ಅಕ್ಕಮಹಾದೇವಿಯ ವಚನಗಳಲ್ಲಿ ಪ್ರತಿಮೆಗಳು

                                      ಅಕ್ಕಮಹಾದೇವಿ ಕನ್ನಡದ ಮೊದಲ ಕವಿಯತ್ರಿ,ಅಕೆ ರಚಿಸಿದ ವಚನಗಳು ಸಂಖ್ಯಾತ್ಮಕವಾಗಿಯೂ,ಗುಣಾತ್ಮಕವಾಗಿಯೂ ಮೌಲಿಕವಾಗಿವೆ.ಬಗೆದಷ್ಟೂ ಹೊಸಹೊಸ ವಿಚಾರಗಳು ಬಿಚ್ಚಿಕೊಳ್ಳುತ್ತ ಆಲೋಚನೆಗೆ ತೊಡಗಿಸುತ್ತವೆ. ತಾತ್ವಿಕ,ಸಾಮಾಜಿಕ, ಧಾರ್ಮಿಕ,,ಸಾಹಿತ್ಯಿಕ ವಿಚಾರಗಳು ಆಕೆಯ ಅಬಿವ್ಯಕ್ತಿಯ ವೈಶಿಷ್ಟö್ಯಗಳಾಗಿವೆ.ಭಾವಗೀತಾತ್ಮಕ ಬರವಣೆಗೆಯಿಂದ ಜೀವನದಲ್ಲಿ ಎದುರಾಗುವ, ಎದುರಾಗಬಹುದಾದ ಅನುಭವಗಳನ್ನು ಮಾರ್ಮಿಕವಾಗಿ ಸೂಚಿಸುತ್ತಾಳೆ.ಸಾಹಿತ್ಯಿಕ ಗುಣಗಳು ಸಹಜವಾಗಿ ವಚನದಲ್ಲಿ ಬಂದಿರುವುದರಿAದ ಓದುಗರಿಗೆ ಅನುಭವ ವೇದ್ಯವಾಗುತ್ತವೆ.  ಪ್ರಸ್ತುತ ಅಕ್ಕನದು ಕವಿ ಮನಸ್ಸು.ಕಾವ್ಯಕ್ರೀಯೆಯಲ್ಲಿ ಗಾಢವಾಗಿ ಚಿಂತನೆಗೆ ಒಳಗಾಗಿ ಅಭಿವ್ಯೆಕ್ತಿಸುವಾಗ ಪ್ರತಿಮೆಗಳು ಹುಟ್ಟಿಕೊಳ್ಳುತ್ತವೆ.P Àವಿ ತನ್ನ ಭಾವಗಳನ್ನು ಶಬ್ದಚಿತ್ರಗಳ ಮೂಲಕ ಹೇಳುವ ವಿಧಾನವೇ ಪ್ರತಿಮೆಯ ಕೆಲಸ. ಇವು ಬರಿ ಶಬ್ದಚಿತ್ರಗಳಾದರೆ ಸಾಲದು, ಉತ್ತಮ ಕಾವ್ಯಾಂಶಗಳನ್ನು ಹೊಂದಿರಬೇಕು.ಈ ರೀತಿಬಂದ ವಿಚಾರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ .ಮನಸ್ಸಿಗೆ ಮುಟ್ಟುತ್ತವೆ. ಸದಾಕಾಲ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಬದುಕಿನಲ್ಲಿ ಕಷ್ಟನಷ್ಟಗಳು ಎಷ್ಟು ಸಹಜ ಎಂಬುವುದನ್ನು`ಬೆಟ್ಟದಾಮೇಲೊAದು ಮನೆಯಮಾಡಿ’ ಎಂಬವಚನ ಮಾರ್ಮಿಕವಾಗಿ ಧ್ವನಿಸುತ್ತದೆ.ಮನುಷ್ಯನಿಗೆ ಕಷ್ಟಗಳಿಂದ ಬಿಡುಗಡೆ ಇಲ್ಲಾ. ಕಷ್ಟವೇ ಜೀವನ. ಅದರಲ್ಲಿ ಇದ್ದುಕೊಂಡು ಅದರಿಂದ ಬಿಡುಗಡೆ ಪಡೆದುಕೊಳ್ಳುವಲ್ಲಿ ಪ್ರಯತ್ನನಡೆಸಬೇಕು.ಆದರೆ ನಾವುಗಳು ಕಷ್ಟವನ್ನು ಬರಮಾಡಿಕೊಳ್ಳುತ್ತೇವೆ.ಸಂಸಾರ ಸಾಗರದಿಂದ ಹೊರಬರದೆ ಕಲ್ಲ ಹೊತ್ತು ಕಡಲೊಳಗೆ ಮುಳುಗುತ್ತೇವೆ. ಅಲ್ಲದೆ ಕಷ್ಟಗಳು ಬದುಕಿಗೆ ಪಾಠಗಳಾಗುತ್ತವೆ.  `ಚಂದನವ ತೇದೊಡೆ ನೊಂದೆನೆAದು ಕಂಪ ಬಿಟ್ಟೀತೆ, ತಂದು ಸುವರ್ಣವ ಕಡಿದೊಡೆ ಬೆಂದು ಕಳಂಕ ಹಿಡಿಯಿತ್ತೆ’’ಎಂಬಲ್ಲಿ ಆಕೆ ಕೊಡುವ ಪ್ರತಿಮಗಳು ವಿಶೇಷವಾಗಿವೆ. ಕಷ್ಟಗಳು ಸಹಜವಾಗಿಬರುತ್ತವೆ.ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂಬ ವಿಚಾರಗಳು ಪ್ರತಿಮೆಯ ಮೂಲಕ ಸಾಕಾರಗೊಂಡಿವೆ. `ಅಕ್ಕ ಕೇಳವ್ವಾ ನಾನೊಂದು ಕನಸಕಂಡೆ” ಎಂಬ ವಚನ ಅಕ್ಕನ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತದೆ.ತಾತ್ವಿಕ ವಿಚಾರವನ್ನು ಹೇಳುವಾಗ ಕನಸನ್ನು ಹೆಚ್ಚು ಬಳಸಿಕೊಳ್ಳುವುದು ಸಹಜವಾಗಿ ಕಂಡು ಬರುತ್ತದೆ.ಭಕ್ತರಾದವರು ಪ್ರಜ್ಞಾ,ಸುಪ್ತಾವಸ್ಥೆಯಲ್ಲಿ ಕ್ಷಣಕ್ಷಣವೂ ತನ್ನ ಆರಾಧ್ಯ ದೈವದ ಸ್ಮರಣೆಯಲ್ಲಿರುತ್ತಾರೆ,ಇರಬೇಕು.ಯಾವ ವಿಚಾರ ನಿರಂತರವಾಗಿ ಆಲೋಚನೆಗೆ ತೊಡಗುತ್ತದೆಯೋ ಅದು ಕನಸಿನ ರೂಪದಲ್ಲಿ ಬರುತ್ತದೆ ಎಂಬುದು ಮನಶಾಸ್ತçಜ್ಞರ ಅಭಿಪ್ರಾಯ. ಸದಾ ಚನ್ನ ಮಲ್ಲಿಕಾರ್ಜುನನ ಧ್ಯಾನದಲ್ಲಿರುವ ಅಕ್ಕಗೆ ಕನಸು ಕಂಡದ್ದು ಸಹಜವೆ. ಜೊತೆಗೆ ತನ್ನ ಆರಾಧ್ಯ ದೈವವನ್ನು ಕಲ್ಪಿಸಿಕೊಂಡ ಬಗೆ ಅದರಲ್ಲಿ ಚನ್ನಾಗಿ ಮೂಡಿಬಂದಿದೆ. `ಅಕ್ಕಿ ಅಡಕಿತೆಂಗಿನಕಾಯಿ ಕಂಡೆ,ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ ಗೊರವನು” ಎಂಬ ಮಾತುಗಳು ಶಿವನನ್ನುತಾನು ಹೇಗೆ ಕಂಡಿದ್ದಾಳೋ ಹಾಗೆ ನಮಗೂ ತೋರಿಸುವ ಪ್ರಯತ್ನ ಮಾಡುತ್ತಾಳೆ.  ಆರಾಧ್ಯ ದೈವವನ್ನು ಕಾಣುವ ವಿಧಾನವನ್ನು ಪ್ರತಿಮೆಯ ಮೂಲಕ ಅನಾವರಣಗೊಳಿಸಿದ್ದಾಳೆ. ಸಕಲಜೀವನ ಸಾಧನೆಗೆ ಶರೀರ ಪೂರಕವು.ಆದರೆ ಶರೀರಪೋಷಣವೇ ಸಕಲವಲ್ಲ.  ಅದನ್ನೂ ಮೀರಿದ ಸಾಧನೆಗೆ ಅವಕಾಶವಿದೆ.ಆದರೆ ನಾವು ಅದನ್ನು ಅರಿಯದೆ ಶರೀರ ಪೋಷಣೆಗೆ ನಿಲ್ಲುತ್ತೇವೆ.ಅದನ್ನು ಖಂಡಿಸಿ,ಈ ಶರೀರವು              “ಅಮೇಧ್ಯದ ಮಡಿಕೆ,ಮೂತ್ರದ ಕುಡಿಕೆ               ಎಲುವಿನ ತಡಿಕೆ,ಕೀವಿನ ಹಡಿಕೆ               ಸುಡಲೀ ದೇಹವ :ಒಡಲುವಿಡಿದು ಕೆಡದಿರು               ಚನ್ನಮಲ್ಲಿಕಾರ್ಜುನನರಿಯದೆ ಮರುಳೆ” ಎಂದು ಪ್ರತಿಮೆಯ ಮೂಲಕ          ಕಟ್ಟಿಕೊಡುತ್ತಾಳೆ.ಮುಂದುವರೆದು,            “ಊರ ಸೀರೆಗೆ ಅಗಸ ತಡಬಡಗೊಂಬAತೆ             ಹೊನ್ನೆನ್ನದು,ಹೆಣ್ಣೇನ್ನದು,ಮಣ್ಣೇನ್ನದು ಎಂದು ನೆನನೆನದು          ನಿಮ್ಮನರಿಯದ ಕಾರಣ ಕೆಮ್ಮನೆ ಕೆಮ್ಮನೆ ಕೆಟ್ಟö್ಯನಯ್ಯಾ” ಎಂದುವೈಚಾರಿಕತೆಗೆ ಮಹತ್ವ ನೀಡುತ್ತಾಳೆ.          ಭಕ್ತನಾದವಗೆ ಆರ್ತತೆ ಇರಬೇಕು.ತನ್ನ ದೈವವನ್ನು ಕಾಣುವ, ಕೂಡುವ ತವಕ ನೂರ್ಮಡಿಯಾಗಿರಬೇಕು.ಪವಿತ್ರವೂ ,ನಿರಂತರವೂ ಶಾಶ್ವತವೂ ಆಗಿರಬೇಕು.ಅದು ಭಕ್ತನಾವನ ನಿಷ್ಠೆ.ಇಲ್ಲವಾದರೆ ಭಕ್ತಿಯ ವ್ಯಭಿಚಾರವಾಗುತ್ತೆ ಎಂಬುದು ಶರಣರ ಏಕ ದೈವೋಪಾಸನೆಯ ಸಿದ್ಧಾಂತ.ಅದನ್ನು ಅಕ್ಕ      “ಅರಸಿನವ ಮಿಂದು,ಹೊನ್ನದೊಡಗಿಯೆ ತೊಟ್ಟು         ದೇವಾಂಗವನುಟ್ಟೆನೆಲೆ ಪುರುಷ ಬಾರಾ,         ನಿನ್ನ ಬರುವೆನ್ನ ಅಸುವಿನ ಬರವಾದುದೀಗ,’’   ಎಂದಿದ್ದಾಳೆ..ವಧುವರನ ನಿಷ್ಠೆ,ಭಕ್ತಭಗವಂತನನಿಷ್ಠೆಯ ಹೋಲಿಕೆ ನಿಜವಾಗಿಯೂ    ಅರ್ಥವತ್ತಾದದ್ದು.        ಪರಮಾತ್ಮನೇ ಸೂತ್ರಧಾರ.ನಾವೆಲ್ಲಾ ಆತನ ಸೂತ್ರಧಾರಿಗಳು.ಅವ ನಡೆಸಿದಂತೆ ನಡೆಯ,ನುಡಿಯಬೇಕೆಂಬುದನ್ನು          “ಕೋಲತುದಿಯ ಕೋಡಗದಂತೆ,ನೇಣತುದಿಯ ಬೊಂಬೆಯAತೆ,          ಅಡಿದೆನಯ್ಯಾ ನೀನಾಡಿಸಿದಂತೆ,ಆನು ನುಡಿದೆನಯ್ಯ ನೀ ನುಡಿಸಿದಂತೆ,          ಆನು ಇದ್ದೆನಯ್ಯಾ ನೀ ಇರಿಸಿದಂತೆ          ಜಗದ ಯಂತ್ರವಾಹಕ ಚನ್ನ ಮಲ್ಲಿಕಾರ್ಜುನ ಸಾಕೆಂಬನ್ನಕ್ಕ” ಎನ್ನುವಲ್ಲಿ ಸರ್ವಸಮರ್ಪಣೆ,ನಿಷ್ಠೆ,ಸರ್ವರಕ್ಷಕನೆಂಬ ವಿಸ್ವಾಸ ವ್ಯಕ್ತವಾಗುತ್ತದೆ. ಹೀಗೆ ಅಕ್ಕನ ಅನೇಕ ವಚನಗಳಲ್ಲಿ ಅಮೂರ್ತ ಭಾವಗಳ ಮೂರ್ತಪ್ರತಿಮೆಗಳಾಗಿ ಬಳಕೆಯಾಗಿವೆ.ಈ ಪ್ರತಿಮೆಗಳು ಮನಸ್ಸನ್ನು ಜಾಗೃತಗೊಳಿಸಿ ಚಿಂತನೆಗೆ ಒಳಪಡಿಸುತ್ತವೆ.ವಚನಗಳ ಭಾವಗಳ ಜೀವಂತ ಕುರುಹುಗಳಾಗಿವೆ.ಬಿಡಿಬಿಡಿ ವಚನಗಳನ್ನು ಇಡಿಯಗಿ ಸೂತ್ರಿಕರಿಸಲು ಸಾಧ್ಯವಾಗುವಂತೆ ಕಂಡುಬರುತ್ತದೆ. ಆಕೆಯ ಅಭಿವ್ಯಕ್ತಿಗೆ ಸುತ್ತಮುತ್ತಲು ಕಾಣುವ ಪರಿಸರವೇ ವಸ್ತುವಾಗಿವೆ.ಸಾಮಾನ್ಯ ಜನರಿಗೆ ಸಾಮನ್ಯ ವಿಚಾರಗಳಂತೆ ಕಂಡರೂ ಅವುಗಳನ್ನು ಕಾವ್ಯ ವಸ್ತುಗಳನ್ನಾಗಿ ಬಳಸಿಕೊಂಡದ್ದು ವಿಶೇಷವಾಗಿದೆ.ಈಪ್ರತಿಮೆಗಳು ಎಷ್ಟು ಮೂಲ ಭಾವವನ್ನು ಹಿಡಿದಿಡುತ್ತವೆಯೋ ಅಷ್ಟು ಕಾವ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ದೃಶ್ಯಗಳು ಅಕ್ಷರಗಳಾಗಿ ಮಾರ್ಪಟ್ಟು ವಸ್ತು ಸ್ಥಿತಿಯನ್ನು ಮನಮುಟ್ಟುವಂತೆ ರೂಪಿತವಾಗಿವೆ. ಈ ಎಲ್ಲ ಕಾರಣಕ್ಕಾಗಿ ಅಕ್ಕಮಹಾದೇವಿ ಮನದಲ್ಲಿ ಚಿರಂತನವಾಗಿ ಉಳಿದುಬಿಡುತ್ತಾಳೆ. ಡಾ.ಶೀಲಾದಾಸ, ರಾಯಚೂರು.

ರಾಯಚೂರು ಜಿಲ್ಲೆಯ ಹರಿದಾಸರ ನೆಲೆಗಳು

                                         ಕನ್ನಡ ಸಾಹಿತ್ಯ ಪರಂಪರೆಯನ್ನು ಅವಲೋಕಿಸಿದಾಗ ನಡುಗನ್ನಡ ಸಾಹಿತ್ಯ ಜನಪರವಾಗಿ ಜನಮುಖಿಯಾಗಿ ಬೆಳೆದು ಬಂದದ್ದು ಕಂಡುಬರುತ್ತದೆ. ಹಳಗನ್ನಡ ಕವಿಗಳಂತೆರಾಜಾಶ್ರಯದಲ್ಲಿದ್ದು ರಾಜನನ್ನು ಹಾಡಿಹೊಗಳುವ, ಪಾಂಡಿತ್ಯಪೂರ್ಣವಾಗಿ ಕಾವ್ಯರಚಿಸಿ ಭೇಷ್ ಎನ್ನಿಸಿಕೊಳ್ಳುವುದನ್ನು ನಿರಾಕರಿಸಿ `ಇಳೆ ನಿಮ್ಮ ದಾನ ಬೆಳೆೆ ನಿಮ್ಮದಾನ, ಸುಳಿದು ಸೂಸುವ ಗಾಳಿ ನಿಮ್ಮದಾನ ನಿಮ್ಮನುಳಿದು ಅನ್ಯರನು ಹೊಗಳುವ ಕುನ್ನಿಗಳಿಗೇನೆಂಬೆ’ ಎಂಬ ವಚನ ಇಡೀ ನಡುಗನ್ನಡದ ಸಾಹಿತ್ಯದ ಮಾರ್ಗವನ್ನು,ಧೋರಣೆಯನ್ನು ಸ್ಪಷ್ಟವಾಗಿ ನಿರ್ದೇಶಿಸುತ್ತಿದೆ. ಇದೇ ತರಹದ ಧೋರಣೆಯನ್ನು ಹೊಂದಿದವರು ಹರಿದಾಸರು. ಮಧ್ಯಕಾಲೀನ ಸಂದರ್ಭದಲ್ಲಿ ಸಮಾಜ ವಿಪ್ಲವ ಗೊಂಡಿತ್ತು. ಯುದ್ಧಗಳು ಜನರಲ್ಲಿ ಬದುಕಿನ ಭರವಸೆಗಳನ್ನು,ಕನಸುಗಳನ್ನು ನುಚ್ಚುನೂರಾಗಿಸಿತ್ತು. ಈ ಸಂದರ್ಭದಲ್ಲಿ ಹರಿದಾಸರು ಸಮಾಜೋಧಾರ್ಮಿಕ ನೆಲೆಯಲ್ಲಿ ಜನರಲ್ಲಿ ಅರಿವನ್ನು,ಬದುಕಿನಲ್ಲಿ ಭರವಸೆಯನ್ನು ತುಂಬಲು ಕಾರ್ಯತತ್ಪರರಾದರು. ಹರಿದಾಸ ಸಾಹಿತ್ಯವು ನರಹರಿತೀರ್ಥರಿಂದ ಅಂಕುರಗೊAಡು ಶ್ರೀಪಾದರಾಜ.ವಾದಿರಾಜ ಮತ್ತು ವ್ಯಾಸರಾಜರಿಂದ ವಿಕಸಿತಗೊಂಡು ಕನಕ-ಪುರಂದರದಾಸರಲ್ಲಿ ಫಲಪ್ರದವಾಯಿತು. ಆನಂತರ ಪ್ರಸನ್ವೆಂಕಟದಾಸರು,ಮಹಿಪತಿದಾಸರು ಪರಂಪರೆಯನ್ನು ಮುಂದುವರೆಸಿದರು ಇವರ ನಂತರ ಬಂದವರೆ ವಿಜಯದಾಸರು. ಅಂದಿನಿAದ ಇಂದಿನವರೆಗೂ ಎಲ್ಲರನ್ನು ತಮ್ಮ ಸಾಹಿತ್ಯದ ಮೂಲಕ ಎಲ್ಲಾ ಹರಿದಾಸರನ್ನು ಪ್ರಭಾವಿಸಿದ್ದಾರೆ. ಅವರಲ್ಲಿ ಗೋಪಾಲದಾಸರು,ಜಗನ್ನಾಥದಾಸರು,ಪ್ರಾಣೇಶದಾಸರು ಪ್ರಮುಖರು. ಹರಿಸಾಸ ಸಾಹಿತ್ಯಕ್ಕೆ ಮಧ್ವಸಿದ್ಧಾಂತದ ಮೂಲಕ ಭಕ್ತಿಯನ್ನು ಪ್ರಚುರ ಪಡಿಸುವುದೇ ಪ್ರಮುಖ ಪ್ರೇರಣೆಯಾಗಿದೆ. ಇದರೊಂದಿಗೆ ಮತಪ್ರಚಾರ, ಜನಜಾಗೃತಿಯು ಪೂರಕವಾಗಿವೆ. ಹರಿಸರ್ವೂತ್ತಮತ್ವವನ್ನು ಸಾಧಿಸುವುದು, ಸಂಸ್ಕೃತ ವಾಙ್ಮಯವನ್ನು ಕನ್ನಡಿಕರಿಸಿ ಜನರಿಗೆ ಅರಿವುಮೂಡಿಸುವುದು,ಇಹ-ಪರದಲ್ಲಿ ಮುಕ್ತಿಯನ್ನು ನೀಡುವುದೇ ಪ್ರಮುಖ ಧೋರಣೆಯಾಗಿದೆ. ಇದರೊಂದಿಗೆ ಲೋಕಜ್ಞಾನ, ಸಾಮಾಜಿಕ ಅರಿವನ್ನು ಮೂಡಿಸುವುದು ಇವರ ಉದ್ದೇಶವಾಗಿದೆ. ಜನಪರವಾದ ಕಾಳಜಿಉಳ್ಳ ಹರಿದಾಸರು ತಮ್ಮ ವಿಚಾರಗಳ ಅಭಿವ್ಯಕ್ತಿಗಾಗಿ ಜನರಿಗೆ ಸುಲಭವಾಗಿ ನಿಲುಕುವ ಜನಪದ ಭಾಷೆ ಮತ್ತು ಜನಪದ ಲಯಗಳನ್ನು ಬಳಸಿಕೊಂಡರು. ದ್ವಿಪದಿ,ತ್ರಿಪದಿ,ಚೌಪದಿ,ಷಟ್ಪದಿ,ಏಳೆ ರಗಳೆ ಅಕ್ಕರದಂತಹ ಲಯಗಳನ್ನು ಬಳಸಿಕೊಂಡು ಜನರಿಗೆ ಸುಲಭವಾಗಿ ಅರಗುವಂತಹ ಮಾರ್ಗವನ್ನು ಅನುಸರಿಸಿದರು. ಕೀರ್ತನೆ, ಸುಳಾದಿ, ಉಗಾಭೋಗ, ದಂಡಕ, ತತ್ವಸುವ್ವಾಲಿ,ಮುಂಡಿಗೆ,ಸಾAಗತ್ಯ,ಬಯಲಾಟಗಳAಥಹ ಪ್ರಕಾರಗಳನ್ನು ಬಳಸಿಕೊಂಡರು. ಈ ಎಲ್ಲಾ ಪ್ರಕಾರಗಳ ವಿಷಯ ಒಂದೇ ಆದರೂ ಜನರ ಗ್ರಾಹ್ಯಗತಿಯನ್ನು ಅನುಸರಿಸಿ,ಹೇಳುವ ವಿಷಯದ ಗಾಂಭಿರ್ಯವನ್ನು ಅನುಸರಿಸಿ ಈ ಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ. ಹರಿದಾಸರಾಗುವುದೆಂದರೆ ಒಂದು ಸಿದ್ಧಾಂತಕ್ಕೆ ಬದ್ಧರಾಗುವುದು. ಹರಿಸರ್ವೋತ್ತಮನು,ಸರ್ವ ವ್ಯಾಪ್ತನು, ಸರ್ವಸ್ವತಂತ್ರನು, ಜಗತ್ತಿನಲ್ಲಿ ಪಂಚಬೇಧಗಳಿವೆ, ಜಗತ್ತು ಸತ್ಯ,ತಾರತಮ್ಯದಿಂದ ಕೂಡಿದೆ,ಎಂಬವಿಚಾರವನ್ನು ಪ್ರಚುರ ಪಡಿಸುತ್ತಾರೆ. ನವವಿಧ ಭಕ್ತಿಯನ್ನು ವಿವರಿಸುತ್ತ ಅತ್ಮೊದ್ಧಾರದ ಕಡೆ ಗಮನ ಹರಿಸುತ್ತಾರೆ. ಹರಿದಾಸರು ಈಗಾಲೆ ಇದ್ದ ಧರ್ಮದ ಕಟ್ಟುಪಾಡುಗಳನ್ನು ಸಡಿಲಗೊಳಿಸಿ ಸಾಮಾನ್ಯರೂ ಧರ್ಮದ ಅನುಷ್ಠಾನ ಮಾಡಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟರು. ಹರಿದಾಸರಾಗಬೇಕಾದರೆ ಅಂಕಿತ ಪ್ರದಾನವಾಗಬೇಕು. ಅದು ಸ್ವಪ್ನದ ಮುಖಾಮತರ ಇರಬಹುದು, ಅಥವಾ ಗುರುಗಳಿಂದವಾದರೂ ಅಂಕಿತ ಪ್ರದಾನವಾಗಬೇಕು. ಅಂಕಿತ ಪಡೆದುಕೊಂಡ ನಂತರ ಸಾಹಿತ್ಯವನ್ನು ರಚಿಸಬೇಕು ಆವಾಗ ಅದು ಮಾನ್ಯವಾಗುತ್ತದೆ. ಇದು ಹರಿದಾಸ ಸಾಹಿತ್ಯದ ಸ್ಥೂಲವಾದ ಮಾಹಿತಿಯಾಗಿದೆ. ರಾಯಚೂರು ಜಿಲ್ಲೆಯನ್ನು ಹರಿದಾಸರ ತವರೂರು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೆಂದರೆ ಹದಿನೇಳನೇ ಶತಮಾನದಿಂದಲೂ ಪ್ರಸ್ತುತ ದಿನದವರೆಗೂ ಈ ನಾಡಿನಲ್ಲಿ ಅನೇಕ ಹರಿದಾಸರಾಗಿದ್ದಾರೆ. ಅವರ ನೆಲೆಗಳಿಗೆ ಭೇಟಿನೀಡಲು ವ್ಯವಸ್ಥೆಯ ವಿವರ ಹೀಗಿದೆ. ರಾಯಚೂರು ಜಿಲ್ಲೆಯು ಬೆಂಗಳೂರು ಮುಂಬೈ ರೈಲ್ವೆ ಹೆದ್ದಾರಿಯಲ್ಲಿ ಇರುತ್ತದೆ. ಹಾಗೆಯೇ ರಸ್ತೆಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.ಆAದ್ತ,ತೆಲAಗಾಣ ಮತ್ತು ಮಹಾರಾಷ್ಟç ರಾಜ್ಯದೊಂದಿಗೆ ನಿಕಟ ಸಂಪರ್ಕಹೊAದಿದೆ. ಚೀಕಲಪರವಿ- ಇದು ವಿಜಯದಾಸರ ಜನ್ಮಸ್ಥಳವಾಗಿದೆ. ಇಲ್ಲಿ ಅವರು ವಾಸಮಾಡಿದ ಮನೆಯಿದೆ. ವಂಶಸ್ಥರು ವಾಸವಾಗಿದ್ದಾರೆ. ಇವರು ಬಾಲ್ಯದಲ್ಲಿ ಕಡುಬಡತನ ಅನುಭವಿಸಿ ಯಾತ್ರಿಕರೊಂದಿಗೆ ಕಾಶಿ ಮುಂತಾದ ಕ್ಷೇತ್ರಗಳಿಗೆ ಸಂಚರಿಸಿ ಅಧ್ಯಯನ ಮಾಡಿದ್ದಾರೆ. ಇವರಿಗೆ ಸ್ವಪ್ನದಲ್ಲಿ ಪುರಂದರ ದಾಸರು ವಿಜಯದಾಸ ಎಂಬುದಾಗಿ ಅಂಕಿತ ನೀಡಿದ್ದಾರೆ. ಇಲ್ಲಿ ಶ್ರೀಪಾದರಾಜರು ಸ್ಥಾಪಿಸಿದ ದೇವಸ್ಥಾನವಿದೆ. ವಿಜಯದಾಸರು ಕಾಶಿಯಿಂದ ತಂದ ಶಿವನ ಲಿಂಗವಿದೆ.ತುAಗೆ ಉತ್ತರವಾಹಿನಿಯಾಗಿ ಹರಿಯುತ್ತಿದ್ದಾಳೆ. ಅಪರೂಪದ ಸ್ಥಳವಾಗಿದೆ. ಭಕ್ತರು ಹರಕೆ ಹೊತ್ತುಕೊಂಡು ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರವು ರಾಯಚೂರು ಜಿಲ್ಲೆಯ ಮಾನ್ವಿತಾಲ್ಲೂಕಿನಿಂದ ಹದಿಮೂರು ಕಿಲೋಮೀಟರ ಅಂತರದಲ್ಲಿದೆ. ಸರಕಾರಿ ವಾಹನದ ವ್ಯವಸ್ಥೆಯಿದೆ. ಖಾಸಗಿವಾಹನಗಳೂ ಮಾನ್ವಿಯಿಂದ ಲಭ್ಯವಾಗುತ್ತದೆ. ವಿಜಯದಾಸರು ಹರಿದಾಸಸಾಹಿತ್ಯದ ದ್ವಿತೀಯ ಘಟ್ಟದ ಪ್ರಮುಖ ಹರಿದಾಸರಾಗಿದ್ದಾರೆ. ಇವರು ಕೀರ್ತನೆ,ಉಗಾಭೋಗಾ ಮತ್ತು ಐದುನೂರಾ ಐವತ್ತುನಾಲ್ಕು ಸುಳಾದಿಗಳನ್ನು ರಚಿಸಿದ್ದಾರೆ. ಇವರಿಗೆ ಸುಳಾದಿ ದಾಸರೆಂದು ಭಕ್ತರು ಕರೆಯುತ್ತಾರೆ. ಸಂಖ್ಯಾAತ್ಮಕವಾಗಿ ಗುಣಾತ್ಮಕವಾಗಿ ಹೆಚ್ಚು ರಚಿಸಿದವರು ಇವರೇ ಆಗಿದ್ದಾರೆ. ಇವರ ಸಾಹಿತ್ಯವನ್ನು ಅಂತg Àಶಿಸ್ತೀಯ ನೆಲೆಯಲ್ಲಿ ಅಧ್ಯಯನ ಮಾಡುವಷ್ಟು ಮಹತ್ವವನ್ನು ಹೊಂದಿವೆ. ಈ ಕ್ಷೇತ್ರವನ್ನು ಸರಕಾರ ಅಭಿವೃದ್ಧಿ ಪಡಿಸಬೇಕಾಗಿದೆ ಮೊಸರಕಲ್ಲು-: ಇದು ಭಕ್ತಿಯಲ್ಲಿ ಭಾಗಣ್ಣ ಎಂದು ಖ್ಯಾತರಾದ ಗೋಪಾಲದಾಸರ ಜನ್ಮಸ್ಥಳವಾಗಿದೆ. ಇವರು ಜನಿಸಿದ ಮನೆಯಿದೆ. ವಂಶಸ್ಥರು ವಾಸವಾಗಿದ್ದಾರೆ. ಇದು ದೇವದುರ್ಗ ತಾಲ್ಲೂಕಿನಲ್ಲಿದೆ. ಈ ಕ್ಷೇತ್ರಕ್ಕೆ ಆಗಮಿಸಲು ರಾಯಚೂರಿನಿಂದ ಮತ್ತು ಕಲಬುರಗಿಯಿಂದ ಸರಕಾರಿ ಬಸ್ಸಿನ ವ್ಯವಸ್ಥೆಯಿದೆ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ಸಂಕಾಪುರಕ್ಕೆ ತೆರಳುತ್ತಾರೆ. ಸಂಕಾಪುರ ಇಂದಿನ ಆಂದ್ರ ಪ್ರದೇಶದಲ್ಲಿದೆ. ಕಾರಣಾಂತರದಿAದ ಪಕ್ಕದ ಉತ್ತನೂರಿಗೆ ತೆರಳುತ್ತಾರೆ. ಅಲ್ಲಿ ಇದ್ದು ಅಧ್ಯಯನಮಾಡಿ ಜೋತಿಷ್ಯಶಾಸ್ತçದಲ್ಲಿ ಪರಣಿತರಾಗುತ್ತಾರೆ. ದೇಶದೇಶದ ಜನ ಭವಿಷ್ಯ ಕೇಳಲು ಬರುತ್ತಾರೆ. ಅಷ್ಟೇ ಏಕೆ ರಾಜಮಹಾರಾಜರೂ ಬರುತ್ತಾರೆ. ಈ ವಿಷಯ ವಿಜಯದಾಸರಿಗೆ ತಿಳಿಯುತ್ತದೆ. ಅವರು ಭಾಗಣ್ಣನವರಿಗೆ ಜ್ಞಾನವನ್ನು ದುಡ್ಡಿಗಾಗಿ ಮಾರಾಟ ಮಾಡಬಾರದೆಂದು ತಿಳಿಯ ಹೇಳಿ ಗೋಪಾಲವಿಠಲ ಎಂಬ ಅಂಕಿತ ನೀಡುತ್ತಾರೆ. ಆವತ್ತಿನಿಂದ ಗೋಪಾಲವಿಠಲ ಎಂಬ ಅಂಕಿತದಿAದ ಕೀರ್ತನೆ ಸುಳಾದಿ ಉಗಾಭೋಗಗಳನ್ನು ರಚಿಸಿದ್ದಾರೆ ವಿಜಯದಾಸರ ಕಂಕಣಾಕಾರ ಸುಳಾದಿಗೆ ವಿವರಣೆ ನೀಡಿದ್ದಾರೆ. ಇವರ ಕೀರ್ತನೆ ಮತ್ತು ಸುಳಾದಿಗಳಳ್ಲಿ ಶರೀರ ರಚನೆಯ ಮಾಹಿತಿ ತುಂಬಾಚನ್ನಾಗಿ ನೀಡಿದ್ದಾರೆ. ವಿವಿಧ ಅವಯುವಗಳಲ್ಲಿ ವ್ಯಾಪ್ತನಾದ ಭಗವಂತನ ಕುರಿತಾದ ಮಾಹಿತಿ ಇದೆ. ಇವರು ವಿಶೇಷವಾಗಿ ಗಾಯತ್ರಿ ಮಂತ್ರ ಜಪಿಸಿಸಾಧನೆ ಮಾಡಿದ್ದಾರೆ. ಇವರ ಆರಾಧನೆಯನ್ನುಮೊಸರಕಲ್ಲು, ಉತ್ತನೂರು ಮತ್ತು ಸಂಕಾಪುರದಲ್ಲಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಮಾನವಿ- ರಾಯಚೂರಿನಿಂದ ನಲವತ್ತೆಂಟು ಕಿಲೋಮಿಟರ್ ಅಂತರದಲ್ಲಿದೆ. ಇವರದು ಮಾನವಿ ತಾಲ್ಲೂಕಿನ ಬ್ಯಾಗವಾಟ ಜನ್ಮ ಭೂಮಿ. ಮಾನವಿ ಅವರ ಕರ್ಮಭೂಮಿಯಾಗಿದೆ. ಮಾನವಿಯಲ್ಲಿ ಲಕ್ಮೀನರಸಿಂಹದೇವೆರ ಸ್ಥಂಭವಿದೆ. ಅದು ಅವರ ಆರಾಧ್ಯದೈವದ ಪರಮ ಪವಿತ್ರವಾದ ಸ್ಥಳವಾಗಿದೆ.ಇವರ ಪೂರ್ವದ ನಾಮಧೇಯ ಶ್ರೀನಿವಾಸಾಚಾರ್ಯ ಎಂಬುದಾಗಿದೆ. ಇವರು ಮಂತ್ರಾಲಯದ ಶ್ರೀಮಠದಲ್ಲಿ ಅಧ್ಯಯನ ಪೂರೈಸಿ ಪಂಡಿತರೆನಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ವಿಜಯದಾಸರ ಪ್ರಭಾವವೂ ಈ ಭಾಗದಲ್ಲಿ ಹೆಚ್ಚಾಗಿರುತ್ತದೆ.ಮೊದಲು ವಿಜಯದಾಸರನ್ನು ಒಪ್ಪದೇ ಹೋದರೂ ಆನಂತರ ವಿಜಯದಾಸರ ಪರಮ ಶಿಷ್ಯರಾಗುತ್ತಾರೆ. ಇವರಿಗೆ ಬಂದ ಉದರಸೂಲೆಯನ್ನು ಗೋಪಾಲದಾಸರಿಗೆ ಹೇಳಿ ವಾಸಿಮಾಡಿಸಿದ ಕರುಣಾಳುಗಳು. ಜಗನ್ನಾಥದಾಸರಿಗೆ ಪಂಢರಾಪುರದ ಚಂದ್ರಭಾಗ ನದಿಯಲ್ಲಿ ಜಗನ್ನಾಥವಿಠಲ ಎಂಬ ಅಂಕಿತ ಲಭ್ಯವಾಗಿದೆ. ಇವರು ಈ ಅಂಕಿತದಿAದ ಕೀರ್ತನೆ,ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿದ್ದಾರೆ.`ಹರಿಕಥಾಮೃತಸಾರವೆಂಬ ಗ್ರಂಥವನ್ನು ರಚಿಸಿದ್ದಾರೆ. ಈ ಕೃತಿಗೆ ಸಂಸ್ಕೃತದಲ್ಲಿ ಟೀಕೆಯನ್ನು ರಚಿಸಲಾಗಿದೆ. ಸುಧಾ ಓದಿ ಪದಾ ಹಾಡು ಎಂಬ ಮಾತನ್ನು ಬದಲಾಯಿಸಿ ಪದಾ ಹಾಡಿ ಸುಧಾ ಓದು ಎನ್ನುವಂತೆ ರಚಿಸಿದ್ದಾರೆ. ಅನೇಕ ಪಂಡಿತರು ಈ ಕೃತಿಯ ವ್ಯಾಖ್ಯಾನ ಮಾಡಿದ್ದಾರೆ. ಆದರೂ ವಿಷಯದ ಆಳ ಇನ್ನು ಪೂರ್ಣವಾಗಿ ನಿಲುಕಿಲ್ಲ. ಇವರ ಶಿಷ್ಯರೇ ಮಾನವಿಯ ಗುಂಡಾಚಾರ್ಯುರು. ಇವರ ಅಂಕಿತಶ್ಯಾಮಸುAದರ ವಿಠಲ. ಇವರು ಈ ಅಂಕಿತದಿAದ ಕೀರ್ತನೆ ಸುಳಾದಿಗಳನ್ನು ರಚಿಸಿದ್ದಾರೆ. ಇವರು ವಿಶೇಷವಾಗಿ ಬಯಲಾಟಗಳನ್ನು ರಚಿಸಿದ್ದಾರೆ. ಮತ್ತು ಜನರಿಗೆ ಬಯಲಾಟವನ್ನುಕಲಿಸಿದ್ದಾರೆ. ಇವರದು ಬಲ್ಲಟಗಿ ಮಾನ್ವಿ,ಕುರಡಿ ವಿಶೇಷ ಕಾರ್ಯ ಕ್ಷೇತ್ರವಾಗಿದೆ. ಲಿಂಗಸೂಗೂರು-ಇದು ರಾಯಚೂರಿನಿಂದ ಸುಮಾರು ತೊಂಭತ್ತೇಳು  ಕಿಲೋಮಿಟರ ಅಂತದಲ್ಲಿದೆ. ರಾಯಚೂರು ಬೆಳಗಾವಿ ಹೆದ್ದಾರಿಯಲ್ಲಿ ಮತ್ತು ಬೆಂಗಳೂರು ಬೀದರ ಹೆದ್ದಾರಿಯಲ್ಲಿ ಬರುತ್ತದೆ. ಇಲ್ಲಿ ಪ್ರಾಣೇಶದಾಸರು ಮತ್ತು ಇವರ ಪರಿಸರದ ಹರಿದಾಸರ ಕ್ಷೇತ್ರವಾಗಿದೆ. ಇಲ್ಲಿಯ ಮತ್ತೊಂದು ಮಹತ್ವದ ಸಂಗತಿಯAದರೆ ಶ್ರೀವರದೇಂದ್ರ ತೀರ್ಥರ ಬೃÀಂದಾವನವಿದೆ. ಈ ಪವಿತ್ರವಾದ ಪರಿಸರದಲ್ಲಿ ನಾಲ್ಕನೆಯ ಘಟ್ಟದ ಅನೇಕದಾಸರು ಆಗಿಹೋಗಿದ್ದಾರೆ. ನಾಲ್ಕನೆಯ ಘಟ್ಟದ ಹರಿದಾಸರಲ್ಲಿ ಪ್ರಾಣೇಶದಾಸರು ಪ್ರಮುಖರಾಗಿದ್ದಾರೆ. ಇವರ ಕೃಪೆಗೆ ಪಾತ್ರರಾದ ಸುಂದರವಿಠಲ ಅಂಕಿತರಾದ ಶ್ರೀ ಗೋರೇಬಾಳ ಹನುಮಂತರಾಯರು ಬಹಳ ಮುಖ್ಯರಾಗುತ್ತಾರೆ.ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲಿಯನ್ನು ಸ್ಥಾಪಿಸಿ ಹರಿದಾಸ ಸಾಹಿತ್ಯದ ಸಂಗ್ರಹ, ಪ್ರಕಟಣೆ ಮತ್ತು ಮಾರಾಟ ಮಾಡಿದ ತಪಸ್ವಿಗಳು. ತಮ್ಮ ವಯಕ್ತಿಕ ಹಣವನ್ನು ಬಳಸಿಕೊಂಡು ಹರಿದಾಸರ ಅನನ್ಯಸೇವೆ ಸಲ್ಲಿಸಿದ್ದಾರೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕಾರ್ಯವನ್ನು ಇವರುಮಾಡಿದ್ದಾರೆ. ಇಂದು ಅಧ್ಯಯನಕ್ಕೆ ಉಪಲಬ್ಧವಿರುವ ಕೃತಿಗಳು ಗೊರೇಬಾಳ ಹನುಮಂತರಾಯರ ಶ್ರಮದ ದ್ಯೂತಕವಗಿವೆ ,ಇವರು ಕೀರ್ತನೆ,ಸುಳಾದಿಯನ್ನು ರಚಿಸಿದ್ದಾರೆ. ಹರಿದಾಸ ಸಾಹಿತ್ಯದ ಸಂಪಾದನೆಯನ್ನು ಮಾಡಿ ಮಹದುಪಕಾರ ಮಾಡಿದ್ದಾರೆ. ಇವರ ಜನ್ಮ ಸ್ಥ¼ ಗೋರೇಬಾಳÀ.ಇದು ಲಿಂಗಸೂಗೂರಿಗೆ ಹತ್ತಿರವಿರುವ ಕ್ಷೇತ್ರವಾಗಿದೆ. ಇಲ್ಲಿ ವಂಶಸ್ಥರು ವಾಸರಾಗಿದ್ದಾರೆ. ಲಿಂಗಸೂಗೂರು ಹರಿದಾಸ ಸಾಹಿತ್ಯದ ಕೆಂದ್ರವಾಗಿದ್ದು ಈ ಪರಿಸರದಲ್ಲಿ ,ಶ್ರೀಶಪರಾಣೇಶವಿಠಲದಾಸರು,ಗುರುಶ್ರೀ±ಪ್ರಾಣೇಶ ವಿಠಲರು,Àವರದೇಶವಿಠಲರು,ಅನೇಕ ಹರಿದಾಸರು ಆಗಿಹೋಗಿದ್ದಾರೆ. ಎಲೆ ಮರೆಕಾಯಿಯಂತೆ ಅನೇಕರು ಆಗಿಹೋಗಿದ್ದಾರೆ. ಅನೇಕ ವಿದ್ವಾಂಸರು ಇಲ್ಲಿ ವಾಸವಾಗಿದ್ದಾರೆ. ಕೊಪ್ಪರ- ಇದು ದೇವದುರ್ಗ ತಾಲ್ಲೂಕಿನಿಂದ ಹದಿಮೂರು ಕಿಲೋಮೀಟರ ಅಂತರದಲ್ಲಿದೆ. ಕೃಷ್ಣಾನದಿಯ ತೀರದಲ್ಲಿ ನರಸಿಂಹ ದೇವರ ದೇವಸ್ಥಾನವಿದೆ. ಇಲ್ಲಿಯ ಅರ್ಚಕರಾದ ನರಹರಿವಿಠಲಾಂಕಿತರಾದ ಗಿರಿಆಚಾರ್ಯರು ತಪಸ್ವಿಗಳು. ಇವರು ಕೀರ್ತನೆಗಳನ್ನು ರಚಿಸಿದ್ದಾರೆ. ಇವರದು ಕೊಪ್ಪರ ಕ್ಷೇತ್ರವಾಗಿದೆ. ಲಿಂಗದಹಳ್ಳಿ- ಇಲ್ಲಿ ರಾಮದಾಸರ ಆರಾಧನೆಯನ್ನು ವಿಜರಂಭಣೆಯಿAದ ಆಚರಿಸಲಾಗುತ್ತದೆ. ಬಡೇಸಾಬ ಎಂಬಗೃಹಸ್ಥರು ಮೂಲತಃ ಜೋಳದಹೆಡಗಿ ಗ್ರಾಮದವರು. ಇವರು ಬೇರೇಬೇರೆ ಕಾರಣಗಳಿಂದ ಲಿಂಗಸೂಗುರು,ಗೊನವಾರಗಳಲ್ಲಿ ಸಂಚರಿಸಿ ಜ್ಞಾನಸಂಪಾದನೆ ಮಾಡಿದ್ದಾರೆ. ಇವರು ಏಳುನೂರಾ ಐವತ್ತು ಕೀರ್ತನೆಗಳನ್ನು ,ನೂರು ಉಗಾಭೋಗಗಳನ್ನು,ಐದು ಖಂಡಕಾವ್ಯಗಳನ್ನು ಸಂಸ್ಕೃತ ಮತ್ತು ಉರ್ದುಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.ಇವರ ಕೀರ್ತನೆಗಳು ಇಂಗ್ಲೀಷ ಬಾಷೆಯಲ್ಲಿ ತರ್ಜುಮೆ ಗೊಂಡಿವೆ. ಜಾಲಹಳ್ಳಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿಯ ಲಿಂಗದಳ್ಳಿಯಲ್ಲಿ ಇವರ ಆರಾಧನೆ ವೈಭವದಿಂದ ಹಿಂದುಗಳು ಆಚರಿಸುತ್ತಾರೆ. ಧರ್ಮ ಸಮನ್ವಯತೆಗೆ ಹೆಸರಾದ ಕ್ಷೇತ್ರವಾಗಿದೆ. ಅಸಗಿಹಾಳ- ಇದು ರಾಯಚೂರಿನಿಂದ ಸುಮಾರು ಹತ್ತುಕಿಲೋಮೀಟರ ಅಂತರದಲ್ಲಿದೆ.ಇದು ಗೋವಿಂದದಾಸರ ಕ್ಷೇತ್ರವಾಗಿದೆ. ಇವರು ಆರಾಧಿಸಿದ ದೇವಸ್ಥಾನವಿದೆ. ಇಲ್ಲಿ ಯಾವುದೇ ಸ್ಮಾರಕಗಳಿಲ್ಲ. ಆದರೆ ಗೋವಿಂದದಾಸರು ಬಳಸಿದ ವಸ್ತುಗಳನ್ನು ಇವರ ಶಿಷ್ಯರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಾರೆ. ಇವರ ಶಿಷ್ಯ ಪರಂಪರೆ ದಾಸ ಸಂಸ್ಕೃತಿಯನ್ನು ಅನುಷ್ಠಾನ ಮಾಡಿಕೊಂಡು ಮಾದರಿಯಾಗಿದ್ದಾರೆ. ಎಲೆಮರೆಯ ಕಾಯಿಯಂತೆ ಅನೇಕದಾಸರು ಆಗಿಹೋಗಿದ್ದಾರೆ ಮತು ಪ್ರಸ್ತುತ ದಿನಗಳಲ್ಲಿ ರಚನೆ ಮಾಡುತ್ತಿದ್ದಾರೆ. ಹೀಗೆ ದಿನ್ನಿ,ಕವಿತಾಳ, ಪಾಮನಕಲ್ಲೂರು, ಮಸ್ಕಿ,ಸಿಂದನೂರು,ವಟಗಲ್ ಮುಂತಾದ ಸ್ಥಳಗಳಲ್ಲಿ ಹರಿದಾಸರು ಅಗಿಹೋಗಿದ್ದಾರೆ. ಇವರದೇ ಆದ ಯಾವಸ್ಮಾರಕಗಳು ಇಲ್ಲದೇ ಹೋದರು ಅವರು ಜನಿಸಿದ, ವಾಸಿಸಿದ ಮನೆಗಳು ಬಳಸಿದ ವಸ್ತುಗಳು,ಅವರ ಪರಿಸರದಲ್ಲಿ ಬೆಳೆದ ಭಕ್ತಪರಂಪ   ಈ ವಿಷಯವು ಕ್ಷೇತ್ರಕಾರ್ಯವನ್ನು ಬಯಸುತ್ತದೆ. ಸರಕಾರ ಈ ವಿಚಾರದಲ್ಲಿ ಚಿಂತನೆ ನಡಿಸಿ ಈ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಬಹುದಾಗಿದೆ. ಅದರೊಂದಿಗೆ ನಮ್ಮ ಸಂಸ್ಕತಿಯನ್ನು ಉಳಿಸಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯನ್ನು ಕೈಗೊಳ್ಳಬಹುದಾಗಿದೆ. ಡಾ.ಶೀಲಾದಾಸ, ರಾಯಚೂರು.

ವಿಜಯದಾಸರ ಸುಳಾದಿಗಳ “ಸತ್ವ” ಹಾಗು “ಮಹತ್ವ

     ವಿಜಯದಾಸರು ಕನ್ನಡನಾಡು ಕಂಡ ಅಪರೂಪದ ಹರಿದಾಸರು. ಅವರು ಆಡಿದ ಮಾತುಗಳೆಲ್ಲವೂ ಅರಿವಿನ ಕಿರಣಗಳು. ಅನುಭವದ ಆಳದಿಂದ ಹೊರಬಂದ ಮುತ್ತುಗಳು. ಇವರು ಕೀರ್ತನೆ,ಉಗಾಭೋಗ,ಸುಳಾದಿಗಳನ್ನು ರಚಿಸಿದ್ದಾರೆ. ಅಷ್ಟೆಅಲ್ಲ ಸುಳಾದಿದಾಸರೆಂದೆ ಖ್ಯಾತರಾಗಿದ್ದಾರೆ. ಸುಳಾದಿಗಳು ತಾಳ ಪ್ರಧಾನವಾದ ಮಟ್ಟು. ಧೃವ,ಮಠ್ಯ.ರೂಪಕ,ಝಂಪಕ,ತ್ರಿಪುಟ, ಅಟ್ಟತಾಳ, ಹಾಗೂ ಎಕತಾಲಗಳೆಂಬ ಸಪ್ತತಾಳಗಳು ಇರುತ್ತವೆ. ಆದ ಈ ತಾಳಗಳು ಪುನರಾವರ್ತನೆಗೊಳ್ಳುತ್ತವೆ. ಪ್ರತಿ ತಾಳದಲ್ಲಿ ದಾಸರ ಅಂಕಿತವಿರುತ್ತದೆ. ಕೊನೆಯಲ್ಲಿ ಎರಡು ಚರಣಗಳ ‘ಜತೆ’ ಇರುತ್ತದೆ. ಇದು ಇಡೀ ಸುಳಾದಿಯ ಭಾವವನ್ನು ಅಭಿವ್ಯೆಕ್ತಿಸುತ್ತದೆ.  ಸುಳಾದಿಗಳು ಮೊದಲು ಶ್ರೀಪಾದರಾಜರಲ್ಲಿ ಕಂಡು ಬಂದರೊ ,ಹೆಚ್ಚಿನ ಸುಳಾದಿಗಳನ್ನು ರಚಿಸಿದವರೆಂದರೆ ವಿಜಯದಾಸರು. ಇವರು ಐದು ನೊರಏಂಭತ್ತು ಸುಳಾದಿಗಳನ್ನು ರಚಿಸಿದ್ದರೆ. ವಿಜಯದಾಸರ ಸುಳಾದಿಗಳಲ್ಲಿ ತಾತ್ವಿಕ ಮೌಲ್ಯವುಳ್ಳ ರಚನೆಗಳುü ಅಧಿಕವಾಗಿವೆ. ಭಕ್ತಿ ಭಾವದಿಂದ ಹೂರಬಂದ ಅನುಭವದ ಪರಿಣಾಮವಾಗಿ ಗಂಭೀರ ಕೃತಿಗಳು ರಚನೆಯಾಗಿವೆ. ಈ ಕುರಿತಾಗಿ ಗಂಭೀರ ಚಿಂತನೆಗಳು ನಡೆದಿವೆ. ಗೋರೆಬಾಳಹನುಮಂತರಾಯರು ಶ್ರೀವರದೇಂದ್ರ ಹರಿದಾಸಮಂಡಳಿಯ ಅಡಿಯಲ್ಲಿ ವಿಜಯದಾಸರ ಸುಳಾದಿಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಪ್ರಕಟಿಸುವಾಗ ಪ್ರಾರ್ಥನಾಭಾಗ,ಸಾಧನಾಭಾಗ,ಉಪಾಸನಾಭಾಗ, ಸ್ತೋತ್ರಭಾಗ, ತೀರ್ಥಕ್ಷೇತ್ರಮಹಿಮೆ,ಸೃಷ್ಟಿಪ್ರಕರಣ, ಪ್ರಮೇಯಭಾU ಸುಳಾದಿಗಳೆಂದು ವಿಭಾಗಿಸಿ ಪ್ರಕಟಿಸಿದ್ದಾರೆ. ಪ್ರಾರ್ಥಾನಾಭಾಗ ಸುಳಾದಿಯಲ್ಲಿ, ವ್ಯವಹಾರಿಕ ಬದುಕಿನಲ್ಲಿ ಜೀವಿಯು ಅಜ್ಞಾನದಿಂದ ಪಾರಾಗಲು ಹಲವಾರು ತೊಂದರೆಗೆ ಒಳಗಾಗುತ್ತಾನೆ. ಈ ತೊಂದರೆಯಿAದ ಪಾರಾಗಲು ಕರುಣಾಸಾಗರನಾದ ಪರಮಾತ್ಮನಲಿ ್ಲಶರಣುಹೋಗುತ್ತಾನೆ. ವಿಜಯದಾಸರು ಪರರಕಷ್ಟಕಂಡು ಮರುಗಿ ಅವರ ಆಪತ್ತು ಪರಿಹರಿಸಲ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಆ ಸುಳಾದಿಯನ್ನು ಇಂದಿಗೊ ಭಕ್ತರು ಪಠಿಸಿ ಕಷ್ಟ ನಿವಾರಣೆಮಾಡಿಕೊಳ್ಳುತ್ತಿದ್ದಾರೆ. “ವೀರಸಿಂಹನೆ ನಾರಸಿಂಹನೆ’ಸುಳಾದಿ ಬಹಳ ಪ್ರಸಿದ್ದಿ ಯಾಗಿದೆ “ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ ವಿಠಲ,ವಿಠಲವಿಜಯವಿಠಲ ಕರುಣಿ”ಎಂದು ನಾಮಸ್ಮರಣೆಯ ಮಹತ್ವವನ್ನು ಸಾರುತ್ತಾರೆ.ಭವರೋಗ ಕಳೆವವಗೆ ಹಲುರೋಗ ಕಳೆವುದು ಸೋಜಿಗವಲ್ಲ. ಈ ಜನ್ಮ ಸಾರ್ಥಕಮಾಡಿಕೊಳ್ಳುವಂತೆ ಪ್ರೇರೇಪಿಸು ಎಂದು ವಿಜ್ಷಾಪಿಸಿಕೋಳ್ಳುತ್ತಾರೆ. ಸಾಧನಾಭಾಗ ಸುಳಾದಿಗಳಲ್ಲಿ”ಸಾಧನಮಾಡುವವನ ಲಕ್ಷ,ಣ, ಅನುಸರಿಸುವ ಮಾರ್ಗವನ್ನು ನಿರ್ದೆಶಿಸಿದ್ದಾರೆ. ಇಲ್ಲಿ ಭಕ್ತನು ಚಾಂಚಲ್ಯತೆಯನ್ನು ಕಳೆದುಕೊಂಡು ಹರಿಯೆ ಸರ್ವೋತ್ತಮ,ಅವನೇ ಸರ್ವಕರ್ತ,ಸರ್ವಸ್ವತಂತ್ರ,ಸರ್ವವ್ಯಾಪ್ತ,ಎAದು ಧೃಢವಾಗಿ ನಂಬಿರುತ್ತಾನೆ.ಈಮಾರ್ಗದಲ್ಲಿ ನಡೆದು ಧರ್ಮಾಚರಣೆ ಮಾಡಿದರೆ ಜ್ಞಾನ ಉಂಟಾಗುತ್ತದೆ. ಇದಕ್ಕೆ ಸಂಶಯವಿಲ್ಲ. ಸಾಧನಮಾರ್ಗದಲ್ಲಿರುವವರು ಯಾರನಿಂದೆಯನ್ನು ಮಾಡಕೊಡದು. ಸಜ್ಜನರ ಸಂಗ ಬಿದಕೊಡದು,ಫಲಾಪೇಕ್ಷಯಿಂದ ಕರ್ಮಮಾಡಕೊಡದು. ಅನ್ನದಾನದ ಮಹತ್ವ, ಆಹಾರಸೇವಿಸುವಾಗ ಭಗವದವತಾರವನ್ನು ತಿಳಿಯುವ ಬಗೆಎಲ್ಲವೊ ಹರಿಗಾಗಿ ಎಂಬ ಸರ್ವಸಮರ್ಪಣಭಾವ ಇರಬೇಕೆಂದು ಹೇಳುತ್ತಾರೆ.ಉಪಾಸನಾಭಾಗ ಸುಳಾದಿಗಳಲ್ಲಿ”ಉಪಾಸನಾ ಎಂದರೆ ಧ್ಯಾನದಲ್ಲಿ ಮಗ್ನನಾಗು,ವಿಷಯಾದಿಗಳಿಂದ ದೊರವಾಗಿ ಏಕಾಂತದಲ್ಲಿ ಕುಳಿತು ಆಸನ ನಾಗುವುದು.ಕಣ್ಣುಮುಚ್ಚಿ ಕುಳಿತುಕೊಳ್ಳುವದು ಧ್ಯಾನವಲ್ಲ.ಕಾಮಕ್ರೋಧಾದಿಗಳನ್ನು ಅಳಿಸಿ ಸತ್ಸಂಗದಲ್ಲಿದ್ದು, ಸದಾಚಾರದಲ್ಲಿದ್ದು,ಗುರುಗಳಮುಖೇನ ಜ್ಞಾನ ಸಂಪಾದಿಸಿಕೊಳ್ಳಬೇಕು. ಈ ರೀತಿ ಅನೇಕ ಜನ್ಮಗಳಲ್ಲಿ ಸಾಧನೆಮಾಡಿದ ನಂತರ ಬಿಂಬಾಪರೋಕ್ಷವಾಗುವುದು ಎಂದು ಹೇಳಿದ್ದಾರೆ. ನಿರ್ಮಲ ಮನಸಿನಿಂದ ಮಾಡುವ ಕಾರ್ಯಗಳೆಲ್ಲವು ಹರಿಯ ಉಪಾಸನೆಯಾಗಿವೆ. ಸ್ತೋತ್ರಭಾಗ ಸುಳಾದಿಯಲ್ಲಿ ಹರಿಯಮಹಿಮೆ,ಹರಿಯಗುಣ,ಸಾಮರ್ಥ್ಯಗಳೆಲ್ಲವು ಅಡಕವಾಗಿರುತ್ತವೆ.ಭಕ್ತನಾದವನು ಭಗವಂತನ ಗುಣಗಾನ ಮಾಡುತ್ತಾ ಆನಂದದಲ್ಲಿ ಪರವಶನಾಗುತ್ತಾನೆ.ಈ ಭಾಗದಲ್ಲಿ ವೇಂಕಟೇಶ, ನರಸಿಂಹ,ಕಪಿಲನಾಮP ಪರಮಾತ್ಮ,ಧನ್ವಂತ್ರಿ, ದುರ್ಗೆ,ಪ್ರಾಣದೇವರ ಸ್ತೋತ್ರಗಳು ಬರುತ್ತವೆ.ಈ ಸ್ತೋತ್ರಗಳು ಹರಿಗೆ ಸೀಮಿತವಾಗಿರದೆ ದಾಸರ,ಯತಿಗಳ ಕುರಿತೊಇವೆ.ತೀರ್ಥಕ್ಷೇತ್ರ ಮಹಿಮ ಸುಳಾದಿಗಳಲ್ಲಿ ಭಾರತದ ಅನೇಕಪುಣ್ಯ ಕ್ಷೇತ್ರಗಳ ಕುರಿತು ವಿವರಿಸಲಾಗಿ.  ಈ ಸುಳಾದಿಗಳಲ್ಲಿ ಕ್ಷೇತ್ರಗಳ ಮಹತ್ವ, ಪೌರಾಣಿಕ ಹಿನ್ನಲೆ,ಐತಿಹಾಸಿಕ ಹಿನ್ನಲೆ ಕುರಿತಾಗಿ ವಿವರಿಸಲಾಗಿದೆ. ಈ ಕ್ಷೇತ್ರಗಳನ್ನು ಪೊರ್ವ,ಪಶ್ಚಿಮ,ಉತ್ತರ,ದಕ್ಷಿಣ ಕ್ಷೇತ್ರಗಳೆಂದು ವಿಭಾಗಿಸಲಾಗಿದೆ.ಈ ಕ್ಷೇತ್ರಜ್ಞಾನ ಅರಿತು ಸಾಧನ ಮಾಡುವ ಭಕ್ತನಿಗೆ ಭಗವಂತನ ಅನುಗ್ರಹವಾಗುತ್ತದೆ. ಹಾಗೆಯೇ ಭಕ್ತರ ಸಂದರ್ಶನ ಭಾಗ್ಯ ಲಭ್ಯವಾಗುತ್ತದೆ.ಸಜ್ಜನರ ದರ್ಶನದಿಂದ ಅಜ್ಷಾನ ನಾಶವಗುತ್ತದೆ. ವಿಶೇಷವಾಗಿ ತಿರುಪತಿವೇಂಕಟೇಶನ ಕುರಿತಾಗಿ ಮುವ್ವತ್ತಾರು ಸುಳಾದಿಗಳನ್ನು ರಚಿಸಿದ್ದಾರೆ. ಆಹೊಬಲನರಸಿಂಹ,ಪAಢರಾಪುರವಿಠಲ.ಛಾಯ, ಉಡುಪಿಕಾಶಿ,ಹಂಪಿ ಮುಂತಾದ ಅನೇಕ ಕ್ಷೇತ್ರಗಳ ಕುರಿತು ವಿವರಿಸಿದ್ದಾರೆ.  ಸೃಷ್ಟಿ ಪ್ರಕರಣ ಸುಳಾದಿಗಳಲ್ಲಿ”ಹರಿಯೇ ಸರ್ವೋತ್ತಮ,ಲಕ್ಷಿö್ಮಯು ಹರಿಯ ಸಹಚರಳು.ಸರ್ವ ಜೀವ ರಾಶಿಗಳು ಹರಿಯ ಅನುಚರರು . ಜೀವರಾಶಿಗಳಲ್ಲಿಕೆಲವರು ಮುಕ್ತಿ ಯೋಗ್ಯರು.ಇನ್ನು ಕೆಲವರು ಸಾಧನಜೀವಿಗಳು. ಇನ್ನು ಕೆಲವರ ಕರ್ಮಾಚಾರಿಗಳು.ಅವರವರ ಕರ್ಮನುಕ್ಕನುಗುಣವಾಗಿ ಹರಿಯು ಮುಕ್ತಿಯನ್ನು ಕೊಡುತ್ತಾನೆ.ಈ ಸಂದರ್ಭದಲ್ಲಿ ಅತೀವೃಷ್ಟಿ, ಅನಾವೃಷ್ಟಿ,ಪಾತಳ, ಸಂವೃತ್ತಾಗ್ನಿ, ಚಂಡಮಾರುಗಳಿAದ ಸಮಸ್ತ ಜೀವರಾಶಿಗಳ ಲಯಮಾಡುತ್ತಾನೆ.ಬ್ರಹ್ಮನ ದೇಹವನ್ನು ಟೋಪ್ಪಿಗೆಯನ್ನಾಗಿ ಮಾಡಿಕೊಂಡು, ರುದ್ರನ ದೇಹವನ್ನು ನೂಪುರವನ್ನಾಗಿಮಾಡಿಕೂಂಡುನರ್ತನ ಮಾಡಲಾಗಿ ಸಕಲ ಜೀವರಾಶಿಗಳು ಲಯ ಹೂಂದಿ ಹರಿಯ ಉದರವನ್ನು ಸೇರುತ್ತವೆ.ಈ ನಂತರ ಹರಿಯ ಎಂಭತ್ತೇಳು ವರ್ಷದ ಕೂನೆಯರಾತ್ರಿಯೋಗ ನಿದ್ರೆಯಲ್ಲಿರಲು ದುರ್ಗೆ ಸ್ತೋತ್ರ ಮಾಡಲು ನಿದ್ದೆಮಾಡಿ ಎಚ್ಚತ್ತವನಂತೆ ಹರಿಯು ಲಕ್ಷಿö್ಮ ಸಹಿತಾಗಿ ಸೃಷ್ಟಿಯ ಕಾರ್ಯಕ್ಕೆ ತೂಡಗುತ್ತಾನೆ.ಮುಕ್ತಬ್ರಹ್ಮಾದಿಗಳಿಗೆ ಹಯಮುಖನಾಗಿ ಜ್ಞಾನನೀಡಿ, ಇವರ ಸಂತೋಷಕ್ಕಾಗಿ ನದಿ, ವನ, ಪರ್ವತ, ಸೃಷ್ಟಿಯಾದವು.ನಂತರ ಜೀವ ರಾಶಿಗಳಸೃಷ್ಟಿ.ಇದರಲ್ಲಿತ್ರ‍್ರಿವಿಧ. ಆನಂತರ ದಶಾವರಣ ಬ್ರಹ್ಮಾಂಡಸೃಷ್ಟಿ ಮಾಡುತ್ತಾನೆ.ಈ ಎಲ್ಲ ಸೃಷ್ಟಿಯನ್ನು ಹರಿಯು ತಾನೆ ಇಷ್ಟಪಟ್ಟು ಮಾಡಿದಸೃಷ್ಟಿ ಇದಾಗಿದೆ. ಪ್ರಮೆಯ ಭಾಗ ಸುಳಾದಿಗಳಲ್ಲಿ ಪ್ರಮೇಯದ ವಿಚಾರಗಳನ್ನು ಕಾಣುತ್ತೇವೆ. ಹರಿಯು ಸರ್ವೋತ್ತಮನು, ಜಗತ್ತು ಸತ್ಯವಾದದ್ದು, ತತ್ವದಿಂದ ಇರುವದು ಭೇದ, ತಾರತಮ್ಯ ಭಾವದಿಂದರುವ ಜೀವರು ಹರಿಯ ಅನುಚರರು, ವಿಷಯಸ್ಪರ್ಷವಿಲ್ಲದ ನಿಜ ಸುಖಾನುಭವವೇ ಮುಕ್ತಿ, ಮುಕ್ತಿಗೆ ಭಕ್ತಿಸಾದನೆ. ಪ್ರತ್ಯP್ಷ ಅನುಮಾನ, ಆಗಮಗಳೇ ಮೂರು ಪ್ರಮಾಣಗಳು, ಸಕಲಾಗಮಗಳಿಂದ ವೇದ್ಯನಾದವನು ದೇವರು.ಪರಮಾತ್ಮನು ಬಿಂಬ ಸ್ವರೂಪಿ.ಸಕಲ ಜೀವ ರಾಶಿಗಳು ಪ್ರತಿ ಬಿಂಬರು.ಪರಮಾತ್ಮನ ಪ್ರೇರಣೆ ಇಲ್ಲದೆತೃಣಮಪಿ ಚಲತಿ ಎಂಬ ಭಾವವನ್ನು ತಿಳಿದುಕೂಂಡು ಹರಿಯ ದರ್ಶನಾಪೇಕ್ಷಿಗಳಾಗಿರಬೇಕು. ಹರಿಯೆ ಸರ್ವಜ್ಙನೆಂಬ ಜ್ಞಾನ ಮನದಲ್ಲಿ ಮೂಡಬೇಕು.ಸರ್ವಪ್ರಮೇಯಗಳ ಮೂಲಕ ಹರಿಯನ್ನು ಸಾಕ್ಷಾತ್ಕರಿಸಿಕೂಳ್ಳಬೇಕು.ವಿಜಯದಾಸರು ಮಧ್ವಸಿದ್ದಾಂತವನ್ನುತರ್ಕ, ನ್ಯಾಯ, ಶಾಸ್ತಾದಿಗಳ ಮೂಲಕ ವಿವರಿಸಿದರು.ಇವರು ವಿವರಿಸಿರುವ ತತ್ವಗಳು, ನೀತಿಗಳು, ವಿಷಯ ವಿಮರ್ಶೇಯ ರೀತಿ ಪಂಡಿತರಿಗೂ, ಪಾಮರರಿಗೂ ರುಚಿಸುವಂಥಾದು.ಇವರ ಕಂಕಣಾಕಾರ ಸುಳಾದಿ,ಪಂಚರತ್ನಸುಳಾದಿಗಳು ಪ್ರಖ್ಯಾತಿಯನ್ನು ಪಡೆದಿವೆ.ಇವರಿಂದ ರೊಪಗೊಂಡ ಒಂದೂAದು ಅಕ್ಷರವೊ ಮಂತ್ರಸ್ವರೂಪವಾಗಿವೆ.  ವಿಜಯದಾಸರು ಭಕ್ತಕವಿ.ಕಾವ್ಯಾತ್ಮಕವಾಗಿ ಬರೆಯುವ ಉದ್ದೇಶ ಇಲ್ಲದೇಹೋದರೂ ಕಾವ್ಯಗುಣ ಅವರ ಸಾಹಿತ್ಯದಲ್ಲಿ ಕಂಡುಬರುತ್ತದೆ.ಸುಳಾದಿಗಳಲ್ಲಿ ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಾಗಿದ್ದರೂ ಕನ್ನಡದ ಹರಹು ತಪ್ಪಿಲ್ಲ.”ಕನ್ನಡ ಭಾಷೆಯನ್ನು ಸಮಸಮವಾಗಿ ನೋಡಿದ್ದಾರೆ.ಇದಕ್ಕೆ ಶ್ರೀಪಾದರಾಜರೇ ದಿಟ್ಟ ಹೆಜ್ಜೆ ಹಾಕಿದರು.ಹರಿದಾಸ ಸಾಹಿತ್ಯವು ಮಹಾಅಪರಿಮಿತ ಸಮುದ್ರವಾಗಿದೆ”.ದಾಸರು ಸಾಹಿತ್ಯ ಶರಿಫಗಳು, ಸಾಂಗತ್ಯರತ್ನಾಕರರು, ಛಂದಸ್ಸುಅಲAಕಾರಾಬ್ದಿಮಣಿಗಣಭೂಷಿತರು, ಸದ್ವಿದ್ಯಾವಾರಿಧಿಗಳು ಮಹಾವ್ಯಾಕರಣಾಂಭೂದಿಗಳು ಭಾಷಾಶಬ್ದಲಾಲಿತ್ಯಾದಿಸಾರಸ್ವತರು, ಯತಿ, ಪ್ರಾಸ, ಗಣ, ಪ್ರಾಸಾದಿಕಸಾಗರರು “ಎಂದುಗೋರೇಬಾಳ ಹನುಮಂತರಾಯರು” ವಿಜಯದಾಸರ ‘ಸಂಕ್ಷಿಪ್ತ ಜೀವನ ಚರಿತೆ’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.  ವಿಜಯದಾಸರು ತಮ್ಮ ಸುಳಾದಿಗಳಲ್ಲಿ ರಸಗಳನ್ನು ಬಳಸಿಕೂಂಡಿದ್ದಾರೆ.ಅದರಲ್ಲಿ ಶಾಂತರಸಕ್ಕೆ ವಿಶೇಷ ಸ್ಥಾನನೀಡಿದ್ದಾರೆ,ಶಾಂತರಸದಲ್ಲಿ ವೈರಾಗ್ಯ ಅದರಿಂದುAಟಾಗುವ ತೃಪ್ತಿ ಅನುಪಮವಾದುದು.ನರಸಿಂಹ ಸುಳಾದಿಯಲ್ಲಿ ರೌದ್ರಭಾವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.”ಘಡಿ ಘಡಿಸುತ ಕೋಟಿ ಸಿಡಿಲು ಗಿರೆಗೆ ಬಂದು,ಹೂಡೆದAತೆ ಚೀರಿ ಬೊಬ್ಬಿಡುತ ಲಂಘಿಸಿ…..”ಎAದು ಬಣ್ಣಿಸಿದ್ದಾರೆ. ವಿಜಯದಾಸರು ಅನೇಕ ಅಲಂಕಾರಗಳನ್ನು ಬಳಸಿಕೂಂಡಿದ್ದಾರೆ.  “ಹಸಿದವನಿಗೆ ಷಡುರಸನ್ನಾದೊರಕಿದಂತೆ,  ತೃಷೆಯ ಪೀಡಿತಗೆ ಪೀಯೂಷಮಡು ಸಿಕ್ಕಿದಂತೆ..’  ಎಂದುಉಪಮಾಲಂಕಾರವನ್ನುಬಳಸಿಕೊಂಡಿದ್ದಾರೆ.ಮುಕ್ತಛಂದಸ್ಸನ್ನುಬಳಸಿಕೊAಡಿದ್ದಾರೆ.ಅನುಪ್ರಾಸ,ಯಮಕಗಳು ಹೇರಳವಾಗಿ ಬಳಕೆಯಾಗಿವೆ.”ಹನುಮನ ನಂಬಿದರೆ ಸುಗ್ರೀವ ಗೆದ್ದಾ,ಹನುಮನ ನಂಬಿದ ವಿಭಿಷಣ ಪ್ರಸಿದ್ದ,……”ಎಂದು ಮುಂದುವರಿಯುತ್ತದೆ. ಭಾಷೆಜನರಿಗಾಗಿ.ಜನಪರವಾದ ನಿಲುವುಳ್ಳ ಹರಿದಾಸರು ಜನರಿಗೆ ನಿಲುಕುವಂಥ ಭಾಷೆಯನ್ನು ಬಳಸಿದ್ದಾರೆ.ಉದಾ;ಬಕ್ತಿ>ಭಕುತಿ ,ಯುಕ್ತಿ>ಯುಕುತಿ, ಯಾತ್ರೆ>ಯಾತರೆ, ಹೀಗೆ ಅನೇಕ ಪದಗಳನ್ನು ಉದಾಹರಣೆಕೊಡಬಹುದು.  ವಿಜಯದಾಸರು ನೀಡಿದ ಲೋಕಸಂದೇಶ ಸರ್ವಕಾಲಿಕವಾದುದು, ಜ್ಙಾನ,ಭಕ್ತಿ,ವೈರಾಗ್ಯಕ್ಕೆ ಹೆಚ್ಚಿನ ಮಹತ್ವನೀಡಿದರು. ದುರಿತ ರಾಶಿಯ ಬಿಡಿಸು,ದುಸ್ಸಂಗವ ಕೆಡಿಸು,ನಿರುತ ನಿನ್ನವರೊಳಗೆ ಸುಖಪಡಿಸೊ”ಎಂದು ಬೇಡಿ ಕೊಳ್ಳುತ್ತಾರೆ. “ನಿನ್ನ ನೊಡುವ ಕಾಮವೇ ನನಗಿರಲಿ,ನಿನ್ನ ಬಿಡುವನೆಂಬ ಲೋಬವೇ ನನಗಿರಲಿ,ನಿನ್ನ ಚರಣದಲ್ಲಿ ಮೋಹವೆ ನನಗಿರಲಿ, ನಿನ್ನ ನೆನಪಲ್ಲಿ ಮದವೇನನಗಿರಲಿ,ನಿನ್ನ ದ್ವೇಷರ ಕೊಡ ಕ್ರೋಧವೆ ನನಗಿರಲಿ ,ನಿನ್ನಕೊಂಡುವವರ ಸಂಗವೇನನಗಿರಲಿ,ನಿನ್ನವನೆAದೆAಬೊ ಕೀರುತಿ ನನಗಿರಲಿ.”ಎಂದು ಭಾವ ಸಂಸ್ಕಾರದ ಕುರಿತು ಹೇಳುತ್ತಾರೆ ºಬ್ಬ ಸುಳಾದಿ ,ಮದಿ ಸುಳಾದಿ ,ಕಂಕಾಣಾಕಾರ ಸುಳಾದಿ ಪ್ರಸಿದ್ದಿ ಪಡಿದಿವೆ.ಅನುಭವವಿಲ್ಲದೆಜ್ಞಾನವಿಲ್ಲಾ, ಜ್ಞಾನವಿಲ್ಲದೆ ಮೋಕ್ಷವಿಲ್ಲಎಂದು ಸೊಚಿಸುತ್ತಾರೆ. ವಿಜಯದಾಸರು ಸುಳಾದಿ ಸಾಹಿತ್ಯಕ್ಕೆ ಅಮೊಲ್ಯಕಾಣಿಕೆ ನೀಡಿದ್ದಾರೆ.ಅನೇಕ ಹರಿದಾಸರಿಗೆ ಅಂಕಿತ ಪ್ರದಾನಮಾಡಿದ್ದಾರೆ. ಇವರ ಅನುಗ್ರಹಕ್ಕೆ ಪಾತ್ರರಾದ ಹರಿದಾಸರು ಮುಕ್ತಕಂಠದಿAದ ಕೊಂಡಾಡಿದ್ದಾರೆ,ಇAದಿಗೊ ವಿಜಯದಾಸರ ಸಾಹಿತ್ಯ ಪ್ರಸ್ತುತವಾಗಿದೆ.  ಡಾ, ಶೀಲಾದಾಸ,  ರಾಯಚೂರು

ಶ್ರೀಶ್ರೀಶ್ರೀ ೧೦೦೮ ಶ್ರೀಮಾಧವತೀರ್ಥರು.

      “ ಶ್ರೀಶಾಂಘ್ರಲೀನ ಮನಸೇ ಯತಿಧರ್ಮ ರತಾಯಚ.        ಮಾಧವಾರ್ಯಾಯ ಗುರವೇ ನಮೋ ವೈರಾಗ್ಯಶಾಲಿನೇ’’ “ ಮಾಧವೇಂದ್ರ ಗುರುವರನು ಬಂದಾನೋ ಅಗಣಿತ ಮಹಿಮಾ ಬಂದಾ ಸುಗುಣ ಮೂರುತಿ ಬಂದಾ’ ಎಂದು ವೆಂಕಟವಿಠಲರು ಗುರುಗಳನ್ನು ಕೊಂಡಾಡಿದ್ದಾರೆ.          ಶ್ರೀ ಯಾಜ್ಞವಲ್ಕö್ಯ, ಕಣ್ವಋಷಿಗಳ ಪರಂಪರೆಯಲ್ಲಿಬAದ ಯತಿ ಶ್ರೇಷ್ಠರೆಂದರೆ ಮಾಧವತೀರ್ಥರು. ಶಾಲಿವಾಹನಶೆಕೆ ೧೭೧೮ ನಳನಾಮ ಸಂವತ್ಸರ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದು. ಯಾಕೆಂದರೆ ತಮ್ಮ ಗುರುಗಳ ಆದೇಶ ಮತ್ತು ಅಪೇಕ್ಷೆಯ ಮೇರೆಗೆ ,  ಶುಕ್ಲಯಜುರ್ವೇದದ ಕಣ್ವ ಶಾಖೆಯ ಭಕ್ತರೆಲ್ಲರನ್ನು ಅನುಗ್ರಹಿಸಲು, ಜ್ಞಾನ,ಭಕ್ತಿ,ವೈರಾಗ್ಯ ದಯಪಾಲಿಸಲು ಸನ್ಯಾಸ ದೀಕ್ಷ ಪಡೆದು ಕಂಕಣ ಬದ್ಧರಾದರು. ಈ ಮಠವು ಮಾಧವತೀರ್ಥರ ಆಗಮನದ ನಂತರ ಶ್ರೀಯಾಜ್ಞವಲ್ಕö್ಯ ಗುರುಪರಂಪರೆಯ ಶುಕ್ಲಯಜುರ್ವೇದೀಯ ಕಣ್ವಮಠವೆಂದು ಖ್ಯಾತಿಯನ್ನು ಪಡೆದುಕೊಂಡಿತು.       “ಮಧ್ವಾನುಯಾಯಿ ಬಂದ ಮಾಧವ ತೀರ್ಥಬಂದ        ಬುದ್ದಿನ್ನಿವಾಸಬಂದ ಬುಧಜನ ಪ್ರೀಯ ಬಂದ’ ದಾಸರು ಕೊಂಡಾಡಿದ್ದಾರೆ.        ಇವರ ಪೂರ್ವಾಶ್ರÀಮದ ನಾಮ ಶ್ರೀವೆಂಕಟೇಶಾಚಾರ್ಯ ಎಂಬುದು. ಇವರು ಮಧ್ವಶಾಸ್ತçದಲ್ಲಿ ಪ್ರಕಾಂಡ ಪಂಡಿತರು. ಈಗಿನ ಯಾದಗಿರಿ ಜಿಲ್ಲೆಯ ಸುರುಪುರದಲ್ಲಿ ಜನಸಿದರು. ಇವರ ಪೂರ್ವಾಶ್ರಮದ ವಿವರ ಹೆಚ್ಚಾಗಿ ತಿಳಿದು ಬರುವುದಿಲ್ಲ. ಸುರಪುರ ಅರಸು ಮನೆತನದ ಸಂಸ್ಥಾನವಾಗಿತ್ತು. ಇಂಥಾ ಸಂಸ್ಥಾನದಲ್ಲಿ ಅನೇಕ ವಿದ್ವಾಂಸರು ಇದ್ದರು. ಅವರಲ್ಲಿ ವೇಂಕಟೇಶಾಚಾರ್ಯರು ಮುಖ್ಯರಾಗಿದ್ದರು. ತೇಜಸ್ವಿಗಳು, ಸದಾಚಾರ ಸಂಪನ್ನರು, ವೈದಿಕ ಹಾಗೂ ತಾರ್ಕಿಕ ವಿಚಾರದಲ್ಲಿ ನಿಷ್ಣಾತರಾಗಿದ್ದರು. ವೇದ ವಿಹಿತಾಚರಣೆಯಿಂದ ತಮ್ಮ ಮನೆತನದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದರು. ವಿರಕ್ತರೂ, ದಯಾಮೂರ್ತಿ ಗಳೂ, ಶಾಂತಮೂರ್ತಿಗಳಾÀಗಿದ್ದರು. ಪ್ರತಿನಿತ್ಯ ಬ್ರಾಹ್ಮಿಮೂಹೂರ್ತದಲ್ಲಿ ಎದ್ದು ಆಹ್ನಿಕಾದಿಗಳನ್ನು ಪೂರೈಸಿಕೊಂಡು ಆದಿಶೇಷನ ಉಪಾಸನೆಯಲ್ಲಿಯೇ ನಿರತರಾಗಿರುತ್ತಿದ್ದರು. ಗ್ರಂಥಾವಲೋಕನ, ಪುರಾಣ, ಪ್ರವಚನಾದಿಗಳಲ್ಲಿ ಕಾಲಕಳೆಯುತ್ತಾ ಆದಿಶೇಷನ(ಪರಮಾತ್ಮನ) ಅನುಗ್ರಹಕ್ಕೆ ಪಾತ್ರರಾಗಿದ್ದರು. ಮಹಾಮಹಿಮರ ಜೀವನದಲ್ಲಿ ಏನೇನು ನಡೆಯುತ್ತವೆ ಎಂಬುದು ಯಾರೂ ತಿಳಿಯರು. ಒಮ್ಮೆ ಇವರ ಆರಾಧ್ಯ ದೈವವಾÀದ ಅದಿಶೇಷನು ಸ್ವಪ್ನದಲ್ಲಿ ದರ್ಶನ ನೀಡಿ ಅಪ್ಪಣೆ ನೀಡಿದನು `ಹೇ ಆಚಾರ್ಯ ಶೇಷ್ಠನೇ ಇನ್ನು ಕೆಲದಿನಗಳಲ್ಲಿ ನಿನಗೆ ವಾಯ್ವಾಂಶ ಸಂಭೂತರಾದ ಮಹಾತಪಸ್ವಿಗಳ ದರ್ಶನವಾಗುವುದು. ಅವರ ಅನುಗ್ರಹದಿಂದ ನೀನು ಬೇರೊಂದು ಜನ್ಮವನ್ನು ಹೊಂದುವಿ. ಅವರು ನಿನಗೆ ಹರಿಸರ್ವೋತ್ತಮನ ಕೈಂಕರ್ಯವನ್ನು ದಯಪಾಲಿಸುವರು. ಆ ಕಾರ್ಯವನ್ನು ಪರಿಪಾಲಿಸಿ ಪರಮಪದವನ್ನು ಹೊಂದು’ ಎಂದು ನುಡಿದಂತಾಗುತ್ತದೆ. ಹೀಗೆ ಸ್ವಪ್ನದಲ್ಲಿ ಆದಿಶೇ಼ಷ ದರ್ಶನ ನೀಡಿದ್ದನ್ನು ಕಂಡು ಪುಳಕಿತಗೊಳ್ಳುತ್ತಾರೆ. ಊರಿನ ಪ್ರಮುಖರಾದ ದೇವಪುರದ ಶ್ರೀನಿವಾಸಾಚಾರ್ಯ, ಅಗ್ನಿಹೋತ್ರಿ ಭೀಮಾಚಾರ್ಯ, ರಾಮಾಚಾರ್ಯ,ರಾಜಪುರೋಹಿತ ತಿಮಣಾಚಾರ್ಯ, ಕನಕಗಿರಿ ತಿಮ್ಮಣ್ಣಾಚಾರ್ಯ, ಅಗ್ನಿವರದಾಚಾರ್ಯ ಎಂಬ ಮಹನಿಯರಿಗೆ ತಿಳಿಸುತ್ತಾರೆ. ಅವರೂ ವಿಷಯ ತಿಳಿದು ಚಕಿತರಾಗುತ್ತಾರೆ.       ಸ್ವಪ್ನವೃತ್ತ್ತಾಂತ ನಿಜ ಎನ್ನುವಂತೆ ಅದೇ ಸಮಯಕ್ಕೆ ಸುರಪುರದ ಸಂಸ್ಥಾನಕ್ಕೆ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರಮಠದ ಶ್ರೀಲಕ್ಷಿö್ಮಮನೋಹರ ತೀರ್ಥರು ಆಗಮಿಸುತ್ತಾರೆ. ಅಲ್ಲಿ ಪೂಜಾದಿ ಕಾರ್ಯಗಳನ್ನು, ಭಿಕ್ಷೆಯನ್ನು ಪೂರೈಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪಂಡಿತರಲ್ಲಿ ತೇಜಃಪುಂಜರಾದ ವೆಂಕಟೇಶಾಚಾರ್ಯರನ್ನು ಗಮನಿಸುತ್ತಾರೆ. ಅಲ್ಲಿಯ ಭಕ್ತರ ಸೇವಾ ಕೈಂಕರ್ಯವನ್ನು ಕಂಡು ಆನಂದ ಭರಿತರಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಅದೇ ರಾತ್ರಿ ಅವರಿಗೆ ಸ್ವಪ್ನದಲ್ಲಿ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ `ಯತಿಶ್ರೇಷ್ಠನೇ ನಾಳೆ ನನ್ನ ಪರಮ ಭಕ್ತನಾದ ಅದಿಶೇಷನ ಅಂಶಜನಾದ ಪಂಡಿತನು ನಿನ್ನ ಬಳಿಗೆ ಬರುವನು. ಅವನು ವಾಯುದೇವರು ಪ್ರಸಾರ ಮಾಡಿದ ತತ್ವವನ್ನು ಪ್ರಸಾರಮಾಡಲು ಯೋಗ್ಯನಾದವನು, ಅವನಿಂದ ಕಣ್ವಋಷಿಗಳು ಪೂಜೆಮಾಡಿದ ಶ್ರೀವಿಠಲಕೃಷ್ಣನ ಉಪಾಸನೆಯ ಪರಂಪರೆ ಅವಿಚ್ಚಿನ್ನವಗಿ ಬೆಳೆಯುತ್ತದೆ, ಅವನಿಂದ ಲೋಕದಲ್ಲಿ ಕೀರ್ತಿಯು ಹೆಚ್ಚುತ್ತದೆ’ಎಂದು ಹೇಳಿದಂತಾಗುತ್ತದೆ. ಗುರುಗಳು ಸ್ವಪ್ನತಿಳಿದು ಎಚ್ಚತ್ತು ಆನಂದದಿAದ  ಪುಲಕಿತರಾಗುತ್ತಾರೆ. ಮರುದಿನ ಎಲ್ಲರನ್ನು ಕರೆಯಿಸಿ ಸ್ವಪ್ನ ವೃತ್ತಾಂತವನ್ನು ತಿಳಿಸುತ್ತಾರೆ. ಆಗ ವೆಂಕಟೇಶಾಚಾರ್ಯರು ತಮಗಾದ ಸ್ವಪ್ನ ವೃತ್ತಾಂತವನ್ನು ತಿಳಿಸುತ್ತಾರೆ. ಸಂತುಷ್ಟರಾದ ಗುರುಗಳು ಸಂನ್ಯಾಸದೀಕ್ಷೆ ಉಡಪಿಯಲ್ಲಿ ನೀಡಲು ನಿರ್ಧರಿಸುತ್ತಾರೆ. ಕೆಲದಿನದಲ್ಲಿ ಉಡುಪಿಯಿಂದ ಆಹ್ವಾನ ಬರುತ್ತದೆ. ಉಡುಪಿಯಲ್ಲಿ ಅಷ್ಠಮಠದ ಯತಿಗಳನ್ನು ಕರೆಯಿಸಿ ಎಲ್ಲ ವೃತ್ತಾಂತವನ್ನು ಹೇಳಿ, ಸಂನ್ಯಾ¸ದೀಕ್ಷೆÀ ನೀಡುತ್ತಾರೆ. ಇವರು ಮಹಾಜ್ಞಾನಿಗಳಾದ ಶ್ರೀಯಾಜ್ಞವಲ್ಕö್ಯ ಹಾಗೂ ಕಣ್ವರ ಪರಂಪರೆಯಲ್ಲಿ ಬರುವುದರಿಂದ `ಕಣ್ವಮಠ’ ಎಂದು ಹೆಸರಿಸಿ ಶಾಲಿವಾಹನ ಶೆಕೆ ೧೭೧೮(ಕ್ರಿ.ಶ.೧೭೯೬) ನಳನಾಮ ಸಂವತ್ಸರ ಮಾಘ ಶುದ್ಧ ಪಂಚಮಿಯ ಶುಭ ಮೂಹೂರ್ತದಲಿ ಕಣ್ವತೀರ್ಥದಲ್ಲ್ಲಿ ಸ್ನಾನಾದಿಯ ಬಳಿಕ “ಮಾಧವತೀರ್ಥ’’ಎಂಬ ನಾಮಭಿದಾನದಿಂದ ಸಂನ್ಯಾಸದೀಕ್ಷೆ ನೀಡಿ, ಕಣ್ವಗುರುಗಳಿಂದ ಪೂಜಿಸಲ್ಪಟ್ಟ ಶ್ರೀಮದಾನಂದತೀರ್ಥರ ಕರಾರ್ಚಿತವಾದ ತಾಂಡವಶ್ರೀವಿಠ್ಠಲಕೃಷ್ಣನ ಮೂರ್ತಿಯನ್ನು, ಅಲಂಕಾರರಾರ್ಥವಾಗಿ ಶ್ರೀರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀವೇಣುಗೋಪಾಲಕೃಷ್ಣನ ಪ್ರತಿಮೆಯನ್ನು, ಮುದ್ರೆ, ಬಲಮುರಿಶಂಖ, ನೀಡಿ ಉತ್ತರೋತ್ತರ ಅಭಿವೃಧ್ಧಿಯಾಗಲಿ ಎಂದು ಹಾರೈಸುತ್ತಾರೆ.         ಉಡುಪಿಯಿಂದ ಸುರಪುರಕ್ಕೆ ಆಗಮಿಸುತ್ತಾರೆ.ಸುರಪುರದ ಅರಸರಿಂದ ಭವ್ಯಸ್ವಾಗತವಾಗುತ್ತದೆ. ನಂತರ ವೀರಘಟ್ಟದಲ್ಲಿ  ಶ್ರೀಮಾಧವತೀರ್ಥರು ವಿಠ್ಠಲಕೃಷ್ಣನ ಪೂಜೆ ಗೈದು ಶ್ರೀಯಾಜ್ಞವಲ್ಕö್ಯ ಗುರುಗಳನ್ನು ಕುರಿತು ತಪೋಗೈಯುವರು. ತಪಸ್ಸಿಗೆ ಮೆಚ್ಚಿದ ಶ್ರೀಯಾಜ್ಞವಲ್ಕö್ಯ ಗುರುಗಳು ಶ್ರೀಮಾಧವತೀರ್ಥರಿಗೆ ಶುಕ್ಲಯಜುರ್ವೇದದ ತತ್ವಜ್ಞಾನವನ್ನು ಉಪದೇಶಿಸಿದರಂತೆ. ಹಾಗಾಗಿ ಈ ಮಠವು ಶ್ರೀಶುಕ್ಲಯಜಯರ್ವೇದ ಯಾಜ್ಞವಲ್ಕö್ಯ ಗುರುಪರಂಪರಾಗತ ಕಣ್ವಮಠವೆಂದು ಪ್ರಸಿಧ್ಧಿಯಾಯಿತು. ಆಗಿನ ಸುರಪುರದ ಅರಸರಾದ ರಾಜವೆಂಕಟಪ್ಪನಾಯಕರು ಇವರ ಆಗಮನದಿಂದ  ಸಂತುಷ್ಟಗೊಳ್ಳುತ್ತಾರೆ. ಇವರಿಗೆ ರಾಮಪುರವನ್ನು ದಾನವಾಗಿ ನೀಡುತ್ತಾರೆ. ಆಗ ಗುರುಗಳು `ನಾನು ಸಂನ್ಯಾಸಿ ನನಗೇನು ಬೇಕಿಲ್ಲಾ. ಆದರೆ ಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಇಲ್ಲಿ ವ್ಯವಸ್ಥೆಮಾಡಿಕೊಡಿ’ ಎಂದು ಹೇಳುತ್ತಾರೆ. ಆಗ ಸಂತುಷ್ಟರಾದ ರಾಜಾವೆಂಕಟಪ್ಪ ನಾಯಕ ಶ್ರೀಮಠಕ್ಕೆ ಆಶ್ರಯದಾತರಾಗಿ ಸೇವೆ ಸಲ್ಲಿಸುತ್ತಾರೆ. ಹೀಗೆ ರಾಜಾಶ್ರಯ ಪಡೆದ ಗುರುಗಳು ಪಾಠ ಪ್ರವಚನದಲ್ಲಿ ನಿರತರಾಗುತ್ತಾರೆ. ಶ್ರೀಮಠದ ಭಕ್ತರನ್ನು ಅನುಗ್ರಹಿಸಲು ಸಂಚಾರವನ್ನು ಆರಂಭಿಸುತ್ತಾರೆ. ಅದವಾನಿ, ಅನಂತಪುರ, ಬೆಂಗಳೂರು, ಕೋಲರ, ಚಿಂತಾಮಣಿ ಮುಂತಾದ ನಗರಗಳಿಗೆ ಭೇಟಿನೀಡುತ್ತಾರೆ. ವಿದ್ವತ್ಪೂರ್ಣ ಪ್ರವಚನಗಳಿಂದ ಭಕ್ತರ ಮನಸ್ಸನ್ನು ಗೆಲ್ಲುತ್ತಾರೆ.         ಇವರ ಪೂರ್ವಾಶ್ರಮದ ಗುರುಗಳು, ವೇದಶಾಸ್ತç ಸಂಪನ್ನರಾದ ಜೋಯಿಸ ಧರ್ಮಭಟ್ಟರೆಂಬುವವರು ಮೋಕ್ಷಾರ್ಥಿಗಳಾಗಿ ಸಂನ್ಯಾಸವನ್ನು ಬಯಸುತ್ತಾರೆ. ಅವರ ಅಪೇಕ್ಷೆಯಂತೆ ಸಂನ್ಯಾಸದೀಕ್ಷೆನೀಡಿ `ವಾಮನತೀರ್ಥ’ಎಂದು ನಾಮಾಬಿಧಾನ ಮಾಡುತ್ತಾರೆ. ಇವರ ಬೃಂದಾವನ ಕ್ಷೇತ್ರ ಆದವಾನಿಯ ರಣಮಂಡಲ ಬೆಟ್ಟದಲ್ಲಿದೆ. ಇವರಲ್ಲದೆ ಶ್ರೀವಿಷ್ಣುಪ್ರಿಯತೀರ್ಥರು ಕೂಡಾ ಮೊಕ್ಷಾರ್ಥವಾಗಿ ಸಂನ್ಯಾಸ ಸ್ವೀಕರಿಸುತ್ತಾರೆ. ಇವರ ಬೃಂದಾವನ ಸುರುಪುರದ ಹತ್ತಿರದ ಸೂಗೂರಿನಲ್ಲಿದೆ.        ಆದವಾನಿಯಿಂದ ಅನಂತಪುರಕ್ಕೆ ಆಗಮಿಸುತ್ತಾರೆ. ಆಗಿನ ಅನಂತರಪುರ ಜಿಲ್ಲೆಯ ಕಲೆಕ್ಟçರರಾದ ಮಿ.ಮಂಡ್ರೋಲ್ ಸಾಹೇಬರು ಇವರ ತೇಜಃಪುಂಜ ಸ್ವರೂಪವನ್ನು  ಕಂಡು, ಮಠದ ಇತಿಹಾಸವನ್ನು ತಿಳಿದುಕೊಂಡು ಪ್ರಭಾವಿತರಾಗಿ ಸಕಲ ಮರ್ಯಾದೆಯೊಂದಿಗೆ ಬೀಳ್ಕೊಡುತ್ತಾರೆ. ಈ ವಿಚಾರ ಅನಂತಪುರದ ಗೆಜಿಟೇರಿಯನ್ ದಲ್ಲಿ ದಾಖಲಾಗಿದೆಯಂತೆ. ಹೀಗೆ ಇವರ ಕೀರ್ತಿಪತಾಕೆ ದಿಗಂತಕ್ಕೆ ಹರಡುತ್ತದೆ.  ಸಂಚಾರ ಮಾಡುತ್ತ ಮತ್ತೆ ಅನಂತಪುರಕ್ಕೆ ಆಗಮಿಸುತ್ತಾರೆ. ಅಗ ತಮ್ಮ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಅರಿತು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬುದ್ದಿನ್ನಿಗೆ ಆಗಮಿಸುತ್ತಾರೆ. ಶ್ರೀಮಠದ ಪರಮ ಭಕ್ತರಾದ ಬುದ್ದಿನ್ನಿ ದೇಸಾಯಿ ಮನೆತನದವರು ಸಕಲ ವೈಭವದೊಂದಿಗೆ ಸ್ವಾಗತ ಮಾಡುತ್ತಾರೆ. ಪೂಜಾ, ಭಿಕ್ಷಾದಿಗಳನ್ನು ಪೂರೈಸಿದ ನಂತರ ಶಿಷ್ಯರಲ್ಲಿ ತಾವು ಬೃಂದಾವನಸ್ಥರಾಗುವ ವಿಷಯ ತಿಳಿಸುತ್ತಾರೆ. ದೇಸಾಯಿಯವರು ದುಃಖಿತರಾಗುತ್ತಾರೆ. ವಿಷಯ ತಿಳಿದ ಅನೇಕ ಭಕ್ತರು ತಂಡೋಪ ತಂಡವಾಗಿ ಗುರುಗಳ ದರ್ಶನಾಪೇಕ್ಷಿತರಾಗಿ ಆಗಮಿಸುತ್ತಾರೆ. `ನಾವು ವೃಂದಾವನಸ್ಥರಾಗುವುದನ್ನು ತಿಳಿದು ಚಿಂತಿಸದಿರಿ.ಶ್ರೀ ಆದಿಶೇಷನ ಅನುಗ್ರಹ ಬಲದಿಂದಲೂ, ಶ್ರೀವಿಠಲಕೃಷ್ಣನ ಪ್ರಸಾದದಿಂದಲೂ ನಮ್ಮ ತಪಃಸತ್ವವನ್ನು ಭಕ್ತರ ಉಧ್ಧಾರಕ್ಕಾಗಿ ಬುಧ್ಧಿನ್ನಿ ಕ್ಷೇತ್ರದಲ್ಲಿ ಪ್ರತಿಷ್ಠೆ ಮಾಡಿರುವೆವು. ನಿಮ್ಮ ಭಕ್ತಿಯಂತೆ ನಿಶ್ಚಯವಾಗಿ ಫಲ ದೊರೆಯುವುದು’ ಎಂದು ಶಿಷ್ಯವೃಂದವನ್ನು ಸಮಾಧಾನ ಪಡಿಸುತ್ತಾ, ಶಾಲಿವಾಹನ ಶಕೆ.೧೭೩೨ (ಕ್ರಿ.ಶ.೧೮೧೦)ಶುಕ್ಲನಾಮ ಸಂವತ್ಸರ ಚೈತ್ರಶುಧ್ಧ ತೃತೀಯ ದಿವಸ “ಶ್ರೀಅಕ್ಷೆÆÃಭ್ಯತೀರ್ಥರಿಗೆ’’ ಸಂನ್ಯಾಸದೀಕ್ಷೆ ನೀಡಿ ಹರಿಪುರವನ್ನು ಸೇರುತ್ತಾರೆ. ಇವರ ಆರಾಧನೆಯನ್ನು ಮೂಲ ಬೃಂದಾವನ ಬುದ್ದಿನ್ನಿಯಲ್ಲಿ, ಮೃತ್ತಿಕಾ ಬೃಂದಾವನ ರಾಯಚೂರಿನಲ್ಲಿ, ಮಾಧವತೀರ್ಥರ ತಪೋಭೂಮಿ ವೀರಘಟ್ಟದಲ್ಲಿ, ವಿವಿಧ ನಗರಗಳಲ್ಲಿ, ಭಕ್ತರ ಮನೆಗಳಲ್ಲಿ ಯಥಾಶಕ್ತಿ, ಯಥಾಮತಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಇಂಥಾ ಮಹಾಮಹಿಮರ ಕುರಿತಾಗಿ ಅನೇಕ ಹರಿದಾಸರು ಅಷ್ಟೋತ್ತರವನ್ನು, ಸ್ತೋತ್ರಪದಗಳನ್ನು, ಸುಪ್ರಭಾತ ವನ್ನು ರಚಿಸಿ ಭಕ್ತರಿಗೆ ಪಾರಾಯಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ಭಕ್ತರು ಜಾತಿ -ಮತ -ಪಂಥ ಮೀರಿ ಶ್ರೀಮನ್ಮಾಧವತೀರ್ಥರ ಸೇವೆಯನ್ನು ಮಾಡಿ ಕಾಮಿತ ಫಲವನ್ನು ಪಡೆದುಕೊಂಡಿದ್ದಾರೆ. ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಶ್ರೀಮಠದ ಪರಂಪರೆಯಲ್ಲಿ, ಧರ್ಮಪೀಠ ಸಾಮ್ರಾಜ್ಯದಲ್ಲಿ ವಿರಾಜಮಾನ ರಾದ ಯತಿವರ್ಯರ ವಿವರ ಹೀಗಿದೆ. ಶ್ರೀಶ್ರೀಶ್ರೀ೧೦೦೮ಶ್ರೀವಾಮನತೀರ್ಥರು(ಮೋಕ್ಷಾರ್ಥ)ಆದೋನಿ. ಶ್ರೀಶ್ರೀಶ್ರೀ೧೦೦೮ಶ್ರೀವಿಷ್ಣುಪ್ರಿಯತೀರ್ಥರು(ಮೋಕ್ಷಾರ್ಥ)ಸೂಗೂರು. ಶ್ರೀಶ್ರೀಶ್ರೀ೧೦೦೮ಶ್ರೀಅಕ್ಷೆÆÃಭ್ಯತೀರ್ಥರು,-ಬಿಳಿಭಾವಿ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಧೀಶತೀರ್ಥರು-ಹುಣಸೀಹೊಳೆ. ಶ್ರೀಶ್ರೀಶ್ರೀ೧೦೦೮ಶ್ರೀಕೃಷ್ಣದ್ವೆöÊಪಾಯನತೀರ್ಥರು(ಮೋಕ್ಷಾರ್ಥ)-ಸುರಪುರ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾನಿಧಿತೀರ್ಥರು,-ಬಿಳಿಭಾವಿ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಸಂಪೂರ್ಣತೀರ್ಥರು,-ಗೊರಲೂಟಿ-ಸಿAಧನೂರು ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಧಿರಾಜತೀರ್ಥರು,-ಹುಣಸೀಹೊಳೆ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾವಿರಾಜತೀರ್ಥರು,ಕಮಲಾಪುರ,ವಿಜಯನಗರ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾವಿಜಯತೀರ್ಥರು,ಹುಣಸೀಹೊಳೆ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಮನೋಹರತೀರ್ಥರು,ಹುಣಸೀಹೊಳೆ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾತಪೋನಿಧಿತೀರ್ಥರು,ಹುಣಸೀಹೊಳೆ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಭೂಷಣತೀರ್ಥರು,ಬಿದರಹಳ್ಳಿ,ಬೆಂಗಳೂರು ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಭಾಸ್ಕರತೀರ್ಥರು,ಹುಣಸೀಹೊಳೆ.      ಪ್ರಸ್ತುತ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಕಣ್ವವಿರಾಜತೀರ್ಥರು,ಕಣ್ವಮಠದಪೀಠಾಧಿಪತಿಗ ಳಾಗಿ, ಧರ್ಮಸಾಮ್ರಾಜ್ಯಾಧಿಪತಿಗಳಾಗಿ ಶ್ರೀವಿಠಲಕೃಷ್ಣನ ಸೇವಾಕೈಂಕರ್ಯ ಮಾಡು ತ್ತಿದ್ದಾರೆ. ಶ್ರೀಮಠದ ಎಲ್ಲಾ ಶ್ರೀಪಾದಂಗಳವರು ಭಕ್ತರ ಶ್ರೇಯೋಭಿವೃಧ್ಧಿಗೆ ತಮ್ಮನ್ನು ತಾವು ಸಮರ್ಪಿಸಿ ಕೊಂಡಿದ್ದಾರೆ.  ಶ್ರೀಮಠದ ಪರಂಪರೆಯನ್ನು ಮುಂದುವರೆ ಸಿಕೊಂಡು  ಹೋಗುತ್ತಿದ್ದಾರೆ. ಗುರುಗಳು ನಮಗೆಲ್ಲಾ ಜ್ಞಾನ-ಭಕ್ತಿ-ವೈರಾಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ. ಡಾ.ಶೀಲಾದಾಸ, ರಾಯಚೂರು.

Test Amith Dandin

Test Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith DandinTest Amith Dandin

ಆಧುನಿಕ ಮಹಿಳಾ ಸಾಹಿತ್ಯದ ಹೆಜ್ಜೆ ಗುರುತುಗಳು

ಎರಡು ದಶÀಕದ ಹಿಂದೆ ಯಾರಾದರೂ ಸ್ತಿçà ವಾದಿ, ಮಹಿಳಾಸ್ವಾತಂತ್ರö್ಯದ ಕುರಿತು ಮಾತನಾಡಿದರೆ, ಓ ಇವರು ಸ್ತಿçÃವಾದಿ ಎಂದು ಹಾಸ್ಯಮಾಡುವ ಪರಸ್ಥಿತಿ ಇತ್ತು. ಆದರೆ ಈಗ ಪರಸ್ಥಿತಿ ಬದಲಾಗಿದೆ.ಈಗ ಸ್ತಿçÃಯರ ಕುರಿತು ಮಾತನಾಡುವುದು ಅಭಿಮಾನದ ಸಂಗತಿಯಾಗಿದೆ. ಸ್ತಿçÃವಾದ ವೆಂದರೆ ಪುರುಷದ್ವೇಷಿಅಲ್ಲ . ಸ್ತಿçÃಯರಕುರಿತು ,ಸ್ತಿçÃಸ್ವಾತಂತ್ರö್ಯದ ಕುರಿತು ಸ್ತಿçÃಯರೇಮಾತನಾಡಬೇಕಿಲ್ಲ ಎಂಬುದು ಮನವರಿಕೆಯಾಗಿದೆ.ಹಾಗೆ ನೋಡಿದರೆ ‘ಸ್ವಾತಂತ್ರ’ವೆAಬುದು ಒಂದು ಭ್ರಮೆಯಾಗಿದೆ.ನಾಗರಿಕಸಮಾಜವೆಂದು ಹೇಳುವ ನಾವು ಇಂದು ಎಂಥಾ ಅನಾಗರೀಕ ಸ್ಥಿತಿಗೆ ತಲುಪಿದ್ದೇವೆ, ಸಮಾಜ ಎಂಥಾ ಅಪಾಯಕರ ಹಂತಕ್ಕೆ ತಲುಪಿದೆ ಎಂಬುವುದು ಆಲೋಚಿಸಬೇಕಾಗಿದೆ.ಇಂಥಾಸಮಸ್ಯೆಗಳಿಗೆÀಕಾರಣವೆAದರೆ ತಾತ್ವಿಕ ಹಾಗೂ ಪ್ರಾಯೋಗಿಕತೆಗಳ ನಡುವಿನ ಸಂಘರ್ಷವೇ ಆಗಿದೆ.ಹೀಗಾಗಿ ಮಹಿಳಾ ಸಾಹಿತ್ಯದ ಚರ್ಚೆ ದ್ವಂದ್ವವಾಗಿದೆ.ಮಹಿಳೆಯರು ದ್ವಂದ್ವಗಳ ಮಧ್ಯಯೇಬದುಕುತ್ತಿದ್ದಾರೆ.ದ್ವಮದ್ವಗಳ ಮರ್ಧಯಯೇ ಸಾಹಿತ್ಯರಚಿಸುತ್ತದ್ದಾರೆ..ಮನೆಕೆಲಸ, ಮಕ್ಕಳಲಾಲನೆ ಪಾಲನೆ,ಕಛೇರಿಯ ಕೆಲಸ ಇನ್ನಿತರ ಕೆಲಸಗಳಮಧ್ಯ ಬರೆಯಬೇಕಾಗುತ್ತದೆ.ಹೀಗಾಗಿ ಮಹಿಳೆಯರ ಬರವಣಿಗೆಯಂದರೆ ಎಲ್ಲಾ ಒತ್ತಡಗಳ ನಡುವೆಮತ್ತೂಂದು ಕೆಲಸ.ಅದಕ್ಕಾಗಿಮಹಿಳೆಯರ ಬರವಣಿಗೆಯನ್ನು ಅದರ ಸಾಮಾಜಿಕವಾಗಿ, ಚಾರಿತ್ರಿಕವಾಗಿಯೇ ನೋಡಬೇಕು.ಕೆಲವು ವಿಮರ್ಶಕರು ಮಹಿಳೆಯರು ಯಾಕೆ ಬರೆದಿದ್ದಾರೆ, ಯಾರಿಗಾಗಿ ಬರೆದಿದ್ದಾರೆ. ಯಾವರೀತಿ ಓದಬೇಕು.ಎಂಬ ಗೋಜಿಗೆ ಹೋಗುವುದಿಲ್ಲಾ .ಇವರಸಾಹಿತ್ಯದಲ್ಲಿ ಕಲಾತ್ಮಕತೆಇಲ್ಲಾ ಎಂದು ನಿರಾಕರಿಸುತ್ತಾರೆ..’ಕಲಾತ್ಮಕತೆ’ ಒಂದೆ ಸಾಹಿತ್ಯವನ್ನು ಅಳಿಯುವ ಮಾನದಂಡವಲ್ಲ.ಮಹಿಳೆಯರ ಸಾಹಿತ್ಯದ ಹೆಜ್ಜೆಯ ಗುರುತನ್ನು ನೋಡಲು ಇಚ್ಚೀಸುವವರೆರಡು ಕ್ರಮದಲ್ಲಿ ಸಾಗಬೇಕು.ಒಂದು ಅವರು ಎಷ್ಟು ಸುಂದರವಾಗಿ ಸಾಹಿತ್ಯ ರಚಿಸಿದ್ದಾರೆ ಎಂಬುದು, ಇನ್ನೂಂದು ಅವರು ಯಾಕೆ ಹೀಗೆ ರಚಿಸಿದರು ,ಯಾವಸಂದರ್ಭದಲ್ಲಿ ರಚಿಸಿದರು.ಯಾರಿಗಾಗಿರಚಿಸಿದರು É ಎಂದು ಪ್ರಶ್ನೆಗಳನ್ನು ಮುಂದಿಟ್ಟುಕೊAಡು ಹೋಗುವುದು ಸರಿಯಾದ ಕ್ರಮವಾಗುತ್ತದೆ..ಮಹಿಳೆಯರಿಗೆ ಬದುಕು ಬರಹ ಬೇರೆ ಬೇರೆಯಲ್ಲ.ಹೀಗಾಗಿ ಮಹಿಳಾ ಸಂವಹನ ಎಂಬುದು ಕೃತಕವಲ್ಲ.ಮಕ್ಕಳಿಗೆ ಹಾಲುಕುಡಿಸಿವ, ಕಥೆಹೇಳುವ, ಊಟಮಾಡಿಸುವ ಕೀಯೆ ಎಷ್ಟು ಸುಲಭ ಸಹಜವೋ ಅಷ್ಟೇ ಸಹಜ.ಸ್ತಿçÃಯರ ಬರವಣಿಗೆ ಅವರ ವ್ಯಕ್ತಿತ್ವದ ಮುಂದುವರೆದ ಭಾಗವೇಆಗಿದೆ.ಆದ್ದರಿಂದ ಆಕೆಯ ಬರವಣಿಗೆ ಅವಳಿಂದ ಬೇರೆಯಾಗುವುದಿಲ್ಲಾ.ಆಕೆಯ ಬರವಣಿಗೆ ಅಧಿಕಾರಯುತವಾಗಿರುವುದಿಲ್ಲಾ. ಬರವಣಿಗೆಯೂಂದಿಗಿನ ಆಕೆಯ ಸಂಭAಧ ತಾಯಿಮಗುವಿನ ಸಂಭAದವಾಗಿರುತ್ತದೆ.ಕುಟುAಬದಲ್ಲಿ ಅನೇಕ ಅಂಘರ್ಷಗಳನ್ನು ಎದುರಿಸಬೇಕಾಗಿರುವುದರಿಂದ ಅವಳ ಬರವಣಿಗೆಯಲ್ಲೂ ಸಂಘರ್ಷದ ಛಾಯೆಯನ್ನು ಕಾಣುತ್ತೇವೆ.ಈ ಸಂದರ್ಭದಲ್ಲಿ ಕಲಾತ್ಮಕತೆಯ ಪ್ರೆಶ್ನೆ ಬರುವುದೇಇಲ್ಲಾ.ಬರವಣಿಗೆಯಲ್ಲಿ ಕಾಲಕ್ರಮೇಣ ಪಡೆದುಕೂಳ್ಳುವುದು ಬಿಡುವುದರ ಪ್ರಕ್ರೀಯೆ ಸಹಜ.ಮಹಿಳೆಯರುಕಥೆ, ಕಾದಂಬರಿ, ಕಾವ್ಯವನ್ನೇ ಹೆಚ್ಚು ರಚಿಸಿದ್ದಾರೆ.ಇಂಥಾ ರಚನೆಗಳಿಗೂ ಒಂದು ಕಾರಣವಿದೆ. ಭಾರತದಾದ್ಯಂತ ಹೊಸತನದ ಗಾಳಿ ಬೀಸಿದಾಗಸಾಂಪ್ರದಾಯಕ ರೀತಿರಿವಾಜುಗಳಿಂದ ಬಿಡಿಗಡೆಹೊಂದಿ , ಹೊಸ ಕನುಗಳನ್ನು ಹೇಳಲು ಈ ಮಾಧ್ಯಮಗಳನ್ನು ಆಯ್ದುಕೊಂಡರು.ಆರAಭದಲ್ಲಿ ಸಾಂಪ್ರದಾಯಕ ನೆಲೆಯಿಂದ ಬಂದುಸAಪ್ರದಾಯಗಳುAದಿಗೆ ಬಿಡುಗಡೆಗುಳ್ಳುವ ಪ್ರಯತ್ನಕ್ಕೆತೊಡಗಿದರು ತ್ರಿವೇಣಿ, ತಿರುಮಲಾಂಬ ನಂತಹಲೇಖಕಿಯರಸಾಹಿತ್ಯ ಈ ಮಾತನ್ನು ಸಮರ್ಥಿಸುತ್ತದೆ.ಆದರೆ ಸಾರಾಅಬೂಬಕರ್,ಬಿ,ಟಿ ಲಲಿತಾನಾಯಕ,ಗೀತಾನಾಗಭೂಷಣ ಅವರ ಸಾಹಿತ್ಯದ ವಿಚಾರಕ್ಕೆ ಬಂದಾಗ ಬೇರೆಯಾಗುತ್ತದೆ.ಅಂಧ, ಧಾರ್ಮಿಕ ಸಂಪ್ರದಾಯಗಳನ್ನು ಮೀರಿ ವೈಜ್ಞಾನಿಕ,,ಪ್ರಗತಿಪರಚಿಂತನೆಗಳು ಅವರ ಕೃತಿಗಳಲ್ಲಿ ಕಂಡುಬರುತ್ತವೆ.ಸಾಹಿತ್ಯದ ಉದ್ದೇಶ ಬರಿ ಸಾಹಿತ್ಯ ರಚಿಸುವುದಲ್ಲ.ಅದು ಸಾಮಾಜಿPವಾಗಿÀ, ಕೌಟುಂಬಿPವಾಗಿÀ ಸೌಹಾರ್ದತೆಯನ್ನು ಹೆಚ್ಚಿಸುವುದೇ ಆಗಿದೆ.ಸಾಮಾಜಿಕ ಸಮಸ್ಯೆಗಳನ್ನು ನಿರ್ದೇಶಿಸಿ ಪರಿಹರಿಸುವುದೇ ಆಗಿದೆ.ಸಮಾಜಿಕ ಎಂದಾಗ ಬಂಡವಾಳವಾದಿ ಮನೋಭಾವವೂ ಕಂಡುಬರುತ್ತದೆ.ಮಾರಾಟ ಜನಪ್ರೀಯತೆ ಇಲ್ಲಿ ಮುಖ್ಯವಾಗುತ್ತದೆ ಮಹಿಳೆಯರ ಬರವಣಿಗೆಯಲ್ಲಿ .ವಾಸ್ತವತೆಯನ್ನು ಬದಿಗಿಟ್ಟು, ಕಲ್ಪನಾತ್ಮಕವಾಗಿ, ಬ್ರಮಾಲೋಕ ಸೃಷ್ಟಿಸುವ ಕೃತಿಗಳಿಗೇನು ಕೊರತೆಇಲ್ಲಾ.ಇದಕ್ಕೆ ಒಂದು ಸಮಾಧಾನದ ಉತ್ತರವೆಂದರೆ ಓದುಗರ ಸಂಖ್ಯಯನ್ನು ಹೆಚ್ಚಿಸಿರುವುದು.ಇನ್ನೂಂದು ವರ್ಗ ವಾಸ್ತವ ಸಮಸ್ಯಗಳಕಡೆಗೆ ಮುಖಮಾಡಿದವು.ಮಧ್ಯಮ ,ಕೆಳವರ್ಗದ ಮಹಿಳೆಯರ ಶಿಕ್ಷಣ, ಉದ್ಯೋಗ, ಮದುವೆ ವೈಧವ್ಯಯಂತಹ ವಿಚಾರಗಳನ್ನು ಮುಖ್ಯವಾಗಿಟ್ಟುಕೂಂಡವು.ಕುಟುAಬಕ್ಕೆ ಸೀಮಿತವಾಗಿದ್ದ ಅವರ ಬದುಕು ಹೊರಪ್ರಪಂಚಕ್ಕೆ ಕಾಣಿಸಿಕೊಳ್ಳುವ ತವಕ ಕಂಡುಬರುತ್ತz.ÉಇದರಮುAದಿನಹAತವೆAದರೆ ಸಮಾನತೆ,ಲಿಂಗಸಮಾನತೆ.ಈ ಎಲ್ಲ ಸಮಸ್ಯಗಳು ಭಾರತೀಯರನ್ನು ಹೂರತುಪಡಿಸಿ ಉಳಿದದೇಶದ ಮಹಿಳಾಪರಿಸರಕ್ಕೆ ಸಮಸ್ಯೆಯೇ ಅಲ್ಲ.ಮುಂದುವರೆದು ಕುಟುಂಬದಲ್ಲಿ ಸಮಾನತೆ É,ಸಮಾಜದಲ್ಲಿ ಸಮಾನತೆಯಂಬ ಸೂಕ್ಷö್ಮವಿಚಾರಗಳನ್ನು ಒಳಗೊಂಡ ಕೃತಿಗಳೂ ಮೂಡಿಬಂದವು. ವೀಣಾಶಾಂತೇಶ್ವರ್,ವಿಜೆಯ ದಬ್ಬೆಯಂಥವರ ಕೃತಿಗಳು ಉತ್ತಮ ನಿದರ್ಶನಗಳು.ಇನ್ನು ವರ್ಗಕೇಂದ್ರಿತವಾಗಿ ನೋಡುವುದಾದg ವೈದೇಹಿಯವರ ಕೃತಿಗಳಲ್ಲಿ ಮೇಲ್ವರ್ಗದ ಮಹಿಳೆಯರ ತಾಕಲಾಟಗಳನ್ನು ಚಿತ್ರಿಸಿದರೆ.ಬಿ ಟಿ ಲಲಿತಾನಾಯಕ,ಸಾ ರಾ ಅಬೂಬ್ಕರ್,ಗೀತಾನಾಗಭೂಷಣ.ಭಾನು ಮುಸ್ತಾಕರಂಥಹ ಬರಹಗಾರರು ಕೆಳವರ್ಗದ ಮಹಿಳೆಯರ ಸಂಕಟಗಳನ್ನು ಚಿತ್ರಿಸಿದರು.ಇಷ್ಟೇಅಲ್ಲದೆ ವೈದ್ಯಕೀಯ, ಐತಿಹಾಸಿಕ,ರಾಷ್ಟಿçÃಯಮನೋಭಾವನೆಯನ್ನು ಬಿಂಬಿಸುವ, ಸಂಶೋಧನಾತ್ಮಕವೈಜ್ಞಾನಿಕಮನೋಭಾವನೆಯ ಗುಣಗಳುಳ್ಳ ಸಾಹಿತ್ಯವೂ ಮಹಿಳೆಯರಲ್ಲಿ ಕಂಡುಬರುತ್ತದೆ.ಪುರುಷರು ಬರೆಯದೇಬಿಟ್ಟ ಅನೇಕ ವಿಷಯಗಳನ್ನುಮಹಿಳೆಯರು ದಾಖಲಿಸುತ್ತಾg.Éಅದಕ್ಕಾಗಿ ಮಹಿಳಾ ಬರಹಗಾರರಿಗೆ ಅವರದೇ ಆದ ಅನನ್ಯತೆ ಇದೆ.ಅದನ್ನು ಕಡೆಣಿಸುವಂತಿಲ .್ಲವಿಮರ್ಶಾ ವಿಧಾನವೂ ಪುರುಷಕಾಂದ್ರಿತವಾಗಿರುವುದರಿAದ. ಮಹಿಳಾಸಾಹಿತ್ಯದ ಓದಿU ವಿಮರ್ಶಯÉಹೊಸ ದೃಷ್ಡಿಕೋನ ರೂಢಿಸಿಕೊಳ್ಳಬೇಕಾಗಿದೆ ಅ.ಡುಗೆಮನಿಯ ಸಾಹಿತ್ಯ ಎಂದುಹೇಳುವವರಿಗೆ ಬರವಣಿಗೆಯೂ ಅಡುಗೆಯಂತೆ ಹದವಾಗಿಬೇಕುಅಂದಾಗ ಮಾತ್ರ ಸ್ವೀಕರಿಸಲು ಯೋಗ್ಯ ಎಂಬುದು ತಿಳಿಯಲಾರದ ವಿಷಯವೇನಲ್ಲ.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.