಿದ್ದಾರೆ. ಪ್ರತಿಯೊಂದು ನುಡಿಗೂ ಹೆನ್ನೆರಂಗ ಎಂಬ ಅಂಕಿತ ಬರುತ್ತದೆ.  ಈ ಶತಕವನ್ನು ನಾಲ್ಕು ಭಾಗವಾಗಿ ವಿಂಗಡಿಸಬಹುದು.ಆರAಬದಲ್ಲಿ ದೇವರ ಸ್ತುತಿಯನ್ನು ಮಾಡುತ್ತಾರೆ. ಎರಡನೆಯದಾಗಿ ಆತ್ಮನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಮೂರನೆಯದಾಗಿ ಬಗವಂತನ ಮಹಿಮೆಗಳನ್ನು ಬಣ್ಣಿಸುತ್ತಾರೆ. ಕೊನೆಯದಾಗಿ ಫಲಶ್ರುತಿಯನ್ನು ಹೇಳುತ್ತಾರೆ. ಈ ಶತಕದಲ್ಲಿ ದಾಸರ ಕವಿತ್ವವನ್ನು ಮತ್ತು ಭಕ್ತಿಯ ಪರಾಕಾಷ್ಟೆಯನ್ನು ಕಾಣುತ್ತೇವೆ.       ಇವರ ಕುರಿತಾದ ಅನೇಕ ಮಹಿಮೆಗಳು ಜನರ ಮನದಾಳದಲ್ಲಿವೆ. ಗಡೇಹೂತೂರಿನಿಂದ ಪೆನ್ನಾಅಹೋಬಿಲಕ್ಕೆ ಸುರಂಗಮಾರ್ಗವಾಗಿ ಹೋಗಿ ನರಸಿಂಹದೇವರ ನಿತ್ಯ ದರುಶನ ಪಡೆಯುತ್ತಿದ್ದರಂತೆ. ಇವರ ಪ್ರಸಿದ್ಧಿಯನ್ನು ಕಂಡ ಕೆಲ ಕುಹಕಿಗಳು ಗೋ ಹತ್ಯಾ ಆರೋಪಣೆ ಮಾಡಿದರಂತೆ.ಆಗ ದಾಸರು ದ್ವಾದಶಸ್ತೋತ್ರಪಠಸಿ ಹಸುವನ್ನು ಬದುಕಿಸಿದರಂತೆ. ಆದಿಶೇ಼ಷನೊಂದಿಗೆ ಮಾತನಾಡುತ್ತಿದ್ದರಂತೆ. ಆದಿಶೇ಼ಷ ಇವರ ಸಹೋದರನೆಂದು ಭಕ್ತರ ಅಚಲವಾದ ನಂಬಿಕೆಯಾಗಿದೆ. ಇದರಿಂದ ಇವರಿಗೆ ಭೂಮಿ ದೊರೆಯಿತಂತೆ. ಅದಕ್ಕೆ ಆ ಪ್ರದೇಶವನ್ನು ನಾಗಪ್ಪಮಾನ್ಯಂ ಎಂದು ಕರೆಯುತ್ತಾರೆ. ಈ ವಿಷಯ ಸರಕಾರಿ ಕಡತದಲ್ಲಿ ದಾಖಲಾಗಿದೆಯಂತೆ.       ಇವರ ಆರಾಧನೆಯನ್ನು ಇವರ ಹೆಣ್ಣುಮಕ್ಕಳ ವಂಶಸ್ಥರಾದ ಶ್ರೀಕೊಪ್ಪರೇಶಾಚಾರ,(ವೇಣು) ಆದೋನಿ ಸಾಕಿನ್ ಹೈದರಾಬಾದ ಅವರು ಬಂಧು ಬಾಂಧವರೊAದಿಗೆ ಸುಮಾರು ೨೫ ವರ್ಷಗಳಿಂದ ವಿಜೃಂಭಣೆಯಿAದ ಮಾಘ ಶುದ್ಧ ಸಪ್ತಮಿ ,ಅಷ್ಟಮಿ ಮತ್ತು ನವಮಿಯಂದು   ಆಚರಿಸುತ್ತಿದ್ದಾರೆ. ಹವನ ಹೋಮಾದಿಗಳು,ಪ್ರವಚನ,ಭಜನೆ,ದಾಸವಾಣಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ.  ಇವರು ಬಾಲ್ಯದಲ್ಲಿದ್ದಾಗ ಇವರ ತಂದೆಯವರು ದಾಸರ ಕಟ್ಟೆಗೆ ಕರೆದುಕೊಂಡು ಹೋಗಿ ನೈವೇದ್ಯಮಾಡಿ ಕೊಂಡು ಬರುತ್ತಿದ್ದರಂತೆ. ಒಮ್ಮೆ ಊರಿನ ಜನ ನೀವು ಭಕ್ತಿಯಿಂದ ದಾಸರ ಕೈಂಕರ್ಯ ಮಾಡುತ್ತೀರಿ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರಿ ಎಂದು ಸೂಚಿಸಿದರಂತೆ.ಅದರAತೆ ಊರ ಜನರ ಸಹಕಾರದಿಂದ ಅಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ.         ದಾಸರ ಕಟ್ಟೆ ಇರುವುದು ನಿರ್ಜನ ಪ್ರದೇಶದಲ್ಲಿ. ಊರಿನಿಂದ ದೂರವಿದೆ. ಗುಂತಕಲ್ಲ ಷ್ಟೇಷನ್ ನಿಂದ ಬಸ್ ಅಥವಾ ಖಾಸಗಿವಾಹನದ ಮುಖಾಂತರ ಈ ಸ್ಥಳಕ್ಕೆ ಹೋಗಬಹುದಾಗಿದೆ. ಆರಾಧನೆಯ ಸಮಯದಲ್ಲಿ ವಸತಿ ವ್ಯವಸ್ಥೆ ಮಾಡಿರುತ್ತಾರೆ. ಇವರ ಆರಾಧನೆ ಆರಂಭವಾಗಿನಿAದ ಪ್ರತಿವರ್ಷ ಹೆಚ್ಚಿನ  ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.  ಮುಂದುವರೆದು ಹೆನ್ನೆರಂಗವಿಠಲದಾಸರ ವೈಯಕ್ತಿಕ ಜೀವನದ ಕುರಿತಾಗಿ ವಿಷಯ ಸಂಗ್ರಹಿಸಲು ಕ್ಷೇತ್ರಕಾರ್ಯವನ್ನೂ ಮಾಡುತ್ತಿದ್ದಾರೆ. ಹೆನ್ನೆರಂಗದಾಸರು ಪೂಜಿಸಿದ ಶ್ರೀದೇವಿ- ಭೂದೇವಿ ಸಹಿತ ವೆಂಕಟರಮಣ ,ವೇಣುಗೋಪಾಲಸ್ವಾಮಿ, ಮತ್ತು ದಾಸರ ಗೋಪಾಳಪುಟ್ಟಿ ಕೊಪ್ಪರೇಶಾಚಾರ ಅವರ ಸೊದರಮಾವನ ಮನೆಯಲ್ಲಿ ನೋಡಲು ಸಿಗುತ್ತವೆ. ಇವರು ರಚಿಸಿದ ಸಾಹಿತ್ಯದ ಕುರಿತಾಗಿ, ಇವರ ವೈಯಕ್ತಿಕ ವಿಚಾರವಾಗಿ ಶೋಧನೆ ನಡೆಯಬೇಕಿದೆ. ಡಾ.ಶೀಲಾದಾಸ ರಾಯಚೂರು.   

`ಗುರುಪದಹಾರ”     

                                                         “ ಧರೆಯುದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ                ವರಪ್ರಹ್ಲಾದರು ವ್ಯಾಸ ಪ್ರಭುಗಳೂ ವರತುಂಗಾತಟದಲ್ಲಿ”  ಈ ಚರಣಗಳು “ಗುರುಪದಹಾರ ”ಎಂಬ ದೀರ್ಘ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ. ಈ ಕೀರ್ತನೆಯನ್ನು  ವೈದ್ಯರಾದ ವಿಠೋಬಾಚಾರ “ವಿಠಲೇಶ’ ಅಂಕಿತದಲ್ಲಿÀ, ನಲವತ್ನಾಲ್ಕು ನುಡಿಗಳಲ್ಲಿ ರಚಿಸಿದ್ದಾರೆ. ಇವರು ಹರಿದಾಸರಾಗಬೇಕೆಂದು ಹೊರಟವರಲ್ಲ. ಗುರುಗಳು ಇವರನ್ನು  ಅನುಗ್ರಹಿಸಿ ಹರಿದಾಸರನ್ನಾಗಿಸಿದ್ದಾರೆ. ಈ ಕೃತಿಯ ರಚನೆಯ ಹಿಂದೆ ಗುರುಗಳ ಕರುಣಾಮಯ ವ್ಯಕ್ತಿತ್ವ ಅಡಗಿದೆ.        ಶ್ರೀವಿಠೋಬಾಚಾರ ಅವರು ೧೯೩೩ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ ಪಡೆದುಕೊಂಡು ನೈಜಾಮ ರಾಜ್ಯದ ನಲ್ಗೊಂಡಾದಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾರೆ. ಐದಾರು ವರ್ಷ ಕಳೆದ ಮೇಲೆ ಇವರಿಗೆ ಉದರಶೂಲೆ ಆರಂಭವಾಗುತ್ತದೆ. ಅನೇಕರಂತೆ ಇವರೂ ನಾಸ್ತಿಕರಾಗಿದ್ದರು. ನಲ್ಗೊಂಡಾದಿAದ ವರ್ಗಾವಣೆಗೊಂಡು ಔರಂಗಾಬಾದಿಗೆ ಹೋಗುತ್ತಾರೆ. ಅಲ್ಲಿ ಒಂದು ರಾತ್ರಿ ಗುರುಗಳು ಸ್ವಪ್ನದಲ್ಲಿ ದರ್ಶÀನ ನೀಡಿ ಗಂಧ-ತುಳಸಿ ಕೊಟ್ಟು ನಮ್ಮೂರಿಗೆ ಬನ್ನಿ ಎಂದAತಾಯಿತು. ಕಾಲ ಕಳೆದಂತೆ ವ್ಯಾಧಿ ಹೆಚ್ಚಾಗಿ ಉದ್ಯೊಗ ಮಾಡಲು ಅಸಾಧ್ಯವಾಗಿ ನೌಕರಿ ಬಿಟ್ಟು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ  ಕರುವಿನಕೊಪ್ಪ ಎಂಬ ಗ್ರಾಮದಲ್ಲಿದ್ದ ಬಂಧುಗಳ ಮನಿಗೆ ಬಂದು ಅಲ್ಲಿ ರಾಯರ ಸೇವೆ ಮಾಡಿದರು. ದಿನ ನಿತ್ಯ ರಾಯರ ಮೃತ್ತಿಕ ಮತ್ತು ಹಸುವಿನ ಹಾಲಿನೊಂದಿಗೆ ಸೇವಿಸುತ್ತಾ ನಲವತ್ತು ದಿನ ಸೇವೆ ಮಾಡಿದರು. ಆಗ ಕ್ರಮೇಣವಾಗಿ ವ್ಯಾಧಿ ಕಡಿಮೆಯಾಗುತ್ತಾ ಬಂತು. ಅವರು ಗುರುಗಳ ದರುಶನ ಮಡದೆ ಆಹಾರ ಸ್ವೀಕರಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದರು. ಮಂತ್ರಾಲಯಕ್ಕೆ ಹೋಗಲು ಏಳೆಂಟು ತಿಂಗಳುಗಳೇ ಬೇಕಾÀಯಿತು. ಆದರೂ ಅವರು ಹಾಲನ್ನು ಹೊರತು ಪಡಿಸಿ ಬೇರೆ ಆಹಾರ ಸ್ವೀಕರಿಸಲಿಲ್ಲ.       ಮಂತ್ರಾಲಯಕ್ಕೆ ಹೋಗಿ ಗುರುಗಳ ವೃಂದಾವನ ದರ್ಶನಮಾಡಿ ಹೊಟ್ಟೆ ತುಂಬಾ ಊಟಮಾಡಿ ಸಂತೋ಼ಷ ಪಡುತ್ತಾರೆ. ಆಗ ಅವರಿಗೆ ಗುರುಗಳನ್ನು ಸ್ತುತಿಸಬೇಕು ಎಂಬ ಉತ್ಕಟ ಅಭಿಲಾಶೆಯಾಗುತ್ತದೆ. ಅಲ್ಲಿಂದ ಗುರುಪದಹಾರ ಕೀರ್ತನೆ ರಚನೆ ಮಾಡಲು ಆರಂಭಿಸುತ್ತಾರೆ. ಈ ಕೀರ್ತನೆಯನ್ನು ಐದುಭಾಗವಾಗಿ ರಚಿಸಿದ್ದಾರೆ.      ಮೊದಲನೆಯ ಭಾಗದಲ್ಲಿ ರಾಯರ ಅವತಾರದ ಕುರಿತು ವಿವರಿಸುತ್ತಾರೆ. ಪ್ರಹ್ಲಾದರಾಜರಾಗಿ `ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ ಮೆರೆಸಿದ ವರ ಪ್ರಹ್ಲಾದರು ಮೆರೆವರು ವರ ಮಂತ್ರಾಲಯದಲ್ಲಿ’ ಎಂದು ಪೂರ್ವ ಅವತಾರದಲ್ಲಿ ಗುರುಗಳು ಹರಿನಾಮದ ಮಹತ್ವ ಸಾರಿದ್ದಾರೆಂದು ವಿವರಿಸುತ್ತಾರೆ. ಮುಂದುವರೆದು ವ್ಯಾಸರಾಜರಾಗಿ `ಹರಿಮತಸಾರುವ ಹರಿ ಪದ ಹಾರವ ಪರಿಪರಿ ವಿಧ ಪದದಲ್ಲಿ ತಿರೆಯೊಳು ಸಾರಿದ ವ್ಯಾಸರು ಮೆರೆವರು ವರ ಮಂತ್ರಾಲಯದಲ್ಲಿ’ ಎಂದು ಮದ್ವಮತ ಮತ್ತು ಹರಿದಾಸ ಸಾಹಿತ್ಯಕ್ಕೆ ಪ್ರೇರಣೆಯಾದರು ಎಂಬುದನ್ನು ಸೂಚ್ಯವಾಗಿ ವಿವರಿಸುತ್ತಾರೆ.           ರಾಯರ ಅವತಾರದ ಕುರಿತು` ಧರೆಯೊಳು ಮುಸುಕಿದ ತಮವನು ತೆರೆಯಲು ಹರುಷದಿ ಕಲಿಯುಗದಲ್ಲಿ  ಗುರುರಾಘವೇಂದ್ರರು ಕರಮೆರೆದಿಹುದು ವರಮಂತ್ರಾಲಯದಲ್ಲಿ’ ಎಂದು ಮೂರೂ ಅವತಾರಗಳು ಜನರನ್ನು ಉದ್ಧಾರ ಮಾಡಲು ಅವತಾರ ಎತ್ತಿದ್ದಾರೆಂಬುದು ಇಲ್ಲಿಯ ವಿಚಾರ. ತನು ಮನ ಧನೆವೆ ಸರ್ವಸ್ವ ಎಂದು ತಿಳಿದ ಪಾಮರರಿಗೆ ಮಣಿದೀಪಕವೆನಿಸಿಹರು. ವಿಷಯಗಳ ದಾಸರಾಗಿ ಬಳಲುವವರಿಗೆ ಜ್ಯೋತಿಯೋಪಾದಿಯಲ್ಲಿ ಜ್ಞಾನದ ಬೆಳಕ ನೀಡುವರು. ಬದುಕಿನ ಬವಣೆಯಲ್ಲಿ ಬಳಲುವ ಜನರಿಗೆ ಬವಣೆ ಬಿಡಿಸಲು ತವಕದಿ ಅವತರಿಸಿದರು ‘ ಎಂದು ಭಕ್ತರ ಬಗೆಗಿನ ಕಾಳಜಿಯ ಕುರಿತಾದ ವಿಚಾರಗಳನ್ನು  ಮೊದಲ ಭಾಗದಲ್ಲಿ ವಿವರಿಸಿದ್ದಾರೆ.       ಎರಡನೆಯ ಭಾಗದಲ್ಲಿ ಕಾಮಧೇನು ಕಲ್ಪವೃಕ್ಷಾ ಚಿಂತಾಮಣಿ ಎಂಬ ವಿಚಾರವನ್ನು ವಿವರಿಸಲಾಗಿದೆ. `ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ, ಧರೆಯೊಳು ಗುರುಗಳ ಮೊರೆಯಿಡಲಾರದ ನನರೇ ಪಾಪಿಗಳೆಲ್ಲಾ’ ಎಂದು ಗುರುಗಳ ಕರುಣೆಯನ್ನು ಸಾರುತ್ತಾರೆ. ಮಂತ್ರಾಲಯವು ಸಾಧನೆಯ ತವರೂರು. ಸಾಧನೆ ಮಾಡಲು ಮಹಾ ತಪಸ್ಸು ಮಾಡಬೇಕಗಿಲ್ಲ, ಶಾಸ್ತçಗಳ ಅದ್ಯಯನ ಮಾಡಿ ಪಂಡಿತರಾಗಬೇಕಿಲ್ಲ. ಸುಮ್ಮನೆ ಗುರುಗಳ ವೃಂದಾವನ ದರ್ಶನ ಮಾಡಿದರೆ ಸಾಕು ಸದ್ಗತಿ ದೊರೆಯುವುದು. ಈ ಕ್ಷೇತ್ರದಲ್ಲಿ ಗುರುಗಳು ಮಧ್ವಮತವೆಂಬ ಸಾಗರಕೆ ಚಂದ್ರನAತೆ ಕಂಗೊಳಿಸುತ್ತಿದ್ದಾರೆ.. ವೇದಿಗಳನೆಲ್ಲಾ ವಾದದಿ ಸೋಲಿಸಿದ ವಾದಿರಾಜರಾಗಿದ್ದಾರೆ. ವೇದಾಂತದ ಪರಿಮಳದ ಸುಹಾ¸ನೆಯೇೆ ಪಸರಿಸಿದೆ ಇಲ್ಲಿ, ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ. ಈ ಕ್ಷೇತ್ರಕೆ ವೈಕುಂಠವೇ ಧಾವಿಸಿಬಂದಿದೆ. ಧನ್ಬಂತರಿ ದೇವತೆಗಳು ಮ£ಒಲಿದು ತನು ದೋರಿರುವರು. ಘನವ್ಯಾಧಿಗಳಿಗೆಲ್ಲ ಧನವೇರಿಸಿ ಹೊಡೆದು ದೂರ ಓಡಿಸುವರು. ಸಕಲವ್ಯಾಧಿಗಳು ನಾಶವಾಗಿ ಹೋಗುವವು. ಪ್ರೇತ ಪಿಶಾಚಿಗಳು ಬಲಮುರಿದು ಬಿದ್ದು ಹೋಗಿವೆ ಇಲ್ಲಿ.  ಸೃಷ್ಟಿಗೀಶನ ದಯದಿಂದ ಸಕಲೇಷ್ಟವು ನೆರವೇರುವುದು. ಅಂಧರು ಕಣ್ದೆರೆದು ನೋಡುವರು, ಮೂಕರು ಗುರುಗಳನ್ನು ಹೊಗಳಿ ಕೊಂಡಾಡುವರು, ಕಿವುಡರು ಗುರುಗಳ ಕೀರುತಿಯ ಆಲಿಸುವರು. ಗುರುಗಳು ಭವಸಾಗರವ ದಾಟಿಸುವ ಬಹು ಅನುಭವಿಕ ನಾವಿಕರು ಇವರು. ಇವರು ಇದ್ದಲ್ಲಿ ಸಂತತಿ,ಸAಪದ,ಆಯುರಾರೋಗ್ಯ ಸಮೃದ್ಧಿಯಾಗಿಪ್ಪುದು.            ಮೂರನೆಯ ಭಾಗದಲ್ಲಿ `ರಾಜರರಾಜ ಗುರುಮಹರಾಜರ ತೇಜವ ಬಣ್ಣಿಸುವುದು ಅಸಾಧ್ಯವಾಗಿದೆ. ಯಾಕೆಂದರೆ ಇವರು ಶ್ರೀಹರಿಯ ಪಾದಸರೋಜವನ್ನು ನಿತ್ಯದಲಿ ಸೇವಿಸುವರು. ಇವರ ಘನತೆಯನ್ನು ಸಾಮಾನ್ಯ ಜನರು ಅರಿಯರು. ತುಂಗಾತೀರದಿ ವಿರಾಜಮಾನರಾದ ಇವರ ಕೀರ್ತಿಯು ಹರಿದಿದೆ, ಮೆರೆದು ವಿಶ್ವದಲೆಲ್ಲ. ಅನಿಮಿಷರೆಲ್ಲರು ಮುನಿಕುಲದೊಂದಿಗೆ ವನಗೋಪಾಲನ ಘನತೆಯ ಕೀರ್ತಿಸಿ ಕುಣಿಯುವರು ಸಂಭ್ರಮದಿAದ. ಭೂಸುರರೆಲ್ಲರು ಕೇಶವನೊಲಿದನ ಸಂತೋಷದಿ ಸ್ತುತಿಪರು ಸೂಸುವ ಭಾಷ್ಪಗಳಿಂದ. ಬೃಂದಾವನದಲ್ಲಿ ವಾಸಿಪ ಗುರುಗಳ ಕಾಂತಿ ಎಂದೆAದಿಗೂ ಕುಂದದು. ಎಳತುಳಸಿಯಮಾಲೆ, ವಿಲಸಿತಕುಸುಮಗಳಿಂದ ಅಲಂಕೃತರಾದ ಗುರುಗಳು ಹರಿಕಳೆಯನ್ನು ಹೊಂದಿದ್ದಾರೆ. ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತರಾದ ಗುರುಗಳು ಪಂಡರಿರಾಯನ ಪ್ರೀಯರು. ರಥವೇರಿ ಗುರುಗಳು ಬರುತಿರೆ ಪೃಥಿವಿಯು ಧಿಮಿಧಿಮಿಯಂದು ಮೊಳಗುವುದು. ಗುರುಗಳು ವರಮಂತ್ರಾಲಯದ ಸಾಮ್ರಾಟರು ವೈಭವದಿಂದ ಮೆರೆಯುತ್ತಾರೆ “ ಎಂದು ಗುರುಗಳ ಮಹಿಮೆ ಮತ್ತು ವೈಭವವನ್ನು ಬಣ್ಣಿಸುತ್ತಾರೆ.           ನಾಲ್ಕನೆಯ ಭಾಗದಲ್ಲಿ ಹರಿಯಂತರ್ಗತರಾದ ಗುರುಗಳ ದರುಶನ ಘನತರವಾದ ಪುಣ್ಯದಾಯಕವಾಗಿದೆ. ಗುರುಗಳ ಸಂಕೀರ್ತನೆ ಸಿರಿ ಸಂಪದವನ್ನು ದೊರಕಿಸಿ ಕೊಡುವುದು. ಗುರು ಪಾದೋದಕವು ಭಕ್ತರ ದುರಿತವನ್ನು ನಾಶಮಾಡುವುದು. ಗುರುಗಳ ಸೇವೆಯು ವರಪದವಿಯ ಕೊಡುವುದು. ಇಂಥಾ ಘನ್ನ ಮಹಿಮರೆ ನನ್ನ ಪ್ರಾರ್ಥನೆ ಕೇಳಿರಿ. ನಾನು ಘನ ಭವರೋಗದಿ, ಅನುಭವ ಭೋಗದಿ ತನುಮನ ತಾಪದಿ ನೊಂದಿಹೆನು. ದಿನದಿನ ಮರುಗಿದೆ ಘನತಾಪದೊಳಿಂದು ಹಸಿವೆ ತೃಷೆಯಾದಿ ವ್ಯಸನಗಳ ವಶನಾಗಿದ್ದೇನೆ. ಬಿಸಜಾಕ್ಷನ ನೆನೆಯದೆ ಪಶುವಿನಂತಿದ್ದೇನೆ. ಶಿಶುವೆಂದು ಪರಿಭಾವಿಸಿ ಮತಿಯನಿತ್ತು ಪೊರೆಯಬೇಕು “ ಎಂದು ನಿವೇದಿಸಿಕೊಳ್ಳುತ್ತಾರೆ.        ಐದನೆಯ ಭಾಗದಲ್ಲಿ ದಾಸರು ಬಹಳ ಭಾವುಕರಾಗುತ್ತಾರೆ. ಇದುವರೆಗೂ ನಾನು ಭಕ್ತಿಯನ್ನು ಅನುಭವಿಸಿದವನಲ್ಲ. ನನ್ನ ಭಕ್ತಿ ಪರಿಶುದ್ಧವಾದ ಮೀಸಲು ಭಕ್ತಿ. ಈ ಭಕ್ತಿಯ ಪದಹಾರವನ್ನು ನಿಮ್ಮ ಪದತಲಕೆ ಸಮರ್ಪಿಸುತ್ತಿದ್ದೇನೆ. ಈ ಭಕ್ತಿಯ ಪದಹಾರವು ಪೂಸಿದ ಪರಿಮಳದ ಬಹು ವಿಕಸಿತಹಾರ. ವಿಠಲೇಶನ ಕರುಣದಿ ಈ ಭಕ್ತಿಯ ಪದಹಾರವನ್ನು ಸಮರ್ಪಿಸುತ್ತಿದ್ದೇನೆ ಎಂದು `ವಿಠಲೇಶ’ ಅಂಕಿತವನ್ನು ತಮಗರಿವಿಲ್ಲದೆ ಪ್ರಯೋಗಿಸುತ್ತಾರೆ. ಶ್ರೀರಾಘವೇಂದ್ರತೀರ್ಥರೆ `ವಿಠಲೇಶ’ ಅಂಕಿತಕ್ಕೆ ಮಾನಸಿಕವಾಗಿ ಪ್ರೇರಕರಾಗಿದ್ದಾರೆ. ಹೀಗೆ ಪದಹಾರ ಸಂಪನ್ನಗೊಳ್ಳುತ್ತದೆ.           ಹೀಗೆ ವಿಠಲೇಶದಾಸರು ಭಕ್ತರಾಗಿ ಅನೇಕ ರಾಯರ ಕೀರ್ತನೆಗಳನ್ನು ರಚಿಸಿದ್ದಾರೆ. ಎಲ್ಲಾ ಕೀರ್ತನೆಗಳು ಜನರ ನಾಲಿಗೆಯಲ್ಲಿ ನಲಿದಾಡುತ್ತಿವೆ. ಹೀಗೆ ಇವರ ಭಕ್ತಿಯ ಭಾವುಕತೆ ವಿಕಸಿತ ಗೊಳ್ಳುತ್ತಾ ನಡೆಯಿತು. ಒಮ್ಮೆ ಬಾಗಲಕೋಟೆಯ ಹತ್ತಿರದ ಆಚಾರಕೊಪ್ಪದಲ್ಲಿ ರಾಯರ ಬೃಂದಾವನ ಪ್ರತಿಷ್ಟಾಪಿಸಬೇಕೆಂದು ಬೃಂದಾವನ ಶಿಲೆಯನ್ನು ಆಯ್ಕೆ ಮಾಡಿ ಸಂಕಲ್ಪಿಸಿದ್ದರAತೆ. ಅದು ಸಾಧ್ಯವಾಗದೇ ಹೋಯಿತು.ಆ ಶಿಲೆಯನ್ನು ಹಾಗೆಯೇ ಕಾಯ್ದಿಟ್ಟಿದ್ದರು. ಕಾಲಾಂತದಲ್ಲಿ ಹೈದ್ರಾಬಾದಿನ ಮಲ್ಕಾಜಗಿರಿಯಲ್ಲಿ ರಾಯರ ಬೃಂದಾವನ ಪ್ರತಿಷ್ಟಾಪಿಸಲು ನಿರ್ಧಾರವಾದಾಗ ಈ ಶಿಲೆಯನ್ನು  ನೀಡಿ ತೃಪ್ತಿಪಟ್ಟರಂತೆ. ಇವರ ರಚಿಸಿದ ಹಾಡುಗಳು ಜನಪ್ರೀಯವಾಗಿವೆ.ಭಕ್ತರ ಹೃದಯದಲ್ಲಿ ಅಚ್ಚೊತ್ತಿದಂತಿವೆ. ತಾವೂ ತಮ್ಮೊಂದಿಗೆ ಅನೇಕ ಭಕ್ತರ ಆತ್ಮೋದ್ಧಾರಕ್ಕೆ ಇವರ ಕೀರ್ತನೆಗಳು ಪೂರಕವಾಗಿವೆ. ಡಾ.ಶೀಲಾದಾಸ, ರಾಯಚೂರು.     ೯೪೪೮೯೭೩೬೭೦. .

ಕಲ್ಯಾಣ ಕರ್ನಾಟಕದ  ಆಧುನಿಕ ಕೀರ್ತನ ಸಾಹಿತ್ಯ

ಯಾವುದೇ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದರೆ, ಅಧ್ಯಯನದ ಅನುಕೂಲಕ್ಕಾಗಿ ವಿಭಾಗಿಸುವುದು ಅನಿವಾರ್ಯ. ಕನ್ನಡ ಸಾಹಿತ್ಯವನ್ನು ಸ್ಥೂಲವಾಗಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡವೆಂದು  ವಿಭಾಗಿಸಿರುವುದು ಸರಿಯಷ್ಟೆ. ಹಾಗೆಯೇ ಹರಿದಾಸ ಸಾಹಿತ್ಯವನ್ನು ಅದ್ಯಯನದ ಅನುಕೂಲಕ್ಕಾಗಿ ಸ್ಥೂಲವಾಗಿ ನಾಲ್ಕು ಘಟ್ಟವೆಂದು ವಿದ್ವಾಂಸರು ವಿಭಾಗಿಸಿದ್ದಾರೆ. ೧)ಮಧ್ವಾಚಾರ್ಯರು ನರಹರಿತೀರ್ಥರಿಂದ ಹಿಡಿದು ಶ್ರೀಪಾದರಾಜರು, ವ್ಯಾಸರಾಜರು, ಮಹಿಪತಿದಾಸರು,ಪ್ರಸನ್ನವೆಂಕಟದಾಸರು ೨)ಪುರಂದರದಾಸರು, ಕನಕದಾಸರು, ೩)ವಿಜಯದಾಸರು, ಗೋಪಾಲದಾಸರು, ಹೆಳವನಕಟ್ಟೆ ಗಿರಿಯಮ್ಮ ಜಗನ್ನಾಥದಾಸರು, ೪) ಪ್ರಾಣೇಶದಾಸರು-ಗುರುಪ್ರಾಣೆಶದಾಸರು ಶಿಷ್ಯ ಪ್ರಶಿಷ್ಯರು. ( ಆಧುನಿಕ ಹರಿದಾಸರು)     ಮುಂದುವರೆದು ಮಧ್ವಾಚಾರ್ಯರಿಂದ ಕನಕದಾಸರವರೆಗೆ ಮೊದಲಘಟ್ಟವಾಗಿ, ವಿಜಯದಾಸರಿಂದ ಪ್ರಸ್ತುತ ಹರಿದಾಸರ ವರೆಗಿನ ಕಾಲವನ್ನು ದ್ವಿತೀಯ ಘಟ್ಟವಾಗಿಯೂ ಇನ್ನೊಂದು ವಿಧದಲ್ಲಿ ವಿಭಾಗಿಸಲಾಗಿದೆ. ಈ ವಿಭಾಗ ಕ್ರಮವನ್ನೂ ಒಪ್ಪಬಹುದಾಗಿದೆ. ಈಗಾಗಲೇ ಹೇಳಿದಂತೆ ಇದು ಅಧ್ಯಯನದ ಅನುಕೂಲಕ್ಕಾಗಿ ಮಾತ್ರ. ಹರಿದಾಸಸಾಹಿತ್ಯ ಇಡಿಯಾದ ಪರಂಪರೆಯನ್ನು ಹೊಂದಿದೆ. ಮೆಲ್ನೋಟಕ್ಕೆ ಹಲವು ವ್ಯತ್ಯಾಸ ಕಂಡು ಬಂದರೂ ಸಾಹಿತ್ಯದುದ್ದಕ್ಕೂ ಭಕ್ತಿಯೇ ಮೂಲ ಸೂತ್ರ. ನರಹರಿತೀರ್ಥರಿಂದ ಹರಿದಾಸ ಸಾಹಿತ್ಯ ಉಗಮಗೊಂಡರೂ ಶ್ರೀಪಾದರಾಜರು, ವ್ಯಾಸರಾಜರು,ಕನಕ-ಪುರಂದರದಾಸರAಥವರಿAದ ಬೆಳೆದುಬಂದಿದೆ.       ಹರಿದಾಸರು ಸಮಾಜೋಧಾರ್ಮಿಕ ನೆಲೆಯಲ್ಲಿ, ಸಮಾಜಮುಖಿ ಚಿಂತನ ಮಾಡಿದವರು. ವೇದವಾಙ್ಮಯದಲ್ಲಿ ಅಡಗಿದ ತತ್ವಸಿದ್ಧಾಂತಗಳನ್ನು ಲಲಿತವಹ ಸರಳಗನ್ನಡದಲ್ಲಿ ಗಾಯನದಮೂಲಕ ಅರುಹಿದವರು. ಇವರ ತತ್ವಸಿದ್ಧಾಂತಗಳು ಮೌಖಿಕವಾಗಿ ತಲೆಮಾರಿನಿಂದ ತಲೆಮಾರುಗೆ ಹರಿದುಬಂದು ಇಂದು ಗ್ರಂಥಸ್ಥವಾಗಿದ್ದರೂ ಜನಪದ ಸಾಹಿತ್ಯದಂತೆ ಇನ್ನೂ ಜನರ ನಾಲಿಗೆಯಮೇಲೆ ಉಳಿದಿದೆ ಎಂಬುದೂ ಸತ್ಯವಾಗಿದೆ.        ಹರಿದಾಸರಿಗೆ ಮದ್ವಸಿದ್ಧಾಂತ ಮೂಲಧಾತುವಾಗಿದೆ. ನಾಲ್ಕುವೇದಗಳು ಆರುಶಾಸ್ತçಗಳು, ಹದಿನೆಂಟು ಪುರಾಣಗಳು,ಶ್ರುತಿ-ಸ್ಮೃತಿಗಳಸಾರ ಕೀರ್ತನ ಸಾಹಿತ್ಯದಲ್ಲಿ ಮೇಳೈಸಿವೆ. ಹರಿದಾಸರು ಮಧ್ವಾಚಾರ್ಯರ ದ್ವೆöÊತಸಿದ್ಧಮತದ ಮೇಲೆ ಅಚಲವಾದ ವಿಶ್ವಾಸ ಉಳ್ಳವರು. ಅವರ ಕುರಿತಾಗಿ ,ಅವರ ಅವತಾರತ್ರಯಗಳ ಕುರಿತಾಗಿ ಅನೇಕ ಕೀರ್ತನೆಗಳನ್ನು  ರಚಿಸಿದ್ದಾರೆ. ಇವರು ಅಪ್ರತಿಮ ಜ್ಞಾನಬಲ ಉಳ್ಳವರು. ಇವರು ಸಾರಿದ ತತ್ವಗಳನ್ನು ವ್ಯಾಸರಾಜರು ಶ್ಲೋಕದರೂಪದಲ್ಲಿ ರಚಿಸಿದರೆಂದು ಪ್ರತೀತಿ ಇದೆ. ಹರಿಸರ್ವೋತ್ತಮ, ಜಗತ್ತುಸತ್ಯ, ಪಂಚಭೇದಗಳು,ಜೀವರು ಹರಿಯ ಅನುಚರರು ,ತಾರತಮ್ಯ,ಮೋಕ್ಷ ಸಾಧನೆಯಲ್ಲಿ ಜ್ಞಾನ-ಭಕ್ತಿ-ವೈರಾಗ್ಯ, ಪ್ರತ್ಯಕ್ಷ, ಅನುಮಾನ,ಆಗಮಗಳೆಂದು ಮೂರು ಪ್ರಮಾಣಗಳು, ಶ್ರೀಹರಿಯು ವೇದಗಳಿಂದ ಪ್ರತಿಪಾದ್ಯನು. ಈ ತತ್ವಗಳನ್ನು ಪ್ರಾಚೀನರು ಆಧುನಿಕರ ಹರಿದಾಸರು ಅರುಹಿದ್ದಾರೆ. ಇದರೊಂದಿಗೆ ಸಾಮಾಜಿಕ. ಸಾಹಿತ್ಯಿಕ ವಿಚಾರಗಳೂ ಅಭಿವ್ಯಕ್ತಿ ಹೊಂದಿವೆ.       ಕೀರ್ತನೆಗಳು ಹರಿದಾಸ ಸಾಹಿತ್ಯದ ಒಂದು ಪ್ರಕಾರ. ಇದಲ್ಲದೆ ಸುಳಾದಿ,ಉಗಾಭೋಗ, ದಂಡಕ,ತ್ರಿಪದಿ,µಟ್ಪದಿ,ಸಾAಗತ್ಯ ಬಯಲಾಟ ಗದ್ಯರೂಪಗಳಾದ ಕತೆ,ಒಗಟು,ಒಡಪುಗಳಂತಹ ಪ್ರಕಾರಗಳನ್ನು ಬಳಸಿ ಕೊಂಡಿದ್ದಾರೆ. ರೂಪಗಳು ಬೇರೆಯಾದರೂ ಧೋರಣೆ ಮಾತ್ರ ಒಂದೆ. ಆದ್ದರಿಂದ ದಾಸಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಜನರು ಕೀರ್ತನಸಾಹಿತ್ಯ ಎಂದು ಸ್ಥೂಲವಾಗಿ ಕರೆಯುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಪ್ರಸ್ತುತ ಈ ಲೇಖನದಲ್ಲಿ ಎಲ್ಲಾ ಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ.         ಮನೋಹರವಿಠಲಾಂಕಿತರಾದ ನಾರಾಯಣಪ್ಪನವರು, ಹೂನುರೇಶ ಅಂಕಿತರಾದ ತುರಡಿಗಿ ತಿಮ್ಮಮ್ಮನವರು, ಶ್ರೀಪ್ರಾಣೆಶದಾಸರು, ಗುರುಜಗನ್ನಾಥದಾಸರು, ಸುರಪುರದ ಆನಂದದಾಸರು, ಹರಪನಹಳ್ಳಿ ಭಿಮವ್ವ, ಶೇಷದಾಸರು ಸುಂದರವಿಠಲರು, ಗೋವಿಂದದಾಸರು, ಕಲ್ಯಾಣಿ ಶ್ರೀನಿವಾಸದಾಸರು,  ಶ್ರೀಧೀರೇಂದ್ರ ವೈದ್ಯ, ಗಿರಿಯಾಚಾರ್ಯರು, ಸುಳಾದಿಕುಪ್ಪೆರಾಯರು, ಕಸಬೆ ಪಾಂಡುರAಗರಾಯರು, ನಾರಾಯಾಣಾ ಚಾಂiÀiðರುಬೂದೂರು, ರಾಮದಾಸರು, ಶ್ಯಾಮಸುಂದರದಾಸರು, ಭೀಮದಾಸರು ಮುಂತಾದ ಅನೇಕರು ಕಂಡು ಬರುತ್ತಾರೆ.       ವೇದಶಾಸ್ತçಗಳು `ಹರಿಯೇ ಸರ್ವೋತ್ತಮನೆಂದು’ ಪ್ರತಿಪಾದಿಸಿವೆ. ಮಧ್ವಾಚಾರ್ಯರ ಸರ್ವಮೂಲಗ್ರಂಥಗಳೂ ಇವುಗಳನ್ನೇ ಪ್ರತಿಪಾದಿಸಿವೆ. ಹರಿದಾಸರು ಹರಿಸರ್ವೋತ್ತಮತ್ವ ಮತ್ತು ವಾಯುಜೀವೋತ್ತಮತ್ವವನ್ನು ಸಾರಿದ್ದಾರೆ. ಮದ್ವಸಿದ್ಧಾಂತದ ಪ್ರಕಾರ ಶ್ರೀಹರಿಯು ಸರ್ವಶಕ್ತ. ಎಲ್ಲಾ ಜೀವಿಗಳಲ್ಲಿ ತಾನಿದ್ದು, ಆಯಾ ನಾಮ ವಾಚಕನಾಗಿದ್ದು ಕಾರ್ಯಗೈಯುವನು. ಅವನ ಶಕ್ತಿಯಲ್ಲಿ ತಾರತಮ್ಯವಿಲ್ಲ. ತ್ರಿವಿಧ ಜೀವರಿಗೆ ಅವರವರ ಗತಿಗನುಗುಣವಾಗಿ ಗತಿ ನೀಡುವನು. ಸರ್ವವ್ಯಾಪ್ತನಾÀಗಿದ್ದು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣಕರ್ತನು,          ಭಗವಂತನ ಕುರಿತು ಶ್ರೀಸಿರಿಗೋವಿಂದವಿಠಲರು ಇಪ್ಪತ್ತೆöÊದು ದ್ವಿಪದಿಗಳಲ್ಲಿ ಹರಿಯ ಸರ್ವೂತ್ತಮತ್ವವನ್ನು ಬಣ್ಣಿಸಿದ್ದಾರೆ.    “ಮೋದಭರಿತ ಕೇಶವನೆ ಈ ಜಗದಾದಿಕರ್ತನೆಂಬೋದು ಖರೆ     ಸಾಧಿಸಿಕೊಂಬುವ ವಿಭುಧರ ಕೈವಶವಾಗುತ್ತಿಪ್ಪನೆಂಬುದು ಖರೆ.”    ಐಕೂರಾಚಾರ್ಯರು“ ಹರಿಯೇ ಪರತರ ಪರಮ ದೇವದೇವಾ                  ಸಾರುತಿವೆ ವೇದಾ ಶೃತಿ ಸ್ಮೃತಿ ಪುರಾಣಗಳು” ಎಂದಿದ್ದಾರೆ. ಪರಮಾತ್ಮನು ಸಕಲಜೀವರಾಶಿಗಳಲ್ಲಿ ಬಿಂಬರೂಪಿಯಾಗಿರುವನು ಎಂದು ವರದರಾಜವಿಠಲರು ತಿಳಿಸುತ್ತಾರೆ.  ಮಧ್ವಾಚಾರ್ಯರು ಜಗತ್ತು ಸತ್ಯ ಎಂಬತತ್ವವನ್ನು ಸಾರಿದ್ದಾರೆ. ಭಗವಂತನು ಜಗತ್ತನ್ನು ಸೃಷ್ಟಿಸಿ ಜೀವಿಗಳಿಗೆ ಕೈವಲ್ಯಮುಂತಾದ ಪದವಿ ಕೊಡಲು ಸಹಾಯಕನಾಗಿದ್ದಾನೆ. ಈ ಸೃಷ್ಟಿಯಲ್ಲಿ ಐದು ವಿಧ. ಜೀವ-ಈಶ್ವರ, ಜೀವ-ಜೀವ, ಜೀವ-ಜಡ,  ಜಡ-ಜಡ, ಜಡ-ಪರಮಾತ್ಮ ಎಂಬುವುಗಳಾಗಿವೆ. ಹರಪನಹಳ್ಳಿಭೀಮವ್ವನವರು“ ಅಣುವಿನೊಳಗು ನೀನೇ ಪರಮಾಣುವಿನೊಳಗು ನೀನೆ,                     ಘನವಾದ ರೂಪ ಗಗನಕ್ಕೆ ಬೆಳದದ್ದು ಬಲಿಬಲ್ಲ ನಿನ್ನ ಮಹಿಮೆ.’’     ಎಂದು ಹರಿಯ ಸರ್ವಶಕ್ತಿಯನ್ನು ಸಾರುತ್ತಾರೆ. ಶ್ರೀಹರಿಯು ಜಗತ್ತಿಗೆ ನಿಯಾಮಕನು.ಜೀವಿಗಳು ಅತನ ಅನುಚರರು.ಜೀವಿಗೆ ಸ್ವಾತಂತ್ಯವೇ ಇಲ್ಲ.ತೃಣಮಾತ್ರನು.      “ಅಡಿಗೆ ಮಾಡುವವನ ಕೈ ಹಿಡಿದ ಸೌಟಿನಂತೆ       ನಡಿಯಿರೋ ನಮ್ಮ ಸ್ವಾತಂತ್ರ’ ಎಂದಿದ್ದಾರೆ.       ತಾರತಮ್ಯ ಜ್ಞಾನವಿಲ್ಲದೆ ಹರಿದಾಸರಿಗೆ ಉಪಾಸನೆ ವ್ಯರ್ಥ. ಈ ತಾರತಮ್ಯದಿಂದಲೇ ಸರ್ವೋತಮತ್ವ ನಿರ್ಧಾರವಾಗುತ್ತದೆ. ತ್ರಿವಿಧ ಜೀವಿಗಳಲ್ಲಿ ಸಾತ್ವಿಕ-ರಾಜಸ-ತಾಮಸ ವೆಂಬ ತಾರತಮ್ಯವಿದೆ. ತೃಣಿಜೀವಿಗಳಿಂದ ಹಿಡಿದು ವಾಯುದೇವರ ಪರ್ಯಂತ ದೇವ-ಮಾನವರಲ್ಲಿ ತಾರತಮ್ಯವಿದೆ. ಜೀವಿಗಳ ಸಾಧನೆಯಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತಾರತಮ್ಯವಿದೆ. ಶ್ರೀಪ್ರಾಣೇಶದಾಸರು ತಾರತಮ್ಯ ಸ್ತುತಿಪದ್ಯವನ್ನು ರಚಿಸಿದ್ದಾರೆ. ಅಭಿನವಪ್ರಾಣೇಶದಾಸರು, ಗರ‍್ಯಾಚಾರ್ಯರು, ಶ್ರೀಕರವಿಠಲರು ಮುಂತಾದವರು ತಾರತಮ್ಯ ಸ್ತುತಿ ಪದ್ಯಗಳನ್ನು ರಚಿಸಿದ್ದಾರೆ. ತಮ್ಮ ಸ್ವರೂಪದ ಜ್ಞಾನವೇ ಮುಕ್ತಿ. ೧)ಮುಕ್ತಿಯೋಗ್ಯರು ೨)ನಿತ್ಯಸಂಸಾರಿಗಳು, ೩)ನಿತ್ಯ ನರಕಯೋಗ್ಯರು ತಮ್ಮತಮ್ಮ ಶ್ರದ್ಧೆಯಂತೆ ಹೊಂದುವ ಸಾಧನೆಯ ಮುಕ್ತಾಯದ ಹಂತವನ್ನು ಮೋಕ್ಷ ಎಂದು ಕರೆಯಬಹುದು. ಲಯಗಳ ಕುರಿತು ಗರುಡಮಾರ್ಗ ,ಶೇಷಮಾರ್ಗ ಎಂಬ ಎರಡು ಮಾರ್ಗಗಳಿವೆ. ಮುಕ್ತಿಯಲ್ಲಿ ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ ಎಂದು ನಾಲ್ಕುವಿಧ.ಸಾಧಕನ ಪರಮಗುರಿಯೇ ಮುಕ್ತಿ, ಮುಕ್ತಿ ಅಷ್ಟು ಸುಲಭವಲ್ಲವಾದರೂ ಅದರ ಅರಿವು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಸಾಧನೆಯಲ್ಲಿ ಭಕ್ತಿ ಮುಖ್ಯವಾಗಿರುತ್ತದೆ. ಈ ಶರೀರವು ಸಾಧನ ಶರೀರ. ಪರಮಾತ್ಮನ ಪ್ರಾಪ್ತಿಗಾಗಿ ಅನೇಕ ಮಾರ್ಗಗಳಿವೆ.ಅಧ್ಯಯನ,ಧ್ಯಾನ,ದಾನ,ಯಜ್ಞ,ತಪಸ್ಸು,ನಿಷ್ಕಾಮ ಕರ್ಮಾನುಷ್ಠಾನ,ವೈರಾಗ್ಯಶಾಸ್ತç ಶ್ರವಣ,ಮನನ, ನಿದಿಧ್ಯಾಸನ ಮತ್ತು ಭಕ್ತಿಯನ್ನು ಸಾಧನೆ ಮಾಡಬೇಕು. ಇಷ್ಟೆ÷್ಟಲ್ಲಾ ಸಾಧನೆ ಮಾಡಿದರೆ ಭಗವಂತನ ಪ್ರಸಾದವಾಗುವುದು. ಈ ಪ್ರಸಾದವನ್ನು ಒದಗಿಸಬಲ್ಲ ಶಕ್ತಿ ಇರುವುದು ಭಕ್ತಿಗೆ ಮಾತ್ರ. ಗುರುಜಗನ್ನಾಥವಿಠಲರು     “ ಬಾರಯ್ಯವೆಂಕಟ ಮನ್ಮನಕೆ       ತ್ವರಿತಾದಿ ನಿಜನಾರಿ ಸಹಿತದಿ ಈ ಸಮಯಕೆ        ಶರಣೆಂಬೆನು ಪದ ಯುಗಕೆ’’ ಎಂದು ಲಕ್ಷಿö್ಮÃಸಹಿತ ವೆಂಕಟೇಶನನ್ನು ಆಹ್ವಾನಿಸುತ್ತಾರೆ.       ಭಗವಂತನನ್ನು ಅರಿಯಲು ಪ್ರಮಾಣಗಳು ಬೇಕು. ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳು. ಯಥಾರ್ಥಜ್ಞಾನವನ್ನು ತಿಳಿಸುತ್ತವೆ. ಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳಿಗೆ ನಿಲುಕುವ ಜ್ಞಾನ, ಅನುಮಾನವೆಂದರೆ ಕಾರ್ಯಕಾರನ ಊಹೆಯಿಂದ ನಿರ್ಧರಿಸುವುದು. ಉದಾಹರಣೆಗೆ ಹೊಗೆ ಇದ್ದರೆ ಅಲ್ಲಿ ಬೆಂಕಿ ಇದೆ ಎಂದು ಭಾವಿಸುವುದು. ಇನ್ನು ಆಗಮಗಳು ಅಪೌರುಷೇಯವಾಗಿವೆ. ವೇದಗಳು ಪುರಾಣಗಳು, ಭ್ರಹ್ಮಸೂತ್ರಗಳು, ಮಹಾಭಾರತ, ರಾಮಾಯಣ, ಸಾತ್ವಿಕ ಪುರಾಣಗಳು ಪ್ರಮಾಣವೆನಿಸಿವೆ. ಮಧ್ವಾಚಾರ್ಯರು ಇವೆಲ್ಲವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಹರಿದಾಸರಿಗೆ ಸಿಕ್ಕ ಉತ್ತಮ ಅವಕಾಶವಾಯಿತು. ಹರಿದಾಸಸಾಹಿತ್ಯ ಒಂದು ಪೌರಾಣಿಕ ಕೋಶವಾಯಿತು. ಇದಕ್ಕೆ ಉತ್ತಮ ನಿದರ್ಶನವೆಂದರೆ ಗುರುಜಗನ್ನಾಥದಾಸರು ರಚಿಸಿದ `ಪ್ರಲ್ಹಾದ ಚರಿತೆ’. ಇದರಲ್ಲಿ ವೇದ,ಶೃತಿ,ಸ್ಮೃತಿಗಳಿಂದ ಆಯ್ದಭಾಗಗಳಿವೆ.        “ ಹರಿಗೆ ಸಮನದ ಸುರರಿಲ್ಲ ಧರೆಯೊಳಗೆ         ಸರಿಯಾಗುವರೆ ಅಸುರರು ಕೋಲೆ’’ ಎಂಬುದಾಗಿದೆ. ಶ್ರೀಹರಿಯು ಸರ್ವವೇದಗಳಿಂದ ಪ್ರತಿಪಾದ್ಯನಾಗಿದ್ದಾನೆ. ಮದ್ವಾಚಾರ್ಯರ ಅಭಿಮತದಂತೆ ಹರಿದಾಸರು ಪ್ರಮಾಣವಾಗಿ ಸ್ವೀಕರಿಸಿದ್ದಾರೆ. ಗುರುಜಗನ್ನಾಥದಾಸರು ಪ್ರಲ್ಹಾದನ ಬಾಯಿಯಿಂದ ನುಡಿಸಿದ್ದಾರೆ.  ಹೀಗೆ ಹರರಿದಾಸರು ತತ್ವಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಹರಿದಾಸಸಾಹಿತ್ಯದಲ್ಲಿ ಕಂಡುಬರುವ ಮಹತ್ವದ ಅಂಶಗಳೆAದರೆ ಪಂಚ ಭಾವಗಳು. ಅವುಗಳೆಂದರೆ ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ ಮತ್ತು ಮಧುರ. ಈ ಭಾವಗಳನ್ನು ಹರಿದಾಸರು ವಿಪುಲವಾಗಿ ಬಳಸಿದ್ದಾರೆ.             ಭಕ್ತನಾದವನು ಮೊದಲು ಸ್ಥಿರಚಿತ್ತವುಳ್ಳವನಾಗಿರಬೇಕು. ಆಗ ಭಗವಂತನ ಲೀಲೆಗಳು ,ಭಗವಂತನ ಕಾರುಣ್ಯ ಅರವಿಗೆ ಬರತೊಡಗುತ್ತದೆ. ರಾಮದಾಸರು            “ ನಿನ್ನದೋ ನಿಖಿಲ ನಿನ್ನದೋ              ಕುನ್ನಿ  ಮನುಜರಾಧೀನನೇನಿಲ್ಲ ಶ್ರೀಹರಿ              ನೀನಿಟ್ಟ ರವಿ ಶಶಿಗಳೆಲ್ಲಾ ಹರಿ              ನೀನಿಟ್ಟ ಅಗ್ನಿಜ್ಯೋತಿಗಳು ಹರಿ’’ ಎಂದು ಭಕ್ತಿಭಾವವನ್ನು ವ್ಯಕ್ತಪಡಿಸಿದ್ದಾರೆ.  ಹರಿದಾಸರ ಉಪಾಸನೆಯ ಕ್ರಮವೆಂದರೆ ಈಶ-ದಾಸ ತತ್ವ. ಪರಮಾತ್ಮ ತನನ್ನು ದಾಸನಗಿ ಸ್ವೀಕರಿಸಬೇಕೆಂದು ಭಕ್ತರ ಅಪೇಕ್ಷೆಯಾಗಿರುತ್ತದೆ.“ ಐಕೂರು ಆಚಾರ್ಯರು “ದಾಸನೆನಿಸೋ ನಿನ್ನಾ’’ ಎಂದು ಬೇಡಿಕೊಳ್ಳುತ್ತಾರೆ. ರಾಮದಾಸರು “ ದಾಸನಾದಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ’ ಎಂದು ಹೇಳಿದ್ದಾರೆ.       ಭಕ್ತಿಯ ಉತ್ಕಟೆತೆಯಲ್ಲಿ ಭಕ್ತನಿಗೆ ಭಗವಂತನಲ್ಲಿ ಸಖ್ಯಭಾವ ಕಂಡುಬರುತ್ತದೆ. ನೇರವಾಗಿ ಸಂಭಾಷಣೆ ಮಾಡುತ್ತಾರೆ. ಸಲುಗೆಯಿಂದ ಬಯ್ಯುತ್ತಾರೆ, ಇದನ್ನು `ನಿಂದಾಸ್ತುತಿ’ ಎಂದು ಕರೆಯುತ್ತೇವೆ.       “ ಮಂದಮತಿಯು ನುಡುದನೆಂದು ಕುಂದು ತಿಳಿಯ ಬೇಡವೋ         ನಿಂದಾ ಸ್ತುತಿಗಳಿಂದ ನಿನ್ನ ಹೊಗಳುತ್ತಿದ್ದೆನೋ’ ಎಂದು ಭಿಮವ್ವನವರು ಬರೆಯುತ್ತಾರೆ. ವಾತ್ಸಲ್ಯ ಭಾವವು ಹರಿದಾಸ ಸಾಹಿತ್ಯದ ಹೃದಯಭಾಗ. ಯಶೋಧೆ ಕೃಷ್ಣರ ಸಂದರ್ಭಗಳು ಎಂಥವರನ್ನೂ ಮುಗ್ಧಗೊಳಿಸುತ್ತವೆ. ಹಿಂದಿಭಾಷೆಯಲ್ಲೂ ಇಂತಹ ಉದಾಹರಣೆಗಳು ವಿಪುಲವಾಗಿ ದೊರೆಯುತ್ತವೆ.ಆಧುನಿಕ ಹರಿದಾಸರು ಕೃಷ್ಣನ ಬಾಲ ಲೀಲೆಗಳನ್ನು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ.             “ ನೋಡೆ ಗೊಪಮ್ಮ ಕೃಷ್ಣನ ಚಾಳಿಯ ನೀ               ಮಾಡಿಬಿಟ್ಟೆಯೋ ಇಂಥಗೂಳಿಯ ಇಂಥಾ ಗೂಳಿಯ’’ ಎಂದು ತಾಯಿಗೆ ದೂರು ಹೇಳುತ್ತಾರೆ. ಅದಕ್ಕೆ ಉತ್ತರವಾಗಿ“ ಬಟ್ಟು ಬಾಯೊಳಿಟ್ಟರೆ  ಎನ್ನಯ ಕಂದ ತಟ್ಟನೆ ಕಡಿಯಲರಿಯನೆ’’ ಎಂದು ಮಗನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಹರಿದಾಸರು ಸ್ವತಃತಾವೇ ತಾಯಿಯಾಗಿ ಕೃಷ್ಣನ ಲೀಲೆಯನ್ನು ಮನತುಂಬಿ ಹಾಡಿದ್ದಾರೆ.        ಮಧುರ ಭಾವವು ಶ್ರೀ್ರಪಾದರಾಜರಾದಿಯಾಗಿ ಎಲ್ಲಾ ಹರಿದಾಸರು ಬಳಸಿಕೊಂಡಿದ್ದಾರೆ. ಭಾಗವತದಲ್ಲಿ ಬರುವ ಭ್ರಮರಗೀತೆ, ಗೋಪಿಗೀತೆ, ವೇಣುಗೀತೆಗಳ ಸಂದರ್ಭಗಳು ವಿಪುಲವಾಗಿ ಬಳಕೆಯಾಗಿವೆ. ಪರಮಾತ್ಮನ ನಲ್ಲೆಯಂದು ಪರಿಭಾವಿಸಿ ಉಪಾಸನೆ ಮಾಡುವ ಭಾವ ವಿನೂತನವಾಗಿವೆ. ಗೋಪಿಕಾಸ್ತಿçÃಯರ ರಾಸಲೀಲೆಯ ಸಂದರ್ಭಗಳನ್ನು ಆಧುನಿಕ ಹರಿದಾಸರೂ ಬಳಸಿದ್ದಾರೆ. ಈ ತರಹ ನಾನಾವಿಧ ಭಕ್ತಿಯಿಂದ ಉಪಾಸನೆ ಮಾಡುವ ಉದ್ದೇಶವೇ ಪರಮಾತ್ಮನ ದರ್ಶನ. ಸಾಧಕನ ಸಾಧನೆ ಗಟ್ಟಿಗೊಳಿಸಿದಂತೆಲ್ಲಾ ಭಗವಂತನನ್ನು ಕಾಣುವ ಹಂಬಲ ತೀವ್ರವಾಗುತ್ತಾ ಹೋಗುತ್ತದೆ, ದೇವರ ದರ್ಶನವಾಗದೆ ಹೋದರೆ ಆ ದಿನ ಅವರಿಗೆ ದುರ್ದಿನ ವಾಗಿರುತ್ತದೆ. ಭಗವಂತನ ದರ್ಶನವಾದ ದಿನವೇ ಅವರಿಗೆ ಪುಣ್ಯದಿನ. ಭಗವಂತನ ದಿವ್ಯ ದರ್ಶನದ ಕುರಿತು       “ ನೋಡಿದೆ ವೇಣುಗೋಪಾಲನ, ದಿವ್ಯಕೊಳಲುದುತನಿಂತ ಚಲುವ ಚನ್ನಿಗನಾ’’ ಎಂದು ಐಕೂರು ಆಚಾರ್ಯರು ವಿವರಿಸಿದ್ದಾರೆ. ಶ್ರೀಮತಿ ಪದ್ಮಾಬಾಯಿಯವರು       “ ಬಂದನು ಬಂದನು ಭವಹಾರಿ,          ನಿಂದನು ಹೃದಯದಿ ಅಸುರಾರಿ          ಬಂದನು ಶ್ರೀಗೋವಿಂದ ಮುರಾರಿ,         ಇಂದಿರೆ ಸಹಿತ ಮುಕುಂದ ಮೈದೋರಿ.’’ ಎಂಬ ದರ್ಶನದ ವಿಚಾರಗಳು ಕಂಡುಬರುತ್ತವೆ.         ಹರಿದಾಸರಲ್ಲಿ ಕಂಡುಬರುವ ಮತ್ತೊಂದು ಅಂಶÀವೆAದರೆ ತೀರ್ಥಕ್ಷೇತ್ರಗಳ ದರ್ಶನ. `ತೀರ್ಥ’ ವೆಂದರೆ ಮುಕ್ತಿಯೋಗ್ಯವಾದ ಕಾಲ ಎಂಬುದು ಒಂದು ಅರ್ಥವಾದರೆ  ಇನ್ನೊಂದು ಭಗವಂತನಿಗೆ ಅಭಿಷೇಕ ಮಾಡುವ ಜ¯ವೆಂದೂ ಅರ್ಥ. ಭಗವಂತನಿAದ ಸೃಷ್ಟಿಯಾದ ಎಲ್ಲಾ ನದಿಗಳು ತೀರ್ಥಗಳಾಗಿವೆ. ಆದ್ದರಿಂದ ಹರಿದಾಸರು ನದಿಗಳ ತಾರತಮ್ಯೋಕ್ತ ವರ್ಣನೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಸ್ನಾನ ಮಾಡುವುದು ಪಾಪ ವಿಮೋಚನೆಗೆ ಕಾರಣವಾಗುತ್ತದೆ, ಅಷ್ಟೇ ಅಲ್ಲ ಸ್ಮರಣೆ ಮಾತ್ರದಿ ಪಾಪ ವಿಮೋಚನೆಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಯಾವ ವಿಘ್ನಗಳು ಬರುವುದಿಲ್ಲ ಎಂದು ಪ್ರಾಣೇಶವಿಠಲರು  ತಿಳಿಸುತ್ತಾರೆ. ಕ್ಷೇತ್ರಗಳು ಭಗವಂತನು ಅಧಿಷ್ಠಾನಗೊಳಿಸಿದ ಸ್ಥಳಗಳು. ಭಕ್ತನ ಸಾಧನೆ ಹೆಚ್ಚಾದಂತೆ ನಿಸರ್ಗದ ಚೇತನಾಚೇತನ ವಸ್ತಗಳು ಭಗವಂತನ ಪ್ರತಿಮೆಗಳಾಗಿ ಕಂಡು ಬರುತ್ತವೆ. ಹೀಗೆ ಹರಿದಾಸ ಸಾಹಿತ್ಯವು ವೇದವೇದಾಂತದ ಸಾರವನ್ನು ತನ್ನೊಳಗಡಿಗಿಸಿಕೊಂಡು ಸಂಪತ್ಭರಿತವಾಗಿದೆ.             ಹರಿದಾಸರದು ಅಂತಃಕರಣದ ಮನಸ್ಸು. ಸಾಮಾನ್ಯ ಜನರಲ್ಲಿ ಜಾಗ್ರತಿ ತರಬೇಕೆಂದು ಅವರಿಗೆ ಪರಿಚಿತವಾದ ಜನಪದ ಲಯಗಳಲ್ಲಿ ಸಾಹಿತ್ವನ್ನು ರಚಿಸಿದರು. ಜನಪದ ಸಾಹಿತ್ಯದಲ್ಲಿ  ಲಾವಣಿ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇದು ಕಥಾನಕ ಕಾವ್ಯ. ಕಥೆಯನ್ನು ಕಾವ್ಯದ ಮೂಲಕ ಹೇಳಲು ಪ್ರಶಸ್ತವಾದ ಪ್ರಕಾರವಾಗಿದೆ. ಗೋವಿಂದದಾಸರು `ಕಲಿಯುಗದ ಲಾವಣಿ’ಯಂದು ಹನ್ನೊಂದು ನುಡಿಗಳ ಸುಧೀರ್ಘವಾದ ಕಾವ್ಯರಚಿಸಿದ್ದಾರೆ. `ಕೇಳಿರಿ ಜನಗಳೆ ಬಾಳಿದಂಥಾ ವಿಪ್ರಾವಲಿಯ  ಹೀನಸ್ಥಿತಿ’ ಎಂಬುದಾಗಿದೆ. ಇದು ಆಧ್ಯಾತ್ಮದೊಂದಿಗೆ ಹಾಸ್ಯ ಮತ್ತು ವಿಡಂಬನೆಯನ್ನು ಮೇಳೈಸಿಕೊಂಡು ಕೇಳುಗರಿಗೆ ಅಹ್ಲಾದವನ್ನು ಉಂಟು ಮಾಡುತ್ತದೆ.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.