ರಾಮಶ್ವಮೇಧದಲ್ಲಿ ಸೀತೆಯ ಪಾತ್ರ

                                        

          ಕನ್ನಡ ಸಾಹಿತ್ಯಚರಿತ್ರೆಯನ್ನು ಅವಲೋಕಿಸಿದಾಗ ಅನೇಕ ಕವಿಗಳು ಮೈಲುಗಲ್ಲಾಗಿ ನಿಲ್ಲುತ್ತಾರೆ, ಅಂಥವರಲ್ಲಿ ಮುದ್ದಣ್ಣ ಕವಿಯೂ ಒಬ್ಬನು.ನಡುಗನ್ನಡ ಹಳೆಗನ್ನಡದ ಕೊಂಡಿಯಾಗಿ,ಹೊಸತನದ ರುವಾರಿಯಾಗಿ ನಿಲ್ಲುತ್ತಾನೆ.ಹೊಸಗನ್ನಡದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುವ ಕವಿಯಂದರೆ ಮುದ್ದಣ್ಣ.ಹತ್ತೋಂಭತ್ತನೆ ಶತಮಾನ ಹಲವಾರು ಹೊಸತನವನ್ನು ಕಂಡಿದೆ.ಹಳೆತನ ಹೊಸತನವನ್ನು ಮೈಗೂಡಿಸಿಕೊಂಡವನು ಮುದ್ದಣ್ಣ.ಅವನುಬದುಕಿದ ಕಾಲ ಕಡಿಮೆಯಾÀದರೂ ಮಾಡಿದ ಸಾದನೆ       ಅನುಪಮವಾದದ್ದು. ಆದ್ದರಿಂದ ಮುದ್ದಣ್ಣ ಇಂದಿಗೂ ಪ್ರಸ್ತುತವಾಗಿದ್ದಾನೆ.

       ಮುದ್ದಣ್ಣನ ನಿಜನಾಮಧೇಯ `ನಂದಳಿಕೆ ನಾರಾಯಣಪ್ಪ’ ಎಂದು. ಆದರೆ ಪ್ರಸಿಧ್ಧಿಯಾದದ್ದು ಮುದ್ದಣ್ಣನೆಂದು.ತAದೆ ತಿಮ್ಮಪ್ಪಯ್ಯ ತಾಯಿ ಮಹಲಕ್ಷಮಮ್ಮ.೨೪-೦೧-೧೮೭೦ರಂದು ಜನಿಸಿದನು.ನಂದಳಿಕೆ ಎಂಬುವುದು ಹುಟ್ಟು ಗ್ರಾಮ. ತಾಯಿ ಮುದ್ದಿನಿಂದ ಮುದ್ದಣ್ಣನೆಂದು ಕರೆದುದರಿಂದ ಮುದ್ದಣ್ಣನೆಂದೆ ಖ್ಯಾತನಾದನು.ಬಾಲ್ಯ ಕಷ್ಟದಿಂದ ಕೂಡಿದ್ದು.ತಂದೆ ಪೂಜ ಕೈಂಕರ್ಯ ನಡೆಸುತ್ತಿದ್ದರು.ಅಗಾಧ ಪ್ರತಿಭಾವಂತನಾದ ಮುದ್ದಣ್ಣನಿಗೆ ಆ ಹಳ್ಳಿ ಸಾಕಗಲಿಲ್ಲ.ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೊಗುತ್ತನೆ, ಅಧ್ಯಯನದ ಜೊತೆಗೆ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುತ್ತಾನೆ.ಜೊತೆಗೆ ಸಾಹಿತ್ಯಕೃಷಿಗೂ ಕೈಹಾಕುತ್ತಾನೆ.

       ಶ್ರೀರಾಮಾಪಟ್ಟಾಭಿಶೇಕ,ಅದ್ಭುತರಾಮಾಯಣ,ರಾಮಾಶ್ವಮೇದ,ರತ್ನಾವತಿ ಕಲ್ಯಾಣ, ಕುಮಾರ ವಿಜಯ ಎಂಬಕೃತಿಗಳನ್ನು ರಚಿಸಿದ್ದಾನೆ.ಪ್ರಸ್ತುತ ರಾಮಾಶ್ವಮೆಧದಲ್ಲಿ ಸೀತೆಯ ಪಾತ್ರದ ಕುರಿತು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ, ಮುದ್ದಣ್ಣನಿಗಿಂತ ಮೊದಲು ಇದ್ದ ರಾಮಯಣಗಳ ಪರಿಚಯ ,ಪ್ರಭಾವ ಅವನಮೇಲಾಗಿರ ಬಹುದು.

      ರಾಮಾಯಣ,ಮಹಾಭಾರತ ಮಹಾಕಾವ್ಯಗಳು ಭಾರತೀಯರಲ್ಲಿ ಆಳವಾಗಿ ಬೇರೂರಿವೆ,ಸಾವಿರಾರು ವರ್ಷಗಳಿಂದ ಪಾರಯಣ ಗ್ರಂಥಗಳಾಗಿವೆ.  ಭಾರತೀಯರ ಸಂಸ್ಕೃತಿಯ ,ಆದರ್ಶದ ತವನಿಧಿಯಗಿವೆ.ಭಾರತದ ಎಲ್ಲಾ ಬಾಷೆಗಳಲ್ಲೂ ಈ ಕಾವ್ಯಗಳು ಕಂಡು ಬರುತ್ತವೆ.ಅಷ್ಠೇ ಅಲ್ಲಾ ವಿದೇಶಗಳಲ್ಲೂ ಹರಡಿದೆ.

      ಪ್ರಸ್ತುತ ರಾಮಾಯಣದ ಕಥೆಯವಿಷಯದ ಮೂಲವನ್ನು ವೈದಿಕ, ಬೌಧ್ಧ,ಜೈನ,ಪರಂಪರೆಯಲ್ಲಿಯಲ್ಲಿ ಕಾಣುತ್ತೆವೆ,ವೈದಿಕ ಪರಂಪರೆಯಲ್ಲಿ ವಾಲ್ಮೀಕಿರಾಮಯಣ,ಭೌಧ್ದ ಪರಂಪರೆ,ಜೈನ ಪರಂಪರೆಯಲ್ಲಿ ಗುಣಭದ್ರರ,ವಿಮಲಸೂರಿಯರ ರಾಮಾಯಣಗಳು ಬೆಳೆದುಬಂದಿವೆ.    ಕನ್ನಡದಲ್ಲಿಭುವನೈಕರಾಮಾಭ್ಯುದಯ,ನಾಗಚಂದ್ರನರಾಮಚAದ್ರಚರಿತಪುರಾಣ,ಕುಮದೇAದುರಾಮಾಯಣ,ತೊರೆವೆಯರಾಮಾಯಣ,ಲಕ್ಚಿö್ಮÃಶನಜೈಮಿನಿಭಾರತ, ವೆಂಕಮಾತ್ಯರಾಮಯಣ,ಬತ್ತಲೇಶ್ವರ ಕವಿಯಕೌಶಿಕ ರಾಮಾಯಣ,ಮುದ್ದಣ್ಣನ ರಾಮಾಯಣ ಕಾವ್ಯಗಳು,ಕುವೆಂಪು ಅವರ ರಾಮಾಯಣ ದರ್ಶನಂ,ಜನಪದ ಸಾಹಿತ್ಯದಲ್ಲಿ ರಾಮಾಯಣದ ಕಥೆಗಳುಬೆಳೆದು ಬಂದಿವೆ.

      ಪ್ರಸ್ತುತ ಈ ರಾಮಾಯಣಗಳಲ್ಲಿ ಸೀತೆಯ ಪಾತ್ರ ವಿಶೇಷವಾಗಿ ಬೆಳೆದು ಬಂದಿದೆ. ವಾಲ್ಮೀಕಿ ರಾಮಾಯಣದಲ್ಲಿ ಸೀತೆಯ ಬಾಹ್ಯ ಸೌಂದರ್ಯಕಿAತ,ಆAತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ಸೀತೆಯ ಪಾತ್ರದ ಮುಖಾಂತರÀಹೆಣ್ಣಿನ ಜೀವನದ ಅತಿ ಶೇಷ್ಟವಾದ ಆದರ್ಶವನ್ನು ಮುಂದಿಟ್ಟಿದ್ದಾನೆ.ಆಕೆಯಲ್ಲಿ ಪತಿವ್ರತೆಯಲ್ಲಿರಬೇಕಾದ ತ್ಯಾಗ, ಕೊಮಲ,ಧೈರ್ಯ ಸಹನೆಗಳೂ ಮನೆಮಾಡಿದ್ದವು.ಎಲ್ಲರ ಹೃದಯದಲ್ಲಿ ನೆಲೆಯಾಗಿ ನಿಲ್ಲುವ ಪಾತ್ರ ಸೀತೆಯದು..ಜಾತಕ ಕಥೆಗಳಲ್ಲಿ ಸೀತೆಯಪಾತ್ರಕ್ಕೆ ಮಹತ್ವವಿಲ್ಲಾ.ರಾಮನ ಪಾತ್ರಕ್ಕಿಂತಾ ರಾಮನ ಆದರ್ಶವೇಇಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.ವಿಮಲ ಸೂರಿಯ ಪಉಮಚರಿಯ,ಗುಣಭದ್ರನು ಉತ್ತರಪುರಾಣ ದಲ್ಲಿ `ಸಂಪತ್ತಿಗಿAತ ಸ್ತಿçÃಯರಿಗೆ ಶೀಲವೇ ಮುಖ್ಯವೆಂಬ ವಿಚಾರ ವ್ಯಕ್ತವಾಗಿದೆ. ಪಂಪರಾಮಾಯಣದಲ್ಲಿ ಸೀತೆಸೌಂದರ್ಯವತಿಯಾಗಿ ಚಿತ್ರಿತವಾಗಿದ್ದಾಳೆ. ಏಕೆಂದರೆ ರಾವಣನ ಅವನತಿ ತೋರಿಸಬೇಕಾಗಿದೆ.ಕುಮದೇಂದು ನಾಗಚಂದ್ರನನ್ನು ಅನುಸರಿಸಿದ್ದಾನೆ.ಕುಮಾರವಾಲ್ಮೀಕಿ ,ಆದಿಕವಿವಾಲ್ಮೀಕಿಯನ್ನು ಅನುಸರಿಸಿದ್ದಾನೆ.ಸೀತೆಯನ್ನು ಆದಿಶಕ್ತಿ,ವಿಷ್ಣುವನಿತೆ ಎಂದು ವರ್ಣಿಸಿದ್ದಾನೆ.ವೆಂಕಮಾತ್ಯವರ್ಣನೆಗೆ ಬೆಲೆಕೊಟ್ಟರೆ,ಕೌಶಿಕರಾಮಾಯಣ ಮಮತೆಗೆ ಬೆಲೆ ಕೊಟ್ಟಿದ್ದಾನೆ.ಜೈಮಿನಿಭಾರತದಲ್ಲಿ ಸೀತೆ ಕೋಮಲಸ್ವಭಾವ ಬಿಟ್ಟುಸಹಜ ಹೆಣ್ಣಿನಂತೆ ಚಿತ್ರಿತವಾಗಿದ್ದಾಳೆ.

       ಈ ಎಲ್ಲಾ ಕಾವ್ಯಗಳ ಅದರಲ್ಲೂ  ಮುದ್ದಣ್ಣನ ಮೇಲೆವಿಶೇಷವಾಗಿ  ಲಕ್ಷಿö್ಮÃಶನ ಪ್ರಭಾವ ಬೀರಿದೆ.ಸೀತೆಯನ್ನು ದೈವತ್ವಕ್ಕಿಂತ ಮಾನವಸಹಜ ಗುಣಗಳನ್ನುಚಿತ್ರಿಸಲು ಪ್ರಯತ್ನಿಸಿದ್ದಾನೆ. ಒಮ್ಮೆ ಸೀತೆ ಪಕ್ಷಿಯೊಂದು ತನ್ನ ಮರಿಗೆ ಗುಟುಕುಕೊಡುವುದನ್ನು ನೊಡಿ ಪರಿತಪಿಸುತ್ತಾಳೆ. ತನಗೆ ಮಗುವಿಲ್ಲ ಎಂಬುದನ್ನುಅದು ಅಣುಕಿಸಿ ತೋರುವಂತೆ ಬಾವಿಸುತಾರೆ. ರಾಮಾಶ್ವಮೇಧ ಉತ್ತರರಾಮಾಯಣದ ಕಥೆ.ಮೇಲ್ನೋಟÀಕ್ಕೆ ಈ ಕೃತಿಗೆ ವಾಲ್ಮೀಕಿರಾಮಾಯಣ ಆಕರ ಗ್ರಂಥ ಎನ್ನಿಸಿದರೂ, ಇದಕ್ಕೆ ಮೂಲ ಆಕರ ಪದ್ಮಪುರಾಣವಾಗಿದೆ.೪೩೦೦ ಶ್ಲೋಕದಲ್ಲಿರುವ ಕಥೆಯನ್ನು ೧೬ ನಾರು ಆಶ್ವಾಸಗಳಲ್ಲಿ ರಚಿಸಿದ್ದಾನೆ.ಅಲ್ಲದೆ ಲಕ್ಷಿö್ಮÃಶನ ಜೈಮಿನಿಭಾರತವೂ ಪ್ರಭಾವಬೀರಿದೆ.ಈ ಎರಡೂ ಕೃತಿಗಳಲ್ಲಿ ಬೇಕಾದ ವಿಚಾರಗಳನ್ನು ಆಯ್ಕೆಮಾಡಿಕೊಂಡಿದ್ದಾನೆ.ಲವಕುಶರ ಬಾಲಲೀಲೆ,ರಾಮ ಲಕ್ಷö್ಮಣ, ಭರತನೊಂದಿಗೆ ನಡಿಸಿದ ಕಾಳಗ ವಿಶೇಷವಾಗಿ ಮೂಡಿಬಂದಿದೆ,ಇತg Àರಾಮಾಯಣಗಳಲ್ಲಿ ಸೀತೆ ಸೌಮ್ಯಸ್ವಭಾವದವಳಾಗಿ ಚಿತ್ರಿತವಾದರೆ ಮುದ್ದಣ್ನ ಅವಳನ್ನು ಧೀರೋಧಾತ್ತವಾಗಿ ಚಿತ್ರಿಸಿದ್ದಾನೆ.ಸೀತೆಯು ಇಲ್ಲಿ ನವೀನವಾಗಿ ಚಿತ್ರಿತವಾಗಿದ್ದಾಳೆ.ಪ್ರಸ್ತುತ ದಿನಗಳಲ್ಲಿ ಈ ಪಾತ್ರ ಮಾದರಿಯಾಗಿದೆ.

      ಅಯೊಧ್ಯಯಲ್ಲಿ ಸೀತೆ ತನ್ನ ಸೇವಕಿಯರೊಂದಿಗೆ ಕಾಲ ಕಳಿಯುತ್ತಿರುವಾಗ ಹಕ್ಕಿ ತನ್ನಮರಿಗೆ ಗುಟುಕು ಕೊಡುತ್ತಿರುತ್ತದೆ.ಅದನ್ನು ನೋಡಿದ ಸೀತೆ ಅದು vನ್ನÀನ್ನುಬಂಜೆಯAದು ಅಣುಕಿಸುತ್ತಿದೆ ಯಂದು ಭಾಸವಾಗುತ್ತದೆ.ಬಂಜೆತನದ ನೊವು, ಮಗುವಿಗಾಗಿ ಕಾತರಪಡುವ ಆಕೆಯಸಹಜ ಮಾತೃಹೃದಯವಿವರವಾಗಿ ಹೃದ್ಯವಾಗಿ, ಚಿತ್ರಿತವಾಗಿದೆ.ಇದರೋಂದಿU ೆಆಕೆಯ ಅಂತರAಗದ ತುಡಿತಗಳೆಲ್ಲವೂ ಹೊರಬಂದಿವೆ.`vನ್ನÀನ್ನು ಬಂಜೆಯAದು ಜರಿದು ಮಗುವನ್ನು ಯಾರು ನನ್ನ ಕೈಗೆ ಕೊಡರು, ಮಾತನಾಡಲುಬಿಡರು.ಕುಲವನ್ನು ವರ್ಧೀಸುವ ಕಂದನನ್ನು ಪಡೆದು ಮೊಲೆಯುಣಿಸಿ ಪಾಡಿತೂಗಿಮಲಗಿಸುವ, ಮಗುವಿನ ಬಾಲಲೀಲೆಗಳನ್ನು ಕಂಡು ಆನಂದಿಸುವ ಘಳಿಗೆನಾನು ಪಡೆದುಕೊಂಡಿಲ್ಲಾ’ ಎಂದು ಮಕ್ಕಳಿದ್ದ ಹೆಣ್ಣುಮಕ್ಕಳ ಸುಖವನ್ನು ಕಲ್ಪಿಸಿಕೊಳ್ಳುತ್ತಾಳೆ.ಆ ಅವಕಾಶತನಗಿಲ್ಲವೆಂದು ನಿರಾಶೆಯಿಂದಿರುವ ಮನಸ್ತಿತಿಯನ್ನು ಕವಿ ಹೃದಯಂಗಮಯವಾಗಿ ಚಿತ್ರಿಸಿದ್ದಾನೆ.ಮುದ್ದಣ್ಣನ ಈ ಹೊಸಸೃಷ್ಟಿಯಿಂದ ಹೆಣ್ಣಿನ ಹೃದಯದ ಭಾವಗಳ ತಿಳುವಳಿಕೆ ಸುಂದರ ಕಾವ್ಯವಾಗಿದೆ. ರಾಮನು ತನ್ನನ್ನು ಕಾಡಿಗೆಕಳುಹಿಸುತ್ತಾನೆಂದುಅರಿಯದೆ ಅವಳು ಪಡುವ ಸಂತಸ ಅಷ್ಟಿಷ್ಟಲ್ಲಾ.`ತನ್ನಪತಿ ನನ್ನಾಸೆಯನ್ನು  ಇಷ್ಟು ಬೇಗ ಈಡೇರಿಸಿದನೇ?.ಎಂಥಾಕರುಣಾಕರ.ನಾನು ಇನ್ನು ಅತ್ತೆಯ ಒಪ್ಪಿಗೆ ಪಡೆದುಕೊಂಡಿಲ್ಲ.ಸಹೋದರಿಯರಿಗೆ ಹೇಳಿಲ್ಲ. ಇರಲಿ ರಾಮನೇ ಹೇಳಿಕೊಳ್ಳುತ್ತಾನೆ. ಅಥವಾ ತಾವೇ ತಿಳಿದುಕೊಳ್ಳುತ್ತಾರೆ.ವನದಿಂದಬAದನAತರ ಅಲ್ಲಿ ಕೇಳಿದ ಕಥೆಗಳನ್ನು ಹೇಳುತ್ತೇನೆ. ಇನ್ನೇನು ಕೆಲದಿನಗಳಲ್ಲಿ ಬರುತ್ತೇನೆ.ಎಂದು ವನಸುಮಂಗಲೆಯರನ್ನು ಕಾಣಲು ತವಕಿಸುತ್ತಾಳೆ.ಈ ಸಂದರ್ಭದಲ್ಲಿ ಸೀತೆಂiಯ್ನು ಬಿಟ್ಟು ಹೊಗÀÄವುದಹೇಗೆ ಎಂದು ಚಿಂತೆ`ಮಾಡುತ್ತಿರಲಾಗಿ ಲಕ್ಷö್ಮಣ ಏಕೆ ನಿಧಾನವಾಗಿ ಬರುತ್ತಿರುವೆ.ದಾರಿಯಲ್ಲಿಮುಲ್ಲು ಮುಳ್ಳು ಇಲ್ಲಾ ಆಶ್ರಮಕ್ಕೆ ಬರಲು ನಿನಗೆಮನಸ್ಸಿಲ್ಲವೆ ಎಂದುಮುಗ್ದವಾಗಿ ಕೇಳುತ್ತಾಳೆ.ಮುಂzಹೋಗಿÉಲಕ್ಷö್ಮಣ ನೀನು ದಾರಿ ತಪ್ಪಿದ್ದಿಯ. ಇದು ಆಶ್ರಮದ ದಾರಿಯಲ್ಲಇಲ್ಲಿ ಜನರ ಸಂಪರ್ಕವೆ ಇಲ್ಲ. ಇಲ್ಲಿಪ್ರಾಣಿಗಳಭಯಂಕರ ದ್ವನಿ ಕೇಳುತ್ತಿದೆ. ಇಂಥಕಡೆ ಋಷಿಮುನಿಗಳು ವಾಸಿಸಲು ಸಾಧ್ಯವಿಲ್ಲಾ. ನೀನು ಬಹುಶ: ದಾರಿತಪ್ಪಿರುವೆ ‘ಎಂದುಅರಿಯದೆ ವ್ಯಾಕುಲತೆಯನ್ನು ವ್ಯಕ್ತಪಡಿಸುತ್ತಾ¼ತೆ.ಆ ಮಾತ್ತÄ ಕೇಳಿ ಲಕ್ಷö್ಮಣನ ಮನದಲ್ಲಿ ವೇದನೆಯಾಗುತ್ತದೆ. ಕೊನೆಗೆಕಣ್ಣೀರಿÀಡುತ್ತ , ತಾಯೆನನ್ನನ್ನು ಕ್ಷಮಿಸಿ,ಇಲ್ಲಿಯವರೆಗೆಅಣ್ಣನ ಅಪ್ಪಣೆÉಯಂತೆ ಸುಮ್ಮನಿದ್ದೆ.ಯಾರದೊ

ಮಾತಿಗೆ ಅಣ್ಣ ನಿಮ್ಮನ್ನು ಅಡವಿಗೆ ಬಿಟ್ಟು ಬರಲು ಹೇಳಿದ್ದಾನೆ,ಅಣ್ಣ£ಆಜ್ಷೆಯನ್ನುÀ ಪಾಲಿಸುತ್ತ

ರಾಮನು ತನ್ನನ್ನು ತೆಜಿಸಿ ಕಾಡಿಗೆ ಬಿಡಲುತಿಳಿಸಿದ್ದಾನೆಂದು ತಿಳಿದಾಗ ದಿಗ್ಬಾçಂತಳಾಗಿತ್ತಾಳೆ.ಇಲ್ಲಿ ಕವಿ ಆಕೆಯಮನzಲ್ಲಿಯ ಅಚ್ಚರಿ, ರೋಷ, ಆತ್ಮನಿಂದೆ,  ವ್ಯÀಂಗ್ಯವನ್ನೆಲ್ಲಾಬಿಡಿಸಿಬಿಡಿಸಿ ಹೇಳಿದ್ದಾನೆ.

         ಈ ಸುದ್ದಿ ಕೇಳಿ ಸೀತೆಗೆ ಬರಸಿಡಲು ಬಡೆದಂತಾಯಿತು.ಗಾಳಿಗೆ ಕರ್ಪೂರದಬಾಳೆ ಗಿಡದಂತೆಮುರಿದು ಬಿದ್ದಳು.ಮೈದುನನಮಾತು ಕಿವಿಗೆ ಚೂಪಾದ ಬಾಣ ನೆಟ್ಟಂತೆ ಆಯಿತು.ಮೂರ್ಛೆಹೊದಳು. ಲಕ್ಷö್ಮಣನು ಅಲ್ಲಿಯೇ ಇದ್ದ ಬೆಟ್ಟದ ಝರಿ ನೀರನ್ನು ತಾವರೆಯ ಎಲೆಯಲ್ಲಿ ತಂದು ದೇವಿಗೆ ಮಾಡುವ ಸೇವೆಯಂದು ಕಾಲಿಗೆ ನೀರುಹಾಕಿ ತಲೆಯ ಮೇಲೆ ನೀರು ಸುರಿಯಲು ಸೀತೆ ಕಣ್ಣು ಬಿಟ್ಟಳು.`ಹಾ ಲಕ್ಷö್ಮಣ ಪ್ರಿಯನಾದ ರಾಮ ಹೀಗೆ ಹೇಳಿದನೆ, ?ಮಾವು ಬೇವಾಯಿತೆ?,ಸಾಗರ ಬತ್ತಿ ಹೊಯಿತೆ?ಧರ್ಮ ಮಡುವಿನಲ್ಲಿ ಮುಳಿಗಿಹೋಯಿತೆ?ಹುಣ್ಣಿಮೆಯ ಚಂದ್ರನನ್ನುರಾಹು ನುಂಗಿತೆ?ಸತ್ಯ ಪಲಾಯನಮಾಡಿತೆ?ನೀತಿ ಹೆಸರು ಕಳೆದುಕೊಂಡಿತೆ?ಅಯ್ಯೋನಾಬಲಿಯಾದೆನಲ್ಲ’ ಎಂದು ಪ್ರಲಾಪಿಸುತ್ತಾಳೆ.ಮುಂದುವರೆದು ನನ್ನಲ್ಲಿ ಯಾವ ಕೊರತೆಕಂಡೆ,ಮಾರಿ ಹಬ್ಬವೆಂದುಮನೆಯ ಹೋರಿಯನ್ನು ಬಲಿಕೊಡುವರೆ,ಒಬ್ಬ ಸಾಮಾನ್ಯವ್ಯಕ್ತಿ ಆರೊಪಿಸಿದನೆಂದು ಅಬಲೆಯನ್ನು ಕಗ್ಗಾಡಿನಲ್ಲಿ ಬಿಟ್ಟು ಬರಬಹುದೆ?ನಾನು ನಿನ್ನರ್ಧಾಂಗಿಯಲ್ಲವೇ,ನಾನು ಇಲ್ಲದೆ ನೀನು ಅರ್ಧದೇಹಿಯಲ್ಲವೆ? ನಾನಿಲ್ಲದೆ ನೀನು ಸಿಂಹಾಸನವನ್ನು ಹೇಗೆ ಏರುವೆ?ನೀನು ಕಾಡಿಗೆ ಹೋಗುವಾಗ ನಿನ್ನನ್ನು ಅರ್ಧಗಂಟೆಬಿಟ್ಟಿರಲಾರೆನೆAದು ನಾನೂ ನಿನ್ನಜೊತೆಗೆ ಬರಲಿಲ್ಲವೇ?ಕಾಡಿನಲ್ಲಿ ಬಳಲಿ ಬಸವಳಿದಾಗ ನೀನುನನ್ನನ್ನು ಆರೈಕೆ ಮಾಡಲಿಲ್ಲವೆ, ಈಗ ನಾನು ಈ ಭಯಂಕರಕಾಡಿನಲ್ಲಿ  ಒಬ್ಬಳೇಹೇಗೆ ಇರಬಲ್ಲೆ?ಎಂದು ಹೇಳುವ ಸೀತೆಯನ್ನು ಮುದ್ದಣ್ಣ ಕವಿ ಸೃಷ್ಟಿಸಿದ್ದಾನೆ. ಆಕೆ ಕೇಳುವ ಒಂದೊAದು ಮಾತಗಳು ಮರ್ಮಭೇದಮಾತುಗಳಾಗಿವೆ,

           ಮುಂದುವರೆದು ನೀನು ಹನುಮಂತ,ಜಾAಬವAತ,ಸುಮAತ್ರ ,ಅತ್ತೆಯರು ಇದಕ್ಕೆ ಒಪ್ಪಿಕೊಂಡರೆ?ನನ್ನದೊAದು ಬದುಕೇ? ಎಂದು ತನ್ನನ್ನು ತಾನು ಶಪಿಸಿಕೊಳ್ಳುತ್ತ,ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತ`ನಿಮ್ಮನ್ನು ಶÀಪಿಸಿ ಏನು ಪ್ರಯೊಜನ? ಹಿಂದಿನಜನ್ಮದಲ್ಲಿ ಯಾವದಂಪತಿಗಳನ್ನು ಅಗಲಿಸಿದ್ದೆನೋ ಈ ಜನ್ಮದಲ್ಲಿ ಅದರ ಫಲವನ್ನು ಅನುಭವಿಸುತ್ತಿದ್ದೆನೆ.ಎಂದು ಪತಿಯನ್ನು ಆತನ ಆದೇಶವನ್ನು ಗೌರವಿಸುತ್ತಾಳೆ.ತಲೆತಗ್ಗಿಸಿನಿಂತ ಮೈದುನನ್ನು `ಕಂದ ಏಕೆ ನಿಂತಿರುವೆ, ಅಣ್ಣನ ಆಜ್ಞೆ ಪಾಲಿಸಿರುವೆ.ತಡವಾಗುತ್ತದೆ ಹೋಗು,ತಡವಾದರೆ ನಿನ್ನ ಅಣ್ಣಕೋಪಿಸಿಕೊಳ್ಳುವುದಿಲ್ಲವೇ?ಎಂಬಮಾತು ಮೇಲ್ನೋಟಕ್ಕೆ ಸರಳವಾÀದರೂಅದರಲ್ಲಿ ವ್ಯಂಗ್ಯ ಇಣುಕಿ ನೋಡುತ್ತದೆ.ಆಕೆಯಮಾತು ಈಟಿಯಿಂದ ಇರಿದಂತೆ ಭಾಸವಾಗುತ್ತದೆ.ನಿನ್ನಣ್ಣ ಕೇಳಿದರೆ`ಅವಳು ದು:ಖಿಸಲಿಲ್ಲ,ಅಳುಕಲಿಲ್ಲ,ಶಪಿಸಲಿಲ್ಲ,ಪ್ರತಿಮಾತನಾಡಲಿಲ್ಲ.ನೀನೇ ಗತಿಯಂದು ಸಾವು ನಿರೀಕ್ಷಿಸುತ್ತಿದ್ದಾಳೆ ಎಂದು ನಿರೂಪಿಸು ಅವಳ ಸ್ಥಿತಿಚಿಂತಾಜನಕವಾದದ್ದು ಹಾಗೂ ಧೀರೋಧ್ಧಾತ್ತವಾದದ್ದು. ಜನಕಮಹಾÀರಾಜನ ಕುವರಿಯಾದ ಜಾನಕಿ ಯುವರಾಣಿ. ಮನೆತನದ ಸಹಜವಾದ ವೀರಗುಣಗಳು ಅವಳಲ್ಲಿಯೂ ಇದೆ,ತಾತ್ಕಾಲಿಕವಾದರೂ ಅವಳಲ್ಲಿಯ ಸಹಜಸ್ವಭಾವ ಜಾಗ್ರತವಾಗುತ್ತದೆ.ಮನುಷ್ಯಸೋತು ಹೋದಾಗ, ಬೇರೆ ಮಾರ್ಗವೇ ಇಲ್ಲವಾದಾಗ ಎಲ್ಲಿಲ್ಲದ ದೈರ್ಯಬರುತ್ತದೆ.ತುಂಬಾಮುಳಿಗಿದವನಿಗೆ ಛಳಿಏನುಮಳೆ ಏನು ಎಂಬAತೆ ವಿನೂತನವಾಗಿ ಚಿತ್ರಿತವಾಗಿದ್ದಾಳೆ. ಮುಂದುವರೆದು,ನನಗೆನನ್ನ ತಂದೆಯು ಬಳುವಳಿಯಾಗಿ ಕೊಟ್ಟ ಆಭರಣಗಳಲ್ಲಿ ಏಕಾವಳಿಹಾರ ಶ್ರುತಕೀರ್ತಿಗೂ,ತಿರುಪಿನ ಬಳೆಯನ್ನು ಮಾಳವಿಗೂ,ಯಕ್ಷರು ಧರಿಸುವ ತುಂಬು ಬೆಲೆ ಬಾಳುವ ಹಾರವನ್ನು ನಿನ್ನ ಪತ್ನಿಗೂ ಕೊಡು,ಉಳಿದ ನನ್ನುಡುಪುಗಳನ್ನುನನ್ನಪ್ರಿಯಗೆಳತಿ ಚಂದ್ರಮತಿಗೂಕೊಡು.ದು:ಖಿಸಬೇಡವೆAದು ಹೇಳು.ನಾನು  ಸಿಧ್ಧಪಡಿಸಿದ ಬಾಗೀಣವನ್ನುರಥದಲ್ಲಿ ಇಟ್ಟಿದ್ದೇನೆ ಅದನ್ನು ಬ್ರ‍್ರಾಹ್ಮಣಗೆ  ಮುತೈದೆಕೊಡು ನನ್ನ ಮುದ್ದಿನ ಹಸು ಕರುವನ್ನು ನಿನ್ನ ತಾಯಿ ಸುಮಿತ್ರೆಗೆಕೊಡು,ಸಾಧ್ಯವಾದರೆನಿನಗೆ ನನ್ನಲ್ಲಿ ದಯೆ ಇರುವುದಾದರೆ ನೀರಿನಅರವಟ್ಟಿಗೆಯನ್ನು ಏರ್ಪಡಿಸು’ಹೊಗು ನಿನ್ನ ಪಯನ ಸುಖಕರವಾಗಲಿ .ಅಪ್ಪಣೆ ಕೊಡುತ್ತಾಳೆ. ಲಕ್ಷö್ಮಣ ದಿಕ್ಪಾಲಕರಿಗೆ ಕೈಮುಗಿದು ಅತ್ತಿಗೆಯನ್ನು ಕಾಪಾಡಲು ಕೇಳಿಕೊಳ್ಳುತ್ತಾನೆ,ಸರ‍್ಯದೇವ, Éವನದೇವಿಯರಿಗೆ ಒಪ್ಪಿಸಿ ವಂದಿಸಿ ಹೋÀರಟುಹೋಗುತ್ತಾನೆ,ಜನಕರಾಜನ ಮಗಳು,ರಾಮನ ಹೆಂಡತಿಗೆ ಈಪರಸ್ಥಿತಿಯೇ,ವಿಧಿವಿಲಾಸ,ತನ್ನ ಅರಮನೆ ಗಿಳಿಗಳು, ಹೂಬಳ್ಳಿಗಳನ್ನು ನೆನೆದು ದ:ಖಿಸಿ ನಾನಿಲ್ಲದಿದ್ದರೆ ಇನ್ನೊಬ್ಬರು ಎಂದು ಉದಾಸೀನವಾಗಿ ಇರುವಾಗ ವಾಲ್ಮೀಕಿಋಷಿಗಳು ಬರುತ್ತಾರೆ.ಅವುರು ಯಾರು ತಾಯೆ ವನದೇವಿಯಂತಿರುವೆ.ಎAದಾಗ ಹೆದರಿ ರಾಕ್ಷಸರು ಇರಬಹುದೆಂದು ನಡಗುತ್ತಿರಲಾಗಿ,ವಾಲ್ಮೀಕಿ ಋಷಿಗಳು ತಾವು ತಪಸ್ವಿಗಳೆಂದು ಹೆದರಬಾರದೆಂದುರಮಿಸಿ ಆಕೆಯನ್ನು ಆಶ್ರಮಕ್ಕೆ ಕರೆತರುತ್ತಾನೆ.:

         ಇತ್ತರಾಮ ಸೀತೆಯ ನೆನೆದು ದು:ಖಿತನಾಗಿ,ಅಗಸ್ತö್ಯರ ಆದೇಶದಂತೆ ಚಿನ್ನದ ಸೀತೆಯನ್ನು ಇಟ್ಟುಕೊಂಡು ಅಶ್ವಮೇಧ ಕಾರ್ಯ ಆರಂಭಿಸುತ್ತಾನೆ. ಕುದುರೆಯ ಬೆಂಗಾಲಿಗೆÀ ಶತೃಘ್ನನನ್ನು,ಜೊತೆಗೆ ಭರತನಮಗನನ್ನು ನೆನಿಸಿ ಕಳಿಸುತ್ತಾರೆ.ಬೇರೆಬೇರೆ ಪ್ರದೇಶಗಳನ್ನು ದಾಟಿ ವಾಲ್ಮೀಕಿ ಆಶ್ರಮಕ್ಕೆ ಬರಲು ಮಕ್ಕಳು ಕುದುರೆಯನ್ನು ಕಟ್ಟಿಹಾಕುತ್ತಾರೆ ಹಿಂಬಾಲಕರು,ರಾಜರು ಲವನೊಂದಿಗೆ ಯುಧ್ಧಮಾಡಿದಾಗ ಲವ ಮೂರ್ಛೆ ಹೊಂದುತ್ತಾನೆ.ಅವನನ್ನು ಕೊಂಡೊಯ್ದಾಗ ಸೀತೆಮತ್ತೆ ಸಾಮನ್ಯಳಂತೆ ರೋಧನಮಾಡುತ್ತಾಳೆ. ವಿಷಯತಿಳಿದ ಕುಶ ರಾಮಲಕ್ಷö್ಮಣರನ್ನು ಸೊಲಿ¸ಲಾಗಿ Àವಾಲ್ಮಿಕಿಋಷಿಗಳ ಅನುಗ್ರಹದಿಂದ ಗಂಡಹೆAಡತಿಮಕ್ಕಳು ಒಂದಾಗುತ್ತಾರೆ.

         ಒಟ್ಟಿನಲ್ಲಿ ಮುದ್ದಣ್ಣ ಚಿತ್ರಿಸಿದ ಸೀತೆ ಸಾಮಾನ್ಯಳಂತೆ ಭಾವುಕವಾಗಿ,ವೀರಳಂತೆ ಧೀರೋಧ್ಧಾತ್ತವಾಗಿ,ಮಾತೃವಾತ್ಸಲ್ಯದ ಖಣಿಯಾಗಿ, ಕ್ಷಮಾಶೀಲಳಾಗಿ ,ಭಯಂಕರದ ಸ್ಥಿತಿಯಲ್ಲಿಯೂ ಸಮಚಿತ್ತಳಾಗಿ,ಆದರ್ಶಸತಿ ಮಾತೆ,ಸುತೆಯಾಗಿ ಚಿತ್ರಿತಳಾಗಿದ್ದಾಳೆ.ಮುದ್ದಣ್ಣನ ಈ ಕೃತಿಯಲ್ಲಿ ಹೊಸಸ್ಥಾನ ಮಾನ ಪಡೆದುಕೊಂಡಿದ್ದಾಳೆ.

ಗ್ರAಥ ಋಣ

೧)ಮುದ್ದಣ್ಣ ಭಂಡಾರ

೨) ಕನ್ನಡಮಹಾಕಾವ್ಯಗಳಲ್ಲಿ ಸೀತೆಯ ಪಾತ್ರಚಿತ್ರಣ ಲೇ. ಡಾ. ಮಂದಾಕಿನಿ

ಡಾ.ಶೀಲಾದಾಸ,ಎಲ್.ವಿ.ಡಿ.ಮಹಾವಿದ್ಯಾಲಯ,ರಾಯಚೂರು.

ಮೊ.೯೪೪೮೯೭೩೬೭೦.ದೂ.೦೮೫೩೨-೨೪೦೪೯೨

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.