`ಗುರುಪದಹಾರ”     

                                           

             “ ಧರೆಯುದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ

               ವರಪ್ರಹ್ಲಾದರು ವ್ಯಾಸ ಪ್ರಭುಗಳೂ ವರತುಂಗಾತಟದಲ್ಲಿ”

 ಈ ಚರಣಗಳು “ಗುರುಪದಹಾರ ”ಎಂಬ ದೀರ್ಘ ಕೀರ್ತನೆಯಿಂದ ಆಯ್ದುಕೊಳ್ಳಲಾಗಿದೆ. ಈ ಕೀರ್ತನೆಯನ್ನು  ವೈದ್ಯರಾದ ವಿಠೋಬಾಚಾರ “ವಿಠಲೇಶ’ ಅಂಕಿತದಲ್ಲಿÀ, ನಲವತ್ನಾಲ್ಕು ನುಡಿಗಳಲ್ಲಿ ರಚಿಸಿದ್ದಾರೆ. ಇವರು ಹರಿದಾಸರಾಗಬೇಕೆಂದು ಹೊರಟವರಲ್ಲ. ಗುರುಗಳು ಇವರನ್ನು  ಅನುಗ್ರಹಿಸಿ ಹರಿದಾಸರನ್ನಾಗಿಸಿದ್ದಾರೆ. ಈ ಕೃತಿಯ ರಚನೆಯ ಹಿಂದೆ ಗುರುಗಳ ಕರುಣಾಮಯ ವ್ಯಕ್ತಿತ್ವ ಅಡಗಿದೆ.

       ಶ್ರೀವಿಠೋಬಾಚಾರ ಅವರು ೧೯೩೩ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ ಪಡೆದುಕೊಂಡು ನೈಜಾಮ ರಾಜ್ಯದ ನಲ್ಗೊಂಡಾದಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾರೆ. ಐದಾರು ವರ್ಷ ಕಳೆದ ಮೇಲೆ ಇವರಿಗೆ ಉದರಶೂಲೆ ಆರಂಭವಾಗುತ್ತದೆ. ಅನೇಕರಂತೆ ಇವರೂ ನಾಸ್ತಿಕರಾಗಿದ್ದರು. ನಲ್ಗೊಂಡಾದಿAದ ವರ್ಗಾವಣೆಗೊಂಡು ಔರಂಗಾಬಾದಿಗೆ ಹೋಗುತ್ತಾರೆ. ಅಲ್ಲಿ ಒಂದು ರಾತ್ರಿ ಗುರುಗಳು ಸ್ವಪ್ನದಲ್ಲಿ ದರ್ಶÀನ ನೀಡಿ ಗಂಧ-ತುಳಸಿ ಕೊಟ್ಟು ನಮ್ಮೂರಿಗೆ ಬನ್ನಿ ಎಂದAತಾಯಿತು. ಕಾಲ ಕಳೆದಂತೆ ವ್ಯಾಧಿ ಹೆಚ್ಚಾಗಿ ಉದ್ಯೊಗ ಮಾಡಲು ಅಸಾಧ್ಯವಾಗಿ ನೌಕರಿ ಬಿಟ್ಟು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ  ಕರುವಿನಕೊಪ್ಪ ಎಂಬ ಗ್ರಾಮದಲ್ಲಿದ್ದ ಬಂಧುಗಳ ಮನಿಗೆ ಬಂದು ಅಲ್ಲಿ ರಾಯರ ಸೇವೆ ಮಾಡಿದರು. ದಿನ ನಿತ್ಯ ರಾಯರ ಮೃತ್ತಿಕ ಮತ್ತು ಹಸುವಿನ ಹಾಲಿನೊಂದಿಗೆ ಸೇವಿಸುತ್ತಾ ನಲವತ್ತು ದಿನ ಸೇವೆ ಮಾಡಿದರು. ಆಗ ಕ್ರಮೇಣವಾಗಿ ವ್ಯಾಧಿ ಕಡಿಮೆಯಾಗುತ್ತಾ ಬಂತು. ಅವರು ಗುರುಗಳ ದರುಶನ ಮಡದೆ ಆಹಾರ ಸ್ವೀಕರಿಸುವುದಿಲ್ಲ ಎಂದು ಸಂಕಲ್ಪ ಮಾಡಿದ್ದರು. ಮಂತ್ರಾಲಯಕ್ಕೆ ಹೋಗಲು ಏಳೆಂಟು ತಿಂಗಳುಗಳೇ ಬೇಕಾÀಯಿತು. ಆದರೂ ಅವರು ಹಾಲನ್ನು ಹೊರತು ಪಡಿಸಿ ಬೇರೆ ಆಹಾರ ಸ್ವೀಕರಿಸಲಿಲ್ಲ.

      ಮಂತ್ರಾಲಯಕ್ಕೆ ಹೋಗಿ ಗುರುಗಳ ವೃಂದಾವನ ದರ್ಶನಮಾಡಿ ಹೊಟ್ಟೆ ತುಂಬಾ ಊಟಮಾಡಿ ಸಂತೋ಼ಷ ಪಡುತ್ತಾರೆ. ಆಗ ಅವರಿಗೆ ಗುರುಗಳನ್ನು ಸ್ತುತಿಸಬೇಕು ಎಂಬ ಉತ್ಕಟ ಅಭಿಲಾಶೆಯಾಗುತ್ತದೆ. ಅಲ್ಲಿಂದ ಗುರುಪದಹಾರ ಕೀರ್ತನೆ ರಚನೆ ಮಾಡಲು ಆರಂಭಿಸುತ್ತಾರೆ. ಈ ಕೀರ್ತನೆಯನ್ನು ಐದುಭಾಗವಾಗಿ ರಚಿಸಿದ್ದಾರೆ.

     ಮೊದಲನೆಯ ಭಾಗದಲ್ಲಿ ರಾಯರ ಅವತಾರದ ಕುರಿತು ವಿವರಿಸುತ್ತಾರೆ. ಪ್ರಹ್ಲಾದರಾಜರಾಗಿ `ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ ಮೆರೆಸಿದ ವರ ಪ್ರಹ್ಲಾದರು ಮೆರೆವರು ವರ ಮಂತ್ರಾಲಯದಲ್ಲಿ’ ಎಂದು ಪೂರ್ವ ಅವತಾರದಲ್ಲಿ ಗುರುಗಳು ಹರಿನಾಮದ ಮಹತ್ವ ಸಾರಿದ್ದಾರೆಂದು ವಿವರಿಸುತ್ತಾರೆ. ಮುಂದುವರೆದು ವ್ಯಾಸರಾಜರಾಗಿ `ಹರಿಮತಸಾರುವ ಹರಿ ಪದ ಹಾರವ ಪರಿಪರಿ ವಿಧ ಪದದಲ್ಲಿ ತಿರೆಯೊಳು ಸಾರಿದ ವ್ಯಾಸರು ಮೆರೆವರು ವರ ಮಂತ್ರಾಲಯದಲ್ಲಿ’ ಎಂದು ಮದ್ವಮತ ಮತ್ತು ಹರಿದಾಸ ಸಾಹಿತ್ಯಕ್ಕೆ ಪ್ರೇರಣೆಯಾದರು ಎಂಬುದನ್ನು ಸೂಚ್ಯವಾಗಿ ವಿವರಿಸುತ್ತಾರೆ.

          ರಾಯರ ಅವತಾರದ ಕುರಿತು` ಧರೆಯೊಳು ಮುಸುಕಿದ ತಮವನು ತೆರೆಯಲು ಹರುಷದಿ ಕಲಿಯುಗದಲ್ಲಿ  ಗುರುರಾಘವೇಂದ್ರರು ಕರಮೆರೆದಿಹುದು ವರಮಂತ್ರಾಲಯದಲ್ಲಿ’ ಎಂದು ಮೂರೂ ಅವತಾರಗಳು ಜನರನ್ನು ಉದ್ಧಾರ ಮಾಡಲು ಅವತಾರ ಎತ್ತಿದ್ದಾರೆಂಬುದು ಇಲ್ಲಿಯ ವಿಚಾರ. ತನು ಮನ ಧನೆವೆ ಸರ್ವಸ್ವ ಎಂದು ತಿಳಿದ ಪಾಮರರಿಗೆ ಮಣಿದೀಪಕವೆನಿಸಿಹರು. ವಿಷಯಗಳ ದಾಸರಾಗಿ ಬಳಲುವವರಿಗೆ ಜ್ಯೋತಿಯೋಪಾದಿಯಲ್ಲಿ ಜ್ಞಾನದ ಬೆಳಕ ನೀಡುವರು. ಬದುಕಿನ ಬವಣೆಯಲ್ಲಿ ಬಳಲುವ ಜನರಿಗೆ ಬವಣೆ ಬಿಡಿಸಲು ತವಕದಿ ಅವತರಿಸಿದರು ‘ ಎಂದು ಭಕ್ತರ ಬಗೆಗಿನ ಕಾಳಜಿಯ ಕುರಿತಾದ ವಿಚಾರಗಳನ್ನು  ಮೊದಲ ಭಾಗದಲ್ಲಿ ವಿವರಿಸಿದ್ದಾರೆ.

      ಎರಡನೆಯ ಭಾಗದಲ್ಲಿ ಕಾಮಧೇನು ಕಲ್ಪವೃಕ್ಷಾ ಚಿಂತಾಮಣಿ ಎಂಬ ವಿಚಾರವನ್ನು ವಿವರಿಸಲಾಗಿದೆ.

`ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ, ಧರೆಯೊಳು ಗುರುಗಳ ಮೊರೆಯಿಡಲಾರದ ನನರೇ ಪಾಪಿಗಳೆಲ್ಲಾ’ ಎಂದು ಗುರುಗಳ ಕರುಣೆಯನ್ನು ಸಾರುತ್ತಾರೆ. ಮಂತ್ರಾಲಯವು ಸಾಧನೆಯ ತವರೂರು. ಸಾಧನೆ ಮಾಡಲು ಮಹಾ ತಪಸ್ಸು ಮಾಡಬೇಕಗಿಲ್ಲ, ಶಾಸ್ತçಗಳ ಅದ್ಯಯನ ಮಾಡಿ ಪಂಡಿತರಾಗಬೇಕಿಲ್ಲ. ಸುಮ್ಮನೆ ಗುರುಗಳ ವೃಂದಾವನ ದರ್ಶನ ಮಾಡಿದರೆ ಸಾಕು ಸದ್ಗತಿ ದೊರೆಯುವುದು. ಈ ಕ್ಷೇತ್ರದಲ್ಲಿ ಗುರುಗಳು ಮಧ್ವಮತವೆಂಬ ಸಾಗರಕೆ ಚಂದ್ರನAತೆ ಕಂಗೊಳಿಸುತ್ತಿದ್ದಾರೆ.. ವೇದಿಗಳನೆಲ್ಲಾ ವಾದದಿ ಸೋಲಿಸಿದ ವಾದಿರಾಜರಾಗಿದ್ದಾರೆ. ವೇದಾಂತದ ಪರಿಮಳದ ಸುಹಾ¸ನೆಯೇೆ ಪಸರಿಸಿದೆ ಇಲ್ಲಿ, ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ. ಈ ಕ್ಷೇತ್ರಕೆ ವೈಕುಂಠವೇ ಧಾವಿಸಿಬಂದಿದೆ. ಧನ್ಬಂತರಿ ದೇವತೆಗಳು ಮ£ಒಲಿದು ತನು ದೋರಿರುವರು. ಘನವ್ಯಾಧಿಗಳಿಗೆಲ್ಲ ಧನವೇರಿಸಿ ಹೊಡೆದು ದೂರ ಓಡಿಸುವರು. ಸಕಲವ್ಯಾಧಿಗಳು ನಾಶವಾಗಿ ಹೋಗುವವು. ಪ್ರೇತ ಪಿಶಾಚಿಗಳು ಬಲಮುರಿದು ಬಿದ್ದು ಹೋಗಿವೆ ಇಲ್ಲಿ.  ಸೃಷ್ಟಿಗೀಶನ ದಯದಿಂದ ಸಕಲೇಷ್ಟವು ನೆರವೇರುವುದು. ಅಂಧರು ಕಣ್ದೆರೆದು ನೋಡುವರು, ಮೂಕರು ಗುರುಗಳನ್ನು ಹೊಗಳಿ ಕೊಂಡಾಡುವರು, ಕಿವುಡರು ಗುರುಗಳ ಕೀರುತಿಯ ಆಲಿಸುವರು. ಗುರುಗಳು ಭವಸಾಗರವ ದಾಟಿಸುವ ಬಹು ಅನುಭವಿಕ ನಾವಿಕರು ಇವರು. ಇವರು ಇದ್ದಲ್ಲಿ ಸಂತತಿ,ಸAಪದ,ಆಯುರಾರೋಗ್ಯ ಸಮೃದ್ಧಿಯಾಗಿಪ್ಪುದು.

           ಮೂರನೆಯ ಭಾಗದಲ್ಲಿ `ರಾಜರರಾಜ ಗುರುಮಹರಾಜರ ತೇಜವ ಬಣ್ಣಿಸುವುದು ಅಸಾಧ್ಯವಾಗಿದೆ. ಯಾಕೆಂದರೆ ಇವರು ಶ್ರೀಹರಿಯ ಪಾದಸರೋಜವನ್ನು ನಿತ್ಯದಲಿ ಸೇವಿಸುವರು. ಇವರ ಘನತೆಯನ್ನು ಸಾಮಾನ್ಯ ಜನರು ಅರಿಯರು. ತುಂಗಾತೀರದಿ ವಿರಾಜಮಾನರಾದ ಇವರ ಕೀರ್ತಿಯು ಹರಿದಿದೆ, ಮೆರೆದು ವಿಶ್ವದಲೆಲ್ಲ. ಅನಿಮಿಷರೆಲ್ಲರು ಮುನಿಕುಲದೊಂದಿಗೆ ವನಗೋಪಾಲನ ಘನತೆಯ ಕೀರ್ತಿಸಿ ಕುಣಿಯುವರು ಸಂಭ್ರಮದಿAದ. ಭೂಸುರರೆಲ್ಲರು ಕೇಶವನೊಲಿದನ ಸಂತೋಷದಿ ಸ್ತುತಿಪರು ಸೂಸುವ ಭಾಷ್ಪಗಳಿಂದ. ಬೃಂದಾವನದಲ್ಲಿ ವಾಸಿಪ ಗುರುಗಳ ಕಾಂತಿ ಎಂದೆAದಿಗೂ ಕುಂದದು. ಎಳತುಳಸಿಯಮಾಲೆ, ವಿಲಸಿತಕುಸುಮಗಳಿಂದ ಅಲಂಕೃತರಾದ ಗುರುಗಳು ಹರಿಕಳೆಯನ್ನು ಹೊಂದಿದ್ದಾರೆ. ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತರಾದ ಗುರುಗಳು ಪಂಡರಿರಾಯನ ಪ್ರೀಯರು. ರಥವೇರಿ ಗುರುಗಳು ಬರುತಿರೆ ಪೃಥಿವಿಯು ಧಿಮಿಧಿಮಿಯಂದು ಮೊಳಗುವುದು. ಗುರುಗಳು ವರಮಂತ್ರಾಲಯದ ಸಾಮ್ರಾಟರು ವೈಭವದಿಂದ ಮೆರೆಯುತ್ತಾರೆ “ ಎಂದು ಗುರುಗಳ ಮಹಿಮೆ ಮತ್ತು ವೈಭವವನ್ನು ಬಣ್ಣಿಸುತ್ತಾರೆ.

          ನಾಲ್ಕನೆಯ ಭಾಗದಲ್ಲಿ ಹರಿಯಂತರ್ಗತರಾದ ಗುರುಗಳ ದರುಶನ ಘನತರವಾದ ಪುಣ್ಯದಾಯಕವಾಗಿದೆ. ಗುರುಗಳ ಸಂಕೀರ್ತನೆ ಸಿರಿ ಸಂಪದವನ್ನು ದೊರಕಿಸಿ ಕೊಡುವುದು. ಗುರು ಪಾದೋದಕವು ಭಕ್ತರ ದುರಿತವನ್ನು ನಾಶಮಾಡುವುದು. ಗುರುಗಳ ಸೇವೆಯು ವರಪದವಿಯ ಕೊಡುವುದು. ಇಂಥಾ ಘನ್ನ ಮಹಿಮರೆ ನನ್ನ ಪ್ರಾರ್ಥನೆ ಕೇಳಿರಿ. ನಾನು ಘನ ಭವರೋಗದಿ, ಅನುಭವ ಭೋಗದಿ ತನುಮನ ತಾಪದಿ ನೊಂದಿಹೆನು. ದಿನದಿನ ಮರುಗಿದೆ ಘನತಾಪದೊಳಿಂದು ಹಸಿವೆ ತೃಷೆಯಾದಿ ವ್ಯಸನಗಳ ವಶನಾಗಿದ್ದೇನೆ. ಬಿಸಜಾಕ್ಷನ ನೆನೆಯದೆ ಪಶುವಿನಂತಿದ್ದೇನೆ. ಶಿಶುವೆಂದು ಪರಿಭಾವಿಸಿ ಮತಿಯನಿತ್ತು ಪೊರೆಯಬೇಕು “ ಎಂದು ನಿವೇದಿಸಿಕೊಳ್ಳುತ್ತಾರೆ.

       ಐದನೆಯ ಭಾಗದಲ್ಲಿ ದಾಸರು ಬಹಳ ಭಾವುಕರಾಗುತ್ತಾರೆ. ಇದುವರೆಗೂ ನಾನು ಭಕ್ತಿಯನ್ನು ಅನುಭವಿಸಿದವನಲ್ಲ. ನನ್ನ ಭಕ್ತಿ ಪರಿಶುದ್ಧವಾದ ಮೀಸಲು ಭಕ್ತಿ. ಈ ಭಕ್ತಿಯ ಪದಹಾರವನ್ನು ನಿಮ್ಮ ಪದತಲಕೆ ಸಮರ್ಪಿಸುತ್ತಿದ್ದೇನೆ. ಈ ಭಕ್ತಿಯ ಪದಹಾರವು ಪೂಸಿದ ಪರಿಮಳದ ಬಹು ವಿಕಸಿತಹಾರ. ವಿಠಲೇಶನ ಕರುಣದಿ ಈ ಭಕ್ತಿಯ ಪದಹಾರವನ್ನು ಸಮರ್ಪಿಸುತ್ತಿದ್ದೇನೆ ಎಂದು `ವಿಠಲೇಶ’ ಅಂಕಿತವನ್ನು ತಮಗರಿವಿಲ್ಲದೆ ಪ್ರಯೋಗಿಸುತ್ತಾರೆ. ಶ್ರೀರಾಘವೇಂದ್ರತೀರ್ಥರೆ `ವಿಠಲೇಶ’ ಅಂಕಿತಕ್ಕೆ ಮಾನಸಿಕವಾಗಿ ಪ್ರೇರಕರಾಗಿದ್ದಾರೆ. ಹೀಗೆ ಪದಹಾರ ಸಂಪನ್ನಗೊಳ್ಳುತ್ತದೆ.

          ಹೀಗೆ ವಿಠಲೇಶದಾಸರು ಭಕ್ತರಾಗಿ ಅನೇಕ ರಾಯರ ಕೀರ್ತನೆಗಳನ್ನು ರಚಿಸಿದ್ದಾರೆ. ಎಲ್ಲಾ ಕೀರ್ತನೆಗಳು ಜನರ ನಾಲಿಗೆಯಲ್ಲಿ ನಲಿದಾಡುತ್ತಿವೆ. ಹೀಗೆ ಇವರ ಭಕ್ತಿಯ ಭಾವುಕತೆ ವಿಕಸಿತ ಗೊಳ್ಳುತ್ತಾ ನಡೆಯಿತು. ಒಮ್ಮೆ ಬಾಗಲಕೋಟೆಯ ಹತ್ತಿರದ ಆಚಾರಕೊಪ್ಪದಲ್ಲಿ ರಾಯರ ಬೃಂದಾವನ ಪ್ರತಿಷ್ಟಾಪಿಸಬೇಕೆಂದು ಬೃಂದಾವನ ಶಿಲೆಯನ್ನು ಆಯ್ಕೆ ಮಾಡಿ ಸಂಕಲ್ಪಿಸಿದ್ದರAತೆ. ಅದು ಸಾಧ್ಯವಾಗದೇ ಹೋಯಿತು.ಆ ಶಿಲೆಯನ್ನು ಹಾಗೆಯೇ ಕಾಯ್ದಿಟ್ಟಿದ್ದರು. ಕಾಲಾಂತದಲ್ಲಿ ಹೈದ್ರಾಬಾದಿನ ಮಲ್ಕಾಜಗಿರಿಯಲ್ಲಿ ರಾಯರ ಬೃಂದಾವನ ಪ್ರತಿಷ್ಟಾಪಿಸಲು ನಿರ್ಧಾರವಾದಾಗ ಈ ಶಿಲೆಯನ್ನು  ನೀಡಿ ತೃಪ್ತಿಪಟ್ಟರಂತೆ. ಇವರ ರಚಿಸಿದ ಹಾಡುಗಳು ಜನಪ್ರೀಯವಾಗಿವೆ.ಭಕ್ತರ ಹೃದಯದಲ್ಲಿ ಅಚ್ಚೊತ್ತಿದಂತಿವೆ. ತಾವೂ ತಮ್ಮೊಂದಿಗೆ ಅನೇಕ ಭಕ್ತರ ಆತ್ಮೋದ್ಧಾರಕ್ಕೆ ಇವರ ಕೀರ್ತನೆಗಳು ಪೂರಕವಾಗಿವೆ.

ಡಾ.ಶೀಲಾದಾಸ,

ರಾಯಚೂರು.

    ೯೪೪೮೯೭೩೬೭೦.

.

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.