ಶ್ರೀಶ್ರೀಶ್ರೀ ೧೦೦೮ ಶ್ರೀಮಾಧವತೀರ್ಥರು.

      “ ಶ್ರೀಶಾಂಘ್ರಲೀನ ಮನಸೇ ಯತಿಧರ್ಮ ರತಾಯಚ.

       ಮಾಧವಾರ್ಯಾಯ ಗುರವೇ ನಮೋ ವೈರಾಗ್ಯಶಾಲಿನೇ’’

“ ಮಾಧವೇಂದ್ರ ಗುರುವರನು ಬಂದಾನೋ

ಅಗಣಿತ ಮಹಿಮಾ ಬಂದಾ ಸುಗುಣ ಮೂರುತಿ ಬಂದಾ’

ಎಂದು ವೆಂಕಟವಿಠಲರು ಗುರುಗಳನ್ನು ಕೊಂಡಾಡಿದ್ದಾರೆ.

         ಶ್ರೀ ಯಾಜ್ಞವಲ್ಕö್ಯ, ಕಣ್ವಋಷಿಗಳ ಪರಂಪರೆಯಲ್ಲಿಬAದ ಯತಿ ಶ್ರೇಷ್ಠರೆಂದರೆ ಮಾಧವತೀರ್ಥರು. ಶಾಲಿವಾಹನಶೆಕೆ ೧೭೧೮ ನಳನಾಮ ಸಂವತ್ಸರ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದು. ಯಾಕೆಂದರೆ ತಮ್ಮ ಗುರುಗಳ ಆದೇಶ ಮತ್ತು ಅಪೇಕ್ಷೆಯ ಮೇರೆಗೆ ,  ಶುಕ್ಲಯಜುರ್ವೇದದ ಕಣ್ವ ಶಾಖೆಯ ಭಕ್ತರೆಲ್ಲರನ್ನು ಅನುಗ್ರಹಿಸಲು, ಜ್ಞಾನ,ಭಕ್ತಿ,ವೈರಾಗ್ಯ ದಯಪಾಲಿಸಲು ಸನ್ಯಾಸ ದೀಕ್ಷ ಪಡೆದು ಕಂಕಣ ಬದ್ಧರಾದರು. ಈ ಮಠವು ಮಾಧವತೀರ್ಥರ ಆಗಮನದ ನಂತರ ಶ್ರೀಯಾಜ್ಞವಲ್ಕö್ಯ ಗುರುಪರಂಪರೆಯ ಶುಕ್ಲಯಜುರ್ವೇದೀಯ ಕಣ್ವಮಠವೆಂದು ಖ್ಯಾತಿಯನ್ನು ಪಡೆದುಕೊಂಡಿತು.

      “ಮಧ್ವಾನುಯಾಯಿ ಬಂದ ಮಾಧವ ತೀರ್ಥಬಂದ

       ಬುದ್ದಿನ್ನಿವಾಸಬಂದ ಬುಧಜನ ಪ್ರೀಯ ಬಂದ’ ದಾಸರು ಕೊಂಡಾಡಿದ್ದಾರೆ.

       ಇವರ ಪೂರ್ವಾಶ್ರÀಮದ ನಾಮ ಶ್ರೀವೆಂಕಟೇಶಾಚಾರ್ಯ ಎಂಬುದು. ಇವರು ಮಧ್ವಶಾಸ್ತçದಲ್ಲಿ ಪ್ರಕಾಂಡ ಪಂಡಿತರು. ಈಗಿನ ಯಾದಗಿರಿ ಜಿಲ್ಲೆಯ ಸುರುಪುರದಲ್ಲಿ ಜನಸಿದರು. ಇವರ ಪೂರ್ವಾಶ್ರಮದ ವಿವರ ಹೆಚ್ಚಾಗಿ ತಿಳಿದು ಬರುವುದಿಲ್ಲ. ಸುರಪುರ ಅರಸು ಮನೆತನದ ಸಂಸ್ಥಾನವಾಗಿತ್ತು. ಇಂಥಾ ಸಂಸ್ಥಾನದಲ್ಲಿ ಅನೇಕ ವಿದ್ವಾಂಸರು ಇದ್ದರು. ಅವರಲ್ಲಿ ವೇಂಕಟೇಶಾಚಾರ್ಯರು ಮುಖ್ಯರಾಗಿದ್ದರು. ತೇಜಸ್ವಿಗಳು, ಸದಾಚಾರ ಸಂಪನ್ನರು, ವೈದಿಕ ಹಾಗೂ ತಾರ್ಕಿಕ ವಿಚಾರದಲ್ಲಿ ನಿಷ್ಣಾತರಾಗಿದ್ದರು. ವೇದ ವಿಹಿತಾಚರಣೆಯಿಂದ ತಮ್ಮ ಮನೆತನದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದರು. ವಿರಕ್ತರೂ, ದಯಾಮೂರ್ತಿ ಗಳೂ, ಶಾಂತಮೂರ್ತಿಗಳಾÀಗಿದ್ದರು. ಪ್ರತಿನಿತ್ಯ ಬ್ರಾಹ್ಮಿಮೂಹೂರ್ತದಲ್ಲಿ ಎದ್ದು ಆಹ್ನಿಕಾದಿಗಳನ್ನು ಪೂರೈಸಿಕೊಂಡು ಆದಿಶೇಷನ ಉಪಾಸನೆಯಲ್ಲಿಯೇ ನಿರತರಾಗಿರುತ್ತಿದ್ದರು. ಗ್ರಂಥಾವಲೋಕನ, ಪುರಾಣ, ಪ್ರವಚನಾದಿಗಳಲ್ಲಿ ಕಾಲಕಳೆಯುತ್ತಾ ಆದಿಶೇಷನ(ಪರಮಾತ್ಮನ) ಅನುಗ್ರಹಕ್ಕೆ ಪಾತ್ರರಾಗಿದ್ದರು. ಮಹಾಮಹಿಮರ ಜೀವನದಲ್ಲಿ ಏನೇನು ನಡೆಯುತ್ತವೆ ಎಂಬುದು ಯಾರೂ ತಿಳಿಯರು. ಒಮ್ಮೆ ಇವರ ಆರಾಧ್ಯ ದೈವವಾÀದ ಅದಿಶೇಷನು ಸ್ವಪ್ನದಲ್ಲಿ ದರ್ಶನ ನೀಡಿ ಅಪ್ಪಣೆ ನೀಡಿದನು `ಹೇ ಆಚಾರ್ಯ ಶೇಷ್ಠನೇ ಇನ್ನು ಕೆಲದಿನಗಳಲ್ಲಿ ನಿನಗೆ ವಾಯ್ವಾಂಶ ಸಂಭೂತರಾದ ಮಹಾತಪಸ್ವಿಗಳ ದರ್ಶನವಾಗುವುದು. ಅವರ ಅನುಗ್ರಹದಿಂದ ನೀನು ಬೇರೊಂದು ಜನ್ಮವನ್ನು ಹೊಂದುವಿ. ಅವರು ನಿನಗೆ ಹರಿಸರ್ವೋತ್ತಮನ ಕೈಂಕರ್ಯವನ್ನು ದಯಪಾಲಿಸುವರು. ಆ ಕಾರ್ಯವನ್ನು ಪರಿಪಾಲಿಸಿ ಪರಮಪದವನ್ನು ಹೊಂದು’ ಎಂದು ನುಡಿದಂತಾಗುತ್ತದೆ. ಹೀಗೆ ಸ್ವಪ್ನದಲ್ಲಿ ಆದಿಶೇ಼ಷ ದರ್ಶನ ನೀಡಿದ್ದನ್ನು ಕಂಡು ಪುಳಕಿತಗೊಳ್ಳುತ್ತಾರೆ. ಊರಿನ ಪ್ರಮುಖರಾದ ದೇವಪುರದ ಶ್ರೀನಿವಾಸಾಚಾರ್ಯ, ಅಗ್ನಿಹೋತ್ರಿ ಭೀಮಾಚಾರ್ಯ, ರಾಮಾಚಾರ್ಯ,ರಾಜಪುರೋಹಿತ ತಿಮಣಾಚಾರ್ಯ, ಕನಕಗಿರಿ ತಿಮ್ಮಣ್ಣಾಚಾರ್ಯ, ಅಗ್ನಿವರದಾಚಾರ್ಯ ಎಂಬ ಮಹನಿಯರಿಗೆ ತಿಳಿಸುತ್ತಾರೆ. ಅವರೂ ವಿಷಯ ತಿಳಿದು ಚಕಿತರಾಗುತ್ತಾರೆ.

      ಸ್ವಪ್ನವೃತ್ತ್ತಾಂತ ನಿಜ ಎನ್ನುವಂತೆ ಅದೇ ಸಮಯಕ್ಕೆ ಸುರಪುರದ ಸಂಸ್ಥಾನಕ್ಕೆ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶೀರೂರಮಠದ ಶ್ರೀಲಕ್ಷಿö್ಮಮನೋಹರ ತೀರ್ಥರು ಆಗಮಿಸುತ್ತಾರೆ. ಅಲ್ಲಿ ಪೂಜಾದಿ ಕಾರ್ಯಗಳನ್ನು, ಭಿಕ್ಷೆಯನ್ನು ಪೂರೈಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪಂಡಿತರಲ್ಲಿ ತೇಜಃಪುಂಜರಾದ ವೆಂಕಟೇಶಾಚಾರ್ಯರನ್ನು ಗಮನಿಸುತ್ತಾರೆ. ಅಲ್ಲಿಯ ಭಕ್ತರ ಸೇವಾ ಕೈಂಕರ್ಯವನ್ನು ಕಂಡು ಆನಂದ ಭರಿತರಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಅದೇ ರಾತ್ರಿ ಅವರಿಗೆ ಸ್ವಪ್ನದಲ್ಲಿ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ `ಯತಿಶ್ರೇಷ್ಠನೇ ನಾಳೆ ನನ್ನ ಪರಮ ಭಕ್ತನಾದ ಅದಿಶೇಷನ ಅಂಶಜನಾದ ಪಂಡಿತನು ನಿನ್ನ ಬಳಿಗೆ ಬರುವನು. ಅವನು ವಾಯುದೇವರು ಪ್ರಸಾರ ಮಾಡಿದ ತತ್ವವನ್ನು ಪ್ರಸಾರಮಾಡಲು ಯೋಗ್ಯನಾದವನು, ಅವನಿಂದ ಕಣ್ವಋಷಿಗಳು ಪೂಜೆಮಾಡಿದ ಶ್ರೀವಿಠಲಕೃಷ್ಣನ ಉಪಾಸನೆಯ ಪರಂಪರೆ ಅವಿಚ್ಚಿನ್ನವಗಿ ಬೆಳೆಯುತ್ತದೆ, ಅವನಿಂದ ಲೋಕದಲ್ಲಿ ಕೀರ್ತಿಯು ಹೆಚ್ಚುತ್ತದೆ’ಎಂದು ಹೇಳಿದಂತಾಗುತ್ತದೆ. ಗುರುಗಳು ಸ್ವಪ್ನತಿಳಿದು ಎಚ್ಚತ್ತು ಆನಂದದಿAದ  ಪುಲಕಿತರಾಗುತ್ತಾರೆ. ಮರುದಿನ ಎಲ್ಲರನ್ನು ಕರೆಯಿಸಿ ಸ್ವಪ್ನ ವೃತ್ತಾಂತವನ್ನು ತಿಳಿಸುತ್ತಾರೆ. ಆಗ ವೆಂಕಟೇಶಾಚಾರ್ಯರು ತಮಗಾದ ಸ್ವಪ್ನ ವೃತ್ತಾಂತವನ್ನು ತಿಳಿಸುತ್ತಾರೆ. ಸಂತುಷ್ಟರಾದ ಗುರುಗಳು ಸಂನ್ಯಾಸದೀಕ್ಷೆ ಉಡಪಿಯಲ್ಲಿ ನೀಡಲು ನಿರ್ಧರಿಸುತ್ತಾರೆ. ಕೆಲದಿನದಲ್ಲಿ ಉಡುಪಿಯಿಂದ ಆಹ್ವಾನ ಬರುತ್ತದೆ. ಉಡುಪಿಯಲ್ಲಿ ಅಷ್ಠಮಠದ ಯತಿಗಳನ್ನು ಕರೆಯಿಸಿ ಎಲ್ಲ ವೃತ್ತಾಂತವನ್ನು ಹೇಳಿ, ಸಂನ್ಯಾ¸ದೀಕ್ಷೆÀ ನೀಡುತ್ತಾರೆ. ಇವರು ಮಹಾಜ್ಞಾನಿಗಳಾದ ಶ್ರೀಯಾಜ್ಞವಲ್ಕö್ಯ ಹಾಗೂ ಕಣ್ವರ ಪರಂಪರೆಯಲ್ಲಿ ಬರುವುದರಿಂದ `ಕಣ್ವಮಠ’ ಎಂದು ಹೆಸರಿಸಿ ಶಾಲಿವಾಹನ ಶೆಕೆ ೧೭೧೮(ಕ್ರಿ.ಶ.೧೭೯೬) ನಳನಾಮ ಸಂವತ್ಸರ ಮಾಘ ಶುದ್ಧ ಪಂಚಮಿಯ ಶುಭ ಮೂಹೂರ್ತದಲಿ ಕಣ್ವತೀರ್ಥದಲ್ಲ್ಲಿ ಸ್ನಾನಾದಿಯ ಬಳಿಕ “ಮಾಧವತೀರ್ಥ’’ಎಂಬ ನಾಮಭಿದಾನದಿಂದ ಸಂನ್ಯಾಸದೀಕ್ಷೆ ನೀಡಿ, ಕಣ್ವಗುರುಗಳಿಂದ ಪೂಜಿಸಲ್ಪಟ್ಟ ಶ್ರೀಮದಾನಂದತೀರ್ಥರ ಕರಾರ್ಚಿತವಾದ ತಾಂಡವಶ್ರೀವಿಠ್ಠಲಕೃಷ್ಣನ ಮೂರ್ತಿಯನ್ನು, ಅಲಂಕಾರರಾರ್ಥವಾಗಿ ಶ್ರೀರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀವೇಣುಗೋಪಾಲಕೃಷ್ಣನ ಪ್ರತಿಮೆಯನ್ನು, ಮುದ್ರೆ, ಬಲಮುರಿಶಂಖ, ನೀಡಿ ಉತ್ತರೋತ್ತರ ಅಭಿವೃಧ್ಧಿಯಾಗಲಿ ಎಂದು ಹಾರೈಸುತ್ತಾರೆ.

        ಉಡುಪಿಯಿಂದ ಸುರಪುರಕ್ಕೆ ಆಗಮಿಸುತ್ತಾರೆ.ಸುರಪುರದ ಅರಸರಿಂದ ಭವ್ಯಸ್ವಾಗತವಾಗುತ್ತದೆ. ನಂತರ ವೀರಘಟ್ಟದಲ್ಲಿ  ಶ್ರೀಮಾಧವತೀರ್ಥರು ವಿಠ್ಠಲಕೃಷ್ಣನ ಪೂಜೆ ಗೈದು ಶ್ರೀಯಾಜ್ಞವಲ್ಕö್ಯ ಗುರುಗಳನ್ನು ಕುರಿತು ತಪೋಗೈಯುವರು. ತಪಸ್ಸಿಗೆ ಮೆಚ್ಚಿದ ಶ್ರೀಯಾಜ್ಞವಲ್ಕö್ಯ ಗುರುಗಳು ಶ್ರೀಮಾಧವತೀರ್ಥರಿಗೆ ಶುಕ್ಲಯಜುರ್ವೇದದ ತತ್ವಜ್ಞಾನವನ್ನು ಉಪದೇಶಿಸಿದರಂತೆ. ಹಾಗಾಗಿ ಈ ಮಠವು ಶ್ರೀಶುಕ್ಲಯಜಯರ್ವೇದ ಯಾಜ್ಞವಲ್ಕö್ಯ ಗುರುಪರಂಪರಾಗತ ಕಣ್ವಮಠವೆಂದು ಪ್ರಸಿಧ್ಧಿಯಾಯಿತು. ಆಗಿನ ಸುರಪುರದ ಅರಸರಾದ ರಾಜವೆಂಕಟಪ್ಪನಾಯಕರು ಇವರ ಆಗಮನದಿಂದ  ಸಂತುಷ್ಟಗೊಳ್ಳುತ್ತಾರೆ. ಇವರಿಗೆ ರಾಮಪುರವನ್ನು ದಾನವಾಗಿ ನೀಡುತ್ತಾರೆ. ಆಗ ಗುರುಗಳು `ನಾನು ಸಂನ್ಯಾಸಿ ನನಗೇನು ಬೇಕಿಲ್ಲಾ. ಆದರೆ ಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಇಲ್ಲಿ ವ್ಯವಸ್ಥೆಮಾಡಿಕೊಡಿ’ ಎಂದು ಹೇಳುತ್ತಾರೆ. ಆಗ ಸಂತುಷ್ಟರಾದ ರಾಜಾವೆಂಕಟಪ್ಪ ನಾಯಕ ಶ್ರೀಮಠಕ್ಕೆ ಆಶ್ರಯದಾತರಾಗಿ ಸೇವೆ ಸಲ್ಲಿಸುತ್ತಾರೆ. ಹೀಗೆ ರಾಜಾಶ್ರಯ ಪಡೆದ ಗುರುಗಳು ಪಾಠ ಪ್ರವಚನದಲ್ಲಿ ನಿರತರಾಗುತ್ತಾರೆ. ಶ್ರೀಮಠದ ಭಕ್ತರನ್ನು ಅನುಗ್ರಹಿಸಲು ಸಂಚಾರವನ್ನು ಆರಂಭಿಸುತ್ತಾರೆ. ಅದವಾನಿ, ಅನಂತಪುರ, ಬೆಂಗಳೂರು, ಕೋಲರ, ಚಿಂತಾಮಣಿ ಮುಂತಾದ ನಗರಗಳಿಗೆ ಭೇಟಿನೀಡುತ್ತಾರೆ. ವಿದ್ವತ್ಪೂರ್ಣ ಪ್ರವಚನಗಳಿಂದ ಭಕ್ತರ ಮನಸ್ಸನ್ನು ಗೆಲ್ಲುತ್ತಾರೆ.

        ಇವರ ಪೂರ್ವಾಶ್ರಮದ ಗುರುಗಳು, ವೇದಶಾಸ್ತç ಸಂಪನ್ನರಾದ ಜೋಯಿಸ ಧರ್ಮಭಟ್ಟರೆಂಬುವವರು ಮೋಕ್ಷಾರ್ಥಿಗಳಾಗಿ ಸಂನ್ಯಾಸವನ್ನು ಬಯಸುತ್ತಾರೆ. ಅವರ ಅಪೇಕ್ಷೆಯಂತೆ ಸಂನ್ಯಾಸದೀಕ್ಷೆನೀಡಿ `ವಾಮನತೀರ್ಥ’ಎಂದು ನಾಮಾಬಿಧಾನ ಮಾಡುತ್ತಾರೆ. ಇವರ ಬೃಂದಾವನ ಕ್ಷೇತ್ರ ಆದವಾನಿಯ ರಣಮಂಡಲ ಬೆಟ್ಟದಲ್ಲಿದೆ. ಇವರಲ್ಲದೆ ಶ್ರೀವಿಷ್ಣುಪ್ರಿಯತೀರ್ಥರು ಕೂಡಾ ಮೊಕ್ಷಾರ್ಥವಾಗಿ ಸಂನ್ಯಾಸ ಸ್ವೀಕರಿಸುತ್ತಾರೆ. ಇವರ ಬೃಂದಾವನ ಸುರುಪುರದ ಹತ್ತಿರದ ಸೂಗೂರಿನಲ್ಲಿದೆ.

       ಆದವಾನಿಯಿಂದ ಅನಂತಪುರಕ್ಕೆ ಆಗಮಿಸುತ್ತಾರೆ. ಆಗಿನ ಅನಂತರಪುರ ಜಿಲ್ಲೆಯ ಕಲೆಕ್ಟçರರಾದ ಮಿ.ಮಂಡ್ರೋಲ್ ಸಾಹೇಬರು ಇವರ ತೇಜಃಪುಂಜ ಸ್ವರೂಪವನ್ನು  ಕಂಡು, ಮಠದ ಇತಿಹಾಸವನ್ನು ತಿಳಿದುಕೊಂಡು ಪ್ರಭಾವಿತರಾಗಿ ಸಕಲ ಮರ್ಯಾದೆಯೊಂದಿಗೆ ಬೀಳ್ಕೊಡುತ್ತಾರೆ. ಈ ವಿಚಾರ ಅನಂತಪುರದ ಗೆಜಿಟೇರಿಯನ್ ದಲ್ಲಿ ದಾಖಲಾಗಿದೆಯಂತೆ. ಹೀಗೆ ಇವರ ಕೀರ್ತಿಪತಾಕೆ ದಿಗಂತಕ್ಕೆ ಹರಡುತ್ತದೆ.  ಸಂಚಾರ ಮಾಡುತ್ತ ಮತ್ತೆ ಅನಂತಪುರಕ್ಕೆ ಆಗಮಿಸುತ್ತಾರೆ. ಅಗ ತಮ್ಮ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಅರಿತು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬುದ್ದಿನ್ನಿಗೆ ಆಗಮಿಸುತ್ತಾರೆ. ಶ್ರೀಮಠದ ಪರಮ ಭಕ್ತರಾದ ಬುದ್ದಿನ್ನಿ ದೇಸಾಯಿ ಮನೆತನದವರು ಸಕಲ ವೈಭವದೊಂದಿಗೆ ಸ್ವಾಗತ ಮಾಡುತ್ತಾರೆ. ಪೂಜಾ, ಭಿಕ್ಷಾದಿಗಳನ್ನು ಪೂರೈಸಿದ ನಂತರ ಶಿಷ್ಯರಲ್ಲಿ ತಾವು ಬೃಂದಾವನಸ್ಥರಾಗುವ ವಿಷಯ ತಿಳಿಸುತ್ತಾರೆ. ದೇಸಾಯಿಯವರು ದುಃಖಿತರಾಗುತ್ತಾರೆ. ವಿಷಯ ತಿಳಿದ ಅನೇಕ ಭಕ್ತರು ತಂಡೋಪ ತಂಡವಾಗಿ ಗುರುಗಳ ದರ್ಶನಾಪೇಕ್ಷಿತರಾಗಿ ಆಗಮಿಸುತ್ತಾರೆ. `ನಾವು ವೃಂದಾವನಸ್ಥರಾಗುವುದನ್ನು ತಿಳಿದು ಚಿಂತಿಸದಿರಿ.ಶ್ರೀ ಆದಿಶೇಷನ ಅನುಗ್ರಹ ಬಲದಿಂದಲೂ, ಶ್ರೀವಿಠಲಕೃಷ್ಣನ ಪ್ರಸಾದದಿಂದಲೂ ನಮ್ಮ ತಪಃಸತ್ವವನ್ನು ಭಕ್ತರ ಉಧ್ಧಾರಕ್ಕಾಗಿ ಬುಧ್ಧಿನ್ನಿ ಕ್ಷೇತ್ರದಲ್ಲಿ ಪ್ರತಿಷ್ಠೆ ಮಾಡಿರುವೆವು. ನಿಮ್ಮ ಭಕ್ತಿಯಂತೆ ನಿಶ್ಚಯವಾಗಿ ಫಲ ದೊರೆಯುವುದು’ ಎಂದು ಶಿಷ್ಯವೃಂದವನ್ನು ಸಮಾಧಾನ ಪಡಿಸುತ್ತಾ, ಶಾಲಿವಾಹನ ಶಕೆ.೧೭೩೨ (ಕ್ರಿ.ಶ.೧೮೧೦)ಶುಕ್ಲನಾಮ ಸಂವತ್ಸರ ಚೈತ್ರಶುಧ್ಧ ತೃತೀಯ ದಿವಸ “ಶ್ರೀಅಕ್ಷೆÆÃಭ್ಯತೀರ್ಥರಿಗೆ’’ ಸಂನ್ಯಾಸದೀಕ್ಷೆ ನೀಡಿ ಹರಿಪುರವನ್ನು ಸೇರುತ್ತಾರೆ. ಇವರ ಆರಾಧನೆಯನ್ನು ಮೂಲ ಬೃಂದಾವನ ಬುದ್ದಿನ್ನಿಯಲ್ಲಿ, ಮೃತ್ತಿಕಾ ಬೃಂದಾವನ ರಾಯಚೂರಿನಲ್ಲಿ, ಮಾಧವತೀರ್ಥರ ತಪೋಭೂಮಿ ವೀರಘಟ್ಟದಲ್ಲಿ, ವಿವಿಧ ನಗರಗಳಲ್ಲಿ, ಭಕ್ತರ ಮನೆಗಳಲ್ಲಿ ಯಥಾಶಕ್ತಿ, ಯಥಾಮತಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಇಂಥಾ ಮಹಾಮಹಿಮರ ಕುರಿತಾಗಿ ಅನೇಕ ಹರಿದಾಸರು ಅಷ್ಟೋತ್ತರವನ್ನು, ಸ್ತೋತ್ರಪದಗಳನ್ನು, ಸುಪ್ರಭಾತ ವನ್ನು ರಚಿಸಿ ಭಕ್ತರಿಗೆ ಪಾರಾಯಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ಭಕ್ತರು ಜಾತಿ -ಮತ -ಪಂಥ ಮೀರಿ ಶ್ರೀಮನ್ಮಾಧವತೀರ್ಥರ ಸೇವೆಯನ್ನು ಮಾಡಿ ಕಾಮಿತ ಫಲವನ್ನು ಪಡೆದುಕೊಂಡಿದ್ದಾರೆ. ಪಡೆದುಕೊಳ್ಳುತ್ತಿದ್ದಾರೆ.

ಪ್ರಸ್ತುತ ಶ್ರೀಮಠದ ಪರಂಪರೆಯಲ್ಲಿ, ಧರ್ಮಪೀಠ ಸಾಮ್ರಾಜ್ಯದಲ್ಲಿ ವಿರಾಜಮಾನ ರಾದ ಯತಿವರ್ಯರ ವಿವರ ಹೀಗಿದೆ.

ಶ್ರೀಶ್ರೀಶ್ರೀ೧೦೦೮ಶ್ರೀವಾಮನತೀರ್ಥರು(ಮೋಕ್ಷಾರ್ಥ)ಆದೋನಿ. ಶ್ರೀಶ್ರೀಶ್ರೀ೧೦೦೮ಶ್ರೀವಿಷ್ಣುಪ್ರಿಯತೀರ್ಥರು(ಮೋಕ್ಷಾರ್ಥ)ಸೂಗೂರು. ಶ್ರೀಶ್ರೀಶ್ರೀ೧೦೦೮ಶ್ರೀಅಕ್ಷೆÆÃಭ್ಯತೀರ್ಥರು,-ಬಿಳಿಭಾವಿ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಧೀಶತೀರ್ಥರು-ಹುಣಸೀಹೊಳೆ. ಶ್ರೀಶ್ರೀಶ್ರೀ೧೦೦೮ಶ್ರೀಕೃಷ್ಣದ್ವೆöÊಪಾಯನತೀರ್ಥರು(ಮೋಕ್ಷಾರ್ಥ)-ಸುರಪುರ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾನಿಧಿತೀರ್ಥರು,-ಬಿಳಿಭಾವಿ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಸಂಪೂರ್ಣತೀರ್ಥರು,-ಗೊರಲೂಟಿ-ಸಿAಧನೂರು ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಧಿರಾಜತೀರ್ಥರು,-ಹುಣಸೀಹೊಳೆ. ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾವಿರಾಜತೀರ್ಥರು,ಕಮಲಾಪುರ,ವಿಜಯನಗರ.

ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾವಿಜಯತೀರ್ಥರು,ಹುಣಸೀಹೊಳೆ.

ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಮನೋಹರತೀರ್ಥರು,ಹುಣಸೀಹೊಳೆ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾತಪೋನಿಧಿತೀರ್ಥರು,ಹುಣಸೀಹೊಳೆ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಭೂಷಣತೀರ್ಥರು,ಬಿದರಹಳ್ಳಿ,ಬೆಂಗಳೂರು ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಭಾಸ್ಕರತೀರ್ಥರು,ಹುಣಸೀಹೊಳೆ.

     ಪ್ರಸ್ತುತ ಶ್ರೀಶ್ರೀಶ್ರೀ೧೦೦೮ಶ್ರೀವಿದ್ಯಾಕಣ್ವವಿರಾಜತೀರ್ಥರು,ಕಣ್ವಮಠದಪೀಠಾಧಿಪತಿಗ ಳಾಗಿ, ಧರ್ಮಸಾಮ್ರಾಜ್ಯಾಧಿಪತಿಗಳಾಗಿ ಶ್ರೀವಿಠಲಕೃಷ್ಣನ ಸೇವಾಕೈಂಕರ್ಯ ಮಾಡು ತ್ತಿದ್ದಾರೆ. ಶ್ರೀಮಠದ ಎಲ್ಲಾ ಶ್ರೀಪಾದಂಗಳವರು ಭಕ್ತರ ಶ್ರೇಯೋಭಿವೃಧ್ಧಿಗೆ ತಮ್ಮನ್ನು ತಾವು ಸಮರ್ಪಿಸಿ ಕೊಂಡಿದ್ದಾರೆ.  ಶ್ರೀಮಠದ ಪರಂಪರೆಯನ್ನು ಮುಂದುವರೆ ಸಿಕೊಂಡು  ಹೋಗುತ್ತಿದ್ದಾರೆ. ಗುರುಗಳು ನಮಗೆಲ್ಲಾ ಜ್ಞಾನ-ಭಕ್ತಿ-ವೈರಾಗ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸೋಣ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.