“ಮಂತ್ರಸಿದ್ಧಿಕ್ಷೇತ್ರ ಮಂತ್ರಾಲಯ’’
“ಮಂತ್ರಸಿದ್ಧಿಕ್ಷೇತ್ರ ಇದು ನೋಡಿ ಕೋವಿದರು
ಮಂತ್ರಪ್ರತಿಪಾದ್ಯ ಗೋಪಾಲವಿಠಲನಿಂದ’
ಎಂದು ಗೋಪಾಲದಾಸರು ಶ್ರೀರಾಘವೇಂದ್ರರ್ತೀರ ಕುರಿತು ರಚಿಸಿದ ಸ್ತೋತ್ರಸುಳಾದಿಯಲ್ಲಿ ನಿರೂಪಿಸಿದ್ದಾರೆ. ಗೋಪಾಲದಾಸರ ಸಾಹಿತ್ಯಸೇವೆ ಈ ನಾಡಿಗೆ, ಜನತೆಗೆ ಪುಣ್ಯಫಲ. ಇವರು ಗಾಯತ್ರಿ ಮಂತ್ರವನ್ನು ಒಲಿಸಿ ಕೊಂಡು ತ್ರಿಕಾಲ ಜ್ಞಾನಿಯಾಗಿ ಜ್ಯೋತಿಷ್ಯ ಹೇಳುವಲ್ಲಿ ನಿಪುಣರಾದರು. `ಭಕ್ತಿಯಲಿ ಭಾಗಣ್ಣ’ ಎಂದು ಖ್ಯಾತರಾದ, ಅಪರೋಕ್ಷ ಜ್ಞಾನಿಗಳಾದ ಗೋಪಾಲದಾಸರು “ಧರೆಯೊಳಗೆ ನಮ್ಮ ಗುರುರಾಘವೇಂದ್ರರಿನ್ನು ಇರುತಿಪ್ಪ ವಿವರವ ಅರಿತಷ್ಟು ವರ್ಣಿಸುವೆ’ ಎಂಬ ಸುಳಾದಿಯಲ್ಲಿ ಏನು ದಾಖಲಿಸಿದ್ದಾರೋ ಅದೆಲ್ಲವೂ ಅಕ್ಷರಶಃ ಇಂದು ಮಂತ್ರಾಲಯದಲ್ಲಿ ನಿಜವಾಗಿದೆ. ಐದುತಾಳ ಮತ್ತು ಜತೆಯಲ್ಲಿ ಸಮಗ್ರ ಮಂತ್ರಾಲಯದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸಿದ್ದಾರೆ.
ಅರಂಭ ಧೃವತಾಳದಲ್ಲಿ ಮಂತ್ರಾಲಯ ಕ್ಷೇತ್ರದ ಕುರಿತು“ ತುಂಗಾತೀರದಲ್ಲಿರುವ ಈ ಕ್ಷೇತ್ರದಲ್ಲಿ `ಹರಿ ಭಕ್ತರಾದ ಪ್ರಲ್ಹಾದರಾಜರು ವರಯಾಗಮಾಡಿ, ಸುರರಿಗೆ ಅಮೃತವುಣಿಸಿ, ಪರಿಪರಿ ಕ್ರಿಯೆಮಾಡಿ ಪರಿಶುದ್ಧರಾದರು, ಪ್ರಸಿದ್ಧರಾದರೆಂದು ತಿಳಿದು ಗುರುಗಳು ಈ ಕ್ಷೇತ್ರಕ್ಕೆ ಆಗಮಿಸಿದರು. ಪರಲೋಕ ಸಾಧನೆ ಮಾಡಿಕೊಂಡು ಸಿರಿ ಕೃಷ್ಣನ ಪೂಜಿಸಿ ಧರೆಯ ಮೇಲಿದ್ದ ಭಕ್ತರನ್ನು ಪೊರೆಯಬೇಕೆಂದು ಹರಿಯನ್ನು ಪ್ರಾರ್ಥಿಸಲು ಇವರ ದಯಾಳುತನವ ಗಮನಿಸಿ ನರಹರಿ ತಾನೆ ನಿಂದು ಪರಿಪರಿ ಪೂಜೆಗೊಂಡು, ಸಿರಿಯೊಂದಿಗೆ ಚಕ್ರಧರ ಇಹಪರದಲ್ಲಿ ತನ್ನ ಭಕ್ತರನ್ನು ಪೊರೆಯುತಿರುವ’ ಎಂದು ಕ್ಷೇತ್ರದ ಪರಮ ಪವಿತ್ರವಾದ ಮಹಿಮೆಯನ್ನು ಗುರುಗಳ ಕಾರುಣ್ಯವನ್ನು ಸಾರಿದ್ದಾರೆ.
ನರಹರಿ ಕೃಷ್ಣರಾಮ ಸಿರಿವೇದವ್ಯಾಸ
ಎರಡೆರಡು ನಾಲ್ಕು ಹರಿಮೂರ್ತಿಗಳು
ಪರಿವಾರಸಹಿತಾಗಿ ಸಿರಿಸಹಿತನಿಂದು
ಸುರಗುರು ಮಧ್ವಾಚಾರ್ಯರೆ ಮೊದಲಾಗಿ
ತರುವಾಯದಲ್ಲಿನ್ನು ತಾರತಮ್ಯಾನುಸಾರ
ಪರಿಪರಿಯತಿಗಳು ಇಪ್ಪರು ಇಲ್ಲಿ’ ಎಂದು ಈ ಕ್ಷೇತ್ರದ ಮಹತ್ವವನ್ನು ಸಾರಿ, ವೇದಶಾಸ್ತç ಪುರಾಣಗಳನ್ನು ಹರುಷದಿಂದ ಪಾರಾಯಣ ಮಾಡುವ, ಪರಿಪರಿಯಿಂದ ಸಂಗೀತಗಾಯನ ಮಾಡುವ, ಭಕ್ತಿಯ ಪರಾಕಾಷ್ಠೆಯಲಿ ನರ್ತಿಸುವ ಭಕ್ತರು, ವಿಧವಿಧ ಸೇವೆಸಲ್ಲಿಸಿ ಕೃತಾರ್ಥರಾಗುವ ಭಕ್ತಕೋಟಿ ಈ ಕ್ಷೇತ್ರಕ್ಕೆ ಆಗಮಿಸಿ ಅಮಿತ ಫಲಕ್ಕೆ ಭಾಜನರಾಗುವರು ಎಂದು ಸಾರಿದ್ದಾರೆ.
ನರಹರಿ ರೂಪರಾಗಿ ವಾಸವಾಗಿ ಇಲ್ಲಿ ದುರಿತ ದುಷ್ಕೃತ್ಯಗಳು, ಬ್ರಹ್ಮಹತ್ಯಗಳ ನಾಶಮಾಡಿ ಪೊರೆವರು, ಸಿರಿರಾಮನಾಗಿ ವಾಸವಾಗಿ ಇಲ್ಲಿ ಅನ್ನವನ್ನು ನೀಡಿ ಸ್ಥಿರಪಟ್ಟನೀಡಿ ಕಾಪಾಡುವರು, ಸಿರಿಕೃಷ್ಣನಾಗಿ ಇಲ್ಲಿ ವಾಸವಾಗಿ ಪರಿಪರಿಯಿಂದ ಆಗಮಿಸಿದ ಭಕ್ತರಿಗೆ ಮದುವೆ ಮುಂಜಿ,ಪುತ್ರೋತ್ಸವಗಳAತಹ ಹರಕೆ ಪೂರೈಸಿ ಹರುಷ ಪಡಿಸುತ್ತಾರೆ. ವೇದವ್ಯಾಸರೂಪರಾಗಿ ನಿಂದು ಹರಿಸರ್ವೋತ್ತಮ ತತ್ವವನ್ನು ಸಾರಿ ವರಜ್ಞಾನಸುಧೆಯ ಕರೆದು ಕೊಡುತ್ತಿದ್ದಾರೆ. ಹೀಗೆ ಭಕ್ತರಿಗೆ ಒಲಿದು ಪರಿಪರಿ ಓಲಗ ಕೊಡುತ್ತಿಪ್ಪ ಪುಣ್ಯಕ್ಷೇತ್ರವಿದೆಂದು ಸಾರುತ್ತಾರೆ.
`ರಾಘವೇಂದ್ರನೆAಬ ರೂಪ ತಾನೆಯಾಗಿ
ರಾಘವೇಂದ್ರನೆAಬ ನಾಮ ಇಡಿಸಿಕೊಂಡು
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ
ಭೋಗವರಿತು ತನ್ನಭಾಗವತರ ಕೀರ್ತಿ
ಸಾಧಿಸಿ ಸಲಹಲು ಜಗದೊಳಗೆಲ್ಲಾ’’ ಎಂದು ವಿಶ್ವವಿಖ್ಯಾತರಾಗಿ ಗುರುಗಳು ಬೇಡಿದವರಿಗೆ ಬೇಡಿದ ಭಾಗ್ಯನೀಡುವ ಕಾಮಧೇನು ಕಲ್ಪವೃಕ್ಷರಾಗಿ ಕಲಿಯುಗದಲ್ಲಿ ಕಾಪಾಡುವ ದೈವವಾಗಿದ್ದಾರೆ. ಅವರ ನಾಮಸ್ಮರಣೆಯೇ ಸಕಲ ದುರಿತನಾಶನ. ಅವರನಾಮ್ಮರಣೆಯೇ ಸಕಲಪುಣ್ಯಫಲಕ್ಕೆ ಸಾಧನ. ಗುರುಗಳು ಭಾಗವತರಿಂದ ಬಲು ಪೂಜೆಗೊಳ್ಳವರು ಎಂದು ಗೋಪಾಲದಾಸರು ಸಾರಿದ್ದಾರೆ. ಈ ಕ್ಷೇತ್ರದಲ್ಲಿ
“ದಿನದಿನ ನೂತನ ಪೂಜೆಗಳಾಗುವವು
ದಿನದಿನದಲ್ಲಿ ನೂತನ ಉತ್ಸವಗಳಾಗುವುವು
ದಿನದಿನಕಿಲ್ಲಿ ನೂತನವಾರ್ತೆಗಳಾಗುವವು
ಜನಸಂದಣಿಸಿ ಪ್ರತಿದಿನ ವಿಪ್ರಭೋಜನ’’
ವಾಗುವುದು ಎಂದಿದ್ದಾರೆ. ಸುಪ್ರಭಾತಸೇವೆಯಿಂದ ಆರಂಭವಾಗಿ ರಥೋತ್ಸವದತನಕ ಎಲ್ಲಾ ವಿಧದ ಪೂಜೆಗಳಲ್ಲಿ ಭಕ್ತರು ಭಕ್ತಿಯಿಂದ ಪಾಲ್ಗೊಂಡು ಕೃತಾರ್ಥರಾಗುತ್ತಾರೆ. ಸಂಗೀತ , ನೃತ್ಯ, ಭಜನೆ, ಪಾರಾಯಣ, ಅನೇಕ ಸೇವೆಗಳನ್ನು ಗುರುಗಳಿಗೆ ಸಲ್ಲಿಸಿ ಸಂತೋಷಪಡುತ್ತಾರೆ. ಜ್ಞಾನಭಕ್ತಿ ವೈರಾಗ್ಯ ಹೊಂದಲು ದಿನನಿತ್ಯ ಜನ ತಾಯಕಾಣುªಂತೆ Àಹಂಬಲಿಸಿ ಜನ ಸಂದಣಿಸಿ ಹಾತೊರೆದು ಬರುತ್ತದೆ. ಎಲ್ಲರದೂ ಒಂದೊAದು ಬಯಕೆ. ಯಾರಬಯಕೆಯೂ ಇಲ್ಲಿ ಬಂದ ನಂತರ ನಿರರರ್ಥಕವಾಗಿಲ್ಲ. ಅನ್ನಪೂರ್ಣೆಯಂತೂ ಇಲ್ಲಿಯೇ ವಾಸವಾಗಿದ್ದಾಳೆ. ಹಸಿದು ಬಂದ ಭಕ್ತರಿಗೆ ನಿತ್ಯಭೋಜನ ಪ್ರಸಾದದ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹುಟ್ಟು ಸಾವುUಳ ಬಂಧನದಿÀAದ ಮುಕ್ತರಾಗುವರು. ಕ್ಷೇತ್ರದಲ್ಲಿ ದಿನಕರತೇಜನಾದ ಭಗÀವಂತ ಗುವಂತರ್ಗತ ವಾಸವಾಗಿದ್ದು ಭಕ್ತರನ್ನು ಪಾಲಿಸುವ.
“ ಮಂತ್ರಸಿದ್ಧಿಯ ಕ್ಷೇತ್ರ ಇದು ನೋಡಿ ಕೋವಿದರು
ಮಂತ್ರ ಪ್ರತಿಪಾದ್ಯ ಗೋಪಾಲವಿಠಲನಿಂದ’’ ಎಂದು ಕ್ಷೇತ್ರದ ಮಹಿಮೆಯನ್ನು ದಾಸರು ಸಾರಿದ್ದಾರೆ. ನಿತ್ಯೋತ್ಸವದ ಈ ಕ್ಷೇತ್ರದಲ್ಲಿ ಗುರುಗಳಿಗೆ ಸೇವೆಸಲ್ಲಿಸಿ ಅನುಪಮ ಅನುಗ್ರಹಕ್ಕೆ ಪಾತ್ರರಾದ ಅನೇಕ ಭಕ್ತರಿದ್ದಾರೆ. ಗುರುಗಳೇ ಇಲ್ಲಿ ವಾಸವಾಗಿ ಭಕ್ತರನ್ನು ಸದಾ ಅನುಗ್ರಹಿಸುತ್ತಿದ್ದಾರೆ. ಜ್ಞಾನದ ಸೂರ್ಯರಶ್ಮಿಯನ್ನು, ಭಕ್ತಿಯ ಚಂದ್ರಕಾAತಿಯನ್ನು ಭಕ್ತರ ಮೇಲೆ ಧಾರೆಯೆರಿಯುತ್ತಿದ್ದಾರೆ. ಇಂತಹ ಗುರುಗಳನ್ನು ಆರಾಧಿಸಯವ ಭಕ್ತರು ಧನ್ಯರು.
ಡಾ.ಶೀಲಾದಾಸ,
ರಾಯಚೂರು.