ವಂದಲಿ ಮಾರುತೇಶನ ಚರಿತೆ

                                                           

  ಹಳ್ಳಿ ಊರಿಗೆ ಹನುಮಪ್ಪ ಚಂದ’ ಊರಿಗೊಬ್ಬ ಹನುಮಪ್ಪಾ’ ಎಂಬ ಅನೇಕ ಮಾತುಗಳು ಜನಪದರಲ್ಲಿ  ಜನಜನಿತವಾಗಿವೆ. ಭಾರತದಲ್ಲಿ ಎಂತಹ ಸಣ್ಣ ಊರಾದರೂ ಅಲ್ಲಿ ಆಂಜನೇಯನ ಗುಡಿ ಇದ್ದೇ ಇರುತ್ತದೆ. ಇದಕ್ಕೆ ಕಾರಣವೇನು? ಈ ವಿಚಾರ ಸಾಂಸ್ಕೃತಿಕ ಸಂಶೋಧನೆಯನ್ನು ಬಯಸುತ್ತದೆ. ಪ್ರಸ್ತುತ ಕನಾಟಕದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ  ಹೊಸ್ತಲಿ ಹುಣ್ಣಿಮೆ ಆಂಜನೇಯನ ಭಕ್ತರಿಗೆ ಪರಮ ಪೂಜ್ಯವಾದ, ಪರಮ ಪವಿತ್ರವಾದ, ಸಂಭ್ರಮದ ದಿನ. ಯಾಕೆಂದರೆ ಈ ದಿನದಂದು ಕರ್ನಾಟಕದ ಬಹುತೇಕ ಊರುಗಳಲ್ಲಿ ಆಂಜನೇಯನ ಜಾತ್ರೆಗಳು ನಡೆಯುತ್ತವೆ. ಒಂದೇ ದಿನ ಒಂದುನೂರಾ ಒಂದು ಆಂಜನೇಯನ ಜಾತ್ರೆಗಳು ನಡೆಯುತ್ತವೆ ಎಂಬ ಪ್ರತೀತಿ ಇದೆ. ಇಷ್ಟೊಂದು ಸಂಖ್ಯೆಯಲ್ಲಿ ಜಾತ್ರೆಗಳ ನಡೆಯುವದು ವಿಶೇಷವಾಗಿದೆ. ಅಂತಹ ಜಾತ್ರೆಯಲ್ಲಿ ವಂದಲಿ ಮಾರುತೇಶನ ಜಾತ್ರೆಯೂ ಒಂದಾಗಿದೆ.

         ವಂದಲಿ ಗ್ರಾಮವು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿದೆ. ಹಟ್ಟಿ ಚಿನ್ನದ ಗಣಿಯ ಹತ್ತಿರವಿದೆ. `ಹೊನ್ನುಇಲ್ಲಿ” ಎಂಬ ಪದದ ನಿಷ್ಪತ್ತಿ ಹೊನ್ನಲಿ> ವನ್ನಲಿ>ವಂದಲಿ ಎಂದಾಗಿದೆ ಎಂಬ ಅಭಿಪ್ರಾಯವಿದೆ. ಈ ಕ್ಷೇತ್ರಕ್ಕೆ ಪ್ರತೀ ಅಮವಾಸೆ -ಹುಣ್ಣಿಮೆಯಂದು ಜಾತಿ- ಮತ- ಪಂಥ ಮರೆತು ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ. ಇದು ಜಾಗ್ರತ ಕ್ಷೇತ್ರ ಎಂಬ ನಂಬಿಕೆ ಭಕ್ತರದು. ಅಲ್ಲದೆ ಬಳಗಾನೂರು ಹನುಮಪ್ಪ, ಕಸಬಾಲಿಂಗಸಗೂರು ಕುಪ್ಪೆರಾಯ, ವಂದಲಿ ಮಾರುತಿರಾಯ ಸಹೋದರರು ಎಂಬ ಪ್ರತೀತಿಯೂ ಇದೆ. ಈ ಮಾತನ್ನು ಸ್ವಲ್ಪ ಆಳವಾಗಿ ವಿಚಾರಿಸಿದರೆ ಹನುಮಾ , ಭೀಮಾ, ಮಧ್ವರ ಪ್ರತೀಕವಾಗಿರಬಹುದು ಎಂಬ ವಿಚಾರ ಮನಸ್ಸಿಗೆ ಬರುತ್ತದೆ. ಇರಲಿ.

         ವಂದಲಿ ಮಾರುತಿರಾಯನ ಕುರಿತು ಅನೇಕ ದಂತಕಥೆಗಳು,ಐತಿಹ್ಯಗಳು ಇವೆ. ಇವುಗಳೊಂದಿಗೆ ‘ವಂದಲಿ ಶ್ರೀಮಾರುತೇಶ್ವರ ಪುರಾಣ” ಎಂಬ ಷಟ್ಪದಿ ಕಾವ್ಯ ರಚನೆಗೊಂಡಿದೆ. ಈ ಕೃತಿಯನ್ನು ಶ್ರೀವೇದಮೂರ್ತಿಶರಭಯ್ಯಸ್ವಾಮಿ ಗಣಾಚಾರಮಠ ಬಳಗಾನೂರು ಇವರು ರಚಿಸಿದ್ದಾರೆ. ಇವರು ಮನೆತನದಿಂದ ಕೃಷಿ ಮತ್ತು ಆಯುರ್ವೇದ ವೈದ್ಯರು. ಈ ಕೃತಿಗೆ ಮೂಲ ಆಕರವೆಂದರೆಶ್ರೀ ಓಂ ಸಿದ್ಧಲಿಂಗೇಶ್ವರ ಸ್ವಾಮೀಜಿಯವರು ರಚಿಸಿದ `ಶ್ರೀಪಂಪಾ ಮಹಾತ್ಯೆö’್ಮಯಾಗಿದೆ ಎಂದು ಲೇಕಕರು ದಾಕಲಿಸಿದ್ದಾರೆ. ಕೃತಿಗೆ ಶ್ರೀಶ್ರೀಶ್ರೀ೧೦೦೮ಜಗದ್ಗುರು ಭೀಮಾಶಂಕರಲಿAಗ ಶಿವಾಚಾರ್ಯಾ ಮಹಾಸ್ವಾಮಿಗಳು, ಶ್ರೀಮತ್ ಹಿಮವತ್ಕೇದಾರ ವೈರಾಗ್ಯ ಸಿಂಹಾಸನಾ ಮಹಾಸಂಸ್ಥಾನಪೀಠ ಊಖೀಮಠ, ಜಿಲ್ಲಾ ರುದ್ರಪ್ರಯಾಗ, ಉತ್ತರಾಖಂಡ. ಹಾಗೂ .ಶ್ರೀಜಗದಾರಾಧ್ಯ ಜಯಶಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು ,ಮಹಾಸಂಸ್ಥಾನ ಬೃಹನ್ಮಠ ಜಾಲಹಳ್ಳಿ ತಾ.ದೇವದುರ್ಗ.ಜಿ.ರಾಯಚೂರು,ಇವರು ಶುಭಾಶಿರ್ವಾದ ಸಂದೇಶ ನೀಡಿದ್ದಾರೆ. .ಮುನ್ನುಡಿಯನ್ನು ಶ್ರೀಶರಣಪ್ಪ ತಂದೆ ವೀರನಗೌಡಾ ಪ್ರಭಾರಿ ಪ್ರಾಂಶುಪಾಲರು ಮುರಾರ್ಜದೇಸಾಯಿ ಮಾದರಿ ವಸತಿ ಶಾಲೆ ರಾಜಲಬಂಡಾ ಜಿ.ರಾಯಚೂರು, ಬೆನ್ನುಡಿಯನ್ನು ಶ್ರೀವೇದಮೂರ್ತಿಕಿಡಿಗಣಯ್ಯಸ್ವಾಮಿ ಹಿರೇಮಠ (ಉ) ಹೊಸೂರು,ಸಂಪಾದಕರು ಶರಣವಿಚಾರಮಂಥನ ಮಾಸ ಪತ್ರಿಕೆ. ಪ್ರಸ್ತುತ ಶ್ರೀಮಾರುತೇಶ್ವರ ಪುರಾಣ’ ಎಂಬ ಕೃತಿಯನ್ನು ಡಾ.ವಿ.ಎ.ಮಾಲೀಪಾಟೀಲ್ ಅವರು ತಮ್ಮ ತಂದೆ ಅಮರೇಗೌಡಾ ತಾಯಿ ಮಹದೇವಮ್ಮ ಇವರ ಸ್ಮರಣಾರ್ಥ ೨೦೧೫ ಪ್ರಕಟಿಸಿದ್ದಾರೆ. ಈ ಕೃತಿ ನನಗೆ ದೊರಕಿಸಿ ಕೊಟ್ಟದ್ದು ಡಾ.ಪದ್ಮಾ ಶ್ರೀರಾಜಶೇಖರ ದಂಪತಿಗಳು. ಇವರೀರ್ವರಿಗೂ ಧನ್ಯವಾದಗಳು. ಯಾಕೆಂದರೆ ಒಂದು ಕಾವ್ಯದ ರಚನೆ ಎಷ್ಟು ಮುಖ್ಯವೋ ಅ ಕಾವ್ಯದ ಪ್ರಕಟಣೆ ಮತ್ತು ರಕ್ಷಣೆ ಅಷ್ಟೇ ಮುಖ್ಯವಾಗುತ್ತದೆ.

          ಈ ಕೃತಿಯು ಹದಿಮೂರು ಅಧ್ಯಾಯದಲ್ಲಿ ರಚನೆಗೊಂಡಿದೆ. ಈ ಕೃತಿಯಲ್ಲಿ ವಂದಲಿ ಕ್ಷೇತ್ರದ ಕುರಿತು ಬರೆಯುವ ಮುನ್ನ ರಾಮಾಯಣ, ಮಹಾಭಾರತ, ಭಗವದ್ಗೀತಾ, ಅದರಂತೆ ವೀರಶೈವ ಗ್ರಂಥಗಳಾದ ಸಿದ್ದಾಂತಶಿಖಾಮಣಿ, ಅನಾದಿವೀರಶೈವ, ವೀರೇಶಚರಿತೆ ಗ್ರಂಥಗಳು ಆಕರವಾಗಿವೆ. ಉಲ್ಲೇಖವಾದ ವಿವಿಧ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಲ್ಲಿ ಉಲ್ಲೆಖಿಸಿದ ವಿಚಾರಗಳನ್ನು ತಮ್ಮ ಕವಿತ್ವದ ಮುಖಾಂತಾರ ಸಾಕರಗೊಳಿಸಿದ್ದಾರೆ. ಆರಂಭದ ಅಧ್ಯಾಯದಲ್ಲಿ ಗುರುಸ್ತುತಿ,ಶಿವಸ್ತುತಿ, ಶಕ್ತಿಸ್ತುತಿ,ಗಣಪತಿ,ಸರಸ್ವತಿ,ಲಕ್ಷಿö್ಮ,ಷಣ್ಮುಖ, ವೀರಭದ್ರಸ್ತುತಿ,ಪಂಚಾಚಾರ್ಯರ ಸ್ತುತಿ,ಬಸವಸ್ತುತಿ, ಅಲ್ಲಮಪ್ರಭುಸ್ತುತಿ, ಚನ್ನಬಸವ, ಸಿದ್ಧರಾಮರ ಸ್ತುತಿ, ಅಭವ ಶರಣರಸ್ತುತಿ, ಈ ಕೃತಿ ರಚನೆಗೆ ಪ್ರೋತ್ಸಾಹಿಸಿದ ವಿರುಪಾಕ್ಷಯ್ಯ ಗವಾಯಿಗಳನ್ನು, ಈ ಕೃತಿ ರಚನೆಗೆ ಕಾರಣರಾದ ಗುರು ಹಿರಿಯರನ್ನು ವಂದಲಿಯ ಭಕ್ತರನ್ನು ಸ್ಮರಿಸಿಕೊಂಡಿದ್ದಾರೆ. ಕಾವ್ಯದ ಪ್ರೇರಣೆ ಮತ್ತು ಧೋರಣೆಯನ್ನು ವಿಶದವಾಗಿ ವಿವರಿಸಿದ್ದಾರೆ.

          ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ ಆಂಜನೇಯನು ಲೋಕಕಲ್ಯಾಣಕ್ಕಾಗಿ ಶಿವನ ಸಾತ್ವಿಕ ಅಂಶದಿAದ ಅವತರಿಸುತ್ತಾನೆ. ಅಹಲ್ಯಾ ಮತ್ತು ಗೌತಮಮುನಿಯರ ಪ್ರಸಂಗವನ್ನು , ಆಂಜನೇಯನ ಹುಟ್ಟಿನ ವೃತ್ತಾಂತ, ಬಾಲ್ಯದ ಚಿತ್ರಣವನ್ನು ವಿನೂತನವಾಗಿ ಚಿತ್ರಿಸಿದ್ದಾರೆ. ಶ್ರೀರಾಮನ ಪರಮ ಬಂಟನಾಗಿ, ದುಷ್ಟರನ್ನು ನಿಗ್ರಸಿಸುತ್ತ ಭಕ್ತರನ್ನು ರಕ್ಷಿಸುವವನಾಗಿ, ಸ್ವಾಮಿನಿಷ್ಠೆಯಲ್ಲಿ ವಿನಮ್ರನಾಗಿ, ಶ್ರೀರಾಮನಿಗೆ ಬಂದ ಬ್ರಹ್ಮಹತ್ಯದೋಷವನ್ನು ಪರಿಹರಿಸಿದ ಮಹಾಪುರುಷನಾಗಿದ್ದಾನೆ. ಧೃಢ ಭಕ್ತಿಗೆ ಅನ್ವರ್ಥಕನಾಗಿದ್ದಾನೆ. ಗಾನ ವಿದ್ಯಯಲ್ಲಿ ಪಾರಂಗತನಾಗಿ ಶಿವಪಾರ್ವತಿಯರನ್ನು ಸ್ತುತಿಸಿ ಮನ ಸೂರೆಗೊಳ್ಳುತ್ತಾನೆ. ಹನುಮಂತನು ಸೂರ್ಯೋಪಾಸಕನು. ಸೂರ್ಯನಿಂದ ವಿದ್ಯಯನ್ನು ಪಡೆದುಕೊಳ್ಳುತ್ತಾನೆ. ಸೀತೆಯನ್ನು ಲಂಕೆಯಿAದ ಕರೆತಂದ ಮೇಲೆ ಶ್ರೀರಾಮನು ಎಲ್ಲಾ ವೀರರನ್ನು ಗೌರವಿಸುತ್ತಾನೆ. ಅದರಂತೆ ಹನುಮನಿಗೂ ಪಾರಿತೋಷP Àನೀಡಲು ಹನುಮನು ನನಗೆ ಕೃತಕ ಪಾರಿತೋಷ ಬೇಡಾ ಸಾಯುಜ್ಯ ಪದವಿ ನೀಡಲು ಬೇಡಿಕೊಳ್ಳುತ್ತಾನೆ. ಹಾಗೆಯೇ ಗುರುದೀಕ್ಷೆಯನ್ನು ವೀಭದ್ರನಲ್ಲಿ ಪಡೆದುಕೊಳ್ಳುತ್ತಾನೆ. ಗುರುಶೀಷ್ಯರು ಭೂಮಿಯಲ್ಲಿ ಶಾಶ್ವತವಾಗಿ ಪೂಜೆಗೊಳ್ಳಿರಿ ಎಂಬ ವರ ಶಿವನಿಂದ ಪಡೆದುಕೊಳ್ಳುತ್ತಾರೆ. ಆ ಕಾರಣಕ್ಕಾಗಿ ಪ್ರತಿ ಗ್ರಾಮದಲ್ಲೂ ಹನುಮಂತನ ದೇವಸ್ಥಾನಗಳು ನಿರ್ಮಾಣವಾಗಿವೆ ಮತ್ತು ಆಂಜನೇಯನ ಪೂಜೆ ನಿರಂತರವಾಗಿ ನಡೆಯುತ್ತಿವೆ. ಅದರಂತೆ ವಂದಲಿಯಲ್ಲೂ ಮಾರುತೇಶ್ವರನು ಪೂಜೆಗೊಳ್ಳುತ್ತಿದ್ದಾನೆ.

          ಐತಿಹಾಸಿಕವಾಗಿ ಈ ದೇವಸ್ಥಾನದ ಕುರಿತು ಹೇಳುವುದಾದರೆ, ಈ ದೇವಸ್ಥಾನವು ಕಲ್ಯಾಣಚಾಲುಕ್ಯರ ಹದಿನಾಲ್ಕನೆಯ ಶತಮಾನದ ಕಾಲದಲ್ಲಿ ನಿರ್ಮಾಣವಾಗಿರಬಹುದು. ಯಾಕೆಂದರೆ ಆ ಊರಿನ ಬಸವಣ್ಣ ದೇವರ ಗುಡಿಯ ಗಂಟೆಯ ಮೇಲೆ ಆ ಶಕೆಯನ್ನು  ದಾಖಲಿಸಲಾಗಿದೆ.

        ಮಹಾಮಹಿವiನಾದ ಮಾರುತೀಶ್ವರನು ವಂದಲಿಗೆ ಬಂದ ಕಥೆ ರೋಚಕವಾಗಿದೆ. ಡಪಳಾಪುರವೆಂಬುದ ಒಂದು ಗ್ರಾಮ ಈ ಗ್ರಾಮದ ಗುಳುಗಿನವರು ಮನೆತನ ಪ್ರಸಿದ್ಧವಾದದ್ದು.ಈ ಮನೆತನದವರು ಕಾರಣಾಂತರದಿAದ ಹಿರೇಬುದ್ದಿನ್ನಿಯಲ್ಲಿ ಬಂದು ವಾಸ ಮಾಡುತ್ತಾರೆ. ಒಮ್ಮೆ ಗುಳುಗಿನವರು ಮನೆತನದ ಗೃಹಿಣಿ ಶಿವಗಂಗಾ ಏನೋ ಕಾರಣದಿಮದ ಡಪಳಾಪುರಕ್ಕೆ ಹೋಗಿ ಮರಳಿ ಬರುವಾಗ ಕೃಷ್ಣಾನದಿ ತೀರದಲ್ಲಿಯ ಒಂದು ಶಿಲೆಯಮೇಲೆ ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆಯುತ್ತಾಳೆ. ಕೆಲ ಸಮಯವಾದ  ಬಳಿಕ ಎದ್ದು ಹೋಗಬೇಕೆಂದರೆ ಕಣ್ಣು ಕಾಣಿಸುವುದಿಲ್ಲ. ಕಲ್ಲಮೇಲೆ ಕುಳಿತರೆ ಕಣ್ಣು ಕಾಣುವುದು.ಎದ್ದರೆ ಕಾಣುವುದಿಲ್ಲ. ಎರಡು ಹೆಜ್ಜೆ ಮುಂದೆ ಹೋದರೆ ಬರೀ ಕಲ್ಲು ಕಾಣುವುದು.ಹೀಗೆ ಅನೇಕಬಾರಿ ಅಗುತ್ತದೆ. ಈ ದೃಶ್ಯವನ್ನು ಹೊಲದಲ್ಲಿ ಕೆಲಸ ಮಾಡುವ ವ್ಯಕ್ತಿ ಹೀಗೇಕೆ ಮಾಡುತ್ತಿರುವಿ ಎಂದು ಕೇಳಲಾಗಿ ತನಗಾದ ಅನುಭವವನ್ನು ಹೇಳುತ್ತಾಳೆೆ. ಆಗ ಆ ವ್ಯಕ್ತಿ ಊರಿನ ಜನರನ್ನು ಕರಿಸಿ ಕಲ್ಲು ತಿರುವಿ ಹಾಕಲು ಅಲ್ಲಿ ಹನುಮಂತನಮೂರ್ತಿ ಇದ್ದಿತು. ಅಗ ಊರಿನವರು ಅಮ್ಮಾ ನೀನು ಈ ದೇವರಲ್ಲಿ ಏನನ್ನಾದರು ಬೇಡಿಕೊ ಎನ್ನಲು ನಾನು ಈ ಮೂರ್ತಿಯನ್ನು ಹೀರಾಬುದ್ದಿನ್ನಿಗೆ ಒಯ್ದು ಪ್ರತಷ್ಠಾಪಿಸಿ ಪೂಜಿಸುತ್ತೇನೆ ಎಂದು ಬೇಡಿಕೊಳ್ಳಲು ಕಣ್ಣುಕಾಣಿಸತೊಡಗಿದವು. ಗರತಿಯ ಮಾತಿನಂತೆ ಎತ್ತಿನ ಬಂಡಿತAದು ಮೂರ್ತಿಯನ್ನು ಭಕ್ತಿಯಿಂದ ಹೀರಾ ಗ್ರಾಮಕ್ಕೆ ಕರೆದುಕೊಂಡು ಹೋಗುವಾಗ ವಂದಲಿ ಸೀಮೆ ಬರುತ್ತದೆ. ಅಲ್ಲಿ ಹನುಮಂತನ ಮೂರ್ತಿ ಬಹಳ ಭಾರವಾಗುತ್ತದೆ. ಊರಿನ ಎಲ್ಲಾ ಎತ್ತುಗಳನ್ನು ಸೇರಿಸಿ ಎಳದರೂ ಮೂರ್ತಿ ಅಲಗಾಡುವುದಿಲ್ಲ.. ಊರ ಮುಂದೆ ಎರಡು ಪಾದ ಮೂಡುತ್ತವೆ. ಮೂರ್ತಿ ಬಂಡಿಯಿAದ ಜಾರಿ ಕೆಳಗೆ ಬೀಳುತ್ತದೆ. ಏನು ಮಾಡಿದರೂ ಶಿಲಾಮೂರ್ತಿ ಮೇಲೇಳುವುದಿಲ್ಲ. ಆಗ ಆಸಾದ್ವಿಯು ಊರಿನ ಮಾಲೀಪಾಟಿಲ ಮತ್ತು ಕುಲಕರ್ಣಿ ಮುಂತಾದ ಪ್ರಮುಖರಲ್ಲಿ ಬಂದು ದೇವರನ್ನು ಇಲ್ಲೇ ಪ್ರತಿಷ್ಟಾಪಿಸಿ ಪೂಜಿಸುತ್ತೇವೆ. ಸ್ಥಳಾವಕಾಶಮಾಡಿಕೊಡಿ ಎಂದು ವಿಜ್ಞಾಪಿಸಿಕೊಳ್ಲುತ್ತಾಳೆ. ಅಗ ಊರಿನ ಜನರೆಲ್ಲಾ ಒಪ್ಪಿಕೊಂಡು ದೇವರ ಪ್ರತಿಷ್ಟಾಪನಕ್ಕೆ ಅನುವುಮಾಡಿ ಕೊಡುತ್ತಾರೆ. ಊರಿನ ಸೋಮಪ್ಪ ಮಾಲೀಗೌಡರ ಹೊಲದಲ್ಲಿ ದೇವಸ್ಥಾನವನ್ನು ನಿರ್ಮಿಸಲು ನಿರ್ಧರಿಸಲಾಗುತ್ತದೆ. ದೇವಸ್ಥಾನದ ನಿರ್ಮಾಣಕಾರ್ಯ ಭರದಿಂದ ಸಾಗುತ್ತದೆ. ಶಿಲ್ಪಿಗಳು ಹೊಲದ ತುಂಬಾ ಶಿಲೆಗಳನ್ನು ಹರಡಿದರು. ಆಸ್ಥಳಕ್ಕೆ ಉಪ್ಪು ಮಾರುವ ಉಪ್ಪ್ಪಾರ ಕುಟುಂಬವು ಬಂದು ವಾಸ ಮಾಡಿತ್ತು. ಅ ಕುಟುಂಬದ ಮಹಿಳೆಯು ತಿಳಿದೆ ದೇವರ ಶಿಲೆಯ ಮೇಲೆ ರೊಟ್ಟಿ ಮಾಡುತ್ತಾಳೆ. ಅವಳ ಕಣ್ಣು ಹೋಗುತ್ತವೆ. ಊರ ಜನರು ದೇವರಲ್ಲಿ ಕ್ಷಮೆಕೇಳಲು ಹೇಳುತ್ತಾರೆ. ಆಗ ಅವರು  ದಂಡ ಭರಿಸುವುದಾಗಿ ಒಪ್ಪಿಕೊಳ್ಳುತ್ತಾರೆ. ಅಂದು ಸಂಜೆ  ಬಣಜಿಗರ ಸಿದ್ದಪ್ಪÀ ಗುಡಿಗೆ ಬಂದ ನಮಸ್ಕರಿಸಿ ಕೇಕೆ ಹಾಕುತ್ತಾನೆ. `ತಾವು ತಪ್ಪು ಮಾಡಿದ್ದಿರಿ ಅದಕ್ಕಾಗಿ ನೀವು ಸತತ ನನ್ನ ಪೂಜೆ ಮಾಡಬೇಕೆಂದು ಆಜ್ಞೆ ಮಾಡುತ್ತಾನೆ.ಅದರಂತೆ ಅವರು ಒಪ್ಪಿಕೊಂಡು ಇಂದಿಗೂ ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ. ಬಣಜಿಗ ಸಿದ್ದಣ್ಣನ ಮನೆತನದವರು ಹೇಳಿಕೆ ನೀಡುತ್ತಿದ್ದಾರೆ. ಮಾಲೀಗೌಡರ ಹೊಲದಲ್ಲಿ ವಿಜೃಂಭಣೆಯಿAದ ಮಾರ್ಗಶಿರ ಮಾಸದ ಪೌರ್ಣಿಮೆಯ ದಿನ ಜಾತ್ರೆ ನಡೆಯುತ್ತದೆ. ಮಾರುತಿರಾಯ ಕೃಷ್ಣಾ ನದಿಯಲ್ಲಿ ದೊರೆತ ಸ್ಮರಣೆಗಾಗಿ ಶ್ರಾವಣಮಾಸದ ಬೆನಕನ ಅಮವಾಸೆಯಂದು ದೇವರನ್ನು ಕರೆದುಕೊಂಡು ಅಭಿಶೇಕ ಮಾಡಿಕೊಂಡು ವಿವಿದ ವಾದ್ಯಗಳೊಂದಿಗೆ ಕರೆತರುತ್ತಾರೆ. ಅಂದು ಮಳೆ ಬೆಳೆಯ ಕುರಿತಾಗಿ ಹೇಳಿಕೆಯು ನಡೆಯುತ್ತದೆ. ಕಾರ್ತಿಕಮಾಸದಲ್ಲಿ ದೀಪೋತ್ಸವ ನಡೆಯುತ್ತವೆ. ಮದುವೆ ಮುಂಜವಿ, ಜವಳ ಮುಂತಾದ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯುತ್ತವೆ. ಹೀಗೆ ಭಕ್ತರು ತಮ್ಮ ಆರಾಧ್ಯ ದೈವದ ಆರಾಧನೆ ಮಾಡಿ ಧನ್ಯರಾಗುತ್ತಿದ್ದಾರೆ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.