ಅಂತರAಗದಿ ಬ್ರಹ್ಮಾನಂದನಾಗಿ ನೀನಿರಲು

                ( ವ್ಯಾಸರಾಜರು ವಿರಚಿತ ಸುಳಾದಿ- ವಿಶ್ಲೇಷಣೆ)

                “ವ್ಯಾಸರಾಯರ ಚರಣಕಮಲ ದರ್ಶನವೆ ನನ

                ಗೇಸು ಜನ್ಮದ ಸುಕೃತಫಲದೊರಕಿತೋ ಎನ್ನ

                ಸಾಸಿರ ಕುಲಕೋಟಿ ಪಾವನ್ನವಾಯಿತು”

      ಎಂದು ಪುರಂದರದಾಸರು ತಮ್ಮ ಸಾಕ್ಷಾತ ಗುರುಗಳನ್ನು ಭಕ್ತಿಪೂರ್ವಕವಾಗಿ ಕೊಂಡಾಡಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹರಿದಾಸ ಸಾಹಿತ್ಯವು ಜನಪರವಾದ ಸಾಹಿತ್ಯವಾಗಿದೆ. ಇದಕ್ಕೆ ನರಹರಿತೀರ್ಥರಂತೆ, ಶ್ರೀಪಾದರಾಜರಂತೆ ವ್ಯಾಸರಾಜರ ಕೊಡುಗೆ ಅನುಪಮವಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಗುರುವಾಗಿ ದಾಸಸಾಹಿತ್ಯದ ಸಂಪಾದನೆ, ಪ್ರಕಟಣೆ ಒಂದು ಕಡೆಯಾದರೆ ಪುರಂದರದಾಸರು, ಕನಕದಾಸರು, ವಾದಿರಾಜರು, ವಿಜಯೀಂದ್ರರAತಹ ಶಿಷ್ಯರನ್ನು ರೂಪಿಸಿದ್ದೂ ಇನ್ನೊಂದು ವಿಶೇಷವಾಗಿದೆ. ಇಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಅಂದೇ ಮಾಡಿ ತೋರಿಸಿದವರು ವ್ಯಾಸರಾಜರು. ಶ್ರೀಪಾದರಾಜರ ಪ್ರೀತಿಯ ಶಿಷ್ಯರು, ಇವರು ಹಾಕಿದ ದಾಸಸಾಹಿತ್ಯದ ಪರಂಪರೆಗೆ ಭದ್ರಬುನಾದಿ ಹಾಕಿದವರು.

        ವ್ಯಾಸರಾಜರು ಶ್ರೀಪಾದರಾಜರಂತೆ ಬಾಲ್ಯದಲ್ಲಿ ಸನ್ಯಾಸ ಸ್ವೀಕರಿಸಿದವರು. ಇವರ ಕುರಿತಾಗಿ ಅವರ ಸಮಕಾಲೀನರಾದ ಸೋಮನಾಥಕವಿಯ `ವ್ಯಾಸಯೋಗಿ ಚರಿತ್ರೆ” ಹಾಗೂ ಶ್ರೀನಿವಾಸತೀರ್ಥರು ರಚಿಸಿದ `ಶ್ರೀವ್ಯಾಸನಿಲಯ” ಎಂಬ ಕೃತಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಮತ್ತು ಅವರ ಶಿಷ್ಯರಿಂದ ಸಂಗ್ರಹಿಸಲಾಗಿದೆ. ಅದರಂತೆ ಸಂಗೀತ ಶಾಸ್ತçಜ್ಞರಾದ ತುಳಜಾಜಿ ಮಹರಾಜರು ಸಂಗೀತ ಸಾರಮೃತದಲ್ಲಿ`ಸಂಗೀತ ವಿದ್ಯಾ ಸಂಪ್ರದಾಯ ಪ್ರವರ್ತಕರೆಂದು ಗೌವರಿಸಿದ್ದಾರೆ.

        ತಂದೆ ಬಲ್ಲಣ್ಣ, ತಾಯಿ ಲಕ್ಷಿö್ಮದೇವಿ.ಜನ್ಮಸ್ಥಳ ಬನ್ನೂರು. ಇವರು ಶ್ರೀಪಾದರಾಜರ ಶಿಷ್ಯತ್ವವಹಿಸಿ ಮಧ್ವಶಾಸ್ತçದಲ್ಲಿ ವಿದ್ವಾಂಸರಾದರು. ಶ್ರೀಕೃಷ್ಣ ಅಂಕಿತದಿAದ ಕೀರ್ತನೆ,ಸುಳಾದಿ,ಉಗಾಭೋಗ,ವೃತ್ತನಾಮ ಹಾಗೂ ಅನುಪಮವಾದ ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾರೆ.ನ್ಯಾಯಾಮೃತ,ಚಂದ್ರಿಕ,ತರ್ಕತಾAಡವಗಳಿಗೆ ವ್ಯಾಸತ್ರಯ ಎಂದು ಕರೆಯಲಾಗುತ್ತದೆ.ಹೀಗೆ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

      ಸುಳಾದಿಗಳು ವಿವರಣಾತ್ಮಕವಾಗಿರದೆ ತಾತ್ವಿಕವಾಗಿರುತ್ತದೆ. ಮೊದಲಿಗೆ ಧ್ರುವತಾಳದಿಂದ ಆರಂಭವಾಗಿ ಎರಡು ಸಾಲಿನ ಜತೆಗೆ ಪೂರ್ಣಗೊಳ್ಳುತ್ತವೆೆ. ಪ್ರತಿ ತಾಳದಲ್ಲು ಅಂಕಿತವಿರುತ್ತದೆ. ಈ ಸುಳಾದಿಯಲ್ಲಿ ಸಪ್ತತಾಳಗಳು ಮತ್ತು ಒಂದು ಜತೆ ಇದೆ. ಈ ಸುಳಾದಿಯಲ್ಲಿ ಅಂತರAಗದ ಶುದ್ಧಿ ಮತ್ತು ಅಂತರAಗದ ಭಕ್ತರ ಕುರಿತು ಬಣ್ಣಸಲಾಗಿದೆ.

              `ಅಂತರAಗದಿ ಬ್ರಹ್ಮಾನಂದನಾಗಿ ನೀನಿರಲು

              ಅಂತಕನ ಭಯವೇನಯ್ಯ ಶ್ರೀಹರಿಯೆ

              ಪಂಥದಿ ದನುಜನು ಬಾಧಿಸಲು ಸುತನ

      ಚಿಂತೆ ಯಾರಿಗೋ ಎಂದಿರದೆ ಸಾಕಿದೆ ಉದಯಾದ್ರಿ ಶ್ರೀಕೃಷ್ಣಾ’’ ಇದು ಧ್ರುವ ತಾಳದಲ್ಲಿದೆ. ಭಕ್ತನ ಅಂತರAಗದಲ್ಲಿ ಭಗವಂತ ನೆಲೆಗೊಳ್ಳಿಕೊಳ್ಳಬೇಕೆಂದರೆ ಅಂತರAಗ ಶುದ್ಧವಾಗಿರಬೇಕು. ಗುರುವೆಂಬ ಕೀಲೀಕೈಯಿಂದ ಕದವ ತೆರೆದು ಭಕ್ತಿಯಂಬ ಕಕ್ಕಡವಿಡಿದು ಹೃದಯಕಮಲದಲ್ಲಿ ಭಗವಂತನನ್ನು ನೆಲೆಗೊಳ್ಳಿಸಿಕೊಳ್ಳಬೇಕು. ಆಗ ಯಾರ ಭಯವೂ ಇರುವದಿಲ್ಲ. ಪ್ರಖರವಾದ ಬೆಳಕಿದ್ದಲ್ಲಿ ತಮಕ್ಕೇನು ಕೆಲಸ? ಭಗವಂತ ಕರುನಾಳು. ಈ ಹಿಂದ ಹಿರಣ್ಯಕಶ್ಯಪು ನಾರಾಯಣ ನಾಮ ನುಡಿಯದಂತೆ ಮಗ ಪ್ರಲ್ಹಾದನಿಗೆ ಅನೇಕ ಕಷ್ಟ ಕೊಟ್ಟರೂ ಪ್ರಲ್ಹಾದ ನಾಮಸ್ಮರಣೆ ಬಿಡಲಿಲ್ಲ. ಆಗ ಭಗವಂತ ಕಂದನನ್ನು ಕಾಪಾಡಿ ತಂದೆಗೆ ಮೊಕ್ಷ ನೀಡಿದ. ತಂದೆಯ ಪಂಥಕ್ಕೆ ಮಗನನ್ನು ಬಲಿಪಶು ಮಾಡಲಿಲ್ಲ. ಇದು ಭಗವಂತನ ಕಾರುಣ್ಯವಾಗಿದೆ ಎಂಬುದು ಈ ತಾಳದ ಭಾವವಾಗಿದೆ.

                  ಮುರಹರಾ ನರಹರಿ ಸಿರಿವರ ಗಿರಿಧರಯೆಂದು

                   ಕರೆಯಲು ಕರುಣದಿ  ಬಂದು

                   ಕರಿಯ ಕಾಯಿದೆ ಸಂತೋಷದಿ ಕಾಯಿದೆ

                   ನರಕಾಂತಕ ಉದಯಾದ್ರಿ ಶ್ರೀಕೃಷ್ಣ.

ಎಡನೆಯದಾಗಿ ಮಠ್ಯತಾಳದಲ್ಲಿ ಮುರಹರನನ್ನು ಸಂಹಾರಮಾಡಿದ ಪ್ರಸಂಗ, ಪ್ರಲ್ಹಾದನ ಪ್ರಸಂಗ, ಸಿರಿಗೆ ಪ್ರೀಯನಾದ ನಾರಾಯಣ, ಭಯಂಕರ ಮೆಳೆಯಿಂದ ಗೋವುಗಳನ್ನು ಕಾಯ್ದ ಗಿರಿಧರನ ಮಹಿಮೆಯನ್ನು ಹೇಳಿ ಗಜೇಂದ್ರಮೋಕ್ಷದ ಸಂದರ್ಭವನ್ನು ವಿವರಿಸುತ್ತಾರೆ. ಗಜೇಂದ್ರನು ಕೂಗಲು ಸಂತೋಷದಿAದ ಕಾಯ್ದೆ ಎಂದು ಭಗವಂತ ಭಕ್ತವತ್ಸಲಾ, ಆಪತ್ಭಾಂಧವ ಎಂಬ ಭಾವವನ್ನು ಇಲ್ಲಿ ಸೂಚಿಸುತ್ತಾರೆ.

ಮೂರನೆಯದಾಗಿ ತ್ರಿಪುಟತಾಳದಲ್ಲಿ `ತನ್ನತಾ ಅರಿಯದೆ ತಗಿಲಿದ ಕಾಳಿಯನು

                         ನಿನ್ನಪರಾಕ್ರಮತೋರಿ ಕಾಯಿದೆಶ್ರೀಹರಿಯೇ

                         ಮುನ್ನ ನಾ ನಿನ್ನ ಡಿಂಗರಿಗನಯ್ಯಾ

                         ಪನ್ನಗಾನತುರಗ ಪಾಲಿಸು ಉದಯಾದ್ರಿಶ್ರೀಕೃಷ್ಣ’ ಕಾಳಿಯ ಪ್ರಸಂಗವನ್ನು ಉಲ್ಲೇಖಿಸುತ್ತಾರೆ.ಇಲ್ಲಿ ಗರುಡ-ನಾಗನ ಕಥೆಯನ್ನು ಉಲ್ಲೆಕಿಸುತ್ತಾರೆ. ಕಾಳಿಂಗ ರಮಣಕ ದ್ವೀಪಕ್ಕೆ ಅಧಿಪತಿಯಾಗುತ್ತಾನೆ. ಆಗ ನಾಗಗಳು ಬಂದು ಪ್ರತಿ ತಿಂಗಳು ಒಂದು ನಾಗದ ಬಲಿ ಕೊಡುವ ಸಂಪ್ರದಾಯವಿದೆ. ಹೇಗಾದರೂ ನೀನು ಅಧಿಪತಿಯಾಗಿರುವೆ, ಅದನ್ನು ನಿಲ್ಲಿಸು ಎಂದು ಬೇಡಿಕೊಳ್ಳುತ್ತವೆ.ಆಗ ಕಾಳಿಂಗನು ಆ ಪದ್ಧತಿಯನ್ನು ನಿಲ್ಲಿಸುತ್ತಾನೆ, ಆಗ ಗರುಡನಿಗೆ ಕಾಳಿಂಗನಿಗೆ ಯುದ್ಧವಾಗುತ್ತದೆ. ಕಾಳಿಂಗ ಸೋತು ಹೋಗುತ್ತಾನೆ. ಗರುಡನಿಗೆ ಹೆದರಿ ತನ್ನ ಹೆಂಡತಿ ನಾಗಿಣಿಯೊಡನೆ ಓಡಿಹೋಗುತ್ತಾನೆ. ಹಿಂದೆ ಸೌಭರಿ ಮಹರ್ಷಿಗಳು ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಆಗ ಗರುಡನು ಬಂದು ಮೀನುಗಳನ್ನು ತಿನ್ನುತ್ತಾ ಮಹರ್ಷಿಗಳಿಗೆ ತೊಂದರೆ ಕೊಡುತ್ತಾನೆ. ಅಗ ಮಹರ್ಷಿಗಳು ಕೊಪಗೊಂಡು ಇನ್ನು ಮುಂದೆ ನೀನು ಇಲ್ಲಿಗೆ ಮೀನು ತಿನ್ನಲು ಬಂದರೆ ತಕ್ಷಣ ಸತ್ತು ಹೋಗು ಎಂದು ಶಾಪಕೊಡುತ್ತಾರೆ. ಈ ವಿಷಯ ಕಾಳಿಂಗನಿಗೆ ಗೊತ್ತಿರುತ್ತದೆ. ಅದು ತನ್ನ ಪತ್ನಿ ನಾಗಿಣಿಯೊಡನೆ ಯಮುನಾ ನದಿಯಲ್ಲಿ ವಾಸಮಾಡತೊಡಗುತ್ತದೆ. ಇದರಿಂದ ಗಾಳಿ,ನೀರು ವಿಷಪೂರಿತವಾಗುತ್ತದೆ. ಪಸುಪಕ್ಷಿಗಳು ವಿಷದಿಂದ ಮೂರ್ಛೆಹೋಗತೊಡಗುತ್ತವೆ. ಕೃಷ್ಣ ತನ್ನ ಕೊಳಲನೂದಿ ಅವುಗಳನ್ನು ಎಚ್ಚರಿಸಿ ಆರೈಕೆ ಮಾಡಿದನು. ಹಾಗೆಯೇ ನದಿಗೆ ದುಮಿಕಿದನು. ಇಬ್ಬರಿಗೂ ಯುದ್ಧವಾಯಿತು.ಕಾಳಿಂಗನು ನದಿಯಿಂದ ಹೊರಬಂದರೆ ಗರುಡ ನಮ್ಮನ್ನು ಸಾಯಿಸುತ್ತಾನೆ ಕಾಪಾಡು ಎಂದು ಬೇಡಿಕೊಳ್ಳುತ್ತಾನೆ. ಅಗ ಕೃಷ್ಣನು `ಗರುಡ ಈಗ ನಿನಗೇನು ಮಾಡಲಾರ. ಏಕೆಂದರೆ ನಿನ್ನ ಹೆಡೆಯಮೇಲೆ ನನ್ನ ಕಾಲಿನ ಗುರುತುಗಳಿವೆ ಎಂದು ಹೇಳಿ ಅವುಗಳನ್ನು ಪತಾಳಕ್ಕೆ ಕಳುಹಿಸುತ್ತಾನೆ. ಅಂದಿನಿAದ ನಾಗಗಳು ಪಾತಾಳದಲ್ಲಿ ವಾಸಮಾಡತೊಡಗಿದವು. ಈ ರೀತಿ ಉದ್ದೇಶ ಪೂರ್ವಕವಾಗಿ ಅಲ್ಲದಿದ್ದರೂ ಪಸುಪಕ್ಷಿಗಳಿಗೆ ತೊಂದರೆ ಕೊಟ್ಟರೂ ಅವುಗಳನ್ನು ರಕ್ಷಣೆ ಮಾಡಿರುವು. ಕಾಳಿಂಗನAತಹ ಅನೇಕ ಕಾಮನೆಗಳು ನನ್ನನ್ನು ಕಾಡುತ್ತಿವೆ. ನಾನು ಮೊದಲಿನಿಂದಲೂ ನಿನ್ನ ಸೇವಕನೆ. ನನ್ನನ್ನು ಕಾಪಡುಎಂದು ಬೇಡಿಕೊಳ್ಳುತ್ತಾರೆ.

      ಮುಂದುವರೆದು ನಾಲ್ಕನೆಯ ಅಟ್ಟತಾಳದಲ್ಲಿ

                      “ ನಿನ್ನ ಮೃದುಪಾದ ನೋಯದಂತೆ

                        ಎನ್ನಶಿರಸ್ಸಿನಲ್ಲಿಡೋ

                         ರನ್ನ ಕಾಲಂದಿಗೆ ಗೆಜ್ಜೆಯನಾದದಿಂ

                         ಧಿನ್ನುಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ”

ಅಂದು ಕಾಳಿಂಗನ ಹೆಡೆಯಮೆಲೆ ನಾಟ್ಯಮಾಡಿದಂತೆ ನಿನ್ನ ಮೃದುವಾದ ಪಾದಗಳನ್ನು ನನ್ನ ಶೀರಸ್ಸಿನ ಮೇಲಿಡು. ನಿನ್ನ ಕಾಲ್ಗೆಜ್ಜಯ ದನಿಗೆ ಧೀಂ ಧೀಂ ಎಂದು ಕುಣಿಸುವೆ ಎಂದು ಅಪೇಕ್ಷೆ ಪಡುತ್ತಾರೆ. ಅವರು ಪ್ರತಿದಿನವೂ ಭಕ್ತಿಯಿಂದ ಪೂಜೆಮಾಡುವಾಗ ಕೃಷ್ಣನು ನರ್ತನಮಾಡುತ್ತಿದ್ದನು ಎಂಬುದು ಸರ್ವವಿದಿತವಾಗಿದೆ.

 ಇನ್ನು ಐದನೆಯದಾಗಿ ಏಕತಾಳದಲಿ”ಎನ್ನ ಧೃಡವ ನೀ ಕಂಡೆ ಯಾದವ ಕೃಷ್ಣಾ

                           ನಿನ್ನಧೃಢವ ನಾ ಕಾಣೆ

                           ಎನ್ನಧೃಢ ನಿನ್ನಧೃಢವೆರಡನು ಕಂಡರೆ

                           ಧಿನ್ನುಧಿನ್ನಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ” ನನ್ನ ಭಕ್ತಿಯ ಸ್ವರೂಪ ನೀನು ತಿಳಿದಿದ್ದೀಯಾ. ಆದರೆ ನಿಮ್ಮ ಭಕ್ತಿ ಎಂತಹದೆAದು ನನಗೆ ತಿಳಿದಿಲ್ಲ.ನೀನು ಸರ್ವಂತರ್ಯಾಮಿ. ವೇದಗಳಿಗೆ ನಿಲುಕದವನು. ನಿನ್ನಾನುಗ್ರಹವಾದರೆ ಸಾಕು ಎಂದು ಬೇಡಿಕೊಳ್ಳುತ್ತಾನೆ.

ಇನ್ನು ಆರನೆಯದಾಗಿ ತ್ರಿಪುಟತಾಳದಲ್ಲಿ

             “ಎನ್ನ ಗುಣದೋಷಗಳೆಣೆÉಸುವರೇನೋ ಶ್ರೀಹರಿ

              ನಿನ್ನ ಬಿರುದಾಪನ್ನ ರಕ್ಷಕನೆಂದು ವಿಭೀಷಣ

              ಕೀರ್ತಿಸಲು ಆ ಆ ಆ

              ಅನ್ಯಥಾ ಶರಣಂ ನಾಸ್ತಿ ಅನಾಥನಾಥನೆ ಆರ್ತಬಂಧುವೆ

              ನಿನ್ನ ಚರಣವ ನಂಬಿದೆನೋ ಸಾಕ್ಷಿ ಉದಯಾದ್ರಿಶ್ರೀಕೃಷ್ಣ”

ಭಗವಂತ ಆರ್ತರ ನಿರ್ಗತಿಕರ,ಅನಾಥರ ನಾಥನಾಗಿದ್ದೀಯ. ನಾನು ಅಜ್ಞಾನಿ. ನನ್ನಲ್ಲಿ ಅನೇಕ ದೋಷಗಳಿವೆ. ಅವುಗಳನ್ನು ಕ್ಷಮಿಸಿ ನನ್ನನು ರಕ್ಷಿಸು. ಈ ಹಿಂದೆ ವಿಭೀಷಣನು ನಿನ್ನನ್ನು ಮೊರೆಹೋಗಲು ರಕ್ಷಿಸಿರುವೆ. ಆಪದ್ರಕ್ಷಕ ಎಂಬ ನಿನ್ನದಲ್ಲವೆ.ನಿನ್ನಹೊರತು ನನಗೆ ಅನ್ಯರು ಯಾರಿಲ್ಲ ಎಂದು ಸರ್ವ ಸಮರ್ಪಣೆ ಮಾಡಿಕೊಳ್ಳುತ್ತಾರೆ. ಈಗಾಗಲೆ ವಿವರಿಸಿದ ಸಂದರ್ಭಗಳೆಲ್ಲವೂ ಅನಾಥರಕ್ಷಕ ಎಂಬ ಬಿರುದನ್ನೇ ಬಣ್ಣಿಸಿವೆ.

 ಏಳನೆಯದಾಗಿ ರೂಪಕತಾಳದಲ್ಲಿ

                  ಶರಣಾಗತಜನ ಪರಿಪಾಲನೆಂಬ

                  ಬಿರುದು ನಿಷ್ಕಾರಣವೆ ಫಲದಾಯಕವೆನುತ

                  ವರುಣಿಸುತಿಹ ಕುಚೇಲನುದಿನ

                  ಕರುಣಾಕರ ಎನ್ನ ಕಾಯೋ ಉದಯಾದ್ರಿ ಶ್ರೀಕೃಷ್ಣ

 ಎಂದು ಭಗವಂತನ ಶರಣಾಗತ ವತ್ಸಲದ ಬಿರುದನ್ನು ವಿವರಿಸುತ್ತಾರೆ. ನೀನು ರಕ್ಷಿಸದೆ ಹೋದರೆ ನಿನ್ನ ಬಿರುದಾವಳಿಗೆ ಕುಂದು ಬರುತ್ತದೆ. ನಿನ್ನ ಕಾರುಣ್ಯವನ್ನು ಕುಚೇಲನು ಮನದುಂಬಿ ಹಾಡಿದ್ದಾನೆ. ಸಹಾಯ ಕೇಳಲು ಬಂದರೂ ಸಹಾಯ ಕೇಳದೆ ಹಾಗೀ ಹೊರಟುಹೋದ. ಆದರೆ ನೀನು ಮನದ ಇಂಗಿತ ಅರಿತು ಆತನ ಮನಕಾಮನೆಗಳನ್ನು ಪೂರ್ಣಗೊಳಿಸಿದೆ. ಅಂಥಹ ಕರುಣಾಳು ನಾನು ನಿನ್ನ ಮೊರೆಹೊಕ್ಕೆ. ದಯಮಾಡಿ ನನ್ನನ್ನು ಕಾಪಾಡು ಎಂಬ ದೀನ ಭಾವವನ್ನು ಕಾಣುತ್ತೇವೆ. ಜತೆಯಲ್ಲಿ` ಭಗವಂತ ನಿರ್ಮೋಹದಿಂದ ಭಜಿಸುವವರಿಗೆ ಸುಲಭನಾಗಿದ್ದಾನೆ. ಭಗವಂತನಿಗೆ ಮೊದಲು ಶುದ್ಧಮನಸ್ಸು ಬೇಕು. ಡಂಭಾಚಾರಕ್ಕೆ ಮರುಳಾಗುವವನಲ್ಲ ಎಂಬುದನ್ನು ಸೂಚ್ಯವಾಗಿ ಹೇಳುತ್ತಾರೆ.ಅದಕ್ಕೆ ದಾಸರು ಚಿಂತೆಯಾಕೆ ಮಾಡುತೀಯ ಚಿನ್ಮಯನಿದ್ದಾನೆಂದು ಹಾಡಿದ್ದಾರೆ. ನಮ್ಮ ಇಹ-ಪರದ ಕಾಳಜಿ ಮಾಡಿವವನು ಭಗವಂತ ಮಾತ್ರ ಎಂಬ ಭಾವವನ್ನು ಭಕ್ತರಾದವರು ಅರಿಯಬೇಕೆಂಬುದೇ ಇಲ್ಲಿಯ ತಾತ್ಪರ್ಯ.

      ಡಾ.ಶೀಲಾದಾಸ,ರಾಯಚೂರು.

      ಮೊ. ೯೪೪೮೯೭೩೬೭೦

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.