ಲಿಂಗದಳ್ಳಿ ರಾಮದಾಸರು

                                              

ರಾಯಚೂರು ಜಿಲ್ಲೆ ಹರಿದಾಸಸಾಹಿತ್ಯಕ್ಕೆ ಅನನ್ಯಕೊಡುಗೆನೀಡಿದೆ.ವಿಜಯದಾಸರಾದಿಯಾಗಿ ಗೊಪಾಲದಾಸರು,ಜಗನ್ನಾಥದಾಸರು,ಪ್ರಾಣೇಶದಾಸರು ಮುಂತಾದ ಹರಿದಾಸರು   ದಾಸಪರಂಪರೆಯನ್ನು ಮುಂದುವರೆಸಿದ್ದಾರೆ.ವಿಶೇಷವಾಗಿ ಆಧುನಿಕ ದಾಸಸಾಹಿತ್ಯದ ಘಟ್ಟದ ಪ್ರವರ್ತಕರಾದ ಪ್ರಾಣೇಶದಾರು ಲಿಂಗಸೂಗೂರು ಪ್ರದೇಸದಲ್ಲಿ ಪ್ರಭಾವಿ ಹರಿದಾಸರಾಗಿದ್ದರು. ಪ್ರಸ್ತುತದಲ್ಲೂ ಅವರ ಪ್ರಭಾವ ಹಚ್ಚ ಹಸಿರಾಗಿದೆ. ಇವರ ಪರಿಸರದಲ್ಲಿ ಅನೇಕ ಹರಿದಾಸರು ದಾಸಸಾಹಿತ್ಯ ಕೃಷಿ ಮಾಡಿದ್ದಾರೆ. ಅಂಥವರಲ್ಲಿ ಆಧುನಿಕ ಹರಿದಾಸರಾದ ಶ್ರೀರಾಮಾಂಕಿತ ರಾಮದಾಸರೂ ಒಬ್ಬರು.

ರಾಯಚೂರು ಜಿಲ್ಲೆಯ ದೇವದುರ್ಗಾ ತಾಲ್ಲೂಕಿನ ಜೋಳದಹೆಡೆಗೆ ಎಂಬಗ್ರಾಮದಲ್ಲಿ ಬಡೇಸಾಬರು ೧೮೮೨ರಲ್ಲಿ ಜನಿಸಿದರು.ತಂದೆ ಖಾಜಾಸಾಹೇಬ ತಾಯಿ ಪೀರಮ್ಮ. ಬಡತನದ ಬವಣೆಯಲ್ಲೂ ವಿದ್ಯಾಭ್ಯಾಸ ಮಾಡಿದರು. ಕನ್ನಡಓದಲು, ಬರೆಯಲು ಕಲೆತರು. ಗುಮಾಸ್ತರಾಗಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.ಹುಸೇನಮ್ಮ ಎಂಬ ಕನ್ನೆಯೊಂದಿಗೆ ಮದುವೆಯಾಯಿತು. ಸಂಸಾರ ನಿರ್ವಹಣೆ ಕಷ್ಟವಾದಾಗ ಪತ್ನಿಯೊಂದಿಗೆ ಗೊನವಾರಕ್ಕೆ ಬರುತ್ತಾರೆ. ಆ ಊರಿನಲ್ಲಿ ಶಿಕ್ಷಕರಾಗಿ ಅಕ್ಷರದಾನದ ಕಾರ್ಯನಿರ್ವಸುತ್ತಾರೆ. ಜನಮನ ಗೆಲ್ಲತ್ತಾರೆ. ವಿಶೇಷವಾಗಿ ಆ ಊರಿನ ಜೋಯಿಸ ಮನೆತನದ ಶ್ರೀವೆಂಕಟಭೀಮಾಚಾರ್ಯ,ಶ್ರೀಗೋವಿAದಾಚಾರ ಗೋನವಾರ, ಶ್ರೀಹನುಮಂತಾಚಾರ್ಯ.ಶ್ರೀನಿವಾಸರಾವ ಕುಲಕರ್ಣಿಯವರ ಸ್ನೇಹವಾಯಿತು. ಇವರು ತಮ್ಮ ಸಭ್ಯತೆಯ ನಡುವಳಿಕೆ ಮತ್ತು ಜ್ಞಾನದಾºದಿಂದÀ ಎಲ್ಲರ ಮನಸ್ಸನ್ನು ಗೆಲ್ಲುvತ್ತಾರೆ. ಇವರೊಂದಿಗೆ ಭಜನೆ ,ಪುರಾಣ, ಪ್ರವಚನ.ಸಂಸ್ಕೃತ ಅಧ್ಯಯನದಲಿ ್ಲನಿರತರಾಗುತ್ತಾರೆ.ಇಲ್ಲಿಂದ ಅವರ ದಾಸ ಸಾಹಿತ್ಯ ಕೃಷಿ ಆರಂಭವಾಗುತ್ತದೆ.ವರಕವಿಗಳಾದ ರಾಮದಾಸರಿಗೆ ಒಳ್ಳೆಯ ಪರಿಸರದೊರೆತು. ಹುಲುಸಾದ ದಾಸಸಾಹಿತ್ಯ ರಚಿಸಲು ಪೂರಕವಾಯಿತು.ಇವರಿಗೆ ಹಂಪೆಯಲ್ಲಿ ಶ್ರೀರಾಮಾವಧೂತರಿಂದ’ ಶ್ರೀರಾಮ’ ಎಂದು ಅಂಕಿತದೊರೆಯುತ್ತದೆ.

                                                ಹರಿದಾಸಪರAಪರೆಯAತೆ ರಾಮದಾಸರಿಗೆ ಮಧ್ವಸಿಧ್ಧಾಂತವೇ ತಳಹದಿ.ಇವರು ಏಳುನೂರಕ್ಕೂ ಹೆಚ್ಚು ಕೀರ್ತನೆಗಳನ್ನು,ನೂರು ಉಗಾಭೋಗಗಳನ್ನು,ನಾಲ್ಕುನೊರಾ ಅರವತ್ತು ನುಡಿಯ ರಾಮ ಭಜನೆಯನ್ನು,ಐದು ಶತಾಷ್ಟಕಗಳನ್ನು ಉರ್ದು,ಸಂಸ್ಕುçತದಲ್ಲಿ ಕೀರ್ತನೆಗಳನ್ನು ರಚಿಸಿದಾರೆ.

ರಾಮಶತಾಷ್ಟಕ-; ಇದು ನೂರಾಎಂಟು ಚರಣಗಳಲ್ಲಿದೆ’ಈಶಶ್ರಿಶಜಗತ್ಪೋಷ’ ಎಂದು ಆರಂಭವಾಗುವ ಈ ಅಷ್ಟಕ ಪ್ರತಿ ಚರಣದ ಕೊನೆಯಲ್ಲಿ ‘ರಾಮನಮೊ’ ಎಂದು ಕೊನೆಗೊಳ್ಳುತ್ತದೆ ಈ ಅಷ್ಟಕದಲ್ಲಿ ರಾಮನ ಗುಣ ಕಾರ್ಯಗಳನ್ನು ವಿವರಿಸಲಾಗಿದೆ..ಶ್ರಿರಾಮನು ನಿಖಿಲ ಚರಾಚರಸೃಷ್ಟಿಗೆ ಒಡೆಯನು,ಭಕುತಾಭಿಷ್ಟಪೂರ್ಣ ಆದಿ ಲಕುಮಿನಾಥನು,ವೇದವೇದಾಗಮ್ಯನು, ವೇದವೇದಾಂತಗುಪ್ತ ,ವೇದಾತೀತ, ಅನಾದಿ ವಸ್ತು, ಆದಿಮೂರ್ತಿ, ಪತಿತ ಪಾವನಾಂಗ ಎಂದು ಬಣ್ಣಿಸುತ್ತಾರೆ. ಪರಕೆ ಪರಮನಾದ ಭಗವಂತ ಶರಣರ ಅರಸ, ದಾಸರದಾಸ, ದುಷ್ಟಕಾಲ,ಶಿಷ್ಟಪಾಲ ಎಂದು ಗುಣಗಳನ್ನು ಹೇಳುತ್ತಾ ದಶಾವತಾರದ ವಿಚಾರವನ್ನು ಹೇಳುತ್ತಾರೆ.’ಜೀವನದಲ್ಲಿ ಉಣ್ಣಬಾರದನ್ನು ಉಂಡು ,ನಿನ್ನ ಸ್ಮರಣೆ ಮರೆತು ಪಡಬಾರದ ಕಷ್ಟ ಪಟ್ಟು ಮಂದಮತಿಯಾದೆ.’ಮAದಮತಿಯ ಛಿಂದಿಸೆನಗಾನAದ ಮತಿ ದೇ’ ಎಂದು ಬೇಡಿಕೊಳ್ಳುತ್ತಾರೆ.ದುರಿತ ಕರ್ಮದೊಳಗೆ ನಿರುತನಾದ ನನಗೆ ಮರವೆ ಮಾಯವ ತೊರೆ, ಮಂಕು ವಿಷಯಲಂಪಟವೆAಬ ಸಂಕೋಲೆಯ ಕಡಿ, ನಿನ್ನಪಾದ ದಾಸರೊಳಗೆ ಕೂಡಿಸೋ, ಎನ್ನ ಮನದ ಭಿನ್ನ ಬಿಡಿಸಿ ನಿನ್ನ ಧ್ಯಾಸದೊಳಗೆ ಇರಿಸು ಎಂದು ತಮ್ಮನ್ನು ಆವರಿಸಿದ ದೋಷ ರಾಶಿಗಳಿಂದ ಮುಕ್ತ ಗೊಳಿಸಲು ವಿನಂತಿಸಿಕೊಳ್ಳುತ್ತಾರೆ. ತಮ್ಮನ್ನು ಸಮರ್ಪಿಸಿ ಕೊಳ್ಳತ್ತಾ , ಯಾರು ರಾಮ ಸ್ಮರಣೆ ಮಾಡುತ್ತಾರೊ ಅವರು ನಿತ್ಯಸತ್ಯ ಸಯಖಪಡುತ್ತಾರೆಂದು ಫಲ ಶೃತಿಯನ್ನೂ ಹೇಳುತ್ತಾರೆ.

ಗೋವಿಂದ ಶತಷ್ಟಕ-; ಇದು ಒಂದು ನೂರಾ ಎಂಟು ನುಡಿಯಲ್ಲಿದೆ. ಒಂದೊAದು ನುಡುಯಲ್ಲಿ ಮೂರು ಚರಣಗಳಿದ್ದು, ಎರಡನೆಯ ಚರಣದ ಕೊನೆಗೆ’ ಗೋವಿಂದ ನಮೋ ‘ ಎಂದು ಮೂರನೆಯ ಚರಣದ ಕೊನೆಗೆ ‘ಸಿರಿಗೊವಿಂದ ’ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ಶ್ರಿಕೃಷ್ಣನ ಲೀಲೆಗಳು, ಚಮತ್ಕಾರಗಳು ಚಿತ್ರಿತವಾಗಿವೆ.’ಪಾತಕ ಹರವುಧಿತಾತ ವಿಮಲ ಸುಖದಾತ ಜಗನ್ನಾಥ ಗೋವಿಂದ ನಮೋ ಮುಕ್ತಿದಾಯಕ ಸಿರಿಗೋವಿಂದ’ ಎಂದು ಕೃಷ್ಣನನ್ನು ಚಿತ್ರಿಸುತ್ತಾರೆ.ರಮಾಲೋಲನಾದ ಗೋವಿಂದ ಭಕ್ತ ಕ್ಷಮಾಶೀಲ ,ಭವಭ್ರಮಜಾಲಹರ,ಮುಕ್ತಿದಾಯಕನಾಗಿದ್ದಾನೆ.ಭಕ್ತರಿಗಾಗಿ ವೇದಗಳನ್ನು ತಂದಿದ್ದಾನೆ, ಮಂಧರಗಿರಿ ಬೆನ್ನಲ್ಲಿ ಪೊತ್ತಿದ್ದಾನೆ,ಸುಂದರ ಸ್ತಿçÃಯಾಗಿ ಸುರರಿಗೆ ಅಮ್ರತ ಉಣಿಸಿದ್ದಾನೆ, ಅಮರರಿಗೆ ಬಂದ ಕಂಟಕ ಪರಿಹರಿಸಿದ್ದಾನೆ,ನರಸಿಂಹನಾಗಿ ಬಾಲಕನನ್ನು ಕಾಯ್ದಿದ್ದಾನೆ, ಪಥದಿ ಶಿಲೆಯ ಒದ್ದು ಸತಿಯನ್ನು ಪಾವನ ಗೋಳಿಸಿದ್ದಾನೆ.ದಶಾವತಾರದ ವಿಚಾರ ಹೇಳುತ್ತ ರಾಮಾವತಾರದ ವಿಚಾರವನ್ನು ವಿವರವಾಗಿ ಹೇಳುತ್ತಾರೆ. ಭಕ್ತರಕ್ಷಕನಾದ ಹರಿಯ ನಾಮವನ್ನು ದಿನದಿನದಿ ಪಠಿಸಲು ಅಪೇಕ್ಷಿತ ಫಲವನ್ನು ನೀಡುತ್ತಾನೆಂದು ಸೂಚಿಸಿತ್ತಾರೆ.

ಹನುಮಂತ ಶತಾಷ್ಟಕ-; ಈ ಅಷ್ಟಕವು ಕೂಡಾ ಒಂದುನೂರಾ ಎಂಟು ನುಡಿಗಳಲ್ಲಿದೆ. ಪ್ರತಿ ನುಡಿಯು ಮೂರು ಚರಣಗಳನ್ನು ಹೊಂದಿದೆ. ಎರಡನೆಯ ಚರಣದಲ್ಲಿ’ಧೀಮಂತ’ ಮೂರನೆಯ ಚರಣದಲ್ಲಿ ‘ಜೈ ಶ್ರೀರಾಮನ ದೂತ್ಹನುಮಂತ’ ಎಂಬ ಪದದೊಂದಿಗೆ ಮುಕ್ತಾಯಗೊಳ್ಳುತ್ತವೆ.ರಾಮಾವತಾರದ ಆಂಜನೇಯನ ಭಕ್ತಿಯ ಚಿತ್ರಣ ಇಲ್ಲಿದೆ.ಹನುಮಂತನ ಜನನ ,ಬಾಲ್ಯದಲೀಲೆಗಳ ಕುರಿತಾಗಿ ಹೇಳುತ್ತಾರೆ. ಬಾಲತನದಿ ಘನಲಿಲೆ ತೋರಿದ ಸುಶೀಲ ಅಸಮಬಲ ಧೀಮಂತ,ತಿಳಿಯದ್ಹಣ್ಣುಯೆAದು ನಳಿನಮಿತ್ರನನು ಸೆಳೆದು ನುಂಗಿದನು, ಆನಂತರ ಸಪ್ತಧ್ವಿಭುವನಗಳ್ಹೊತ್ತು ಆಳುವನಂ ಹೊತ್ತು ಹಾರಿದನು ಧೀಮಂತ, ಮೋಡಗಳಿಕ್ಕಡಿ ಮಾಡುತ ಪೊಕ್ಕನು ಗಾಢಸಾಮರ್ಥದಿ, ಮೈನಾಕಪರ್ವತದೈನ್ಯಪಡಲು ಸನ್ಮಾನವಿತ್ತನು, ಧಾತ್ರಿ ಜಾತೆಗೆ ಮಹಾ ಖಾತ್ರಿ ತೊರಿಸಿ ಕೃಪಾ ಪಾತ್ರನಾದ,ಮಂಕು ದಾನವರ ಬಿಂಕಬಿಡಿಸಿದನು, ಭಕ್ತಿಯಿಂದ ಜಗದಾಪ್ತನ ಮನಸಿಗೆ ತೃಪ್ತಿಯ ನಿತ್ತನು ಧೀಮಂತ’ ಎಂದು ರಾಮಾಯಣದಲ್ಲಿ ಹನುಮಂತನು ನಿರ್ವಹಿಸಿದ ಕಾರ್ಯಗಳೆನ್ನಲ್ಲಾ ಸ್ವಾರಸ್ಯವಾಗಿ ಹೇಳುತ್ತಾರೆ.

ಶಿವಾಶತಾಷ್ಟಕ-;ಈ ಅಷ್ಟಕವೂ ಒಂದುನೂರಾ ಎಂಟು ನುಡಿಯನ್ನು ಹೊಂದಿದೆ. ಪ್ರತಿ ನುಡಿಯಲ್ಲಿ ಮೂರು ಚರಣಗಳಿದ್ದು ಎರಡನೆಯ ಚರಣದಲ್ಲಿ ಶಂಭು ನಮೋ, ಮೂರನೇ ಚರಣದಲ್ಲಿ ಶಿವ ಸಂಭೋ, ಎಂಬ ಪದಗಳು ನಿಯತವಾಗಿ ಬರುತ್ತವೆ.’ ನೀಲಕಂಠ ಭವ ಮಾಲ ಹರಂ’ ಎಂಬುದು ಆರಂಭದ ಚರಣ. ಶಿವ ಸ್ಮರಣೆ ಜೀವಿಗಳ ಭವ ಜನುಮಗಳನ್ನು ನಾಶ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಲುತ್ತಾರೆ.’ಶಿವನು ಸೂಲಪಾಣಿ,ರುಂಡಮಾಲ, ಉರಗಭೂಷಣ, ಕಾಲ ಸಂಹರ, ಅಂಭುಧಿಧರ, ಗಜಚರ್ಮಾಂಬರ, ಸುಜನಸುಖಂಕರ,ನAದಿ ರೂಢ, ಮುಂತಾಗಿ ಸ್ತುತಿಸಿದ್ದಾರೆ. ಕುಂಬಾರನಿಗೊಲಿದ ಪ್ರಸಂಗ,ಮಾದರ ಚನ್ನಯ್ಯನ ಪ್ರಸಾದ ಸ್ವೀಕರಿಸಿದ ಪ್ರಸಂಗ, ಬಕ್ತಮಾರ್ಕಂಡಯ್ಯನ ಪ್ರಸಂಗ, ಚನ್ನಕ್ಕನ ವ್ರತಕ್ಕೆ ಮೆಚ್ಚಿದ ಪ್ರಸಂಗಗಳನ್ನು ಬಣ್ಣಿಸಿದ್ದಾರೆ.ದಕ್ಷಬ್ರಹ್ಮನ ಯಜ್ಞದ ಪ್ರಸಂಗ, ಗಿರಿಜೆಯ ಅವತಾರ, ಗಿರಿಜಕಲ್ಯಾಣದವಿಚಾರತಾರಕಾರನ ಸಂಹಾರ  ಮುಂತಾದ ಪ್ರಸಂಗಗಳನ್ನು ಹೇಳುತ್ತ ,ಅವರಂತೆ ನನ್ನಮೇಲೂ ಕರುಣೆತೋರು,ಪಾರಮಾರ್ಥ ಪತತೋರಿಸೆಂದು ಬೇಡಿಕೂಳ್ಳುತ್ತಾರೆ.

ವಿಠಲಶತಾಷ್ಟಕ-;ವಿಠಲಾಷ್ಟಕವು ಕುಡಾ ಒಂದು ನುರಾಎಂಟು ನುಡಿಯ ಅಷ್ಟಕ.ಇದರಲ್ಲಿ ಒಂದೊAದು ನುಡಿಯಲ್ಲಿ ಮೂರುಚರಣಗಳಿವೆ. ಎರಡನೆಯ ಚರಣದಲ್ಲಿ ಪ್ರೇಮ, ಮೂರನೆಯ ಚರಣದಲ್ಲಿ ಜಯಜಯವಿಠಲನಾಮ ಎಂಬ ಪದಗಳು ನಿಯತವಾಗಿ ಬರುತ್ತವೆ. ಈ ಅಷ್ಟಕದಲ್ಲಿ ದಶಾವತಾರದ ವಿಚಾರಗಳು, ಭಾಗವತದ ಪ್ರಸಂಗಗಳು ಬರುತ್ತವೆ.ಈ ಅಷ್ಟಕದ ವಿಶೇಷವೆಂದರೆ ಕನಕದಾಸ, ಪುರಂದರದಾಸ, ವಿಜಯದಾಸ, ಗೋಪಾಲದಾಸ, ಶ್ರೀರಾಘವೇಂದ್ರ ಗುರುಗಳ, ಪುಂಡರೀಕ, ಸಂತ ತುಕಾರಾಮರ ವಿಚಾರಗಳು ಬಂದಿರುವುದು.

                                                ರಾಮದಾಸರ ಈ ಅಷ್ಟಕಗಳು,ಕೀರ್ತನೆಗಳು ಭಗವಂತನ ಲೀಲೆಗಳನ್ನು ಹೇಳುವುದರ ಜೂತೆಗೆ ರಾಮದಾಸರ ಅಧ್ಯಯನಶೀಲತೆಯನ್ನು ಕವಿತ್ವ ಶಕ್ತಿಯನ್ನು ಸೂಚಿಸಿತ್ತವೆ.ಸಂಪ್ರದಾಯಕವಾಗಿ ಭಜನೆಮಾಡುವ ಭಕ್ತರಿಗೆ ಸಾಧನಕಲ್ಪಗಳಾಗಿವೆ. ಉಪಮೆ, ದೃಷ್ಟಾಂತ, ಶ್ಲೇಷಾಲಂಕಾರಗಳು,ಪ್ರಾಸಾನುಪ್ರಾಸಗಳು ನಾದ-ಲಯಗಳಗೆ ಪೂರಕವಾಗಿಬಂದಿವೆ.

           ಇನ್ನು ಇವರು ಏಳುನೂರಕ್ಕೂ ಅಧಿಕ ಕೀರ್ತನೆಗಳನ್ನು ರಚಿಸಿದ್ದಾರೆ.ಅವುಗಳಲ್ಲಿ ಗಣಪತಿ,ಪಾರ್ವತಿ,ಶಿವ,ವಾಯುದೇವರು ಭಾರತಿ ಸರಸ್ವತಿ ಮತ್ತು ತಾರತಮ್ಯೋಕ್ತವಾಗಿ ಎಲ್ಲಾ ದೇವತೆಗಳ ಸ್ತೋತ್ರವನ್ನು ಕಾಣುತ್ತೇವೆ,`ಪಾದಕಂಡು ಪಾವನಾದೆನೋ ಶ್ರೀಗಿರಿನಿಲಯನ ಪಾದಕಂಡು ಪಾವನಾದೆನೋ’ ಎಂಬಕೀರ್ತನೆ ಭಕ್ತವೃಂದದಲ್ಲಿ ಬಹು ಜನಜನಿತವಗಿದೆ,ತಿರುಪತಿ ವೆಂಟರಮಣನವೈಭವ ವೈಭವವನ್ನು ಸುಂದರವಾಗಿ ಬಣ್ಣಿಸಿದ್ದಾರೆ. ಮಾದವತೀರ್ಥರ ಮತ್ತು ರಾಘವೇಂದ್ರತೀರ್ಥರ ಕುರಿತು ಕೀರ್ತನೆಗಳನ್ನು ರಚಿಸಿದ್ದಾರೆ.ಇವರು ಉಡಪಿ,ಪಂಢರಾಪುರ, ಕೊಲ್ಲಾಪುರ,ಕಾಶಿ,ತಿರುಪತಿ ರಾಮೇಶ್ವರ ಮಂತ್ರಾಲಯ, ಬುದ್ದಿನ್ನಿ ಮುಂತಾದ ಕ್ಷೇತ್ರಗಳನ್ನು ಸಂದರ್ಶೀಸಿದ್ದಾರೆ ಸಾಮಾಜಿಕ ಕಳಕಳಿಉಳ್ಳಕೀರ್ತನೆಗಳನ್ನು ರಚಿಸಿದ್ದಾರೆ. ಕನ್ನಡ ಉರ್ದಮಿಶ್ರಿತ ಭಾಷೆಯನ್ನು ಬಳಸಿದ್ದಾರೆ. ಭಾಷಿಕವಾಗಿ ಅಧ್ಯಯನ ಮಾಡುವವರಿಗೆ ಇವರ ಕೀರ್ತನೆಗಳು ಆಕ಼ರ್ಷಸಕವಾಗಿವೆ.

ಇವರು ತಮ್ಮ ಜೀವನಾವದಿಯಲ್ಲಿ ಸಜ್ಜನರೊಂದಿಗೆ ಜೀವಿಸಿ,ಸುಸಂಸ್ಕರತ ವಿಚಾರಗಳನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಧಾರೆ ಎರೆದು ಜೀವನ ಸಾರ್ಥಕಮಾಡಿಕೊಂಡಿದ್ದಾರೆ. ಇವರ ಜೀವನ ಸಾಧನೆ ಭಾರತೀಯರಿಗೆ ಅದರಣೀಯ ಮತ್ತು ಅನುಕರಣೀಯವಾಗಿದೆ. ಇವರು ಮಾರ್ಗಶಿರ ಬಹುಳ ದಶಮಿಯಂದು ದೈವಾಧೀನವಾಗುತ್ತಾರೆ. ಇವರ ಆರಾಧನೆಯನ್ನು ಗೋನವಾರ ಮತ್ತು ಲಿಂಗದಳ್ಳಿಯಲ್ಲಿ ಆಚರಿಸಲಾಗುತ್ತದೆ. ಲಿಂಗದಳ್ಳಿಯಲ್ಲಿ ಹವನ ಹೋಮಗಳೊಂದಿಗೆ ಪ್ರವಚನ, ದಾಸವಾಣಿ,ಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ರಾಮಾಂಕಿತ ರಾಮದಾಸರು ಎಂಬ ವಾಟ್ಸಪ್ ಗ್ರೂಪಿನ ಮುಖಾಂತರ ರಾಮದಾಸರ ಕೀರ್ತನೆಗಳ ಅರ್ಥವಿಶ್ಲೇಷ಼£ಣೆ,ಹಾಡುಗಾರಿಕೆಯಂತಹ ಚಟುವಟಿಕೆಯನ್ನು ಶ್ರೀಕೃಷ್ಟಾಚಾರ ಗುಡುಗುಂಟಿಯವರು ಹಮ್ಮಿಕೊಳ್ಳುತ್ತಾ ರಾಮದಾಸರ ಸಾಹಿತ್ಯದ ವಿಶೇಷತೆಯನ್ನು ಜನರಿಗೆ ತಲುಪಿಸುತ್ತಿದ್ದಾರೆ.

           ಇವರ ಕುರಿತಾಗಿ ಡಾ.ಸ್ವಾಮಿರಾವ ಕುಲಕರ್ಣಯವರು ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.ಇವರ ಕೀರ್ತನೆಗಳನ್ನು ಡಾ.ಟಿ.ಎನ್ ನಾಗರತ್ನಾ,ಪ್ರಸಾರಾಂಗ ,ಮೈ¸ಸೂರು ವಿಶ್ವವಿದ್ಯಾಲಯದಿಂದ ಪ್ರಕಟೆಸಿದ್ದಾರೆ. ಆನಂತರ ಕನ್ನಡಮತ್ತು ಸಂಸ್ರೃತಿ ಇಲಾಖೆ ಬೆಂಗಳೂರು,ಕರ್ನಾಟಕ ಸರಕಾರದಿಂದ ಪ್ರಕಟಸಲಾಗಿದೆ. ಇವರ ಕೆಲ ಕೀರ್ತನೆಗಳು ಇಂಗ್ಲೀಷಿಗೂ ತರ್ಜುಮೆ ಗೊಂಡಿವೆ.ಇವರ ಸಾಹಿತ್ಯದ,ಭಾಷೆಯ,ವಿವಿಧ ಆಯಾಮದ ಕುರಿತಾಗಿ  ಕುರಿತಾಗಿ ಇನ್ನೂ ಸಂಶೋಧನೆಗಳು ಆಗಬೇಕಾಗಿದೆ. ಇಬರ ಸಾಹಿತ್ಯ ಸಂಶೋಧಕರನ್ನು ಕೈಬೀಸಿ ಕರೆಯುತ್ತಿದೆ.

ಡಾ.ಶೀಲಾದಾಸ,

ರಾಯಚೂರು.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.