ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು.|| ಎಂದು ಭಾಮಿನಿ ಷಟ್ಪದಿಯಲ್ಲಿ, ಕನ್ನಡ ಭಾಷೆಯಲ್ಲಿ `ರಾಘವೇಂದ್ರವಿಜಯ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಗುರುಜಗನ್ನಾಥದಸರು ಹರಿದಸರೂ ಹೌದು. ಕವಿಗಳೂ ಹೌದು. ಮದ್ಯಕಾಲೀನ ಸಂದರ್ಭದಲ್ಲಿ ಹರಿದಾಸರು ಭಕ್ತಿಪೂರ್ವಕ ಕಾವ್ಯಗಳನ್ನು ರಚಿಸಿದ್ದಾರೆ. ಅವುಗಳನ್ನೆಲ್ಲಾ ಹಾಡುಗಬ್ಬಗಳೆಂದು ಗುರುತಿಸಲಾಗುತ್ತದೆ. ಅಂತಹ ಹಾಡುಗಬ್ಬಗಳಲ್ಲಿ ಈ ಕೃತಿಯೂ ಸೇರ್ಪಡೆಯಾಗುತದೆ. ಕಾವ್ಯ ಎಂದ ಮೇಲೆ ರಚನಾತ್ಮಕವಾದ ವಿಧಾನ ಇದ್ದೇ ಇರುತ್ತದೆ. ಗುರುಜಗನ್ನಾಥದಾಸರು ಕಾವ್ಯನಿಯಮಗಳನ್ನು ಪಾಲಿಸಿದ್ದಾರೆ. ಕವಿಗಳಾದವರು ಮೊದಲು ಈ ಕೃತಿಯನ್ನು ಯಾರಿಗಾಗಿ ಮತ್ತು ಯಾತಕ್ಕಾಗಿ ರಚಿಸುತ್ತಿರುವೆ ಎಂಬುನ್ನು ಸ್ಪಷ್ಟ ಪಡಿಸಬೇಕು. ಗುರುಜಗನ್ನಾಥದಾಸರು ಈ ಕಾವ್ಯವನ್ನು ರಾಘವೇಂದ್ರಗುರುಗಳ ಕರುಣೆಯಿಂದ ರಚಿಸುತ್ತಿರುವೆ. ಇದು ರಾಘವೇಂದ್ರಗುರುಗಳ ಭಕ್ತರಿಗಾಗಿ ಎಂಬ ಪ್ರೇರಣೆಯನ್ನು ಮತ್ತು ಧೋರಣೆಯನ್ನು ತಿಳಿಸುತ್ತಾರೆ. ಮುಂದುವರೆದು ಕಾವ್ಯದ ಆರಂಭದಲ್ಲಿ ತಮ್ಮ ಆರಾಧ್ಯ ದೈವ ಮತ್ತು ತಾರತಮ್ಯೋಕ್ತ ದೇವರ ಸ್ಮರಣೆ ಮಾಡುತ್ತಾರೆ.
“ ಶ್ರೀರಮಣ ಶ್ರೀದೇವಿ ಬೊಮ್ಮ ಸ
ಮೀರ ವಾಣಿ ಭಾರತಿ ವಿಪ
ನೂರು ದಶಮುಖ ಉರಗಭೂಷಣ ರಾಣಿಯರ ಪದಕೆ
ಸಾರಿ ನಮನವ ಮಾಡಿ ಭಕ್ಯ÷್ತನು
ಸಾರ ಗುರುವರ ರಾಘವೇಂದ್ರರು
ಉದಾರ ವಿಜಯವ ಪೇಳ್ವೆ ಸುಜನರು ಕೇಳಿ ಮೋದಿಪುದು’’
ಈ ಕಾವ್ವನ್ನು ರಾಘವೇಂದ್ರರ ಭಕ್ತರಿಗಾಗಿ ಮತ್ತು ಸುಜನರಿಗಾಗಿ ಎಂಬುದನ್ನು ಸ್ಪÀಷ್ಟ ಪಡಿಸುತ್ತಾರೆ. ಈ ಕೃತಿಯ ನಾಯಕ ಸಾಮಾನ್ಯನಲ್ಲ. ಘನ್ನ ಗುಣ ರನ್ನ. ವಿಶಾಲ ಮಹಿಮಾ. ಆದರೆ ಆ ಮಹಿಮನಿಗೆ ನನ್ನ ಅರ್ಹತೆಯೂ ತಿಳಿದಿದೆ. ಅದಕ್ಕೆ ನನ್ನ ಮನದಲಿ ನಿಂತು ತಾನೇ ಪೇಳಿಸಿದಾ’ ಎಂದು ರಾಯರನ್ನು ಅಂತರAಗದ ಸಿಂಹಾಸನದಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ನಾನು ವೇದ ಶಾಸ್ತç ಪುರಾಣ ಕಥೆಗಳನ್ನು ಓದಿದ ಪಂಡಿತನಲ್ಲ. ಅದರೂ ಈ ಕೃತಿಯನ್ನು ರಚಿಸುವ ಅರ್ಹತೆ ಬಂದಿದ್ದರೆ ಶ್ರೀರಾಘವೇಂದ್ರಗುರುಗಳ ಪಾಧ ಧೂಳಿಯ ಸ್ಪರ್ಶದಿಂದ ಮಾತ್ರದಲಿ ಶಕುತಿ ಹುಟ್ಟಿತು. ಮತಿಯ ಮಾಂದ್ಯತನ ನಾಶವಾಯಿತು. ಮಹಾನ ಪಂಡಿತರಿಗೇ ಗುರುಗಳ ಮಹಿಮೆ ಸಾರಲು ಅಸಾಧ್ಯವು. ಅಂತಹದರಲ್ಲಿ ನಾನು ಪಾಮರ. ಇನ್ನು ನನಗೆ ಈ ಸಾಮರ್ಥ್ಯ ಎಲ್ಲಿಂದ ಬರೆಬೇಕು. ಎಲ್ಲವೂ ಗುರುಗಳ ಮಹಿಮೆಯಿಂದ ಮಾತ್ರ ಸಾಧ್ಯವಾಗಿದೆ. ಗುರುಗಳ ಪಾದತೋಯದಿ ದೇವನದಿ ಮೊದಲಾದ ತೀರ್ಥಗಳು ಬೆರೆತು ನಿಂತಿವೆ. ಶ್ರೀವರ ತಾನು ಚಕ್ರರೂಪದಿ, ಜೀವೋತ್ತಮನಾದ ಪ್ರಾಣದೇವರು, ಸುರರು ಎಲ್ಲರು ಇಲ್ಲಿ ನೆಲಸಿಹರು. ಗುರುಗಳು ಒಲಿಯಲು ಪ್ರಾಣ ಮತ್ತು ಹರಿಯು ಒಲಿವನು. ಈತನೆ ಸಕಲಕ್ಕೆ ಕಾರಣÀನಾಗಿರುವನು. ಗುರುಗಳ ಪಾಧಧೂಳಿಯ ಕಣಗಳು ಸ್ಪರ್ಶವಾಗಲು ಸಕಲ ರೋಗಗಳು ನಿವಾರಣೆಯಾಗುವವು. ಗುರುಗಳ ಕರುಣಾ ದೃಷ್ಟಿ ಸೋಂಕಲು ಬೆಟ್ಟದಂತಹ ಪಾಪರಾಶಿ ಹಿಮದಂತೆ ಕರಗಿ ಪೋಪುದು. ಇವರ ಚರಣಸೇವೆ ಮಾಡಲು ಇಷ್ಟಕಾಮಿತ ಸಿದ್ಧಿಮಾಡಿ ಕಷ್ಟ ಕೋಟಿಯ ಸುಟ್ಟು ಬಿಸುಟುವ ಎಂದು ಗುರುಗಳ ಮಹಿಮೆಯನ್ನು ಸಾರುತ್ತಾರೆ. ಈತನ ಕರುಣೆ ಅಗಾಧವಾದದ್ದು.
“ ತನಯರಿಲ್ಲದ ಜನಕೆ ಸುತರನು
ಮನಿಯು ಮಾನಿನಿ ವೃತ್ತಿ ಕ್ಷೇತ್ರವು
ಕನಕ ಧನ ಸಂತಾನ ಸಂಪತ್ತು ಇನತೆ ಫಲಗಳನು
ಜನ ಸಮೂಹಕೆ ಇತ್ತು ತೋಷದಿ
ವಿನಯಪೂರ್ವಕ ಸಲಿಸಿ ಕಾವನು
ಅನುಪಮೋಪಚರಿತ ಸದ್ಗುಣಭರಿತ ಯತಿನಾಥ’’ ಎಂದು ಗುರು ಕಾರುಣ್ಯವನ್ನು ಬಣ್ಣಿಸುತ್ತಾರೆ. ಶಾಪ ನೀಡಲು ಶಕ್ತನಾದ ಋಷಿಯ ವಾಕ್ಯವು ಲೋಪವಾಗುವಂತೆ ಮಾಡುವನು. ಸರ್ವಕಾಲದಲ್ಲಿ ನಮ್ಮೊಂದಿಗಿದ್ದು ಕಾಪಾಡುವನು. ಕೋಪವಿಲ್ಲ ಇವನಲ್ಲಿ ಜ್ಞಾನಮಯ, ಸಾಧುವರ್ತಿ, ಸುಖರೂಪ, ಪಾಪನಾಶಕ, ಕವಿಕುಲೋತ್ತಮ ಪುಣ್ಯಮಯಕಾಯ. ಇಂತಹ ಗುರುಗಳು ಬರಿ ಗುರುಗಳಲ್ಲ. ಜನಕ, ಜನನಿ, ಸಹೋದರ, ಬಂಧು ಬಾಂಧವ, ಗುರು, ಮತಿ, ಗತಿಯು ಸಂತತ ನೀನೆಯಾಗಿರುವೆ. ನನ್ನ ಮಾತು ಲಾಲಿಸು ಯತಿಕುಲ ಸರ್ವಜ್ಞ ಎಂದು ಶರಣು ಹೋಗುತ್ತಾರೆ. ಶ್ರೀರಾಘವೇಂದ್ರ ವಿಜಯವನ್ನು ಪಾರಾಯಣ ಮಾಡಿದರೆ ಸಿಗುವ ಫಲವನ್ನು ಹೇಳುತ್ತಾರೆ
“ಇಂದು ಸೂರ್ಯಗ್ರಹಣ ಪರ್ವವು
ಬಂದ ಕಾಲದಿ ನೇಮಪೂರ್ವಕ
ಪೋಂದಿದಾಸನದಲ್ಲಿ ಕುಳಿತಷ್ಟೋತ್ತರಾವರ್ತಿ
ಒಂದೆಮನದಲಿ ಮಾಡೆ ಗುರುವರ
ನಂದದಲಿ ಸಕಲಾರ್ಥ ಸಿದ್ಧಿಯ
ತಂದುಕೊಡುವನು ತನ್ನ ಸೇವಕ ಜನರ ಸಂತತಿಗೆ ‘’
ಎಂದು ಫಲಶೃತಿಯನ್ನು ತಿಳಿಸುತ್ತಾರೆ. ಗುರುಜಗನ್ನಾಥದಾಸರು ಗುರುಕರುಣೆಯನ್ನು ಒದಗಿಸಲು ಪಾರಾಯಣ ಮಾಡಿ ಪಾವನರಾಗಲು ಭಕ್ತರಿಗಾಗಿ ರಾಘವೇಂದ್ರವಿಜಯವನ್ನು ಕನ್ನಡದಲ್ಲಿ ರಚಿಸಿ ಅನುಗ್ರಹಿಸಿದ್ದಾರೆ. ಈ ಹಿಂದೆ ಅಲ್ಹಾದರಾಗಿ, ಅಪ್ಪಣಾಚಾರ್ಯರಾಗಿ, ಶ್ರೀದವಿಠಲರಾಗಿ, ಗುರುಜಗನ್ನಾಥದಾಸರಾಗಿ ರಾಯರ ಅನನ್ಯ ಭಕ್ತರಾಗಿ, ಆಪ್ತರಾಗಿ ಸೇವೆ ಗೈದಿದ್ದಾರೆ ಎಂಬ ವಿಚಾರ ಅವರ ಶಿಷ್ಯರಿಂದ ತಿಳಿದು ಬರುತ್ತದೆ. ಸದಾ ಗುರುಗಳ ಅನುಗ್ರಹಕ್ಕೆ ಪಾತ್ರರಾದ ಗುರುಜಗನ್ನಾಥದಾಸರ ಈ ಕೃತಿಯು ನಮಗೆಲ್ಲ ಮಂತ್ರ ಸದೃಶ್ಯವಾದ ಗ್ರಂಥವಾಗಿದೆ. ಪರಮ ಪವಿತ್ರವಾದ ಗ್ರಂಥವಾಗಿದೆ. ಈ ಗ್ರಂಥವನ್ನು ಪಾಡೋಣ, ಪೂಜಿಸೋಣ, ಅನುಗ್ರಹಿತ ರಾಗೋಣ.
ಡಾ.ಶೀಲಾದಾಸ,
ರಾಯಚೂರು.