ರಾಯಚೂರು ಜಿಲ್ಲೆಯ ಹರಿದಾಸರ ನೆಲೆಗಳು

                                        

ಕನ್ನಡ ಸಾಹಿತ್ಯ ಪರಂಪರೆಯನ್ನು ಅವಲೋಕಿಸಿದಾಗ ನಡುಗನ್ನಡ ಸಾಹಿತ್ಯ ಜನಪರವಾಗಿ ಜನಮುಖಿಯಾಗಿ ಬೆಳೆದು ಬಂದದ್ದು ಕಂಡುಬರುತ್ತದೆ. ಹಳಗನ್ನಡ ಕವಿಗಳಂತೆರಾಜಾಶ್ರಯದಲ್ಲಿದ್ದು ರಾಜನನ್ನು ಹಾಡಿಹೊಗಳುವ, ಪಾಂಡಿತ್ಯಪೂರ್ಣವಾಗಿ ಕಾವ್ಯರಚಿಸಿ ಭೇಷ್ ಎನ್ನಿಸಿಕೊಳ್ಳುವುದನ್ನು ನಿರಾಕರಿಸಿ `ಇಳೆ ನಿಮ್ಮ ದಾನ ಬೆಳೆೆ ನಿಮ್ಮದಾನ, ಸುಳಿದು ಸೂಸುವ ಗಾಳಿ ನಿಮ್ಮದಾನ ನಿಮ್ಮನುಳಿದು ಅನ್ಯರನು ಹೊಗಳುವ ಕುನ್ನಿಗಳಿಗೇನೆಂಬೆ’ ಎಂಬ ವಚನ ಇಡೀ ನಡುಗನ್ನಡದ ಸಾಹಿತ್ಯದ ಮಾರ್ಗವನ್ನು,ಧೋರಣೆಯನ್ನು ಸ್ಪಷ್ಟವಾಗಿ ನಿರ್ದೇಶಿಸುತ್ತಿದೆ.

ಇದೇ ತರಹದ ಧೋರಣೆಯನ್ನು ಹೊಂದಿದವರು ಹರಿದಾಸರು. ಮಧ್ಯಕಾಲೀನ ಸಂದರ್ಭದಲ್ಲಿ ಸಮಾಜ ವಿಪ್ಲವ ಗೊಂಡಿತ್ತು. ಯುದ್ಧಗಳು ಜನರಲ್ಲಿ ಬದುಕಿನ ಭರವಸೆಗಳನ್ನು,ಕನಸುಗಳನ್ನು ನುಚ್ಚುನೂರಾಗಿಸಿತ್ತು. ಈ ಸಂದರ್ಭದಲ್ಲಿ ಹರಿದಾಸರು ಸಮಾಜೋಧಾರ್ಮಿಕ ನೆಲೆಯಲ್ಲಿ ಜನರಲ್ಲಿ ಅರಿವನ್ನು,ಬದುಕಿನಲ್ಲಿ ಭರವಸೆಯನ್ನು ತುಂಬಲು ಕಾರ್ಯತತ್ಪರರಾದರು.

ಹರಿದಾಸ ಸಾಹಿತ್ಯವು ನರಹರಿತೀರ್ಥರಿಂದ ಅಂಕುರಗೊAಡು ಶ್ರೀಪಾದರಾಜ.ವಾದಿರಾಜ ಮತ್ತು ವ್ಯಾಸರಾಜರಿಂದ ವಿಕಸಿತಗೊಂಡು ಕನಕ-ಪುರಂದರದಾಸರಲ್ಲಿ ಫಲಪ್ರದವಾಯಿತು. ಆನಂತರ ಪ್ರಸನ್ವೆಂಕಟದಾಸರು,ಮಹಿಪತಿದಾಸರು ಪರಂಪರೆಯನ್ನು ಮುಂದುವರೆಸಿದರು ಇವರ ನಂತರ ಬಂದವರೆ ವಿಜಯದಾಸರು. ಅಂದಿನಿAದ ಇಂದಿನವರೆಗೂ ಎಲ್ಲರನ್ನು ತಮ್ಮ ಸಾಹಿತ್ಯದ ಮೂಲಕ ಎಲ್ಲಾ ಹರಿದಾಸರನ್ನು ಪ್ರಭಾವಿಸಿದ್ದಾರೆ. ಅವರಲ್ಲಿ ಗೋಪಾಲದಾಸರು,ಜಗನ್ನಾಥದಾಸರು,ಪ್ರಾಣೇಶದಾಸರು ಪ್ರಮುಖರು.

ಹರಿಸಾಸ ಸಾಹಿತ್ಯಕ್ಕೆ ಮಧ್ವಸಿದ್ಧಾಂತದ ಮೂಲಕ ಭಕ್ತಿಯನ್ನು ಪ್ರಚುರ ಪಡಿಸುವುದೇ ಪ್ರಮುಖ ಪ್ರೇರಣೆಯಾಗಿದೆ. ಇದರೊಂದಿಗೆ ಮತಪ್ರಚಾರ, ಜನಜಾಗೃತಿಯು ಪೂರಕವಾಗಿವೆ. ಹರಿಸರ್ವೂತ್ತಮತ್ವವನ್ನು ಸಾಧಿಸುವುದು, ಸಂಸ್ಕೃತ ವಾಙ್ಮಯವನ್ನು ಕನ್ನಡಿಕರಿಸಿ ಜನರಿಗೆ ಅರಿವುಮೂಡಿಸುವುದು,ಇಹ-ಪರದಲ್ಲಿ ಮುಕ್ತಿಯನ್ನು ನೀಡುವುದೇ ಪ್ರಮುಖ ಧೋರಣೆಯಾಗಿದೆ. ಇದರೊಂದಿಗೆ ಲೋಕಜ್ಞಾನ, ಸಾಮಾಜಿಕ ಅರಿವನ್ನು ಮೂಡಿಸುವುದು ಇವರ ಉದ್ದೇಶವಾಗಿದೆ. ಜನಪರವಾದ ಕಾಳಜಿಉಳ್ಳ ಹರಿದಾಸರು ತಮ್ಮ ವಿಚಾರಗಳ ಅಭಿವ್ಯಕ್ತಿಗಾಗಿ ಜನರಿಗೆ ಸುಲಭವಾಗಿ ನಿಲುಕುವ ಜನಪದ ಭಾಷೆ ಮತ್ತು ಜನಪದ ಲಯಗಳನ್ನು ಬಳಸಿಕೊಂಡರು. ದ್ವಿಪದಿ,ತ್ರಿಪದಿ,ಚೌಪದಿ,ಷಟ್ಪದಿ,ಏಳೆ ರಗಳೆ ಅಕ್ಕರದಂತಹ ಲಯಗಳನ್ನು ಬಳಸಿಕೊಂಡು ಜನರಿಗೆ ಸುಲಭವಾಗಿ ಅರಗುವಂತಹ ಮಾರ್ಗವನ್ನು ಅನುಸರಿಸಿದರು. ಕೀರ್ತನೆ, ಸುಳಾದಿ, ಉಗಾಭೋಗ, ದಂಡಕ, ತತ್ವಸುವ್ವಾಲಿ,ಮುಂಡಿಗೆ,ಸಾAಗತ್ಯ,ಬಯಲಾಟಗಳAಥಹ ಪ್ರಕಾರಗಳನ್ನು ಬಳಸಿಕೊಂಡರು. ಈ ಎಲ್ಲಾ ಪ್ರಕಾರಗಳ ವಿಷಯ ಒಂದೇ ಆದರೂ ಜನರ ಗ್ರಾಹ್ಯಗತಿಯನ್ನು ಅನುಸರಿಸಿ,ಹೇಳುವ ವಿಷಯದ ಗಾಂಭಿರ್ಯವನ್ನು ಅನುಸರಿಸಿ ಈ ಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ.

ಹರಿದಾಸರಾಗುವುದೆಂದರೆ ಒಂದು ಸಿದ್ಧಾಂತಕ್ಕೆ ಬದ್ಧರಾಗುವುದು. ಹರಿಸರ್ವೋತ್ತಮನು,ಸರ್ವ ವ್ಯಾಪ್ತನು, ಸರ್ವಸ್ವತಂತ್ರನು, ಜಗತ್ತಿನಲ್ಲಿ ಪಂಚಬೇಧಗಳಿವೆ, ಜಗತ್ತು ಸತ್ಯ,ತಾರತಮ್ಯದಿಂದ ಕೂಡಿದೆ,ಎಂಬವಿಚಾರವನ್ನು ಪ್ರಚುರ ಪಡಿಸುತ್ತಾರೆ. ನವವಿಧ ಭಕ್ತಿಯನ್ನು ವಿವರಿಸುತ್ತ ಅತ್ಮೊದ್ಧಾರದ ಕಡೆ ಗಮನ ಹರಿಸುತ್ತಾರೆ. ಹರಿದಾಸರು ಈಗಾಲೆ ಇದ್ದ ಧರ್ಮದ ಕಟ್ಟುಪಾಡುಗಳನ್ನು ಸಡಿಲಗೊಳಿಸಿ ಸಾಮಾನ್ಯರೂ ಧರ್ಮದ ಅನುಷ್ಠಾನ ಮಾಡಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟರು. ಹರಿದಾಸರಾಗಬೇಕಾದರೆ ಅಂಕಿತ ಪ್ರದಾನವಾಗಬೇಕು. ಅದು ಸ್ವಪ್ನದ ಮುಖಾಮತರ ಇರಬಹುದು, ಅಥವಾ ಗುರುಗಳಿಂದವಾದರೂ ಅಂಕಿತ ಪ್ರದಾನವಾಗಬೇಕು. ಅಂಕಿತ ಪಡೆದುಕೊಂಡ ನಂತರ ಸಾಹಿತ್ಯವನ್ನು ರಚಿಸಬೇಕು ಆವಾಗ ಅದು ಮಾನ್ಯವಾಗುತ್ತದೆ. ಇದು ಹರಿದಾಸ ಸಾಹಿತ್ಯದ ಸ್ಥೂಲವಾದ ಮಾಹಿತಿಯಾಗಿದೆ.

ರಾಯಚೂರು ಜಿಲ್ಲೆಯನ್ನು ಹರಿದಾಸರ ತವರೂರು ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೆಂದರೆ ಹದಿನೇಳನೇ ಶತಮಾನದಿಂದಲೂ ಪ್ರಸ್ತುತ ದಿನದವರೆಗೂ ಈ ನಾಡಿನಲ್ಲಿ ಅನೇಕ ಹರಿದಾಸರಾಗಿದ್ದಾರೆ. ಅವರ ನೆಲೆಗಳಿಗೆ ಭೇಟಿನೀಡಲು ವ್ಯವಸ್ಥೆಯ ವಿವರ ಹೀಗಿದೆ. ರಾಯಚೂರು ಜಿಲ್ಲೆಯು ಬೆಂಗಳೂರು ಮುಂಬೈ ರೈಲ್ವೆ ಹೆದ್ದಾರಿಯಲ್ಲಿ ಇರುತ್ತದೆ. ಹಾಗೆಯೇ ರಸ್ತೆಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.ಆAದ್ತ,ತೆಲAಗಾಣ ಮತ್ತು ಮಹಾರಾಷ್ಟç ರಾಜ್ಯದೊಂದಿಗೆ ನಿಕಟ ಸಂಪರ್ಕಹೊAದಿದೆ.

ಚೀಕಲಪರವಿ- ಇದು ವಿಜಯದಾಸರ ಜನ್ಮಸ್ಥಳವಾಗಿದೆ. ಇಲ್ಲಿ ಅವರು ವಾಸಮಾಡಿದ ಮನೆಯಿದೆ. ವಂಶಸ್ಥರು ವಾಸವಾಗಿದ್ದಾರೆ. ಇವರು ಬಾಲ್ಯದಲ್ಲಿ ಕಡುಬಡತನ ಅನುಭವಿಸಿ ಯಾತ್ರಿಕರೊಂದಿಗೆ ಕಾಶಿ ಮುಂತಾದ ಕ್ಷೇತ್ರಗಳಿಗೆ ಸಂಚರಿಸಿ ಅಧ್ಯಯನ ಮಾಡಿದ್ದಾರೆ. ಇವರಿಗೆ ಸ್ವಪ್ನದಲ್ಲಿ ಪುರಂದರ ದಾಸರು ವಿಜಯದಾಸ ಎಂಬುದಾಗಿ ಅಂಕಿತ ನೀಡಿದ್ದಾರೆ. ಇಲ್ಲಿ ಶ್ರೀಪಾದರಾಜರು ಸ್ಥಾಪಿಸಿದ ದೇವಸ್ಥಾನವಿದೆ. ವಿಜಯದಾಸರು ಕಾಶಿಯಿಂದ ತಂದ ಶಿವನ ಲಿಂಗವಿದೆ.ತುAಗೆ ಉತ್ತರವಾಹಿನಿಯಾಗಿ ಹರಿಯುತ್ತಿದ್ದಾಳೆ. ಅಪರೂಪದ ಸ್ಥಳವಾಗಿದೆ. ಭಕ್ತರು ಹರಕೆ ಹೊತ್ತುಕೊಂಡು ಸೇವೆ ಸಲ್ಲಿಸುತ್ತಾರೆ. ಈ ಕ್ಷೇತ್ರವು ರಾಯಚೂರು ಜಿಲ್ಲೆಯ ಮಾನ್ವಿತಾಲ್ಲೂಕಿನಿಂದ ಹದಿಮೂರು ಕಿಲೋಮೀಟರ ಅಂತರದಲ್ಲಿದೆ. ಸರಕಾರಿ ವಾಹನದ ವ್ಯವಸ್ಥೆಯಿದೆ. ಖಾಸಗಿವಾಹನಗಳೂ ಮಾನ್ವಿಯಿಂದ ಲಭ್ಯವಾಗುತ್ತದೆ.

ವಿಜಯದಾಸರು ಹರಿದಾಸಸಾಹಿತ್ಯದ ದ್ವಿತೀಯ ಘಟ್ಟದ ಪ್ರಮುಖ ಹರಿದಾಸರಾಗಿದ್ದಾರೆ. ಇವರು ಕೀರ್ತನೆ,ಉಗಾಭೋಗಾ ಮತ್ತು ಐದುನೂರಾ ಐವತ್ತುನಾಲ್ಕು ಸುಳಾದಿಗಳನ್ನು ರಚಿಸಿದ್ದಾರೆ. ಇವರಿಗೆ ಸುಳಾದಿ ದಾಸರೆಂದು ಭಕ್ತರು ಕರೆಯುತ್ತಾರೆ. ಸಂಖ್ಯಾAತ್ಮಕವಾಗಿ ಗುಣಾತ್ಮಕವಾಗಿ ಹೆಚ್ಚು ರಚಿಸಿದವರು ಇವರೇ ಆಗಿದ್ದಾರೆ. ಇವರ ಸಾಹಿತ್ಯವನ್ನು ಅಂತg Àಶಿಸ್ತೀಯ ನೆಲೆಯಲ್ಲಿ ಅಧ್ಯಯನ ಮಾಡುವಷ್ಟು ಮಹತ್ವವನ್ನು ಹೊಂದಿವೆ. ಈ ಕ್ಷೇತ್ರವನ್ನು ಸರಕಾರ ಅಭಿವೃದ್ಧಿ ಪಡಿಸಬೇಕಾಗಿದೆ

ಮೊಸರಕಲ್ಲು-: ಇದು ಭಕ್ತಿಯಲ್ಲಿ ಭಾಗಣ್ಣ ಎಂದು ಖ್ಯಾತರಾದ ಗೋಪಾಲದಾಸರ ಜನ್ಮಸ್ಥಳವಾಗಿದೆ. ಇವರು ಜನಿಸಿದ ಮನೆಯಿದೆ. ವಂಶಸ್ಥರು ವಾಸವಾಗಿದ್ದಾರೆ. ಇದು ದೇವದುರ್ಗ ತಾಲ್ಲೂಕಿನಲ್ಲಿದೆ. ಈ ಕ್ಷೇತ್ರಕ್ಕೆ ಆಗಮಿಸಲು ರಾಯಚೂರಿನಿಂದ ಮತ್ತು ಕಲಬುರಗಿಯಿಂದ ಸರಕಾರಿ ಬಸ್ಸಿನ ವ್ಯವಸ್ಥೆಯಿದೆ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ಜೀವನೋಪಾಯಕ್ಕಾಗಿ ಸಂಕಾಪುರಕ್ಕೆ ತೆರಳುತ್ತಾರೆ. ಸಂಕಾಪುರ ಇಂದಿನ ಆಂದ್ರ ಪ್ರದೇಶದಲ್ಲಿದೆ. ಕಾರಣಾಂತರದಿAದ ಪಕ್ಕದ ಉತ್ತನೂರಿಗೆ ತೆರಳುತ್ತಾರೆ. ಅಲ್ಲಿ ಇದ್ದು ಅಧ್ಯಯನಮಾಡಿ ಜೋತಿಷ್ಯಶಾಸ್ತçದಲ್ಲಿ ಪರಣಿತರಾಗುತ್ತಾರೆ. ದೇಶದೇಶದ ಜನ ಭವಿಷ್ಯ ಕೇಳಲು ಬರುತ್ತಾರೆ. ಅಷ್ಟೇ ಏಕೆ ರಾಜಮಹಾರಾಜರೂ ಬರುತ್ತಾರೆ. ಈ ವಿಷಯ ವಿಜಯದಾಸರಿಗೆ ತಿಳಿಯುತ್ತದೆ. ಅವರು ಭಾಗಣ್ಣನವರಿಗೆ ಜ್ಞಾನವನ್ನು ದುಡ್ಡಿಗಾಗಿ ಮಾರಾಟ ಮಾಡಬಾರದೆಂದು ತಿಳಿಯ ಹೇಳಿ ಗೋಪಾಲವಿಠಲ ಎಂಬ ಅಂಕಿತ ನೀಡುತ್ತಾರೆ. ಆವತ್ತಿನಿಂದ ಗೋಪಾಲವಿಠಲ ಎಂಬ ಅಂಕಿತದಿAದ ಕೀರ್ತನೆ ಸುಳಾದಿ ಉಗಾಭೋಗಗಳನ್ನು ರಚಿಸಿದ್ದಾರೆ ವಿಜಯದಾಸರ ಕಂಕಣಾಕಾರ ಸುಳಾದಿಗೆ ವಿವರಣೆ ನೀಡಿದ್ದಾರೆ. ಇವರ ಕೀರ್ತನೆ ಮತ್ತು ಸುಳಾದಿಗಳಳ್ಲಿ ಶರೀರ ರಚನೆಯ ಮಾಹಿತಿ ತುಂಬಾಚನ್ನಾಗಿ ನೀಡಿದ್ದಾರೆ. ವಿವಿಧ ಅವಯುವಗಳಲ್ಲಿ ವ್ಯಾಪ್ತನಾದ ಭಗವಂತನ ಕುರಿತಾದ ಮಾಹಿತಿ ಇದೆ. ಇವರು ವಿಶೇಷವಾಗಿ ಗಾಯತ್ರಿ ಮಂತ್ರ ಜಪಿಸಿಸಾಧನೆ ಮಾಡಿದ್ದಾರೆ. ಇವರ ಆರಾಧನೆಯನ್ನುಮೊಸರಕಲ್ಲು, ಉತ್ತನೂರು ಮತ್ತು ಸಂಕಾಪುರದಲ್ಲಿ ವಿಜೃಂಭಣೆಯಿAದ ಆಚರಿಸಲಾಗುತ್ತದೆ.

ಮಾನವಿ- ರಾಯಚೂರಿನಿಂದ ನಲವತ್ತೆಂಟು ಕಿಲೋಮಿಟರ್ ಅಂತರದಲ್ಲಿದೆ. ಇವರದು ಮಾನವಿ ತಾಲ್ಲೂಕಿನ ಬ್ಯಾಗವಾಟ ಜನ್ಮ ಭೂಮಿ. ಮಾನವಿ ಅವರ ಕರ್ಮಭೂಮಿಯಾಗಿದೆ. ಮಾನವಿಯಲ್ಲಿ ಲಕ್ಮೀನರಸಿಂಹದೇವೆರ ಸ್ಥಂಭವಿದೆ. ಅದು ಅವರ ಆರಾಧ್ಯದೈವದ ಪರಮ ಪವಿತ್ರವಾದ ಸ್ಥಳವಾಗಿದೆ.ಇವರ ಪೂರ್ವದ ನಾಮಧೇಯ ಶ್ರೀನಿವಾಸಾಚಾರ್ಯ ಎಂಬುದಾಗಿದೆ. ಇವರು ಮಂತ್ರಾಲಯದ ಶ್ರೀಮಠದಲ್ಲಿ ಅಧ್ಯಯನ ಪೂರೈಸಿ ಪಂಡಿತರೆನಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ವಿಜಯದಾಸರ ಪ್ರಭಾವವೂ ಈ ಭಾಗದಲ್ಲಿ ಹೆಚ್ಚಾಗಿರುತ್ತದೆ.ಮೊದಲು ವಿಜಯದಾಸರನ್ನು ಒಪ್ಪದೇ ಹೋದರೂ ಆನಂತರ ವಿಜಯದಾಸರ ಪರಮ ಶಿಷ್ಯರಾಗುತ್ತಾರೆ. ಇವರಿಗೆ ಬಂದ ಉದರಸೂಲೆಯನ್ನು ಗೋಪಾಲದಾಸರಿಗೆ ಹೇಳಿ ವಾಸಿಮಾಡಿಸಿದ ಕರುಣಾಳುಗಳು. ಜಗನ್ನಾಥದಾಸರಿಗೆ ಪಂಢರಾಪುರದ ಚಂದ್ರಭಾಗ ನದಿಯಲ್ಲಿ ಜಗನ್ನಾಥವಿಠಲ ಎಂಬ ಅಂಕಿತ ಲಭ್ಯವಾಗಿದೆ. ಇವರು ಈ ಅಂಕಿತದಿAದ ಕೀರ್ತನೆ,ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿದ್ದಾರೆ.`ಹರಿಕಥಾಮೃತಸಾರವೆಂಬ ಗ್ರಂಥವನ್ನು ರಚಿಸಿದ್ದಾರೆ. ಈ ಕೃತಿಗೆ ಸಂಸ್ಕೃತದಲ್ಲಿ ಟೀಕೆಯನ್ನು ರಚಿಸಲಾಗಿದೆ. ಸುಧಾ ಓದಿ ಪದಾ ಹಾಡು ಎಂಬ ಮಾತನ್ನು ಬದಲಾಯಿಸಿ ಪದಾ ಹಾಡಿ ಸುಧಾ ಓದು ಎನ್ನುವಂತೆ ರಚಿಸಿದ್ದಾರೆ. ಅನೇಕ ಪಂಡಿತರು ಈ ಕೃತಿಯ ವ್ಯಾಖ್ಯಾನ ಮಾಡಿದ್ದಾರೆ. ಆದರೂ ವಿಷಯದ ಆಳ ಇನ್ನು ಪೂರ್ಣವಾಗಿ ನಿಲುಕಿಲ್ಲ. ಇವರ ಶಿಷ್ಯರೇ ಮಾನವಿಯ ಗುಂಡಾಚಾರ್ಯುರು. ಇವರ ಅಂಕಿತಶ್ಯಾಮಸುAದರ ವಿಠಲ. ಇವರು ಈ ಅಂಕಿತದಿAದ ಕೀರ್ತನೆ ಸುಳಾದಿಗಳನ್ನು ರಚಿಸಿದ್ದಾರೆ. ಇವರು ವಿಶೇಷವಾಗಿ ಬಯಲಾಟಗಳನ್ನು ರಚಿಸಿದ್ದಾರೆ. ಮತ್ತು ಜನರಿಗೆ ಬಯಲಾಟವನ್ನುಕಲಿಸಿದ್ದಾರೆ. ಇವರದು ಬಲ್ಲಟಗಿ ಮಾನ್ವಿ,ಕುರಡಿ ವಿಶೇಷ ಕಾರ್ಯ ಕ್ಷೇತ್ರವಾಗಿದೆ.

ಲಿಂಗಸೂಗೂರು-ಇದು ರಾಯಚೂರಿನಿಂದ ಸುಮಾರು ತೊಂಭತ್ತೇಳು  ಕಿಲೋಮಿಟರ ಅಂತದಲ್ಲಿದೆ. ರಾಯಚೂರು ಬೆಳಗಾವಿ ಹೆದ್ದಾರಿಯಲ್ಲಿ ಮತ್ತು ಬೆಂಗಳೂರು ಬೀದರ ಹೆದ್ದಾರಿಯಲ್ಲಿ ಬರುತ್ತದೆ. ಇಲ್ಲಿ ಪ್ರಾಣೇಶದಾಸರು ಮತ್ತು ಇವರ ಪರಿಸರದ ಹರಿದಾಸರ ಕ್ಷೇತ್ರವಾಗಿದೆ. ಇಲ್ಲಿಯ ಮತ್ತೊಂದು ಮಹತ್ವದ ಸಂಗತಿಯAದರೆ ಶ್ರೀವರದೇಂದ್ರ ತೀರ್ಥರ ಬೃÀಂದಾವನವಿದೆ. ಈ ಪವಿತ್ರವಾದ ಪರಿಸರದಲ್ಲಿ ನಾಲ್ಕನೆಯ ಘಟ್ಟದ ಅನೇಕದಾಸರು ಆಗಿಹೋಗಿದ್ದಾರೆ. ನಾಲ್ಕನೆಯ ಘಟ್ಟದ ಹರಿದಾಸರಲ್ಲಿ ಪ್ರಾಣೇಶದಾಸರು ಪ್ರಮುಖರಾಗಿದ್ದಾರೆ. ಇವರ ಕೃಪೆಗೆ ಪಾತ್ರರಾದ ಸುಂದರವಿಠಲ ಅಂಕಿತರಾದ ಶ್ರೀ ಗೋರೇಬಾಳ ಹನುಮಂತರಾಯರು ಬಹಳ ಮುಖ್ಯರಾಗುತ್ತಾರೆ.ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲಿಯನ್ನು ಸ್ಥಾಪಿಸಿ ಹರಿದಾಸ ಸಾಹಿತ್ಯದ ಸಂಗ್ರಹ, ಪ್ರಕಟಣೆ ಮತ್ತು ಮಾರಾಟ ಮಾಡಿದ ತಪಸ್ವಿಗಳು. ತಮ್ಮ ವಯಕ್ತಿಕ ಹಣವನ್ನು ಬಳಸಿಕೊಂಡು ಹರಿದಾಸರ ಅನನ್ಯಸೇವೆ ಸಲ್ಲಿಸಿದ್ದಾರೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕಾರ್ಯವನ್ನು ಇವರುಮಾಡಿದ್ದಾರೆ. ಇಂದು ಅಧ್ಯಯನಕ್ಕೆ ಉಪಲಬ್ಧವಿರುವ ಕೃತಿಗಳು ಗೊರೇಬಾಳ ಹನುಮಂತರಾಯರ ಶ್ರಮದ ದ್ಯೂತಕವಗಿವೆ ,ಇವರು ಕೀರ್ತನೆ,ಸುಳಾದಿಯನ್ನು ರಚಿಸಿದ್ದಾರೆ. ಹರಿದಾಸ ಸಾಹಿತ್ಯದ ಸಂಪಾದನೆಯನ್ನು ಮಾಡಿ ಮಹದುಪಕಾರ ಮಾಡಿದ್ದಾರೆ. ಇವರ ಜನ್ಮ ಸ್ಥ¼ ಗೋರೇಬಾಳÀ.ಇದು ಲಿಂಗಸೂಗೂರಿಗೆ ಹತ್ತಿರವಿರುವ ಕ್ಷೇತ್ರವಾಗಿದೆ. ಇಲ್ಲಿ ವಂಶಸ್ಥರು ವಾಸರಾಗಿದ್ದಾರೆ. ಲಿಂಗಸೂಗೂರು ಹರಿದಾಸ ಸಾಹಿತ್ಯದ ಕೆಂದ್ರವಾಗಿದ್ದು ಈ ಪರಿಸರದಲ್ಲಿ ,ಶ್ರೀಶಪರಾಣೇಶವಿಠಲದಾಸರು,ಗುರುಶ್ರೀ±ಪ್ರಾಣೇಶ ವಿಠಲರು,Àವರದೇಶವಿಠಲರು,ಅನೇಕ ಹರಿದಾಸರು ಆಗಿಹೋಗಿದ್ದಾರೆ. ಎಲೆ ಮರೆಕಾಯಿಯಂತೆ ಅನೇಕರು ಆಗಿಹೋಗಿದ್ದಾರೆ. ಅನೇಕ ವಿದ್ವಾಂಸರು ಇಲ್ಲಿ ವಾಸವಾಗಿದ್ದಾರೆ.

ಕೊಪ್ಪರ- ಇದು ದೇವದುರ್ಗ ತಾಲ್ಲೂಕಿನಿಂದ ಹದಿಮೂರು ಕಿಲೋಮೀಟರ ಅಂತರದಲ್ಲಿದೆ. ಕೃಷ್ಣಾನದಿಯ ತೀರದಲ್ಲಿ ನರಸಿಂಹ ದೇವರ ದೇವಸ್ಥಾನವಿದೆ. ಇಲ್ಲಿಯ ಅರ್ಚಕರಾದ ನರಹರಿವಿಠಲಾಂಕಿತರಾದ ಗಿರಿಆಚಾರ್ಯರು ತಪಸ್ವಿಗಳು. ಇವರು ಕೀರ್ತನೆಗಳನ್ನು ರಚಿಸಿದ್ದಾರೆ. ಇವರದು ಕೊಪ್ಪರ ಕ್ಷೇತ್ರವಾಗಿದೆ.

ಲಿಂಗದಹಳ್ಳಿ- ಇಲ್ಲಿ ರಾಮದಾಸರ ಆರಾಧನೆಯನ್ನು ವಿಜರಂಭಣೆಯಿAದ ಆಚರಿಸಲಾಗುತ್ತದೆ. ಬಡೇಸಾಬ ಎಂಬಗೃಹಸ್ಥರು ಮೂಲತಃ ಜೋಳದಹೆಡಗಿ ಗ್ರಾಮದವರು. ಇವರು ಬೇರೇಬೇರೆ ಕಾರಣಗಳಿಂದ ಲಿಂಗಸೂಗುರು,ಗೊನವಾರಗಳಲ್ಲಿ ಸಂಚರಿಸಿ ಜ್ಞಾನಸಂಪಾದನೆ ಮಾಡಿದ್ದಾರೆ. ಇವರು ಏಳುನೂರಾ ಐವತ್ತು ಕೀರ್ತನೆಗಳನ್ನು ,ನೂರು ಉಗಾಭೋಗಗಳನ್ನು,ಐದು ಖಂಡಕಾವ್ಯಗಳನ್ನು ಸಂಸ್ಕೃತ ಮತ್ತು ಉರ್ದುಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.ಇವರ ಕೀರ್ತನೆಗಳು ಇಂಗ್ಲೀಷ ಬಾಷೆಯಲ್ಲಿ ತರ್ಜುಮೆ ಗೊಂಡಿವೆ. ಜಾಲಹಳ್ಳಿಯಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿಯ ಲಿಂಗದಳ್ಳಿಯಲ್ಲಿ ಇವರ ಆರಾಧನೆ ವೈಭವದಿಂದ ಹಿಂದುಗಳು ಆಚರಿಸುತ್ತಾರೆ. ಧರ್ಮ ಸಮನ್ವಯತೆಗೆ ಹೆಸರಾದ ಕ್ಷೇತ್ರವಾಗಿದೆ.

ಅಸಗಿಹಾಳ- ಇದು ರಾಯಚೂರಿನಿಂದ ಸುಮಾರು ಹತ್ತುಕಿಲೋಮೀಟರ ಅಂತರದಲ್ಲಿದೆ.ಇದು ಗೋವಿಂದದಾಸರ ಕ್ಷೇತ್ರವಾಗಿದೆ. ಇವರು ಆರಾಧಿಸಿದ ದೇವಸ್ಥಾನವಿದೆ. ಇಲ್ಲಿ ಯಾವುದೇ ಸ್ಮಾರಕಗಳಿಲ್ಲ. ಆದರೆ ಗೋವಿಂದದಾಸರು ಬಳಸಿದ ವಸ್ತುಗಳನ್ನು ಇವರ ಶಿಷ್ಯರು ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಾರೆ. ಇವರ ಶಿಷ್ಯ ಪರಂಪರೆ ದಾಸ ಸಂಸ್ಕೃತಿಯನ್ನು ಅನುಷ್ಠಾನ ಮಾಡಿಕೊಂಡು ಮಾದರಿಯಾಗಿದ್ದಾರೆ. ಎಲೆಮರೆಯ ಕಾಯಿಯಂತೆ ಅನೇಕದಾಸರು ಆಗಿಹೋಗಿದ್ದಾರೆ ಮತು ಪ್ರಸ್ತುತ ದಿನಗಳಲ್ಲಿ ರಚನೆ ಮಾಡುತ್ತಿದ್ದಾರೆ.

ಹೀಗೆ ದಿನ್ನಿ,ಕವಿತಾಳ, ಪಾಮನಕಲ್ಲೂರು, ಮಸ್ಕಿ,ಸಿಂದನೂರು,ವಟಗಲ್ ಮುಂತಾದ ಸ್ಥಳಗಳಲ್ಲಿ ಹರಿದಾಸರು ಅಗಿಹೋಗಿದ್ದಾರೆ. ಇವರದೇ ಆದ ಯಾವಸ್ಮಾರಕಗಳು ಇಲ್ಲದೇ ಹೋದರು ಅವರು ಜನಿಸಿದ, ವಾಸಿಸಿದ ಮನೆಗಳು ಬಳಸಿದ ವಸ್ತುಗಳು,ಅವರ ಪರಿಸರದಲ್ಲಿ ಬೆಳೆದ ಭಕ್ತಪರಂಪ   ಈ ವಿಷಯವು ಕ್ಷೇತ್ರಕಾರ್ಯವನ್ನು ಬಯಸುತ್ತದೆ. ಸರಕಾರ ಈ ವಿಚಾರದಲ್ಲಿ ಚಿಂತನೆ ನಡಿಸಿ ಈ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಬಹುದಾಗಿದೆ. ಅದರೊಂದಿಗೆ ನಮ್ಮ ಸಂಸ್ಕತಿಯನ್ನು ಉಳಿಸಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯನ್ನು ಕೈಗೊಳ್ಳಬಹುದಾಗಿದೆ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.