ಕಲ್ಯಾಣ ಕರ್ನಾಟಕದ  ಆಧುನಿಕ ಕೀರ್ತನ ಸಾಹಿತ್ಯ

ಯಾವುದೇ ಸಾಹಿತ್ಯವನ್ನು ಅಧ್ಯಯನ ಮಾಡಬೇಕಾದರೆ, ಅಧ್ಯಯನದ ಅನುಕೂಲಕ್ಕಾಗಿ ವಿಭಾಗಿಸುವುದು ಅನಿವಾರ್ಯ. ಕನ್ನಡ ಸಾಹಿತ್ಯವನ್ನು ಸ್ಥೂಲವಾಗಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡವೆಂದು  ವಿಭಾಗಿಸಿರುವುದು ಸರಿಯಷ್ಟೆ. ಹಾಗೆಯೇ ಹರಿದಾಸ ಸಾಹಿತ್ಯವನ್ನು ಅದ್ಯಯನದ ಅನುಕೂಲಕ್ಕಾಗಿ ಸ್ಥೂಲವಾಗಿ ನಾಲ್ಕು ಘಟ್ಟವೆಂದು ವಿದ್ವಾಂಸರು ವಿಭಾಗಿಸಿದ್ದಾರೆ.

೧)ಮಧ್ವಾಚಾರ್ಯರು ನರಹರಿತೀರ್ಥರಿಂದ ಹಿಡಿದು ಶ್ರೀಪಾದರಾಜರು, ವ್ಯಾಸರಾಜರು, ಮಹಿಪತಿದಾಸರು,ಪ್ರಸನ್ನವೆಂಕಟದಾಸರು

೨)ಪುರಂದರದಾಸರು, ಕನಕದಾಸರು,

೩)ವಿಜಯದಾಸರು, ಗೋಪಾಲದಾಸರು, ಹೆಳವನಕಟ್ಟೆ ಗಿರಿಯಮ್ಮ ಜಗನ್ನಾಥದಾಸರು,

೪) ಪ್ರಾಣೇಶದಾಸರು-ಗುರುಪ್ರಾಣೆಶದಾಸರು ಶಿಷ್ಯ ಪ್ರಶಿಷ್ಯರು. ( ಆಧುನಿಕ ಹರಿದಾಸರು)

    ಮುಂದುವರೆದು ಮಧ್ವಾಚಾರ್ಯರಿಂದ ಕನಕದಾಸರವರೆಗೆ ಮೊದಲಘಟ್ಟವಾಗಿ, ವಿಜಯದಾಸರಿಂದ ಪ್ರಸ್ತುತ ಹರಿದಾಸರ ವರೆಗಿನ ಕಾಲವನ್ನು ದ್ವಿತೀಯ ಘಟ್ಟವಾಗಿಯೂ ಇನ್ನೊಂದು ವಿಧದಲ್ಲಿ ವಿಭಾಗಿಸಲಾಗಿದೆ. ಈ ವಿಭಾಗ ಕ್ರಮವನ್ನೂ ಒಪ್ಪಬಹುದಾಗಿದೆ. ಈಗಾಗಲೇ ಹೇಳಿದಂತೆ ಇದು ಅಧ್ಯಯನದ ಅನುಕೂಲಕ್ಕಾಗಿ ಮಾತ್ರ. ಹರಿದಾಸಸಾಹಿತ್ಯ ಇಡಿಯಾದ ಪರಂಪರೆಯನ್ನು ಹೊಂದಿದೆ. ಮೆಲ್ನೋಟಕ್ಕೆ ಹಲವು ವ್ಯತ್ಯಾಸ ಕಂಡು ಬಂದರೂ ಸಾಹಿತ್ಯದುದ್ದಕ್ಕೂ ಭಕ್ತಿಯೇ ಮೂಲ ಸೂತ್ರ. ನರಹರಿತೀರ್ಥರಿಂದ ಹರಿದಾಸ ಸಾಹಿತ್ಯ ಉಗಮಗೊಂಡರೂ ಶ್ರೀಪಾದರಾಜರು, ವ್ಯಾಸರಾಜರು,ಕನಕ-ಪುರಂದರದಾಸರAಥವರಿAದ ಬೆಳೆದುಬಂದಿದೆ.

      ಹರಿದಾಸರು ಸಮಾಜೋಧಾರ್ಮಿಕ ನೆಲೆಯಲ್ಲಿ, ಸಮಾಜಮುಖಿ ಚಿಂತನ ಮಾಡಿದವರು. ವೇದವಾಙ್ಮಯದಲ್ಲಿ ಅಡಗಿದ ತತ್ವಸಿದ್ಧಾಂತಗಳನ್ನು ಲಲಿತವಹ ಸರಳಗನ್ನಡದಲ್ಲಿ ಗಾಯನದಮೂಲಕ ಅರುಹಿದವರು. ಇವರ ತತ್ವಸಿದ್ಧಾಂತಗಳು ಮೌಖಿಕವಾಗಿ ತಲೆಮಾರಿನಿಂದ ತಲೆಮಾರುಗೆ ಹರಿದುಬಂದು ಇಂದು ಗ್ರಂಥಸ್ಥವಾಗಿದ್ದರೂ ಜನಪದ ಸಾಹಿತ್ಯದಂತೆ ಇನ್ನೂ ಜನರ ನಾಲಿಗೆಯಮೇಲೆ ಉಳಿದಿದೆ ಎಂಬುದೂ ಸತ್ಯವಾಗಿದೆ.

       ಹರಿದಾಸರಿಗೆ ಮದ್ವಸಿದ್ಧಾಂತ ಮೂಲಧಾತುವಾಗಿದೆ. ನಾಲ್ಕುವೇದಗಳು ಆರುಶಾಸ್ತçಗಳು, ಹದಿನೆಂಟು ಪುರಾಣಗಳು,ಶ್ರುತಿ-ಸ್ಮೃತಿಗಳಸಾರ ಕೀರ್ತನ ಸಾಹಿತ್ಯದಲ್ಲಿ ಮೇಳೈಸಿವೆ. ಹರಿದಾಸರು ಮಧ್ವಾಚಾರ್ಯರ ದ್ವೆöÊತಸಿದ್ಧಮತದ ಮೇಲೆ ಅಚಲವಾದ ವಿಶ್ವಾಸ ಉಳ್ಳವರು. ಅವರ ಕುರಿತಾಗಿ ,ಅವರ ಅವತಾರತ್ರಯಗಳ ಕುರಿತಾಗಿ ಅನೇಕ ಕೀರ್ತನೆಗಳನ್ನು  ರಚಿಸಿದ್ದಾರೆ. ಇವರು ಅಪ್ರತಿಮ ಜ್ಞಾನಬಲ ಉಳ್ಳವರು. ಇವರು ಸಾರಿದ ತತ್ವಗಳನ್ನು ವ್ಯಾಸರಾಜರು ಶ್ಲೋಕದರೂಪದಲ್ಲಿ ರಚಿಸಿದರೆಂದು ಪ್ರತೀತಿ ಇದೆ. ಹರಿಸರ್ವೋತ್ತಮ, ಜಗತ್ತುಸತ್ಯ, ಪಂಚಭೇದಗಳು,ಜೀವರು ಹರಿಯ ಅನುಚರರು ,ತಾರತಮ್ಯ,ಮೋಕ್ಷ ಸಾಧನೆಯಲ್ಲಿ ಜ್ಞಾನ-ಭಕ್ತಿ-ವೈರಾಗ್ಯ, ಪ್ರತ್ಯಕ್ಷ, ಅನುಮಾನ,ಆಗಮಗಳೆಂದು ಮೂರು ಪ್ರಮಾಣಗಳು, ಶ್ರೀಹರಿಯು ವೇದಗಳಿಂದ ಪ್ರತಿಪಾದ್ಯನು. ಈ ತತ್ವಗಳನ್ನು ಪ್ರಾಚೀನರು ಆಧುನಿಕರ ಹರಿದಾಸರು ಅರುಹಿದ್ದಾರೆ. ಇದರೊಂದಿಗೆ ಸಾಮಾಜಿಕ. ಸಾಹಿತ್ಯಿಕ ವಿಚಾರಗಳೂ ಅಭಿವ್ಯಕ್ತಿ ಹೊಂದಿವೆ.

      ಕೀರ್ತನೆಗಳು ಹರಿದಾಸ ಸಾಹಿತ್ಯದ ಒಂದು ಪ್ರಕಾರ. ಇದಲ್ಲದೆ ಸುಳಾದಿ,ಉಗಾಭೋಗ, ದಂಡಕ,ತ್ರಿಪದಿ,µಟ್ಪದಿ,ಸಾAಗತ್ಯ ಬಯಲಾಟ ಗದ್ಯರೂಪಗಳಾದ ಕತೆ,ಒಗಟು,ಒಡಪುಗಳಂತಹ ಪ್ರಕಾರಗಳನ್ನು ಬಳಸಿ ಕೊಂಡಿದ್ದಾರೆ. ರೂಪಗಳು ಬೇರೆಯಾದರೂ ಧೋರಣೆ ಮಾತ್ರ ಒಂದೆ. ಆದ್ದರಿಂದ ದಾಸಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಜನರು ಕೀರ್ತನಸಾಹಿತ್ಯ ಎಂದು ಸ್ಥೂಲವಾಗಿ ಕರೆಯುವ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಪ್ರಸ್ತುತ ಈ ಲೇಖನದಲ್ಲಿ ಎಲ್ಲಾ ಪ್ರಕಾರಗಳನ್ನು ಬಳಸಿಕೊಳ್ಳಲಾಗಿದೆ.

        ಮನೋಹರವಿಠಲಾಂಕಿತರಾದ ನಾರಾಯಣಪ್ಪನವರು, ಹೂನುರೇಶ ಅಂಕಿತರಾದ ತುರಡಿಗಿ ತಿಮ್ಮಮ್ಮನವರು, ಶ್ರೀಪ್ರಾಣೆಶದಾಸರು, ಗುರುಜಗನ್ನಾಥದಾಸರು, ಸುರಪುರದ ಆನಂದದಾಸರು, ಹರಪನಹಳ್ಳಿ ಭಿಮವ್ವ, ಶೇಷದಾಸರು ಸುಂದರವಿಠಲರು, ಗೋವಿಂದದಾಸರು, ಕಲ್ಯಾಣಿ ಶ್ರೀನಿವಾಸದಾಸರು,  ಶ್ರೀಧೀರೇಂದ್ರ ವೈದ್ಯ, ಗಿರಿಯಾಚಾರ್ಯರು, ಸುಳಾದಿಕುಪ್ಪೆರಾಯರು, ಕಸಬೆ ಪಾಂಡುರAಗರಾಯರು, ನಾರಾಯಾಣಾ ಚಾಂiÀiðರುಬೂದೂರು, ರಾಮದಾಸರು, ಶ್ಯಾಮಸುಂದರದಾಸರು, ಭೀಮದಾಸರು ಮುಂತಾದ ಅನೇಕರು ಕಂಡು ಬರುತ್ತಾರೆ.

      ವೇದಶಾಸ್ತçಗಳು `ಹರಿಯೇ ಸರ್ವೋತ್ತಮನೆಂದು’ ಪ್ರತಿಪಾದಿಸಿವೆ. ಮಧ್ವಾಚಾರ್ಯರ ಸರ್ವಮೂಲಗ್ರಂಥಗಳೂ ಇವುಗಳನ್ನೇ ಪ್ರತಿಪಾದಿಸಿವೆ. ಹರಿದಾಸರು ಹರಿಸರ್ವೋತ್ತಮತ್ವ ಮತ್ತು ವಾಯುಜೀವೋತ್ತಮತ್ವವನ್ನು ಸಾರಿದ್ದಾರೆ. ಮದ್ವಸಿದ್ಧಾಂತದ ಪ್ರಕಾರ ಶ್ರೀಹರಿಯು ಸರ್ವಶಕ್ತ. ಎಲ್ಲಾ ಜೀವಿಗಳಲ್ಲಿ ತಾನಿದ್ದು, ಆಯಾ ನಾಮ ವಾಚಕನಾಗಿದ್ದು ಕಾರ್ಯಗೈಯುವನು. ಅವನ ಶಕ್ತಿಯಲ್ಲಿ ತಾರತಮ್ಯವಿಲ್ಲ. ತ್ರಿವಿಧ ಜೀವರಿಗೆ ಅವರವರ ಗತಿಗನುಗುಣವಾಗಿ ಗತಿ ನೀಡುವನು. ಸರ್ವವ್ಯಾಪ್ತನಾÀಗಿದ್ದು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣಕರ್ತನು,

         ಭಗವಂತನ ಕುರಿತು ಶ್ರೀಸಿರಿಗೋವಿಂದವಿಠಲರು ಇಪ್ಪತ್ತೆöÊದು ದ್ವಿಪದಿಗಳಲ್ಲಿ ಹರಿಯ ಸರ್ವೂತ್ತಮತ್ವವನ್ನು ಬಣ್ಣಿಸಿದ್ದಾರೆ.

   “ಮೋದಭರಿತ ಕೇಶವನೆ ಈ ಜಗದಾದಿಕರ್ತನೆಂಬೋದು ಖರೆ

    ಸಾಧಿಸಿಕೊಂಬುವ ವಿಭುಧರ ಕೈವಶವಾಗುತ್ತಿಪ್ಪನೆಂಬುದು ಖರೆ.”

   ಐಕೂರಾಚಾರ್ಯರು“ ಹರಿಯೇ ಪರತರ ಪರಮ ದೇವದೇವಾ

                 ಸಾರುತಿವೆ ವೇದಾ ಶೃತಿ ಸ್ಮೃತಿ ಪುರಾಣಗಳು” ಎಂದಿದ್ದಾರೆ. ಪರಮಾತ್ಮನು ಸಕಲಜೀವರಾಶಿಗಳಲ್ಲಿ ಬಿಂಬರೂಪಿಯಾಗಿರುವನು ಎಂದು ವರದರಾಜವಿಠಲರು ತಿಳಿಸುತ್ತಾರೆ.

 ಮಧ್ವಾಚಾರ್ಯರು ಜಗತ್ತು ಸತ್ಯ ಎಂಬತತ್ವವನ್ನು ಸಾರಿದ್ದಾರೆ. ಭಗವಂತನು ಜಗತ್ತನ್ನು ಸೃಷ್ಟಿಸಿ ಜೀವಿಗಳಿಗೆ ಕೈವಲ್ಯಮುಂತಾದ ಪದವಿ ಕೊಡಲು ಸಹಾಯಕನಾಗಿದ್ದಾನೆ. ಈ ಸೃಷ್ಟಿಯಲ್ಲಿ ಐದು ವಿಧ. ಜೀವ-ಈಶ್ವರ, ಜೀವ-ಜೀವ, ಜೀವ-ಜಡ,  ಜಡ-ಜಡ, ಜಡ-ಪರಮಾತ್ಮ ಎಂಬುವುಗಳಾಗಿವೆ.

ಹರಪನಹಳ್ಳಿಭೀಮವ್ವನವರು“ ಅಣುವಿನೊಳಗು ನೀನೇ ಪರಮಾಣುವಿನೊಳಗು ನೀನೆ,

                    ಘನವಾದ ರೂಪ ಗಗನಕ್ಕೆ ಬೆಳದದ್ದು ಬಲಿಬಲ್ಲ ನಿನ್ನ ಮಹಿಮೆ.’’

    ಎಂದು ಹರಿಯ ಸರ್ವಶಕ್ತಿಯನ್ನು ಸಾರುತ್ತಾರೆ. ಶ್ರೀಹರಿಯು ಜಗತ್ತಿಗೆ ನಿಯಾಮಕನು.ಜೀವಿಗಳು ಅತನ ಅನುಚರರು.ಜೀವಿಗೆ ಸ್ವಾತಂತ್ಯವೇ ಇಲ್ಲ.ತೃಣಮಾತ್ರನು.

     “ಅಡಿಗೆ ಮಾಡುವವನ ಕೈ ಹಿಡಿದ ಸೌಟಿನಂತೆ

      ನಡಿಯಿರೋ ನಮ್ಮ ಸ್ವಾತಂತ್ರ’ ಎಂದಿದ್ದಾರೆ.

      ತಾರತಮ್ಯ ಜ್ಞಾನವಿಲ್ಲದೆ ಹರಿದಾಸರಿಗೆ ಉಪಾಸನೆ ವ್ಯರ್ಥ. ಈ ತಾರತಮ್ಯದಿಂದಲೇ ಸರ್ವೋತಮತ್ವ ನಿರ್ಧಾರವಾಗುತ್ತದೆ. ತ್ರಿವಿಧ ಜೀವಿಗಳಲ್ಲಿ ಸಾತ್ವಿಕ-ರಾಜಸ-ತಾಮಸ ವೆಂಬ ತಾರತಮ್ಯವಿದೆ. ತೃಣಿಜೀವಿಗಳಿಂದ ಹಿಡಿದು ವಾಯುದೇವರ ಪರ್ಯಂತ ದೇವ-ಮಾನವರಲ್ಲಿ ತಾರತಮ್ಯವಿದೆ. ಜೀವಿಗಳ ಸಾಧನೆಯಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತಾರತಮ್ಯವಿದೆ. ಶ್ರೀಪ್ರಾಣೇಶದಾಸರು ತಾರತಮ್ಯ ಸ್ತುತಿಪದ್ಯವನ್ನು ರಚಿಸಿದ್ದಾರೆ. ಅಭಿನವಪ್ರಾಣೇಶದಾಸರು, ಗರ‍್ಯಾಚಾರ್ಯರು, ಶ್ರೀಕರವಿಠಲರು ಮುಂತಾದವರು ತಾರತಮ್ಯ ಸ್ತುತಿ ಪದ್ಯಗಳನ್ನು ರಚಿಸಿದ್ದಾರೆ. ತಮ್ಮ ಸ್ವರೂಪದ ಜ್ಞಾನವೇ ಮುಕ್ತಿ. ೧)ಮುಕ್ತಿಯೋಗ್ಯರು ೨)ನಿತ್ಯಸಂಸಾರಿಗಳು, ೩)ನಿತ್ಯ ನರಕಯೋಗ್ಯರು ತಮ್ಮತಮ್ಮ ಶ್ರದ್ಧೆಯಂತೆ ಹೊಂದುವ ಸಾಧನೆಯ ಮುಕ್ತಾಯದ ಹಂತವನ್ನು ಮೋಕ್ಷ ಎಂದು ಕರೆಯಬಹುದು. ಲಯಗಳ ಕುರಿತು ಗರುಡಮಾರ್ಗ ,ಶೇಷಮಾರ್ಗ ಎಂಬ ಎರಡು ಮಾರ್ಗಗಳಿವೆ. ಮುಕ್ತಿಯಲ್ಲಿ ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ ಎಂದು ನಾಲ್ಕುವಿಧ.ಸಾಧಕನ ಪರಮಗುರಿಯೇ ಮುಕ್ತಿ, ಮುಕ್ತಿ ಅಷ್ಟು ಸುಲಭವಲ್ಲವಾದರೂ ಅದರ ಅರಿವು ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಈ ಸಾಧನೆಯಲ್ಲಿ ಭಕ್ತಿ ಮುಖ್ಯವಾಗಿರುತ್ತದೆ. ಈ ಶರೀರವು ಸಾಧನ ಶರೀರ. ಪರಮಾತ್ಮನ ಪ್ರಾಪ್ತಿಗಾಗಿ ಅನೇಕ ಮಾರ್ಗಗಳಿವೆ.ಅಧ್ಯಯನ,ಧ್ಯಾನ,ದಾನ,ಯಜ್ಞ,ತಪಸ್ಸು,ನಿಷ್ಕಾಮ ಕರ್ಮಾನುಷ್ಠಾನ,ವೈರಾಗ್ಯಶಾಸ್ತç ಶ್ರವಣ,ಮನನ, ನಿದಿಧ್ಯಾಸನ ಮತ್ತು ಭಕ್ತಿಯನ್ನು ಸಾಧನೆ ಮಾಡಬೇಕು. ಇಷ್ಟೆ÷್ಟಲ್ಲಾ ಸಾಧನೆ ಮಾಡಿದರೆ ಭಗವಂತನ ಪ್ರಸಾದವಾಗುವುದು. ಈ ಪ್ರಸಾದವನ್ನು ಒದಗಿಸಬಲ್ಲ ಶಕ್ತಿ ಇರುವುದು ಭಕ್ತಿಗೆ ಮಾತ್ರ. ಗುರುಜಗನ್ನಾಥವಿಠಲರು

    “ ಬಾರಯ್ಯವೆಂಕಟ ಮನ್ಮನಕೆ

      ತ್ವರಿತಾದಿ ನಿಜನಾರಿ ಸಹಿತದಿ ಈ ಸಮಯಕೆ

       ಶರಣೆಂಬೆನು ಪದ ಯುಗಕೆ’’ ಎಂದು ಲಕ್ಷಿö್ಮÃಸಹಿತ ವೆಂಕಟೇಶನನ್ನು ಆಹ್ವಾನಿಸುತ್ತಾರೆ.

      ಭಗವಂತನನ್ನು ಅರಿಯಲು ಪ್ರಮಾಣಗಳು ಬೇಕು. ಪ್ರತ್ಯಕ್ಷ, ಅನುಮಾನ ಮತ್ತು ಆಗಮಗಳು. ಯಥಾರ್ಥಜ್ಞಾನವನ್ನು ತಿಳಿಸುತ್ತವೆ. ಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳಿಗೆ ನಿಲುಕುವ ಜ್ಞಾನ, ಅನುಮಾನವೆಂದರೆ ಕಾರ್ಯಕಾರನ ಊಹೆಯಿಂದ ನಿರ್ಧರಿಸುವುದು. ಉದಾಹರಣೆಗೆ ಹೊಗೆ ಇದ್ದರೆ ಅಲ್ಲಿ ಬೆಂಕಿ ಇದೆ ಎಂದು ಭಾವಿಸುವುದು. ಇನ್ನು ಆಗಮಗಳು ಅಪೌರುಷೇಯವಾಗಿವೆ. ವೇದಗಳು ಪುರಾಣಗಳು, ಭ್ರಹ್ಮಸೂತ್ರಗಳು, ಮಹಾಭಾರತ, ರಾಮಾಯಣ, ಸಾತ್ವಿಕ ಪುರಾಣಗಳು ಪ್ರಮಾಣವೆನಿಸಿವೆ. ಮಧ್ವಾಚಾರ್ಯರು ಇವೆಲ್ಲವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಹರಿದಾಸರಿಗೆ ಸಿಕ್ಕ ಉತ್ತಮ ಅವಕಾಶವಾಯಿತು. ಹರಿದಾಸಸಾಹಿತ್ಯ ಒಂದು ಪೌರಾಣಿಕ ಕೋಶವಾಯಿತು. ಇದಕ್ಕೆ ಉತ್ತಮ ನಿದರ್ಶನವೆಂದರೆ ಗುರುಜಗನ್ನಾಥದಾಸರು ರಚಿಸಿದ `ಪ್ರಲ್ಹಾದ ಚರಿತೆ’. ಇದರಲ್ಲಿ ವೇದ,ಶೃತಿ,ಸ್ಮೃತಿಗಳಿಂದ ಆಯ್ದಭಾಗಗಳಿವೆ.

       “ ಹರಿಗೆ ಸಮನದ ಸುರರಿಲ್ಲ ಧರೆಯೊಳಗೆ

        ಸರಿಯಾಗುವರೆ ಅಸುರರು ಕೋಲೆ’’ ಎಂಬುದಾಗಿದೆ.

ಶ್ರೀಹರಿಯು ಸರ್ವವೇದಗಳಿಂದ ಪ್ರತಿಪಾದ್ಯನಾಗಿದ್ದಾನೆ. ಮದ್ವಾಚಾರ್ಯರ ಅಭಿಮತದಂತೆ ಹರಿದಾಸರು ಪ್ರಮಾಣವಾಗಿ ಸ್ವೀಕರಿಸಿದ್ದಾರೆ. ಗುರುಜಗನ್ನಾಥದಾಸರು ಪ್ರಲ್ಹಾದನ ಬಾಯಿಯಿಂದ ನುಡಿಸಿದ್ದಾರೆ.  ಹೀಗೆ ಹರರಿದಾಸರು ತತ್ವಗಳನ್ನು ಸರಳವಾಗಿ ನಿರೂಪಿಸಿದ್ದಾರೆ. ಹರಿದಾಸಸಾಹಿತ್ಯದಲ್ಲಿ ಕಂಡುಬರುವ ಮಹತ್ವದ ಅಂಶಗಳೆAದರೆ ಪಂಚ ಭಾವಗಳು. ಅವುಗಳೆಂದರೆ ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ ಮತ್ತು ಮಧುರ. ಈ ಭಾವಗಳನ್ನು ಹರಿದಾಸರು ವಿಪುಲವಾಗಿ ಬಳಸಿದ್ದಾರೆ.

            ಭಕ್ತನಾದವನು ಮೊದಲು ಸ್ಥಿರಚಿತ್ತವುಳ್ಳವನಾಗಿರಬೇಕು. ಆಗ ಭಗವಂತನ ಲೀಲೆಗಳು ,ಭಗವಂತನ ಕಾರುಣ್ಯ ಅರವಿಗೆ ಬರತೊಡಗುತ್ತದೆ. ರಾಮದಾಸರು

           “ ನಿನ್ನದೋ ನಿಖಿಲ ನಿನ್ನದೋ

             ಕುನ್ನಿ  ಮನುಜರಾಧೀನನೇನಿಲ್ಲ ಶ್ರೀಹರಿ

             ನೀನಿಟ್ಟ ರವಿ ಶಶಿಗಳೆಲ್ಲಾ ಹರಿ

             ನೀನಿಟ್ಟ ಅಗ್ನಿಜ್ಯೋತಿಗಳು ಹರಿ’’ ಎಂದು ಭಕ್ತಿಭಾವವನ್ನು ವ್ಯಕ್ತಪಡಿಸಿದ್ದಾರೆ.

 ಹರಿದಾಸರ ಉಪಾಸನೆಯ ಕ್ರಮವೆಂದರೆ ಈಶ-ದಾಸ ತತ್ವ. ಪರಮಾತ್ಮ ತನನ್ನು ದಾಸನಗಿ ಸ್ವೀಕರಿಸಬೇಕೆಂದು ಭಕ್ತರ ಅಪೇಕ್ಷೆಯಾಗಿರುತ್ತದೆ.“ ಐಕೂರು ಆಚಾರ್ಯರು “ದಾಸನೆನಿಸೋ ನಿನ್ನಾ’’ ಎಂದು ಬೇಡಿಕೊಳ್ಳುತ್ತಾರೆ. ರಾಮದಾಸರು “ ದಾಸನಾದಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ’ ಎಂದು ಹೇಳಿದ್ದಾರೆ.

      ಭಕ್ತಿಯ ಉತ್ಕಟೆತೆಯಲ್ಲಿ ಭಕ್ತನಿಗೆ ಭಗವಂತನಲ್ಲಿ ಸಖ್ಯಭಾವ ಕಂಡುಬರುತ್ತದೆ. ನೇರವಾಗಿ ಸಂಭಾಷಣೆ ಮಾಡುತ್ತಾರೆ. ಸಲುಗೆಯಿಂದ ಬಯ್ಯುತ್ತಾರೆ, ಇದನ್ನು `ನಿಂದಾಸ್ತುತಿ’ ಎಂದು ಕರೆಯುತ್ತೇವೆ.

      “ ಮಂದಮತಿಯು ನುಡುದನೆಂದು ಕುಂದು ತಿಳಿಯ ಬೇಡವೋ

        ನಿಂದಾ ಸ್ತುತಿಗಳಿಂದ ನಿನ್ನ ಹೊಗಳುತ್ತಿದ್ದೆನೋ’ ಎಂದು ಭಿಮವ್ವನವರು ಬರೆಯುತ್ತಾರೆ.

ವಾತ್ಸಲ್ಯ ಭಾವವು ಹರಿದಾಸ ಸಾಹಿತ್ಯದ ಹೃದಯಭಾಗ. ಯಶೋಧೆ ಕೃಷ್ಣರ ಸಂದರ್ಭಗಳು ಎಂಥವರನ್ನೂ ಮುಗ್ಧಗೊಳಿಸುತ್ತವೆ. ಹಿಂದಿಭಾಷೆಯಲ್ಲೂ ಇಂತಹ ಉದಾಹರಣೆಗಳು ವಿಪುಲವಾಗಿ ದೊರೆಯುತ್ತವೆ.ಆಧುನಿಕ ಹರಿದಾಸರು ಕೃಷ್ಣನ ಬಾಲ ಲೀಲೆಗಳನ್ನು ಸ್ವಾರಸ್ಯವಾಗಿ ಚಿತ್ರಿಸಿದ್ದಾರೆ.

            “ ನೋಡೆ ಗೊಪಮ್ಮ ಕೃಷ್ಣನ ಚಾಳಿಯ ನೀ

              ಮಾಡಿಬಿಟ್ಟೆಯೋ ಇಂಥಗೂಳಿಯ ಇಂಥಾ ಗೂಳಿಯ’’ ಎಂದು ತಾಯಿಗೆ ದೂರು ಹೇಳುತ್ತಾರೆ.

ಅದಕ್ಕೆ ಉತ್ತರವಾಗಿ“ ಬಟ್ಟು ಬಾಯೊಳಿಟ್ಟರೆ  ಎನ್ನಯ ಕಂದ ತಟ್ಟನೆ ಕಡಿಯಲರಿಯನೆ’’ ಎಂದು ಮಗನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಹರಿದಾಸರು ಸ್ವತಃತಾವೇ ತಾಯಿಯಾಗಿ ಕೃಷ್ಣನ ಲೀಲೆಯನ್ನು ಮನತುಂಬಿ ಹಾಡಿದ್ದಾರೆ.

       ಮಧುರ ಭಾವವು ಶ್ರೀ್ರಪಾದರಾಜರಾದಿಯಾಗಿ ಎಲ್ಲಾ ಹರಿದಾಸರು ಬಳಸಿಕೊಂಡಿದ್ದಾರೆ. ಭಾಗವತದಲ್ಲಿ ಬರುವ ಭ್ರಮರಗೀತೆ, ಗೋಪಿಗೀತೆ, ವೇಣುಗೀತೆಗಳ ಸಂದರ್ಭಗಳು ವಿಪುಲವಾಗಿ ಬಳಕೆಯಾಗಿವೆ. ಪರಮಾತ್ಮನ ನಲ್ಲೆಯಂದು ಪರಿಭಾವಿಸಿ ಉಪಾಸನೆ ಮಾಡುವ ಭಾವ ವಿನೂತನವಾಗಿವೆ. ಗೋಪಿಕಾಸ್ತಿçÃಯರ ರಾಸಲೀಲೆಯ ಸಂದರ್ಭಗಳನ್ನು ಆಧುನಿಕ ಹರಿದಾಸರೂ ಬಳಸಿದ್ದಾರೆ. ಈ ತರಹ ನಾನಾವಿಧ ಭಕ್ತಿಯಿಂದ ಉಪಾಸನೆ ಮಾಡುವ ಉದ್ದೇಶವೇ ಪರಮಾತ್ಮನ ದರ್ಶನ. ಸಾಧಕನ ಸಾಧನೆ ಗಟ್ಟಿಗೊಳಿಸಿದಂತೆಲ್ಲಾ ಭಗವಂತನನ್ನು ಕಾಣುವ ಹಂಬಲ ತೀವ್ರವಾಗುತ್ತಾ ಹೋಗುತ್ತದೆ, ದೇವರ ದರ್ಶನವಾಗದೆ ಹೋದರೆ ಆ ದಿನ ಅವರಿಗೆ ದುರ್ದಿನ ವಾಗಿರುತ್ತದೆ. ಭಗವಂತನ ದರ್ಶನವಾದ ದಿನವೇ ಅವರಿಗೆ ಪುಣ್ಯದಿನ. ಭಗವಂತನ ದಿವ್ಯ ದರ್ಶನದ ಕುರಿತು

      “ ನೋಡಿದೆ ವೇಣುಗೋಪಾಲನ, ದಿವ್ಯಕೊಳಲುದುತನಿಂತ ಚಲುವ ಚನ್ನಿಗನಾ’’ ಎಂದು ಐಕೂರು ಆಚಾರ್ಯರು ವಿವರಿಸಿದ್ದಾರೆ. ಶ್ರೀಮತಿ ಪದ್ಮಾಬಾಯಿಯವರು

      “ ಬಂದನು ಬಂದನು ಭವಹಾರಿ,

         ನಿಂದನು ಹೃದಯದಿ ಅಸುರಾರಿ

         ಬಂದನು ಶ್ರೀಗೋವಿಂದ ಮುರಾರಿ,

        ಇಂದಿರೆ ಸಹಿತ ಮುಕುಂದ ಮೈದೋರಿ.’’ ಎಂಬ ದರ್ಶನದ ವಿಚಾರಗಳು ಕಂಡುಬರುತ್ತವೆ.

        ಹರಿದಾಸರಲ್ಲಿ ಕಂಡುಬರುವ ಮತ್ತೊಂದು ಅಂಶÀವೆAದರೆ ತೀರ್ಥಕ್ಷೇತ್ರಗಳ ದರ್ಶನ. `ತೀರ್ಥ’ ವೆಂದರೆ ಮುಕ್ತಿಯೋಗ್ಯವಾದ ಕಾಲ ಎಂಬುದು ಒಂದು ಅರ್ಥವಾದರೆ  ಇನ್ನೊಂದು ಭಗವಂತನಿಗೆ ಅಭಿಷೇಕ ಮಾಡುವ ಜ¯ವೆಂದೂ ಅರ್ಥ. ಭಗವಂತನಿAದ ಸೃಷ್ಟಿಯಾದ ಎಲ್ಲಾ ನದಿಗಳು ತೀರ್ಥಗಳಾಗಿವೆ. ಆದ್ದರಿಂದ ಹರಿದಾಸರು ನದಿಗಳ ತಾರತಮ್ಯೋಕ್ತ ವರ್ಣನೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಸ್ನಾನ ಮಾಡುವುದು ಪಾಪ ವಿಮೋಚನೆಗೆ ಕಾರಣವಾಗುತ್ತದೆ, ಅಷ್ಟೇ ಅಲ್ಲ ಸ್ಮರಣೆ ಮಾತ್ರದಿ ಪಾಪ ವಿಮೋಚನೆಯಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಯಾವ ವಿಘ್ನಗಳು ಬರುವುದಿಲ್ಲ ಎಂದು ಪ್ರಾಣೇಶವಿಠಲರು  ತಿಳಿಸುತ್ತಾರೆ. ಕ್ಷೇತ್ರಗಳು ಭಗವಂತನು ಅಧಿಷ್ಠಾನಗೊಳಿಸಿದ ಸ್ಥಳಗಳು. ಭಕ್ತನ ಸಾಧನೆ ಹೆಚ್ಚಾದಂತೆ ನಿಸರ್ಗದ ಚೇತನಾಚೇತನ ವಸ್ತಗಳು ಭಗವಂತನ ಪ್ರತಿಮೆಗಳಾಗಿ ಕಂಡು ಬರುತ್ತವೆ. ಹೀಗೆ ಹರಿದಾಸ ಸಾಹಿತ್ಯವು ವೇದವೇದಾಂತದ ಸಾರವನ್ನು ತನ್ನೊಳಗಡಿಗಿಸಿಕೊಂಡು ಸಂಪತ್ಭರಿತವಾಗಿದೆ.

            ಹರಿದಾಸರದು ಅಂತಃಕರಣದ ಮನಸ್ಸು. ಸಾಮಾನ್ಯ ಜನರಲ್ಲಿ ಜಾಗ್ರತಿ ತರಬೇಕೆಂದು ಅವರಿಗೆ ಪರಿಚಿತವಾದ ಜನಪದ ಲಯಗಳಲ್ಲಿ ಸಾಹಿತ್ವನ್ನು ರಚಿಸಿದರು. ಜನಪದ ಸಾಹಿತ್ಯದಲ್ಲಿ  ಲಾವಣಿ ಪ್ರಕಾರಕ್ಕೆ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇದು ಕಥಾನಕ ಕಾವ್ಯ. ಕಥೆಯನ್ನು ಕಾವ್ಯದ ಮೂಲಕ ಹೇಳಲು ಪ್ರಶಸ್ತವಾದ ಪ್ರಕಾರವಾಗಿದೆ. ಗೋವಿಂದದಾಸರು `ಕಲಿಯುಗದ ಲಾವಣಿ’ಯಂದು ಹನ್ನೊಂದು ನುಡಿಗಳ ಸುಧೀರ್ಘವಾದ ಕಾವ್ಯರಚಿಸಿದ್ದಾರೆ. `ಕೇಳಿರಿ ಜನಗಳೆ ಬಾಳಿದಂಥಾ ವಿಪ್ರಾವಲಿಯ  ಹೀನಸ್ಥಿತಿ’ ಎಂಬುದಾಗಿದೆ. ಇದು ಆಧ್ಯಾತ್ಮದೊಂದಿಗೆ ಹಾಸ್ಯ ಮತ್ತು ವಿಡಂಬನೆಯನ್ನು ಮೇಳೈಸಿಕೊಂಡು ಕೇಳುಗರಿಗೆ ಅಹ್ಲಾದವನ್ನು ಉಂಟು ಮಾಡುತ್ತದೆ. ಮುಂದುವರೆದು ಗೊವಿಂದದಾಸರು ಜನಪದ ಸಾಹಿತ್ಯದ ಇನ್ನೊಂದು ಲಯವಾದ ಗೀಗೀಪದವನ್ನು ರಚಿಸಿದ್ದಾರೆ.

        ಜನಪದ ಸಾಹಿತ್ಯ ಹೇಗೆ ತನ್ನ ಗರ್ಭದಲ್ಲಿ ಜನರ ಸಂಸ್ಕೃತಿಯನ್ನು ಅಡಗಿಸಿಕೊಂಡಿದೆಯೋ ಹಾಗೆಯೇ ದಾಸಸಾಹಿತ್ಯವೂ ಕೂಡಾ ತನ್ನಲ್ಲಿ ಜನರ ಸಂಸ್ಕೃತಿಯನ್ನು ಅಡಗಿಸಿಕೊಂಡಿದೆ. ಹಬ್ಬ-ಹರಿದಿನಗಳನ್ನು ಆಚರಿಸುತ್ತಾ ಬಂಧುಬಳಗದವರನ್ನು ಒಳಗೊಂಡು ಸಾಂಘಿಕ ಜೀವನ ನಡೆಸುವುದು ನಮ್ಮ ಸಂಸ್ಕೃತಿ. ಅದನ್ನು ಕೀರ್ತನೆಗಳಲ್ಲಿ ಕಾಣುತ್ತೇವೆ. ಶ್ರಾವಣಮಾಸ ಬಂದರೆ ಗೌರಿಯನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿ ರೂಢಿಯಲ್ಲಿದೆ. ಅದನ್ನು ಅನೇಕ ನೋಂಪಿ ಪದಗಳಲ್ಲಿ ಕಾಣಬಹುದು. ಹರಪನಹಳ್ಳಿ ಭಿಮವ್ವನವರ ಕೀರ್ತನೆಗಳಲ್ಲಿ ವಿಶೇಷವಾಗಿ ಕಾಣುತ್ತೇವೆ. ಚೈತ್ರಮಾಸದಲ್ಲಿ ಪೂಜಿಸುವ ಉಯ್ಯಾಲೆ ಗೌರಿಯನ್ನು ಪದ್ಮಾವತಿಯವರು ಹೀಗೆ ವಿವರಿಸುತ್ತಾರೆ.

         “ಚೈತ್ರ ಶುದ್ಧತೃತೀಯದಿ ಮಿತ್ರೆ ಗೌರಿಯು ತನ್ನ

          ಅರ್ಥಿಯ ತವರಿಗೆಂದು ಬರುತ್ತಾಳೆ ಕೋಲೆ’ ಎಂದು ತವರಿಗೆ ಬರುವ ಸಂಪ್ರದಾಯವನ್ನು ಹೇಳುತ್ತಾಳೆ. ಮುಂದುವರೆದು ಚೈತ್ರಮಾಸದ ನಿಸರ್ಗವರ್ಣನೆಯನ್ನು ಮಾಡುತ್ತಾಳೆ. ಮೌನಗೌರಿ, ಮಂಗಳಗೌರಿ, ಚೈತ್ರಗೌರಿ ಮುಂತಾದ ವಿವರಗಳು ಚನ್ನಾಗಿ ಮೂಡಿಬಂದಿವೆ. ಸಂಪ್ರದಾಯದ ಹಾಡುಗಳು ವಿಶೇಷವಾಗಿ ರಚನೆಯಾಗಿವೆ. ಉದಾಹರಣೆಗೆ  ಮದುವೆಯ ಸಂದರ್ಭದಲ್ಲಿ ವರನಿಗೆ ಹಾಕುವ ಆಪೋಶನದಹಾಡು, ಬಾಗಿಲು ಕಟ್ಟುವ ಹಾಡು, ಬೀಗರಹಾಡು, ಹೆಣ್ಣು ಒಪ್ಪಿಸುವ ಹಾಡುಗಳು, ಹೂ ಮುಡಿಸುವ ಹಾಡು, ಜೋಗುಳದ ಹಾಡುಗಳು ಕಂಡು ಬರುತ್ತೆವೆ.

      ಸಮಾಜ ಎಂದಮೇಲೆ ಅನೇಕ ನಂಬಿಕೆಗಳು ಶಕುನಗಳೂ ಕಂಡುಬರುತ್ತವೆ, ಅವುಗಳನ್ನು ಅಧುನಿಕ ಹರಿದಾಸರು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಶ್ರೀಕೃಷ್ಣನ ಭೇಟಿಗೆ ಹೋದ ಸುಧಾಮನಿಗೆ ಅನೇಕ ಶಕುನಗಳು ಕಂಡವೆAದು ತಿಳಿಸುತ್ತಾರೆ. ಪ್ರಾಣೇಶದಾಸರು ಕೃಷ್ಣ ಮತ್ತು ಯಶೋಧೆಯರ ಕುರಿತು ರಚಿಸುವಾಗ ಕೃಷ್ಣನಿಗೆ ಏನೂ ಆಗಬಾರದೆಂದು ಹರಕೆ ಹೊತ್ತುಕೊಳ್ಳುತ್ತಾಳೆ. ಈ ಪ್ರಸಂಗವು ಬಹು ಸ್ವಾರಸ್ಯವಾಗಿ ಮೂಡಿಬಂದಿದೆ. ಆಭರಣಗಳು, ಉಡುಗೆ ತೊಡಿಗೆಗಳು ಪೂಜಾ ಕರಣಗಳು, ಅಡುಗೆಯ ವಿಧವಿದ ಭಕ್ಷಗಳು ಕೇಳುಗರಿಗೆ ಹೊಸ ಲೋಕವನ್ನೆ ತೆರೆದಿಡುತ್ತವೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಅವರು ಬಳಸುವ ದೇಸೀಭಾಷೆ. ಭಾಷೆಯು ಜ್ಞಾನದ ಮೂಲ ಆವಿಷ್ಕಾರ. ಭಾಷೆ ಇರದೇ ಹೋದರೆ ಜಗತ್ತೇ ಶ್ಯೂನ್ಯವಾಗಿರುತಿತ್ತು. ಹರಿದಾಸರು ಬಳಸಿದ ಭಾಷೆಯನ್ನು ಗಮನಿಸಿದರೆ ಒಂದು ಪದಕೋಶವನ್ನು ನಿರ್ಮಿಸಬಹುದು, ಭಾಷಾ ಶಾಸ್ತçದ ಹಿನ್ನಲೆಯಲ್ಲೂ ಅಧ್ಯಯನ ಮಾಡಬಹುದು.

       ಆಡುಭಾಷೆಯಲ್ಲಿ ಬಳಸುವ ಪದಗಳಾದ ಮಟಮಾಯಾ, ಜಿಪುಣ, ಪಿಕನಾಸಿ, ಪರದೇಸಿ, ವಾಳಿ, ಮುಂತಾದ ಪದಗಳು ಕೀರ್ತನೆಯ ಸಂದರ್ಭದಲ್ಲಿ ಬಳಸಿದಾಗ ಹೆಚ್ಚು ಅಪ್ಯಾಯಮಾನವಾಗಿರುತ್ತವೆ. ಅನ್ಯಭಾಷಾ ಪದಗಳನ್ನು ದೇಶಿಯ ನೆಲೆಯಲ್ಲಿ ಬಳಸುವ ಪದಗಳನ್ನು ನೋಡಬಹುದು. ಉದಾಹರಣೆಗೆ, ಯಾರು-ದಾರು, ಯಾವ-ದಾವ, ಎಷ್ಟು-ಏಸು, ಇಷ್ಟು-ಈಸು, ಕಚೇರಿ, ದಫ್ತೆ, ಖೂನ, ಖ್ಯಾಲ, ಮುಂತಾದ ಪದಗಳು  ಪ್ರಾದೇಶಿಕ ಸೊಗಡನ್ನು ಹೆಚ್ಚಿಸಿವೆ. ಜನಪದ ಸಾಹಿತ್ಯದಲ್ಲಿಯ ಒಗಟುಗಳು ,ಒಡಪುಗಳು ಆಧ್ಯಾತ್ಮಿಕವಾಗಿ ಬಳಕೆಯಾಗಿವೆ. ಗಾದೆ ಮಾತುಗಳು ಕೂಡಾ ಕೀರ್ತನೆಗಳ ಪರಿಣಾಮ ಹೆಚ್ಚಿಸುವಲ್ಲಿ ಪೂರಕವಾಗಿವೆ.

        ಆಧುನಿಕ ಹರಿದಾಸರು ಜನಪದ ದೃಶ್ಯಮಾಧ್ಯಮವಾದ ಬಯಲಾಟಗಳನ್ನು ರಚಿಸಿದ್ದಾರೆ. ಉಳಿದವರಿಗೆ ಕಲಿಸಿದ್ದಾರೆ. ಸಗಮಕುಂಟಾ ರಾಮಾಚಾರ್ಯರು `ಜಗಜ್ಜನ್ಮಾದಿವಿಠಲ’ ಎಂಬ ಅಂಕಿತದಿAದ ಬಾಣಾಸುರಕಥೆ, ರಂಭಾವಿಲಾಸ, ಭೀಮಸೇನವಿಲಾಸ, ನಳಚರಿತ್ರೆ ಎಂಬ ಬಯಲಾಟವನ್ನು ರಚಿಸಿದ್ದಾರೆ. ಶಿಂಗಪ್ಪನವರು `ಚಂದ್ರಹಾಸ ಚರಿತೆ ‘ ಎಂಬ ಬಯಲಾಟವನ್ನು ರಚಿಸಿದ್ದಾರೆ. ಪೋತ್ನಾಳ್ ರಾಮಣ್ಣ ಎಂಬುವವರು `ಸುಭದ್ರಾಕಲ್ಯಾಣ’ ಬಯಲಾಟ ರಚಿಸಿದ್ದಾರೆ. ಸಿಂಗನೋಡಿ ಶ್ರೀನಿವಾಸಾಚಾರ್ಯರು ಬಂಡೆರAಗವಿಠಲ ಅಂಕಿತದಿAದ `ಹಿಡಂಬ ಪರಿಣಯ’ ಎಂಬ ಬಯಲಾಟ ರಚಿಸಿದ್ದಾರೆ. ಗೋವಿಂದದಾಸರು ಕನಕಾಂಗಿಕಲ್ಯಾಣ’ಎAಬ ಬಯಲಾಟ ರಚಿಸಿದ್ದಾರೆ. ಶ್ಯಾಮಸುಂದರದಾಸರು ರುಕ್ಮಾಂಗದ ಚರಿತೆ. ಪಾದುಕಾ ಪಟ್ಟಾಭಿಶೇಕ, ಲಂಕಾದಹನ. ವೆಂಕಟೇಶಕಲ್ಯಾಣ ಬಯಲಾಟಗಳನ್ನು ರಚಿಸಿದ್ದಾರೆ. ಇವುಗಳು ಕೂಡಾ ಮಧ್ವಸಿದ್ಧಾಂತದ ವಿಚಾರಗಳನ್ನು ಪ್ರಚುರ ಪಡಿಸುತ್ತವೆ. ಮಹಾಕಾವ್ಯಗಳಂತ ನವರಸಭರಿತವಾಗಿದ್ದು ಹಳಗನ್ನಡ ಕಾವ್ಯಗಳನ್ನು ಹೋಲುತ್ತವೆ.

        ಮೌಲಿಕ ಸಾಹಿತ್ಯ ಒಂದಲ್ಲಾ ಒಂದು ರೀತಿಯಿಂದ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುತ್ತದೆ.ಅದಕ್ಕೆ ಹರಿದಾಸ ಸಾಹಿತ್ಯ ಹೊರತಾಗಿಲ್ಲ. ಇದರ ಮೂಲ ಧೋರಣೆ ಮಧ್ವಸಿದ್ಧಾಂತದ ನೆಲೆಯಲ್ಲಿ ಹೊರಟರೂ ಹರಿದಾಸರು ಸಾಮಾಜಿಕ ಕಳಕಳಿಯನ್ನು ಬಿಟ್ಟಿಲ್ಲ.ಸಕಲ ಜೀವರಾಶಿಗಳ ಹಿತವನ್ನು ಬಯಸುವುದೇ ನಿಜವಾದ ಧರ್ಮ.ಹರಿದಾಸರು ಮಾನವೀಯ ಮೌಲ್ಯಗಳನ್ನು ಮಿಡಿಯುವಲ್ಲಿ ಜನರಿಗೆ ಹತ್ತಿರವಾದರು. ಹರಿದಾಸರು ಅವರ ಬದುಕು ಸಾಮಾನ್ಯರಿಗೆ ಮಾದರಿಯಾಗಿವೆ. ಪುರಂದರದಾಸರ ದ್ರವ್ಯದ ಮೇಲಿನ ದಾಹ, ಜಗನ್ನಾಥದಾಸರ ಜ್ಞಾನದ ಬಗ್ಗೆ ಇರುವ ಅಭಿಮಾ£,ವಿಜಯದಾಸರ ಕಷ್ಟಕಾರ್ಪಣ್ಯ,ಗೋಪಾಲದಾಸರ ಗಯತ್ರಿ ಮಂತ್ರದÀ ಅನಿಷ್ಟಾನ ಮುಂತಾದ ಜೀವನಾನುಭವಗಳು ಸುಂದರ ಬದುಕಿಗೆ ಮಾದರಿಯಾಗಿವೆ.

       “ ವಿಷಯದ ತೃಷ್ಣೆಯ ಬಿಡು ವಿಶ್ವಾಸದಲಿ ಬಾಳು

        ಕುಶಲ ತಪ್ಪದು ನಿನಗೆ ಎಂದೆAದಿಗೂ’’ ಎಂದು ವಿಷಯ ಸುಖಗಳು ಮಿತಿಯಲ್ಲಿದ್ದರೆ ಒಳಿತು ಎಂದು ಸೂಚಿಸುತ್ತಾರೆ. ಶ್ರೀರಾಮದಾಸರು

    “ವಿಷಯವಾಸನೆಳೆಸಿ ವಿಷಮ ಸಂಸಾರವೆAಬೋ ಮುಸುಕಿನ ಮಡುವಿನೋಳ್ ಮುಣಗಿಸಿದೆ.” ಎಂದಿದ್ದಾರೆ.ಸAಸಾರ ಎಂಬುದು ಉರಗದ ಸಂಗ ಇದ್ದಂತೆ. ಯಾವಾಗ ಕಚ್ಚುತ್ತದೆಯೋ ತಿಳಿಯದು ಎಂದು ಎಚ್ಚರಿಸುತ್ತಾರೆ. ಹಣದ ಮದದ ಕುರಿತು

“ ಧನವಂತನಾದವನೆ ಘನವಂತ ಜಗದಿ

  ಧನವಂತನಾಗದವ ಹೆಣಕೆ ಕಡೆ ಇಹದಿ’’ ಎಂದು  ಹೇಳುತ್ತಾರೆ. ಮುಂದುವರೆದು

          “ಹತ್ತಿರದವರಾರು ಹತ್ತಿರಕೆ ಬಾರರು

          ಸತ್ಯ÷್ಹಣನ ಕಂಡAತೆ ಮತ್ತಿವನ ಕಂಡು ಅತ್ತಿತ್ತ ಹೋಗುವರು’’

ಎಂದು ಹಣದ ಮಹಿಮೆ ತಿಳಿಸುತ್ತಾರೆ. “ ಸೊಕ್ಕಿಲೆ ಇರಬ್ಯಾಡಲೆ ಹುಚ್ಚಪ್ರಾಣಿ” ಎಂಬ ಕೀರ್ತನೆಯಲ್ಲಿ ಬಡತನ, ಸಿರಿತನ ಸ್ಥಿರವಲ್ಲ ಎಂದು ಎಚ್ಚರಿಸುತ್ತಾರೆ. ಹರಿದಾಸರು ತಮ್ಮ ಕೀರ್ತನೆಯ ಮುಖಾಂತರ   ಬದುಕಿನ ಸತ್ಯ ದರ್ಶನ ಮಾಡಿಸುತ್ತಾರೆ. ಮನುಷ್ಯನನ್ನು ಹಿಂಡಿ ಹಿಪ್ಪಿ ಮಾಡುವಲ್ಲಿ ಬಡತನ ದೊಡ್ಡ ಪಾತ್ರವಹಿಸುತ್ತದೆ. ಹರಿದಾಸರು ಅನೇಕ ಸಂಕಟಗಳನ್ನು ಎದುರಿಸಿದ್ದಾರೆ. ವಿಜಯದಾಸರು ಸೌಟು ಗಂಜಿಗಾಗಿ ಸಂಜಿತನಕ ಕಾಯಿದೆ’ ಎಂದು ಬರೆದ ಒಂದು ವಾಕ್ಯವೆ ಸಂಪೂರ್ಣಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ನೈಸರ್ಗಿಕ ತಾಪತ್ರಯಗಳು ಹರಿದಾಸರನ್ನು ಕಾಡಿವೆ. ಬರಗಾಲ ಯಾವತ್ತೂ ಸಮಾಜವನ್ನು ಬಾಧಿಸಿದೆ. ರಾಮದಾಸರು

      “ ತಲ್ಲಣಿಪುದು ಹರಿಯೆ ಮಳೆಯಿಲ್ಲದೀ ಭುವನ,

       ಝಲ್ಲುಬಿಡಿಸು ಜಗವ ತೆರೆದು ಕೃಪನಯನ’’ ಕೆರೆಭಾವಿ, ಹಳ್ಳಕೊಳ್ಳಗಳು ಬತ್ತಿ ಪಶುಪಕ್ಷಿಗಳು ಬಾಧೆ ಪಡುತಲಿವೆ, ಪಥಿಕರು ಬಾಯಾರಿ ಬಸವಳಿದಿದ್ದಾರೆಂದು ಬರಗಾಲದ ತೀವ್ರತೆಯನ್ನು ಚಿತ್ರಿಸಿದ್ದಾರೆ. ಜಾತಿ ಪದ್ಧತಿ ನಮ್ಮ ದೇಶದಲ್ಲಿ ಯಾವಕಾಲಕ್ಕೂ ಬಾಧಿಸಿದೆ. ಭಾರತದ ಭಕ್ತಿ ಪಂಥವನ್ನು ಅವಲೋಕಿಸಿದಾಗ ಎಲ್ಲಾ ಮತಪಂಥದವರು ಇದ್ದದ್ದು ಕಂಡುಬರುತ್ತದೆ. ಹರಿದಾಸ ಸಾಹಿತ್ಯದಲ್ಲಿ ಕನಕದಾಸರು ಆಧುನಿಕರಲ್ಲಿ ರಾಮದಾಸರ ಸಾಹಿತ್ಯ ಅನುಪಮವಾಗಿದೆ. ಸ್ಪೃಶ್ಯ- ಅಸ್ಪೃಶ್ಯತೆಯನ್ನು ಹರಿದಾಸರು ಖಂಡಿಸಿದ್ದಾರೆ.

       “ಪೊಳ್ಳು ಮಾನವ ತಿಳಿ ಮಮಕುಲವ ಪೇಳುವೆನು……

        ಅಲ್ಲ ಎಂಬುವAಥ ಅಲ್ಲೆಂಬ ಸೊಲ್ಲು ತಿಳಿಯುವಂಥ

        ಅಲ್ಲ ಅಲ್ಲ ಎಂಬ ಖುಲ್ಲ ಜನರು ಬಳಿಯಲ್ಲಿನಿಲ್ಲದಂಥ ‘’ ಎಂದು ರಾಮದಾಸರು ಖಂಡಿಸಿದ್ದಾರೆ. ಹುಟ್ಟು ಜಾತಿಯಿಂದ ಏನೂ ಇಲ್ಲ. ಮನುಷ್ಯನ ಅರಿವಿನಲ್ಲಿ ಇರಬೇಕು.

  “ವನಹೀನವಾದ ನದಿಗಳು ಇದ್ದು ವ್ಯರ್ಥ,ಧನಹೀನವಾದ ಸಾಹುಕಾರ ವ್ಯರ್ಥ

   ತನುಜಾರು ಇಲ್ಲದ ಮಂದಿರ ವ್ಯರ್ಥ ಘನಗರ್ಜಿಸಿದರೇನು ಮಳೆ ಇಲ್ಲದ ವ್ಯರ್ಥ’’

               ಎಂದು ಹುಟ್ಟಿನಿಂದ ಯಾವುದೂ ಬರುವುದಿಲ್ಲ. ಸಾಧನೆಯಿಂದ ಮಾತ್ರ ಎಲ್ಲಾ ಬರುತ್ತದೆ ಎಂದು ಸೂಚಿಸುತ್ತಾರೆ. ಆಸೆಗೆ ಮನಸ್ಸೇ ಮೂಲ. ಮನಸ್ಸನ್ನು ನಿಗ್ರಹಿಸಬೇಕು. ಅದು ಪದೇಪದೇ ಏನನ್ನೋ ಬಯಸುತ್ತದೆ. ನಿತ್ಯಭಗವಂತನ ಸ್ಮರಣೆ ಮಾಡುತ್ತ ಶುದ್ಧವಾಗುತ್ತದೆ. ಬದುಕು ಕ್ಷಣಿಕವಾದದ್ದು. ಸಮಯ ವ್ಯರ್ಥಮಾಡದೆ ಕರ್ತವ್ಯದತ್ತ ನಿರತವಾಗಿರಬೇಕು, ನಿತ್ಯಕರ್ಮಾನುಷ್ಠಾನ ಮಾಡಿಕೊಂಡು ಪರೋಪಕಾರಿಯಾಗಿರಬೇಕು ತನ್ನ ಪರಿವಾರವನ್ನು ಭಗವಂತನ ಪ್ರಸಾದವೆಂದು ಸೇವೆ ಮಾಡಬೇಕು’ ಎಂದು ಕೌಟುಂಬಿಕ ಮೌಲ್ಯವನ್ನು ತಿಳಿಸುತ್ತಾರೆ.

       ಯಾವುದೇ ಬರವಣಿಗೆಯು ತಿಳಿದೋ ತಿಳಿಯದೆಯೋ ವೈಚಾರಿಕತೆಯನ್ನು, ಸಾಹಿತ್ಯಿಕ ಅಂಶಗಳನ್ನು ಒಳಗೊಂಡಿರುತ್ತದೆ. ಅಧ್ಯಯನ ಶೀಲರಾದ ಹರಿದಾಸರ ಹಾಹಿತ್ಯದಲ್ಲಿ ಸಾಹಿತ್ಯಿಕ ಅಂಶಗಳು ವಿಪುಲವಾಗಿ ಅವಿರ್ಭಾವಗೊಂಡಿವೆ. ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವ ಎದ್ದು ಕಾಣುತ್ತದೆ. ಕೃಷ್ಣನ ಲೀಲೆಗಳನ್ನು ಹೇಳುವಲ್ಲಿ ನವರಸಗಳು ಅಭಿವ್ಯಕ್ತಿಗೊಂಡಿವೆ

   .“ ವತ್ಸಕಾಯುತವನದೊಳಗೆ ಆಡೆಂದರೆ ಕಿಚ್ಚನುಂಗಿ ಸರ್ಪ ತುಳಿಯುವುದೆ

     ಚಂಡನಾಡುತ ತುರುವಿಂಡಾ ಕಾಯಂದರೆ ಗಂಡನುಳ್ಳವರಿAದ ತಿರುಗುವುದೆ’

    ಎಂದು ಬಾಲ ಲೀಲೆಗಳನ್ನು ಬಣ್ಣಿಸಿದ್ದಾರೆ. ಪ್ರಕೃತಿ ವರ್ಣನೆಯೂ ಇವರ ಸಾಹಿತ್ಯದಲ್ಲಿ ಕಂಡುಬರುತ್ತದೆ. ಮುಗಿಲ ಮುಟ್ಟುವವೋ ನಾರಿ ಕೇಳ ವನಗಳು ಗಗನ ತುಳಕುವವೋ ಫೋಗೀಫಲಗಳು’’ ರಂದು ವಿವಿಧ ಫಲಪುಷ್ಪಗಳ ವರ್ಣನೆಮಾಡುತ್ತಾರೆ. ಅಂದಿನ ಸಮಾಜದ ಸ್ವರೂಪ, ಉಡುಗೆ ತೊಡುಗೆ, ರೀತಿನೀತಿ, ವ್ಯಾಪಾರ-ವ್ಯವಹಾರದ ಸಮಗ್ರಜೀವನ ಪ್ರತಿಬಿಂಬಿಸಿದೆ.ಸತ್ಯಭಾಮೆಯ ಅರಮನೆಯು

                “ ಪಚ್ಚೆ ಕಲ್ಲು ಪದ್ಮ ಮಾಣಿಕ್ಯ,

                 ಅಚ್ಚಮುತ್ತುಗಳಿಂದ ರಚಿತ

                 ಅಚ್ಚದರಸಿ ಸತ್ಯಭಾಮಗೆ ಹೆಚ್ಚಿನರಮನೆಯ’’

 ಅಲಂಕಾರಗಳು ವರ್ಣನೆಗಳು ಕಾವ್ಯದ ಮೌಲ್ಯಗಳನ್ನು, ಸೊಗಸನ್ನು ಹೆಚ್ಚಿಸಿವೆ.

          “ ಶುಕ್ತಿಲಿ ಸ್ವಾತಿಹನಿ ಬೀಳೆ ಮುತ್ತಾಗೋ ತೆರ

            ಭಕ್ತಂಗೆ ನಿನ್ನಸ್ಮೃತಿ ಕತೃತ್ವ ಧೃಢಗೊಳಿಸಲು’’ ಎಂದು ಹೋಲಿಕೆ ಮಾಡಿದ್ದಾರೆ.

 ಇಲ್ಲಿಯ ಭಾಷೆ ಶುದ್ಧವಾದ ವಸ್ತçವನ್ನು ಉದಕ ಆವರಿಸುವಂತೆ ಕೇಳುಗರ ಮನಸ್ಸನ್ನು ಆವರಿಸುತ್ತದೆ. ಹರಿದಾಸ ಸಾಹಿತ್ಯದ ಮೂಲ ಮಾಧ್ಯಮ ಸಂಗೀತ. ಹರಿದಾಸರು ಗೀಗೀಪದ,ಕೋಲುಪದ,ಲಾಲೀಪದ,ತತ್ವಪದಗಳಂಥಹ ಅನೇಕ ಜನಪದ ಲಯಗಳನ್ನು ಬಳಸಿ ಜನಪದ ಸಂಸ್ಕೃತಿಗೆ, ಸಂಗೀತ ಕ್ಷೇತ್ರಕ್ಕೆ ಅನುಪಮ ಕಾಣಿಕೆ ನೀಡಿದ್ದಾರೆ. ಹರಿದಾಸ ಸಾಹಿತ್ಯದ ಧೋರಣೆಗಳು ಎಲ್ಲೂ ಬದಲಾಗಿಲ್ಲ. ಕಾಲಕ್ಕೆ ತಕ್ಕಂತೆ ಸಂದರ್ಭಗಳು ಮಾತ್ರ ಬದಲಾಗಿವೆ. ಆಧುನಿಕ ಹರಿದಾಸರು ಹರಿದಾಸ ಸಾಹಿತ್ಯದ ತತ್ವ ಸಿದ್ಧಾಂತಗಳನ್ನು ತಲೆಮಾರಿನಿಂದ ತಲೆಮಾರಿಗೆ ಹರಿದುಬರುವಲ್ಲಿ ಶ್ರಮಿಸಿದ್ದಾರೆ, ಉಳಿಸಿದ್ದಾರೆ, ಬೆಳೆಸಿದ್ದಾರೆ.

            ++++++++++++++++++++++++++++++++++

ಲೆಖಕರು-ಡಾ.ಶೀಲಾಕುಮಾರಿ ದಾಸ ಪ್ರಾಚಾರ್ಯರು,ಬಂಕಟಲಾಲ್ ರಾಜಾರಾಮ ಬೂಬ ವಾಣಿಜ್ಯ ಮಹಾವಿದ್ಯಾಲಯ,ರಾಯಚೂರು-೫೮೪೧೦೩ -೯೪೪೮೯೭೩

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.