ಅಕ್ಕಮಹಾದೇವಿ ಕನ್ನಡದ ಮೊದಲ ಕವಿಯತ್ರಿ,ಅಕೆ ರಚಿಸಿದ ವಚನಗಳು ಸಂಖ್ಯಾತ್ಮಕವಾಗಿಯೂ,ಗುಣಾತ್ಮಕವಾಗಿಯೂ ಮೌಲಿಕವಾಗಿವೆ.ಬಗೆದಷ್ಟೂ ಹೊಸಹೊಸ ವಿಚಾರಗಳು ಬಿಚ್ಚಿಕೊಳ್ಳುತ್ತ ಆಲೋಚನೆಗೆ ತೊಡಗಿಸುತ್ತವೆ. ತಾತ್ವಿಕ,ಸಾಮಾಜಿಕ, ಧಾರ್ಮಿಕ,,ಸಾಹಿತ್ಯಿಕ ವಿಚಾರಗಳು ಆಕೆಯ ಅಬಿವ್ಯಕ್ತಿಯ ವೈಶಿಷ್ಟö್ಯಗಳಾಗಿವೆ.ಭಾವಗೀತಾತ್ಮಕ ಬರವಣೆಗೆಯಿಂದ ಜೀವನದಲ್ಲಿ ಎದುರಾಗುವ, ಎದುರಾಗಬಹುದಾದ ಅನುಭವಗಳನ್ನು ಮಾರ್ಮಿಕವಾಗಿ ಸೂಚಿಸುತ್ತಾಳೆ.ಸಾಹಿತ್ಯಿಕ ಗುಣಗಳು ಸಹಜವಾಗಿ ವಚನದಲ್ಲಿ ಬಂದಿರುವುದರಿAದ ಓದುಗರಿಗೆ ಅನುಭವ ವೇದ್ಯವಾಗುತ್ತವೆ.
ಪ್ರಸ್ತುತ ಅಕ್ಕನದು ಕವಿ ಮನಸ್ಸು.ಕಾವ್ಯಕ್ರೀಯೆಯಲ್ಲಿ ಗಾಢವಾಗಿ ಚಿಂತನೆಗೆ ಒಳಗಾಗಿ ಅಭಿವ್ಯೆಕ್ತಿಸುವಾಗ ಪ್ರತಿಮೆಗಳು ಹುಟ್ಟಿಕೊಳ್ಳುತ್ತವೆ.P Àವಿ ತನ್ನ ಭಾವಗಳನ್ನು ಶಬ್ದಚಿತ್ರಗಳ ಮೂಲಕ ಹೇಳುವ ವಿಧಾನವೇ ಪ್ರತಿಮೆಯ ಕೆಲಸ. ಇವು ಬರಿ ಶಬ್ದಚಿತ್ರಗಳಾದರೆ ಸಾಲದು, ಉತ್ತಮ ಕಾವ್ಯಾಂಶಗಳನ್ನು ಹೊಂದಿರಬೇಕು.ಈ ರೀತಿಬಂದ ವಿಚಾರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ .ಮನಸ್ಸಿಗೆ ಮುಟ್ಟುತ್ತವೆ. ಸದಾಕಾಲ ನೆನಪಿನಲ್ಲಿ ಉಳಿದುಕೊಳ್ಳುತ್ತವೆ.
ಬದುಕಿನಲ್ಲಿ ಕಷ್ಟನಷ್ಟಗಳು ಎಷ್ಟು ಸಹಜ ಎಂಬುವುದನ್ನು`ಬೆಟ್ಟದಾಮೇಲೊAದು ಮನೆಯಮಾಡಿ’ ಎಂಬವಚನ ಮಾರ್ಮಿಕವಾಗಿ ಧ್ವನಿಸುತ್ತದೆ.ಮನುಷ್ಯನಿಗೆ ಕಷ್ಟಗಳಿಂದ ಬಿಡುಗಡೆ ಇಲ್ಲಾ. ಕಷ್ಟವೇ ಜೀವನ. ಅದರಲ್ಲಿ ಇದ್ದುಕೊಂಡು ಅದರಿಂದ ಬಿಡುಗಡೆ ಪಡೆದುಕೊಳ್ಳುವಲ್ಲಿ ಪ್ರಯತ್ನನಡೆಸಬೇಕು.ಆದರೆ ನಾವುಗಳು ಕಷ್ಟವನ್ನು ಬರಮಾಡಿಕೊಳ್ಳುತ್ತೇವೆ.ಸಂಸಾರ ಸಾಗರದಿಂದ ಹೊರಬರದೆ ಕಲ್ಲ ಹೊತ್ತು ಕಡಲೊಳಗೆ ಮುಳುಗುತ್ತೇವೆ. ಅಲ್ಲದೆ ಕಷ್ಟಗಳು ಬದುಕಿಗೆ ಪಾಠಗಳಾಗುತ್ತವೆ.
`ಚಂದನವ ತೇದೊಡೆ ನೊಂದೆನೆAದು ಕಂಪ ಬಿಟ್ಟೀತೆ, ತಂದು ಸುವರ್ಣವ ಕಡಿದೊಡೆ ಬೆಂದು ಕಳಂಕ ಹಿಡಿಯಿತ್ತೆ’’ಎಂಬಲ್ಲಿ ಆಕೆ ಕೊಡುವ ಪ್ರತಿಮಗಳು ವಿಶೇಷವಾಗಿವೆ.
ಕಷ್ಟಗಳು ಸಹಜವಾಗಿಬರುತ್ತವೆ.ಅವುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂಬ ವಿಚಾರಗಳು ಪ್ರತಿಮೆಯ ಮೂಲಕ ಸಾಕಾರಗೊಂಡಿವೆ.
`ಅಕ್ಕ ಕೇಳವ್ವಾ ನಾನೊಂದು ಕನಸಕಂಡೆ” ಎಂಬ ವಚನ ಅಕ್ಕನ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತದೆ.ತಾತ್ವಿಕ ವಿಚಾರವನ್ನು ಹೇಳುವಾಗ ಕನಸನ್ನು ಹೆಚ್ಚು ಬಳಸಿಕೊಳ್ಳುವುದು ಸಹಜವಾಗಿ ಕಂಡು ಬರುತ್ತದೆ.ಭಕ್ತರಾದವರು ಪ್ರಜ್ಞಾ,ಸುಪ್ತಾವಸ್ಥೆಯಲ್ಲಿ ಕ್ಷಣಕ್ಷಣವೂ ತನ್ನ ಆರಾಧ್ಯ ದೈವದ ಸ್ಮರಣೆಯಲ್ಲಿರುತ್ತಾರೆ,ಇರಬೇಕು.ಯಾವ ವಿಚಾರ ನಿರಂತರವಾಗಿ ಆಲೋಚನೆಗೆ ತೊಡಗುತ್ತದೆಯೋ ಅದು ಕನಸಿನ ರೂಪದಲ್ಲಿ ಬರುತ್ತದೆ ಎಂಬುದು ಮನಶಾಸ್ತçಜ್ಞರ ಅಭಿಪ್ರಾಯ. ಸದಾ ಚನ್ನ ಮಲ್ಲಿಕಾರ್ಜುನನ ಧ್ಯಾನದಲ್ಲಿರುವ ಅಕ್ಕಗೆ ಕನಸು ಕಂಡದ್ದು ಸಹಜವೆ. ಜೊತೆಗೆ ತನ್ನ ಆರಾಧ್ಯ ದೈವವನ್ನು ಕಲ್ಪಿಸಿಕೊಂಡ ಬಗೆ ಅದರಲ್ಲಿ ಚನ್ನಾಗಿ ಮೂಡಿಬಂದಿದೆ. `ಅಕ್ಕಿ ಅಡಕಿತೆಂಗಿನಕಾಯಿ ಕಂಡೆ,ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ ಗೊರವನು” ಎಂಬ ಮಾತುಗಳು ಶಿವನನ್ನುತಾನು ಹೇಗೆ ಕಂಡಿದ್ದಾಳೋ ಹಾಗೆ ನಮಗೂ ತೋರಿಸುವ ಪ್ರಯತ್ನ ಮಾಡುತ್ತಾಳೆ. ಆರಾಧ್ಯ ದೈವವನ್ನು ಕಾಣುವ ವಿಧಾನವನ್ನು ಪ್ರತಿಮೆಯ ಮೂಲಕ ಅನಾವರಣಗೊಳಿಸಿದ್ದಾಳೆ.
ಸಕಲಜೀವನ ಸಾಧನೆಗೆ ಶರೀರ ಪೂರಕವು.ಆದರೆ ಶರೀರಪೋಷಣವೇ ಸಕಲವಲ್ಲ. ಅದನ್ನೂ ಮೀರಿದ ಸಾಧನೆಗೆ ಅವಕಾಶವಿದೆ.ಆದರೆ ನಾವು ಅದನ್ನು ಅರಿಯದೆ ಶರೀರ ಪೋಷಣೆಗೆ ನಿಲ್ಲುತ್ತೇವೆ.ಅದನ್ನು ಖಂಡಿಸಿ,ಈ ಶರೀರವು
“ಅಮೇಧ್ಯದ ಮಡಿಕೆ,ಮೂತ್ರದ ಕುಡಿಕೆ
ಎಲುವಿನ ತಡಿಕೆ,ಕೀವಿನ ಹಡಿಕೆ
ಸುಡಲೀ ದೇಹವ :ಒಡಲುವಿಡಿದು ಕೆಡದಿರು
ಚನ್ನಮಲ್ಲಿಕಾರ್ಜುನನರಿಯದೆ ಮರುಳೆ” ಎಂದು ಪ್ರತಿಮೆಯ ಮೂಲಕ ಕಟ್ಟಿಕೊಡುತ್ತಾಳೆ.ಮುಂದುವರೆದು,
“ಊರ ಸೀರೆಗೆ ಅಗಸ ತಡಬಡಗೊಂಬAತೆ
ಹೊನ್ನೆನ್ನದು,ಹೆಣ್ಣೇನ್ನದು,ಮಣ್ಣೇನ್ನದು ಎಂದು ನೆನನೆನದು
ನಿಮ್ಮನರಿಯದ ಕಾರಣ ಕೆಮ್ಮನೆ ಕೆಮ್ಮನೆ ಕೆಟ್ಟö್ಯನಯ್ಯಾ” ಎಂದುವೈಚಾರಿಕತೆಗೆ ಮಹತ್ವ ನೀಡುತ್ತಾಳೆ.
ಭಕ್ತನಾದವಗೆ ಆರ್ತತೆ ಇರಬೇಕು.ತನ್ನ ದೈವವನ್ನು ಕಾಣುವ, ಕೂಡುವ ತವಕ ನೂರ್ಮಡಿಯಾಗಿರಬೇಕು.ಪವಿತ್ರವೂ ,ನಿರಂತರವೂ ಶಾಶ್ವತವೂ ಆಗಿರಬೇಕು.ಅದು ಭಕ್ತನಾವನ ನಿಷ್ಠೆ.ಇಲ್ಲವಾದರೆ ಭಕ್ತಿಯ ವ್ಯಭಿಚಾರವಾಗುತ್ತೆ ಎಂಬುದು ಶರಣರ ಏಕ ದೈವೋಪಾಸನೆಯ ಸಿದ್ಧಾಂತ.ಅದನ್ನು ಅಕ್ಕ
“ಅರಸಿನವ ಮಿಂದು,ಹೊನ್ನದೊಡಗಿಯೆ ತೊಟ್ಟು
ದೇವಾಂಗವನುಟ್ಟೆನೆಲೆ ಪುರುಷ ಬಾರಾ,
ನಿನ್ನ ಬರುವೆನ್ನ ಅಸುವಿನ ಬರವಾದುದೀಗ,’’
ಎಂದಿದ್ದಾಳೆ..ವಧುವರನ ನಿಷ್ಠೆ,ಭಕ್ತಭಗವಂತನನಿಷ್ಠೆಯ ಹೋಲಿಕೆ ನಿಜವಾಗಿಯೂ ಅರ್ಥವತ್ತಾದದ್ದು.
ಪರಮಾತ್ಮನೇ ಸೂತ್ರಧಾರ.ನಾವೆಲ್ಲಾ ಆತನ ಸೂತ್ರಧಾರಿಗಳು.ಅವ ನಡೆಸಿದಂತೆ ನಡೆಯ,ನುಡಿಯಬೇಕೆಂಬುದನ್ನು
“ಕೋಲತುದಿಯ ಕೋಡಗದಂತೆ,ನೇಣತುದಿಯ ಬೊಂಬೆಯAತೆ,
ಅಡಿದೆನಯ್ಯಾ ನೀನಾಡಿಸಿದಂತೆ,ಆನು ನುಡಿದೆನಯ್ಯ ನೀ ನುಡಿಸಿದಂತೆ,
ಆನು ಇದ್ದೆನಯ್ಯಾ ನೀ ಇರಿಸಿದಂತೆ
ಜಗದ ಯಂತ್ರವಾಹಕ ಚನ್ನ ಮಲ್ಲಿಕಾರ್ಜುನ ಸಾಕೆಂಬನ್ನಕ್ಕ”
ಎನ್ನುವಲ್ಲಿ ಸರ್ವಸಮರ್ಪಣೆ,ನಿಷ್ಠೆ,ಸರ್ವರಕ್ಷಕನೆಂಬ ವಿಸ್ವಾಸ ವ್ಯಕ್ತವಾಗುತ್ತದೆ.
ಹೀಗೆ ಅಕ್ಕನ ಅನೇಕ ವಚನಗಳಲ್ಲಿ ಅಮೂರ್ತ ಭಾವಗಳ ಮೂರ್ತಪ್ರತಿಮೆಗಳಾಗಿ ಬಳಕೆಯಾಗಿವೆ.ಈ ಪ್ರತಿಮೆಗಳು ಮನಸ್ಸನ್ನು ಜಾಗೃತಗೊಳಿಸಿ ಚಿಂತನೆಗೆ ಒಳಪಡಿಸುತ್ತವೆ.ವಚನಗಳ ಭಾವಗಳ ಜೀವಂತ ಕುರುಹುಗಳಾಗಿವೆ.ಬಿಡಿಬಿಡಿ ವಚನಗಳನ್ನು
ಇಡಿಯಗಿ ಸೂತ್ರಿಕರಿಸಲು ಸಾಧ್ಯವಾಗುವಂತೆ ಕಂಡುಬರುತ್ತದೆ. ಆಕೆಯ ಅಭಿವ್ಯಕ್ತಿಗೆ ಸುತ್ತಮುತ್ತಲು ಕಾಣುವ ಪರಿಸರವೇ ವಸ್ತುವಾಗಿವೆ.ಸಾಮಾನ್ಯ ಜನರಿಗೆ ಸಾಮನ್ಯ ವಿಚಾರಗಳಂತೆ ಕಂಡರೂ ಅವುಗಳನ್ನು ಕಾವ್ಯ ವಸ್ತುಗಳನ್ನಾಗಿ ಬಳಸಿಕೊಂಡದ್ದು ವಿಶೇಷವಾಗಿದೆ.ಈಪ್ರತಿಮೆಗಳು ಎಷ್ಟು ಮೂಲ ಭಾವವನ್ನು ಹಿಡಿದಿಡುತ್ತವೆಯೋ ಅಷ್ಟು ಕಾವ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ದೃಶ್ಯಗಳು ಅಕ್ಷರಗಳಾಗಿ ಮಾರ್ಪಟ್ಟು ವಸ್ತು ಸ್ಥಿತಿಯನ್ನು ಮನಮುಟ್ಟುವಂತೆ ರೂಪಿತವಾಗಿವೆ. ಈ ಎಲ್ಲ ಕಾರಣಕ್ಕಾಗಿ ಅಕ್ಕಮಹಾದೇವಿ ಮನದಲ್ಲಿ ಚಿರಂತನವಾಗಿ ಉಳಿದುಬಿಡುತ್ತಾಳೆ.
ಡಾ.ಶೀಲಾದಾಸ,
ರಾಯಚೂರು.