ವಿಜಯದಾಸರು ಕನ್ನಡನಾಡು ಕಂಡ ಅಪರೂಪದ ಹರಿದಾಸರು. ಅವರು ಆಡಿದ ಮಾತುಗಳೆಲ್ಲವೂ ಅರಿವಿನ ಕಿರಣಗಳು. ಅನುಭವದ ಆಳದಿಂದ ಹೊರಬಂದ ಮುತ್ತುಗಳು. ಇವರು ಕೀರ್ತನೆ,ಉಗಾಭೋಗ,ಸುಳಾದಿಗಳನ್ನು ರಚಿಸಿದ್ದಾರೆ. ಅಷ್ಟೆಅಲ್ಲ ಸುಳಾದಿದಾಸರೆಂದೆ ಖ್ಯಾತರಾಗಿದ್ದಾರೆ. ಸುಳಾದಿಗಳು ತಾಳ ಪ್ರಧಾನವಾದ ಮಟ್ಟು. ಧೃವ,ಮಠ್ಯ.ರೂಪಕ,ಝಂಪಕ,ತ್ರಿಪುಟ, ಅಟ್ಟತಾಳ, ಹಾಗೂ ಎಕತಾಲಗಳೆಂಬ ಸಪ್ತತಾಳಗಳು ಇರುತ್ತವೆ. ಆದ ಈ ತಾಳಗಳು ಪುನರಾವರ್ತನೆಗೊಳ್ಳುತ್ತವೆ. ಪ್ರತಿ ತಾಳದಲ್ಲಿ ದಾಸರ ಅಂಕಿತವಿರುತ್ತದೆ. ಕೊನೆಯಲ್ಲಿ ಎರಡು ಚರಣಗಳ ‘ಜತೆ’ ಇರುತ್ತದೆ. ಇದು ಇಡೀ ಸುಳಾದಿಯ ಭಾವವನ್ನು ಅಭಿವ್ಯೆಕ್ತಿಸುತ್ತದೆ.
ಸುಳಾದಿಗಳು ಮೊದಲು ಶ್ರೀಪಾದರಾಜರಲ್ಲಿ ಕಂಡು ಬಂದರೊ ,ಹೆಚ್ಚಿನ ಸುಳಾದಿಗಳನ್ನು ರಚಿಸಿದವರೆಂದರೆ ವಿಜಯದಾಸರು. ಇವರು ಐದು ನೊರಏಂಭತ್ತು ಸುಳಾದಿಗಳನ್ನು ರಚಿಸಿದ್ದರೆ. ವಿಜಯದಾಸರ ಸುಳಾದಿಗಳಲ್ಲಿ ತಾತ್ವಿಕ ಮೌಲ್ಯವುಳ್ಳ ರಚನೆಗಳುü ಅಧಿಕವಾಗಿವೆ. ಭಕ್ತಿ ಭಾವದಿಂದ ಹೂರಬಂದ ಅನುಭವದ ಪರಿಣಾಮವಾಗಿ ಗಂಭೀರ ಕೃತಿಗಳು ರಚನೆಯಾಗಿವೆ.
ಈ ಕುರಿತಾಗಿ ಗಂಭೀರ ಚಿಂತನೆಗಳು ನಡೆದಿವೆ. ಗೋರೆಬಾಳಹನುಮಂತರಾಯರು ಶ್ರೀವರದೇಂದ್ರ ಹರಿದಾಸಮಂಡಳಿಯ ಅಡಿಯಲ್ಲಿ ವಿಜಯದಾಸರ ಸುಳಾದಿಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಪ್ರಕಟಿಸುವಾಗ ಪ್ರಾರ್ಥನಾಭಾಗ,ಸಾಧನಾಭಾಗ,ಉಪಾಸನಾಭಾಗ, ಸ್ತೋತ್ರಭಾಗ, ತೀರ್ಥಕ್ಷೇತ್ರಮಹಿಮೆ,ಸೃಷ್ಟಿಪ್ರಕರಣ, ಪ್ರಮೇಯಭಾU ಸುಳಾದಿಗಳೆಂದು ವಿಭಾಗಿಸಿ ಪ್ರಕಟಿಸಿದ್ದಾರೆ. ಪ್ರಾರ್ಥಾನಾಭಾಗ ಸುಳಾದಿಯಲ್ಲಿ, ವ್ಯವಹಾರಿಕ ಬದುಕಿನಲ್ಲಿ ಜೀವಿಯು ಅಜ್ಞಾನದಿಂದ ಪಾರಾಗಲು ಹಲವಾರು ತೊಂದರೆಗೆ ಒಳಗಾಗುತ್ತಾನೆ. ಈ ತೊಂದರೆಯಿAದ ಪಾರಾಗಲು ಕರುಣಾಸಾಗರನಾದ ಪರಮಾತ್ಮನಲಿ ್ಲಶರಣುಹೋಗುತ್ತಾನೆ. ವಿಜಯದಾಸರು ಪರರಕಷ್ಟಕಂಡು ಮರುಗಿ ಅವರ ಆಪತ್ತು ಪರಿಹರಿಸಲ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಆ ಸುಳಾದಿಯನ್ನು ಇಂದಿಗೊ ಭಕ್ತರು ಪಠಿಸಿ ಕಷ್ಟ ನಿವಾರಣೆಮಾಡಿಕೊಳ್ಳುತ್ತಿದ್ದಾರೆ.
“ವೀರಸಿಂಹನೆ ನಾರಸಿಂಹನೆ’ಸುಳಾದಿ ಬಹಳ ಪ್ರಸಿದ್ದಿ ಯಾಗಿದೆ “ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ ವಿಠಲ,ವಿಠಲವಿಜಯವಿಠಲ ಕರುಣಿ”ಎಂದು ನಾಮಸ್ಮರಣೆಯ ಮಹತ್ವವನ್ನು ಸಾರುತ್ತಾರೆ.ಭವರೋಗ ಕಳೆವವಗೆ ಹಲುರೋಗ ಕಳೆವುದು ಸೋಜಿಗವಲ್ಲ. ಈ ಜನ್ಮ ಸಾರ್ಥಕಮಾಡಿಕೊಳ್ಳುವಂತೆ ಪ್ರೇರೇಪಿಸು ಎಂದು ವಿಜ್ಷಾಪಿಸಿಕೋಳ್ಳುತ್ತಾರೆ. ಸಾಧನಾಭಾಗ ಸುಳಾದಿಗಳಲ್ಲಿ”ಸಾಧನಮಾಡುವವನ ಲಕ್ಷ,ಣ, ಅನುಸರಿಸುವ ಮಾರ್ಗವನ್ನು ನಿರ್ದೆಶಿಸಿದ್ದಾರೆ. ಇಲ್ಲಿ ಭಕ್ತನು ಚಾಂಚಲ್ಯತೆಯನ್ನು ಕಳೆದುಕೊಂಡು ಹರಿಯೆ ಸರ್ವೋತ್ತಮ,ಅವನೇ ಸರ್ವಕರ್ತ,ಸರ್ವಸ್ವತಂತ್ರ,ಸರ್ವವ್ಯಾಪ್ತ,ಎAದು ಧೃಢವಾಗಿ ನಂಬಿರುತ್ತಾನೆ.ಈಮಾರ್ಗದಲ್ಲಿ ನಡೆದು ಧರ್ಮಾಚರಣೆ ಮಾಡಿದರೆ ಜ್ಞಾನ ಉಂಟಾಗುತ್ತದೆ. ಇದಕ್ಕೆ ಸಂಶಯವಿಲ್ಲ. ಸಾಧನಮಾರ್ಗದಲ್ಲಿರುವವರು ಯಾರನಿಂದೆಯನ್ನು ಮಾಡಕೊಡದು. ಸಜ್ಜನರ ಸಂಗ ಬಿದಕೊಡದು,ಫಲಾಪೇಕ್ಷಯಿಂದ ಕರ್ಮಮಾಡಕೊಡದು. ಅನ್ನದಾನದ ಮಹತ್ವ, ಆಹಾರಸೇವಿಸುವಾಗ ಭಗವದವತಾರವನ್ನು ತಿಳಿಯುವ ಬಗೆಎಲ್ಲವೊ ಹರಿಗಾಗಿ ಎಂಬ ಸರ್ವಸಮರ್ಪಣಭಾವ ಇರಬೇಕೆಂದು ಹೇಳುತ್ತಾರೆ.ಉಪಾಸನಾಭಾಗ ಸುಳಾದಿಗಳಲ್ಲಿ”ಉಪಾಸನಾ ಎಂದರೆ ಧ್ಯಾನದಲ್ಲಿ ಮಗ್ನನಾಗು,ವಿಷಯಾದಿಗಳಿಂದ ದೊರವಾಗಿ ಏಕಾಂತದಲ್ಲಿ ಕುಳಿತು ಆಸನ ನಾಗುವುದು.ಕಣ್ಣುಮುಚ್ಚಿ ಕುಳಿತುಕೊಳ್ಳುವದು ಧ್ಯಾನವಲ್ಲ.ಕಾಮಕ್ರೋಧಾದಿಗಳನ್ನು ಅಳಿಸಿ ಸತ್ಸಂಗದಲ್ಲಿದ್ದು, ಸದಾಚಾರದಲ್ಲಿದ್ದು,ಗುರುಗಳಮುಖೇನ ಜ್ಞಾನ ಸಂಪಾದಿಸಿಕೊಳ್ಳಬೇಕು. ಈ ರೀತಿ ಅನೇಕ ಜನ್ಮಗಳಲ್ಲಿ ಸಾಧನೆಮಾಡಿದ ನಂತರ ಬಿಂಬಾಪರೋಕ್ಷವಾಗುವುದು ಎಂದು ಹೇಳಿದ್ದಾರೆ. ನಿರ್ಮಲ ಮನಸಿನಿಂದ ಮಾಡುವ ಕಾರ್ಯಗಳೆಲ್ಲವು ಹರಿಯ ಉಪಾಸನೆಯಾಗಿವೆ. ಸ್ತೋತ್ರಭಾಗ ಸುಳಾದಿಯಲ್ಲಿ ಹರಿಯಮಹಿಮೆ,ಹರಿಯಗುಣ,ಸಾಮರ್ಥ್ಯಗಳೆಲ್ಲವು ಅಡಕವಾಗಿರುತ್ತವೆ.ಭಕ್ತನಾದವನು ಭಗವಂತನ ಗುಣಗಾನ ಮಾಡುತ್ತಾ ಆನಂದದಲ್ಲಿ ಪರವಶನಾಗುತ್ತಾನೆ.ಈ ಭಾಗದಲ್ಲಿ ವೇಂಕಟೇಶ, ನರಸಿಂಹ,ಕಪಿಲನಾಮP ಪರಮಾತ್ಮ,ಧನ್ವಂತ್ರಿ, ದುರ್ಗೆ,ಪ್ರಾಣದೇವರ ಸ್ತೋತ್ರಗಳು ಬರುತ್ತವೆ.ಈ ಸ್ತೋತ್ರಗಳು ಹರಿಗೆ ಸೀಮಿತವಾಗಿರದೆ ದಾಸರ,ಯತಿಗಳ ಕುರಿತೊಇವೆ.ತೀರ್ಥಕ್ಷೇತ್ರ ಮಹಿಮ ಸುಳಾದಿಗಳಲ್ಲಿ ಭಾರತದ ಅನೇಕಪುಣ್ಯ ಕ್ಷೇತ್ರಗಳ ಕುರಿತು ವಿವರಿಸಲಾಗಿ.
ಈ ಸುಳಾದಿಗಳಲ್ಲಿ ಕ್ಷೇತ್ರಗಳ ಮಹತ್ವ, ಪೌರಾಣಿಕ ಹಿನ್ನಲೆ,ಐತಿಹಾಸಿಕ ಹಿನ್ನಲೆ ಕುರಿತಾಗಿ ವಿವರಿಸಲಾಗಿದೆ. ಈ ಕ್ಷೇತ್ರಗಳನ್ನು ಪೊರ್ವ,ಪಶ್ಚಿಮ,ಉತ್ತರ,ದಕ್ಷಿಣ ಕ್ಷೇತ್ರಗಳೆಂದು ವಿಭಾಗಿಸಲಾಗಿದೆ.ಈ ಕ್ಷೇತ್ರಜ್ಞಾನ ಅರಿತು ಸಾಧನ ಮಾಡುವ ಭಕ್ತನಿಗೆ ಭಗವಂತನ ಅನುಗ್ರಹವಾಗುತ್ತದೆ. ಹಾಗೆಯೇ ಭಕ್ತರ ಸಂದರ್ಶನ ಭಾಗ್ಯ ಲಭ್ಯವಾಗುತ್ತದೆ.ಸಜ್ಜನರ ದರ್ಶನದಿಂದ ಅಜ್ಷಾನ ನಾಶವಗುತ್ತದೆ. ವಿಶೇಷವಾಗಿ ತಿರುಪತಿವೇಂಕಟೇಶನ ಕುರಿತಾಗಿ ಮುವ್ವತ್ತಾರು ಸುಳಾದಿಗಳನ್ನು ರಚಿಸಿದ್ದಾರೆ. ಆಹೊಬಲನರಸಿಂಹ,ಪAಢರಾಪುರವಿಠಲ.ಛಾಯ, ಉಡುಪಿಕಾಶಿ,ಹಂಪಿ ಮುಂತಾದ ಅನೇಕ ಕ್ಷೇತ್ರಗಳ ಕುರಿತು ವಿವರಿಸಿದ್ದಾರೆ.
ಸೃಷ್ಟಿ ಪ್ರಕರಣ ಸುಳಾದಿಗಳಲ್ಲಿ”ಹರಿಯೇ ಸರ್ವೋತ್ತಮ,ಲಕ್ಷಿö್ಮಯು ಹರಿಯ ಸಹಚರಳು.ಸರ್ವ ಜೀವ ರಾಶಿಗಳು ಹರಿಯ ಅನುಚರರು . ಜೀವರಾಶಿಗಳಲ್ಲಿಕೆಲವರು ಮುಕ್ತಿ ಯೋಗ್ಯರು.ಇನ್ನು ಕೆಲವರು ಸಾಧನಜೀವಿಗಳು. ಇನ್ನು ಕೆಲವರ ಕರ್ಮಾಚಾರಿಗಳು.ಅವರವರ ಕರ್ಮನುಕ್ಕನುಗುಣವಾಗಿ ಹರಿಯು ಮುಕ್ತಿಯನ್ನು ಕೊಡುತ್ತಾನೆ.ಈ ಸಂದರ್ಭದಲ್ಲಿ ಅತೀವೃಷ್ಟಿ, ಅನಾವೃಷ್ಟಿ,ಪಾತಳ, ಸಂವೃತ್ತಾಗ್ನಿ, ಚಂಡಮಾರುಗಳಿAದ ಸಮಸ್ತ ಜೀವರಾಶಿಗಳ ಲಯಮಾಡುತ್ತಾನೆ.ಬ್ರಹ್ಮನ ದೇಹವನ್ನು ಟೋಪ್ಪಿಗೆಯನ್ನಾಗಿ ಮಾಡಿಕೊಂಡು, ರುದ್ರನ ದೇಹವನ್ನು ನೂಪುರವನ್ನಾಗಿಮಾಡಿಕೂಂಡುನರ್ತನ ಮಾಡಲಾಗಿ ಸಕಲ ಜೀವರಾಶಿಗಳು ಲಯ ಹೂಂದಿ ಹರಿಯ ಉದರವನ್ನು ಸೇರುತ್ತವೆ.ಈ ನಂತರ ಹರಿಯ ಎಂಭತ್ತೇಳು ವರ್ಷದ ಕೂನೆಯರಾತ್ರಿಯೋಗ ನಿದ್ರೆಯಲ್ಲಿರಲು ದುರ್ಗೆ ಸ್ತೋತ್ರ ಮಾಡಲು ನಿದ್ದೆಮಾಡಿ ಎಚ್ಚತ್ತವನಂತೆ ಹರಿಯು ಲಕ್ಷಿö್ಮ ಸಹಿತಾಗಿ ಸೃಷ್ಟಿಯ ಕಾರ್ಯಕ್ಕೆ ತೂಡಗುತ್ತಾನೆ.ಮುಕ್ತಬ್ರಹ್ಮಾದಿಗಳಿಗೆ ಹಯಮುಖನಾಗಿ ಜ್ಞಾನನೀಡಿ, ಇವರ ಸಂತೋಷಕ್ಕಾಗಿ ನದಿ, ವನ, ಪರ್ವತ, ಸೃಷ್ಟಿಯಾದವು.ನಂತರ ಜೀವ ರಾಶಿಗಳಸೃಷ್ಟಿ.ಇದರಲ್ಲಿತ್ರ್ರಿವಿಧ. ಆನಂತರ ದಶಾವರಣ ಬ್ರಹ್ಮಾಂಡಸೃಷ್ಟಿ ಮಾಡುತ್ತಾನೆ.ಈ ಎಲ್ಲ ಸೃಷ್ಟಿಯನ್ನು ಹರಿಯು ತಾನೆ ಇಷ್ಟಪಟ್ಟು ಮಾಡಿದಸೃಷ್ಟಿ ಇದಾಗಿದೆ. ಪ್ರಮೆಯ ಭಾಗ ಸುಳಾದಿಗಳಲ್ಲಿ ಪ್ರಮೇಯದ ವಿಚಾರಗಳನ್ನು ಕಾಣುತ್ತೇವೆ. ಹರಿಯು ಸರ್ವೋತ್ತಮನು, ಜಗತ್ತು ಸತ್ಯವಾದದ್ದು, ತತ್ವದಿಂದ ಇರುವದು ಭೇದ, ತಾರತಮ್ಯ ಭಾವದಿಂದರುವ ಜೀವರು ಹರಿಯ ಅನುಚರರು, ವಿಷಯಸ್ಪರ್ಷವಿಲ್ಲದ ನಿಜ ಸುಖಾನುಭವವೇ ಮುಕ್ತಿ, ಮುಕ್ತಿಗೆ ಭಕ್ತಿಸಾದನೆ. ಪ್ರತ್ಯP್ಷ ಅನುಮಾನ, ಆಗಮಗಳೇ ಮೂರು ಪ್ರಮಾಣಗಳು, ಸಕಲಾಗಮಗಳಿಂದ ವೇದ್ಯನಾದವನು ದೇವರು.ಪರಮಾತ್ಮನು ಬಿಂಬ ಸ್ವರೂಪಿ.ಸಕಲ ಜೀವ ರಾಶಿಗಳು ಪ್ರತಿ ಬಿಂಬರು.ಪರಮಾತ್ಮನ ಪ್ರೇರಣೆ ಇಲ್ಲದೆತೃಣಮಪಿ ಚಲತಿ ಎಂಬ ಭಾವವನ್ನು ತಿಳಿದುಕೂಂಡು ಹರಿಯ ದರ್ಶನಾಪೇಕ್ಷಿಗಳಾಗಿರಬೇಕು. ಹರಿಯೆ ಸರ್ವಜ್ಙನೆಂಬ ಜ್ಞಾನ ಮನದಲ್ಲಿ ಮೂಡಬೇಕು.ಸರ್ವಪ್ರಮೇಯಗಳ ಮೂಲಕ ಹರಿಯನ್ನು ಸಾಕ್ಷಾತ್ಕರಿಸಿಕೂಳ್ಳಬೇಕು.ವಿಜಯದಾಸರು ಮಧ್ವಸಿದ್ದಾಂತವನ್ನುತರ್ಕ, ನ್ಯಾಯ, ಶಾಸ್ತಾದಿಗಳ ಮೂಲಕ ವಿವರಿಸಿದರು.ಇವರು ವಿವರಿಸಿರುವ ತತ್ವಗಳು, ನೀತಿಗಳು, ವಿಷಯ ವಿಮರ್ಶೇಯ ರೀತಿ ಪಂಡಿತರಿಗೂ, ಪಾಮರರಿಗೂ ರುಚಿಸುವಂಥಾದು.ಇವರ ಕಂಕಣಾಕಾರ ಸುಳಾದಿ,ಪಂಚರತ್ನಸುಳಾದಿಗಳು ಪ್ರಖ್ಯಾತಿಯನ್ನು ಪಡೆದಿವೆ.ಇವರಿಂದ ರೊಪಗೊಂಡ ಒಂದೂAದು ಅಕ್ಷರವೊ ಮಂತ್ರಸ್ವರೂಪವಾಗಿವೆ.
ವಿಜಯದಾಸರು ಭಕ್ತಕವಿ.ಕಾವ್ಯಾತ್ಮಕವಾಗಿ ಬರೆಯುವ ಉದ್ದೇಶ ಇಲ್ಲದೇಹೋದರೂ ಕಾವ್ಯಗುಣ ಅವರ ಸಾಹಿತ್ಯದಲ್ಲಿ ಕಂಡುಬರುತ್ತದೆ.ಸುಳಾದಿಗಳಲ್ಲಿ ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಾಗಿದ್ದರೂ ಕನ್ನಡದ ಹರಹು ತಪ್ಪಿಲ್ಲ.”ಕನ್ನಡ ಭಾಷೆಯನ್ನು ಸಮಸಮವಾಗಿ ನೋಡಿದ್ದಾರೆ.ಇದಕ್ಕೆ ಶ್ರೀಪಾದರಾಜರೇ ದಿಟ್ಟ ಹೆಜ್ಜೆ ಹಾಕಿದರು.ಹರಿದಾಸ ಸಾಹಿತ್ಯವು ಮಹಾಅಪರಿಮಿತ ಸಮುದ್ರವಾಗಿದೆ”.ದಾಸರು ಸಾಹಿತ್ಯ ಶರಿಫಗಳು, ಸಾಂಗತ್ಯರತ್ನಾಕರರು, ಛಂದಸ್ಸುಅಲAಕಾರಾಬ್ದಿಮಣಿಗಣಭೂಷಿತರು, ಸದ್ವಿದ್ಯಾವಾರಿಧಿಗಳು ಮಹಾವ್ಯಾಕರಣಾಂಭೂದಿಗಳು ಭಾಷಾಶಬ್ದಲಾಲಿತ್ಯಾದಿಸಾರಸ್ವತರು, ಯತಿ, ಪ್ರಾಸ, ಗಣ, ಪ್ರಾಸಾದಿಕಸಾಗರರು “ಎಂದುಗೋರೇಬಾಳ ಹನುಮಂತರಾಯರು” ವಿಜಯದಾಸರ ‘ಸಂಕ್ಷಿಪ್ತ ಜೀವನ ಚರಿತೆ’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ವಿಜಯದಾಸರು ತಮ್ಮ ಸುಳಾದಿಗಳಲ್ಲಿ ರಸಗಳನ್ನು ಬಳಸಿಕೂಂಡಿದ್ದಾರೆ.ಅದರಲ್ಲಿ ಶಾಂತರಸಕ್ಕೆ ವಿಶೇಷ ಸ್ಥಾನನೀಡಿದ್ದಾರೆ,ಶಾಂತರಸದಲ್ಲಿ ವೈರಾಗ್ಯ ಅದರಿಂದುAಟಾಗುವ ತೃಪ್ತಿ ಅನುಪಮವಾದುದು.ನರಸಿಂಹ ಸುಳಾದಿಯಲ್ಲಿ ರೌದ್ರಭಾವವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.”ಘಡಿ ಘಡಿಸುತ ಕೋಟಿ ಸಿಡಿಲು ಗಿರೆಗೆ ಬಂದು,ಹೂಡೆದAತೆ ಚೀರಿ ಬೊಬ್ಬಿಡುತ ಲಂಘಿಸಿ…..”ಎAದು ಬಣ್ಣಿಸಿದ್ದಾರೆ. ವಿಜಯದಾಸರು ಅನೇಕ ಅಲಂಕಾರಗಳನ್ನು ಬಳಸಿಕೂಂಡಿದ್ದಾರೆ.
“ಹಸಿದವನಿಗೆ ಷಡುರಸನ್ನಾದೊರಕಿದಂತೆ,
ತೃಷೆಯ ಪೀಡಿತಗೆ ಪೀಯೂಷಮಡು ಸಿಕ್ಕಿದಂತೆ..’
ಎಂದುಉಪಮಾಲಂಕಾರವನ್ನುಬಳಸಿಕೊಂಡಿದ್ದಾರೆ.ಮುಕ್ತಛಂದಸ್ಸನ್ನುಬಳಸಿಕೊAಡಿದ್ದಾರೆ.ಅನುಪ್ರಾಸ,ಯಮಕಗಳು ಹೇರಳವಾಗಿ ಬಳಕೆಯಾಗಿವೆ.”ಹನುಮನ ನಂಬಿದರೆ ಸುಗ್ರೀವ ಗೆದ್ದಾ,ಹನುಮನ ನಂಬಿದ ವಿಭಿಷಣ ಪ್ರಸಿದ್ದ,……”ಎಂದು ಮುಂದುವರಿಯುತ್ತದೆ. ಭಾಷೆಜನರಿಗಾಗಿ.ಜನಪರವಾದ ನಿಲುವುಳ್ಳ ಹರಿದಾಸರು ಜನರಿಗೆ ನಿಲುಕುವಂಥ ಭಾಷೆಯನ್ನು ಬಳಸಿದ್ದಾರೆ.ಉದಾ;ಬಕ್ತಿ>ಭಕುತಿ ,ಯುಕ್ತಿ>ಯುಕುತಿ, ಯಾತ್ರೆ>ಯಾತರೆ, ಹೀಗೆ ಅನೇಕ ಪದಗಳನ್ನು ಉದಾಹರಣೆಕೊಡಬಹುದು.
ವಿಜಯದಾಸರು ನೀಡಿದ ಲೋಕಸಂದೇಶ ಸರ್ವಕಾಲಿಕವಾದುದು, ಜ್ಙಾನ,ಭಕ್ತಿ,ವೈರಾಗ್ಯಕ್ಕೆ ಹೆಚ್ಚಿನ ಮಹತ್ವನೀಡಿದರು. ದುರಿತ ರಾಶಿಯ ಬಿಡಿಸು,ದುಸ್ಸಂಗವ ಕೆಡಿಸು,ನಿರುತ ನಿನ್ನವರೊಳಗೆ ಸುಖಪಡಿಸೊ”ಎಂದು ಬೇಡಿ ಕೊಳ್ಳುತ್ತಾರೆ. “ನಿನ್ನ ನೊಡುವ ಕಾಮವೇ ನನಗಿರಲಿ,ನಿನ್ನ ಬಿಡುವನೆಂಬ ಲೋಬವೇ ನನಗಿರಲಿ,ನಿನ್ನ ಚರಣದಲ್ಲಿ ಮೋಹವೆ ನನಗಿರಲಿ, ನಿನ್ನ ನೆನಪಲ್ಲಿ ಮದವೇನನಗಿರಲಿ,ನಿನ್ನ ದ್ವೇಷರ ಕೊಡ ಕ್ರೋಧವೆ ನನಗಿರಲಿ ,ನಿನ್ನಕೊಂಡುವವರ ಸಂಗವೇನನಗಿರಲಿ,ನಿನ್ನವನೆAದೆAಬೊ ಕೀರುತಿ ನನಗಿರಲಿ.”ಎಂದು ಭಾವ ಸಂಸ್ಕಾರದ ಕುರಿತು ಹೇಳುತ್ತಾರೆ ºಬ್ಬ ಸುಳಾದಿ ,ಮದಿ ಸುಳಾದಿ ,ಕಂಕಾಣಾಕಾರ ಸುಳಾದಿ ಪ್ರಸಿದ್ದಿ ಪಡಿದಿವೆ.ಅನುಭವವಿಲ್ಲದೆಜ್ಞಾನವಿಲ್ಲಾ, ಜ್ಞಾನವಿಲ್ಲದೆ ಮೋಕ್ಷವಿಲ್ಲಎಂದು ಸೊಚಿಸುತ್ತಾರೆ. ವಿಜಯದಾಸರು ಸುಳಾದಿ ಸಾಹಿತ್ಯಕ್ಕೆ ಅಮೊಲ್ಯಕಾಣಿಕೆ ನೀಡಿದ್ದಾರೆ.ಅನೇಕ ಹರಿದಾಸರಿಗೆ ಅಂಕಿತ ಪ್ರದಾನಮಾಡಿದ್ದಾರೆ. ಇವರ ಅನುಗ್ರಹಕ್ಕೆ ಪಾತ್ರರಾದ ಹರಿದಾಸರು ಮುಕ್ತಕಂಠದಿAದ ಕೊಂಡಾಡಿದ್ದಾರೆ,ಇAದಿಗೊ ವಿಜಯದಾಸರ ಸಾಹಿತ್ಯ ಪ್ರಸ್ತುತವಾಗಿದೆ.
ಡಾ, ಶೀಲಾದಾಸ,
ರಾಯಚೂರು