ಶ್ರೀಗುರುರಾಜ ರಕ್ಷಿಪುದು
“ಪ್ರಥಮದಲಿ ಪ್ರೆಹ್ಲಾದರೆನ್ನಿಸಿ
ದ್ವೀತೀಯ ಜನ್ಮದಿ ವ್ಯಾಸರೆನಿಸುತ
ತೃತೀಯ ಜನ್ಮದಿ ರಾಘವೇಂದ್ರಸ್ವಾಮಿಯೆAದೆನಿಸಿ
ಕ್ಷಿತಿಯಲವತರಿಸಿದ ಮಹಾತ್ಮನ
ಸ್ತುತಿಪೆ ನಿನ್ನನವರತ ಮನಸಿನ
ಖತಿಯ ಕಳೆದತಿಹಿತದಿ ಶ್ರೀಗುರುರಾಜ ರಕ್ಷಿಪುದು’’
ಎಂದು ಮನದುಂಬಿ ಭಕ್ತಿಪರವಶರಾಗಿ ಹಾಡಿದ ಹಾಡುಗಬ್ಬ `ಶ್ರೀಗುರುರಾಜ ಭಕ್ತಿಸಾರ’’
ನಡುಗನ್ನಡ ಕಾಲದಲ್ಲಿ ಭಕ್ತಿಯುಗ. ಈ ಸಂದರ್ಭದಲ್ಲಿ ಹರಿದಾಸ ಭಕ್ತಿಸಾಹಿತ್ಯವು ಕನ್ನಡ ಭಾಷೆಯಲ್ಲಿ ಷಟ್ಪದಿ,ಸಾಂಗತ,ತ್ರಿಪದಿ ಮುಂತಾದ ದೇಶೀ ಲಯಗಳಲ್ಲಿ ಓತಪ್ರೋತವಾಗಿ ಹರಿದುಬಂದಿತು. ಉದಾಹರಣೆಗೆ, ಕುಮಾರವ್ಯಾಸಭಾರತ, ಜೈಮಿನಿಭಾರತ, ಹರಿಭಕ್ತಿಸಾರ, ಹರಿಕಥಾಮೃತಸಾರ,ತತ್ವಸುವ್ವಾಲಿ ಇತ್ಯಾದಿ.ಈ ಪರಂಪರೆಯು ಆಧುನಿಕಸಾಹಿತ್ಯದಲ್ಲಿಯೂ ಈ ಪರಂಪರೆ ಮುಂದುವರೆದಿದೆ. ಅಂತಹ ಕೃತಿಗಳ ಸಾಲಿನಲ್ಲಿ ಕಂಡುಬರುವುದು ಶ್ರೀಗುರುರಾಜ ಭಕ್ತಿಸಾರ.
ಈ ಕೃತಿಯನ್ನು ರಚಿಸಿದವರು ಶ್ರೀವೆಂಕಟರಮಣ ಅಂಕಿತರಾದÀ ಕೆ. ರಾಮಾಚಾರ್ಯರು. ಇವರು ಮೂಲತಃ ಕಲಬುರಗಿ ಜಿಲ್ಲೆಯ ಮಣೂರಿನವರು. ಇದಲ್ಲದೆ “ವೆಂಕಟೇಶ ಬಕ್ತಿಸಾರ’’ ಮತ್ತು “ಚನ್ನಕೆಸವ ಭಕ್ತಿಸಾರ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಯು ೧೦೧ ಭಾಮಿನಿಷಟ್ಪದಿಲ್ಲಿ ರಚಿತವಾಗಿದೆ. ಈ ಕೃತಿಯು ಶ್ರೀರಾಘವೇಂದ್ರತೀxðರ ಪರಮ ಪವಿತ್ರವಾದ ಅವತಾರ ತ್ರಯದ ಚರಿತ್ರೆಯಾಗಿದೆ.
`ಗುರುಗಳೆಂದರೆ ಮಂತ್ರಾಲಯದ ಗುರುಗಳಲ್ಲದೆ ಅನ್ಯರುಂಟೆ ?ಎಂದು ಶಿಷ್ಯರಿಗೆ ಒಲಿದು ಹರುಷಸುರಿಸಿ ಕರೆಕರೆದು ಕರುಣದಿ ವರಗಳಕೊಡುವ ಕರುಣಾನಿಧಿ. ಪುನೀತವಾದ ಬೃಂದಾವನದಿ ರಾರಾಜಿಸುತ್ತ ಭ್ರತ್ಯರ ಪ್ರೀತಿ ಪಾತ್ರರಾಗಿದ್ದು ಭೂತ, ಪ್ರೇತ ಪಿಶಾಚಿಗಳ ಭಯ ನಿವಾರಣೆಮಾಡಿ ಖ್ಯಾತಿ ಪಡೆದ ಮಹಾತ್ಮರು. ಭಕ್ತರು ಯಾವ ಭಾವದವರು ಎಂದು ಸಾವಧಾನದಿ ಚಿಂತಿಸಿ ಫಲ ಮಂತ್ರಾಕ್ಷತೆ ಇತ್ತು ರಕ್ಷಿಸುವ ನಿಮ್ಮ ಸಮನಾದಗುರುಸಾರ್ವಭೌಮರ ನಾಕಾಣೆ. ನೇಮನಿತ್ಯಗಳಿರೆಯೆ, ಪಾಮರನನು ಆದರೆ ನಿಮ್ಮ ನಾಮೊಂದೇ ಬಲ್ಲೆನು. ಹೇ ಮಹಾತ್ಮ ಭಜಕರ ಪ್ರೇಮಿ ಮಂತ್ರಮAದಿರ ಚಿಂತಾಮಣಿ ಶ್ರೀಗುರುರಾಜ ರಕ್ಷಿಪುದು ಎಂದು ನಿವೇದಿಸಿಕೊಳ್ಳುತ್ತಾರೆ. ಶ್ರೀರಾಘವೇಂದ್ರ ಎಂಬ ಅಷ್ಟ ಮಾತ್ರೆಯ ಮಂತ್ರ ಪಠಸಲು ತಟ್ಟನೆ ರೋಗಗಳು ತಟ್ಟನೆ ಸುಟ್ಟು ಪೋಪವು. ನನ್ನ ಶಿರವು ನಿಮ್ಮ ಚರಣಗಳಿಗೆ ಬಾಗಲಿ, ನನ್ನ ಕರಗಳು ನಿಮ್ಮನ್ನು ಅರ್ಚಿಸಲಿ, ನಾಲಿಗೆ ನಿರುತ ನಿಮ್ಮ ಸ್ತೋತ್ರಪಠಸಲಿ, ನೇತ್ರಗಳು ಮೆರೆವ ಬೃಂದಾವನ ನಿರೀಕ್ಷಿಸುತ್ತಿರಲಿ,ನಿತ್ಯ ಉದಯ ಕಾಲದೊಳೆದ್ದು ನಿಮ್ಮನ್ನು ನನ್ನ ಹೃದಯ ಕಮಲದೊಳು ಕೂಡಿಸಿ ಸಮಲಾಮತಃಕರಣದಲಿ ಭಕ್ತಿಯಲಿ ನಿಮ್ಮನರ್ಚಿಸುತ ಪ್ರಾರ್ಥಿಸುವ ಪುಣ್ಯಕೊಡು ಎಂದು ಗುರುಗಳನ್ನು ಕೊಂಡಾಡುತ್ತಾರೆ ಮಂತ್ರಾಲಯ ಕ್ಷೇತ್ರದ ಕುರಿತು
“ಇಷ್ಟತುಂಗಸ್ನಾನಸರ್ವೋ
ತ್ಕೃಷ್ಟ ವೃಂದಾವನ ದರ್ಶನ
ಶಿಷ್ಟಜನ ಸತ್ಸಂಗ ಬಲು ಮೃಷ್ಟಾನ್ನ ಭೋಜನವು
ಸೃಷ್ಟಿಯಲಿ ಮಂಚಾಲಿ ಕ್ಷೇತ್ರದ
ಶ್ರೇಷ್ಠತೆಯ ಇನ್ನೆಷ್ಟು ಹೊಗಳಲಿ
ನಿಷ್ಠೆಯಿಂದರ್ಚಿಸುವೆ ಶ್ರೀಗುರುರಾಜ ರಕ್ಷಿಪುದು’’ ಎಂದು ವರ್ಣಿಸುತ್ತಾರೆ. ಗುರುರಾಜರು ಯತಿಗಳೂ ಹೌದು ಹರಿದಾಸರೂ ಹೌದು ಅನೇಕ ಹರಿದಾಸರಿಗೆ ಬೇಸರಿಲ್ಲದೆ ಮುದ್ರಿಕೆ ನೀಡುತಲಿ ಹರಿದಾಸರೆಂದೆನಿಸಿದೆ. ಪೂರ್ಣಬೋಧರ ಮತದ ಮಹಾ ಅಭ್ಧಿಗೆ ಪೂರ್ಣಚಂದ್ರನಾಗಿ ಮಂಚಾಲಿಯಲಿ ನೆಲೆಸಿರುವೆ. ರಮ್ಯ ತುಂಗಾ ತಟನಿವಾಸಿ ನೀನು ನನ್ನ ಅಪರಾಧಗಳನ್ನು ಮನ್ನಿಸು ಎಂದು ಬಿನ್ನೆöÊಪೆ. ಸೌಮ್ಯಶ್ರೀಗುರು ಒಮ್ಮೆ ದರ್ಶನ ವೀಯೋ.ದಾಸರಂತೆ ಹಾಡಲರಿಯೆನು, ಭಕ್ತರಂತೆ ಕಾಡಲು ಅರಿಯೆನು, ಓಡಿಸು ಎನ್ನಯ ಮೂಢಮತಿಯನು ನೀಡು ಸುಜ್ಞಾನವನು ನಾಡೋಳಗೆ ಈಡು ಯಾರಿಲ್ಲ. ಎಂದು ಗುರುಗಳ ಅನನ್ಯ ಮಹಿಮೆಯನ್ನು ಕೊಂಡಾಡುತ್ತಾರೆ. ಆತ್ಮ ನಿವೇದನೆ ಬಹಳ ಚನ್ನಾಗಿ ಮೂಡಿಬಂದಿದೆ.ಮAತ್ರಾಲಯದ ಕ್ಷೇತ್ರ, ಗುರುಗಳ ಮಹಿಮೆ, ಅನಂತವಾದ ಕಾರುಣ್ಯದ ಸಂದರ್ಭಗಳು ಈ ಕೃತಿಯಲ್ಲಿ ಮೂಡಿ ಬಂದಿವೆ, ಕನಕದಾಸರ ಸಾಹಿತ್ಯದಲ್ಲಿ ಇರುವಂತೆ ಇಲ್ಲಿಯೂ ರಕ್ಷಿಸು ಎಂಬ ಪ್ರತಿ ನುಡಿಯ ಕೊನೆಯಲ್ಲಿ ಬರುತ್ತದೆ.
ಡಾ.ಶೀಲಾದಾಸ,
ರಾಯಚೂರು.