“ ಬಾಗಿ ಬೇಡಿರೋ ಯತಿರಾಘವೇಂದ್ರರಾ’’

                    

        ಭವದರೋಗ ಹರಿವ ಶ್ರೀರಾಘವೇಂದ್ರತೀರ್ಥರಲ್ಲಿ ಯಾರು ಶಿರಬಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೋ ಅವರಿಗೆ ಸಕಲ ಸಂಪದಗಳನ್ನು ನೀಡಿ ಪೊರೆಯುತ್ತಾರೆ. ಇಂಥಾ ಗುರುಗಳ ಕಾರುಣ್ಯ ಅಸದೃಶ್ಯವಾದದ್ದು. ಈ ಮಾತಿಗೆ ಅನೇಕ ಹರಿದಾಸವರೇಣ್ಯರು ರಚಿಸಿದ ಕೀರ್ತನೆಗಳೇ ಸಾಕ್ಷಿಯಾಗಿವೆ. ಒಂದೊAದು ಕೀರ್ತನೆಗಳು ಸ್ಥೂಲವಾಗಿ ಅಥವಾ ವಿಸ್ತೃತವಾಗಿ ರಾಘವೇಂದ್ರತೀರ್ಥರ ಸಂಪೂರ್ಣ ಚರಿತ್ರೆಯನ್ನು ಮತ್ತು ಅವರ ಕಾರುಣ್ಯವನ್ನು ಚಿತ್ರಿಸುತ್ತವೆ. ಅಂತಹ ಕೀರ್ತನೆಗಳಳ್ಲಿ `ಖಾದ್ರಿದೇವ’ ಅಂಕಿತದಲ್ಲಿ ರಚಿತವಾದ “ಬಾಗಿಬೇಡಿರೋ ಯತಿರಾಘವೇಂದ್ರರಾ” ಎಂಬ ಇಪ್ಪತೊಂಭತ್ತು ನುಡಿಯ ಕೀರ್ತನೆಯೂ ಒಂದಾಗಿದೆ.

       ಭಕ್ತಿಯ ಕುರಿತಾಗಿ ಅನೇಕ ಚರ್ಚೆಗಳು ನಡೆಯುತ್ತವೆ. ಆದರೆ  ಭಕ್ತಿಯ ಉಗಮ ಎಲ್ಲಿಂದಾಯಿತು? ಎಂಬುದಕ್ಕೆ ದಾಸರು ಈ ಕೀರ್ತನೆಯಲ್ಲಿ ಸೂಚನೆಕೊಡುತ್ತಾರೆ. ಗುರುಗಳು ಪ್ರಹ್ಲಾದರಾಜರ ಅವತಾರzಲ್ಲಿ ಭಕ್ತಿಯ ಸ್ವರೂಪವನ್ನು ಧರೆಗೆ ಅರುಹಿದ ಮಹಾಪುರುಷರು. ತಮ್ಮ ಧೃಢವಾದ ಭಕ್ತಿಯಿಂದ ಕಂಬದಲ್ಲಿ ನರಹರಿಯ ಪ್ರತ್ಯಕ್ಷೀಕರಿಸಿಕೊಂಡವರು. ಇನ್ನು ಎರಡನೆಯ ಅವತಾರವಾದ ವ್ಯಾಸರಾಜರಾಗಿ ಅವತರಿಸಿದಾಗ ರಾಶಿರಾಶಿಗ್ರಂಥಗಳ ರಚನೆಗೆ ಕಾರಣರಾಗಿ, ಪ್ರೇರಕರಾಗಿ ಜ್ಞಾನ ಪ್ರಸಾರಮಾಡಿದ ಪರಮಜ್ಞಾನಿಗಳು. ಇನ್ನು ಮೂರನೆಯ ಅವತಾರವೆಂದರೆ ಗುರುಸುಧೀಂದ್ರರ ಕರಕಮಲ ಸಂಜಾತರಾದ ಶ್ರೀರಾಘವೇಂದ್ರತೀರ್ಥರ ಅವತಾರ. ಗುರುಗಳು ನರಹರಿಪಾದ ಸೇವೆಯೆ ತಮಗೆ ಪರಮ ಸಂಪದವೆAದು ಭಕ್ತಿಯಲ್ಲಿ ನಿರತರಾದವರು. ಶ್ರೀರಂಗನ ಅಂತರAಗ ಭಕ್ತರು. ಪರಮಜ್ಞಾನಿಗಳಾದ ಇವರು ಮೋದತೀರ್ಥರ ಮತವನ್ನು ಅನುಸರಿಸಿದವರು, ಜನಕೆ ಸಾರಿದವರು.

         ಕಾಮಧೇನು ಕಲ್ಪವೃಕ್ಷ, ಚಿಂತಾಮಣಿಯAದು ಖ್ಯಾತರಾದ ಗುರುಗಳ ಕಾರುಣ್ಯಕೆ ಎಣೆ ಇಲ್ಲಾ. ನಾನಾವಿಧ ಭಕ್ತರು-ನಾನಾವಿಧವಾದ ಬಯಕೆಯನ್ನು ಸಲ್ಲಿಸುತ್ತಾರೆ. ಇವರಲ್ಲಿ ಬೇಡಿ ಬಂದವರಿಗೆ ನಿರಾಶೆಯೇ ಇಲ್ಲ. ತಮಗೇನು ಬೇಕೋ ಅದನ್ನು ಖಂಡಿತಾ ಪಡೆದುಕೊಳ್ಳುತ್ತಾರೆ. ಜ್ಞಾನಬೇಕಾದರೆ

        `ಮದಡನಾದರೂ ಇವರ ಮುದದಿ ಬೇಡಲು

        ಬುಧನು ಆಗುವ ಶುಭದ ಉದಯ ನೋಡುವ”

ಇನ್ನು ಇವರ ಮೃತ್ತಿಕೆಯನ್ನು ಭಕ್ತಿಯಿಂದ ನಿತ್ಯ ಸೇವಿಸಲು ಮುಕ್ತಿಯೇ ದೊರೆಯುವದು. ಇವರ ಪಾದೋದಕದ ಸ್ವೀಕರಿಸಲು ಭೂತಗಣಗಳು ಸೊತು ಬೀಳ್ವವು. ನಾಮಸ್ಮರಣೆಗೆ ರೋಗಗಳೆಲ್ಲವೂ ನಿವಾರಣೆಯಾಗುವವು. ಗುರುಗಳನ್ನು ಕೈಯತ್ತಿ ಮುಗಿಯಲು ಬಯಕೆಗಳೆಲ್ಲವು ಕೈಗೂಡುವವು.ಇವರ ಚರಣಕಮಲಗಳಿಗೆ ಶರಣುಬಂದರೆ ಸ್ವತಃ ಕಾಮಧೇನುವಾಗುವರು. ಇವರು ಶುಭದ ಗುಣನಿಧಿಯಾಗಿದ್ದಾರೆ, ದಿನಮಣಿಯಂತೆ ಪ್ರಕಾಶಮಾನರಾಗಿದ್ದಾರೆ.

     “ ಕರುಣಸಾಗರನೆಂಬ ಬಿರುದು ಧರೆಯೊಳು

      ಮೆರೆಯುತ್ತಿಪ್ಪುದು ರವಿಯ ಕಿರಣನಂದದಿ

      ಯೋಗಿವರ್ಯ ಶ್ರೀರಾಘವೇಂದ್ರರ

      ಭೋಗಭಾಗ್ಯಕೆ ಯೋಗ್ಯರಾಗಿರೋ” ಎಂದು ಗುರುಗಳ ಕಾರುಣ್ಯ ಪಡೆದುಕೊಳ್ಳಬೇಕಾದರೆ ಒಂದು ಸುಲಭವಾದ ಮಾರ್ಗವಿದೆ. ಅದಾವುದೆಂದರೆ ಶ್ರೀಅಪ್ಪಣಾಚಾರ್ಯರು ಗುರು ಕರುಣಾ ಕಟಾಕ್ಷದಿ ಸ್ತೋತ್ರಮಾಡಿದ್ದಾರೆ. ಗುರುರಾಯರ ಭಕ್ತರೆಲ್ಲರೂ ಈ ಸ್ತೋತ್ರವನ್ನು ಪಠಿಸಿ ಹರುಷಪಡುತ್ತಾರೆ. ಎಂದು ಗುರುಗಳ ಸ್ತೋತ್ರದ ಮಹತ್ವನ್ನು ಸಾರಿದ್ದಾರೆ.

         “ ಮಣಿದುಬೇಡಿರೋ ಕುಣಿಕುಣಿದು ಪಾಡಿರೋ

           ಎಣಿಕೆಯಿಲ್ಲದ ವರಗಳೆಣಿಸಿಗಳಿಸಿರೋ

           ದೋಷದೂರ ಶ್ರೀರಾಘವೇಂದ್ರರ

           ಈಶನೆಂಬರೂ ಸಂತೋಷ ಭರಿತರು”

ಎಂದು ಭಕ್ತಿಯಲ್ಲಿ ಶುಧ್ಧ ಭಾವಪರವಶತೆಯು ಮಹದಾನಂದ ನೀಡುತ್ತದೆ. ಉದಯಕಾಲದಲ್ಲಿ ಇವರ ಸ್ಮರಿಸಿದರೆ ದಿವ್ಯ ಪದವಿ ದೊರೆಯುವದು. ನಿತ್ಯ ಇವರನ್ನು ಸ್ತುತಿ ಮಾಡಲು ನಿಶ್ಚಯವಾಗಿ ಸರ್ವ ಸಿದ್ಧಿಯಾಗುತ್ತದೆ. ಮೋದದಿಂದಲಿ ಇವgನ್ನುÀ ಪಾಡಿದರೆ ಸದ್ಭೋದೆ ದೊರೆಯುವದು, ಇವರ ನಾಮಸ್ಮರಣೆ ಮಾಡಿ ದನ್ಯರಾಗಿರೋ’ ಎಂದು ಗುರುಗಳ ಮಹಿಮೆಯನ್ನು ದಾಸರು ಮನದುಂಬಿ ಕೊಂಡಾಡುತ್ತಾರೆ. ಇಂಥಾಗುರುಗಳ ದಯದಿಂದ ಮಂತ್ರಾಲಯ ಕ್ಷೇತ್ರವು ಇಂದ್ರವೈಭವದಿAದ ಮೆರೆಯುತ್ತಿದೆ.

          “ ಇಂದು ನೋಡಿರೋ ಇವರ ಚಂದವೈಭವ

            ಎಂದೂ ಕಾಣದಾ ಆನಂದದನುಭವ

            ದೇಶ ದೇಶದ ಜನರು ದಾಸರಾಗುತ

            ಸೂಸು ಕರುಣದ ನಿಧಿಯ ರಾಶಿ ಕಂಡರು”

ಎಂದು ಶ್ರೀಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ನಡೆಯುತ್ತಿರುವ ಸಂಭ್ರಮ, ವೈಭವ ಎಂಥವರನ್ನೂ ಮೋಹಗೊಳಿಸುತ್ತದೆ. ಭಕ್ತರಿಂದ ಕೂಡಿದ ಕ್ಷೇತ್ರವು ಭಕ್ತಿಯ ಪಾಲ್ಗಡಲಂದದಿ ಶೋಭಿಸುತ್ತದೆ. ಇಂಥಾಯೋಗಿಗೆ ಶಿರಬಾಗಿ ಜ್ಞಾನ-ಭಕ್ತಿ-ವೈರಾಗ್ಯ ಬೇಡಿಕೊಳ್ಳೋಣ. ಕೃತಾರ್ಥರಾಗೋಣ.

ಡಾ,ಶೀಲಾದಾಸ,ರಾಯಚೂರು

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.