“ ಬಾಗಿ ಬೇಡಿರೋ ಯತಿರಾಘವೇಂದ್ರರಾ’’
ಭವದರೋಗ ಹರಿವ ಶ್ರೀರಾಘವೇಂದ್ರತೀರ್ಥರಲ್ಲಿ ಯಾರು ಶಿರಬಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೋ ಅವರಿಗೆ ಸಕಲ ಸಂಪದಗಳನ್ನು ನೀಡಿ ಪೊರೆಯುತ್ತಾರೆ. ಇಂಥಾ ಗುರುಗಳ ಕಾರುಣ್ಯ ಅಸದೃಶ್ಯವಾದದ್ದು. ಈ ಮಾತಿಗೆ ಅನೇಕ ಹರಿದಾಸವರೇಣ್ಯರು ರಚಿಸಿದ ಕೀರ್ತನೆಗಳೇ ಸಾಕ್ಷಿಯಾಗಿವೆ. ಒಂದೊAದು ಕೀರ್ತನೆಗಳು ಸ್ಥೂಲವಾಗಿ ಅಥವಾ ವಿಸ್ತೃತವಾಗಿ ರಾಘವೇಂದ್ರತೀರ್ಥರ ಸಂಪೂರ್ಣ ಚರಿತ್ರೆಯನ್ನು ಮತ್ತು ಅವರ ಕಾರುಣ್ಯವನ್ನು ಚಿತ್ರಿಸುತ್ತವೆ. ಅಂತಹ ಕೀರ್ತನೆಗಳಳ್ಲಿ `ಖಾದ್ರಿದೇವ’ ಅಂಕಿತದಲ್ಲಿ ರಚಿತವಾದ “ಬಾಗಿಬೇಡಿರೋ ಯತಿರಾಘವೇಂದ್ರರಾ” ಎಂಬ ಇಪ್ಪತೊಂಭತ್ತು ನುಡಿಯ ಕೀರ್ತನೆಯೂ ಒಂದಾಗಿದೆ. ಭಕ್ತಿಯ ಕುರಿತಾಗಿ ಅನೇಕ ಚರ್ಚೆಗಳು ನಡೆಯುತ್ತವೆ. ಆದರೆ ಭಕ್ತಿಯ ಉಗಮ ಎಲ್ಲಿಂದಾಯಿತು? ಎಂಬುದಕ್ಕೆ ದಾಸರು ಈ ಕೀರ್ತನೆಯಲ್ಲಿ ಸೂಚನೆಕೊಡುತ್ತಾರೆ. ಗುರುಗಳು ಪ್ರಹ್ಲಾದರಾಜರ ಅವತಾರzಲ್ಲಿ ಭಕ್ತಿಯ ಸ್ವರೂಪವನ್ನು ಧರೆಗೆ ಅರುಹಿದ ಮಹಾಪುರುಷರು. ತಮ್ಮ ಧೃಢವಾದ ಭಕ್ತಿಯಿಂದ ಕಂಬದಲ್ಲಿ ನರಹರಿಯ ಪ್ರತ್ಯಕ್ಷೀಕರಿಸಿಕೊಂಡವರು. ಇನ್ನು ಎರಡನೆಯ ಅವತಾರವಾದ ವ್ಯಾಸರಾಜರಾಗಿ ಅವತರಿಸಿದಾಗ ರಾಶಿರಾಶಿಗ್ರಂಥಗಳ ರಚನೆಗೆ ಕಾರಣರಾಗಿ, ಪ್ರೇರಕರಾಗಿ ಜ್ಞಾನ ಪ್ರಸಾರಮಾಡಿದ ಪರಮಜ್ಞಾನಿಗಳು. ಇನ್ನು ಮೂರನೆಯ ಅವತಾರವೆಂದರೆ ಗುರುಸುಧೀಂದ್ರರ ಕರಕಮಲ ಸಂಜಾತರಾದ ಶ್ರೀರಾಘವೇಂದ್ರತೀರ್ಥರ ಅವತಾರ. ಗುರುಗಳು ನರಹರಿಪಾದ ಸೇವೆಯೆ ತಮಗೆ ಪರಮ ಸಂಪದವೆAದು ಭಕ್ತಿಯಲ್ಲಿ ನಿರತರಾದವರು. ಶ್ರೀರಂಗನ ಅಂತರAಗ ಭಕ್ತರು. ಪರಮಜ್ಞಾನಿಗಳಾದ ಇವರು ಮೋದತೀರ್ಥರ ಮತವನ್ನು ಅನುಸರಿಸಿದವರು, ಜನಕೆ ಸಾರಿದವರು. ಕಾಮಧೇನು ಕಲ್ಪವೃಕ್ಷ, ಚಿಂತಾಮಣಿಯAದು ಖ್ಯಾತರಾದ ಗುರುಗಳ ಕಾರುಣ್ಯಕೆ ಎಣೆ ಇಲ್ಲಾ. ನಾನಾವಿಧ ಭಕ್ತರು-ನಾನಾವಿಧವಾದ ಬಯಕೆಯನ್ನು ಸಲ್ಲಿಸುತ್ತಾರೆ. ಇವರಲ್ಲಿ ಬೇಡಿ ಬಂದವರಿಗೆ ನಿರಾಶೆಯೇ ಇಲ್ಲ. ತಮಗೇನು ಬೇಕೋ ಅದನ್ನು ಖಂಡಿತಾ ಪಡೆದುಕೊಳ್ಳುತ್ತಾರೆ. ಜ್ಞಾನಬೇಕಾದರೆ `ಮದಡನಾದರೂ ಇವರ ಮುದದಿ ಬೇಡಲು ಬುಧನು ಆಗುವ ಶುಭದ ಉದಯ ನೋಡುವ” ಇನ್ನು ಇವರ ಮೃತ್ತಿಕೆಯನ್ನು ಭಕ್ತಿಯಿಂದ ನಿತ್ಯ ಸೇವಿಸಲು ಮುಕ್ತಿಯೇ ದೊರೆಯುವದು. ಇವರ ಪಾದೋದಕದ ಸ್ವೀಕರಿಸಲು ಭೂತಗಣಗಳು ಸೊತು ಬೀಳ್ವವು. ನಾಮಸ್ಮರಣೆಗೆ ರೋಗಗಳೆಲ್ಲವೂ ನಿವಾರಣೆಯಾಗುವವು. ಗುರುಗಳನ್ನು ಕೈಯತ್ತಿ ಮುಗಿಯಲು ಬಯಕೆಗಳೆಲ್ಲವು ಕೈಗೂಡುವವು.ಇವರ ಚರಣಕಮಲಗಳಿಗೆ ಶರಣುಬಂದರೆ ಸ್ವತಃ ಕಾಮಧೇನುವಾಗುವರು. ಇವರು ಶುಭದ ಗುಣನಿಧಿಯಾಗಿದ್ದಾರೆ, ದಿನಮಣಿಯಂತೆ ಪ್ರಕಾಶಮಾನರಾಗಿದ್ದಾರೆ. “ ಕರುಣಸಾಗರನೆಂಬ ಬಿರುದು ಧರೆಯೊಳು ಮೆರೆಯುತ್ತಿಪ್ಪುದು ರವಿಯ ಕಿರಣನಂದದಿ ಯೋಗಿವರ್ಯ ಶ್ರೀರಾಘವೇಂದ್ರರ ಭೋಗಭಾಗ್ಯಕೆ ಯೋಗ್ಯರಾಗಿರೋ” ಎಂದು ಗುರುಗಳ ಕಾರುಣ್ಯ ಪಡೆದುಕೊಳ್ಳಬೇಕಾದರೆ ಒಂದು ಸುಲಭವಾದ ಮಾರ್ಗವಿದೆ. ಅದಾವುದೆಂದರೆ ಶ್ರೀಅಪ್ಪಣಾಚಾರ್ಯರು ಗುರು ಕರುಣಾ ಕಟಾಕ್ಷದಿ ಸ್ತೋತ್ರಮಾಡಿದ್ದಾರೆ. ಗುರುರಾಯರ ಭಕ್ತರೆಲ್ಲರೂ ಈ ಸ್ತೋತ್ರವನ್ನು ಪಠಿಸಿ ಹರುಷಪಡುತ್ತಾರೆ. ಎಂದು ಗುರುಗಳ ಸ್ತೋತ್ರದ ಮಹತ್ವನ್ನು ಸಾರಿದ್ದಾರೆ. “ ಮಣಿದುಬೇಡಿರೋ ಕುಣಿಕುಣಿದು ಪಾಡಿರೋ ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೋ ದೋಷದೂರ ಶ್ರೀರಾಘವೇಂದ್ರರ ಈಶನೆಂಬರೂ ಸಂತೋಷ ಭರಿತರು” ಎಂದು ಭಕ್ತಿಯಲ್ಲಿ ಶುಧ್ಧ ಭಾವಪರವಶತೆಯು ಮಹದಾನಂದ ನೀಡುತ್ತದೆ. ಉದಯಕಾಲದಲ್ಲಿ ಇವರ ಸ್ಮರಿಸಿದರೆ ದಿವ್ಯ ಪದವಿ ದೊರೆಯುವದು. ನಿತ್ಯ ಇವರನ್ನು ಸ್ತುತಿ ಮಾಡಲು ನಿಶ್ಚಯವಾಗಿ ಸರ್ವ ಸಿದ್ಧಿಯಾಗುತ್ತದೆ. ಮೋದದಿಂದಲಿ ಇವgನ್ನುÀ ಪಾಡಿದರೆ ಸದ್ಭೋದೆ ದೊರೆಯುವದು, ಇವರ ನಾಮಸ್ಮರಣೆ ಮಾಡಿ ದನ್ಯರಾಗಿರೋ’ ಎಂದು ಗುರುಗಳ ಮಹಿಮೆಯನ್ನು ದಾಸರು ಮನದುಂಬಿ ಕೊಂಡಾಡುತ್ತಾರೆ. ಇಂಥಾಗುರುಗಳ ದಯದಿಂದ ಮಂತ್ರಾಲಯ ಕ್ಷೇತ್ರವು ಇಂದ್ರವೈಭವದಿAದ ಮೆರೆಯುತ್ತಿದೆ. “ ಇಂದು ನೋಡಿರೋ ಇವರ ಚಂದವೈಭವ ಎಂದೂ ಕಾಣದಾ ಆನಂದದನುಭವ ದೇಶ ದೇಶದ ಜನರು ದಾಸರಾಗುತ ಸೂಸು ಕರುಣದ ನಿಧಿಯ ರಾಶಿ ಕಂಡರು” ಎಂದು ಶ್ರೀಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ನಡೆಯುತ್ತಿರುವ ಸಂಭ್ರಮ, ವೈಭವ ಎಂಥವರನ್ನೂ ಮೋಹಗೊಳಿಸುತ್ತದೆ. ಭಕ್ತರಿಂದ ಕೂಡಿದ ಕ್ಷೇತ್ರವು ಭಕ್ತಿಯ ಪಾಲ್ಗಡಲಂದದಿ ಶೋಭಿಸುತ್ತದೆ. ಇಂಥಾಯೋಗಿಗೆ ಶಿರಬಾಗಿ ಜ್ಞಾನ-ಭಕ್ತಿ-ವೈರಾಗ್ಯ ಬೇಡಿಕೊಳ್ಳೋಣ. ಕೃತಾರ್ಥರಾಗೋಣ. ಡಾ,ಶೀಲಾದಾಸ,ರಾಯಚೂರು
ಕಲ್ಯಾಣ ಕರ್ನಾಟಕದ ಆಧುನಿಕ ಕೀರ್ತನ ಸಾಹಿತ್ಯ
ಯಾವುದೇ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದರೆ, ಅಧ್ಯಯನದ ಅನುಕೂಲಕ್ಕಾಗಿ ವಿಭಾಗಿಸುವುದು ಅನಿವಾರ್ಯ. ಕನ್ನಡ ಸಾಹಿತ್ಯವನ್ನು ಸ್ಥೂಲವಾಗಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡವೆಂದು ವಿಭಾಗಿಸಿರುವುದು ಸರಿಯಷ್ಟೆ. ಹಾಗೆಯೇ ಹರಿದಾಸ ಸಾಹಿತ್ಯವನ್ನು ಅದ್ಯಯನದ ಅನುಕೂಲಕ್ಕಾಗಿ ಸ್ಥೂಲವಾಗಿ ನಾಲ್ಕು ಘಟ್ಟವೆಂದು ವಿದ್ವಾಂಸರು ವಿಭಾಗಿಸಿದ್ದಾರೆ. ೧)ಮಧ್ವಾಚಾರ್ಯರು ನರಹರಿತೀರ್ಥರಿಂದ ಹಿಡಿದು ಶ್ರೀಪಾದರಾಜರು, ವ್ಯಾಸರಾಜರು, ಮಹಿಪತಿದಾಸರು,ಪ್ರಸನ್ನವೆಂಕಟದಾಸರು ೨)ಪುರಂದರದಾಸರು, ಕನಕದಾಸರು, ೩)ವಿಜಯದಾಸರು, ಗೋಪಾಲದಾಸರು, ಹೆಳವನಕಟ್ಟೆ ಗಿರಿಯಮ್ಮ ಜಗನ್ನಾಥದಾಸರು, ೪) ಪ್ರಾಣೇಶದಾಸರು-ಗುರುಪ್ರಾಣೆಶದಾಸರು ಶಿಷ್ಯ ಪ್ರಶಿಷ್ಯರು. ( ಆಧುನಿಕ ಹರಿದಾಸರು) ಮುಂದುವರೆದು ಮಧ್ವಾಚಾರ್ಯರಿಂದ ಕನಕದಾಸರವರೆಗೆ ಮೊದಲಘಟ್ಟವಾಗಿ, ವಿಜಯದಾಸರಿಂದ ಪ್ರಸ್ತುತ ಹರಿದಾಸರ ವರೆಗಿನ ಕಾಲವನ್ನು ದ್ವಿತೀಯ ಘಟ್ಟವಾಗಿಯೂ ಇನ್ನೊಂದು ವಿಧದಲ್ಲಿ ವಿಭಾಗಿಸಲಾಗಿದೆ. ಈ ವಿಭಾಗ ಕ್ರಮವನ್ನೂ ಒಪ್ಪಬಹುದಾಗಿದೆ. ಈಗಾಗಲೇ ಹೇಳಿದಂತೆ ಇದು ಅಧ್ಯಯನದ ಅನುಕೂಲಕ್ಕಾಗಿ ಮಾತ್ರ. ಹರಿದಾಸಸಾಹಿತ್ಯ ಇಡಿಯಾದ ಪರಂಪರೆಯನ್ನು ಹೊಂದಿದೆ. ಮೆಲ್ನೋಟಕ್ಕೆ ಹಲವು ವ್ಯತ್ಯಾಸ ಕಂಡು ಬಂದರೂ ಸಾಹಿತ್ಯದುದ್ದಕ್ಕೂ ಭಕ್ತಿಯೇ ಮೂಲ ಸೂತ್ರ. ನರಹರಿತೀರ್ಥರಿಂದ ಹರಿದಾಸ ಸಾಹಿತ್ಯ ಉಗಮಗೊಂಡರೂ ಶ್ರೀಪಾದರಾಜರು, ವ್ಯಾಸರಾಜರು,ಕನಕ-ಪುರಂದರದಾಸರAಥವರಿAದ ಬೆಳೆದುಬಂದಿದೆ. ಹರಿದಾಸರು ಸಮಾಜೋಧಾರ್ಮಿಕ ನೆಲೆಯಲ್ಲಿ, ಸಮಾಜಮುಖಿ ಚಿಂತನ ಮಾಡಿದವರು. ವೇದವಾಙ್ಮಯದಲ್ಲಿ ಅಡಗಿದ ತತ್ವಸಿದ್ಧಾಂತಗಳನ್ನು ಲಲಿತವಹ ಸರಳಗನ್ನಡದಲ್ಲಿ ಗಾಯನದಮೂಲಕ ಅರುಹಿದವರು. ಇವರ ತತ್ವಸಿದ್ಧಾಂತಗಳು ಮೌಖಿಕವಾಗಿ ತಲೆಮಾರಿನಿಂದ ತಲೆಮಾರುಗೆ ಹರಿದುಬಂದು ಇಂದು ಗ್ರಂಥಸ್ಥವಾಗಿದ್ದರೂ ಜನಪದ ಸಾಹಿತ್ಯದಂತೆ ಇನ್ನೂ ಜನರ ನಾಲಿಗೆಯಮೇಲೆ ಉಳಿದಿದೆ ಎಂಬುದೂ ಸತ್ಯವಾಗಿದೆ. ಹರಿದಾಸರಿಗೆ ಮದ್ವಸಿದ್ಧಾಂತ ಮೂಲಧಾತುವಾಗಿದೆ. ನಾಲ್ಕುವೇದಗಳು ಆರುಶಾಸ್ತçಗಳು, ಹದಿನೆಂಟು ಪುರಾಣಗಳು,ಶ್ರುತಿ-ಸ್ಮೃತಿಗಳಸಾರ ಕೀರ್ತನ ಸಾಹಿತ್ಯದಲ್ಲಿ ಮೇಳೈಸಿವೆ. ಹರಿದಾಸರು ಮಧ್ವಾಚಾರ್ಯರ ದ್ವೆöÊತಸಿದ್ಧಮತದ ಮೇಲೆ ಅಚಲವಾದ ವಿಶ್ವಾಸ ಉಳ್ಳವರು. ಅವರ ಕುರಿತಾಗಿ ,ಅವರ ಅವತಾರತ್ರಯಗಳ ಕುರಿತಾಗಿ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಇವರು ಅಪ್ರತಿಮ ಜ್ಞಾನಬಲ ಉಳ್ಳವರು. ಇವರು ಸಾರಿದ ತತ್ವಗಳನ್ನು ವ್ಯಾಸರಾಜರು ಶ್ಲೋಕದರೂಪದಲ್ಲಿ ರಚಿಸಿದರೆಂದು ಪ್ರತೀತಿ ಇದೆ. ಹರಿಸರ್ವೋತ್ತಮ, ಜಗತ್ತುಸತ್ಯ, ಪಂಚಭೇದಗಳು,ಜೀವರು ಹರಿಯ ಅನುಚರರು ,ತಾರತಮ್ಯ,ಮೋಕ್ಷ ಸಾಧನೆಯಲ್ಲಿ ಜ್ಞಾನ-ಭಕ್ತಿ-ವೈರಾಗ್ಯ, ಪ್ರತ್ಯಕ್ಷ, ಅನುಮಾನ,ಆಗಮಗಳೆಂದು ಮೂರು ಪ್ರಮಾಣಗಳು, ಶ್ರೀಹರಿಯು ವೇದಗಳಿಂದ ಪ್ರತಿಪಾದ್ಯನು. ಈ ತತ್ವಗಳನ್ನು ಪ್ರಾಚೀನರು ಆಧುನಿಕರ ಹರಿದಾಸರು ಅರುಹಿದ್ದಾರೆ. ಇದರೊಂದಿಗೆ ಸಾಮಾಜಿಕ. ಸಾಹಿತ್ಯಿಕ ವಿಚಾರಗಳೂ ಅಭಿವ್ಯಕ್ತಿ ಹೊಂದಿವೆ. ಕೀರ್ತನೆಗಳು ಹರಿದಾಸ ಸಾಹಿತ್ಯದ ಒಂದು ಪ್ರಕಾರ. ಇದಲ್ಲದೆ ಸುಳಾದಿ,ಉಗಾಭೋಗ, ದಂಡಕ,ತ್ರಿಪದಿ,µಟ್ಪದಿ,ಸಾAಗತ್ಯ ಬಯಲಾಟ ಗದ್ಯರೂಪಗಳಾದ ಕತೆ,ಒಗಟು,ಒಡಪುಗಳಂತಹ ಪ್ರಕಾರಗಳನ್ನು ಬಳಸಿ ಕೊಂಡಿದ್ದಾರೆ. ರೂಪಗಳು ಬೇರೆಯಾದರೂ ಧೋರಣೆ ಮಾತ್ರ ಒಂದೆ. ಆದ್ದರಿಂದ ದಾಸಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಜನರು ಕೀರ್ತನಸಾಹಿತ್ಯ ಎಂದು ಸ್ಥೂಲವಾಗಿ ಕರೆಯುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಪ್ರಸ್ತುತ ಈ ಲೇಖನದಲ್ಲಿ ಎಲ್ಲಾ ಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ. ಮನೋಹರವಿಠಲಾಂಕಿತರಾದ ನಾರಾಯಣಪ್ಪನವರು, ಹೂನುರೇಶ ಅಂಕಿತರಾದ ತುರಡಿಗಿ ತಿಮ್ಮಮ್ಮನವರು, ಶ್ರೀಪ್ರಾಣೆಶದಾಸರು, ಗುರುಜಗನ್ನಾಥದಾಸರು, ಸುರಪುರದ ಆನಂದದಾಸರು, ಹರಪನಹಳ್ಳಿ ಭಿಮವ್ವ, ಶೇಷದಾಸರು ಸುಂದರವಿಠಲರು, ಗೋವಿಂದದಾಸರು, ಕಲ್ಯಾಣಿ ಶ್ರೀನಿವಾಸದಾಸರು, ಶ್ರೀಧೀರೇಂದ್ರ ವೈದ್ಯ, ಗಿರಿಯಾಚಾರ್ಯರು, ಸುಳಾದಿಕುಪ್ಪೆರಾಯರು, ಕಸಬೆ ಪಾಂಡುರAಗರಾಯರು, ನಾರಾಯಾಣಾ ಚಾಂiÀiðರುಬೂದೂರು, ರಾಮದಾಸರು, ಶ್ಯಾಮಸುಂದರದಾಸರು, ಭೀಮದಾಸರು ಮುಂತಾದ ಅನೇಕರು ಕಂಡು ಬರುತ್ತಾರೆ. ವೇದಶಾಸ್ತçಗಳು `ಹರಿಯೇ ಸರ್ವೋತ್ತಮನೆಂದು’ ಪ್ರತಿಪಾದಿಸಿವೆ. ಮಧ್ವಾಚಾರ್ಯರ ಸರ್ವಮೂಲಗ್ರಂಥಗಳೂ ಇವುಗಳನ್ನೇ ಪ್ರತಿಪಾದಿಸಿವೆ. ಹರಿದಾಸರು ಹರಿಸರ್ವೋತ್ತಮತ್ವ ಮತ್ತು ವಾಯುಜೀವೋತ್ತಮತ್ವವನ್ನು ಸಾರಿದ್ದಾರೆ. ಮದ್ವಸಿದ್ಧಾಂತದ ಪ್ರಕಾರ ಶ್ರೀಹರಿಯು ಸರ್ವಶಕ್ತ. ಎಲ್ಲಾ ಜೀವಿಗಳಲ್ಲಿ ತಾನಿದ್ದು, ಆಯಾ ನಾಮ ವಾಚಕನಾಗಿದ್ದು ಕಾರ್ಯಗೈಯುವನು. ಅವನ ಶಕ್ತಿಯಲ್ಲಿ ತಾರತಮ್ಯವಿಲ್ಲ. ತ್ರಿವಿಧ ಜೀವರಿಗೆ ಅವರವರ ಗತಿಗನುಗುಣವಾಗಿ ಗತಿ ನೀಡುವನು. ಸರ್ವವ್ಯಾಪ್ತನಾÀಗಿದ್ದು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣಕರ್ತನು, ಭಗವಂತನ ಕುರಿತು ಶ್ರೀಸಿರಿಗೋವಿಂದವಿಠಲರು ಇಪ್ಪತ್ತೆöÊದು ದ್ವಿಪದಿಗಳಲ್ಲಿ ಹರಿಯ ಸರ್ವೂತ್ತಮತ್ವವನ್ನು ಬಣ್ಣಿಸಿದ್ದಾರೆ. “ಮೋದಭರಿತ ಕೇಶವನೆ ಈ ಜಗದಾದಿಕರ್ತನೆಂಬೋದು ಖರೆ ಸಾಧಿಸಿಕೊಂಬುವ ವಿಭುಧರ ಕೈವಶವಾಗುತ್ತಿಪ್ಪನೆಂಬುದು ಖರೆ.” ಐಕೂರಾಚಾರ್ಯರು“ ಹರಿಯೇ ಪರತರ ಪರಮ ದೇವದೇವಾ ಸಾರುತಿವೆ ವೇದಾ ಶೃತಿ ಸ್ಮೃತಿ ಪುರಾಣಗಳು” ಎಂದಿದ್ದಾರೆ. ಪರಮಾತ್ಮನು ಸಕಲಜೀವರಾಶಿಗಳಲ್ಲಿ ಬಿಂಬರೂಪಿಯಾಗಿರುವನು ಎಂದು ವರದರಾಜವಿಠಲರು ತಿಳಿಸುತ್ತಾರೆ. ಮಧ್ವಾಚಾರ್ಯರು ಜಗತ್ತು ಸತ್ಯ ಎಂಬತತ್ವವನ್ನು ಸಾರಿದ್ದಾರೆ. ಭಗವಂತನು ಜಗತ್ತನ್ನು ಸೃಷ್ಟಿಸಿ ಜೀವಿಗಳಿಗೆ ಕೈವಲ್ಯಮುಂತಾದ ಪದವಿ ಕೊಡಲು ಸಹಾಯಕನಾಗಿದ್ದಾನೆ. ಈ ಸೃಷ್ಟಿಯಲ್ಲಿ ಐದು ವಿಧ. ಜೀವ-ಈಶ್ವರ, ಜೀವ-ಜೀವ, ಜೀವ-ಜಡ, ಜಡ-ಜಡ, ಜಡ-ಪರಮಾತ್ಮ ಎಂಬುವುಗಳಾಗಿವೆ. ಹರಪನಹಳ್ಳಿಭೀಮವ್ವನವರು“ ಅಣುವಿನೊಳಗು ನೀನೇ ಪರಮಾಣುವಿನೊಳಗು ನೀನೆ, ಘನವಾದ ರೂಪ ಗಗನಕ್ಕೆ ಬೆಳದದ್ದು ಬಲಿಬಲ್ಲ ನಿನ್ನ ಮಹಿಮೆ.’’ ಎಂದು ಹರಿಯ ಸರ್ವಶಕ್ತಿಯನ್ನು ಸಾರುತ್ತಾರೆ. ಶ್ರೀಹರಿಯು ಜಗತ್ತಿಗೆ ನಿಯಾಮಕನು.ಜೀವಿಗಳು ಅತನ ಅನುಚರರು.ಜೀವಿಗೆ ಸ್ವಾತಂತ್ಯವೇ ಇಲ್ಲ.ತೃಣಮಾತ್ರನು. “ಅಡಿಗೆ ಮಾಡುವವನ ಕೈ ಹಿಡಿದ ಸೌಟಿನಂತೆ ನಡಿಯಿರೋ ನಮ್ಮ ಸ್ವಾತಂತ್ರ’ ಎಂದಿದ್ದಾರೆ. ತಾರತಮ್ಯ ಜ್ಞಾನವಿಲ್ಲದೆ ಹರಿದಾಸರಿಗೆ ಉಪಾಸನೆ ವ್ಯರ್ಥ. ಈ ತಾರತಮ್ಯದಿಂದಲೇ ಸರ್ವೋತಮತ್ವ ನಿರ್ಧಾರವಾಗುತ್ತದೆ. ತ್ರಿವಿಧ ಜೀವಿಗಳಲ್ಲಿ ಸಾತ್ವಿಕ-ರಾಜಸ-ತಾಮಸ ವೆಂಬ ತಾರತಮ್ಯವಿದೆ. ತೃಣಿಜೀವಿಗಳಿಂದ ಹಿಡಿದು ವಾಯುದೇವರ ಪರ್ಯಂತ ದೇವ-ಮಾನವರಲ್ಲಿ ತಾರತಮ್ಯವಿದೆ. ಜೀವಿಗಳ ಸಾಧನೆಯಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತಾರತಮ್ಯವಿದೆ. ಶ್ರೀಪ್ರಾಣೇಶದಾಸರು ತಾರತಮ್ಯ ಸ್ತುತಿಪದ್ಯವನ್ನು ರಚಿಸಿದ್ದಾರೆ. ಅಭಿನವಪ್ರಾಣೇಶದಾಸರು, ಗರ್ಯಾಚಾರ್ಯರು, ಶ್ರೀಕರವಿಠಲರು ಮುಂತಾದವರು ತಾರತಮ್ಯ ಸ್ತುತಿ ಪದ್ಯಗಳನ್ನು ರಚಿಸಿದ್ದಾರೆ. ತಮ್ಮ ಸ್ವರೂಪದ ಜ್ಞಾನವೇ ಮುಕ್ತಿ. ೧)ಮುಕ್ತಿಯೋಗ್ಯರು ೨)ನಿತ್ಯಸಂಸಾರಿಗಳು, ೩)ನಿತ್ಯ ನರಕಯೋಗ್ಯರು ತಮ್ಮತಮ್ಮ ಶ್ರದ್ಧೆಯಂತೆ ಹೊಂದುವ ಸಾಧನೆಯ ಮುಕ್ತಾಯದ ಹಂತವನ್ನು ಮೋಕ್ಷ ಎಂದು ಕರೆಯಬಹುದು. ಲಯಗಳ ಕುರಿತು ಗರುಡಮಾರ್ಗ ,ಶೇಷಮಾರ್ಗ ಎಂಬ ಎರಡು ಮಾರ್ಗಗಳಿವೆ. ಮುಕ್ತಿಯಲ್ಲಿ ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ ಎಂದು ನಾಲ್ಕುವಿಧ.ಸಾಧಕನ ಪರಮಗುರಿಯೇ ಮುಕ್ತಿ, ಮುಕ್ತಿ ಅಷ್ಟು ಸುಲಭವಲ್ಲವಾದರೂ ಅದರ ಅರಿವು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಸಾಧನೆಯಲ್ಲಿ ಭಕ್ತಿ ಮುಖ್ಯವಾಗಿರುತ್ತದೆ. ಈ ಶರೀರವು ಸಾಧನ ಶರೀರ. ಪರಮಾತ್ಮನ ಪ್ರಾಪ್ತಿಗಾಗಿ ಅನೇಕ ಮಾರ್ಗಗಳಿವೆ.ಅಧ್ಯಯನ,ಧ್ಯಾನ,ದಾನ,ಯಜ್ಞ,ತಪಸ್ಸು,ನಿಷ್ಕಾಮ ಕರ್ಮಾನುಷ್ಠಾನ,ವೈರಾಗ್ಯಶಾಸ್ತç ಶ್ರವಣ,ಮನನ, ನಿದಿಧ್ಯಾಸನ ಮತ್ತು ಭಕ್ತಿಯನ್ನು ಸಾಧನೆ ಮಾಡಬೇಕು. ಇಷ್ಟೆ÷್ಟಲ್ಲಾ ಸಾಧನೆ ಮಾಡಿದರೆ ಭಗವಂತನ ಪ್ರಸಾದವಾಗುವುದು. ಈ ಪ್ರಸಾದವನ್ನು ಒದಗಿಸಬಲ್ಲ ಶಕ್ತಿ ಇರುವುದು ಭಕ್ತಿಗೆ ಮಾತ್ರ. ಗುರುಜಗನ್ನಾಥವಿಠಲರು “ ಬಾರಯ್ಯವೆಂಕಟ ಮನ್ಮನಕೆ ತ್ವರಿತಾದಿ ನಿಜನಾರಿ ಸಹಿತದಿ ಈ ಸಮಯಕೆ ಶರಣೆಂಬೆನು ಪದ ಯುಗಕೆ’’ ಎಂದು ಲಕ್ಷಿö್ಮÃಸಹಿತ ವೆಂಕಟೇಶನನ್ನು ಆಹ್ವಾನಿಸುತ್ತಾರೆ. ಭಗವಂತನನ್ನು ಅರಿಯಲು ಪ್ರಮಾಣಗಳು ಬೇಕು. ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳು. ಯಥಾರ್ಥಜ್ಞಾನವನ್ನು ತಿಳಿಸುತ್ತವೆ. ಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳಿಗೆ ನಿಲುಕುವ ಜ್ಞಾನ, ಅನುಮಾನವೆಂದರೆ ಕಾರ್ಯಕಾರನ ಊಹೆಯಿಂದ ನಿರ್ಧರಿಸುವುದು. ಉದಾಹರಣೆಗೆ ಹೊಗೆ ಇದ್ದರೆ ಅಲ್ಲಿ ಬೆಂಕಿ ಇದೆ ಎಂದು ಭಾವಿಸುವುದು. ಇನ್ನು ಆಗಮಗಳು ಅಪೌರುಷೇಯವಾಗಿವೆ. ವೇದಗಳು ಪುರಾಣಗಳು, ಭ್ರಹ್ಮಸೂತ್ರಗಳು, ಮಹಾಭಾರತ, ರಾಮಾಯಣ, ಸಾತ್ವಿಕ ಪುರಾಣಗಳು ಪ್ರಮಾಣವೆನಿಸಿವೆ. ಮಧ್ವಾಚಾರ್ಯರು ಇವೆಲ್ಲವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಹರಿದಾಸರಿಗೆ ಸಿಕ್ಕ ಉತ್ತಮ ಅವಕಾಶವಾಯಿತು. ಹರಿದಾಸಸಾಹಿತ್ಯ ಒಂದು ಪೌರಾಣಿಕ ಕೋಶವಾಯಿತು. ಇದಕ್ಕೆ ಉತ್ತಮ ನಿದರ್ಶನವೆಂದರೆ ಗುರುಜಗನ್ನಾಥದಾಸರು ರಚಿಸಿದ `ಪ್ರಲ್ಹಾದ ಚರಿತೆ’. ಇದರಲ್ಲಿ ವೇದ,ಶೃತಿ,ಸ್ಮೃತಿಗಳಿಂದ ಆಯ್ದಭಾಗಗಳಿವೆ. “ ಹರಿಗೆ ಸಮನದ ಸುರರಿಲ್ಲ ಧರೆಯೊಳಗೆ ಸರಿಯಾಗುವರೆ ಅಸುರರು ಕೋಲೆ’’ ಎಂಬುದಾಗಿದೆ. ಶ್ರೀಹರಿಯು ಸರ್ವವೇದಗಳಿಂದ ಪ್ರತಿಪಾದ್ಯನಾಗಿದ್ದಾನೆ. ಮದ್ವಾಚಾರ್ಯರ ಅಭಿಮತದಂತೆ ಹರಿದಾಸರು ಪ್ರಮಾಣವಾಗಿ ಸ್ವೀಕರಿಸಿದ್ದಾರೆ. ಗುರುಜಗನ್ನಾಥದಾಸರು ಪ್ರಲ್ಹಾದನ ಬಾಯಿಯಿಂದ ನುಡಿಸಿದ್ದಾರೆ. ಹೀಗೆ ಹರರಿದಾಸರು ತತ್ವಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಹರಿದಾಸಸಾಹಿತ್ಯದಲ್ಲಿ ಕಂಡುಬರುವ ಮಹತ್ವದ ಅಂಶಗಳೆAದರೆ ಪಂಚ ಭಾವಗಳು. ಅವುಗಳೆಂದರೆ ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ ಮತ್ತು ಮಧುರ. ಈ ಭಾವಗಳನ್ನು ಹರಿದಾಸರು ವಿಪುಲವಾಗಿ ಬಳಸಿದ್ದಾರೆ. ಭಕ್ತನಾದವನು ಮೊದಲು ಸ್ಥಿರಚಿತ್ತವುಳ್ಳವನಾಗಿರಬೇಕು. ಆಗ ಭಗವಂತನ ಲೀಲೆಗಳು ,ಭಗವಂತನ ಕಾರುಣ್ಯ ಅರವಿಗೆ ಬರತೊಡಗುತ್ತದೆ. ರಾಮದಾಸರು “ ನಿನ್ನದೋ ನಿಖಿಲ ನಿನ್ನದೋ ಕುನ್ನಿ ಮನುಜರಾಧೀನನೇನಿಲ್ಲ ಶ್ರೀಹರಿ ನೀನಿಟ್ಟ ರವಿ ಶಶಿಗಳೆಲ್ಲಾ ಹರಿ ನೀನಿಟ್ಟ ಅಗ್ನಿಜ್ಯೋತಿಗಳು ಹರಿ’’ ಎಂದು ಭಕ್ತಿಭಾವವನ್ನು ವ್ಯಕ್ತಪಡಿಸಿದ್ದಾರೆ. ಹರಿದಾಸರ ಉಪಾಸನೆಯ ಕ್ರಮವೆಂದರೆ ಈಶ-ದಾಸ ತತ್ವ. ಪರಮಾತ್ಮ ತನನ್ನು ದಾಸನಗಿ ಸ್ವೀಕರಿಸಬೇಕೆಂದು ಭಕ್ತರ ಅಪೇಕ್ಷೆಯಾಗಿರುತ್ತದೆ.“ ಐಕೂರು ಆಚಾರ್ಯರು “ದಾಸನೆನಿಸೋ ನಿನ್ನಾ’’ ಎಂದು ಬೇಡಿಕೊಳ್ಳುತ್ತಾರೆ. ರಾಮದಾಸರು “ ದಾಸನಾದಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ’ ಎಂದು ಹೇಳಿದ್ದಾರೆ. ಭಕ್ತಿಯ ಉತ್ಕಟೆತೆಯಲ್ಲಿ ಭಕ್ತನಿಗೆ ಭಗವಂತನಲ್ಲಿ ಸಖ್ಯಭಾವ ಕಂಡುಬರುತ್ತದೆ. ನೇರವಾಗಿ ಸಂಭಾಷಣೆ ಮಾಡುತ್ತಾರೆ. ಸಲುಗೆಯಿಂದ ಬಯ್ಯುತ್ತಾರೆ, ಇದನ್ನು `ನಿಂದಾಸ್ತುತಿ’ ಎಂದು ಕರೆಯುತ್ತೇವೆ. “ ಮಂದಮತಿಯು ನುಡುದನೆಂದು ಕುಂದು ತಿಳಿಯ ಬೇಡವೋ ನಿಂದಾ ಸ್ತುತಿಗಳಿಂದ ನಿನ್ನ ಹೊಗಳುತ್ತಿದ್ದೆನೋ’ ಎಂದು ಭಿಮವ್ವನವರು ಬರೆಯುತ್ತಾರೆ. ವಾತ್ಸಲ್ಯ ಭಾವವು ಹರಿದಾಸ ಸಾಹಿತ್ಯದ ಹೃದಯಭಾಗ. ಯಶೋಧೆ ಕೃಷ್ಣರ ಸಂದರ್ಭಗಳು ಎಂಥವರನ್ನೂ ಮುಗ್ಧಗೊಳಿಸುತ್ತವೆ. ಹಿಂದಿಭಾಷೆಯಲ್ಲೂ ಇಂತಹ ಉದಾಹರಣೆಗಳು ವಿಪುಲವಾಗಿ ದೊರೆಯುತ್ತವೆ.ಆಧುನಿಕ ಹರಿದಾಸರು ಕೃಷ್ಣನ ಬಾಲ ಲೀಲೆಗಳನ್ನು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ. “ ನೋಡೆ ಗೊಪಮ್ಮ ಕೃಷ್ಣನ ಚಾಳಿಯ ನೀ ಮಾಡಿಬಿಟ್ಟೆಯೋ ಇಂಥಗೂಳಿಯ ಇಂಥಾ ಗೂಳಿಯ’’ ಎಂದು ತಾಯಿಗೆ ದೂರು ಹೇಳುತ್ತಾರೆ. ಅದಕ್ಕೆ ಉತ್ತರವಾಗಿ“ ಬಟ್ಟು ಬಾಯೊಳಿಟ್ಟರೆ ಎನ್ನಯ ಕಂದ ತಟ್ಟನೆ ಕಡಿಯಲರಿಯನೆ’’ ಎಂದು ಮಗನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಹರಿದಾಸರು ಸ್ವತಃತಾವೇ ತಾಯಿಯಾಗಿ ಕೃಷ್ಣನ ಲೀಲೆಯನ್ನು ಮನತುಂಬಿ ಹಾಡಿದ್ದಾರೆ. ಮಧುರ ಭಾವವು ಶ್ರೀ್ರಪಾದರಾಜರಾದಿಯಾಗಿ ಎಲ್ಲಾ ಹರಿದಾಸರು ಬಳಸಿಕೊಂಡಿದ್ದಾರೆ. ಭಾಗವತದಲ್ಲಿ ಬರುವ ಭ್ರಮರಗೀತೆ, ಗೋಪಿಗೀತೆ, ವೇಣುಗೀತೆಗಳ ಸಂದರ್ಭಗಳು ವಿಪುಲವಾಗಿ ಬಳಕೆಯಾಗಿವೆ. ಪರಮಾತ್ಮನ ನಲ್ಲೆಯಂದು ಪರಿಭಾವಿಸಿ ಉಪಾಸನೆ ಮಾಡುವ ಭಾವ ವಿನೂತನವಾಗಿವೆ. ಗೋಪಿಕಾಸ್ತಿçÃಯರ ರಾಸಲೀಲೆಯ ಸಂದರ್ಭಗಳನ್ನು ಆಧುನಿಕ ಹರಿದಾಸರೂ ಬಳಸಿದ್ದಾರೆ. ಈ ತರಹ ನಾನಾವಿಧ ಭಕ್ತಿಯಿಂದ ಉಪಾಸನೆ ಮಾಡುವ ಉದ್ದೇಶವೇ ಪರಮಾತ್ಮನ ದರ್ಶನ. ಸಾಧಕನ ಸಾಧನೆ ಗಟ್ಟಿಗೊಳಿಸಿದಂತೆಲ್ಲಾ ಭಗವಂತನನ್ನು ಕಾಣುವ ಹಂಬಲ ತೀವ್ರವಾಗುತ್ತಾ ಹೋಗುತ್ತದೆ, ದೇವರ ದರ್ಶನವಾಗದೆ ಹೋದರೆ ಆ ದಿನ ಅವರಿಗೆ ದುರ್ದಿನ ವಾಗಿರುತ್ತದೆ. ಭಗವಂತನ ದರ್ಶನವಾದ ದಿನವೇ ಅವರಿಗೆ ಪುಣ್ಯದಿನ. ಭಗವಂತನ ದಿವ್ಯ ದರ್ಶನದ ಕುರಿತು “ ನೋಡಿದೆ ವೇಣುಗೋಪಾಲನ, ದಿವ್ಯಕೊಳಲುದುತನಿಂತ ಚಲುವ ಚನ್ನಿಗನಾ’’ ಎಂದು ಐಕೂರು ಆಚಾರ್ಯರು ವಿವರಿಸಿದ್ದಾರೆ. ಶ್ರೀಮತಿ ಪದ್ಮಾಬಾಯಿಯವರು “ ಬಂದನು ಬಂದನು ಭವಹಾರಿ, ನಿಂದನು ಹೃದಯದಿ ಅಸುರಾರಿ ಬಂದನು ಶ್ರೀಗೋವಿಂದ ಮುರಾರಿ, ಇಂದಿರೆ ಸಹಿತ ಮುಕುಂದ ಮೈದೋರಿ.’’ ಎಂಬ ದರ್ಶನದ ವಿಚಾರಗಳು ಕಂಡುಬರುತ್ತವೆ. ಹರಿದಾಸರಲ್ಲಿ ಕಂಡುಬರುವ ಮತ್ತೊಂದು ಅಂಶÀವೆAದರೆ ತೀರ್ಥಕ್ಷೇತ್ರಗಳ ದರ್ಶನ. `ತೀರ್ಥ’ ವೆಂದರೆ ಮುಕ್ತಿಯೋಗ್ಯವಾದ ಕಾಲ ಎಂಬುದು ಒಂದು ಅರ್ಥವಾದರೆ ಇನ್ನೊಂದು ಭಗವಂತನಿಗೆ ಅಭಿಷೇಕ ಮಾಡುವ ಜ¯ವೆಂದೂ ಅರ್ಥ. ಭಗವಂತನಿAದ ಸೃಷ್ಟಿಯಾದ ಎಲ್ಲಾ ನದಿಗಳು ತೀರ್ಥಗಳಾಗಿವೆ. ಆದ್ದರಿಂದ ಹರಿದಾಸರು ನದಿಗಳ ತಾರತಮ್ಯೋಕ್ತ ವರ್ಣನೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಸ್ನಾನ ಮಾಡುವುದು ಪಾಪ ವಿಮೋಚನೆಗೆ ಕಾರಣವಾಗುತ್ತದೆ, ಅಷ್ಟೇ ಅಲ್ಲ ಸ್ಮರಣೆ ಮಾತ್ರದಿ ಪಾಪ ವಿಮೋಚನೆಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಯಾವ ವಿಘ್ನಗಳು ಬರುವುದಿಲ್ಲ ಎಂದು ಪ್ರಾಣೇಶವಿಠಲರು ತಿಳಿಸುತ್ತಾರೆ. ಕ್ಷೇತ್ರಗಳು ಭಗವಂತನು ಅಧಿಷ್ಠಾನಗೊಳಿಸಿದ ಸ್ಥಳಗಳು. ಭಕ್ತನ ಸಾಧನೆ ಹೆಚ್ಚಾದಂತೆ ನಿಸರ್ಗದ ಚೇತನಾಚೇತನ ವಸ್ತಗಳು ಭಗವಂತನ ಪ್ರತಿಮೆಗಳಾಗಿ ಕಂಡು ಬರುತ್ತವೆ. ಹೀಗೆ ಹರಿದಾಸ ಸಾಹಿತ್ಯವು ವೇದವೇದಾಂತದ ಸಾರವನ್ನು ತನ್ನೊಳಗಡಿಗಿಸಿಕೊಂಡು ಸಂಪತ್ಭರಿತವಾಗಿದೆ. ಹರಿದಾಸರದು ಅಂತಃಕರಣದ ಮನಸ್ಸು. ಸಾಮಾನ್ಯ ಜನರಲ್ಲಿ ಜಾಗ್ರತಿ ತರಬೇಕೆಂದು ಅವರಿಗೆ ಪರಿಚಿತವಾದ ಜನಪದ ಲಯಗಳಲ್ಲಿ ಸಾಹಿತ್ವನ್ನು ರಚಿಸಿದರು. ಜನಪದ ಸಾಹಿತ್ಯದಲ್ಲಿ ಲಾವಣಿ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇದು ಕಥಾನಕ ಕಾವ್ಯ. ಕಥೆಯನ್ನು ಕಾವ್ಯದ ಮೂಲಕ ಹೇಳಲು ಪ್ರಶಸ್ತವಾದ ಪ್ರಕಾರವಾಗಿದೆ. ಗೋವಿಂದದಾಸರು `ಕಲಿಯುಗದ ಲಾವಣಿ’ಯಂದು ಹನ್ನೊಂದು ನುಡಿಗಳ ಸುಧೀರ್ಘವಾದ ಕಾವ್ಯರಚಿಸಿದ್ದಾರೆ. `ಕೇಳಿರಿ ಜನಗಳೆ ಬಾಳಿದಂಥಾ ವಿಪ್ರಾವಲಿಯ ಹೀನಸ್ಥಿತಿ’ ಎಂಬುದಾಗಿದೆ. ಇದು ಆಧ್ಯಾತ್ಮದೊಂದಿಗೆ ಹಾಸ್ಯ ಮತ್ತು ವಿಡಂಬನೆಯನ್ನು ಮೇಳೈಸಿಕೊಂಡು ಕೇಳುಗರಿಗೆ ಅಹ್ಲಾದವನ್ನು ಉಂಟು ಮಾಡುತ್ತದೆ.
ವಚನಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನದ ನೆಲೆಗಳು
ವಚನಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನದ ನೆಲೆಗಳು ವಚನಸಾಹಿತ್ಯ ವಿಶ್ವ ಕಂಡ ಅನುಪಮ ಸಾಹಿತ್ಯ, ನುಡಿದಂತೆ ನಡೆಯುವ ನಡೆದಂತೆ ನುಡಿಯುವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಜನಮಾನಸ ತಲುಪಿದ ಸಾಹಿತ್ಯ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಸಮಾಜದ ಎಲ್ಲಾ ಆಯಾಮಗಳಲ್ಲಿ ವಿನೂತನವಾದ ಬದಲಾವಣೆಗಳಾದವು.ಅವುಗಳಲ್ಲಿ ಸಾಹಿತ್ಯಿಕ ಬದಲಾವಣೆಯೂ ಒಂದಾಗಿದೆ. ಪಾಂಡಿತ್ಯಮಾನ್ಯವಾದ, ಆಸ್ಥಾನದಲ್ಲಿಯೇ ಅಸ್ವಾದಿಸಬಹುದಾದ ಸ್ಥಿತಿಯಿಂದ ಸಾಮಾನ್ಯರೂ ಓದಬಹುದಾದ ಸಾಮಾನ್ಯರಿಂದ ಸಾಮಾನ್ಯರಿಗಾಗಿ ರೂಪಿತವಾದ ಸಾಹಿತ್ಯ ವಚನಸಾಹಿತ್ಯ. ವಚನಕಾರರ ಉದ್ದೇಶ ಸಾಹಿತ್ಯ ರಚಿಸುವುದಲ್ಲ. ಮಾತಿನ ಮುಖಾಂತರ ಜನರಲ್ಲಿ ಅರಿವು ಮೂಡಿಸುವುದೇ ಆಗಿದೆ. ಆ ಮಾತುಗಳು ಇಂದು ಮಂತ್ರಸದೃಶ್ಯವಾದ ವಚನಗಳಾಗಿವೆ. ಇವುಗಳ ಮುಖಾಂತರ ಸಮಾನತೆಯ ಸಮಾಜವನ್ನು ಕಟ್ಟಲು ಬಯಸಿದವರು ವಚನಕಾರರು. ಭಾರತದ ಆಧ್ಯಾತ್ಮಿಕ ಸಾಹಿತ್ಯವನ್ನು ಅವಲೋಕಿಸಿದಾಗ ಎಲ್ಲಾ ಮತ-ಪಂಥಗಳ ಸಾಹಿತ್ಯದ ಉದ್ದೇಶ ಮಾನವನ ಸರ್ವತೋಮುಖ ಅಭಿವೃದ್ಧಿ. ಅದರಮುಖೇನ ಸಮಾಜದ ಮತ್ತು ರಾಷ್ಟçದ ಅಭಿವೃದ್ಧಿ ಸರಿಯಷ್ಟೆ.ಇದಕ್ಕೆ ವಚನಸಾಹಿತ್ಯ ಹೊರತಾಗಿಲ್ಲ. ಒಂದು ವಸ್ತುವಿನ ಪೂರ್ಣವಾದ ನೋಟಕ್ಕೆ ಎಲ್ಲಾ ಆಯಾಮಗಳನ್ನು ವಿಕ್ಷಿಸುತ್ತೇವೆ. ಅದರಂತೆ ವ್ಯಕ್ತಿಯ ಪರಿಪೂರ್ಣ ವಿಕಸನಕ್ಕೆ ಅನೇಕ ಆಯಾಮಗಳಿವೆ. ಭಾರತೀಯ ಶಾಸ್ತçಗಳ ಪ್ರಕಾರ ವ್ಯಕ್ತಿತ್ವದ ಪೂರ್ಣ ಗ್ರಹಿಕೆಗೆ ನಾಲ್ಕು ಆಯಾಮಗಳಿವೆ. ಶಾರೀರಿಕ ಆಯಾಮ, ಬೌದ್ಧಿಕ ಆಯಾಮ, ನೈತಿಕ ಅಯಾಮ, ಹಾಗೂ ಆಧ್ಯಾತ್ಮಿಕ ಆಯಾಮಗಳೇ ಅಗಿವೆ. ಅದರೆ ಪಾಶ್ಚಾತ್ಯರಲ್ಲಿ ಬಾಹ್ಯ ಬೆಳವಣಿಗೆಗೆ ಹೆಚ್ಚು ಪ್ರಾಶಸ್ಯ÷್ತ ಕಂಡುಬರುತ್ತದೆ. ಆದರೆ ಭಾರತೀಯರಲ್ಲಿ ಆಂತರಿಕ ಸೌಂದರ್ಯೆಕ್ಕೆ ಹೆಚ್ಚು ಪ್ರಾಶಸ್ತöನೀಡಲಾಗಿದೆ ವ್ಯಕ್ತಿತ್ವ ವಿಕಸನವು ಬುದ್ಧಿಯ,ಶರೀರದ,ಸ್ವಾಸ್ಥವನ್ನು ಅವಲಂಬಿಸಿದೆ. ನೈತಿಕತೆ ಮತ್ತು ಸಾಧನೆ ಆತ್ಮಶಕ್ತಿಯನ್ನು ವೃದ್ಧಿಸುತ್ತದೆ. ಹೀಗಾಗಿ ಆತ್ಮಶಕ್ತಿಯ ವರ್ಧನೆಯು ವ್ಯಕ್ತಿತ್ವ ವಿಕಸನಕ್ಕೆ ತಳಹದಿಯಾಗಿದೆ. ಇವುಗಳಿಗೆ ಶ್ರದ್ಧೆ,ಪ್ರೀತಿ, ತಾಳ್ಮೆ ಆತ್ಮವಿಶ್ವಾಸ ಧೈರ್ಯ,ಪ್ರಾಮಾಣಿಕತೆ, ಉದಾತ್ತತೆಯಂತಹ ಗುಣಗಳು ವ್ಯಕ್ತತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಈ ತರಹದ ಜೀವಿಗಳು ತಾವೂ ಬೆಳಗುತ್ತಾರೆ ಮತ್ತು ತಮ್ಮ ಸಂಪರ್ಕಕ್ಕೆ ಬಂದವರನ್ನೂ ಬೆಳಗಿಸುತ್ತಾರೆ. ವಚನಕಾರರು ಈ ವಿಚಾರಕ್ಕೆ ಉತ್ತಮ ನಿದರ್ಶನ. ತಾಯಿಯು ತನ್ನ ಮಗುವಿನ ಉನ್ನತಿಯನ್ನು ಬಯಸಿ ನೀತಿಯನ್ನು ಕಲಿಸುವಂತೆ ವಚನಕಾರರು ಜನರನ್ನು ಸಮಾಜವನ್ನು ತಿದ್ದಿತೀಡಿದರು. ಜೀವನ ಮೌಲ್ಯವನ್ನು ಬೋಧಿಸಿದರು. ` “ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಬೇಡ,ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,ತನ್ನ ಬಣ್ಣಿಸ ಬೇಡ,ಇದಿರು ಹಳಿಯಲು ಬೇಡ, ಇದೇ ಅಂತರAಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೆ ನಮ್ಮ ಕೂಡಲಸಂಗನ ಒಲಿಸುವ ಪರಿ’’ ಎನ್ನುವ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ಮೇಲ್ನೋಟಕ್ಕೆ ಇದು ಸರಳವಾದ ವಚನ. ಆದರೆ ಬದುಕಲು ಕಷ್ಟವಾದದ್ದು. ಇತರರನ್ನು ಹಳಿಯುವ ನನ್ನನ್ನು ಬಣ್ಣಿಸಿಕೊಳ್ಳುವ ಗುಣವಂತೂ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ಒಂದೊAದು ಮಾತುಗಳೂ ನಮ್ಮ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮೂಲವಾಗಿವೆ. ಉತ್ತಮ ವ್ಯಕ್ತಿತ್ವಕ್ಕೆ ಮತ್ತೊಂದು ಕಾರಣ ವೆಂದರೆ ಸಜ್ಜನರ ಸಂಗ. ದೇವರಲ್ಲಿ ನಾವು ಪ್ರಾರ್ಥಿಸಿಕೊಳ್ಲುವುದು ಎರಡನ್ನು ಮಾತ್ರ. ಒಂದು ಸಜ್ಜನರ ಸಂಗ ಮಾಡಿಸು, ಇನ್ನೊಂದು ದುರ್ಜನರ ಸಂಗವನ್ನು ಬಿಡಿಸು ಎಂಬುದಾಗಿದೆ. ಇವೆರಡು ಅಂಶಗಳನ್ನು ಪಾಲಿಸಿದರೆ ಸಾಕು ಮನುಷ್ಯ ಉತ್ತಮನಾಗುತ್ತಾನೆ. “ ಸಾರ ಸಜ್ಜನರ ಸಂಗವ ಮಾಡು ದೂರ ದುರ್ಜನ ಸಂಗ ಬೇಡವಯ್ಯ ಆವ ಹಾವಾದರೇನು ವಿಷವೊಂದೆ, ಅಂಥವರ ಸಂಗ ನಮಗೆ ಬೇಡವಯ್ಯ ಅಂತರAಗ ಶುದ್ಧವಿಲ್ಲದವರ ಸಂಗ ಸಿಂಗಿ ಕಾಳಕೂಟ ವಿಷವೋ ಕೂಡಲ ಸಂಗಯ್ಯ’’ ಎಂದಿದ್ದಾರೆ. ಕಾಳಕೂಟದ ವಿಷ ಎಷ್ಟು ಅಪಾಯಕಾರಿಯೋ ಅಷೇ ಅಪಾಯಕಾರಿ ದುರ್ಜನರು ಎಂಬುದನ್ನು ಮನ ಮುಟ್ಟುವಂತೆ ತೀಳಿಸಿದ್ದಾರೆ. ಇಷ್ಟೆಲ್ಲಾ ದೋಷಗಳು ನಮ್ಮಲ್ಲಿ ಇದ್ದರೂ ಇತರರನ್ನು ಹಳಿಯದೆ ಬಿಡುವುದಿಲ್ಲ. ಅದಕ್ಕೆ “ಲೋಕದಡೊಂಕ ನೀನೇಕೆ ತಿದ್ದುವಿರಿ ನಿಮ್ಮ ನಿಮ್ಮ ನಮವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ’’ ಎಂಬಲ್ಲಿ ಇತರರನ್ನು ನೋಡಿ ಕರಬುವ ಸ್ವಭಾವ ನಮ್ಮದಾಗಿರಬಾರದು. ನಮ್ಮನ್ನು ನಾವು ತಿದ್ದಿಕೊಂಡು ಬದುಕಬೇಕು. ಅರಿವೇ ಗುರುವಾಗಬೇಕು ಎಂಬುದೇ ತಾತ್ಪರ್ಯ. ಬರೀ ಓದು ಗಿಳಿಯ ಪಾಠವಿದ್ದಂತೆ. ನಿಜಬಾದ ಶಿಕ್ಷಣ ಮನುಷ್ಯನಲ್ಲಿ ಮಾನವೀಯತೆಯನ್ನು ಹುಟ್ಟುಹಾಕಬೇಕು“ ನೂರನೋದಿ ನೂರಕೇಳಿದರೇನು? ಆಸೆ ಹರಿಯದ ರೋಷ ಮುರಿಯದ ಮಜ್ಜನಕೆರೆದು ಫಲವೇನು ಮಾತಿನಂತೆ ಮನವಿಲ್ಲದ ಡಾಂಭಿಕ ಭಕ್ತರನೊಲ್ಲಾ ನಮ್ಮ ಕೂಡಲ ಸಂಗಮದೇವಾ’ ನಡೆನುಡಿ ಒಂದಾದದ್ದೇ ನಿಜವಾದ ಭಕ್ತಿ. ಸಾಧನೆ ನಡೆ ನುಡಿ ಬೇರೆ ಯಾಗಿದ್ದರೆ ಅದು ಭಕ್ತಿಯೇ ಅಲ್ಲ ಎಂಬುದನ್ನು ನಿರ್ಧಾಕ್ಷಿಣ್ಯವಾಗಿ ನುಡಿಯುತ್ತಾರೆ. ಇಂತಹ ಡಾಂಭಿಕ ಭಕ್ತಿಗೆ ದೃಷ್ಟಾಂತವನ್ನು ನೀಡಿದ್ದಾರೆ. `ಒಲವಿಲ್ಲದ ಪೂಜೆ ನೇಹವಿಲ್ಲದಾ ಮಾಟ ಚಿತ್ರದ ಕಬ್ಬಿನಂತೆ ಅಪ್ಪದರೆ ಸುಖವಿಲ್ಲ. ಮೆಲಿದರೆ ಸವಿ ಇಲ್ಲ. ಎಂದು ಭಕ್ತಿಯ ಸ್ವರೂಪವನ್ನು ತಿಲಿಸುತ್ತಾರೆ. ಅಹಂಕಾರ ಎಂಬುದು ವ್ಯಕ್ತಿತ್ವ ನಿರ್ಮಾಣದಲ್ಲಿ ತೊಡಕನ್ನು ಉಂಟುಮಾಡುತ್ತದೆ.“ ಹಾವುತಿಂದವರ ನುಡಿಸ ಬಹುದು ಗರಬಡಿದವರ ನುಡಿಸಬಹುದು ಆದರೆ ಸಿರಿಗರ ಬಡೆದವರ ನುಡಿಸಲು ಬಾರದು ನೋಡಯ್ಯ ಎಂದು ನಶ್ವರವದ ಸಂಪತ್ತನ್ನು ನಚ್ಚಬಾರದು. ನಿಜವಾದ ಸಂಸಪತ್ತು ಎಂದರೆ ಜ್ಞಾನ ಮಾತ್ರ ಎಂದು ಅಹಂಕಾರದ ಕುರಿತು ಎಚ್ಚರಿಸುತ್ತಾರೆ. ಈ ರೀತಿ ತಿಳಿದು ನೋಡಿದರೆ ಇಲ್ಲಿಯೇ ಸ್ವರ್ಗ ಇಲ್ಲಿಯೇ ನರಕ ಇದೆ. ಅದು ಮೇಲೆ ಇದೆ ಎಂದು ತಿಳಿಯುವುದು ಅಜ್ಞಾನದ ಸಂಕೇತವಾಗಿದೆ. ಹಾವು ಹದ್ದು ಕಾಗೆ ಗೂಗೆ ಹಲವು ಕಾಲ ಬದುಕುತ್ತವೆ. ಅದು ಸಾರ್ಥಕ ಬದುಕೇ? ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು. ಮನುಷ್ಯ ಜನ್ಮ ಬಂದಾಗ ಪ್ರಾಣಿಗÀಳಂತೆ ಅಸನ ವ್ಯಸನಕ್ಕೆ ಬದುಕದೆ ಸಮಾಜ ಮುಖಿಯಾಗಿ ಬದುಕಬೇಕೆಂದು ಸೂಚಿಸುತ್ತಾರೆ. ಈ ಎಲ್ಲಾ ವಿಚಾರಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಮಾಡುವಲ್ಲಿ ಮುಖ್ಯವಾಗಿವೆ. ಪ್ರತಿಯೊಂದು ವಚನಗಳು ವ್ಯಕ್ತಿಯ ವ್ಯಕ್ತಿ÷್ವವ ರೂಪಿಸುವಲ್ಲಿ ಸಹಾಯಕಾರಿಯಾಗಿವೆ. ಪ್ರಾಚೀನ ಕಾಲದಿಂದಲೂ ವಚನಗಳನ್ನು ಓದುವ ಹಾಡುವ ಪರಿಪಾಠ ಇತ್ತು. ಈಗ ಮುಂದುವರೆದಿದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಉತ್ತಮ ಪ್ರಜೆಗಳನ್ನು ನಿರ್ಮಿಸುವಲ್ಲಿ ವಚನಗಳ ಪಾತ್ರ ಹಿರಿದೆಂದು ತಿಳಿದು ಸಾಂಸ್ಕೃತಿಕ ಸಂಘಸAಸ್ಥೆಗಳು, ಮಠಮಾನ್ಯಗಳು ಮಕ್ಕಳಿಗೆ ವಚನ ಸಾಹಿತ್ಯದ ಕಂಠಪಾಠ ಮಾಡಿಸಿ ಹಾಡಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಮೊದಲು ಮಕ್ಕಳು ಪದಗಳ ಸಂಗ್ರಹ ಮಾಡಿಕೊಳ್ಲುತ್ತಾರೆ. ನಂತರ ಅವುಗಳನ್ನು ಮನನ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಅರಿವಿಲ್ಲದೆಯೇ ಉತ್ತಮ ವ್ಯಕ್ತಿತ್ವ ನಿರ್ಮಾವಾಗುತ್ತದೆ. ಅದ್ದರಿಂದ ವಚನಗಳು ವಿಶ್ವಮಾನ್ಯವಾಗಿವೆ. ಡಾ.ಶೀಲಾದಾಸ,ರಾಯಚೂರು. ೯೪೪೮೯೭೩೬೭೦ ಆಕರಗ್ರಂಥಗಳು. ೧) ಬಸವಣ್ಣನವರ ವಚನಸಂಪುಟ ಡಾ.ಎಮ್ ಎಮ್ ಕಲಬುರಗಿ ಪ್ರಧಾನಸಂಪಾದಕರು
ಕನ್ನಡ ಸೇನಾನಿ ತವಗ ಭೀಮಸೇನರಾಯರು
ಭಾರvದÀ ಸ್ವಾತಂತ್ರö್ಯಪೂರ್ವದಲ್ಲಿ ಕನ್ನಡನಾಡಿನ ಪ್ರದೇಶ ಮುಂಬೈಪ್ರಾAತ, ಮದ್ರಾಸಪ್ರಾಂತ, ನಿಜಾಂಸAಸ್ಥಾನ ಹಾಗೂ ಮೈಸೂರುಪ್ರಾಂತವೆAಬ ಭಾಗಗಳಾಗಿ ಹಂಚಿಹೋಗಿತ್ತು. ಅದರಲ್ಲಿ ಬೀದರ, ಕಲಬುರಗಿ, ರಾಯಚೂರು ಜಿಲ್ಲೆಗಳು ನಿಜಾಂ ಸರಕಾರದಲ್ಲಿದ್ದವು. ಉರ್ದು ಆಡಳಿತ ಭಾಷೆಯಾಗಿತ್ತು, ತೆಲುಗು ಮತ್ತು ಮರಾಠಿ ಭಾಷೆಗಳ ಪ್ರಭಾವ ಹೆಚ್ಚಾಗಿತ್ತು. ಈ ಪರಸ್ಥಿತಿ ಆಗಿನ ಹಿರಿಯರಿಗೆ ವ್ಯಥೆಯನ್ನುಂಟುಮಾಡಿತ್ತು. ಈ ಸಂದರ್ಭದಲ್ಲಿ ಕನ್ನಡದ ಕಹಳೆಯನ್ನು ಊದಿದವರು ಕಪಟರಾಳ ಕೃಷ್ಣರಾಯರು. ಇವರೊಂದಿಗೆ ಪೂಜ್ಯ ದೊಡ್ಡಪ್ಪ ಅಪ್ಪನವರು ಸಾಥ ನೀಡಿದ್ದರು. ಇವರೊಂದಿಗೆ ಅನೇಕ ಮಹನಿಯರು ಪಲ್ಗೊಂಡಿದ್ದರು. ಅಂಥವರಲ್ಲಿ ತವಗ ಭೀಮಸೇನರಾಯರೂ ಒಬ್ಬರು. ಇವರು ಮೂಲತಃ ಲಿಂಗಸೂಗೂರು ತಾಲ್ಲೂಕಿನ ತವಗ ಗ್ರಾಮದವರು. ೧೯೦೮ ರಲ್ಲಿ ಜನಿಸಿದರು .ತಂದೆ ಶ್ರೀನಿವಾಸರಾವ ತಾಯಿ ನರಸುಬಾಯಿ. ರಾಮರಾಯ, ಮದ್ವರಾಯ, ಲಕ್ಷö್ಮಣರಾಯ ಸಹೋದರರು ಮತ್ತು ಮೂರುಜನ ಸಹೋದರಿಯರು. ತುಂಬು ಕುಟುಂಬ. ತಂದೆ ತೆರಿಗೆ ಸಂಗ್ರº ಕಚೇರಿಯಲ್ಲಿ ಕಾgಕೂನÀರಾಗಿ ವೃತ್ತಿ ಮಾಡುತ್ತಿದ್ದರು. ಬಾಲ್ಯದಲ್ಲಿ ತವಗರ ಸ್ವಭಾವ ಉಳಿದ ಮಕ್ಕಳಿಗಿಂತ ಭಿನ್ನವಾಗಿತ್ತು. ತಂದೆತಾಯಿಯರ ಪ್ರೀತಿ ಮತ್ತು ಸಿಟ್ಟಿನ ಸಂದರ್ಭಗಳ ಕುರಿತು ಹೀಗೇಕೆ? ಎಂದು ಚಿಂತನೆ ಮಾಡುತ್ತಿದ್ದರು. ಇನ್ನೊಂದು ಸ್ವಭಾವವೆಂದರೆ ಸ್ವಮೂತ್ರ ಸೇವನೆ. ಮೊದಲು ಓದಿನಲ್ಲಿ ಇವರಿಗೆ ಆಸಕ್ತಿ ಇರಲಿಲ್ಲ. ತಂದೆಯ ಅಕಾಲಿಕ ಮರಣ ಕುಟುಂಬವನ್ನು ತಲ್ಲಣಗೊಳಿಸಿತು. ತಾಯಿ ನರಸುಬಾಯಿಯವರು ಧೈರ್ಯವಂತೆ. ಮಕ್ಕಳನ್ನು ಕಷ್ಟಪಟ್ಟು ಸಾಕುತಿದ್ದರು. ಬಾವಿಯಿಂದ ಮನೆಗೆ ನೀರುತರುವುದು, ದನಕರುಗಳಿಗೆ ಮೇವುತರುವುದು, ತಾವೇ ಕಟ್ಟಿಗೆ ಸಂಗ್ರಹ ಮಾಡುತ್ತಿದರು. ಯಾರಾದರೂ ತಂಟೆಗೆ ಬಂದರೆ ಧ್ಯರ್ಯದಿಂದ ಎದುರಿಸುತ್ತಿದ್ದರು. ಇವರ ಕಷ್ಟವನ್ನು ನೋಡಲಾರದೆ ಸೋದರತ್ತೆ ರಿಂದಮ್ಮನವರು ಭೀಮಸೇನರಾಯರನ್ನು ಹುಣಸಿಗಿಗೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಂದ ಅವರ ಜೀವನದ ವಿಧಾನ ಬೇರೆಯಾಗುತ್ತದೆ. ಹುಣಸಿಗಿಯಲ್ಲಿ ಒಂದರಿAದ ನಾಲ್ಕನೆಯ ತರಗತಿಯವರೆಗೆ ಅಧ್ಯಯನ ಮಾಡುತ್ತಾರೆ. ಬೋರ್ಡ ಪರೀಕ್ಷೆ ಪಾಸುಮಾಡುತ್ತಾರೆ. ಮುಂದಿನ ಅಧ್ಯಯನಕ್ಕಾಗಿ ರಾಯಚೂರಿಗೆ ಬರುತ್ತಾರೆ. ಚಿಕ್ಕಪ್ಪನವರಾದ ಕೆರೂರು ಕೃಷ್ಣರಾಯರ (ತಾಯಿಯ ತಂಗಿಯ ಗಂಡ) ಮನೆಯಲ್ಲಿ ವಾಸ್ತö್ಯವ ಹೂಡುತ್ತಾರೆ. ಇವರು ಕೆಂಡದAಥ ಮನುಷ್ಯರೆಂದೇ ಖ್ಯಾತರಾಗಿರುತ್ತಾರೆ. ಇವರಮನೆಯಲ್ಲಿ ಅಧ್ಯಯನ ಮಾಡುವುದೆಂದರೆ ಭಯವೇ ಆಗಿತ್ತು. ಇವರಿಗೆ ಪಂಡಿತ ತಾರಾನಾಥರು ಸ್ಥಾಪಿಸಿದ ಹಮದರ್ದ ಶಾಲೆಯಲ್ಲಿ ಪ್ರವೇಶ ಕೊಡಿಸುತ್ತಾರೆ. ಇಂಗ್ಲೀಷ ಮಾಧ್ಯಮವಾಗಿರುವುದಿಂದ ಭಯಪಟ್ಟುಕೊಂಡು ಉರ್ದು ಶಾಲೆಗೆ ಸೇರುತ್ತಾರೆ. ಉರ್ದು ಶಾಲೆಯಲ್ಲಿ ಇವರಿಗೆ ಮಾಸಿಕ ಹನ್ನೆರಡುರುಪಾಯಿ ವಿದ್ಯಾರ್ಥಿವೇತನ ಬರುತ್ತದೆ. ಅದನ್ನು ಇಂಗ್ಲೀ಼ಷ ಪುಸ್ತಕ ತೆಗೆದುಕೊಂಡು ಅಧ್ಯಯನ ಮಾಡ ತೊಡಗುತ್ತಾರೆ. ಹೀಗೆ ಮಾಧ್ಯಮಿಕ ಅಧ್ಯಯನ, ಪ್ರೀ ಇಂಟರ್ ಮೀಡಿಯಟ್ ರಾಯಚೂರಿನಲ್ಲಿ ಪೂರೈಸಿ ಇಂಟರ್ ತರಗತಿಗಾಗಿ ಕಲಬುರಗಿಗೆ ಹೋಗುತ್ತಾರೆ. ಅಲ್ಲಿಯೂ ಉರ್ದು ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಆರಂಭವಾಯಿತು. ಅಲ್ಲಿ ವಸತಿ ಮ್ಯಾನೇಜರ ಅಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿಂದಲೇ ಅವರ ನಾಯಕತ್ವಗುಣ ಅರಂಭವಾಗುತ್ತದೆ. ಮ್ಯಾಟ್ರಿಕ್ ಪಾಸುಮಾಡುತ್ತಾರೆ. ಮ್ಯಾಟ್ರಿಕ್ ಪಾಸು ಮಾಡಿ ನೌಕರಿಗೆ ಹೋದರೆ ೪೦ ರೂಪಾಯಿ ಸಂಬಳ.ಅವರ ಕುಟುಂಬ ನಿರ್ವಹಿಸಲು ಕನಿಷ್ಟ ಎರಡುನೂರು ರೂಪಾಯಿ ಬೇಕು. ಅದರ ಬದಲು ಬಿಎ ಮಾಡಿದರೆ ಎರಡು ನೂರು ರೂಪಾಯಿ ಬರುತ್ತದೆ ಎಂದು ತಾಯಿ ಬಿ.ಎ. ಮಾಡಲು ಸೂಚಿಸುತ್ತಾಳೆ. ಆರ್ಥಿಕ ಸಮಸ್ಯ ಎದುರಾಗುತ್ತದೆ. ಆದರೆ ಹೆದರದೆ ಪಾಲುಮೂರು ಗೋವಿಂದರಾಯರು, ಚಿಂಚೋಳಿ ಜಯತೀರ್ಥಆಚಾರಿ, ಗಬ್ಬೂರುರಾಘು, ಸೇಡಂ ವೆಂಕೋಬ, ಗೋರ್ಕಲ್ ಆನಂದರಾಯ, ಅನ್ನಪೂರ್ಣಯ್ಯ ನಂತಹ ಸ್ನೇಹಿತರ ಸಹಾಯದಿಂದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಳ್ಳುತ್ತಾರೆ. ಅಲ್ಲಿಯೂ ವಿದ್ಯಾರ್ಥಿವೇತನ ಬರುತ್ತದೆ. ಇದೇ ಸಮಯದಲ್ಲಿ ಸಹೋದರ ಮಧ್ವರಾಯ ಬಡವರಿಗಾಗಿ ಇರುವ ವಸತಿ ಗೃಹದಲ್ಲಿ ವಾಸಮಾಡುತ್ತಿರುತ್ತಾರೆ. ಅಲ್ಲಿ ಅವರಿಗೆ ಊಟ ಸರಿ ಹೋಗುತ್ತಿರಲಿಲ್ಲ. ಆಗ ಇವರು ತಮ್ಮ ಪಾಲಿನ ಊಟವನ್ನು ತಮ್ಮನಿಗೆ ನೀಡುತ್ತಿರುತ್ತಾರೆ. ಒಮ್ಮೆ ಜೂರಟಗಿ ಶ್ರೀನಿವಾಸರಾಯರು ಇವರನ್ನು ಮುಜಮದಾರ ಶ್ರೀನಿವಾಸರಾವ ರನ್ನು ಭೇಟಿ ಮಾಡಿಸುತ್ತಾರೆ. ಇವರು ವೃತ್ತಿಯಿಂದ ವಕೀಲರು. ಇವರಿಗೆ ಮಕ್ಕಳಿರಲಿಲ್ಲ. ಗುಡುಗುಂಟಿ ಸಂಸ್ಥಾನದ ಅಡಳಿತವನ್ನು ಇಲ್ಲಿಂದಲೇ ನೋಡಿ ಕೊಳ್ಳುತ್ತಿದ್ದರು. ಇವರನ್ನು ತಮ್ಮ ಮನೆಯಲ್ಲಿ ಇರಲು ಹೇಳಿ ಬಿಂದುರಾಯನಿಗೆ ಇಂಗ್ಲೀಷ ಪಾಠಮಾಡುವ ಕೆಲಸವನ್ನು ಒಪ್ಪಿಸುತ್ತಾರೆ. ಇಲ್ಲಿಂದ ಇವರ ಬಾಳಿನಲ್ಲಿ ಅಧ್ಯಯನ ಮತ್ತು ಅಧ್ಯಾಪನ ಕೆಲಸ ಆರಂಭವಾಗುತ್ತೆ. ಕನ್ನಡ ಮತ್ತು ಸಂಸ್ಕೃತ ಐಚ್ಛಿಕ ವಿಷಯವನ್ನು ತೆಗೆದುಕೊಂಡು ಬಿ.ಎ. ಪರೀಕ್ಷೆ ಮುಗಿಸುತ್ತಾರೆ. ತಾಯಿಗೆ ಮಾತು ಕೊಟ್ಟಂತೆ ಸಂಸಾರದ ಭಾರ ಹೊತ್ತುಕೊಳ್ಳುತ್ತಾರೆ. ಕೆಲಸಕ್ಕಾಗಿ ವಿವಿಧ ಇಲಾಖೆಗಳಿಗೆ ತಿರುಗಾಡುತ್ತಾರೆ. ತಂದೆ ಕೆಲಸ ಮಾಡಿದ ಕಚೇರಿಯಲ್ಲಿ ಇವರಿಗೆ ನೌಕರಿ ಸಿಗುತ್ತದೆ. ಆದರೆ ಇವರು ಆ ನೌಕರಿ ಮಾಡಲು ಕುದುರೆ ಸವಾರಿ ಕಲಿಯಬೇಕಾಗಿತ್ತು. ಅದಕ್ಕಾಗಿ ಆ ನೌಕರಿಯನ್ನು ಬಿಡುತ್ತಾರೆ. ಇದೇ ಸಮಯಕ್ಕೆ ಕಲಬುರಗಿಯಲ್ಲಿ ಎರಡು ಇಂಟರ್ ಮೀಡಿಯಟ್ ಕಾಲೇಜು ಆರಂಭವಾಗುತ್ತವೆ. ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರ ಅವಶ್ಯಕತೆಯಿತ್ತು. ಆ ಕಾಲೇಜಿನ ಪ್ರಾಂಶುಪಾಲರಾದ `ಹಕ್ಕಾನಿ’ ಯವರು ಉಪನ್ಯಾಸಕರ ಬೇಡಿಕೆಗಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇವರ ಗುರುಗಳಾದ ಟಿ.ಆರ್.ರಾಮರಾಯರು ಭೀಮಸೇನರಾಯರ ಹೆಸರನ್ನು ಸಿಫಾರಸ್ ಮಾಡಿಸುತ್ತಾರೆ. ಉಪನ್ಯಾಸಕರಾಗಿ ಕಾರ್ಯ ಆರಂಭಿಸುತ್ತಾರೆ. ತವಗರನ್ನು ಶಿಷ್ಯರೆಲ್ಲರೂ `ಮಾಸ್ತರ’ ಎಂದೇ ಕರೆಯುತ್ತಿದ್ದರು. ತವಗರು ಮಾಸ್ತರ ಕೆಲಸವನ್ನು ಬಹು ಶಿಸ್ತಿನಿಂದ ಮಾಡಿ ಮಾದರಿಯಾದವರು. ಇವರ ಪಾಠ ಪ್ರವಚನಗಳು ತರಗತಿಗೆ ಸೀಮಿತವಾಗಿರಲಿಲ್ಲ. ತರಗತಿಯ ನಂತರ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕುಮಾರವ್ಯಾಸ ಭಾರತ, ಜೈಮಿನಿಭಾರತ, ರಾಮಪಟ್ಟಾಬಿಷೇಕ ದಂತಹ ಕನ್ನಡದ ಕಾವ್ಯಗಳನ್ನು ಓದಿಸುತ್ತಿದ್ದರು. ಕನ್ನಡದ ಕಾವ, ಜಾಣ ಮುಂತಾದ ಪರೀಕ್ಷೆಗಳನ್ನು ಬರೆಯಿಸಿ ಕನ್ನಡವನ್ನು ಜನಪ್ರೀಯಗೊಳಿಸಿದರು. ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಇಲ್ಲಿಂದ ಇವರ ಬದುಕು ಕನ್ನಡ ಸೇವೆಗೆ ಸಿದ್ಧವಾಯಿತು. ಇವರನ್ನು ಕಲಬುರಗಿಗೆ ಬರಮಾಡಿಕೊಂಡವರಲ್ಲಿ ಬಿ. ಅಶ್ವಥರಾವ ವಕೀಲರು ಪ್ರಮುಖರು. ಕನ್ನಡದ ಕಾಳಜಿಗೆ ಇವರು ಶಕ್ತಿಯಾದರು. ನೀವು ಗಾಳಿ ನಾನು ಬೆಂಕಿ ಇಬ್ಬರೂ ಸೇರಿ ಕನ್ನಡ ಪರ ಕೆಲಸ ಮಾಡೋಣವೆಂದು ತಿಳಿಸುತ್ತಾರೆ. ಇವರ ಮೇಲೆ ಪ್ರಭಾವ ಬೀರಿದ, ಇವರೊಂದಿಗೆ ಕೈ ಜೋಡಿಸಿದ ಮತ್ತೊಬ್ಬ ಕನ್ನಡಾಭಿಮಾನಿಯಂದರೆ ಕಪಟರಾಳ ಕೃಷ್ಣರಾಯರು. ಇವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಕನ್ನಡದ ವಿರುದ್ಧ ಮಾತನಾಡುವವರಿಗೆ ಉತ್ತರಿಸಲು ಕನ್ನಡವನ್ನು ತಲಸ್ಪರ್ಶೀಯಾಗಿ ಕಲಿಯುತ್ತಾರೆ. ಹಳ್ಳಿಹಳ್ಳಿಗೆ ಹೋಗಿ ಜನಪದಿಗರನ್ನು ಪ್ರೋತ್ಸಾಹಿಸುತ್ತಿದ್ದರು. ಶಬ್ದಮಣಿದರ್ಪಣ ಗ್ರಂಥವನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಮನೆಗೆ ಹಿರಿಯ ಸಾಹಿತಿಗಳನ್ನು ಬರಮಾಡಿಕೊಂಡು ಅತಿಥಿ ಸತ್ಕಾರ ಮಾಡುತ್ತಿದ್ದರು. ಭೀಮಸೇನರಾಯರಿಗೂ ಕಪಟರಾಳರಿಗೂ ವಯಸ್ಸಿನ ಅಂತರ ವಿದ್ದರೂ ವಿಚಾರಗಳ ಸಮಾನತೆ ಇತ್ತು. ಇದ್ದದ್ದನ್ನು ಇದ್ದಂತೆ ನುಡಿಯುವ ಮನೋ ಸ್ಥೆöÊರ್ಯ ಇತ್ತು. ಈ ಗುಣವನ್ನು ಇವರಿಂದ ಕಲಿತಿದ್ದೇನೆ ಎಂದು ತವಗರು ಸ್ಮರಿಸಿಕೊಳ್ಳುತ್ತಾರೆ. ಇವರ ಮೇಲೆ ಪರಿಣಾಮ ಬೀರಿದ ಮತ್ತೊಬ್ಬ ವ್ಯಕ್ತಿಯಂದರೆ ಭೀಮಸೇನರಾವ ದೇಸಾಯಿ. ಇವರು ತವಗರ ಶೀಷ್ಯರು. ಇವರು ವಿದ್ಯಾಭ್ಯಾಸವನ್ನು ನಿಲ್ಲಿಸಿ ಆದ್ಯಾತ್ಮದ ಕಡೆಗೆ ತೊಡಗಿಸಿಕೊಂಡರು. ಜನ ಇವರನ್ನು `ಭೀಮಜ್ಜ’ಎಂದು ಕರೆಯತೊಡಗಿದರು. ಇವರನ್ನು ನೋಡಿದಾಗ ಹಿಂಸೆಯನ್ನು ಗೆದ್ದ ಅಹಿಂಸೆಯAತೆ ಕಾಣುತ್ತಿದ್ದರು. ಮತ್ತೊಬ್ಬ ಪ್ರಭಾವಿ ವ್ಯಕ್ತಿ ಎಂದರೆ ಎಮ್.ಪಿ ಜಾಲಿಯವರು ದಕ್ಷ ಆಡಳಿತಗಾರರು. ಸಾಹಿತ್ಯ ಪರಿಷತ್ತು ಹಾಕಿಕೊಂಡ ಕಾರ್ಯಕ್ರಮಗಳಿಗೆ ಬೆನ್ನೆಲಬಾಗಿ ನಿಂತವರು. ತವಗರ ಕನ್ನಡಪರ ಕಾರ್ಯ ಚಟುವಟಿಕೆಗಳನ್ನು ಮೆಚ್ಚುತ್ತಿದ್ದರು. ಅದಕ್ಕೆ ತವಗರು `ಇವರ ಹೆಸರಿನಲ್ಲಿ ಜಾಲಿ ಇದೆ. ಅದರೆ ಇವರ ಮನಸ್ಸಿನಲ್ಲಿ ಮುಳ್ಳಿಲ್ಲ’ ವೆಂದು ಇವರ ವ್ಯಕ್ತಿತ್ವವನ್ನು ಬಣ್ಣಿಸುತ್ತಾರೆ. ತಮ್ಮ ಸಾದನೆಗೆ ಸಹಕಾರ ಮಾಡಿದವರನ್ನು ಮನದುಂಬಿ ಸ್ಮರಿಸುವ ಸ್ವಭಾವ ತವಗರದು. ಕಲಬುರಗಿ ಭಾಗದಲ್ಲಿ ಉರ್ದು ಮತ್ತು ಮರಾಠಿ ಭಾಷೆಯ ದಟ್ಟವಾದ ಛಾಯ ಆವರಿಸಿತ್ತು. ಕನ್ನಡಿಗರು ಕನ್ನಡ ಮಾತನಾಡದೆ ಮೌನ ವಹಿಸಿದ್ದರು. ಇಂತಹ ಸಂದರ್ಭದಲ್ಲಿ ಬಿ.ಎಮ್.ಶ್ರೀ, ಗೋಕಾಕ, ರಂ.ಶ್ರೀ.ಮುಗಳಿ, ವಿ.ಸೀ,ಯವರನ್ನು ಬರ ಮಾಡಿ ಕೊಂಡು ಕನ್ನಡ ನಾಡು-ನುಡಿಯ ಕುರಿತು ಉಪನ್ಯಾಸವನ್ನು ಏರ್ಪಡಿಸುತ್ತಾರೆ. ಇದರಿಂದ ಇವರ ಜನಪ್ರೀಯತೆ ಹೆಚ್ಚಾಗಿ ಕನ್ನಡ ಸಂಘ ಸ್ಥಾಪನೆಗೆ ಪ್ರೇರಣೆಯಾಯಿತು. ಸಂಘದ ಕಟ್ಟಡ ನಿರ್ಮಾಣಕ್ಕೆ ಆ ಕಾಲದಲ್ಲಿ ೧೧,೦೦೦/- ರೂಪಾಯಿಗಳು ಬೇಕಾಗಿದ್ದವು. ಪಾಂಡುರAಗರಾವ ದೇಶಮುಖ ಮತ್ತು ಕಕ್ಕೇರಿ ಹನುಮಂತರಾವ ವಕೀಲರು ಪ್ರಧಾನವಾಗಿ ಧನ ಸಹಾಯಮಾಡುತ್ತಾರೆ. ಇನ್ನೂ ಕೆಲದಾನಿಗಳು ಶಕ್ತಾನುಸಾರವಾಗಿ ದಾನ ಮಾಡಿ ಕನ್ನಡ ಸಾಹಿತ್ಯ ಸಂಘದ ಕಟ್ಟಡಕ್ಕೆ ಅನುಕೂಲ ಮಾಡಿ ಕೊಡುತ್ತಾರೆ. ಕನ್ನಡ ಸಾಹಿತ್ಯ ಸಂಘದ ಸಾಹಿತ್ಯಿಕ ಚಟುವಟಿಕೆಗಳೆಂದರೆ ಉಪನ್ಯಾಸಗಳನ್ನು ಏರ್ಪಡಿಸುವುದು, ನಾಡಹಬ್ಬಗಳನ್ನು ಆಚರಿಸುವುದು, ಸಾಹಿತ್ಯಪರೀಕ್ಷೆಗಳನ್ನು ನಡಿಸುವುದು. ಇದರಲ್ಲಿ ಕುಮಾರವ್ಯಾಸ ಭಾರತದ ಉಪನ್ಯಾಸ ಪ್ರಮುಖವಾದದ್ದು. ಇದು ಭಾರತ ಬಿಂದುರಾಯರಿAದ ಮೂರು ತಿಂಗಳು ಕಾಲ ನೆರವೇರಿತು. ಮೂರು ತಿಂಗಳು ಕಾಲ ಅವರ ವಾಸ್ತವ್ಯ ಇವರ ಮನೆಯಲ್ಲಿಯೇ ಇತ್ತು. ಇವರ ಕಾರ್ಯಕ್ರಮಕ್ಕೆ ಆ ಕಾಲದಲ್ಲಿ ಸಾವಿರಕ್ಕೂ ಹೆಚ್ಚಿನ ಜನ ಸೇರುತ್ತಿದ್ದರು. ಮರಾಠಿ ಮತ್ತು ಉರ್ದು ಮಾತನಾಡುವವರೂ ಆಸಕ್ತಿಯಿಂದ ಸೇರುತ್ತಿದ್ದರು ಎಂಬುದೂ ವಿಶೇಷ. ಜೈಮಿನಿಭಾರತ, ರಾಮಪಟ್ಟಾಭಿಷೇಕದಂತಹ ಗ್ರಂಥಗಳ ವಾಚನ ಕಾರ್ಯಕ್ರಮ ನಡೆಯುತ್ತಿದ್ದವು. ಇವರು ಪರಿಷತ್ತಿನ ಸಹಾಯದಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ, ಜಾನಪದ ಮಹಾ ಮೇಳಗಳು, ಮಹಿಳಾವರ್ಷ, ಪುಸ್ತಕವರ್ಷ, ಕನ್ನಡ-ಕನ್ನಡ ಕೋಶವನ್ನು ಸಿದ್ಧಪಡಿಸುವುದು, ಇಂತಹ ಚಟುವಟಿಸಕೆಗಳÀನ್ನು ಏರ್ಪಡಿಸಿದ ಹೆಮ್ಮೆ ಇವರದು. ಇದರೊಂದಿಗೆ ಸುರಪುರದ ಕನ್ನಡ ಸಾಹಿತ್ಯಸಂಘ, ರಂಗಮಪೇಟೆಯ ಕನ್ನಡ ಸಾಹಿತ್ಯ ಸಂಘ, ಶಹಬಾದಿನ ಕನ್ನಡ ಸಾಹಿತ್ಯ ಸಂಘಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಯಾಕೆಂದರೆ ಇಲ್ಲಿ ಆಗಮಿಸಿದ ವಿದ್ವಾಂಸರು ಅಲ್ಲಿಯೂ ಹೋಗಿ ಕನ್ನಡಪರ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರಂತೆ. ಇಂತಹ ವಾತಾವರಣ ಸೃಷ್ಟಿಯಾಗುವುದಕ್ಕೆ ತವಗರು ಕಾರಣರಾಗಿದ್ದಾರೆ. ಇವರು ಎರಡನೆಯ ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೆಳನಕ್ಕೆ ಅಧ್ಯಕ್ಷರಾಗಿ ಅಯ್ಕೆ ಯಾಗುತ್ತಾರೆ. ಇವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ವಿಷಯವೆಂದರೆ ೧)ಲಕ್ಷಿö್ಮÃಶ ಕವಿಯ ಊರು ಸುರಪುರದ ಹತ್ತಿರದ ದೇವಪುರವೆಂಬುದು,ಇನ್ನೊAದು ಗುಲ್ಬರ್ಗಾ ವೆಂಬುದನ್ನು `ಕಲಬುರಗಿ’ ಎಂದು ಪ್ರಚಾರ ಮಾಡುವುದು. ಈಗ ಇವರ ಅಭಿಪ್ರಾಯದಂತೆ ಕಲಬುರಗಿಯಾಗಿ ಬದಲಾಗಿದೆ. ಇವರು ಉತ್ತಮ ವಾಗ್ಮಿಗಳು. ಇವರು ಮಾತನಾಡಲು ಆರಂಬಿಸಿದರೆ ಕೇಳುಗರೆಲ್ಲರೂ ತಲ್ಲೀನವಾಗುತ್ತಿದ್ದರಂತೆ. `ಕುಮಾರವ್ಯಾಸನ ಕಾವ್ಯದಲ್ಲಿ ರೂಪಕಗಳು’ ಎಂಬ ವಿಷಯದ ಕುರಿತಾಗಿ ಮಾತನಾಡಿದಾಗ ಜನರೆಲ್ಲಾ ಬೆರಗಾಗುತ್ತಿದ್ದರಂತೆ.ಅಫಜಲ್ಪುರಕ್ಕೆ ಹೋದಾಗ ಇವರು ಕನ್ನಡಭಾಷೆ ಮತ್ತು ಜನಪದ ಸಾಹಿತ್ಯದ ಕುರಿತಾಗಿ ಮಾತನಾಡಿದಾಗ ಅಲ್ಲಿಯ ಮೌಳೇಶ್ವರ ಮಠದ ಸ್ವಾಮಿಗಳು “ಚಾಮರಸನ ಕಾವ್ಯವನ್ನು ಪಲ್ಲಕ್ಕಿಯಲ್ಲಿಟ್ಟು ಮೆರಸುವಾಗ ಅದರ ರಸ ಕೆಳಗೆ ಚಲ್ಲಬಾರದೆಂದು ಪಲ್ಲಕ್ಕಿಯ ಕೆಳಗೆ ಪಾತ್ರೆಯನ್ನು ಹಿಡಿದಿದ್ದರಂತೆ, ಹಾಗೆ ನಿಮ್ಮ ಮಾತಿನಲ್ಲಿಯ ಅಮೃತ ರಸವು ಮಣ್ಣುಪಾಲಾಗಬಾರದೆಂದು ನನ್ನೆದೆಯ ಬೊಗಸೆಒಡ್ಡಿ ಕುಳಿತಿದ್ದೆ’ ಎಂದು ಹೇಳಿರುವ ಮಾತು ತವಗರ ಮಾತುಗಾರಿಕೆಗೆ ಹಿಡಿದ ಕನ್ನಡಿಯಾಗಿದೆ. ತವಗರಿಗೆ ಅತ್ಯಂತ ಪ್ರಿಯವಾದ ವಿಷಯವೆಂದರೆ `ಹಾಸ್ಯ.’ ಆದ್ದರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಯಿಂದ ಹಾಸ್ಯ ಪ್ರಸಂಗವನ್ನು ಆಯ್ದು ಕೊಂಡು `ಹಾಸ್ಯದರ್ಶನ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ ಅವರು ಮುನ್ನುಡಿ ಬರೆದಿದ್ದಾರೆ. ಅನೇಕ ಸಮಸ್ಯಗಳನ್ನು ಕಷ್ಟ-ನಷ್ಟಗಳನ್ನು ಎದುರಿಸಿದ್ದು ಈ ಹಾಸ್ಯ ಭಾವದಿಂದ. ಈ ಕೃತಿಯನ್ನು ರಚಿಸಲು ಸುಮಾರು ಇಪ್ಪತೈದು ವರ್ಷಗಳ ಸಮಯವನ್ನು ತೆಗೆದು ಕೊಂಡಿದ್ದಾರೆ. ಜೀವನಾನುಭವವೇ ಇದಕ್ಕೆ ಮೂಲಧಾತು. ಹಾಸ್ಯ ನವ ರಸಗಳಲ್ಲೊಂದು. ಅಳು ಆತ್ಮ ವಿಶ್ವಾಸವನ್ನು ಕಡಿಮೆ ಗೊಳಿಸಿದರೆ ನಗು ಅಂತಃಸತ್ವವನ್ನು ಹೆಚ್ಚಿಸುತ್ತದೆ. ಅದ್ದರಿಂದ ಹಾಸ್ಯ ಎಲ್ಲರೂ ಆಸ್ವಾದಿಸಬೇಕಾದ ರಸ ಎಂಬ ಧೊರಣೆ ತವಗರದು. ಇದಲ್ಲದೇ ತವಗರು ಕಲಬುರಗಿ ಜಿಲ್ಲೆಯ ಪುರಾಣ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಶಿಲಾಶಾಸನಗ¼ ,ಬಂದೇನವಾಜ, ಶರಣಬಸಪ್ಪ ಅಪ್ಪಾ ವಿಷಯನ್ನೊಳಗೊಂಡ `ಗುಲ್ಬರ್ಗಾ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಓದುವಾಗ ಸಮಗ್ರ ಕಲಬುರಗಿಯ ಪರಿಚಯವಾಗುತ್ತದೆ. ಇದಲ್ಲದೆ `ವಿನೋದ ವಿಹಾರ’, `ದುಃಖಸೇತು’,` ಬಂದದ್ದಲ್ಲಾ ಬಾರಿಸಿದ್ದಲ್ಲಾ’ ಎಂಬ ಇವರ ಲೇಖನಗಳು ಪ್ರಮುಖವಾದವು. ಇದನ್ನು ಐಬಿಎಚ್ ಪ್ರಕಾಶನ ಪ್ರಕಟಿಸಿದೆ. ಆದರೆ ಈ ಪುಸ್ತಕಗಳು ಅಧ್ಯಯನಕ್ಕೆ ಲಭ್ಯವಿಲ್ಲ. ಮೇಧಾವಿಗಳೂ, ಪಂಡಿತರೂ ಆದ ತವಗರಿಗೆ ಸಾಹಿತ್ಯ ರಚನೆ ಏನೂ ಅಸಾಧ್ಯವಾದುದಲ್ಲ.
ರಾಮಶ್ವಮೇಧದಲ್ಲಿ ಸೀತೆಯ ಪಾತ್ರ
ಕನ್ನಡ ಸಾಹಿತ್ಯಚರಿತ್ರೆಯನ್ನು ಅವಲೋಕಿಸಿದಾಗ ಅನೇಕ ಕವಿಗಳು ಮೈಲುಗಲ್ಲಾಗಿ ನಿಲ್ಲುತ್ತಾರೆ, ಅಂಥವರಲ್ಲಿ ಮುದ್ದಣ್ಣ ಕವಿಯೂ ಒಬ್ಬನು.ನಡುಗನ್ನಡ ಹಳೆಗನ್ನಡದ ಕೊಂಡಿಯಾಗಿ,ಹೊಸತನದ ರುವಾರಿಯಾಗಿ ನಿಲ್ಲುತ್ತಾನೆ.ಹೊಸಗನ್ನಡದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುವ ಕವಿಯಂದರೆ ಮುದ್ದಣ್ಣ.ಹತ್ತೋಂಭತ್ತನೆ ಶತಮಾನ ಹಲವಾರು ಹೊಸತನವನ್ನು ಕಂಡಿದೆ.ಹಳೆತನ ಹೊಸತನವನ್ನು ಮೈಗೂಡಿಸಿಕೊಂಡವನು ಮುದ್ದಣ್ಣ.ಅವನುಬದುಕಿದ ಕಾಲ ಕಡಿಮೆಯಾÀದರೂ ಮಾಡಿದ ಸಾದನೆ ಅನುಪಮವಾದದ್ದು. ಆದ್ದರಿಂದ ಮುದ್ದಣ್ಣ ಇಂದಿಗೂ ಪ್ರಸ್ತುತವಾಗಿದ್ದಾನೆ. ಮುದ್ದಣ್ಣನ ನಿಜನಾಮಧೇಯ `ನಂದಳಿಕೆ ನಾರಾಯಣಪ್ಪ’ ಎಂದು. ಆದರೆ ಪ್ರಸಿಧ್ಧಿಯಾದದ್ದು ಮುದ್ದಣ್ಣನೆಂದು.ತAದೆ ತಿಮ್ಮಪ್ಪಯ್ಯ ತಾಯಿ ಮಹಲಕ್ಷಮಮ್ಮ.೨೪-೦೧-೧೮೭೦ರಂದು ಜನಿಸಿದನು.ನಂದಳಿಕೆ ಎಂಬುವುದು ಹುಟ್ಟು ಗ್ರಾಮ. ತಾಯಿ ಮುದ್ದಿನಿಂದ ಮುದ್ದಣ್ಣನೆಂದು ಕರೆದುದರಿಂದ ಮುದ್ದಣ್ಣನೆಂದೆ ಖ್ಯಾತನಾದನು.ಬಾಲ್ಯ ಕಷ್ಟದಿಂದ ಕೂಡಿದ್ದು.ತಂದೆ ಪೂಜ ಕೈಂಕರ್ಯ ನಡೆಸುತ್ತಿದ್ದರು.ಅಗಾಧ ಪ್ರತಿಭಾವಂತನಾದ ಮುದ್ದಣ್ಣನಿಗೆ ಆ ಹಳ್ಳಿ ಸಾಕಗಲಿಲ್ಲ.ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೊಗುತ್ತನೆ, ಅಧ್ಯಯನದ ಜೊತೆಗೆ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುತ್ತಾನೆ.ಜೊತೆಗೆ ಸಾಹಿತ್ಯಕೃಷಿಗೂ ಕೈಹಾಕುತ್ತಾನೆ. ಶ್ರೀರಾಮಾಪಟ್ಟಾಭಿಶೇಕ,ಅದ್ಭುತರಾಮಾಯಣ,ರಾಮಾಶ್ವಮೇದ,ರತ್ನಾವತಿ ಕಲ್ಯಾಣ, ಕುಮಾರ ವಿಜಯ ಎಂಬಕೃತಿಗಳನ್ನು ರಚಿಸಿದ್ದಾನೆ.ಪ್ರಸ್ತುತ ರಾಮಾಶ್ವಮೆಧದಲ್ಲಿ ಸೀತೆಯ ಪಾತ್ರದ ಕುರಿತು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ, ಮುದ್ದಣ್ಣನಿಗಿಂತ ಮೊದಲು ಇದ್ದ ರಾಮಯಣಗಳ ಪರಿಚಯ ,ಪ್ರಭಾವ ಅವನಮೇಲಾಗಿರ ಬಹುದು. ರಾಮಾಯಣ,ಮಹಾಭಾರತ ಮಹಾಕಾವ್ಯಗಳು ಭಾರತೀಯರಲ್ಲಿ ಆಳವಾಗಿ ಬೇರೂರಿವೆ,ಸಾವಿರಾರು ವರ್ಷಗಳಿಂದ ಪಾರಯಣ ಗ್ರಂಥಗಳಾಗಿವೆ. ಭಾರತೀಯರ ಸಂಸ್ಕೃತಿಯ ,ಆದರ್ಶದ ತವನಿಧಿಯಗಿವೆ.ಭಾರತದ ಎಲ್ಲಾ ಬಾಷೆಗಳಲ್ಲೂ ಈ ಕಾವ್ಯಗಳು ಕಂಡು ಬರುತ್ತವೆ.ಅಷ್ಠೇ ಅಲ್ಲಾ ವಿದೇಶಗಳಲ್ಲೂ ಹರಡಿದೆ. ಪ್ರಸ್ತುತ ರಾಮಾಯಣದ ಕಥೆಯವಿಷಯದ ಮೂಲವನ್ನು ವೈದಿಕ, ಬೌಧ್ಧ,ಜೈನ,ಪರಂಪರೆಯಲ್ಲಿಯಲ್ಲಿ ಕಾಣುತ್ತೆವೆ,ವೈದಿಕ ಪರಂಪರೆಯಲ್ಲಿ ವಾಲ್ಮೀಕಿರಾಮಯಣ,ಭೌಧ್ದ ಪರಂಪರೆ,ಜೈನ ಪರಂಪರೆಯಲ್ಲಿ ಗುಣಭದ್ರರ,ವಿಮಲಸೂರಿಯರ ರಾಮಾಯಣಗಳು ಬೆಳೆದುಬಂದಿವೆ. ಕನ್ನಡದಲ್ಲಿಭುವನೈಕರಾಮಾಭ್ಯುದಯ,ನಾಗಚಂದ್ರನರಾಮಚAದ್ರಚರಿತಪುರಾಣ,ಕುಮದೇAದುರಾಮಾಯಣ,ತೊರೆವೆಯರಾಮಾಯಣ,ಲಕ್ಚಿö್ಮÃಶನಜೈಮಿನಿಭಾರತ, ವೆಂಕಮಾತ್ಯರಾಮಯಣ,ಬತ್ತಲೇಶ್ವರ ಕವಿಯಕೌಶಿಕ ರಾಮಾಯಣ,ಮುದ್ದಣ್ಣನ ರಾಮಾಯಣ ಕಾವ್ಯಗಳು,ಕುವೆಂಪು ಅವರ ರಾಮಾಯಣ ದರ್ಶನಂ,ಜನಪದ ಸಾಹಿತ್ಯದಲ್ಲಿ ರಾಮಾಯಣದ ಕಥೆಗಳುಬೆಳೆದು ಬಂದಿವೆ. ಪ್ರಸ್ತುತ ಈ ರಾಮಾಯಣಗಳಲ್ಲಿ ಸೀತೆಯ ಪಾತ್ರ ವಿಶೇಷವಾಗಿ ಬೆಳೆದು ಬಂದಿದೆ. ವಾಲ್ಮೀಕಿ ರಾಮಾಯಣದಲ್ಲಿ ಸೀತೆಯ ಬಾಹ್ಯ ಸೌಂದರ್ಯಕಿAತ,ಆAತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಸೀತೆಯ ಪಾತ್ರದ ಮುಖಾಂತರÀಹೆಣ್ಣಿನ ಜೀವನದ ಅತಿ ಶೇಷ್ಟವಾದ ಆದರ್ಶವನ್ನು ಮುಂದಿಟ್ಟಿದ್ದಾನೆ.ಆಕೆಯಲ್ಲಿ ಪತಿವ್ರತೆಯಲ್ಲಿರಬೇಕಾದ ತ್ಯಾಗ, ಕೊಮಲ,ಧೈರ್ಯ ಸಹನೆಗಳೂ ಮನೆಮಾಡಿದ್ದವು.ಎಲ್ಲರ ಹೃದಯದಲ್ಲಿ ನೆಲೆಯಾಗಿ ನಿಲ್ಲುವ ಪಾತ್ರ ಸೀತೆಯದು..ಜಾತಕ ಕಥೆಗಳಲ್ಲಿ ಸೀತೆಯಪಾತ್ರಕ್ಕೆ ಮಹತ್ವವಿಲ್ಲಾ.ರಾಮನ ಪಾತ್ರಕ್ಕಿಂತಾ ರಾಮನ ಆದರ್ಶವೇಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.ವಿಮಲ ಸೂರಿಯ ಪಉಮಚರಿಯ,ಗುಣಭದ್ರನು ಉತ್ತರಪುರಾಣ ದಲ್ಲಿ `ಸಂಪತ್ತಿಗಿAತ ಸ್ತಿçÃಯರಿಗೆ ಶೀಲವೇ ಮುಖ್ಯವೆಂಬ ವಿಚಾರ ವ್ಯಕ್ತವಾಗಿದೆ. ಪಂಪರಾಮಾಯಣದಲ್ಲಿ ಸೀತೆಸೌಂದರ್ಯವತಿಯಾಗಿ ಚಿತ್ರಿತವಾಗಿದ್ದಾಳೆ. ಏಕೆಂದರೆ ರಾವಣನ ಅವನತಿ ತೋರಿಸಬೇಕಾಗಿದೆ.ಕುಮದೇಂದು ನಾಗಚಂದ್ರನನ್ನು ಅನುಸರಿಸಿದ್ದಾನೆ.ಕುಮಾರವಾಲ್ಮೀಕಿ ,ಆದಿಕವಿವಾಲ್ಮೀಕಿಯನ್ನು ಅನುಸರಿಸಿದ್ದಾನೆ.ಸೀತೆಯನ್ನು ಆದಿಶಕ್ತಿ,ವಿಷ್ಣುವನಿತೆ ಎಂದು ವರ್ಣಿಸಿದ್ದಾನೆ.ವೆಂಕಮಾತ್ಯವರ್ಣನೆಗೆ ಬೆಲೆಕೊಟ್ಟರೆ,ಕೌಶಿಕರಾಮಾಯಣ ಮಮತೆಗೆ ಬೆಲೆ ಕೊಟ್ಟಿದ್ದಾನೆ.ಜೈಮಿನಿಭಾರತದಲ್ಲಿ ಸೀತೆ ಕೋಮಲಸ್ವಭಾವ ಬಿಟ್ಟುಸಹಜ ಹೆಣ್ಣಿನಂತೆ ಚಿತ್ರಿತವಾಗಿದ್ದಾಳೆ. ಈ ಎಲ್ಲಾ ಕಾವ್ಯಗಳ ಅದರಲ್ಲೂ ಮುದ್ದಣ್ಣನ ಮೇಲೆವಿಶೇಷವಾಗಿ ಲಕ್ಷಿö್ಮÃಶನ ಪ್ರಭಾವ ಬೀರಿದೆ.ಸೀತೆಯನ್ನು ದೈವತ್ವಕ್ಕಿಂತ ಮಾನವಸಹಜ ಗುಣಗಳನ್ನುಚಿತ್ರಿಸಲು ಪ್ರಯತ್ನಿಸಿದ್ದಾನೆ. ಒಮ್ಮೆ ಸೀತೆ ಪಕ್ಷಿಯೊಂದು ತನ್ನ ಮರಿಗೆ ಗುಟುಕುಕೊಡುವುದನ್ನು ನೊಡಿ ಪರಿತಪಿಸುತ್ತಾಳೆ. ತನಗೆ ಮಗುವಿಲ್ಲ ಎಂಬುದನ್ನುಅದು ಅಣುಕಿಸಿ ತೋರುವಂತೆ ಬಾವಿಸುತಾರೆ. ರಾಮಾಶ್ವಮೇಧ ಉತ್ತರರಾಮಾಯಣದ ಕಥೆ.ಮೇಲ್ನೋಟÀಕ್ಕೆ ಈ ಕೃತಿಗೆ ವಾಲ್ಮೀಕಿರಾಮಾಯಣ ಆಕರ ಗ್ರಂಥ ಎನ್ನಿಸಿದರೂ, ಇದಕ್ಕೆ ಮೂಲ ಆಕರ ಪದ್ಮಪುರಾಣವಾಗಿದೆ.೪೩೦೦ ಶ್ಲೋಕದಲ್ಲಿರುವ ಕಥೆಯನ್ನು ೧೬ ನಾರು ಆಶ್ವಾಸಗಳಲ್ಲಿ ರಚಿಸಿದ್ದಾನೆ.ಅಲ್ಲದೆ ಲಕ್ಷಿö್ಮÃಶನ ಜೈಮಿನಿಭಾರತವೂ ಪ್ರಭಾವಬೀರಿದೆ.ಈ ಎರಡೂ ಕೃತಿಗಳಲ್ಲಿ ಬೇಕಾದ ವಿಚಾರಗಳನ್ನು ಆಯ್ಕೆಮಾಡಿಕೊಂಡಿದ್ದಾನೆ.ಲವಕುಶರ ಬಾಲಲೀಲೆ,ರಾಮ ಲಕ್ಷö್ಮಣ, ಭರತನೊಂದಿಗೆ ನಡಿಸಿದ ಕಾಳಗ ವಿಶೇಷವಾಗಿ ಮೂಡಿಬಂದಿದೆ,ಇತg Àರಾಮಾಯಣಗಳಲ್ಲಿ ಸೀತೆ ಸೌಮ್ಯಸ್ವಭಾವದವಳಾಗಿ ಚಿತ್ರಿತವಾದರೆ ಮುದ್ದಣ್ನ ಅವಳನ್ನು ಧೀರೋಧಾತ್ತವಾಗಿ ಚಿತ್ರಿಸಿದ್ದಾನೆ.ಸೀತೆಯು ಇಲ್ಲಿ ನವೀನವಾಗಿ ಚಿತ್ರಿತವಾಗಿದ್ದಾಳೆ.ಪ್ರಸ್ತುತ ದಿನಗಳಲ್ಲಿ ಈ ಪಾತ್ರ ಮಾದರಿಯಾಗಿದೆ. ಅಯೊಧ್ಯಯಲ್ಲಿ ಸೀತೆ ತನ್ನ ಸೇವಕಿಯರೊಂದಿಗೆ ಕಾಲ ಕಳಿಯುತ್ತಿರುವಾಗ ಹಕ್ಕಿ ತನ್ನಮರಿಗೆ ಗುಟುಕು ಕೊಡುತ್ತಿರುತ್ತದೆ.ಅದನ್ನು ನೋಡಿದ ಸೀತೆ ಅದು vನ್ನÀನ್ನುಬಂಜೆಯAದು ಅಣುಕಿಸುತ್ತಿದೆ ಯಂದು ಭಾಸವಾಗುತ್ತದೆ.ಬಂಜೆತನದ ನೊವು, ಮಗುವಿಗಾಗಿ ಕಾತರಪಡುವ ಆಕೆಯಸಹಜ ಮಾತೃಹೃದಯವಿವರವಾಗಿ ಹೃದ್ಯವಾಗಿ, ಚಿತ್ರಿತವಾಗಿದೆ.ಇದರೋಂದಿU ೆಆಕೆಯ ಅಂತರAಗದ ತುಡಿತಗಳೆಲ್ಲವೂ ಹೊರಬಂದಿವೆ.`vನ್ನÀನ್ನು ಬಂಜೆಯAದು ಜರಿದು ಮಗುವನ್ನು ಯಾರು ನನ್ನ ಕೈಗೆ ಕೊಡರು, ಮಾತನಾಡಲುಬಿಡರು.ಕುಲವನ್ನು ವರ್ಧೀಸುವ ಕಂದನನ್ನು ಪಡೆದು ಮೊಲೆಯುಣಿಸಿ ಪಾಡಿತೂಗಿಮಲಗಿಸುವ, ಮಗುವಿನ ಬಾಲಲೀಲೆಗಳನ್ನು ಕಂಡು ಆನಂದಿಸುವ ಘಳಿಗೆನಾನು ಪಡೆದುಕೊಂಡಿಲ್ಲಾ’ ಎಂದು ಮಕ್ಕಳಿದ್ದ ಹೆಣ್ಣುಮಕ್ಕಳ ಸುಖವನ್ನು ಕಲ್ಪಿಸಿಕೊಳ್ಳುತ್ತಾಳೆ.ಆ ಅವಕಾಶತನಗಿಲ್ಲವೆಂದು ನಿರಾಶೆಯಿಂದಿರುವ ಮನಸ್ತಿತಿಯನ್ನು ಕವಿ ಹೃದಯಂಗಮಯವಾಗಿ ಚಿತ್ರಿಸಿದ್ದಾನೆ.ಮುದ್ದಣ್ಣನ ಈ ಹೊಸಸೃಷ್ಟಿಯಿಂದ ಹೆಣ್ಣಿನ ಹೃದಯದ ಭಾವಗಳ ತಿಳುವಳಿಕೆ ಸುಂದರ ಕಾವ್ಯವಾಗಿದೆ. ರಾಮನು ತನ್ನನ್ನು ಕಾಡಿಗೆಕಳುಹಿಸುತ್ತಾನೆಂದುಅರಿಯದೆ ಅವಳು ಪಡುವ ಸಂತಸ ಅಷ್ಟಿಷ್ಟಲ್ಲಾ.`ತನ್ನಪತಿ ನನ್ನಾಸೆಯನ್ನು ಇಷ್ಟು ಬೇಗ ಈಡೇರಿಸಿದನೇ?.ಎಂಥಾಕರುಣಾಕರ.ನಾನು ಇನ್ನು ಅತ್ತೆಯ ಒಪ್ಪಿಗೆ ಪಡೆದುಕೊಂಡಿಲ್ಲ.ಸಹೋದರಿಯರಿಗೆ ಹೇಳಿಲ್ಲ. ಇರಲಿ ರಾಮನೇ ಹೇಳಿಕೊಳ್ಳುತ್ತಾನೆ. ಅಥವಾ ತಾವೇ ತಿಳಿದುಕೊಳ್ಳುತ್ತಾರೆ.ವನದಿಂದಬAದನAತರ ಅಲ್ಲಿ ಕೇಳಿದ ಕಥೆಗಳನ್ನು ಹೇಳುತ್ತೇನೆ. ಇನ್ನೇನು ಕೆಲದಿನಗಳಲ್ಲಿ ಬರುತ್ತೇನೆ.ಎಂದು ವನಸುಮಂಗಲೆಯರನ್ನು ಕಾಣಲು ತವಕಿಸುತ್ತಾಳೆ.ಈ ಸಂದರ್ಭದಲ್ಲಿ ಸೀತೆಂiಯ್ನು ಬಿಟ್ಟು ಹೊಗÀÄವುದಹೇಗೆ ಎಂದು ಚಿಂತೆ`ಮಾಡುತ್ತಿರಲಾಗಿ ಲಕ್ಷö್ಮಣ ಏಕೆ ನಿಧಾನವಾಗಿ ಬರುತ್ತಿರುವೆ.ದಾರಿಯಲ್ಲಿಮುಲ್ಲು ಮುಳ್ಳು ಇಲ್ಲಾ ಆಶ್ರಮಕ್ಕೆ ಬರಲು ನಿನಗೆಮನಸ್ಸಿಲ್ಲವೆ ಎಂದುಮುಗ್ದವಾಗಿ ಕೇಳುತ್ತಾಳೆ.ಮುಂzಹೋಗಿÉಲಕ್ಷö್ಮಣ ನೀನು ದಾರಿ ತಪ್ಪಿದ್ದಿಯ. ಇದು ಆಶ್ರಮದ ದಾರಿಯಲ್ಲಇಲ್ಲಿ ಜನರ ಸಂಪರ್ಕವೆ ಇಲ್ಲ. ಇಲ್ಲಿಪ್ರಾಣಿಗಳಭಯಂಕರ ದ್ವನಿ ಕೇಳುತ್ತಿದೆ. ಇಂಥಕಡೆ ಋಷಿಮುನಿಗಳು ವಾಸಿಸಲು ಸಾಧ್ಯವಿಲ್ಲಾ. ನೀನು ಬಹುಶ: ದಾರಿತಪ್ಪಿರುವೆ ‘ಎಂದುಅರಿಯದೆ ವ್ಯಾಕುಲತೆಯನ್ನು ವ್ಯಕ್ತಪಡಿಸುತ್ತಾ¼ತೆ.ಆ ಮಾತ್ತÄ ಕೇಳಿ ಲಕ್ಷö್ಮಣನ ಮನದಲ್ಲಿ ವೇದನೆಯಾಗುತ್ತದೆ. ಕೊನೆಗೆಕಣ್ಣೀರಿÀಡುತ್ತ , ತಾಯೆನನ್ನನ್ನು ಕ್ಷಮಿಸಿ,ಇಲ್ಲಿಯವರೆಗೆಅಣ್ಣನ ಅಪ್ಪಣೆÉಯಂತೆ ಸುಮ್ಮನಿದ್ದೆ.ಯಾರದೊ ಮಾತಿಗೆ ಅಣ್ಣ ನಿಮ್ಮನ್ನು ಅಡವಿಗೆ ಬಿಟ್ಟು ಬರಲು ಹೇಳಿದ್ದಾನೆ,ಅಣ್ಣ£ಆಜ್ಷೆಯನ್ನುÀ ಪಾಲಿಸುತ್ತ ರಾಮನು ತನ್ನನ್ನು ತೆಜಿಸಿ ಕಾಡಿಗೆ ಬಿಡಲುತಿಳಿಸಿದ್ದಾನೆಂದು ತಿಳಿದಾಗ ದಿಗ್ಬಾçಂತಳಾಗಿತ್ತಾಳೆ.ಇಲ್ಲಿ ಕವಿ ಆಕೆಯಮನzಲ್ಲಿಯ ಅಚ್ಚರಿ, ರೋಷ, ಆತ್ಮನಿಂದೆ, ವ್ಯÀಂಗ್ಯವನ್ನೆಲ್ಲಾಬಿಡಿಸಿಬಿಡಿಸಿ ಹೇಳಿದ್ದಾನೆ. ಈ ಸುದ್ದಿ ಕೇಳಿ ಸೀತೆಗೆ ಬರಸಿಡಲು ಬಡೆದಂತಾಯಿತು.ಗಾಳಿಗೆ ಕರ್ಪೂರದಬಾಳೆ ಗಿಡದಂತೆಮುರಿದು ಬಿದ್ದಳು.ಮೈದುನನಮಾತು ಕಿವಿಗೆ ಚೂಪಾದ ಬಾಣ ನೆಟ್ಟಂತೆ ಆಯಿತು.ಮೂರ್ಛೆಹೊದಳು. ಲಕ್ಷö್ಮಣನು ಅಲ್ಲಿಯೇ ಇದ್ದ ಬೆಟ್ಟದ ಝರಿ ನೀರನ್ನು ತಾವರೆಯ ಎಲೆಯಲ್ಲಿ ತಂದು ದೇವಿಗೆ ಮಾಡುವ ಸೇವೆಯಂದು ಕಾಲಿಗೆ ನೀರುಹಾಕಿ ತಲೆಯ ಮೇಲೆ ನೀರು ಸುರಿಯಲು ಸೀತೆ ಕಣ್ಣು ಬಿಟ್ಟಳು.`ಹಾ ಲಕ್ಷö್ಮಣ ಪ್ರಿಯನಾದ ರಾಮ ಹೀಗೆ ಹೇಳಿದನೆ, ?ಮಾವು ಬೇವಾಯಿತೆ?,ಸಾಗರ ಬತ್ತಿ ಹೊಯಿತೆ?ಧರ್ಮ ಮಡುವಿನಲ್ಲಿ ಮುಳಿಗಿಹೋಯಿತೆ?ಹುಣ್ಣಿಮೆಯ ಚಂದ್ರನನ್ನುರಾಹು ನುಂಗಿತೆ?ಸತ್ಯ ಪಲಾಯನಮಾಡಿತೆ?ನೀತಿ ಹೆಸರು ಕಳೆದುಕೊಂಡಿತೆ?ಅಯ್ಯೋನಾಬಲಿಯಾದೆನಲ್ಲ’ ಎಂದು ಪ್ರಲಾಪಿಸುತ್ತಾಳೆ.ಮುಂದುವರೆದು ನನ್ನಲ್ಲಿ ಯಾವ ಕೊರತೆಕಂಡೆ,ಮಾರಿ ಹಬ್ಬವೆಂದುಮನೆಯ ಹೋರಿಯನ್ನು ಬಲಿಕೊಡುವರೆ,ಒಬ್ಬ ಸಾಮಾನ್ಯವ್ಯಕ್ತಿ ಆರೊಪಿಸಿದನೆಂದು ಅಬಲೆಯನ್ನು ಕಗ್ಗಾಡಿನಲ್ಲಿ ಬಿಟ್ಟು ಬರಬಹುದೆ?ನಾನು ನಿನ್ನರ್ಧಾಂಗಿಯಲ್ಲವೇ,ನಾನು ಇಲ್ಲದೆ ನೀನು ಅರ್ಧದೇಹಿಯಲ್ಲವೆ? ನಾನಿಲ್ಲದೆ ನೀನು ಸಿಂಹಾಸನವನ್ನು ಹೇಗೆ ಏರುವೆ?ನೀನು ಕಾಡಿಗೆ ಹೋಗುವಾಗ ನಿನ್ನನ್ನು ಅರ್ಧಗಂಟೆಬಿಟ್ಟಿರಲಾರೆನೆAದು ನಾನೂ ನಿನ್ನಜೊತೆಗೆ ಬರಲಿಲ್ಲವೇ?ಕಾಡಿನಲ್ಲಿ ಬಳಲಿ ಬಸವಳಿದಾಗ ನೀನುನನ್ನನ್ನು ಆರೈಕೆ ಮಾಡಲಿಲ್ಲವೆ, ಈಗ ನಾನು ಈ ಭಯಂಕರಕಾಡಿನಲ್ಲಿ ಒಬ್ಬಳೇಹೇಗೆ ಇರಬಲ್ಲೆ?ಎಂದು ಹೇಳುವ ಸೀತೆಯನ್ನು ಮುದ್ದಣ್ಣ ಕವಿ ಸೃಷ್ಟಿಸಿದ್ದಾನೆ. ಆಕೆ ಕೇಳುವ ಒಂದೊAದು ಮಾತಗಳು ಮರ್ಮಭೇದಮಾತುಗಳಾಗಿವೆ, ಮುಂದುವರೆದು ನೀನು ಹನುಮಂತ,ಜಾAಬವAತ,ಸುಮAತ್ರ ,ಅತ್ತೆಯರು ಇದಕ್ಕೆ ಒಪ್ಪಿಕೊಂಡರೆ?ನನ್ನದೊAದು ಬದುಕೇ? ಎಂದು ತನ್ನನ್ನು ತಾನು ಶಪಿಸಿಕೊಳ್ಳುತ್ತ,ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತ`ನಿಮ್ಮನ್ನು ಶÀಪಿಸಿ ಏನು ಪ್ರಯೊಜನ? ಹಿಂದಿನಜನ್ಮದಲ್ಲಿ ಯಾವದಂಪತಿಗಳನ್ನು ಅಗಲಿಸಿದ್ದೆನೋ ಈ ಜನ್ಮದಲ್ಲಿ ಅದರ ಫಲವನ್ನು ಅನುಭವಿಸುತ್ತಿದ್ದೆನೆ.ಎಂದು ಪತಿಯನ್ನು ಆತನ ಆದೇಶವನ್ನು ಗೌರವಿಸುತ್ತಾಳೆ.ತಲೆತಗ್ಗಿಸಿನಿಂತ ಮೈದುನನ್ನು `ಕಂದ ಏಕೆ ನಿಂತಿರುವೆ, ಅಣ್ಣನ ಆಜ್ಞೆ ಪಾಲಿಸಿರುವೆ.ತಡವಾಗುತ್ತದೆ ಹೋಗು,ತಡವಾದರೆ ನಿನ್ನ ಅಣ್ಣಕೋಪಿಸಿಕೊಳ್ಳುವುದಿಲ್ಲವೇ?ಎಂಬಮಾತು ಮೇಲ್ನೋಟಕ್ಕೆ ಸರಳವಾÀದರೂಅದರಲ್ಲಿ ವ್ಯಂಗ್ಯ ಇಣುಕಿ ನೋಡುತ್ತದೆ.ಆಕೆಯಮಾತು ಈಟಿಯಿಂದ ಇರಿದಂತೆ ಭಾಸವಾಗುತ್ತದೆ.ನಿನ್ನಣ್ಣ ಕೇಳಿದರೆ`ಅವಳು ದು:ಖಿಸಲಿಲ್ಲ,ಅಳುಕಲಿಲ್ಲ,ಶಪಿಸಲಿಲ್ಲ,ಪ್ರತಿಮಾತನಾಡಲಿಲ್ಲ.ನೀನೇ ಗತಿಯಂದು ಸಾವು ನಿರೀಕ್ಷಿಸುತ್ತಿದ್ದಾಳೆ ಎಂದು ನಿರೂಪಿಸು ಅವಳ ಸ್ಥಿತಿಚಿಂತಾಜನಕವಾದದ್ದು ಹಾಗೂ ಧೀರೋಧ್ಧಾತ್ತವಾದದ್ದು. ಜನಕಮಹಾÀರಾಜನ ಕುವರಿಯಾದ ಜಾನಕಿ ಯುವರಾಣಿ. ಮನೆತನದ ಸಹಜವಾದ ವೀರಗುಣಗಳು ಅವಳಲ್ಲಿಯೂ ಇದೆ,ತಾತ್ಕಾಲಿಕವಾದರೂ ಅವಳಲ್ಲಿಯ ಸಹಜಸ್ವಭಾವ ಜಾಗ್ರತವಾಗುತ್ತದೆ.ಮನುಷ್ಯಸೋತು ಹೋದಾಗ, ಬೇರೆ ಮಾರ್ಗವೇ ಇಲ್ಲವಾದಾಗ ಎಲ್ಲಿಲ್ಲದ ದೈರ್ಯಬರುತ್ತದೆ.ತುಂಬಾಮುಳಿಗಿದವನಿಗೆ ಛಳಿಏನುಮಳೆ ಏನು ಎಂಬAತೆ ವಿನೂತನವಾಗಿ ಚಿತ್ರಿತವಾಗಿದ್ದಾಳೆ. ಮುಂದುವರೆದು,ನನಗೆನನ್ನ ತಂದೆಯು ಬಳುವಳಿಯಾಗಿ ಕೊಟ್ಟ ಆಭರಣಗಳಲ್ಲಿ ಏಕಾವಳಿಹಾರ ಶ್ರುತಕೀರ್ತಿಗೂ,ತಿರುಪಿನ ಬಳೆಯನ್ನು ಮಾಳವಿಗೂ,ಯಕ್ಷರು ಧರಿಸುವ ತುಂಬು ಬೆಲೆ ಬಾಳುವ ಹಾರವನ್ನು ನಿನ್ನ ಪತ್ನಿಗೂ ಕೊಡು,ಉಳಿದ ನನ್ನುಡುಪುಗಳನ್ನುನನ್ನಪ್ರಿಯಗೆಳತಿ ಚಂದ್ರಮತಿಗೂಕೊಡು.ದು:ಖಿಸಬೇಡವೆAದು ಹೇಳು.ನಾನು ಸಿಧ್ಧಪಡಿಸಿದ ಬಾಗೀಣವನ್ನುರಥದಲ್ಲಿ ಇಟ್ಟಿದ್ದೇನೆ ಅದನ್ನು ಬ್ರ್ರಾಹ್ಮಣಗೆ ಮುತೈದೆಕೊಡು ನನ್ನ ಮುದ್ದಿನ ಹಸು ಕರುವನ್ನು ನಿನ್ನ ತಾಯಿ ಸುಮಿತ್ರೆಗೆಕೊಡು,ಸಾಧ್ಯವಾದರೆನಿನಗೆ ನನ್ನಲ್ಲಿ ದಯೆ ಇರುವುದಾದರೆ ನೀರಿನಅರವಟ್ಟಿಗೆಯನ್ನು ಏರ್ಪಡಿಸು’ಹೊಗು ನಿನ್ನ ಪಯನ ಸುಖಕರವಾಗಲಿ .ಅಪ್ಪಣೆ ಕೊಡುತ್ತಾಳೆ. ಲಕ್ಷö್ಮಣ ದಿಕ್ಪಾಲಕರಿಗೆ ಕೈಮುಗಿದು ಅತ್ತಿಗೆಯನ್ನು ಕಾಪಾಡಲು ಕೇಳಿಕೊಳ್ಳುತ್ತಾನೆ,ಸರ್ಯದೇವ, Éವನದೇವಿಯರಿಗೆ ಒಪ್ಪಿಸಿ ವಂದಿಸಿ ಹೋÀರಟುಹೋಗುತ್ತಾನೆ,ಜನಕರಾಜನ ಮಗಳು,ರಾಮನ ಹೆಂಡತಿಗೆ ಈಪರಸ್ಥಿತಿಯೇ,ವಿಧಿವಿಲಾಸ,ತನ್ನ ಅರಮನೆ ಗಿಳಿಗಳು, ಹೂಬಳ್ಳಿಗಳನ್ನು ನೆನೆದು ದ:ಖಿಸಿ ನಾನಿಲ್ಲದಿದ್ದರೆ ಇನ್ನೊಬ್ಬರು ಎಂದು ಉದಾಸೀನವಾಗಿ ಇರುವಾಗ ವಾಲ್ಮೀಕಿಋಷಿಗಳು ಬರುತ್ತಾರೆ.ಅವುರು ಯಾರು ತಾಯೆ ವನದೇವಿಯಂತಿರುವೆ.ಎAದಾಗ ಹೆದರಿ ರಾಕ್ಷಸರು ಇರಬಹುದೆಂದು ನಡಗುತ್ತಿರಲಾಗಿ,ವಾಲ್ಮೀಕಿ ಋಷಿಗಳು ತಾವು ತಪಸ್ವಿಗಳೆಂದು ಹೆದರಬಾರದೆಂದುರಮಿಸಿ ಆಕೆಯನ್ನು ಆಶ್ರಮಕ್ಕೆ ಕರೆತರುತ್ತಾನೆ.: ಇತ್ತರಾಮ ಸೀತೆಯ ನೆನೆದು ದು:ಖಿತನಾಗಿ,ಅಗಸ್ತö್ಯರ ಆದೇಶದಂತೆ ಚಿನ್ನದ ಸೀತೆಯನ್ನು ಇಟ್ಟುಕೊಂಡು ಅಶ್ವಮೇಧ ಕಾರ್ಯ ಆರಂಭಿಸುತ್ತಾನೆ. ಕುದುರೆಯ ಬೆಂಗಾಲಿಗೆÀ ಶತೃಘ್ನನನ್ನು,ಜೊತೆಗೆ ಭರತನಮಗನನ್ನು ನೆನಿಸಿ ಕಳಿಸುತ್ತಾರೆ.ಬೇರೆಬೇರೆ ಪ್ರದೇಶಗಳನ್ನು ದಾಟಿ ವಾಲ್ಮೀಕಿ ಆಶ್ರಮಕ್ಕೆ ಬರಲು ಮಕ್ಕಳು ಕುದುರೆಯನ್ನು ಕಟ್ಟಿಹಾಕುತ್ತಾರೆ ಹಿಂಬಾಲಕರು,ರಾಜರು ಲವನೊಂದಿಗೆ ಯುಧ್ಧಮಾಡಿದಾಗ ಲವ ಮೂರ್ಛೆ ಹೊಂದುತ್ತಾನೆ.ಅವನನ್ನು ಕೊಂಡೊಯ್ದಾಗ ಸೀತೆಮತ್ತೆ ಸಾಮನ್ಯಳಂತೆ ರೋಧನಮಾಡುತ್ತಾಳೆ. ವಿಷಯತಿಳಿದ ಕುಶ ರಾಮಲಕ್ಷö್ಮಣರನ್ನು ಸೊಲಿ¸ಲಾಗಿ Àವಾಲ್ಮಿಕಿಋಷಿಗಳ ಅನುಗ್ರಹದಿಂದ ಗಂಡಹೆAಡತಿಮಕ್ಕಳು ಒಂದಾಗುತ್ತಾರೆ. ಒಟ್ಟಿನಲ್ಲಿ ಮುದ್ದಣ್ಣ ಚಿತ್ರಿಸಿದ ಸೀತೆ ಸಾಮಾನ್ಯಳಂತೆ ಭಾವುಕವಾಗಿ,ವೀರಳಂತೆ ಧೀರೋಧ್ಧಾತ್ತವಾಗಿ,ಮಾತೃವಾತ್ಸಲ್ಯದ ಖಣಿಯಾಗಿ, ಕ್ಷಮಾಶೀಲಳಾಗಿ ,ಭಯಂಕರದ ಸ್ಥಿತಿಯಲ್ಲಿಯೂ ಸಮಚಿತ್ತಳಾಗಿ,ಆದರ್ಶಸತಿ ಮಾತೆ,ಸುತೆಯಾಗಿ ಚಿತ್ರಿತಳಾಗಿದ್ದಾಳೆ.ಮುದ್ದಣ್ಣನ ಈ ಕೃತಿಯಲ್ಲಿ ಹೊಸಸ್ಥಾನ ಮಾನ ಪಡೆದುಕೊಂಡಿದ್ದಾಳೆ. ಗ್ರAಥ ಋಣ ೧)ಮುದ್ದಣ್ಣ ಭಂಡಾರ ೨) ಕನ್ನಡಮಹಾಕಾವ್ಯಗಳಲ್ಲಿ ಸೀತೆಯ ಪಾತ್ರಚಿತ್ರಣ ಲೇ. ಡಾ. ಮಂದಾಕಿನಿ ಡಾ.ಶೀಲಾದಾಸ,ಎಲ್.ವಿ.ಡಿ.ಮಹಾವಿದ್ಯಾಲಯ,ರಾಯಚೂರು. ಮೊ.೯೪೪೮೯೭೩೬೭೦.ದೂ.೦೮೫೩೨-೨೪೦೪೯೨
“ಮಂತ್ರಸಿದ್ಧಿಕ್ಷೇತ್ರ ಮಂತ್ರಾಲಯ’’
“ಮಂತ್ರಸಿದ್ಧಿಕ್ಷೇತ್ರ ಮಂತ್ರಾಲಯ’’ “ಮಂತ್ರಸಿದ್ಧಿಕ್ಷೇತ್ರ ಇದು ನೋಡಿ ಕೋವಿದರು ಮಂತ್ರಪ್ರತಿಪಾದ್ಯ ಗೋಪಾಲವಿಠಲನಿಂದ’ ಎಂದು ಗೋಪಾಲದಾಸರು ಶ್ರೀರಾಘವೇಂದ್ರರ್ತೀರ ಕುರಿತು ರಚಿಸಿದ ಸ್ತೋತ್ರಸುಳಾದಿಯಲ್ಲಿ ನಿರೂಪಿಸಿದ್ದಾರೆ. ಗೋಪಾಲದಾಸರ ಸಾಹಿತ್ಯಸೇವೆ ಈ ನಾಡಿಗೆ, ಜನತೆಗೆ ಪುಣ್ಯಫಲ. ಇವರು ಗಾಯತ್ರಿ ಮಂತ್ರವನ್ನು ಒಲಿಸಿ ಕೊಂಡು ತ್ರಿಕಾಲ ಜ್ಞಾನಿಯಾಗಿ ಜ್ಯೋತಿಷ್ಯ ಹೇಳುವಲ್ಲಿ ನಿಪುಣರಾದರು. `ಭಕ್ತಿಯಲಿ ಭಾಗಣ್ಣ’ ಎಂದು ಖ್ಯಾತರಾದ, ಅಪರೋಕ್ಷ ಜ್ಞಾನಿಗಳಾದ ಗೋಪಾಲದಾಸರು “ಧರೆಯೊಳಗೆ ನಮ್ಮ ಗುರುರಾಘವೇಂದ್ರರಿನ್ನು ಇರುತಿಪ್ಪ ವಿವರವ ಅರಿತಷ್ಟು ವರ್ಣಿಸುವೆ’ ಎಂಬ ಸುಳಾದಿಯಲ್ಲಿ ಏನು ದಾಖಲಿಸಿದ್ದಾರೋ ಅದೆಲ್ಲವೂ ಅಕ್ಷರಶಃ ಇಂದು ಮಂತ್ರಾಲಯದಲ್ಲಿ ನಿಜವಾಗಿದೆ. ಐದುತಾಳ ಮತ್ತು ಜತೆಯಲ್ಲಿ ಸಮಗ್ರ ಮಂತ್ರಾಲಯದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸಿದ್ದಾರೆ. ಅರಂಭ ಧೃವತಾಳದಲ್ಲಿ ಮಂತ್ರಾಲಯ ಕ್ಷೇತ್ರದ ಕುರಿತು“ ತುಂಗಾತೀರದಲ್ಲಿರುವ ಈ ಕ್ಷೇತ್ರದಲ್ಲಿ `ಹರಿ ಭಕ್ತರಾದ ಪ್ರಲ್ಹಾದರಾಜರು ವರಯಾಗಮಾಡಿ, ಸುರರಿಗೆ ಅಮೃತವುಣಿಸಿ, ಪರಿಪರಿ ಕ್ರಿಯೆಮಾಡಿ ಪರಿಶುದ್ಧರಾದರು, ಪ್ರಸಿದ್ಧರಾದರೆಂದು ತಿಳಿದು ಗುರುಗಳು ಈ ಕ್ಷೇತ್ರಕ್ಕೆ ಆಗಮಿಸಿದರು. ಪರಲೋಕ ಸಾಧನೆ ಮಾಡಿಕೊಂಡು ಸಿರಿ ಕೃಷ್ಣನ ಪೂಜಿಸಿ ಧರೆಯ ಮೇಲಿದ್ದ ಭಕ್ತರನ್ನು ಪೊರೆಯಬೇಕೆಂದು ಹರಿಯನ್ನು ಪ್ರಾರ್ಥಿಸಲು ಇವರ ದಯಾಳುತನವ ಗಮನಿಸಿ ನರಹರಿ ತಾನೆ ನಿಂದು ಪರಿಪರಿ ಪೂಜೆಗೊಂಡು, ಸಿರಿಯೊಂದಿಗೆ ಚಕ್ರಧರ ಇಹಪರದಲ್ಲಿ ತನ್ನ ಭಕ್ತರನ್ನು ಪೊರೆಯುತಿರುವ’ ಎಂದು ಕ್ಷೇತ್ರದ ಪರಮ ಪವಿತ್ರವಾದ ಮಹಿಮೆಯನ್ನು ಗುರುಗಳ ಕಾರುಣ್ಯವನ್ನು ಸಾರಿದ್ದಾರೆ. ನರಹರಿ ಕೃಷ್ಣರಾಮ ಸಿರಿವೇದವ್ಯಾಸ ಎರಡೆರಡು ನಾಲ್ಕು ಹರಿಮೂರ್ತಿಗಳು ಪರಿವಾರಸಹಿತಾಗಿ ಸಿರಿಸಹಿತನಿಂದು ಸುರಗುರು ಮಧ್ವಾಚಾರ್ಯರೆ ಮೊದಲಾಗಿ ತರುವಾಯದಲ್ಲಿನ್ನು ತಾರತಮ್ಯಾನುಸಾರ ಪರಿಪರಿಯತಿಗಳು ಇಪ್ಪರು ಇಲ್ಲಿ’ ಎಂದು ಈ ಕ್ಷೇತ್ರದ ಮಹತ್ವವನ್ನು ಸಾರಿ, ವೇದಶಾಸ್ತç ಪುರಾಣಗಳನ್ನು ಹರುಷದಿಂದ ಪಾರಾಯಣ ಮಾಡುವ, ಪರಿಪರಿಯಿಂದ ಸಂಗೀತಗಾಯನ ಮಾಡುವ, ಭಕ್ತಿಯ ಪರಾಕಾಷ್ಠೆಯಲಿ ನರ್ತಿಸುವ ಭಕ್ತರು, ವಿಧವಿಧ ಸೇವೆಸಲ್ಲಿಸಿ ಕೃತಾರ್ಥರಾಗುವ ಭಕ್ತಕೋಟಿ ಈ ಕ್ಷೇತ್ರಕ್ಕೆ ಆಗಮಿಸಿ ಅಮಿತ ಫಲಕ್ಕೆ ಭಾಜನರಾಗುವರು ಎಂದು ಸಾರಿದ್ದಾರೆ. ನರಹರಿ ರೂಪರಾಗಿ ವಾಸವಾಗಿ ಇಲ್ಲಿ ದುರಿತ ದುಷ್ಕೃತ್ಯಗಳು, ಬ್ರಹ್ಮಹತ್ಯಗಳ ನಾಶಮಾಡಿ ಪೊರೆವರು, ಸಿರಿರಾಮನಾಗಿ ವಾಸವಾಗಿ ಇಲ್ಲಿ ಅನ್ನವನ್ನು ನೀಡಿ ಸ್ಥಿರಪಟ್ಟನೀಡಿ ಕಾಪಾಡುವರು, ಸಿರಿಕೃಷ್ಣನಾಗಿ ಇಲ್ಲಿ ವಾಸವಾಗಿ ಪರಿಪರಿಯಿಂದ ಆಗಮಿಸಿದ ಭಕ್ತರಿಗೆ ಮದುವೆ ಮುಂಜಿ,ಪುತ್ರೋತ್ಸವಗಳAತಹ ಹರಕೆ ಪೂರೈಸಿ ಹರುಷ ಪಡಿಸುತ್ತಾರೆ. ವೇದವ್ಯಾಸರೂಪರಾಗಿ ನಿಂದು ಹರಿಸರ್ವೋತ್ತಮ ತತ್ವವನ್ನು ಸಾರಿ ವರಜ್ಞಾನಸುಧೆಯ ಕರೆದು ಕೊಡುತ್ತಿದ್ದಾರೆ. ಹೀಗೆ ಭಕ್ತರಿಗೆ ಒಲಿದು ಪರಿಪರಿ ಓಲಗ ಕೊಡುತ್ತಿಪ್ಪ ಪುಣ್ಯಕ್ಷೇತ್ರವಿದೆಂದು ಸಾರುತ್ತಾರೆ. `ರಾಘವೇಂದ್ರನೆAಬ ರೂಪ ತಾನೆಯಾಗಿ ರಾಘವೇಂದ್ರನೆAಬ ನಾಮ ಇಡಿಸಿಕೊಂಡು ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ ಭೋಗವರಿತು ತನ್ನಭಾಗವತರ ಕೀರ್ತಿ ಸಾಧಿಸಿ ಸಲಹಲು ಜಗದೊಳಗೆಲ್ಲಾ’’ ಎಂದು ವಿಶ್ವವಿಖ್ಯಾತರಾಗಿ ಗುರುಗಳು ಬೇಡಿದವರಿಗೆ ಬೇಡಿದ ಭಾಗ್ಯನೀಡುವ ಕಾಮಧೇನು ಕಲ್ಪವೃಕ್ಷರಾಗಿ ಕಲಿಯುಗದಲ್ಲಿ ಕಾಪಾಡುವ ದೈವವಾಗಿದ್ದಾರೆ. ಅವರ ನಾಮಸ್ಮರಣೆಯೇ ಸಕಲ ದುರಿತನಾಶನ. ಅವರನಾಮ್ಮರಣೆಯೇ ಸಕಲಪುಣ್ಯಫಲಕ್ಕೆ ಸಾಧನ. ಗುರುಗಳು ಭಾಗವತರಿಂದ ಬಲು ಪೂಜೆಗೊಳ್ಳವರು ಎಂದು ಗೋಪಾಲದಾಸರು ಸಾರಿದ್ದಾರೆ. ಈ ಕ್ಷೇತ್ರದಲ್ಲಿ “ದಿನದಿನ ನೂತನ ಪೂಜೆಗಳಾಗುವವು ದಿನದಿನದಲ್ಲಿ ನೂತನ ಉತ್ಸವಗಳಾಗುವುವು ದಿನದಿನಕಿಲ್ಲಿ ನೂತನವಾರ್ತೆಗಳಾಗುವವು ಜನಸಂದಣಿಸಿ ಪ್ರತಿದಿನ ವಿಪ್ರಭೋಜನ’’ ವಾಗುವುದು ಎಂದಿದ್ದಾರೆ. ಸುಪ್ರಭಾತಸೇವೆಯಿಂದ ಆರಂಭವಾಗಿ ರಥೋತ್ಸವದತನಕ ಎಲ್ಲಾ ವಿಧದ ಪೂಜೆಗಳಲ್ಲಿ ಭಕ್ತರು ಭಕ್ತಿಯಿಂದ ಪಾಲ್ಗೊಂಡು ಕೃತಾರ್ಥರಾಗುತ್ತಾರೆ. ಸಂಗೀತ , ನೃತ್ಯ, ಭಜನೆ, ಪಾರಾಯಣ, ಅನೇಕ ಸೇವೆಗಳನ್ನು ಗುರುಗಳಿಗೆ ಸಲ್ಲಿಸಿ ಸಂತೋಷಪಡುತ್ತಾರೆ. ಜ್ಞಾನಭಕ್ತಿ ವೈರಾಗ್ಯ ಹೊಂದಲು ದಿನನಿತ್ಯ ಜನ ತಾಯಕಾಣುªಂತೆ Àಹಂಬಲಿಸಿ ಜನ ಸಂದಣಿಸಿ ಹಾತೊರೆದು ಬರುತ್ತದೆ. ಎಲ್ಲರದೂ ಒಂದೊAದು ಬಯಕೆ. ಯಾರಬಯಕೆಯೂ ಇಲ್ಲಿ ಬಂದ ನಂತರ ನಿರರರ್ಥಕವಾಗಿಲ್ಲ. ಅನ್ನಪೂರ್ಣೆಯಂತೂ ಇಲ್ಲಿಯೇ ವಾಸವಾಗಿದ್ದಾಳೆ. ಹಸಿದು ಬಂದ ಭಕ್ತರಿಗೆ ನಿತ್ಯಭೋಜನ ಪ್ರಸಾದದ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹುಟ್ಟು ಸಾವುUಳ ಬಂಧನದಿÀAದ ಮುಕ್ತರಾಗುವರು. ಕ್ಷೇತ್ರದಲ್ಲಿ ದಿನಕರತೇಜನಾದ ಭಗÀವಂತ ಗುವಂತರ್ಗತ ವಾಸವಾಗಿದ್ದು ಭಕ್ತರನ್ನು ಪಾಲಿಸುವ. “ ಮಂತ್ರಸಿದ್ಧಿಯ ಕ್ಷೇತ್ರ ಇದು ನೋಡಿ ಕೋವಿದರು ಮಂತ್ರ ಪ್ರತಿಪಾದ್ಯ ಗೋಪಾಲವಿಠಲನಿಂದ’’ ಎಂದು ಕ್ಷೇತ್ರದ ಮಹಿಮೆಯನ್ನು ದಾಸರು ಸಾರಿದ್ದಾರೆ. ನಿತ್ಯೋತ್ಸವದ ಈ ಕ್ಷೇತ್ರದಲ್ಲಿ ಗುರುಗಳಿಗೆ ಸೇವೆಸಲ್ಲಿಸಿ ಅನುಪಮ ಅನುಗ್ರಹಕ್ಕೆ ಪಾತ್ರರಾದ ಅನೇಕ ಭಕ್ತರಿದ್ದಾರೆ. ಗುರುಗಳೇ ಇಲ್ಲಿ ವಾಸವಾಗಿ ಭಕ್ತರನ್ನು ಸದಾ ಅನುಗ್ರಹಿಸುತ್ತಿದ್ದಾರೆ. ಜ್ಞಾನದ ಸೂರ್ಯರಶ್ಮಿಯನ್ನು, ಭಕ್ತಿಯ ಚಂದ್ರಕಾAತಿಯನ್ನು ಭಕ್ತರ ಮೇಲೆ ಧಾರೆಯೆರಿಯುತ್ತಿದ್ದಾರೆ. ಇಂತಹ ಗುರುಗಳನ್ನು ಆರಾಧಿಸಯವ ಭಕ್ತರು ಧನ್ಯರು. ಡಾ.ಶೀಲಾದಾಸ, ರಾಯಚೂರು.
ಶ್ರೀಗುರುರಾಜ ರಕ್ಷಿಪುದು
ಶ್ರೀಗುರುರಾಜ ರಕ್ಷಿಪುದು “ಪ್ರಥಮದಲಿ ಪ್ರೆಹ್ಲಾದರೆನ್ನಿಸಿ ದ್ವೀತೀಯ ಜನ್ಮದಿ ವ್ಯಾಸರೆನಿಸುತ ತೃತೀಯ ಜನ್ಮದಿ ರಾಘವೇಂದ್ರಸ್ವಾಮಿಯೆAದೆನಿಸಿ ಕ್ಷಿತಿಯಲವತರಿಸಿದ ಮಹಾತ್ಮನ ಸ್ತುತಿಪೆ ನಿನ್ನನವರತ ಮನಸಿನ ಖತಿಯ ಕಳೆದತಿಹಿತದಿ ಶ್ರೀಗುರುರಾಜ ರಕ್ಷಿಪುದು’’ ಎಂದು ಮನದುಂಬಿ ಭಕ್ತಿಪರವಶರಾಗಿ ಹಾಡಿದ ಹಾಡುಗಬ್ಬ `ಶ್ರೀಗುರುರಾಜ ಭಕ್ತಿಸಾರ’’ ನಡುಗನ್ನಡ ಕಾಲದಲ್ಲಿ ಭಕ್ತಿಯುಗ. ಈ ಸಂದರ್ಭದಲ್ಲಿ ಹರಿದಾಸ ಭಕ್ತಿಸಾಹಿತ್ಯವು ಕನ್ನಡ ಭಾಷೆಯಲ್ಲಿ ಷಟ್ಪದಿ,ಸಾಂಗತ,ತ್ರಿಪದಿ ಮುಂತಾದ ದೇಶೀ ಲಯಗಳಲ್ಲಿ ಓತಪ್ರೋತವಾಗಿ ಹರಿದುಬಂದಿತು. ಉದಾಹರಣೆಗೆ, ಕುಮಾರವ್ಯಾಸಭಾರತ, ಜೈಮಿನಿಭಾರತ, ಹರಿಭಕ್ತಿಸಾರ, ಹರಿಕಥಾಮೃತಸಾರ,ತತ್ವಸುವ್ವಾಲಿ ಇತ್ಯಾದಿ.ಈ ಪರಂಪರೆಯು ಆಧುನಿಕಸಾಹಿತ್ಯದಲ್ಲಿಯೂ ಈ ಪರಂಪರೆ ಮುಂದುವರೆದಿದೆ. ಅಂತಹ ಕೃತಿಗಳ ಸಾಲಿನಲ್ಲಿ ಕಂಡುಬರುವುದು ಶ್ರೀಗುರುರಾಜ ಭಕ್ತಿಸಾರ. ಈ ಕೃತಿಯನ್ನು ರಚಿಸಿದವರು ಶ್ರೀವೆಂಕಟರಮಣ ಅಂಕಿತರಾದÀ ಕೆ. ರಾಮಾಚಾರ್ಯರು. ಇವರು ಮೂಲತಃ ಕಲಬುರಗಿ ಜಿಲ್ಲೆಯ ಮಣೂರಿನವರು. ಇದಲ್ಲದೆ “ವೆಂಕಟೇಶ ಬಕ್ತಿಸಾರ’’ ಮತ್ತು “ಚನ್ನಕೆಸವ ಭಕ್ತಿಸಾರ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಯು ೧೦೧ ಭಾಮಿನಿಷಟ್ಪದಿಲ್ಲಿ ರಚಿತವಾಗಿದೆ. ಈ ಕೃತಿಯು ಶ್ರೀರಾಘವೇಂದ್ರತೀxðರ ಪರಮ ಪವಿತ್ರವಾದ ಅವತಾರ ತ್ರಯದ ಚರಿತ್ರೆಯಾಗಿದೆ. `ಗುರುಗಳೆಂದರೆ ಮಂತ್ರಾಲಯದ ಗುರುಗಳಲ್ಲದೆ ಅನ್ಯರುಂಟೆ ?ಎಂದು ಶಿಷ್ಯರಿಗೆ ಒಲಿದು ಹರುಷಸುರಿಸಿ ಕರೆಕರೆದು ಕರುಣದಿ ವರಗಳಕೊಡುವ ಕರುಣಾನಿಧಿ. ಪುನೀತವಾದ ಬೃಂದಾವನದಿ ರಾರಾಜಿಸುತ್ತ ಭ್ರತ್ಯರ ಪ್ರೀತಿ ಪಾತ್ರರಾಗಿದ್ದು ಭೂತ, ಪ್ರೇತ ಪಿಶಾಚಿಗಳ ಭಯ ನಿವಾರಣೆಮಾಡಿ ಖ್ಯಾತಿ ಪಡೆದ ಮಹಾತ್ಮರು. ಭಕ್ತರು ಯಾವ ಭಾವದವರು ಎಂದು ಸಾವಧಾನದಿ ಚಿಂತಿಸಿ ಫಲ ಮಂತ್ರಾಕ್ಷತೆ ಇತ್ತು ರಕ್ಷಿಸುವ ನಿಮ್ಮ ಸಮನಾದಗುರುಸಾರ್ವಭೌಮರ ನಾಕಾಣೆ. ನೇಮನಿತ್ಯಗಳಿರೆಯೆ, ಪಾಮರನನು ಆದರೆ ನಿಮ್ಮ ನಾಮೊಂದೇ ಬಲ್ಲೆನು. ಹೇ ಮಹಾತ್ಮ ಭಜಕರ ಪ್ರೇಮಿ ಮಂತ್ರಮAದಿರ ಚಿಂತಾಮಣಿ ಶ್ರೀಗುರುರಾಜ ರಕ್ಷಿಪುದು ಎಂದು ನಿವೇದಿಸಿಕೊಳ್ಳುತ್ತಾರೆ. ಶ್ರೀರಾಘವೇಂದ್ರ ಎಂಬ ಅಷ್ಟ ಮಾತ್ರೆಯ ಮಂತ್ರ ಪಠಸಲು ತಟ್ಟನೆ ರೋಗಗಳು ತಟ್ಟನೆ ಸುಟ್ಟು ಪೋಪವು. ನನ್ನ ಶಿರವು ನಿಮ್ಮ ಚರಣಗಳಿಗೆ ಬಾಗಲಿ, ನನ್ನ ಕರಗಳು ನಿಮ್ಮನ್ನು ಅರ್ಚಿಸಲಿ, ನಾಲಿಗೆ ನಿರುತ ನಿಮ್ಮ ಸ್ತೋತ್ರಪಠಸಲಿ, ನೇತ್ರಗಳು ಮೆರೆವ ಬೃಂದಾವನ ನಿರೀಕ್ಷಿಸುತ್ತಿರಲಿ,ನಿತ್ಯ ಉದಯ ಕಾಲದೊಳೆದ್ದು ನಿಮ್ಮನ್ನು ನನ್ನ ಹೃದಯ ಕಮಲದೊಳು ಕೂಡಿಸಿ ಸಮಲಾಮತಃಕರಣದಲಿ ಭಕ್ತಿಯಲಿ ನಿಮ್ಮನರ್ಚಿಸುತ ಪ್ರಾರ್ಥಿಸುವ ಪುಣ್ಯಕೊಡು ಎಂದು ಗುರುಗಳನ್ನು ಕೊಂಡಾಡುತ್ತಾರೆ ಮಂತ್ರಾಲಯ ಕ್ಷೇತ್ರದ ಕುರಿತು “ಇಷ್ಟತುಂಗಸ್ನಾನಸರ್ವೋ ತ್ಕೃಷ್ಟ ವೃಂದಾವನ ದರ್ಶನ ಶಿಷ್ಟಜನ ಸತ್ಸಂಗ ಬಲು ಮೃಷ್ಟಾನ್ನ ಭೋಜನವು ಸೃಷ್ಟಿಯಲಿ ಮಂಚಾಲಿ ಕ್ಷೇತ್ರದ ಶ್ರೇಷ್ಠತೆಯ ಇನ್ನೆಷ್ಟು ಹೊಗಳಲಿ ನಿಷ್ಠೆಯಿಂದರ್ಚಿಸುವೆ ಶ್ರೀಗುರುರಾಜ ರಕ್ಷಿಪುದು’’ ಎಂದು ವರ್ಣಿಸುತ್ತಾರೆ. ಗುರುರಾಜರು ಯತಿಗಳೂ ಹೌದು ಹರಿದಾಸರೂ ಹೌದು ಅನೇಕ ಹರಿದಾಸರಿಗೆ ಬೇಸರಿಲ್ಲದೆ ಮುದ್ರಿಕೆ ನೀಡುತಲಿ ಹರಿದಾಸರೆಂದೆನಿಸಿದೆ. ಪೂರ್ಣಬೋಧರ ಮತದ ಮಹಾ ಅಭ್ಧಿಗೆ ಪೂರ್ಣಚಂದ್ರನಾಗಿ ಮಂಚಾಲಿಯಲಿ ನೆಲೆಸಿರುವೆ. ರಮ್ಯ ತುಂಗಾ ತಟನಿವಾಸಿ ನೀನು ನನ್ನ ಅಪರಾಧಗಳನ್ನು ಮನ್ನಿಸು ಎಂದು ಬಿನ್ನೆöÊಪೆ. ಸೌಮ್ಯಶ್ರೀಗುರು ಒಮ್ಮೆ ದರ್ಶನ ವೀಯೋ.ದಾಸರಂತೆ ಹಾಡಲರಿಯೆನು, ಭಕ್ತರಂತೆ ಕಾಡಲು ಅರಿಯೆನು, ಓಡಿಸು ಎನ್ನಯ ಮೂಢಮತಿಯನು ನೀಡು ಸುಜ್ಞಾನವನು ನಾಡೋಳಗೆ ಈಡು ಯಾರಿಲ್ಲ. ಎಂದು ಗುರುಗಳ ಅನನ್ಯ ಮಹಿಮೆಯನ್ನು ಕೊಂಡಾಡುತ್ತಾರೆ. ಆತ್ಮ ನಿವೇದನೆ ಬಹಳ ಚನ್ನಾಗಿ ಮೂಡಿಬಂದಿದೆ.ಮAತ್ರಾಲಯದ ಕ್ಷೇತ್ರ, ಗುರುಗಳ ಮಹಿಮೆ, ಅನಂತವಾದ ಕಾರುಣ್ಯದ ಸಂದರ್ಭಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಕನಕದಾಸರ ಸಾಹಿತ್ಯದಲ್ಲಿ ಇರುವಂತೆ ಇಲ್ಲಿಯೂ ರಕ್ಷಿಸು ಎಂಬ ಪ್ರತಿ ನುಡಿಯ ಕೊನೆಯಲ್ಲಿ ಬರುತ್ತದೆ. ಡಾ.ಶೀಲಾದಾಸ, ರಾಯಚೂರು.
ಶ್ರೀಗುರುಜಗನ್ನಾಥದಾಸ ವಿರಚಿತ “ ಶ್ರೀರಾಘವೇಂದ್ರ ವಿಜಯ’’
ರಾಘವೇಂದ್ರರ ವಿಜಯ ಪೇಳುವೆ ರಾಘವೇಂದ್ರರ ಕರುಣ ಬಲದಲಿ ರಾಘವೇಂದ್ರರ ಭಕುತರಾದವರಿದನು ಕೇಳುವುದು.|| ಎಂದು ಭಾಮಿನಿ ಷಟ್ಪದಿಯಲ್ಲಿ, ಕನ್ನಡ ಭಾಷೆಯಲ್ಲಿ `ರಾಘವೇಂದ್ರವಿಜಯ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುರುಜಗನ್ನಾಥದಸರು ಹರಿದಸರೂ ಹೌದು. ಕವಿಗಳೂ ಹೌದು. ಮದ್ಯಕಾಲೀನ ಸಂದರ್ಭದಲ್ಲಿ ಹರಿದಾಸರು ಭಕ್ತಿಪೂರ್ವಕ ಕಾವ್ಯಗಳನ್ನು ರಚಿಸಿದ್ದಾರೆ. ಅವುಗಳನ್ನೆಲ್ಲಾ ಹಾಡುಗಬ್ಬಗಳೆಂದು ಗುರುತಿಸಲಾಗುತ್ತದೆ. ಅಂತಹ ಹಾಡುಗಬ್ಬಗಳಲ್ಲಿ ಈ ಕೃತಿಯೂ ಸೇರ್ಪಡೆಯಾಗುತದೆ. ಕಾವ್ಯ ಎಂದ ಮೇಲೆ ರಚನಾತ್ಮಕವಾದ ವಿಧಾನ ಇದ್ದೇ ಇರುತ್ತದೆ. ಗುರುಜಗನ್ನಾಥದಾಸರು ಕಾವ್ಯನಿಯಮಗಳನ್ನು ಪಾಲಿಸಿದ್ದಾರೆ. ಕವಿಗಳಾದವರು ಮೊದಲು ಈ ಕೃತಿಯನ್ನು ಯಾರಿಗಾಗಿ ಮತ್ತು ಯಾತಕ್ಕಾಗಿ ರಚಿಸುತ್ತಿರುವೆ ಎಂಬುನ್ನು ಸ್ಪಷ್ಟ ಪಡಿಸಬೇಕು. ಗುರುಜಗನ್ನಾಥದಾಸರು ಈ ಕಾವ್ಯವನ್ನು ರಾಘವೇಂದ್ರಗುರುಗಳ ಕರುಣೆಯಿಂದ ರಚಿಸುತ್ತಿರುವೆ. ಇದು ರಾಘವೇಂದ್ರಗುರುಗಳ ಭಕ್ತರಿಗಾಗಿ ಎಂಬ ಪ್ರೇರಣೆಯನ್ನು ಮತ್ತು ಧೋರಣೆಯನ್ನು ತಿಳಿಸುತ್ತಾರೆ. ಮುಂದುವರೆದು ಕಾವ್ಯದ ಆರಂಭದಲ್ಲಿ ತಮ್ಮ ಆರಾಧ್ಯ ದೈವ ಮತ್ತು ತಾರತಮ್ಯೋಕ್ತ ದೇವರ ಸ್ಮರಣೆ ಮಾಡುತ್ತಾರೆ. “ ಶ್ರೀರಮಣ ಶ್ರೀದೇವಿ ಬೊಮ್ಮ ಸ ಮೀರ ವಾಣಿ ಭಾರತಿ ವಿಪ ನೂರು ದಶಮುಖ ಉರಗಭೂಷಣ ರಾಣಿಯರ ಪದಕೆ ಸಾರಿ ನಮನವ ಮಾಡಿ ಭಕ್ಯ÷್ತನು ಸಾರ ಗುರುವರ ರಾಘವೇಂದ್ರರು ಉದಾರ ವಿಜಯವ ಪೇಳ್ವೆ ಸುಜನರು ಕೇಳಿ ಮೋದಿಪುದು’’ ಈ ಕಾವ್ವನ್ನು ರಾಘವೇಂದ್ರರ ಭಕ್ತರಿಗಾಗಿ ಮತ್ತು ಸುಜನರಿಗಾಗಿ ಎಂಬುದನ್ನು ಸ್ಪÀಷ್ಟ ಪಡಿಸುತ್ತಾರೆ. ಈ ಕೃತಿಯ ನಾಯಕ ಸಾಮಾನ್ಯನಲ್ಲ. ಘನ್ನ ಗುಣ ರನ್ನ. ವಿಶಾಲ ಮಹಿಮಾ. ಆದರೆ ಆ ಮಹಿಮನಿಗೆ ನನ್ನ ಅರ್ಹತೆಯೂ ತಿಳಿದಿದೆ. ಅದಕ್ಕೆ ನನ್ನ ಮನದಲಿ ನಿಂತು ತಾನೇ ಪೇಳಿಸಿದಾ’ ಎಂದು ರಾಯರನ್ನು ಅಂತರAಗದ ಸಿಂಹಾಸನದಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ನಾನು ವೇದ ಶಾಸ್ತç ಪುರಾಣ ಕಥೆಗಳನ್ನು ಓದಿದ ಪಂಡಿತನಲ್ಲ. ಅದರೂ ಈ ಕೃತಿಯನ್ನು ರಚಿಸುವ ಅರ್ಹತೆ ಬಂದಿದ್ದರೆ ಶ್ರೀರಾಘವೇಂದ್ರಗುರುಗಳ ಪಾಧ ಧೂಳಿಯ ಸ್ಪರ್ಶದಿಂದ ಮಾತ್ರದಲಿ ಶಕುತಿ ಹುಟ್ಟಿತು. ಮತಿಯ ಮಾಂದ್ಯತನ ನಾಶವಾಯಿತು. ಮಹಾನ ಪಂಡಿತರಿಗೇ ಗುರುಗಳ ಮಹಿಮೆ ಸಾರಲು ಅಸಾಧ್ಯವು. ಅಂತಹದರಲ್ಲಿ ನಾನು ಪಾಮರ. ಇನ್ನು ನನಗೆ ಈ ಸಾಮರ್ಥ್ಯ ಎಲ್ಲಿಂದ ಬರೆಬೇಕು. ಎಲ್ಲವೂ ಗುರುಗಳ ಮಹಿಮೆಯಿಂದ ಮಾತ್ರ ಸಾಧ್ಯವಾಗಿದೆ. ಗುರುಗಳ ಪಾದತೋಯದಿ ದೇವನದಿ ಮೊದಲಾದ ತೀರ್ಥಗಳು ಬೆರೆತು ನಿಂತಿವೆ. ಶ್ರೀವರ ತಾನು ಚಕ್ರರೂಪದಿ, ಜೀವೋತ್ತಮನಾದ ಪ್ರಾಣದೇವರು, ಸುರರು ಎಲ್ಲರು ಇಲ್ಲಿ ನೆಲಸಿಹರು. ಗುರುಗಳು ಒಲಿಯಲು ಪ್ರಾಣ ಮತ್ತು ಹರಿಯು ಒಲಿವನು. ಈತನೆ ಸಕಲಕ್ಕೆ ಕಾರಣÀನಾಗಿರುವನು. ಗುರುಗಳ ಪಾಧಧೂಳಿಯ ಕಣಗಳು ಸ್ಪರ್ಶವಾಗಲು ಸಕಲ ರೋಗಗಳು ನಿವಾರಣೆಯಾಗುವವು. ಗುರುಗಳ ಕರುಣಾ ದೃಷ್ಟಿ ಸೋಂಕಲು ಬೆಟ್ಟದಂತಹ ಪಾಪರಾಶಿ ಹಿಮದಂತೆ ಕರಗಿ ಪೋಪುದು. ಇವರ ಚರಣಸೇವೆ ಮಾಡಲು ಇಷ್ಟಕಾಮಿತ ಸಿದ್ಧಿಮಾಡಿ ಕಷ್ಟ ಕೋಟಿಯ ಸುಟ್ಟು ಬಿಸುಟುವ ಎಂದು ಗುರುಗಳ ಮಹಿಮೆಯನ್ನು ಸಾರುತ್ತಾರೆ. ಈತನ ಕರುಣೆ ಅಗಾಧವಾದದ್ದು. “ ತನಯರಿಲ್ಲದ ಜನಕೆ ಸುತರನು ಮನಿಯು ಮಾನಿನಿ ವೃತ್ತಿ ಕ್ಷೇತ್ರವು ಕನಕ ಧನ ಸಂತಾನ ಸಂಪತ್ತು ಇನತೆ ಫಲಗಳನು ಜನ ಸಮೂಹಕೆ ಇತ್ತು ತೋಷದಿ ವಿನಯಪೂರ್ವಕ ಸಲಿಸಿ ಕಾವನು ಅನುಪಮೋಪಚರಿತ ಸದ್ಗುಣಭರಿತ ಯತಿನಾಥ’’ ಎಂದು ಗುರು ಕಾರುಣ್ಯವನ್ನು ಬಣ್ಣಿಸುತ್ತಾರೆ. ಶಾಪ ನೀಡಲು ಶಕ್ತನಾದ ಋಷಿಯ ವಾಕ್ಯವು ಲೋಪವಾಗುವಂತೆ ಮಾಡುವನು. ಸರ್ವಕಾಲದಲ್ಲಿ ನಮ್ಮೊಂದಿಗಿದ್ದು ಕಾಪಾಡುವನು. ಕೋಪವಿಲ್ಲ ಇವನಲ್ಲಿ ಜ್ಞಾನಮಯ, ಸಾಧುವರ್ತಿ, ಸುಖರೂಪ, ಪಾಪನಾಶಕ, ಕವಿಕುಲೋತ್ತಮ ಪುಣ್ಯಮಯಕಾಯ. ಇಂತಹ ಗುರುಗಳು ಬರಿ ಗುರುಗಳಲ್ಲ. ಜನಕ, ಜನನಿ, ಸಹೋದರ, ಬಂಧು ಬಾಂಧವ, ಗುರು, ಮತಿ, ಗತಿಯು ಸಂತತ ನೀನೆಯಾಗಿರುವೆ. ನನ್ನ ಮಾತು ಲಾಲಿಸು ಯತಿಕುಲ ಸರ್ವಜ್ಞ ಎಂದು ಶರಣು ಹೋಗುತ್ತಾರೆ. ಶ್ರೀರಾಘವೇಂದ್ರ ವಿಜಯವನ್ನು ಪಾರಾಯಣ ಮಾಡಿದರೆ ಸಿಗುವ ಫಲವನ್ನು ಹೇಳುತ್ತಾರೆ “ಇಂದು ಸೂರ್ಯಗ್ರಹಣ ಪರ್ವವು ಬಂದ ಕಾಲದಿ ನೇಮಪೂರ್ವಕ ಪೋಂದಿದಾಸನದಲ್ಲಿ ಕುಳಿತಷ್ಟೋತ್ತರಾವರ್ತಿ ಒಂದೆಮನದಲಿ ಮಾಡೆ ಗುರುವರ ನಂದದಲಿ ಸಕಲಾರ್ಥ ಸಿದ್ಧಿಯ ತಂದುಕೊಡುವನು ತನ್ನ ಸೇವಕ ಜನರ ಸಂತತಿಗೆ ‘’ ಎಂದು ಫಲಶೃತಿಯನ್ನು ತಿಳಿಸುತ್ತಾರೆ. ಗುರುಜಗನ್ನಾಥದಾಸರು ಗುರುಕರುಣೆಯನ್ನು ಒದಗಿಸಲು ಪಾರಾಯಣ ಮಾಡಿ ಪಾವನರಾಗಲು ಭಕ್ತರಿಗಾಗಿ ರಾಘವೇಂದ್ರವಿಜಯವನ್ನು ಕನ್ನಡದಲ್ಲಿ ರಚಿಸಿ ಅನುಗ್ರಹಿಸಿದ್ದಾರೆ. ಈ ಹಿಂದೆ ಅಲ್ಹಾದರಾಗಿ, ಅಪ್ಪಣಾಚಾರ್ಯರಾಗಿ, ಶ್ರೀದವಿಠಲರಾಗಿ, ಗುರುಜಗನ್ನಾಥದಾಸರಾಗಿ ರಾಯರ ಅನನ್ಯ ಭಕ್ತರಾಗಿ, ಆಪ್ತರಾಗಿ ಸೇವೆ ಗೈದಿದ್ದಾರೆ ಎಂಬ ವಿಚಾರ ಅವರ ಶಿಷ್ಯರಿಂದ ತಿಳಿದು ಬರುತ್ತದೆ. ಸದಾ ಗುರುಗಳ ಅನುಗ್ರಹಕ್ಕೆ ಪಾತ್ರರಾದ ಗುರುಜಗನ್ನಾಥದಾಸರ ಈ ಕೃತಿಯು ನಮಗೆಲ್ಲ ಮಂತ್ರ ಸದೃಶ್ಯವಾದ ಗ್ರಂಥವಾಗಿದೆ. ಪರಮ ಪವಿತ್ರವಾದ ಗ್ರಂಥವಾಗಿದೆ. ಈ ಗ್ರಂಥವನ್ನು ಪಾಡೋಣ, ಪೂಜಿಸೋಣ, ಅನುಗ್ರಹಿತ ರಾಗೋಣ. ಡಾ.ಶೀಲಾದಾಸ, ರಾಯಚೂರು.
ಮುನ್ನೂರಕಾಪು ಜನಾಂಗ- ಮಹಿಳಾಸಂಸ್ಕೃತಿ
ಭಾರತ ಎಂದರೆ ಒಂದೇ ದೇಶವೋ ಅಥವಾ ವಿವಿಧ ಬಗೆಯ ಸಂಸ್ಕೃತಿಯನ್ನು ಹೊಂದಿದ ಅನೇಕ ದೇಶಗಳ ಗುಂಪಿನ ಸಂಕೇತವೋ ಎಂಬ ಸಂಶಯ ಪರದೇಶಿಗರಲ್ಲಿ ಮೂಡುತ್ತದೆ. ಅಷ್ಟೋಂದು ಸಂಸ್ಕೃತಿಗಳು ಭಾರತದೇಶದಲ್ಲಿ ಬೆಳೆದು ಬಂದಿವೆ. ಅನೇಕ ಸಂಸ್ಕೃತಿಗಳು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಅನ್ಯೋನ್ಯತೆಯಲ್ಲಿ ಬಾಳಿ ಬದುಕುತ್ತಿವೆ. ನಾವೆಲ್ಲರೂ ಒಂದು. ಭಾರತದೇಶಕ್ಕೆ ಸ್ಪಷ್ಟವಾದ ವ್ಯಕ್ತಿತ್ವವಿದೆ. ನಾವೆಲ್ಲರೂ ಒಂದೇತಾಯಿಯ ಮಕ್ಕಳು ಎಂಬ ಭಾವನೆ ನಮ್ಮಲ್ಲಿ ಮನೆಮಾಡಿದೆ. ಸಂಸ್ಕೃತಿಯು ವ್ಯಕ್ತಿಯಿಂದ ವ್ಯಕ್ತಿಗೆ, ಜನಾಂಗದಿAದ ಜನಾಂಗಕ್ಕೆ ಭಿನ್ನವಾಗಿರುತ್ತದೆ. ಆದರೆ ಸಂಸ್ಕೃತಿ ನಮಗರಿವಿಲ್ಲದೇ ಯಾವುದೋ ಸೂತ್ರದಲ್ಲಿ ಬಂಧಿಸಿದೆ. ಈ ಬಂಧನ ಆಂಗ್ಲರು ಬರುವ ಮುನ್ನವೂ ಇತ್ತು. ಅವರು ದೇಶವನ್ನು ಬಿಟ್ಟು ಹೋದಮೇಲೂ ಇದೆ. ಇದೇ ಭಾರತದ ಅಂತಃಸತ್ವವಾಗಿದೆ. ಸಂಸ್ಕೃತಿಯAಬುದು ಅಧಿಕಾರದಿಂದ, ಹಣದಿಂದ ಶಿಕ್ಷಣದಿಂದ, ಜಾಣತನದಿಂದ ಮಾತ್ರ ಬರುವಂಥದ್ದಲ್ಲ. ಸಂಸ್ಕೃತಿಯAಬುದು ಆತ್ಮಸಂಸ್ಕಾರದ ಫಲವಾಗಿದೆ. ಒಳ್ಳೆಯತನವೇ ಸಂಸ್ಕçತಿಯ ಸಾರವಾಗಿದೆ. ಅಮೂರ್ತವಾದ ಅನುಭವವಾಗಿದೆ. ಆದರೂ ಸಂಸ್ಕೃತಿಯ ಸ್ವರೂಪವನ್ನು ವಿದ್ವಾಂಸರು ವ್ಯಾಖ್ಯಯಲ್ಲಿ ಹಿಡಿದಿಡುವ ಪ್ರಯತ್ನಮಾಡಿದ್ದಾರೆ. ಕಠೋಪನಿಷತ್ತಿನಲ್ಲಿ` ಆತ್ಮನನ್ನು ಶರೀರವೆಂಬರ್ಥದಲ್ಲಿ ಕುಳ್ಳಿಸಿರುವ ಪ್ರಯಾಣಿಕ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು, ಇಂದ್ರಿಯಗಳೇ ಕುದುರೆಗಳು, ಭೋಗ್ಯವಸ್ತುಗಳೇ ಪ್ರಯಾಣದ ದಾರಿ, ಬುದ್ಧಿಯಂಬ ಸಾರಥಿ ಧೃಢವಾದ ಮನಸ್ಸಿನಿಂದ ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ರಥವನ್ನು ಗುರಿಯತ್ತ ಮುಟ್ಟಿಸಬೇಕು.’ ಇದು ನಾವು ಸಾಗಬೇಕಾದ ಮಾರ್ಗವನ್ನು ಸ್ಥೂಲವಾಗಿ ಸೂಚಿಸುತ್ತದೆ. ತೈತರೀಯ ಉಪನಿಷತ್ತಿನಲ್ಲಿ“ ಸತ್ಯಂವದ ದರ್ಮಂಚರ……. ಇತ್ಯಾದಿ ವಿಷಯಗಳನ್ನು ಕಾಣಬಹುದು. ಇವುಗಳನ್ನು ಗಮನಿಸಿದರೆ ನಮ್ಮ ಸಂಸ್ಕೃತಿ ವೇದಮೂಲದಿಂದಲೇ ರೂಪಿತವಾಗಿದೆ ಎಂದು ಹೇಳಬಹುದಾಗಿದೆ. ನಮ್ಮ ಸಂಸ್ಕೃತಿಯ ವಿಶೇಷತೆಯಂದರೆ ಸಾಮರಸ್ಯ. ಬಾದಾಮಿಯ ಗುಹೆಗಳನ್ನು ಗಮನಿಸಿದರೆ ಸಮನ್ವಯತೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಒಳ್ಳೆಯತನ ಬುದ್ಧಿ, ಅಹಿಂಸೆ, ಪ್ರೇಮ, ಭಕ್ತಿ ಮುಂತಾದ ವಿಚಾರಗಳೇ ನಮ್ಮ ಸಂಸ್ಕೃತಿಯ ಬೇರುಗಳು. ಇವುಗಳನ್ನು ಆಧಾರಿಸಿ ವಿವಿದ ಆಚರಣೆಗಳು, ನಡುವಳಿಕೆಗಳು ಬೆಳೆೆದುಬಂದು ವಿಶಿಷ್ಟವೂ ,ವೈವಿಧ್ಯಮಯವೂ ಆಗಿರುವುದು ಕಂಡು ಬರುತ್ತದೆ. ಇಂತಹ ಭಾರತೀಯ ಸಂಸ್ಕೃತಿಯ ಅತ್ಮನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಕೊಡುಗೆಯೂ ಗಣನೀಯ ವಾಗಿದೆ. ವೇದಕಾಲದಲ್ಲಿಯೇ ಗಾರ್ಗಿ, ಕಾತ್ಯಾಯನಿ, ಮೈತ್ರೇಯಿ, ಋಷಿಕಾ ಭಾರತಿದೇವಿ ಮುಂತಾದ ಮಹಿಳೆಯರು ಬ್ರಹ್ಮಜ್ಞಾನಿಗಳಾಗಿದ್ದರು ಎಂದು ತಿಳಿದು ಬರುತ್ತದೆ. ರಾಮಾಯಣ ಮಹಾಭಾರತದಲ್ಲಿ ಉಲ್ಲೇಖಿತ ಮಹಿಳೆಯರು. ಇತಿಹಾಸ ಪ್ರಸಿದ್ಧ ಮಹಿಳೆಯರನ್ನು ಇಲ್ಲಿ ಪರಿಗಣಿಸ ಬೇಕಾಗುತ್ತದೆ. ಇದೆಲ್ಲವೂ ಒಂದು ಭಾಗವಾದರೆ ಈ ಮಹಿಳೆಯರನ್ನೆಲ್ಲಾ ಹಾಡು, ಕಥೆಗಳ ಪರಂಪರೆಯಿAದ ಅರಿತು ತಮ್ಮದೇ ಆದ ಸಂಸ್ಕೃತಿಯನ್ನು ರೂಪಿಸಿಕೊಂಡವರು ಜನಪದ ಮಹಿಳೆಯರು. ಇವರು ಅಧ್ಯಯನಶೀಲರಲ್ಲ. ಅನುಭಾವಿಗಳು. ಮೂಲ ಕೃಷಿ ಪ್ರಧಾನ ಕುಟುಂಬದಲ್ಲಿ ಬಂದವರಾದ ಇವರು ತಾವು ತಮ್ಮ ಪರಿಸರವನ್ನು ಮುಖ್ಯವಾಗಿಟ್ಟುಕೊಂಡು ಸಂಪ್ರದಾಯ ಸಂಸ್ಕೃತಿಯನ್ನು ತಮ್ಮ ಇತಿ-ಮಿತಿಯಲ್ಲಿ ರೂಪಿಸಿಕೊಂಡಿದ್ದಾರೆ. ಇವರಿಗೆ ಶಾಸ್ತç ವಿಧಿನಿಯಮಗಳಿಗಿಂತ ಮನೆಯ ಹಿರಿಯ ಯಜಮಾನತಿಯೇ ಅಂತಿಮ ನಿರ್ಣಾಯಕಳು. ಆಕೆಯ ಅಣತಿಯಂತೆ ಎಲ್ಲಾ ಆಗುಹೋಗುಗಳು ನಿರ್ಣಯವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಜನಾಂಗಿಕ ಅಧ್ಯಯನಗಳು ಮುನ್ನಲೆಗೆ ಬರುತ್ತಿವೆ. ಜನಾಂಗಗಳ ಅಭಿವೃದ್ಧಿಗೆ ಇವುಗಳ ಅದ್ಯಯನ ಮಹತ್ವದ ಪಾತ್ರ ವಹಿಸುತ್ತವೆ. ಆಯಾ ಜನಾಂಗಗಳ ಜನಸಂಖ್ಯೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕ ಸ್ಥಾನಮಾನಗಳು, ಸ್ಥಿತಿಗತಿಗಳನ್ನು ತಿಳಿಯಲು ಮಹತ್ವದ ಪಾತ್ರ ವಹಿಸುತ್ತಿವೆ. ಪ್ರಸ್ತುತ ಹೈದ್ರಾಬಾದ ಸಂಸ್ಥಾನದ ಪ್ರದೇಶಗಳಲ್ಲಿ (ಇಂದಿನ ಉತ್ತರಕರ್ನಾಟಕ ಮತ್ತು ತೆಲಂಗಾಣದ ಪ್ರದೇಶ) ಕಂಡುಬರುವ ಪ್ರತಿಷ್ಠಿತ ಜನಾಂಗವೆAದರೆ “ಮುನ್ನೂರು ಕಾಪು ಜನಾಂಗ”. ಈ ಜನಾಂಗದ ಮಹಿಳಾ ಸಂಸ್ಕೃತಿಯ ಕುರಿತಾಗಿ ಬೆಳಕು ಚಲ್ಲುವುದು ಇಲ್ಲಿಯ ಉದ್ದೇಶ. ಈ ಜನಾಂಗದ ಪ್ರಾಚೀನತೆ ತ್ರೇತಾಯುಗಕ್ಕೆ ಹೋಗಿ ನಿಲ್ಲುತ್ತದೆ. ಅದು ಕ್ಷಾತ್ರಯುಗ. ಈ ಜನಾಂಗದ ಮೂಲ ಪುರುಷ ಮಿಥಿಲಾಧಿಪತಿ ಜನಕಮಹಾರಾಜ ಎಂಬ ಪ್ರತೀತಿ ಇದೆ. ಇವರನ್ನು ಸೀತಾಸ್ವಯಂವರಕ್ಕಾಗಿ ಇರುವ ಶಿವಧನಸ್ಸನ್ನು ರಕ್ಷಣೆ ಮಾಡಲು ಜನಕ ಮಹಾರಾಜ ನಿಯಮಿಸಿದ್ದನಂತೆ. ಅಲ್ಲಿಂದ ಇವರ ಪರಂಪರೆ ಆರಂಭವಾಗುತ್ತದೆ. ಮೂಲತಃ ಕೃಷಿ ಪ್ರಧಾನ ಜನಾಂಗ ಹಾಗೂ ವೀರರು. ವರಂಗಲ್ಲ ಮತ್ತು ಕಾಕತೀಯರು ಇವರಿಗೆ ಬಂದುಗಳು. ಷಹಜಾನ, ವಿಜಯನಗರ ಅರಸರು, ಶಿವಾಜಿ ಚಕ್ರವರ್ತಿ ಆಸಫಜಾಹಿ ಮುಂತಾದ ರಾಜರೊಂದಿಗೆ ಈ ಜನಾಂಗದ ವೀರರು ಹೆಸರುವಾಸಿಗಳಾಗಿದ್ದರು. ಕಾವ್ಯಗಳಲ್ಲಿ ಇತಿಹಾಸದಲ್ಲಿ ಈ ಜನಾಂಗದ ವಿವರ ಲಭ್ಯವಾಗುತ್ತದೆ. ಕಾಲಕ್ರಮೇಣ ಈ ಜನಾಂಗದವರು ಉತ್ತರ ಪ್ರದೇಶದಿಂದ ದಕ್ಷಿಣ ದೇಶಕ್ಕೆ ಒಲಸೆ ಬಂದದ್ದು ಕಂಡುಬರುತ್ತದೆ. ಮುಂದೆ ಬೇರೆಬೇರೆ ರಾಜರಲ್ಲಿ ವೀರರಾಗಿ ಗುರುತಿಸಿಕೊಂಡಿದ್ದಾರೆ. ಮುನ್ನೂರು ಎಂದರೆ ಈ ಜನಾಂಗ ಸಂಖ್ಯಾವಾಚಕವಾಗಿ ಗುರುತಿಸಿಕೊಂಡಿದೆ. ಮೂರುನೂರುಜನರ ಒಂದು ಸಮೂಹವಾಗಿದೆ. ಇವರದು ಮೂಲತಃ ಸ್ತಿçÃಪ್ರಧಾನ ಕುಟುಂಬವಾಗಿದೆ. ಇಲ್ಲಿಂದಲೇ ಇವರ ಸಂಸ್ಕೃತಿ ಆರಂಭವಾಗುತ್ತದೆ. ಇವರ ಆರಾಧ್ಯ ದೈವ ಲಕ್ಷö್ಮಮ್ಮ. ಈಕೆ ಪುರಾಣ ಪುರುಷಳಲ್ಲ. ಒಬ್ಬ ಸಾಮಾನ್ಯ ಸ್ತಿçÃ. ಈ ವಿಚಾರಕ್ಕೆ ಸಂಬAಧಿಸಿದAತೆ ಒಂದು ಐತಿಹ್ಯವಿದೆ. “ಸುಮಾರು ವರುಷಗಳ ಹಿಂದೆ ಗದ್ವಾಲ್ ತಾಲ್ಲೂಕಿನ ಗೊರಡ್ಡಿಪಲ್ಲೆ ಎಂಬ ಗ್ರಾಮದಲ್ಲಿ ಒಂದು ಕುಟುಂಬ ವಾಸವಾಗಿತ್ತು. ಅವರಿಗೆ ಮೂರುಜನ ಗಂಡುಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಳು. ಕೆಲಕಾಲದನಂತರ ತಂದೆ ತಾಯಿಯರು ದೈವಾಧೀನವಾಗುತ್ತಾರೆ. ಸಹೋದರಿಯನ್ನು ಅಣ್ಣತಮ್ಮಂದಿರು ಪಾಲನೆ ಮಾಡುತ್ತಿರುತ್ತಾರೆ. ಬೆಳೆದು ದೊಡ್ಡವಳಾದಮೇಲೆ ಈಕೆಯ ಮದುವೆ ಮಾಡಲು ನಿರ್ಧರಿಸುತ್ತಾರೆ. ಒಮ್ಮೆ ಕಾಡಿಗೆ ದನಕರು ಮೇಯಿಸಲು ಹೋದಾಗ ಬಾಯಾರಿಕೆಯಿಂದ ಬಳಲುವದ ಹೋರಿಯ ಮೂತ್ರ ಕುಡಿಯುತ್ತಾಳೆ. ಅದರಿಂದ ಆಕೆ ಗರ್ಭಿಣಿಯಾಗುತ್ತಾಳೆ. ಸಮಾಜ, ಸಹೋದರರು ಅಕೆಯನ್ನು ತಪ್ಪಾಗಿ ಭಾವಿಸುತ್ತಾರೆ. ಹೆರಿಗೆ ನೋವು ಬಂದರೂ ಯಾರೂ ಅಕೆಯ ಸಹಾಯಕ್ಕೆ ಬರುವುದಿಲ್ಲ. ಆಕೆಯ ಹಿರಿಯಣ್ಣ ಮಚ್ಚನ್ನು ತೆಗೆದುಕೊಂಡು ಹೊಟ್ಟೆಯನ್ನು ಸೀಳುತ್ತಾನೆ. ಆಕೆಯ ಹೊಟ್ಟೆಯಲ್ಲಿ ಹೋರಿಕರು ಇರುತ್ತದೆ. ಆಕೆ ರಕ್ತದ ಮಡುವಿನಲ್ಲಿ ತೇಲುತ್ತಿರುತ್ತಾಳೆ. ಎಲ್ಲರಿಗೂ ಪಶ್ಚಾತಾಪವಾಗುತ್ತದೆ. ಆಕೆಯೇ ತಮ್ಮ ದೈವಾ ಎಂದು ಪೂಜಿಸುತ್ತಾರೆ. ಇಂದಿಗೂ ಈ ಪರಂಪರೆ ಮುಂದುವರೆದಿದೆ. ಹೋರಿಕರುವಿನೊಂದಿಗೆ ಈಕೆಯನ್ನು ಪೂಜಿಸುತ್ತಾರೆ. ಅಲ್ಲದೆ ಯಲ್ಲಮ್ಮ, ಜಮಲಮ್ಮಾ ಮಾರೆಮ್ಮಾ ಮುಂತಾದ ದೇವಿಯರನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತಾರೆ. ಒಟ್ಟಿನಲ್ಲಿ ದೇವಿಯ ಆರಾಧಕರು. ಇದು ಇವರ ಸಂಸ್ಕೃತಿಯಾಗಿದೆ. ಹಾಗೆಯೇ ಜಾತ್ರೆಯಲ್ಲಿ ದೇವರು ಕಟ್ಟುವ ಪದ್ಧತಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಹೆಡಗೆ ತುಂಬಿಸುವುದು,ಕವಡೆ ಸರ ಕಾಕಿಕೊಳ್ಳುವುದು ಬೇವಿನ ತೊಪ್ಪಲು ಕಟ್ಟುವುದು ಸಂಪ್ರದಾಯ ಉಳಿದುಕೊಂಡು ಬಂದಿದೆ. ಕೆಲವರು ಕಡ್ಡಯವಾಗಿ ದೇವರು ಕಟ್ಟುತ್ತಾರೆ. ಇನ್ನೂ ಕೆಲವರು ಹರಕೆ ಹೊತ್ತುಕೊಂಡು ದೇವರನ್ನು ಕಟ್ಟಿಕೊಳ್ಳುತ್ತಾರೆ.ಇವರು ದೇವಿಯ ನೈವೇದ್ಯಕ್ಕೆ ಸಸ್ಯಾಹಾರವನ್ನೂ ಸಿದ್ಧಪಡಿಸಿದರೆ, ದಿನನಿತ್ಯದಲ್ಲಿ ಮಾಂಸಹಾರಿಗಳಾಗಿದ್ದಾರ. ಕಾಲಾಂತರದಲ್ಲಿ ಈ ಬದಲಾವಣೆ ನಡೆದಿರಬಹುದು. ಈಗಾಗಲೇ ತಿಳಿಸಿದಂತೆ ಇವರು ಕೃಷಿ ಪ್ರಧಾನ ಕುಟುಂಬದವರು. ಇಡೀ ಕುಟುಂವರೆಲ್ಲ ಕೃಷಿಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಮಹಿಳೆಯರಂತೂ ಕುಟುಂಬದ ಸದಸ್ಯರ ಊಟೋಪಚಾರದೊಂದಿಗೆ ಕೃಷಿ ಚಟುವಟಿಕೆಲ್ಲಿ ಪಾಲುಗಾರರಾಗುತ್ತಾರೆ. ಇವರಿಗೆ ಭೂಮಿ, ಪಶುಗಳು ದವಸಧಾನ್ಯಗಳು ಮುಖ್ಯವಾಗುತ್ತವೆ. ಕೃಷಿಚಟುವಟಿಕೆಗಳು ಆರಂಭವಾಗುವುದು ಮುಂಗಾರು ಹಬ್ಬದಿಂದ. ಪುರುಷರು ಭೂಮಿಯಲ್ಲಿ ಉತ್ತುವ ಬಿತ್ತುವ ಕಾರ್ಯದಲ್ಲಿ ತೊಡಗಿದರೆ ಭೂಮಿಯನ್ನು ಪೂಜಿಸುವ ,ಪಶುಗಳನ್ನು ಪೂಜಿಸುವ ಆರೈಕೆಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಮುಂಗಾರು ಹಬ್ಬ ಈ ಜನಾಂಗದ ಬಹು ಡೊಡ್ಡ ಆಚರಣೆ. ಆ ಹಬ್ಬದಲ್ಲಿ ಇವರು “ಪುಟ್ಟಿ ಪೂಜೆ’’ ಮಾಡುತ್ತಾರೆ. ಇದರಲ್ಲಿ ಹೋಳಿಗೆ, ಕುದಿಸಿದ ಕಾಳು ಪಲ್ಯಕಾಯಿ ಇರುತ್ತದೆ. ಇದು ಇವರ ಸಂಸ್ಕೃÀತಿಯಾಗಿದೆ. ಎತ್ತುಗಳ ಮೆರವಣಿಗೆಯ ಜೊತೆಗೆ ಪುಟ್ಟಿಗಳ ಮೆರವಣಿಗೆ ಸಹ ನಡೆಯುತ್ತದೆ. ನೇಕ ಮಹಿಳೆಯರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಭೂಮಿ ಪೂe,É ದವಸಧಾನ್ಯಗಳ ಪೂಜೆ ವಿಶೇಷವಾಗಿ ಆಚರಿಸುತ್ತಾರೆ. ಇವರ ಮತ್ತೊಂದು ಪ್ರಮುಖ ಹಬ್ಬವೆಂದರೆ ದಸರಾ ಅಥವಾ ಮಹಾನವಮಿ ಹಬ್ಬ. ಈ ಸಂದರ್ಭದಲ್ಲಿ ಇವರು ಒಂಭತ್ತು ದಿನಗಳ ವರೆಗೆ ಲಕ್ಷö್ಮಮ್ಮನ ಗುಡಿಯಲ್ಲಿ ಭಜನೆ ಮಾಡುತ್ತಾರೆ. ಲಲಿತ ಸಹಸ್ರನಾಮ ಪಾರಾಯಣ ಮಾಡುತ್ತಾರೆ, ಕುಂಕುಮಾರ್ಚನೆ ಮಾಡುತ್ತಾರೆ. ಇವರು ಹಾಡುವ ಭಜನಾ ಪದಗಳು ಕನ್ನಡದಲ್ಲೂ ತೆಲುಗಿನಲ್ಲೂ ಇದ್ದಾವೆ. ಆದರೆ ಅವೆಲ್ಲವೂ ದಾಸ ಪದಗಳು, ತತ್ವಪದಗಳು, ವಚನಗಳು ಸ್ತೋತ್ರಪದಗಳಾಗಿವೆ. ಉದಾಹರಣೆಗೆ ಕನ್ನಡದಲ್ಲಿ“ ಶಾರದಾಂಬೆ ಎನ್ನ ಪಾಲಿಸೆ ಸರಸ್ವತಿ ದೇವಿ ಶಾರದಾಂಬ ಎನ್ನ ಪಾಲಿಸೆ” ಈ ಪದವು ಮೂರು ನುಡಿಗಳಲ್ಲಿದ್ದು ಗುರುವು ಕೃಷ್ಣಾವಧೂತ ಎಂಬ ಅಂಕಿತದಲ್ಲಿದೆ. ಇನ್ನೊಂದು ಪುರಂದರದಾಸರ ಕೀರ್ತನೆ “ಭಾಗ್ಯಾದ ಲಕ್ಷಿö್ಮ ಬಾರಮ್ಮ’’ ನಂತಹ ಹಾಡುಗಳನ್ನು ಹಾಡುವ ರೂಢಿಯಿದೆ. “ ಅಡಿಗಡಿಗೆ ಮಾಡುವೆ ನಿಮ್ಮಸ್ತೋತ್ರ ಗಣಪತಿ ಪಾಲಿಸೋ ಪಾರ್ವತಿ ಪುತ್ರ’’ ಎಬ ಮತ್ತೊಂದು ಪದ. ಇದರಲ್ಲಿ ಗಣಪತಿಯ ವರ್ಣನೆ ಇದೆ.’’ ಇದರಲ್ಲಿ ನಾಲ್ಕು ನುಡಿಗಳಿವೆ. ಅಂಕಿತದ ಐದನೆಯ ನುಡಿ ಬಿಟ್ಟುಹೋಗಿದೆ. “ ತಾಂಡವ ನೂತ್ಯರ(ನೃತ್ಯ) ಗಜಾನನ“ ಎಂಬ ಪದವು ಚಂದ್ರನಿಗೆ ಶಾಪಪಕೊಟ್ಟ ಪ್ರಸಂಗವನ್ನು ಸಾರುತ್ತದೆ. “ಜಯಶ್ರೀ ಶಂಭೂನAದನ ಜಯಶ್ರೀ ಶಂಭೂನAದನ, ಜಯಜಯ ಹರನಂದನ’’ ಎಂಬುವ ಪದವು ಮೂರುನುಡಿಗಳಲ್ಲಿದೆ. ಇದಕ್ಕೆ ಅಂಕಿತವಿಲ್ಲ. ತೆಲಗು ಭಾಷೆಯಲ್ಲಿದೆ. ಇವುಗಳಲ್ಲದೆ ಸ್ತೋತ್ರ ರೂಪದಲ್ಲಿ ಕೆವು ವಚನಗಳಿವೆ.“ ವಿಘ್ನಮಲಕಾದಿ ರ್ತೆಯೌ(?) ಎಂಬುದು ನಾಲ್ಕು ಚರಣದ ವಚನವಾಗಿದೆ.“ ಲೋನ ಚೂಡ ಚೂಡ ಲೋಕಾಭಿರಾಮಂಬು’’ ಎಂಬುದು ಇದುಕೂಡಾ ನಾಲ್ಕು ಚರಣದಲ್ಲಿದೆ.“ ಕುಂಬ ಕುಕ್ಕಕಲಾ ಕುಂದಟ ಪರುಶಲು’’ ಇದು ಕೂಡಾ ನಾಲ್ಕು ಚರಣ ಗಳಲ್ಲಿದೆ. ಹೀಗೆ ಇವರು ಕೈಗೊಳ್ಳುವ ಭಜನಾ ಪದಗಳು ಕನ್ನಡ ಮತ್ತು ತೆಲಗು ಭಾಷೆಯ ಮಿಶ್ರಣದಿಂದ ಕೋಡಿವೆ. ಇವುಗಳ ಕುರಿತಾಗಿ ಇನ್ನೂ ಕ್ಷೇತ್ರಕಾರ್ಯ, ಸಂಶೋಧನೆ ನಡೆಸುವ ಅಗತ್ಯತೆ ಕಂಡುಬರುತ್ತದೆ. ನವರಾತ್ರಿಯಲ್ಲಿ ಒಂದು ದಿನ ಕೋಲಾಟ ಸೇವೆಯನ್ನು ಮಾಡುತ್ತಾರೆ. ದೇವರ ಪೂಜೆಯಲ್ಲಿ ಷೋಡಶೋಪಚಾರವನ್ನು ಪಾಲನೆ ಮಾಡಲಾಗುತ್ತದೆ. ಅದರಲ್ಲಿ ನರ್ತನಸೇವೆಯೂ ಒಂದು ಪ್ರಕಾರವಾಗಿದೆ. ಸೀಗೆ ಹುಣ್ಣಿಮೆ ಮತ್ತು ಗೌರಿ ಹುಣ್ಣಿಮೆಯಂದು ಪುರುಷರೂ ಮಹಿಳೆಯರೂ ಕೋಲು ಹಾಕಿ ಹಾಡುವ ಸಂಪ್ರದಾಯ ನಮ್ಮ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಉಳಿದು ಬಂದಿದೆ. ಹಾಡುಗಾರಿಕೆ ಮತ್ತು ಕೋಲಾಟ ಜನಪದರ ಸಂಸ್ಕೃತಿಯ ತಳಪಾಯವಾಗಿವೆ. ಇದಕ್ಕೆ ಮುನ್ನೂರು ಕಾಪು ಜನಾಂಗ ಹೊರತಾಗಿಲ್ಲಾ. ಆಧುನಿಕತೆಯ ಸ್ಪರ್ಶದಿಂದ ಸ್ವಲ್ಪ ಬದಲಾವಣೆ ಕಂಡುಬAದರೂ ಮೂಲ ಆಚರಣೆಯನ್ನು ಇಲ್ಲಿ ಗುರುತಿಸಬಹುದಾಗಿದೆ. ಈ ನೃತ್ಯ ಸೇವೆಯಲ್ಲಿ ಬಾಲಕಿಯರೂ, ಗೃಹಿಣಿಯರೂ ಪಾಲ್ಗೊಳ್ಳುತ್ತಾರೆ. ದಸಿಮಿಯ ದಿನದಂದು ಆಯುಧಗಳ ಮೆರವಣಿಗೆ ಮಾಡುತ್ತಾರೆ. ಮೂಲತಃ ರಾಜರಲ್ಲಿ ರಾಜ್ಯ ರಕ್ಷಣೆಗೆ ಮೀಸಲಾದ ಇವರಲ್ಲಿ ಕ್ಷಾತ್ರ ತೇಜದ ಪ್ರಭಾವದಿಂದ ಆಚರಿಸುವ ಈ ಹಬ್ಬವು ಮುನ್ನುರು ಕಾಪು ಜನಾಂಗದವರಿಗೆ ಬಹಳ ಮಹತ್ವದ ಆಚರಣೆಯಾಗಿದೆ. ಆಯುಧಗಳ ಪೂಜೆಯನ್ನು ಮಾಡಿ ಶಮೀ ವೃಕ್ಷದ ಪೂಜೆ ಮಾಡಿ ಬನ್ನಿ ಮುಡಿಯುತ್ತಾರೆ. ಈ ಮೆರವಣಿಗೆಯಲ್ಲಿ ಸ್ತಿçÃಯರು ಭಾಗಿಯಾಗುತ್ತಾರೆ. ಶ್ರಾವಣಮಾಸದಲ್ಲಿ ಒಂದು ತಿಂಗಳು ಪ್ರತಿನಿತ್ಯ ರಾತ್ರಿ ಭಜನೆ ಮಾಡುತ್ತಾರೆ. ಪ್ರತಿನಿತ್ಯ ಲಕ್ಷö್ಮಮ್ಮನಿU ಹೊಸಸೀರೆÉ ಅರ್ಪಿಸುತ್ತಾರೆ. ದೇವಿಗೆ ನಿತ್ಯ ಪಂಚಭಕ್ಷ ನೈವೇದ್ಯ ಮಾಡುತ್ತಾರೆ. ಒಂದು ದಿನ ಮಹಿಳೆಯರು ಕುಂಕುಮಾರ್ಚನೆ ಮಾಡುತ್ತಾರೆ. ಅಮವಾಸೆಯಂದು ದೇವಿಗೆ ಪೂಜೆಮಾಡಿ ಭೋಜನ ಮಾಡಿಸಿ ಹಬ್ಬವನ್ನು ಸಂಪನ್ನ ಗೊಳಿಸುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ,ಶ್ರಾವಣಮಾಸದಲ್ಲಿ ಕಡ್ಡಾಯವಾಗಿ ಸಸ್ಯಹಾರವನ್ನು ಸ್ವೀಕರಿಸುತ್ತಾರೆ. ಇವರ ಉಡುಗೆ ತೊಡುಗೆಗಳು ಭಾರತೀಯ ಸಂಪ್ರದಾಯದAತೆ ಇವೆ. ಸೀರೆ-ಕುಪ್ಪಸ, ಕೈತುಂಬಾ ಬಳೆಗಳು, ಹಣೆಯಲ್ಲಿ ಕುಂಕುಮ, ಕಿವಿಯಲ್ಲಿ ಓಲೆಗಳು, ಜಡೆಯಲ್ಲಿ ಹೂಗಳು, ಕಾಲಲ್ಲಿ ಕಡಗ, ಗೆಜ್ಜೆ ,ಪಿಲ್ಲೆ-ಕಾಲುಂಗುರ. ಇವೆಲ್ಲವೂ ಮುತ್ತೆöÊದೆಯ ಚಿನ್ಹೆಗಳೆಂದು ಬಲಾಗಿ ನಂಬಿದ್ದಾರೆ ಮತ್ತು ಪಾಲಿಸುತ್ತಾರೆ. ಕುಟುಂಬ ವ್ಯವಸ್ಥೆಯಂಬುದು ಭಾರತೀಯರಿಗೆ ವಿಶಿಷ್ಟವಾದದ್ದು. ಭಾರತೀಯರ ಕುಟುಂಬ ವ್ಯವಸ್ಥೆಗೆ ಪಾಶ್ಚಾತ್ಯರು ಮಾರು ಹೋಗಿದ್ದಾರೆ ಮತ್ತು ಬಹಳ ಜನ ಅನುಸರಿಸುತ್ತಿದ್ದಾರೆ. ಕುಟುಂಬದಲ್ಲಿ ಆಚರಿಸುವ ಸಂಸ್ಕಾರಗಳು ಅನೇಕವಾಗಿದ್ದರೂ ಪ್ರಮುಖವಾಗಿ ಇಲ್ಲಿ ಹದಿನಾರು ಸಂಸ್ಕಾರಗಳನ್ನು ಗಮನಿಸಬಹುದು. ಅವುಗಳೆಂದರೆ ಜನನದಿಂದ ಮರಣದವರೆಗಿನ ಸಂಸ್ಕಾರಗಳು. ಸ್ತಿçÃಯರು ಹೆರಿಗೆಗೆ ತವರು ಮನೆಗೆ ಹೋಗುತ್ತಾರೆ. ಮಗುವಿನ ಜನನವಾದ ನಂತರ ಮಾಸವನ್ನು ಮನೆಯ ಮುಂದೆ ಬಲಭಾಗದಲ್ಲಿ ಭೂಮಿ ಅಗೆದು ಅದರಲ್ಲಿ ಸೆಗಣಿ ಮತ್ತು ಹತ್ತಿಕಾಳು ಬೇವಿನ ಎಲೆಗಳನ್ನು ಹಾಕಿ
ಭಾರತೀಯ ನ್ಯಾಯ ಶಾಸ್ತç ಮತ್ತು ಮಿತಾಕ್ಷರಿ
ಪ್ರಪಂಚದ ಯಾವುದೇ ಭಾಗದಲ್ಲಿ ನ್ಯಾಯಶಾಸ್ತç ಪ್ರತ್ಯೇಕವಾಗಿ ಬೆಳಿದುಬಂದಿಲ್ಲ. ಆಯಾ ದೇಶದ ಧಾರ್ಮಿಕ ನೆಲೆಯಲ್ಲಿಯೇ ನ್ಯಾಯಶಾಸ್ತç ಬೆಳೆದುಬಂದದ್ದು ಕಂಡು ಬರುತ್ತದೆ.ಭಾರತೀಯ ನ್ಯಾಯ ಪಧ್ಧತಿಯಂತೂ ಧಾರ್ಮಿಕ ನೆಲೆಗಟ್ಟಿನ ಭದ್ರ ಬುನಾದಿಯ ಮೇಲೆ ಬೆಳೆದು ಬಂದಿದೆ. ನ್ಯಾಯವೂ ಧರ್ಮದ ಒಂದು ಭಾಗವಾಗಿರುವುದರಿಂದ ಮಾನವರ ನಡೆ ನುಡಿಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ವಿಶ್ವದ ನ್ಯಾಯ ಶಾಸ್ತçದಲ್ಲಿ ಭಾರತೀಯ ನ್ಯಾಯ ಶಾಸ್ತçವು ಪ್ರಾಚೀನವಾದದ್ದೆಂದು ವಿದ್ವಾಂಸರು ಸಂಶೋಧಿಸಿ ಹೇಳಿರುವುದು ಭಾರತೀಯರ ಹೆಗ್ಗಳಿಕೆಯಾಗಿದೆ. ಕಾಲ ಮತ್ತು ಇತಿಹಾಸದ ದೃಷ್ಟಿಯಿಂದ ಹಿಂದು ನ್ಯಾಯ ಬೆಳವಣಿಗೆಯನ್ನು ಹಲವು ವಿದ್ವಾಂಸರು ಹಲವು ಘಟ್ಟಗಳಲ್ಲಿ ವಿಂಗಡಿಸಿದ್ದಾರೆ.ಅವುಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ೧)ಕಾನೂನು ಹಾಗು ನ್ಯಾಯಶಾಸ್ತçಕ್ಕೆ ಸಂಬAಧಿಸಿದAತೆ ತತ್ವಗಳನ್ನು ಒಳಗೊಂಡ ಧಾರ್ಮಿಕ ಗ್ರಂಥಗಳು. ಈ ಗ್ರಂಥಗಳ ತತ್ವಗಳೇ ಮುಂದೆ ಕಾನೂನುಗಳಾದವು. ೨ ಸ್ಮೃತಿಗಳು, ಧರ್ಮ ಶಾಸ್ತçಗಳು ಮತ್ತು ವ್ಯಾಖ್ಯಾನಗಳು ನಿರ್ದುಷ್ಟವಾಗಿ ನಾಗರೀಕ ಮತ್ತು ಅಪರಾಧ ಸಂಹಿತೆಯ ಅಂಶಗಳನ್ನು ಒಳಗೊಂಡಿವೆ. ಅವುಗಳನ್ನು ಹೀಗೆ ಗುರುತಿಸ ಬಹುದಾಗಿದೆ. ಭಾರತದ ಸನಾತನ ಧರ್ಮಗಳಲ್ಲಿ ಹಿಂದೂ ಧರ್ಮವೂ ಒಂದು. ಹಿಂದು ಎಂದರೆ ಸಿಂಧು ನದಿಯ ತಟದಲ್ಲಿರುವ ಭಾಗ, ಅದು ಹಿಂದುಸ್ಥಾನ. ಹಿಂದುಸ್ಥಾನದಲ್ಲಿ ವಾಸಿಸುವವರು ಹಿಂದುಗಳು. ಪರ್ಶೀಯನ್ನರು ಸಿಂಧು ನದಿಗೆ ಹಿಂದು ಎಂದು ಕರೆಯುತ್ತಿದ್ದರು. ಆದ್ದರಿಂದ ಹಿಂದು ಶಬ್ದ ಜಾರಿಯಲ್ಲಿ ಬಂದಿದೆ. ಪ್ರಸ್ತುತ ಹಿಂದು ಧರ್ಮವು ವಿಶಾಲಾರ್ಥದಲ್ಲಿ ಬಳಕೆ ಗೊಳ್ಳುತ್ತಿದೆ. ಹಿಂದು ಧರ್ಮವೆಂದರೆ ಸನಾತನ, ಶಾಶ್ವತ, ವೇದಾಂತ ಜ್ಞಾನ ಹೊಂದಿರುವುದು ಎಂದು ಮುಂತಾಗಿ ಅರ್ಥೈಸಲಾಗುತ್ತದೆ. ಪ್ರತಿಯೊಂದು ಧರ್ಮಕ್ಕೂ ಅದರೆದೇ ಆದ ಧರ್ಮ ಗ್ರಂಥಗಳಿರುತ್ತವೆ. ಹಣ್ಣಿನ ರಕ್ಷಣೆಗೆ ಸಿಪ್ಪೆಯಿರುವಂತೆ ಸರಿಯಾದ ಮಾರ್ಗದಲ್ಲಿ ಚಲಿಸಲು ಗ್ರಂಥಗಳ ಅವಶ್ಯಕತೆ ಇರುತ್ತದೆ ಎಂದು ರಾಮಕೃಷ್ಣಪರಮಹಂಸರು ಹೇಳುತ್ತಾರೆ. ಹಿಂದುಗಳಿಗೆ ಅನೇಕ ಧರ್ಮಗ್ರಂಥಗಳಿವೆ. ಅವುಗಳಲ್ಲಿ ಯಾವುದು ಶ್ರೇಷ್ಠ ಯಾವುದು ಕನಿಷ್ಠ ಎಂದು ಹೇಳುವಂತಿಲ್ಲಾ. ಹಿಂದು ಧರ್ಮದ ತತ್ವಗಳೆಲ್ಲಾ ವೇದಗಳಲ್ಲಿ ಸಂಗ್ರಹಿಸಿರುವುದರಿAದ ವೇದಗಳನ್ನು ಹಿಂದು ಧರ್ಮದ ಆಧಾರ ಗ್ರಂಥಗಳೆAದು ಗುರುತಿಸಲಾಗುತ್ತದೆ. ಇವು ಅಪೌರುಷೇಯ ಗ್ರಂಥಗಳು. ಎಂದರೆ ಸಾಕ್ಷಾತ್ ಪರಮಾತ್ಮನೇ ಇವುಗಳನ್ನು ಹೇಳಿದ್ದಾನೆ ಎಂಬ ಅಭಿಪ್ರಾಯವಿದೆ.. ಈ ವಾಣಿಯನ್ನು ಕೇಳಿದ್ದು `ಶ್ರುತಿ,’ಅದನ್ನು ನೆನಪಿನಲ್ಲಿ ಇಟ್ಟುಕೊಂಡದ್ದು `ಸ್ಮೃತಿ’ ಎಂದು ಹೇಳಲಾಗುತ್ತದೆ. ಶ್ರುತಿ ಎಂದರೆ ಕೇಳಿಸಿಕೊಂಡದ್ದು, ಜ್ಞಾನ, ವೇದ ಎಂಬ ಅರ್ಥಗಳಿವೆ. ಶ್ರುತಿಯಲ್ಲಿಯ ಜ್ಞಾನವನ್ನು ಋಷಿಮುನಿಗಳು ಕಂಡುಕೊAಡರು. ಇವರನ್ನು ಮಂತ್ರ ದೃಷ್ಟಾರರೆಂದು ಕರೆಯುತ್ತಾರೆ. ಇವುಗಳ ಸಂಗ್ರಹವೇ ವೇದಗಳು. ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವೆಂದು ವಿಭಾಗಿಸಲಾಗಿದೆ. ಋಗ್ವೇದ- ಈ ಗ್ರಂಥವು ಅತ್ಯಂತ ಪ್ರಾಚೀನವಾದದ್ದು. ಇದರಲ್ಲಿ ದೇವ-ದೇವತೆಗಳ ಪ್ರಾರ್ಥನೆ ಇದೆ. ಇದರಲ್ಲಿ ಸೃಷ್ಟಿ ಸ್ಥಿತಿ, ಲಯಗಳ ಕುರಿತು, ಭೂಲೋಕ, ದೇವಲೋಕ ಪಿತೃಲೋಕ ಮುಂತಾಗಿ ಹೇಳಲಾಗಿದೆ. ಇಲ್ಲಿಯ ವಿಚಾರಗಳು ಗಹನವೂ ಗಂಭೀರವೂ ಆಗಿವೆ. ಸಾಯಣಾಚಾರ್ಯರು, ಮಧ್ವಾಚಾರ್ಯರು ಈ ಗ್ರಂಥದ ಮೇಲೆ ಭಾಷ್ಯ ರಚಿಸಿದ್ದಾರೆ. ಯಜುರ್ವೇದ-ಇದರಲ್ಲಿ ಯಜ್ಞಯಾಗಾದಿಗಳ ಕುರಿತು ಮಾಹಿತಿಗಳು ಇವೆ. ರಾಜಸೂಯಾಗ, ಅಶ್ವಮೇಧಯಾಗಗಳ ವಿವರಣೆ ಇದೆ. ಋತ್ವಿಜರು, ಅಧ್ವೆöÊರ್ಯರು ಹೇಳುವ ಮಂತ್ರಗಳ ಕುರಿತಾದ ವಿವರಣೆಗಳಿವೆ. ಇದರಲ್ಲಿ ಶುಕ್ಲಯಜುರ್ವೇದ, ಕೃಷ್ಣಯಜುರ್ವೇದ ಎಂಬ ಪ್ರಕಾರಗಳಿವೆ. ಸಾಮವೇದ- ಸಾಮ ಎಂದರೆ ಗಾನ. ಇದರಲ್ಲಿಯ ಮಂತ್ರಗಳನ್ನು ಗಾನರೂಪದಲ್ಲಿ ದೇವತೆಗಳನ್ನು ಸ್ತುತಿಸಲಾಗುತ್ತದೆ. ಮಂತ್ರಗಳನ್ನು ಸ್ವರ ಲಯ ಬಧ್ಧವಾಗಿ ಹೇಳಬೇಕಾಗುತ್ತದೆ. ಅಥರ್ವಣ ವೇದ-; ಇದು ಪದ್ಯ ಗದ್ಯದಲ್ಲಿ ರೂಪಗೊಂಡ ಶೈಲಿಯನ್ನು ಹೊಂದಿದೆ. ಇದರಲ್ಲಿ ವಿವಾಹ ಪಧ್ಧತಿ, ಶವಸಂಸ್ಕಾರ ಪಧ್ಧತಿ, ಗೃಹನಿರ್ಮಾಣದ ಪಧ್ಧತಿ, ರಾಜನನ್ನು ಆಯ್ಕೆಮಾಡುವ ವಿಧಾನ, ಯುಧ್ಧಗಳ ಕುರಿತು, ತಸ್ಕರ ವಿದ್ಯಗಳ ಕುರಿತು ಆಯುಷ್ಯವರ್ಧನ, ಶ್ರೇಯಸ್ಸು ಇತ್ಯಾದಿ ವಿಷಯಗಳಿವೆ. ಇದನ್ನು ಬ್ರಹ್ಮವೇದವೆಂದೂ ಕರೆಯಲಾಗುತ್ತದೆ. ಇವೆಲ್ಲವುಗಳನ್ನು ವಿಷಯಾಧಾರಿತವಾಗಿ ಕರ್ಮಕಾಂಡ, ಉಪಾಸನಕಾಂಡ, ಜ್ಞಾನಕಾಂಡವೆAದು ವಿಭಾಗಿಸಲಾಗುತ್ತದೆ. ಪ್ರತಿಯೊಂದು ವೇದಗಳನ್ನು ಮೂರು ಭಾಗವಾಗಿ ವಿಭಾಗಿಸಲಾಗುತ್ತದೆ. ೧) ಮಂತ್ರಗಳು, ೨) ಬ್ರಾಹ್ಮಣಕಗಳು ೩)ಉಪನಿಷತ್ತುಗಳು. ಇವುಗಳು ಸ್ತುತಿ ಪದ್ಯಗಳು. ಅಗ್ನಿ.ವರುಣ ಇಂದ್ರಾದಿದೇವತೆಗಳನ್ನು ಹೊಗಳುವ ಪದ್ಯಗಳು. ಬ್ರಾಹ್ಮಣಕಗಳೆಂದರೆ ಯಜ್ಞ-ಯಾಗಾದಿಗಳನ್ನು ಮಾಡುವಾಗ ಹೇಳುವ ಮಂತ್ರಗಳು. ಯಜ್ಞದ ಮಹತ್ವ ಅದರ ಅವಶ್ಯಕತೆ, ಮಾಡುವ ವಿಧಾನವನ್ನು ಹೇಳುತ್ತವೆ. ಉಪನಿಷತ್ತುಗಳೆಂದರೆ ಜ್ಞಾನ ಕಾಂಡಗಳು. `ಉಪ’ ಎಂದರೆ ಹತ್ತಿರ `ನಿ’ ಕೆಳಗೆ (ಷತ್) ಕೆಳಗೆ ಕುಳಿತು ಕಲಿಯುವ ವಿದ್ಯ ಎಂದು ಅರ್ಥ. ಸ್ಥೂಲವಾಗಿ ಹೇಳುವುದಾದರೆ ನಮ್ಮನ್ನು ಪರಮಾತ್ಮನ ಕಡೆಗೆ ಕರೆದೊಯ್ಯುವ ವಿದ್ಯಯಾಗಿದೆ. ಇವು ಧರ್ಮಗ್ರಂಥಗಳ ಆಧಾರ ಸ್ಥಂಭಗಳು. ಇವುಗಳನ್ನು ವೇದಾಂತಗಳೆAದೂ ಕರೆಯಲಾಗುತ್ತದೆ. ಪ್ರಸ್ತುತ ೨೨೦ ಉಪನಿಷತ್ತುಗಳೆವೆಯಂದು ವಿದ್ವಾಂಸರು ಹೇಳುತ್ತಾರೆ. ಅವುಗಳಲ್ಲಿ ೧೦೮ ಪ್ರಾಚೀನ ಉಪನಿಷತ್ತುಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಈಶಾವಾಸ್ಯ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತ್ಯರೇಯ, ತೈತ್ಯರೇಯ, ಛಾಂಡೂಕ್ಯ, ಬೃಹದಾರಣ್ಯಕ, ಕೌಶಿತಕಿ ಮತ್ತು ಶ್ವೇತಾಶ್ವತರ ಬಹು ಮುಖ್ಯವಾದವುಗಳಾಗಿವೆ. ಇವುಗಳಲ್ಲಿ ಹಿಂದೂ ಧರ್ಮದ ಬಹು ಮುಖ್ಯ ಸಾರದ ಅಂಶಗಳು ಇಲ್ಲಿ ವಿವರಿಸಲ್ಪಟ್ಟಿವೆ. ಅತ್ಮ ಸಾಕ್ಷಾತ್ಕಾರದ ವಿಚಾರಗಳನ್ನು ವಿವರಿಸಲಾಗಿದೆ. ಸ್ಮೃತಿ ಎಂದರೆ ನೆನಪಿಟ್ಟುಕೊಳ್ಳುವುದು ಎಂದರ್ಥ. ಶ್ರುತಿಯು ಅನುಭೂತಿಯಾದರೆ ಸ್ಮೃತಿಯು ಅದರ ಸ್ಮರಣೆಯಾಗಿದೆ. ವೇದ ಉಪನಿಷತ್ತಿನಲ್ಲಿರುವ ವಿಚಾರಗಳು ನಮ್ಮ ನಡೆ-ನುಡಿಯಲ್ಲಿ ಬರಲು ಅನೇಕ ರೂಢಿ ಸಂಪ್ರದಾಯಗಳು ಹುಟ್ಟಿಕೊಂಡವು. ಅವುಗಳೆ ಸ್ಮೃತಿಗಳಾದವು. ಇವು ಪೌರುಷೇಯಗಳು. ವೇದಗಳೇ ಇವುಗಳಿಗೆ ಮೂಲ ಆಧಾರವಾಗಿರುವುದರಿಂದ ಇವು ಹಿಂದು ಧರ್ಮದ ಮಹತ್ವದ ಗ್ರಂಥಗಳೆAದು ಗುರುತಿಸಿಕೊಂಡವು. ಇವುಗಳಲ್ಲಿ ಐದು ಭಾಗಗಳಿವೆ ಅವುಗಳೆಂದರೆ ಆಚಾರಸಂಹಿತೆ, ಇತಿಹಾಸ, ಪುರಾಣಗಳು, ಆಗಮಗಳು, ದರ್ಶನಗಳು. ವೇದಗಳು ಶ್ರುತಿಗಳು ಧರ್ಮಗ್ರಂಥಗಳಾಗಿದ್ದರೂ ನ್ಯಾಯ ಪಧ್ಧತಿಯ ಮೂಲಭೂತ ಅಂಶÀಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮಾನವನ ಉನ್ನತ ನಡುವಳಿಕೆಯ ಮೌಲ್ಯಗಳನ್ನು ಕಾಣಬಹುದು.ಸತ್ಯಂ ವದ,ಧರ್ಮಂ ಚರ ಧರ್ಮದಲ್ಲಿ ನಡೆ. `ಮಾತೃದೇವೋ ಭವ’, `ಪಿತೃ ದೇವೋ ಭವ’ ಹೀಗೆ ಈ ಮಾತುಗಳು ಜಾತಿಮತ ಪಂಥವನ್ನು ಮೀರಿ ನಿಲ್ಲುತ್ತವೆ. ಇವು ಸಹಜ ಮತ್ತು ಉದಾತ್ತ ಮಾನವ ಧರ್ಮಗಳಾಗಿವೆ. ಇಂಥ ಮಾತುಗಳೇ ನ್ಯಾಯ ಶಾಸ್ತçದ ಆಧರ ಸ್ತಂಭಗಳಾಗಿವೆ. ಧರ್ಮಶಾಸ್ತçಗಳಲ್ಲಿ ಧರ್ಮಸೂತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಇವುಗಳು ತತ್ವ ಮತ್ತು ಆಚರಣೆಗಳಿಗಾಗಿ ಪ್ರತ್ಯೇಕವಾಗಿ ರೂಪಿಸಲ್ಪಟ್ಟವು. ವಿಷಯಗಳನ್ನು ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಹೇಳುವುದು ಇವುಗಳ ಲಕ್ಷಣವಾಗಿದೆ. ಇವು ಶಾಸ್ತç ಬೋಧಕರಿಗೆ ಕೈಪಿಡಿಗಳಿದ್ದಂತೆ. ಇವುಗಳ ಸಹಾಯದಿಂದಲೆ ಧರ್ಮಜ್ಞರು ನ್ಯಾಯಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವುಗಳ ನಂತರದ ಸ್ಥಾನವೇ ಸ್ಮೃತಿಯದು. ನ್ಯಾಯಶಾಸ್ತç ಬೆಳವಣಿಗೆಯಲ್ಲಿ ಸ್ಮೃತಿಗಳು ಅಧಾರ ಸ್ತಂಭಗಳಾಗಿವೆ. ಇವು ಆಧುನಿಕ ನ್ಯಾಯ ಸಂಹಿತೆಯನ್ನು ಹೋಲುತ್ತವೆ. ಇವುಗಳನ್ನು ಹಿಂದು ನ್ಯಾಯೇತಿಹಾಸದ ಸುವರ್ಣ ಯುಗವೆಂದು ಕರೆಯಲಾಗಿದೆ. ಯಾಕೆಂದರೆ “ಇವುಗಳು ನ್ಯಾಯ ಸಂಹಿತೆಯೊAದಿಗೆ, ನ್ಯಾಯಾಲಯಗಳ ರೂಪರೇಶೆ, ನ್ಯಾಯಾಲಯಗಳ ವರ್ಗೀಕರಣ, ನ್ಯಾಯಾಧೀಶರ ನೇಮಕ, ಅವರ ಅರ್ಹತೆಗಳು, ಕಾನೂನು ಜಾರಿಯ ನಿಯಮಗಳು’’ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಕ್ರಮಬಧ್ಧವಾಗಿ ಬೆಳೆದುಬಂದ ಭಾರತದ ಪಾಚೀನ ನ್ಯಾಯ ಶಾಸ್ತçದ ಪಧ್ದತಿಯನ್ನು ಸ್ಮೃತಿಗಳು ತಿಳಿಸಿಕೊಡುತ್ತವೆ. ಇವರ ಕಾಲವನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಸ್ಮೃತಿಕಾರರಲ್ಲಿ ಮನುವೆ ಅಗ್ರಗಣ್ಯನೆಂದು ಹೇಳಲಾಗುತ್ತದೆ. ಮನುಸ್ಮೃತಿಯ ಕಾಲವನ್ನು ಕ್ರಿ.ಪೂ.೨೦೦ ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಹಲವಾರು ಸ್ಮೃತಿಗಳು ರಚನೆಯಾಗಿದ್ದರೂ ಪ್ರಮುಖವಾಗಿ ಆರು ಸ್ಮçತಿಗಳನ್ನು ಗುರುತಿಸಲಾಗಿದೆ. ಮನುಸ್ಮೃತಿ,ಯಾಜ್ಞವಲ್ಕಸ್ಮೃತಿ, ನಾರದ ಸ್ಮೃತಿ, ಪರಾಶರ ಸ್ಮೃತಿ, ಬ್ರಹ್ಮಸ್ಮೃತಿ, ಕಾತ್ಯಾಯನ ಸ್ಮೃತಿ. ಇವುಗಳಲ್ಲಿ ವ್ಯಾವಹಾರಿಕ ವಿಚಾರಗಳಿಗೆ ಹೆಚ್ಚಾಗಿ ಮಹತ್ವ ಕೊಟ್ಟಿಲ್ಲಾ. ಆನಂತರ ಕಾಲಾನುಕ್ರಮದಲ್ಲಿ ಜನರಲ್ಲಿ ಬೆಳೆದು ಬಂದ ರೂಡಿ ಸಂಪ್ರದಾಯಗಳಿಗೆ ಅನುಗುಣವಾಗಿ ಸ್ಥಾನ ನೀಡಿದ್ದಾರೆ. ಆತ್ಮಸಾಕ್ಷಿಯ ನಡುವಳಿಕೆ ಜ್ಞಾನಿಗಳ ಸದ್ವಿವೇಕವು ನ್ಯಾಯ ಶಾಸ್ತçದ ವ್ಯವಹಾರಿಕ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಿವೆ. ಸ್ಮೃತಿಗಳು ಗಂಭಿರವಾದ ಕಠಿಣವಾದ ಶ್ಲೋಕಗಳನ್ನು ಒಳಗೊಂಡಿದ್ದವು. ಅವುಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿರಲಿಲ್ಲಾ. ಅವುಗಳನ್ನು ಅರ್ಥಮಾಡಿಸಲು ವ್ಯಾಖ್ಯಾನಕಾರರು ಬಂದರು. ಇವರು ಸ್ಮೃತಿಗಳಲ್ಲಿರುವ ಆ ಕಾಲಕ್ಕೆ ಸಂಬAಧಿಸಲಾರದ ವಿರೋಧಾಭಾಸ ವಿಚಾರಗಳನ್ನು ತೆಗೆದು ಸರಿಯಾದ ಅರ್ಥಬರುವಂತೆ ವಿವರಿಸುವ ಕೆಲಸ ಮಾಡಿದರು. ಆಯಾ ಕಾಲಕ್ಕೆ ಪ್ರಸ್ತುತವಾಗುವ ವಿಚಾರವನ್ನು ವಿಶದೀಕರಿಸಿ ಪ್ರಸ್ತುತ ಪಡಿಸಿದರು. ಇದು ಹಿಂದು ನ್ಯಾಯಾಧಿಕರಣದ ಬೆಳವಣಿಗೆಗೆ ಕಾರಣವಾಯಿತು. ವ್ಯಾಖ್ಯಾನಕಾರರು ಬರದೇ ಹೋಗಿದ್ದರೆ ಸ್ಮೃತಿಕಾರರ ಮತ್ತು ಜನರ ನಡುವೆ ಕಂದಕವೇ ಏರ್ಪಡುತ್ತಿತ್ತು. ಸಾಧಾರಣವಾಗಿ ಎಲ್ಲಾ ಸ್ಮೃತಿಗಳಿಗೆ ವ್ಯಾಖ್ಯಾನ ಬರೆಯಲಾಗಿದೆ. ಆದರೆ ಕೆಲವು ಟೀಕೆ ಟಿಪ್ಪಣೆಗಳನ್ನು ಜನ ಒಪ್ಪಿಕೊಂಡಿಲ್ಲಾ. ಕೆಲವನ್ನು ಮನಸಾ ಒಪ್ಪಿಕೊಂಡಿದ್ದಾರೆ. ಅಂಥದರಲ್ಲಿ ವಿಜ್ಞಾನೇಶ್ವರರು ಯಾಜ್ಞವಲ್ಕರ ಸ್ಮೃತಿಗೆ ಬರೆದ ವ್ಯಾಖ್ಯಾನ . ಆ ವ್ಯಾಖ್ಯಾವೇ `ಮಿತಾಕ್ಷರ’. ಇದು ಹನ್ನೆರಡನೆಯ ಶತಮಾನದಲ್ಲಿ ರÀಚನೆಯಾಗಿ ವಿಶ್ವದಾದ್ಯಂತ ಖ್ಯಾತಿ ಪಡೆದುಕೊಂಡಿತ್ತು. ಆದರೆ ಈ ವ್ಯಾಖ್ಯಾನ ಯಾರದು ಎಂದು ತಿಳಿದಿರಲಿಲ್ಲಾ. ಮರತೂರಿನಲ್ಲಿ ದೊರೆತ ಶಾಸನದಲ್ಲಿಯ ವಿಜ್ಞಾನೇಶ್ವರನ ವಿಚಾರವನ್ನು ಮೊಟ್ಟ ಮೊದಲು ಗುರುತಿಸಿದ್ದು ಪಿ.ಬಿ.ದೇಸಾಯಿಯವರು. ಅವರು ಪ್ರಾಚೀನ ಕರ್ನಾಟಕ ಹೊಸಬೆಳಕು ಎಂದು ೧೯೩೨ ರಲ್ಲಿ ಪ್ರಕಟಿಸಿದರು. ಆನಂತರ ಡಾ.ವಿ.ಎಸ್.ಕುಲಕರ್ಣಿಯವರು ೧೯೮೧ ರ ಕರ್ನಾಟಕ ಇತಿಹಾಸ ಅಕಾಡೆಮಿಯ ಮುಖಪುಟ ಇತಿಹಾಸ ದರ್ಶನದಲ್ಲಿ ಪ್ರಕಟಿಸಿದರು. ಅನಂತರ ಲಿಪಿಶಾಸ್ತçಜ್ಞರಾದ ಸೀತಾರಾಮ ಜಾಹಗಿರದಾರ ಅವರು ಶಾಸ್ತಿçÃಯವಾಗಿ ಅಧ್ಯಯನ ಮಾಡಿ ಅದರಲ್ಲಿಯ ಅಂಶಗಳನ್ನು ಪ್ರಕಟಿಸಿದರು. ಮುಂದೆ ಸಂಶೋಧಕರಾದ ಸೂರ್ಯನಾಥ ಕಾಮತ ಅವರು ನಿವೃತ್ತನ್ಯಾಮುರ್ತಿಗಳಾದ ಶ್ರೀರಾಮಾಜೋಯಿಸರ ಗಮನ ಸೆಳೆದರು.ಆಗ ಅವರು ೧೯೯೦ರಲ್ಲಿ ಮರತೂರಿನಲ್ಲಿ `ರಾಷ್ಟಿçಯ ವಿಜ್ಞಾನೇಶ್ವರ ಸ್ಮಾರಕ ಹಾಗೂ ಸಂಶೋಧನ ಕೆಂದ್ರವನ್ನು ಸ್ಥಾಪಿಸಿದರು. ಮರತೂರಿನಲ್ಲಿ ದೊರೆತ ಶಾಸನವು ಭಾರತೀಯ ನ್ಯಾಯಶಾಸ್ತçದ ಮೇಲೆ ಬೆಳಕು ಚಲ್ಲುವ ಮಹತ್ವದ ದಾಖಲೆಯಾಗಿದೆ. ಕ್ರಿ. ಶ. ೧೧೨೩ ಜನೆವರಿ ೬ ನೇ ತಾರೀಕಿನಂದು ಬರೆಯಲಾದ ಈ ಶಾಸನವು ನ್ಯಾಯಶಾಸ್ತçಕ್ಕೆ ಹಾಗೂ ವಿಜ್ಞಾನೇಶ್ವರನ ಕುರಿತಾಗಿ ಮಹತ್ವದ ಅಂಶವನ್ನು ಬೆಳಕಿಗೆ ತಂದಿದೆ. ವಿಜ್ಞಾನೇಶ್ವರನು ಇಂದಿನ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಮಸಿಮಡು ಎಂಬ ಗ್ರಾಮದಲ್ಲಿ ಜನಿಸಿದ್ದಾನೆ. ಇವರ ತಂದೆತಾಯಿ ಕೌಶಿಕ ಗೋತ್ರದ ಸೋಮರಾಜ ಮತ್ತು ಭಾಗ್ಯವಂತೆ. ಈತನ ನಿಜನಾಮ ಕಂಚ. ವಿಜ್ಞಾನೇಶ್ವರ ಎಂಬುದು ಈತನ ಬಿರುದು ಆಗಿರಬಹುದು. ವಿಜ್ಞಾನೇಶ್ವರನ ಹೆಂಡತಿ ಕೇತಿಕಬ್ಬೆ. ಇವರಿಗೆ ನಾಲ್ಕು ಮಕ್ಕಳು. ಅದರಲ್ಲಿ ಕೊನೆಯ ಮಗ ಬೀಚಿರಾಜನು. ಈತನು ಪೆರ್ಗಡೆಯಾಗಿದ್ದು ಅಲಂದೆ ಸಾವಿರ ಉಪವಿಭಾಗದ ಗೊಂಕನಾಡಿನ ಮರತೂರಿನಲ್ಲಿದ್ದು ಶಾಸನ ಬರೆಸಿದುದಾಗಿ ತಿಳಿದು ಬರುತ್ತದೆ. ವಿಜ್ಞಾನೇಶ್ವರ ಬರಿಶಾಸ್ತç ಪಂಡಿತನಲ್ಲಾ, ಶಸ್ತçಪಂಡಿತನೂ ಆಗಿದ್ದ. ವಿಕ್ರಮಾದಿತ್ಯನ ಆಸ್ಥಾನದಲ್ಲಿ ಗೌರವಾನ್ವಿತನಾಗಿದ್ದ ಎಂಬುದು ತಿಳಿದು ಬರುತ್ತದೆ. ಒಟ್ಟಿನಲ್ಲಿ ಕನ್ನಡಿಗರು ಹೆಮ್ಮೆ ಪಡುವ ವ್ಯಕ್ತಿ ಎಂಬುವುದರಲ್ಲಿ ಸಂಶÀಯವಿಲ್ಲ. ಮಿತಾಕ್ಷರ ಹೆಸರೇ ಹೆಳುವಂತೆ ಕಡಿಮೆ ಅಕ್ಷರಗಳಲ್ಲಿ ಕಾನೂನಿನ ಸೂಕ್ಷö್ಮತೆಯನ್ನು, ಸಂಕೀರ್ಣತೆಯನ್ನು, ಆಳ-ವಿಸ್ತಾರವನ್ನು, ಮತ್ತು ಸಂಕೀರ್ಣತೆಯನ್ನು ಸಂಶಯಾತೀತವಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ ಸಾರ್ವಕಾಲಿಕ ಶ್ರೇಷ್ಠಗ್ರಂಥ. ಇದು ಧರ್ಮಸೂತ್ರಗಳನ್ನು ಹೋಲುತ್ತದೆ. ಹನ್ನೆರಡನೆಯ ಶತಮಾನದ ಸಂದರ್ಭದಲ್ಲಿ ಸಂವಹನ ಸಂಕರ್ಪಕವಿಲ್ಲದೇ ಇದ್ದ ಸಂದರ್ಭದಲ್ಲಿ ಇಡೀ ಭಾರತವನ್ನು ವ್ಯಾಪಿಸಿದ್ದು ಮತ್ತು ಜನಮಾನಸದಲ್ಲಿ ಉಳಿದಿದ್ದು ವಿಶೇಷವೇ ಸರಿ. ಹನ್ನೊಂದುನೂರು ವರ್ಷಗಳ ನಂತರವೂ ಕೌಟಿಲ್ಯನ ಅರ್ಥಸಾಸ್ತçದ ನಂತರ ನ್ಯಾಯಶಾಸ್ತç ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಮಿತಾಕ್ಷರ ಉಳಿದು ಬಂದಿರುವುದು ವಿಶೇಷವಾಗಿದೆ. ಕಾಲಗರ್ಭದಲ್ಲಿ ನಾಶವಾಗದೆ, ಪರಕೀಯರದಾಳಿಗೆ ಬಲಿಯಾಗದೆ, ಬೇರೆ ಸಂಸ್ಕೃತಿಯ ಪ್ರಭಾವಕ್ಕೆ ಬಲಿಯಾಗದೆ ಪ್ರಸ್ತುತತೆಯನ್ನು ಕಳೆದುಕೊಳ್ಳದೇ ಇರುವುದು ವಿಶೇಷವಾಗಿದೆ. ಮಿತಾಕ್ಷರ ವಿಲ್ಲದೆ ಭಾರತೀಯ ನ್ಯಾಯಶಾಸ್ತçವನ್ನು ಊಹಿಸುವುದು ಕಷ್ಟವಾಗಿದೆ. ಇಂದಿಗೂ ನ್ಯಾಯಾಧೀಶರು ಮಿತಾಕ್ಷರ ಗ್ರಂಥವನ್ನು ಆಕರ ಗ್ರಂಥವನ್ನಾಗಿ ನೋಡುತ್ತಾರಂತೆ. ಮಿತಾಕ್ಷರ `ಯಾಜ್ಞವಲ್ಕö್ಯಸ್ಮçತಿ’ ಗೆ ಬರೆದ ವ್ಯಾಖ್ಯಾನ. ಇದು ಮನುಸ್ಮೃತಿಯ ನಂತರ ಬಂದ ಮಹತ್ವದ ಸ್ಮೃತಿಯಾಗಿದೆ. ಇದರಲ್ಲಿ ಭಾರತೀಯರ ಸಾಮಾಜಿಕ, ರಾಜಕೀಯ, ನ್ಯಾಯಿಕ ಪಧ್ಧತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸುವ ಅತ್ಯಂತ ಮಹತ್ವದ ಸ್ಮೃತಿಯಾಗಿದೆ. ರಾಜ್ಯಾಂಗ,ನ್ಯಾಯಾAಗ ಕಾರ್ಯಾಂಗ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸಾರುತ್ತದೆ. ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಎಲ್ಲಾ ಅಗತ್ಯ ಅಂಶಗಳನ್ನು ಪ್ರತಿಪಾದಿಸುತ್ತದೆ. ಆಚಾರ ವಿಚಾರ, ವ್ಯವಹಾರ ಧಾರ್ಮಿಕ ನಡುವಳಿಕೆ, ಪ್ರಾಯಶ್ಚಿತ,ಮಾಲಿಕ -ನೌಕರನ ಸಂಬAಧ, ತೆರಿಗೆಪದ್ಧತಿ, ಮದುವೆ ಮುಂಜಿ ಮುಂತಾದ ವಿಧಿ ವಿಧಾನಗಳ ಕುರಿತು ಪ್ರತಿಪಾದಿಸುತ್ತದೆ. ಯಾಜ್ಞವಲ್ಕರು ಮನುವಿನ