ಮುನ್ನೂರಕಾಪು ಜನಾಂಗ- ಮಹಿಳಾಸಂಸ್ಕೃತಿ

                                 

    ಭಾರತ ಎಂದರೆ ಒಂದೇ ದೇಶವೋ ಅಥವಾ ವಿವಿಧ ಬಗೆಯ ಸಂಸ್ಕೃತಿಯನ್ನು ಹೊಂದಿದ ಅನೇಕ ದೇಶಗಳ ಗುಂಪಿನ ಸಂಕೇತವೋ ಎಂಬ ಸಂಶಯ ಪರದೇಶಿಗರಲ್ಲಿ ಮೂಡುತ್ತದೆ. ಅಷ್ಟೋಂದು ಸಂಸ್ಕೃತಿಗಳು ಭಾರತದೇಶದಲ್ಲಿ ಬೆಳೆದು ಬಂದಿವೆ. ಅನೇಕ ಸಂಸ್ಕೃತಿಗಳು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಅನ್ಯೋನ್ಯತೆಯಲ್ಲಿ ಬಾಳಿ ಬದುಕುತ್ತಿವೆ. ನಾವೆಲ್ಲರೂ ಒಂದು. ಭಾರತದೇಶಕ್ಕೆ ಸ್ಪಷ್ಟವಾದ ವ್ಯಕ್ತಿತ್ವವಿದೆ. ನಾವೆಲ್ಲರೂ ಒಂದೇತಾಯಿಯ ಮಕ್ಕಳು ಎಂಬ ಭಾವನೆ ನಮ್ಮಲ್ಲಿ ಮನೆಮಾಡಿದೆ.

       ಸಂಸ್ಕೃತಿಯು ವ್ಯಕ್ತಿಯಿಂದ ವ್ಯಕ್ತಿಗೆ, ಜನಾಂಗದಿAದ ಜನಾಂಗಕ್ಕೆ ಭಿನ್ನವಾಗಿರುತ್ತದೆ. ಆದರೆ ಸಂಸ್ಕೃತಿ ನಮಗರಿವಿಲ್ಲದೇ ಯಾವುದೋ ಸೂತ್ರದಲ್ಲಿ ಬಂಧಿಸಿದೆ. ಈ ಬಂಧನ ಆಂಗ್ಲರು ಬರುವ ಮುನ್ನವೂ ಇತ್ತು. ಅವರು ದೇಶವನ್ನು ಬಿಟ್ಟು ಹೋದಮೇಲೂ ಇದೆ. ಇದೇ ಭಾರತದ ಅಂತಃಸತ್ವವಾಗಿದೆ. ಸಂಸ್ಕೃತಿಯAಬುದು ಅಧಿಕಾರದಿಂದ, ಹಣದಿಂದ ಶಿಕ್ಷಣದಿಂದ, ಜಾಣತನದಿಂದ ಮಾತ್ರ ಬರುವಂಥದ್ದಲ್ಲ. ಸಂಸ್ಕೃತಿಯAಬುದು ಆತ್ಮಸಂಸ್ಕಾರದ ಫಲವಾಗಿದೆ. ಒಳ್ಳೆಯತನವೇ ಸಂಸ್ಕçತಿಯ ಸಾರವಾಗಿದೆ. ಅಮೂರ್ತವಾದ ಅನುಭವವಾಗಿದೆ. ಆದರೂ ಸಂಸ್ಕೃತಿಯ ಸ್ವರೂಪವನ್ನು ವಿದ್ವಾಂಸರು ವ್ಯಾಖ್ಯಯಲ್ಲಿ ಹಿಡಿದಿಡುವ ಪ್ರಯತ್ನಮಾಡಿದ್ದಾರೆ.

       ಕಠೋಪನಿಷತ್ತಿನಲ್ಲಿ` ಆತ್ಮನನ್ನು ಶರೀರವೆಂಬರ್ಥದಲ್ಲಿ ಕುಳ್ಳಿಸಿರುವ ಪ್ರಯಾಣಿಕ, ಬುದ್ಧಿಯೇ ಸಾರಥಿ, ಮನಸ್ಸೇ ಲಗಾಮು, ಇಂದ್ರಿಯಗಳೇ ಕುದುರೆಗಳು, ಭೋಗ್ಯವಸ್ತುಗಳೇ ಪ್ರಯಾಣದ ದಾರಿ, ಬುದ್ಧಿಯಂಬ ಸಾರಥಿ ಧೃಢವಾದ ಮನಸ್ಸಿನಿಂದ ಇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ರಥವನ್ನು ಗುರಿಯತ್ತ ಮುಟ್ಟಿಸಬೇಕು.’ ಇದು ನಾವು ಸಾಗಬೇಕಾದ ಮಾರ್ಗವನ್ನು ಸ್ಥೂಲವಾಗಿ ಸೂಚಿಸುತ್ತದೆ.

      ತೈತರೀಯ ಉಪನಿಷತ್ತಿನಲ್ಲಿ“ ಸತ್ಯಂವದ ದರ್ಮಂಚರ……. ಇತ್ಯಾದಿ ವಿಷಯಗಳನ್ನು ಕಾಣಬಹುದು. ಇವುಗಳನ್ನು ಗಮನಿಸಿದರೆ ನಮ್ಮ ಸಂಸ್ಕೃತಿ ವೇದಮೂಲದಿಂದಲೇ ರೂಪಿತವಾಗಿದೆ ಎಂದು ಹೇಳಬಹುದಾಗಿದೆ. ನಮ್ಮ ಸಂಸ್ಕೃತಿಯ ವಿಶೇಷತೆಯಂದರೆ ಸಾಮರಸ್ಯ. ಬಾದಾಮಿಯ ಗುಹೆಗಳನ್ನು ಗಮನಿಸಿದರೆ ಸಮನ್ವಯತೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಒಳ್ಳೆಯತನ ಬುದ್ಧಿ, ಅಹಿಂಸೆ, ಪ್ರೇಮ, ಭಕ್ತಿ ಮುಂತಾದ ವಿಚಾರಗಳೇ ನಮ್ಮ ಸಂಸ್ಕೃತಿಯ ಬೇರುಗಳು. ಇವುಗಳನ್ನು ಆಧಾರಿಸಿ ವಿವಿದ ಆಚರಣೆಗಳು, ನಡುವಳಿಕೆಗಳು ಬೆಳೆೆದುಬಂದು ವಿಶಿಷ್ಟವೂ ,ವೈವಿಧ್ಯಮಯವೂ ಆಗಿರುವುದು ಕಂಡು ಬರುತ್ತದೆ.  ಇಂತಹ ಭಾರತೀಯ ಸಂಸ್ಕೃತಿಯ ಅತ್ಮನಿರ್ಮಾಣದ ಕಾರ್ಯದಲ್ಲಿ ಮಹಿಳೆಯರ ಕೊಡುಗೆಯೂ ಗಣನೀಯ ವಾಗಿದೆ. ವೇದಕಾಲದಲ್ಲಿಯೇ ಗಾರ್ಗಿ, ಕಾತ್ಯಾಯನಿ, ಮೈತ್ರೇಯಿ, ಋಷಿಕಾ ಭಾರತಿದೇವಿ ಮುಂತಾದ ಮಹಿಳೆಯರು ಬ್ರಹ್ಮಜ್ಞಾನಿಗಳಾಗಿದ್ದರು ಎಂದು ತಿಳಿದು ಬರುತ್ತದೆ. ರಾಮಾಯಣ ಮಹಾಭಾರತದಲ್ಲಿ ಉಲ್ಲೇಖಿತ ಮಹಿಳೆಯರು. ಇತಿಹಾಸ ಪ್ರಸಿದ್ಧ ಮಹಿಳೆಯರನ್ನು ಇಲ್ಲಿ ಪರಿಗಣಿಸ ಬೇಕಾಗುತ್ತದೆ. ಇದೆಲ್ಲವೂ ಒಂದು ಭಾಗವಾದರೆ ಈ ಮಹಿಳೆಯರನ್ನೆಲ್ಲಾ ಹಾಡು, ಕಥೆಗಳ ಪರಂಪರೆಯಿAದ ಅರಿತು ತಮ್ಮದೇ ಆದ ಸಂಸ್ಕೃತಿಯನ್ನು ರೂಪಿಸಿಕೊಂಡವರು ಜನಪದ ಮಹಿಳೆಯರು. ಇವರು ಅಧ್ಯಯನಶೀಲರಲ್ಲ. ಅನುಭಾವಿಗಳು. ಮೂಲ ಕೃಷಿ ಪ್ರಧಾನ ಕುಟುಂಬದಲ್ಲಿ ಬಂದವರಾದ ಇವರು ತಾವು ತಮ್ಮ ಪರಿಸರವನ್ನು ಮುಖ್ಯವಾಗಿಟ್ಟುಕೊಂಡು ಸಂಪ್ರದಾಯ ಸಂಸ್ಕೃತಿಯನ್ನು ತಮ್ಮ ಇತಿ-ಮಿತಿಯಲ್ಲಿ ರೂಪಿಸಿಕೊಂಡಿದ್ದಾರೆ. ಇವರಿಗೆ ಶಾಸ್ತç ವಿಧಿನಿಯಮಗಳಿಗಿಂತ ಮನೆಯ  ಹಿರಿಯ ಯಜಮಾನತಿಯೇ ಅಂತಿಮ ನಿರ್ಣಾಯಕಳು. ಆಕೆಯ ಅಣತಿಯಂತೆ ಎಲ್ಲಾ ಆಗುಹೋಗುಗಳು ನಿರ್ಣಯವಾಗುತ್ತವೆ.

          ಇತ್ತೀಚಿನ ದಿನಗಳಲ್ಲಿ ಜನಾಂಗಿಕ ಅಧ್ಯಯನಗಳು ಮುನ್ನಲೆಗೆ ಬರುತ್ತಿವೆ. ಜನಾಂಗಗಳ ಅಭಿವೃದ್ಧಿಗೆ ಇವುಗಳ ಅದ್ಯಯನ ಮಹತ್ವದ ಪಾತ್ರ ವಹಿಸುತ್ತವೆ. ಆಯಾ ಜನಾಂಗಗಳ ಜನಸಂಖ್ಯೆ, ಸಂಸ್ಕೃತಿ, ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕ ಸ್ಥಾನಮಾನಗಳು, ಸ್ಥಿತಿಗತಿಗಳನ್ನು ತಿಳಿಯಲು ಮಹತ್ವದ ಪಾತ್ರ ವಹಿಸುತ್ತಿವೆ. ಪ್ರಸ್ತುತ ಹೈದ್ರಾಬಾದ ಸಂಸ್ಥಾನದ ಪ್ರದೇಶಗಳಲ್ಲಿ (ಇಂದಿನ ಉತ್ತರಕರ್ನಾಟಕ ಮತ್ತು ತೆಲಂಗಾಣದ ಪ್ರದೇಶ) ಕಂಡುಬರುವ ಪ್ರತಿಷ್ಠಿತ ಜನಾಂಗವೆAದರೆ “ಮುನ್ನೂರು ಕಾಪು ಜನಾಂಗ”. ಈ ಜನಾಂಗದ ಮಹಿಳಾ ಸಂಸ್ಕೃತಿಯ ಕುರಿತಾಗಿ ಬೆಳಕು ಚಲ್ಲುವುದು ಇಲ್ಲಿಯ ಉದ್ದೇಶ.

       ಈ ಜನಾಂಗದ ಪ್ರಾಚೀನತೆ  ತ್ರೇತಾಯುಗಕ್ಕೆ ಹೋಗಿ ನಿಲ್ಲುತ್ತದೆ. ಅದು ಕ್ಷಾತ್ರಯುಗ. ಈ ಜನಾಂಗದ ಮೂಲ ಪುರುಷ  ಮಿಥಿಲಾಧಿಪತಿ ಜನಕಮಹಾರಾಜ ಎಂಬ ಪ್ರತೀತಿ ಇದೆ. ಇವರನ್ನು ಸೀತಾಸ್ವಯಂವರಕ್ಕಾಗಿ ಇರುವ ಶಿವಧನಸ್ಸನ್ನು ರಕ್ಷಣೆ ಮಾಡಲು ಜನಕ ಮಹಾರಾಜ ನಿಯಮಿಸಿದ್ದನಂತೆ. ಅಲ್ಲಿಂದ ಇವರ ಪರಂಪರೆ ಆರಂಭವಾಗುತ್ತದೆ. ಮೂಲತಃ ಕೃಷಿ ಪ್ರಧಾನ ಜನಾಂಗ ಹಾಗೂ ವೀರರು. ವರಂಗಲ್ಲ ಮತ್ತು ಕಾಕತೀಯರು ಇವರಿಗೆ ಬಂದುಗಳು. ಷಹಜಾನ, ವಿಜಯನಗರ ಅರಸರು, ಶಿವಾಜಿ ಚಕ್ರವರ್ತಿ ಆಸಫಜಾಹಿ ಮುಂತಾದ ರಾಜರೊಂದಿಗೆ ಈ ಜನಾಂಗದ ವೀರರು ಹೆಸರುವಾಸಿಗಳಾಗಿದ್ದರು. ಕಾವ್ಯಗಳಲ್ಲಿ ಇತಿಹಾಸದಲ್ಲಿ ಈ ಜನಾಂಗದ ವಿವರ ಲಭ್ಯವಾಗುತ್ತದೆ. ಕಾಲಕ್ರಮೇಣ ಈ ಜನಾಂಗದವರು ಉತ್ತರ ಪ್ರದೇಶದಿಂದ ದಕ್ಷಿಣ ದೇಶಕ್ಕೆ ಒಲಸೆ ಬಂದದ್ದು ಕಂಡುಬರುತ್ತದೆ. ಮುಂದೆ ಬೇರೆಬೇರೆ ರಾಜರಲ್ಲಿ ವೀರರಾಗಿ ಗುರುತಿಸಿಕೊಂಡಿದ್ದಾರೆ. ಮುನ್ನೂರು ಎಂದರೆ ಈ ಜನಾಂಗ ಸಂಖ್ಯಾವಾಚಕವಾಗಿ ಗುರುತಿಸಿಕೊಂಡಿದೆ. ಮೂರುನೂರುಜನರ ಒಂದು ಸಮೂಹವಾಗಿದೆ.

           ಇವರದು ಮೂಲತಃ ಸ್ತಿçÃಪ್ರಧಾನ ಕುಟುಂಬವಾಗಿದೆ. ಇಲ್ಲಿಂದಲೇ ಇವರ ಸಂಸ್ಕೃತಿ ಆರಂಭವಾಗುತ್ತದೆ. ಇವರ ಆರಾಧ್ಯ ದೈವ ಲಕ್ಷö್ಮಮ್ಮ. ಈಕೆ ಪುರಾಣ ಪುರುಷಳಲ್ಲ. ಒಬ್ಬ ಸಾಮಾನ್ಯ ಸ್ತಿçÃ. ಈ ವಿಚಾರಕ್ಕೆ ಸಂಬAಧಿಸಿದAತೆ ಒಂದು ಐತಿಹ್ಯವಿದೆ. “ಸುಮಾರು ವರುಷಗಳ ಹಿಂದೆ ಗದ್ವಾಲ್ ತಾಲ್ಲೂಕಿನ ಗೊರಡ್ಡಿಪಲ್ಲೆ ಎಂಬ ಗ್ರಾಮದಲ್ಲಿ ಒಂದು ಕುಟುಂಬ ವಾಸವಾಗಿತ್ತು. ಅವರಿಗೆ ಮೂರುಜನ ಗಂಡುಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಳು. ಕೆಲಕಾಲದನಂತರ ತಂದೆ ತಾಯಿಯರು ದೈವಾಧೀನವಾಗುತ್ತಾರೆ. ಸಹೋದರಿಯನ್ನು ಅಣ್ಣತಮ್ಮಂದಿರು ಪಾಲನೆ ಮಾಡುತ್ತಿರುತ್ತಾರೆ. ಬೆಳೆದು ದೊಡ್ಡವಳಾದಮೇಲೆ ಈಕೆಯ ಮದುವೆ ಮಾಡಲು ನಿರ್ಧರಿಸುತ್ತಾರೆ. ಒಮ್ಮೆ ಕಾಡಿಗೆ ದನಕರು ಮೇಯಿಸಲು ಹೋದಾಗ ಬಾಯಾರಿಕೆಯಿಂದ ಬಳಲುವದ ಹೋರಿಯ ಮೂತ್ರ ಕುಡಿಯುತ್ತಾಳೆ. ಅದರಿಂದ ಆಕೆ ಗರ್ಭಿಣಿಯಾಗುತ್ತಾಳೆ. ಸಮಾಜ, ಸಹೋದರರು ಅಕೆಯನ್ನು ತಪ್ಪಾಗಿ ಭಾವಿಸುತ್ತಾರೆ. ಹೆರಿಗೆ ನೋವು ಬಂದರೂ ಯಾರೂ ಅಕೆಯ ಸಹಾಯಕ್ಕೆ ಬರುವುದಿಲ್ಲ. ಆಕೆಯ ಹಿರಿಯಣ್ಣ ಮಚ್ಚನ್ನು ತೆಗೆದುಕೊಂಡು ಹೊಟ್ಟೆಯನ್ನು ಸೀಳುತ್ತಾನೆ. ಆಕೆಯ ಹೊಟ್ಟೆಯಲ್ಲಿ ಹೋರಿಕರು ಇರುತ್ತದೆ. ಆಕೆ ರಕ್ತದ ಮಡುವಿನಲ್ಲಿ ತೇಲುತ್ತಿರುತ್ತಾಳೆ. ಎಲ್ಲರಿಗೂ ಪಶ್ಚಾತಾಪವಾಗುತ್ತದೆ. ಆಕೆಯೇ ತಮ್ಮ ದೈವಾ ಎಂದು ಪೂಜಿಸುತ್ತಾರೆ. ಇಂದಿಗೂ ಈ ಪರಂಪರೆ ಮುಂದುವರೆದಿದೆ. ಹೋರಿಕರುವಿನೊಂದಿಗೆ ಈಕೆಯನ್ನು ಪೂಜಿಸುತ್ತಾರೆ. ಅಲ್ಲದೆ ಯಲ್ಲಮ್ಮ, ಜಮಲಮ್ಮಾ ಮಾರೆಮ್ಮಾ ಮುಂತಾದ ದೇವಿಯರನ್ನು ಅನನ್ಯ ಭಕ್ತಿಯಿಂದ ಪೂಜಿಸುತ್ತಾರೆ. ಒಟ್ಟಿನಲ್ಲಿ ದೇವಿಯ ಆರಾಧಕರು. ಇದು ಇವರ ಸಂಸ್ಕೃತಿಯಾಗಿದೆ. ಹಾಗೆಯೇ  ಜಾತ್ರೆಯಲ್ಲಿ ದೇವರು ಕಟ್ಟುವ ಪದ್ಧತಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಹೆಡಗೆ ತುಂಬಿಸುವುದು,ಕವಡೆ ಸರ ಕಾಕಿಕೊಳ್ಳುವುದು ಬೇವಿನ ತೊಪ್ಪಲು ಕಟ್ಟುವುದು ಸಂಪ್ರದಾಯ ಉಳಿದುಕೊಂಡು ಬಂದಿದೆ. ಕೆಲವರು ಕಡ್ಡಯವಾಗಿ ದೇವರು ಕಟ್ಟುತ್ತಾರೆ. ಇನ್ನೂ ಕೆಲವರು ಹರಕೆ ಹೊತ್ತುಕೊಂಡು ದೇವರನ್ನು ಕಟ್ಟಿಕೊಳ್ಳುತ್ತಾರೆ.ಇವರು ದೇವಿಯ ನೈವೇದ್ಯಕ್ಕೆ ಸಸ್ಯಾಹಾರವನ್ನೂ ಸಿದ್ಧಪಡಿಸಿದರೆ, ದಿನನಿತ್ಯದಲ್ಲಿ ಮಾಂಸಹಾರಿಗಳಾಗಿದ್ದಾರ. ಕಾಲಾಂತರದಲ್ಲಿ ಈ ಬದಲಾವಣೆ ನಡೆದಿರಬಹುದು.

         ಈಗಾಗಲೇ ತಿಳಿಸಿದಂತೆ ಇವರು ಕೃಷಿ ಪ್ರಧಾನ ಕುಟುಂಬದವರು. ಇಡೀ ಕುಟುಂವರೆಲ್ಲ ಕೃಷಿಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಮಹಿಳೆಯರಂತೂ ಕುಟುಂಬದ ಸದಸ್ಯರ ಊಟೋಪಚಾರದೊಂದಿಗೆ ಕೃಷಿ ಚಟುವಟಿಕೆಲ್ಲಿ ಪಾಲುಗಾರರಾಗುತ್ತಾರೆ. ಇವರಿಗೆ ಭೂಮಿ, ಪಶುಗಳು ದವಸಧಾನ್ಯಗಳು ಮುಖ್ಯವಾಗುತ್ತವೆ. ಕೃಷಿಚಟುವಟಿಕೆಗಳು ಆರಂಭವಾಗುವುದು ಮುಂಗಾರು ಹಬ್ಬದಿಂದ. ಪುರುಷರು ಭೂಮಿಯಲ್ಲಿ ಉತ್ತುವ ಬಿತ್ತುವ ಕಾರ್ಯದಲ್ಲಿ ತೊಡಗಿದರೆ ಭೂಮಿಯನ್ನು ಪೂಜಿಸುವ ,ಪಶುಗಳನ್ನು ಪೂಜಿಸುವ ಆರೈಕೆಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಮುಂಗಾರು ಹಬ್ಬ ಈ ಜನಾಂಗದ ಬಹು ಡೊಡ್ಡ ಆಚರಣೆ. ಆ ಹಬ್ಬದಲ್ಲಿ ಇವರು “ಪುಟ್ಟಿ ಪೂಜೆ’’ ಮಾಡುತ್ತಾರೆ. ಇದರಲ್ಲಿ ಹೋಳಿಗೆ, ಕುದಿಸಿದ ಕಾಳು ಪಲ್ಯಕಾಯಿ ಇರುತ್ತದೆ. ಇದು ಇವರ ಸಂಸ್ಕೃÀತಿಯಾಗಿದೆ. ಎತ್ತುಗಳ ಮೆರವಣಿಗೆಯ ಜೊತೆಗೆ ಪುಟ್ಟಿಗಳ ಮೆರವಣಿಗೆ ಸಹ ನಡೆಯುತ್ತದೆ. ನೇಕ ಮಹಿಳೆಯರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ  ಭೂಮಿ ಪೂe,É ದವಸಧಾನ್ಯಗಳ ಪೂಜೆ ವಿಶೇಷವಾಗಿ ಆಚರಿಸುತ್ತಾರೆ.

      ಇವರ ಮತ್ತೊಂದು ಪ್ರಮುಖ ಹಬ್ಬವೆಂದರೆ ದಸರಾ ಅಥವಾ ಮಹಾನವಮಿ ಹಬ್ಬ. ಈ ಸಂದರ್ಭದಲ್ಲಿ ಇವರು ಒಂಭತ್ತು ದಿನಗಳ ವರೆಗೆ ಲಕ್ಷö್ಮಮ್ಮನ ಗುಡಿಯಲ್ಲಿ ಭಜನೆ ಮಾಡುತ್ತಾರೆ. ಲಲಿತ ಸಹಸ್ರನಾಮ ಪಾರಾಯಣ ಮಾಡುತ್ತಾರೆ, ಕುಂಕುಮಾರ್ಚನೆ ಮಾಡುತ್ತಾರೆ. ಇವರು ಹಾಡುವ ಭಜನಾ ಪದಗಳು ಕನ್ನಡದಲ್ಲೂ ತೆಲುಗಿನಲ್ಲೂ ಇದ್ದಾವೆ. ಆದರೆ ಅವೆಲ್ಲವೂ ದಾಸ ಪದಗಳು, ತತ್ವಪದಗಳು, ವಚನಗಳು ಸ್ತೋತ್ರಪದಗಳಾಗಿವೆ.

ಉದಾಹರಣೆಗೆ ಕನ್ನಡದಲ್ಲಿ“ ಶಾರದಾಂಬೆ ಎನ್ನ ಪಾಲಿಸೆ ಸರಸ್ವತಿ ದೇವಿ ಶಾರದಾಂಬ ಎನ್ನ ಪಾಲಿಸೆ” ಈ ಪದವು ಮೂರು ನುಡಿಗಳಲ್ಲಿದ್ದು  ಗುರುವು ಕೃಷ್ಣಾವಧೂತ ಎಂಬ ಅಂಕಿತದಲ್ಲಿದೆ. ಇನ್ನೊಂದು ಪುರಂದರದಾಸರ ಕೀರ್ತನೆ “ಭಾಗ್ಯಾದ ಲಕ್ಷಿö್ಮ ಬಾರಮ್ಮ’’ ನಂತಹ ಹಾಡುಗಳನ್ನು ಹಾಡುವ ರೂಢಿಯಿದೆ. “ ಅಡಿಗಡಿಗೆ ಮಾಡುವೆ ನಿಮ್ಮಸ್ತೋತ್ರ ಗಣಪತಿ ಪಾಲಿಸೋ ಪಾರ್ವತಿ ಪುತ್ರ’’ ಎಬ ಮತ್ತೊಂದು ಪದ. ಇದರಲ್ಲಿ ಗಣಪತಿಯ ವರ್ಣನೆ ಇದೆ.’’ ಇದರಲ್ಲಿ ನಾಲ್ಕು ನುಡಿಗಳಿವೆ. ಅಂಕಿತದ ಐದನೆಯ ನುಡಿ ಬಿಟ್ಟುಹೋಗಿದೆ. “ ತಾಂಡವ ನೂತ್ಯರ(ನೃತ್ಯ) ಗಜಾನನ“ ಎಂಬ ಪದವು ಚಂದ್ರನಿಗೆ ಶಾಪಪಕೊಟ್ಟ ಪ್ರಸಂಗವನ್ನು ಸಾರುತ್ತದೆ. “ಜಯಶ್ರೀ ಶಂಭೂನAದನ ಜಯಶ್ರೀ ಶಂಭೂನAದನ, ಜಯಜಯ ಹರನಂದನ’’ ಎಂಬುವ ಪದವು ಮೂರುನುಡಿಗಳಲ್ಲಿದೆ. ಇದಕ್ಕೆ ಅಂಕಿತವಿಲ್ಲ. ತೆಲಗು ಭಾಷೆಯಲ್ಲಿದೆ. ಇವುಗಳಲ್ಲದೆ ಸ್ತೋತ್ರ ರೂಪದಲ್ಲಿ ಕೆವು ವಚನಗಳಿವೆ.“ ವಿಘ್ನಮಲಕಾದಿ ರ‍್ತೆಯೌ(?) ಎಂಬುದು ನಾಲ್ಕು ಚರಣದ ವಚನವಾಗಿದೆ.“ ಲೋನ ಚೂಡ ಚೂಡ ಲೋಕಾಭಿರಾಮಂಬು’’ ಎಂಬುದು  ಇದುಕೂಡಾ ನಾಲ್ಕು ಚರಣದಲ್ಲಿದೆ.“ ಕುಂಬ ಕುಕ್ಕಕಲಾ ಕುಂದಟ ಪರುಶಲು’’ ಇದು ಕೂಡಾ ನಾಲ್ಕು ಚರಣ ಗಳಲ್ಲಿದೆ. ಹೀಗೆ ಇವರು ಕೈಗೊಳ್ಳುವ ಭಜನಾ ಪದಗಳು ಕನ್ನಡ ಮತ್ತು ತೆಲಗು ಭಾಷೆಯ ಮಿಶ್ರಣದಿಂದ ಕೋಡಿವೆ. ಇವುಗಳ ಕುರಿತಾಗಿ ಇನ್ನೂ ಕ್ಷೇತ್ರಕಾರ್ಯ, ಸಂಶೋಧನೆ ನಡೆಸುವ ಅಗತ್ಯತೆ ಕಂಡುಬರುತ್ತದೆ.

    ನವರಾತ್ರಿಯಲ್ಲಿ ಒಂದು ದಿನ ಕೋಲಾಟ ಸೇವೆಯನ್ನು ಮಾಡುತ್ತಾರೆ. ದೇವರ ಪೂಜೆಯಲ್ಲಿ ಷೋಡಶೋಪಚಾರವನ್ನು ಪಾಲನೆ ಮಾಡಲಾಗುತ್ತದೆ. ಅದರಲ್ಲಿ ನರ್ತನಸೇವೆಯೂ ಒಂದು ಪ್ರಕಾರವಾಗಿದೆ. ಸೀಗೆ ಹುಣ್ಣಿಮೆ ಮತ್ತು ಗೌರಿ ಹುಣ್ಣಿಮೆಯಂದು ಪುರುಷರೂ ಮಹಿಳೆಯರೂ ಕೋಲು ಹಾಕಿ ಹಾಡುವ ಸಂಪ್ರದಾಯ ನಮ್ಮ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಉಳಿದು ಬಂದಿದೆ. ಹಾಡುಗಾರಿಕೆ ಮತ್ತು ಕೋಲಾಟ ಜನಪದರ ಸಂಸ್ಕೃತಿಯ ತಳಪಾಯವಾಗಿವೆ. ಇದಕ್ಕೆ ಮುನ್ನೂರು ಕಾಪು ಜನಾಂಗ ಹೊರತಾಗಿಲ್ಲಾ. ಆಧುನಿಕತೆಯ ಸ್ಪರ್ಶದಿಂದ ಸ್ವಲ್ಪ ಬದಲಾವಣೆ ಕಂಡುಬAದರೂ ಮೂಲ ಆಚರಣೆಯನ್ನು ಇಲ್ಲಿ ಗುರುತಿಸಬಹುದಾಗಿದೆ.  ಈ ನೃತ್ಯ ಸೇವೆಯಲ್ಲಿ ಬಾಲಕಿಯರೂ, ಗೃಹಿಣಿಯರೂ ಪಾಲ್ಗೊಳ್ಳುತ್ತಾರೆ.

ದಸಿಮಿಯ ದಿನದಂದು ಆಯುಧಗಳ ಮೆರವಣಿಗೆ ಮಾಡುತ್ತಾರೆ. ಮೂಲತಃ ರಾಜರಲ್ಲಿ ರಾಜ್ಯ ರಕ್ಷಣೆಗೆ ಮೀಸಲಾದ ಇವರಲ್ಲಿ ಕ್ಷಾತ್ರ ತೇಜದ ಪ್ರಭಾವದಿಂದ ಆಚರಿಸುವ ಈ ಹಬ್ಬವು ಮುನ್ನುರು ಕಾಪು ಜನಾಂಗದವರಿಗೆ ಬಹಳ ಮಹತ್ವದ ಆಚರಣೆಯಾಗಿದೆ. ಆಯುಧಗಳ ಪೂಜೆಯನ್ನು ಮಾಡಿ ಶಮೀ ವೃಕ್ಷದ ಪೂಜೆ ಮಾಡಿ ಬನ್ನಿ ಮುಡಿಯುತ್ತಾರೆ. ಈ ಮೆರವಣಿಗೆಯಲ್ಲಿ ಸ್ತಿçÃಯರು ಭಾಗಿಯಾಗುತ್ತಾರೆ.

           ಶ್ರಾವಣಮಾಸದಲ್ಲಿ ಒಂದು ತಿಂಗಳು ಪ್ರತಿನಿತ್ಯ ರಾತ್ರಿ ಭಜನೆ ಮಾಡುತ್ತಾರೆ. ಪ್ರತಿನಿತ್ಯ ಲಕ್ಷö್ಮಮ್ಮನಿU ಹೊಸಸೀರೆÉ ಅರ್ಪಿಸುತ್ತಾರೆ. ದೇವಿಗೆ ನಿತ್ಯ ಪಂಚಭಕ್ಷ ನೈವೇದ್ಯ ಮಾಡುತ್ತಾರೆ. ಒಂದು ದಿನ ಮಹಿಳೆಯರು ಕುಂಕುಮಾರ್ಚನೆ ಮಾಡುತ್ತಾರೆ. ಅಮವಾಸೆಯಂದು ದೇವಿಗೆ ಪೂಜೆಮಾಡಿ ಭೋಜನ ಮಾಡಿಸಿ ಹಬ್ಬವನ್ನು ಸಂಪನ್ನ ಗೊಳಿಸುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ,ಶ್ರಾವಣಮಾಸದಲ್ಲಿ ಕಡ್ಡಾಯವಾಗಿ ಸಸ್ಯಹಾರವನ್ನು ಸ್ವೀಕರಿಸುತ್ತಾರೆ.

        ಇವರ ಉಡುಗೆ ತೊಡುಗೆಗಳು ಭಾರತೀಯ ಸಂಪ್ರದಾಯದAತೆ ಇವೆ. ಸೀರೆ-ಕುಪ್ಪಸ, ಕೈತುಂಬಾ ಬಳೆಗಳು, ಹಣೆಯಲ್ಲಿ ಕುಂಕುಮ, ಕಿವಿಯಲ್ಲಿ ಓಲೆಗಳು, ಜಡೆಯಲ್ಲಿ ಹೂಗಳು, ಕಾಲಲ್ಲಿ ಕಡಗ, ಗೆಜ್ಜೆ ,ಪಿಲ್ಲೆ-ಕಾಲುಂಗುರ. ಇವೆಲ್ಲವೂ ಮುತ್ತೆöÊದೆಯ ಚಿನ್ಹೆಗಳೆಂದು ಬಲಾಗಿ ನಂಬಿದ್ದಾರೆ ಮತ್ತು ಪಾಲಿಸುತ್ತಾರೆ.

      ಕುಟುಂಬ ವ್ಯವಸ್ಥೆಯಂಬುದು ಭಾರತೀಯರಿಗೆ ವಿಶಿಷ್ಟವಾದದ್ದು. ಭಾರತೀಯರ ಕುಟುಂಬ ವ್ಯವಸ್ಥೆಗೆ ಪಾಶ್ಚಾತ್ಯರು ಮಾರು ಹೋಗಿದ್ದಾರೆ ಮತ್ತು ಬಹಳ ಜನ ಅನುಸರಿಸುತ್ತಿದ್ದಾರೆ. ಕುಟುಂಬದಲ್ಲಿ ಆಚರಿಸುವ ಸಂಸ್ಕಾರಗಳು ಅನೇಕವಾಗಿದ್ದರೂ ಪ್ರಮುಖವಾಗಿ ಇಲ್ಲಿ ಹದಿನಾರು ಸಂಸ್ಕಾರಗಳನ್ನು ಗಮನಿಸಬಹುದು. ಅವುಗಳೆಂದರೆ ಜನನದಿಂದ ಮರಣದವರೆಗಿನ ಸಂಸ್ಕಾರಗಳು.

      ಸ್ತಿçÃಯರು ಹೆರಿಗೆಗೆ ತವರು ಮನೆಗೆ ಹೋಗುತ್ತಾರೆ. ಮಗುವಿನ ಜನನವಾದ ನಂತರ ಮಾಸವನ್ನು ಮನೆಯ ಮುಂದೆ ಬಲಭಾಗದಲ್ಲಿ ಭೂಮಿ ಅಗೆದು ಅದರಲ್ಲಿ ಸೆಗಣಿ ಮತ್ತು ಹತ್ತಿಕಾಳು ಬೇವಿನ ಎಲೆಗಳನ್ನು ಹಾಕಿ ಮಲಗಿಸಿ ಸೆಗಣಿಯಿಂದ ಮುಚ್ಚುತ್ತಾರೆ. ಮೂರುದಿನ, ಐದು ದಿನ ,ಏಳುದಿನ ಮತ್ತು ಹತ್ತು ದಿನದಲ್ಲಿ ಅದನ್ನು ಪೂಜಿಸುತ್ತಾರೆ  ಮಗು ಹುಟ್ಟಿ ಮೂರುದಿನಗಳಲ್ಲಿ `ಪುರುಡು’ ಎಂಬ ಕಾರ್ಯಕ್ರಮ ಮಾಡುತ್ತಾರೆ. ಇದರಲ್ಲಿ ಬಂಧುಬಾAಧವರನ್ನು ಕರೆದು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಇದೇ ಸಂದರ್ಭದಲ್ಲಿ ಬಂಧುಬಾAಧವ ಹೆಂಗಸರು ಬಿಸಿನೀರನ್ನು ತಂದು ಬಾಂAತಿಗೆ ಎರೆಯುತ್ತಾರೆ. ಅಂದುರಾತ್ರಿ ಮಗುವನ್ನು ಮೊರದಲ್ಲಿ ಬಿಳಿ ಬಟ್ಟೆ ಹಾಕಿ ಮಲಗಿಸುತ್ತಾರೆ. ಸೂಲಗಿತ್ತಿ ತಾಂಭಾಣ ಬಾರಿಸುತ್ತಾ ಐದು ಸುತ್ತು ಹಾಕುತ್ತಾಳೆ. ಬಾಣಂತಿಯ ಹೊರಸಿನ ಕೆಳಗೆ ಭಾರಗಿಯ ಕಡ್ಡಿಗಳನ್ನು ಹಾಕುತ್ತಾರೆ. ಮೂರುದಿನದಲ್ಲಿ ಚಟಿಗೆಮ್ಮ ಬಂದು ಹಣೆಬರಹ ಬರೆಯುತ್ತಾಳೆ ಎಂಬ ನಂಬಿಕೆ. ಐದನೆಯ ದಿನ `ಚುಟಿಗಿ’ ಹಾಕಿಸುವ ಪದ್ಧತಿ. ಚುಟುಗಿ ಎಂದರೆ ಕಾದ ಸೂಜಿಯಿಮದ ಪ್ಲಸ್ ಆಕಾರದ ಬರಿಹಾಕುತ್ತಾರೆ. ಇದರಿಂದ ಜೀರ್ಣ ಕ್ರೀಯೆ ಚನ್ನಾಗಿ ಆಗುತ್ತದೆ ಎಂಬ ನಂಬಿಕೆ. ಆದರೆ ಇತ್ತೀಚಿನ ದಿನದಲ್ಲಿ ಈ ಸಂಪ್ರದಾಯ ನಿಂತುಹೋಗಿದೆ. ೧೬ ಅಥವಾ ೨೧ ದಿನ ವೃದ್ಧಿ ಇರುತ್ತದೆ. ಆ ದಿನಗಳಲ್ಲಿ ಕುಟುಂಬದವರು ಯಾವುದೇ ದೇವತಾಕಾರ್ಯಗಳನ್ನು ಆಚರಿಸುವಂತಿಲ್ಲ. ತೊಟ್ಟಿಲು ಕಾರ್ಯಕ್ರಮ ಮುಗಿದ ನಂತರವೇ ವೃದ್ಧಿ ಹೋಗುತ್ತದೆ. ನಾಮಕರಣ ಮಾಡುವ ಅಧಿಕಾರ ಸೋದರ ಮಾವನದು. ಐದು ಸಾರಿ ದೇವರ ಹೆಸರನ್ನು ಕೂಗಿ  ರೂಢನಾಮವನ್ನು ಕರೆಯುತ್ತಾರೆ. ಹೀಗೆ ಹೇಳುವಾಗ ಬೀಗರು ಬೆನ್ನಿಗೆ ಗುದ್ದುವ ಹಾಸ್ಯದ ಸಂಪ್ರದಾಯವಿದೆ.

      ಕೂದಲು ತೆಗೆಯುವ `ಜವಳ’ ಕಾರ್ಯಕ್ರಮ. ಮಗುವಿಗೆ ಒಂದು ವರ್ಷದೊಳಗೆ ಹುಟ್ಟು ಕೂದಲು ತೆಗೆಯುವ ಕಾರ್ಯಕ್ರಮವಿರುತ್ತದೆ. ಕೆಲವು ಜನಾಂಗದಲ್ಲಿ ಗಂಡುಮಗುವಿಗೆ ಮಾತ್ರ ಕೂದಲು ತೆಗೆಯುವ ಸಂಪ್ರದಾಯವಿರುತ್ತದೆ. ಆದರೆ ಇವರಲ್ಲಿ ಹೆಣ್ಣು ಗಂಡು ಮಗು ಎಂಬ ಭೇದವಿಲ್ಲದೆ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವು ಕುಲ ದೇವರ ಹತ್ತಿರ ನೆಡೆಯುತ್ತದೆ. ಈ ಜನಾಂಗದವರಿಗೆ ಬೋಳಬಂಡಿತಿಮ್ಮಪ್ಪ, ಮಲದಕಲ್ಲು ತಿಮ್ಮಪ್ಪ, ಉರಕುಂದಿ ಈರಣ್ಣ, ತಿರುಪತಿ ತಿಮ್ಮಪ್ಪ ಕುಲ ದೇವರಾಗಿರುತ್ತಾರೆ.  ಈ ಕಾರ್ಯಕ್ರಮದಲ್ಲಿ ಸೋದರಮಾವ ಮುಖ್ಯಪಾತ್ರ ವಹಿಸುತ್ತಾನೆ. ಮೋದಲು ಸೋದರಮಾವ ವೀಳ್ಯದೆಲೆಯ ಜೊತೆಗೆ ತಲೆಯ ಐದು ಭಾಗದಲ್ಲಿ ಐದುಬಾರಿ ಕೂದಲನ್ನು ಕತ್ತರಿಸುತ್ತಾರೆ. ಈ ಕೂದಲನ್ನು ಒಂದು ವಸ್ತçದಲ್ಲಿ ಹಾಕಿ ಗಂಟುಕಟ್ಟಿ ಹತ್ತಿರದ ಗಿಡದ ಕೊಂಬೆಗೆ ಕಟ್ಟುತ್ತಾರೆ. ಉಳಿದ ಕೂದಲನ್ನು ಹರಿಯುವ ನದಿಯಲ್ಲಿ ಹಾಕುವ ಸಂಪ್ರದಾಯವಿದೆ. ಜವಳದ ದಿನದಂದು ಹೊಸ ಗಡಗಿಯಲ್ಲಿ ಐದು ಸೇರು ಅಕ್ಕಿಯ ಅನ್ನ, ಹೋಳಿಗೆ ಖಾರ ಬ್ಯಾಳಿ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ.

       ಋತುಮತಿಯಾದಾಗ ಭಾಲಕಿಯರನ್ನು ೯ ದಿನ  ಆರತಿ ಮಾಡುವ ಸಂಪ್ರದಾಯವಿದೆ.  ಋತುಮತಿ ಕನ್ಯಗೆ ಎರಡು ಹೊತ್ತು ಎರೆಯುವುದು, ಅಲಂಕಾರಮಾಡುವುದು ಆರತಿಮಾಡುವುದು ಸೋದರತ್ತೆಯ ಕೆಲಸ. ಪ್ರತಿದಿನ ಪೌರಾಣಿಕ ಘಟನೆಗೆ ಸಂಭAದಿಸಿದAತೆ ವೇಷಹಾಕಿ ಆರತಿ ಮಾಡುವ ಸಂಪ್ರದಾಯ. ಒಂಭತ್ತು ದಿನ ಒಬ್ಬೊಬ್ಬರು ವಿವಿಧ ಅಡುಗೆ ಮಾಡಿಕೊಂಡು ಬಂದು ಒಸಗೆ ಮಾಡುತ್ತಾರೆ. ಒಂಭತ್ತನೆಯ ದಿನದಂದು ಸೂರ್ಯೋದಯಕ್ಕಿಂತ ಮೊದಲು ಯುವತಿಗೆ ಸ್ನಾನಮಾಡಿಸಿ ಆಲದ ಗಿಡಕ್ಕೆ ಕರೆದುಕೊಂಡುಹೋಗಿ ಪೂಜೆ ಮಾಡಿಸುತ್ತಾರೆ. ಒಂಭತ್ತುದಿನ ಯುವತಿಯ ಜೊತೆಯಿರುವ ಸೋದರತ್ತೆಗೆ ಉಡಿತುಂಬುತ್ತಾರೆ.

         ಮದುವೆ ಸಾಮಾನ್ಯವಾಗಿ ವರನ ಮನೆಯಲ್ಲಿ ನಡೆಯುತ್ತದೆ. ಮದುವೆ ದಿನದ ೧೫ ದಿನ ಮೊದಲು ಈರ್ಲಾ ಮಾಡುತ್ತಾರೆ. ಆ ನಂತರ ಮದುವೆಯ ನಾಲ್ಕುದಿನ ಮೊದಲು ಏಳುಮಕ್ಕಳ ತಾಯಮ್ಮನ ಪೂಜೆ ಮಾಡುವ ಸಂಪ್ರದಾಯವಿದೆ.. ಆನಂತರ ಮದುಮಗನನ್ನು ಮಾಡುವ ಸಂಪ್ರದಾಯವಿದೆ. ಹೆಂಗಸರು ಕೈಗೆ ಕಂಕಣ ಕಟ್ಟಿಕೊಂಡು ಬಾವಿಗೆ ಹೋಗಿ ನೀರುತಂದು ಅದರಲ್ಲಿ ಅರಿಷಿಣ ಕಾಕಿ, ಮನೆಯಮುಂದೆ ಹಂದರ ಹಾಕಿ ಅರಿಷಿಣ ಹಚ್ಚಿ ನೀರು ಹಾಕುತ್ತಾರೆ. ಹೊಸಬಟ್ಟೆ ಕೊಟ್ಟು ಮದುಮಗನನ್ನು/ ಮದುಮಗಳನ್ನು ಮಾಡುತ್ತಾರೆ. ಮನೆಯ ಮುಂದೆ ಹಂದರ ತೋರಣಹಾಕಿ ಪೂಜಿಸುತ್ತಾರೆ. ಅಂದು ಮುತ್ತೆöÊದೆಯರನ್ನು ಕರೆದು ಬಳೆತೊಡಿಸುತ್ತಾರೆ. ಆನಂತರ ಒರಳು ಕಲ್ಲು ಪೂಜೆ ಮಾಡುತ್ತಾರೆ. ಈ ಮೊದಲು ವಧುವಿಗೆ ಒಡವೆ ವಸ್ತçಕೊಟ್ಟು ಮದುವೆ ಮಾಡುವ ಸಂಪ್ರದಾಯವಿತ್ತು. ಈಗ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಮದುವೆಯ ದಿನದಂದು ವಧುವರರು ರೇಶ್ಮೆ ವಸ್ತçವನ್ನು ಧರಿಸುತ್ತಾರೆ. ಮದುವೆ ಶಾಸ್ತç ಮುಗಿದ ನಂತರ ಭೂಮ ಕಾರ್ಯಕ್ರಮ ಮಾಡುತ್ತಾರೆ. ಇದು ದಂಪತಿಗಳ ಬದುಕಿನುದ್ದಕ್ಕೂ ಎಂದೂ ಅನ್ನ ಕಡಿಮೆಯಾಗಬರದೆಂದು ಆಶಿಸಿ ಮಾಡುವ ಊಟವಾಗಿದೆ. ಈ ಸಂದರ್ಭದಲ್ಲಿ ಕೆಲವು ಜನಾಂಗಗಳಲ್ಲಿ ಭಕ್ಷ ಭೋಜನವಿಟ್ಟರೆ ಇನ್ನೂ ಕೆಲವು ಜನಾಂಗದಲ್ಲಿ ರೊಟ್ಟಿ ಪಲ್ಯ ನೀಡುವ ಸಂಪ್ರದಾಯವಿದೆ. ಈ ಜನಾಮಗದವರು ಭಕ್ಷಭೋಜನವನ್ನು ನೀಡುತ್ತಾರೆ. ರಾಜರ ಪರಂಪರೆಯಲ್ಲಿ ಬಂದಿರುವುದರಿAದ ಇಲ್ಲಿ ವೈಭವವೇ ಎದ್ದು ಕಾಣುತ್ತದೆ. ಎರಡು ದಿನದನಂತರ ವಧುವಿನ ಮನೆಯಲ್ಲಿ ಅದೇ ವವಸ್ತçಗಳನ್ನು ಧರಿಸಿ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ `ವಾರದನೀರು’ ಎಂದು ಹೆಸರು. ಈ ಜನಾಂಗದಲ್ಲಿ ಮಗಳನ್ನು ಧಾರೆಯರಿಯುವ ಕೆಲಸ ಸೋದರಮಾವನದು. ತಂದೆತಾಯಿ ಈ ಕಾರ್ಯದಲ್ಲಿ ಭಾಗಿಯಾಗುವುದಿಲ್ಲ.

       ಈ ಜನಾಂಗದಲ್ಲಿ ಮೊದಲು ವಿಧವಾ ವಿವಾಹಕ್ಕೆ ಅವಕಾಶ ವಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವಿಧವಾ ವಿವಾಹ ಪದ್ಧತಿ ಜಾರಿಯಲ್ಲಿದೆ. ಈ ಮದುವೆಯನ್ನು ರಾತ್ರಿ ಹೊತ್ತಿನಲ್ಲಿ ವಿಧವೆಯರು ಮೊದಲು ಮಾಡುತ್ತಾರೆ. ಆ ನಂತರ ವರನಿಂದ ತಾಳಿಕಟ್ಟಿಸುವ ಸಂಪ್ರದಾಯವಿದೆ. ಮದುವೆಯಲ್ಲಿ ಖಡ್ಗವಿಟ್ಟು ಮದುವೆ ಮಾಡುತ್ತಾರೆ. ಆಯುಧವು ವೀರತನದ ಸಂಕೇತವೂ ಹೌದು ಅವರ ಸಖಸ್ಕೃತಿಯೂ ಹೌದು. ಯಾವುದೇ ಕಾರ್ಯಕ್ರಮದಲ್ಲಿ ಆಯುಧ ಪೂಜೆ ಮೊದಲು ನಡೆಯಬೇಕು. ವೀರತನದ ಸಂಸ್ಕೃತಿಯಾಗಿ ಪರಂಪರೆ ಬೆಳೆದು ಬಂದಿದೆ.

      ಅಂತ್ಯಸAಸ್ಕಾರದಲ್ಲಿ ಮಣ್ಣಿನಲ್ಲಿ ಹೂಳುವ ಸಂಪ್ರದಾಯವಿದೆ. ಮರಣ ಹೊಂದಿದ ದಿನವೆ ಆ ವ್ಯಕ್ತಿಗೆ ಬೇಕಾದ ಪದಾರ್ಥಗಳನ್ನು ಸಿದ್ದಮಾಡಿ ಸಮಾಧಿಯ ಹತ್ತಿರ ನಿವೇದಿಸುತ್ತಾರೆ. ಈ ಕಾರ್ಯಕ್ಕೆ ಹೆಂಡತಿಯೂ ಹೋಗಬೇಕು. ಗಂಡುಮಕ್ಕಳಿದ್ದರೆ ಅಗ್ನಿಯನ್ನು ಅವರು ಹಿಡಿಯುತ್ತಾರೆ. ಒಂದುವೇಳೆ ಗಂಡುಮಕ್ಕಳಿರದಿದ್ದರೆ ಪತ್ನಿಯೇ ಬೆಂಕಿಯನ್ನು ಹಿಡಿಯುವ ಪದ್ಧತಿಯಿದೆ. ಹೆಂಡತಿಯು ಅಲ್ಲಿಂದ ಮರಳಿ ಬರುವಾಗ ಬಿಳಿಸೀರೆ ಧರಿಸುವ ಪದ್ಧತಿ ಇರುತ್ತದೆ. ಮೂರುತಲೆಮಾರಿನವರೆಗೆ ಒಂಭತ್ತು ದಿನ ಸೂತಕ ಆಚರಣೆ ಮಾಡಲಾಗುತ್ತದೆ. ಒಂಭತ್ತನೆಯ ದಿನದಂದು ಮನೆಯಲ್ಲಿ ಮಕ್ಕಳೆಲ್ಲಾ ಸ್ನಾನಮಾಡಿ ಬಾವಿ ಅಥವಾ ನದಿಗೆ ಹೋಗಿ ಒಂದುಕೊಡ ನೀರು ತಂದು ಗಂಗಾಕಳಶ ಸ್ಥಾಪನೆ ಮಾಡುತ್ತಾರೆ. ದಿವಸ ಮಾಡಿ ಸೂತಕ ಆಚರಿಸಿದ ಎಲ್ಲಾ ಬಂಧುಗಳ ಮನೆಗೆ ಹೋಗಿ ಕಳಶದ ನೀರಿನಿಂದ ಮತ್ತು ಗೋ ಮೂತ್ರದಿಂದ ಶುದ್ಧಿ ಮಾಡುತ್ತಾರೆ. ಆನಂತರ ಅವರುಗಳೆಲ್ಲಾ ತಮ್ಮ ಮನೆಯನ್ನು ಶುದ್ಧ ಮಡುತ್ತಾರೆ. ದಸರಾ ಹಬ್ಬದಲ್ಲಿ ಹಿರಿಯರೊಂದಿಗೆ ಸೇರಿಸಿದ ಮೇಲೆ ಶುಭಕಾರ್ಯ ಮಾಡಲು ಬರುತ್ತದೆ. ದಿವಸ ಮಾಡುವ ದಿನ ಐದು ವಸ್ತçಗಳನ್ನು ಹಾಕಿ ಸಿಹಿ ಮಾಡಿ ದೊಡ್ಡವರಲ್ಲಿ ಸೇರಿಸುತ್ತಾರೆ. ಒಂದು ವರ್ಷದೊಳಗೆ ಮರಣ ಹೊಂದಿದವರ ಮನೆಯಲ್ಲಿ ಶುಭಕಾರ್ಯ ಮಾಡಬೇಕು. ಇವರಲ್ಲಿ ಪುನರ್ಜನ್ಮದ ನಂಬಿಕೆ ಇದೆ.

         ಒಟ್ಟಿನಲ್ಲಿ ಮುನ್ನೂರುಕಾಪು ಜನಾಂಗವು ಹೈದರಾಬಾದ ಕರ್ನಾಟಕದ ಪ್ರದೇಶದಲ್ಲಿ ಪ್ರತಿಷ್ಠಿತ ಜನಾಂಗವಾಗಿದೆ. ಕೃಷಿಯ ಜೊತೆ ವ್ಯಾಪಾರವನ್ನೂ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ವಿಕಸಿತಗೊಳ್ಳುತ್ತಿದ್ದಾರೆ.

               ಅನುಬಂಧ- ಹಾಡುಗಳು

ಹಾಡು ೧–ಅಡಿಗಡಿಗೆ ಮಾಡುವೆ ನಿಮ್ಮಸ್ತೋತ್ರ ಗಣಪತಿ ಪಾಲಿಸು ಗಣಪತಿ ಪುತ್ರ ||ಪ||

ಪಾಲಿಸು ಪುತ್ರ ಪರಮ ಪವಿತ್ರ, ಪರಮಪವಿತ್ರ,ಪರಿಪರಿ ವಿಧದಿಂದ ತ್ವರಿತ ಗಣಪತಿ ಪಾಲಿಸು ಪಾರ್ವತಿ ಪುತ್ರ.||೧||

ಗಜಮುಖದವನ ಜ್ಞಾನಸುಂದರ ಜ್ಞಾನಸುಂದರ ಭಜಿಸುವೆ ನಿಮ್ಮ ಚರಿತ್ರ ಗಣಪತಿ ಪಾಲಿಸೋ ಪಾರ್ವತಿ ಪುತ್ರ||೨||

ವಿದ್ಯದಲ್ಲಿ ಸರಸ್ವತಿ ಬುದ್ಧಿಯಲ್ಲಿ ಗಣಪತಿ ಇಬ್ಬರು ಇದ್ದಲಿ ಇತಿಮಿತಿಯೋಳ್? ಗಣಪತಿ ಪಾಲಿಸು ಪಾರ್ವತಿ ಪುತ್ರ||೩||

 ದೇವರ ದೇವನ ದೇವ ಗಣೇಶನ, ದೇವ ಮಹೇಶನ ದಯವಂ ಪಡೆದ ಪ್ರಭುರಾಯ ಗಣಪತಿ ಪಾಲಿಸು ಪಾರ್ವತಿ ಪುತ್ರ||೪||

ಹಾಡು -೨ ಶಾರದಾಂಬ ಎನಗೆ ಪಾಲಿಸೆ ಸರಸವತಿದೇವಿ ಶಾರದಂಬ ಎನಗೆ ಪಾಲಿಸೆ||ಪ||

ಶಾರದಂಬ ಪಾಲಿಸೆನಗೆ ಸಾರವೇದ ಶೃತಿಯ ವಾಕ್ಯ ಕಮಲನಾಭವಾಣಿರಾಣಿ ವಾಣಿಯಲ್ಲಿ ನಿಂತು ನೀನು||ಅ.ಪ||

 ಗತಿಯು ನೀನು ಎಂದು ನಂಬಿದೆ ಸದ್ಗತಿಗೆ ನಿಲುಕಿ, ಮಾತಿಗಳಲ್ಲಾ ನಾನು ಬೇಡಿಹ ಪತಿತ ಪಾವನೆ ನೀನು ಪಾವನೋತ್ತಮಳೆಂದು ಹಿತದಿ ಎನ್ನ ಹೃದಯದೊಳು ನಿತ್ಯ ಕಾಲದಲ್ಲಿ ನೆನೆವೆ ||೧||

ವಿದ್ಯಾಬುದ್ಧಿಗೆ ಆದಿ ಕವನು? ತಾಳಿ ಸದ್ಭೋಧೆಯೊಳಗ ಸಾಧು ಹೃದಯ ಶಾಂತವನು ತಾಲಿ ನಾದಬಿಂದು ಕಳೆಗೆ ನೀನು ಆದಿ ಮೂಲಶಕ್ತಿಯಂದು ಹಿತದಿ ಎನ್ನ ಹೃದಯದೊಳಗೆ ಆವಕಾಲದಲ್ಲಿ ನೆನೆವ||೨||

 ವರವು ನಿನ್ನದು ಅಧಿಕ ಜಗದೊಳು ಎರಡೇಳು ಲೋಕ ಮೊರಗು ತಿಹದು ನಿನ್ನ ಬದಿಯೋಳು ಧರೆಯೊಳಗೆ ಒಂದಾಗಲು ಗುರುವು ಕೃಷ್ಣಾವಧೂತನೆಂದು ಪರಮ ಭಕ್ತರಿಗೆ ಮೋಕ್ಷಕೊಟ್ಟು ಸ್ಥಿರದಿ ನಮ್ಮನು ಸಲಹು.||೩||

      ಹಾಡು -೩ ಭಾಗ್ಯದ ಲಕ್ಷಿö್ಮ ಬಾರಮ್ಮ ನಮ್ಮಮ್ಮನೀ ಸೌಭಾಗ್ಯದ ಲಕ್ಷಿö್ಮ ಬಾರಮ್ಮ

  {ಇದು ಪುರಂದರದಾಸರ ಪ್ರಸಿದ್ಧಕೀರ್ತನೆ}

ಹಾಡು -೪- ತಾಂಡವ ನೂತ್ಯರ ಗಜಾನನಾ ತಾಂಡವ ನೂತ್ಯರ |ಪ||

ಧಿಮಿಕಿಟ ಧಿಮಿಕಿಟ ತಾಳಮೃದಂಗ ಬ್ರಹ್ಮದಳಹರ ಗಜಾನನ ರಾಂಡವ ನ್ಯೂತರ||೧||

 ತೆತ್ತೀಸಕೋಟಿ ಇಹಪರ ದಾವಿ ಇನ್ನೂ ಪೂರಿಡಿ ಹಾರ………——||೨||

ಶಂಕರಪುತ್ರ ಸುರನರ ಸೂತ್ರ ಮಧ್ಯದಿ ಗೌರಿಹರ||೩||

ಇಂದಿನ ದಿನದೊಳು ಚಂದ್ರಗ ಶಾಪವ ಚಂದದಿ ನೀಕೊಟ್ಟಿ||೪||

 ಸುರವರ ಶಂಕರ ಗಿರಿಜಾ ಮನೋಹರ ಸುರಕ್ಷಿತ ವರ ಕೂದೂರ||೫||

ದಾರಿಯೋಳು ನಾರದ ಪುರದೋಳು ಮೆರೆವ ಕರಿ ಕರಿಮುನಿ ಪೊರೆಯೂ||೬||

( ಇಲ್ಲಿ ಎರಡನೆಯ ನುಡಿಯ ಒಂದು ಚರಣ ಇಲ್ಲ ಮತ್ತು ಕೊನೆಗೆ ಅಂಕಿತ ಇಲ್ಲ)

ಹಾಡು -೫ ಜಯಶ್ರೀ ಶಂಭೂನAದನಜಯ ಶ್ರೀ ಶಂಭೂನAದನ ಭವಭಯ ಹರನಂದನ||ಪ||

ಸಬ ದೇವಲಮ ದೇವತ ತುಮಿಯೋ ಗುಪ್ತ ಗಣೇಶ ಗಜಾನನ||೧\

 ಕಾಮಕ್ರೋಧವ ನಂದಭಗವಾನ ಪತಿತಾ ಭಕ್ತ ಗಜಾನನ||೨||

W್ರವಿಕ್ರಮಯ ನಂದಭಗುವಾನ ಏಕರೂಪವು ಗಜಾನನ||೩||

                    ವಚನಗಳು

೧)              ವಿಘ್ನ ಮೌಕಾದಿ ರ‍್ತೆಯೌ ಪತಿನಿ

ವಿಶ್ವ ಸಾಕ್ಷಿಗ ನಂಚೂವಾ ವೀನತಿಯಗನೂಶುದ್ಧಚಿನ್ಮ

ತ್ರುಡನಿಯಂಚಿ ಸೊಕ್ಕಿಂಚವಲಯ

ವಿಶ್ವದಾಭಿರಾಮವೀನು ರಾವೆಮಾ||

೨)              ಲೂನ ಚೂಡ ಚೂಡ ಲೊಕಾಭಿರಾಮಂಬು

ಬಯಲೂ ಚೂಡ ಚೂಡ ಬಂದAಬು

ತನ್ನು ತಾನು ಚೂಡ ತಾರಕ ಬ್ರö್ಮಂಬು

ವಿಶ್ವದಾಭಿರಾಮು ವೀನು ರಾಮಮಾ||

೩)ಕುಂಬಿಕುಕ್ಕ ಕಲಾ ಕುಂದಳು ಪುರುಳೊಲು

ಪರಕಿಬಂಮಕಲ ಬಿರುದು ಗೊಡಗು

ಮುಸಿಲ ಮುಂಡಕಲ ಮುಸಿಮುಸಿ ನಗುವುಲು

ವಿಶ್ವದಾಭಿರಾಮ ಮಿಸುರವಮ||

೩)              ಕುಕ್ಕ ಗೋವು ಕಾದು ಕುಂದಲು ಪೂಲಿಕಡು

ಧೂಮ ಗಜೆಯು ಕಾದು ದೊಡ್ಡದೈವ

ಲಫಭಿದಾತಗಾದು ಲೋಕಂಬು ತೂಪಲ

ವಿಶ್ವದಾಭಿರಾಮ ಮೀನು ರವಯ||

=============================================

ಡಾ.ಶೀಲಾದಾಸ,ರಾಯಚೂರು.

ಆಕರಗ್ರಂಥ-೧) ಭಾರತೀಯ ಸಂಸ್ಕೃತಿ ದರ್ಶನ ಸಂಪಾದಕರು-ಅ.ನ. ಕೃಷ್ಣರಾಯ

            ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ಮೈಸೂರು ಸರಕಾರ,    ಬೆಂಗಳೂರು-.೧೯೬೨

          ೨) ಮುನ್ನೂರು ಮುಂಗಾರು ಪ್ರ.ಸಂ. ಶ್ರೀರಾಮಣ್ಣ ಹವಳೆ.

            ಪ್ರಕಾಶಕರು-ಮುನ್ನೂರು ಕಾಪು ಸಮಾಜ,ರಾಯಚೂರು-೨೦೧೦

ಮೌಖಿಕ ಮಾಹಿತಿ- ೧)ಶ್ರೀಮತಿ ಸುಜಾತಾ ಮೌಖಿಕ ಮಾಹಿತಿ ಮತ್ತು ಹಾಡಿನ ಸಾಹಿತ್ಯ ಒದಗಿಸಿದ್ದಾರೆ.

               ೨)ಶ್ರೀಮತಿ ದಾನಮ್ಮ ಸುಭಾಶ್ಚಂದ್ರ

               ೩)ಶ್ರೀವಿಶ್ವನಾಥಭಟ್ಟ, ಅರ್ಚಕರು ಲಕ್ಷö್ಮಮ್ಮ ದೇವಸ್ಥಾನ,ರಾಯಚೂರು

               ೪)ಶ್ರೀಮತಿ ಲಕ್ಷಿö್ಮದೇವಿ ವೆಂಕಟಪ್ಪ ನಾಯಿನಿ, ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.