ವಚನಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನದ ನೆಲೆಗಳು

 ವಚನಸಾಹಿತ್ಯದಲ್ಲಿ ವ್ಯಕ್ತಿತ್ವ ವಿಕಸನದ ನೆಲೆಗಳು

ವಚನಸಾಹಿತ್ಯ ವಿಶ್ವ ಕಂಡ ಅನುಪಮ ಸಾಹಿತ್ಯ, ನುಡಿದಂತೆ ನಡೆಯುವ ನಡೆದಂತೆ ನುಡಿಯುವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಜನಮಾನಸ ತಲುಪಿದ ಸಾಹಿತ್ಯ. ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಸಮಾಜದ ಎಲ್ಲಾ ಆಯಾಮಗಳಲ್ಲಿ ವಿನೂತನವಾದ ಬದಲಾವಣೆಗಳಾದವು.ಅವುಗಳಲ್ಲಿ ಸಾಹಿತ್ಯಿಕ ಬದಲಾವಣೆಯೂ ಒಂದಾಗಿದೆ. ಪಾಂಡಿತ್ಯಮಾನ್ಯವಾದ, ಆಸ್ಥಾನದಲ್ಲಿಯೇ ಅಸ್ವಾದಿಸಬಹುದಾದ ಸ್ಥಿತಿಯಿಂದ ಸಾಮಾನ್ಯರೂ ಓದಬಹುದಾದ ಸಾಮಾನ್ಯರಿಂದ ಸಾಮಾನ್ಯರಿಗಾಗಿ ರೂಪಿತವಾದ ಸಾಹಿತ್ಯ ವಚನಸಾಹಿತ್ಯ. ವಚನಕಾರರ ಉದ್ದೇಶ ಸಾಹಿತ್ಯ ರಚಿಸುವುದಲ್ಲ. ಮಾತಿನ ಮುಖಾಂತರ ಜನರಲ್ಲಿ ಅರಿವು ಮೂಡಿಸುವುದೇ ಆಗಿದೆ. ಆ ಮಾತುಗಳು ಇಂದು ಮಂತ್ರಸದೃಶ್ಯವಾದ ವಚನಗಳಾಗಿವೆ. ಇವುಗಳ ಮುಖಾಂತರ ಸಮಾನತೆಯ ಸಮಾಜವನ್ನು ಕಟ್ಟಲು ಬಯಸಿದವರು ವಚನಕಾರರು.

       ಭಾರತದ ಆಧ್ಯಾತ್ಮಿಕ ಸಾಹಿತ್ಯವನ್ನು ಅವಲೋಕಿಸಿದಾಗ ಎಲ್ಲಾ ಮತ-ಪಂಥಗಳ ಸಾಹಿತ್ಯದ ಉದ್ದೇಶ ಮಾನವನ ಸರ್ವತೋಮುಖ ಅಭಿವೃದ್ಧಿ. ಅದರಮುಖೇನ ಸಮಾಜದ ಮತ್ತು ರಾಷ್ಟçದ ಅಭಿವೃದ್ಧಿ ಸರಿಯಷ್ಟೆ.ಇದಕ್ಕೆ ವಚನಸಾಹಿತ್ಯ ಹೊರತಾಗಿಲ್ಲ.

     ಒಂದು ವಸ್ತುವಿನ ಪೂರ್ಣವಾದ ನೋಟಕ್ಕೆ ಎಲ್ಲಾ ಆಯಾಮಗಳನ್ನು ವಿಕ್ಷಿಸುತ್ತೇವೆ. ಅದರಂತೆ ವ್ಯಕ್ತಿಯ ಪರಿಪೂರ್ಣ ವಿಕಸನಕ್ಕೆ ಅನೇಕ ಆಯಾಮಗಳಿವೆ. ಭಾರತೀಯ ಶಾಸ್ತçಗಳ ಪ್ರಕಾರ ವ್ಯಕ್ತಿತ್ವದ ಪೂರ್ಣ ಗ್ರಹಿಕೆಗೆ ನಾಲ್ಕು ಆಯಾಮಗಳಿವೆ. ಶಾರೀರಿಕ ಆಯಾಮ, ಬೌದ್ಧಿಕ ಆಯಾಮ, ನೈತಿಕ ಅಯಾಮ, ಹಾಗೂ ಆಧ್ಯಾತ್ಮಿಕ ಆಯಾಮಗಳೇ ಅಗಿವೆ. ಅದರೆ ಪಾಶ್ಚಾತ್ಯರಲ್ಲಿ ಬಾಹ್ಯ ಬೆಳವಣಿಗೆಗೆ ಹೆಚ್ಚು ಪ್ರಾಶಸ್ಯ÷್ತ ಕಂಡುಬರುತ್ತದೆ. ಆದರೆ ಭಾರತೀಯರಲ್ಲಿ ಆಂತರಿಕ ಸೌಂದರ್ಯೆಕ್ಕೆ ಹೆಚ್ಚು ಪ್ರಾಶಸ್ತöನೀಡಲಾಗಿದೆ

           ವ್ಯಕ್ತಿತ್ವ ವಿಕಸನವು ಬುದ್ಧಿಯ,ಶರೀರದ,ಸ್ವಾಸ್ಥವನ್ನು ಅವಲಂಬಿಸಿದೆ. ನೈತಿಕತೆ ಮತ್ತು ಸಾಧನೆ ಆತ್ಮಶಕ್ತಿಯನ್ನು ವೃದ್ಧಿಸುತ್ತದೆ. ಹೀಗಾಗಿ ಆತ್ಮಶಕ್ತಿಯ ವರ್ಧನೆಯು ವ್ಯಕ್ತಿತ್ವ ವಿಕಸನಕ್ಕೆ ತಳಹದಿಯಾಗಿದೆ. ಇವುಗಳಿಗೆ ಶ್ರದ್ಧೆ,ಪ್ರೀತಿ, ತಾಳ್ಮೆ ಆತ್ಮವಿಶ್ವಾಸ ಧೈರ್ಯ,ಪ್ರಾಮಾಣಿಕತೆ, ಉದಾತ್ತತೆಯಂತಹ ಗುಣಗಳು ವ್ಯಕ್ತತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಈ ತರಹದ ಜೀವಿಗಳು ತಾವೂ ಬೆಳಗುತ್ತಾರೆ ಮತ್ತು ತಮ್ಮ ಸಂಪರ್ಕಕ್ಕೆ ಬಂದವರನ್ನೂ ಬೆಳಗಿಸುತ್ತಾರೆ. ವಚನಕಾರರು ಈ ವಿಚಾರಕ್ಕೆ ಉತ್ತಮ ನಿದರ್ಶನ.

          ತಾಯಿಯು ತನ್ನ ಮಗುವಿನ ಉನ್ನತಿಯನ್ನು ಬಯಸಿ ನೀತಿಯನ್ನು ಕಲಿಸುವಂತೆ ವಚನಕಾರರು ಜನರನ್ನು ಸಮಾಜವನ್ನು ತಿದ್ದಿತೀಡಿದರು. ಜೀವನ ಮೌಲ್ಯವನ್ನು ಬೋಧಿಸಿದರು. `

           “ಕಳಬೇಡ,ಕೊಲಬೇಡ, ಹುಸಿಯ ನುಡಿಯಲು ಬೇಡ,ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,ತನ್ನ ಬಣ್ಣಿಸ ಬೇಡ,ಇದಿರು ಹಳಿಯಲು  ಬೇಡ, ಇದೇ ಅಂತರAಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೆ ನಮ್ಮ ಕೂಡಲಸಂಗನ ಒಲಿಸುವ ಪರಿ’’ ಎನ್ನುವ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ಮೇಲ್ನೋಟಕ್ಕೆ ಇದು ಸರಳವಾದ ವಚನ. ಆದರೆ ಬದುಕಲು ಕಷ್ಟವಾದದ್ದು. ಇತರರನ್ನು ಹಳಿಯುವ ನನ್ನನ್ನು ಬಣ್ಣಿಸಿಕೊಳ್ಳುವ ಗುಣವಂತೂ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ಒಂದೊAದು ಮಾತುಗಳೂ ನಮ್ಮ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮೂಲವಾಗಿವೆ.

          ಉತ್ತಮ ವ್ಯಕ್ತಿತ್ವಕ್ಕೆ ಮತ್ತೊಂದು ಕಾರಣ ವೆಂದರೆ ಸಜ್ಜನರ ಸಂಗ. ದೇವರಲ್ಲಿ ನಾವು ಪ್ರಾರ್ಥಿಸಿಕೊಳ್ಲುವುದು ಎರಡನ್ನು ಮಾತ್ರ. ಒಂದು ಸಜ್ಜನರ ಸಂಗ ಮಾಡಿಸು, ಇನ್ನೊಂದು ದುರ್ಜನರ ಸಂಗವನ್ನು ಬಿಡಿಸು ಎಂಬುದಾಗಿದೆ. ಇವೆರಡು ಅಂಶಗಳನ್ನು ಪಾಲಿಸಿದರೆ ಸಾಕು ಮನುಷ್ಯ ಉತ್ತಮನಾಗುತ್ತಾನೆ.

      “ ಸಾರ ಸಜ್ಜನರ ಸಂಗವ ಮಾಡು ದೂರ ದುರ್ಜನ ಸಂಗ ಬೇಡವಯ್ಯ

        ಆವ ಹಾವಾದರೇನು ವಿಷವೊಂದೆ, ಅಂಥವರ ಸಂಗ ನಮಗೆ ಬೇಡವಯ್ಯ

        ಅಂತರAಗ ಶುದ್ಧವಿಲ್ಲದವರ ಸಂಗ ಸಿಂಗಿ ಕಾಳಕೂಟ ವಿಷವೋ ಕೂಡಲ ಸಂಗಯ್ಯ’’ ಎಂದಿದ್ದಾರೆ. ಕಾಳಕೂಟದ ವಿಷ ಎಷ್ಟು ಅಪಾಯಕಾರಿಯೋ ಅಷೇ ಅಪಾಯಕಾರಿ ದುರ್ಜನರು ಎಂಬುದನ್ನು ಮನ ಮುಟ್ಟುವಂತೆ ತೀಳಿಸಿದ್ದಾರೆ.

     ಇಷ್ಟೆಲ್ಲಾ ದೋಷಗಳು ನಮ್ಮಲ್ಲಿ ಇದ್ದರೂ ಇತರರನ್ನು ಹಳಿಯದೆ ಬಿಡುವುದಿಲ್ಲ. ಅದಕ್ಕೆ “ಲೋಕದಡೊಂಕ ನೀನೇಕೆ ತಿದ್ದುವಿರಿ ನಿಮ್ಮ ನಿಮ್ಮ ನಮವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ’’ ಎಂಬಲ್ಲಿ ಇತರರನ್ನು ನೋಡಿ ಕರಬುವ ಸ್ವಭಾವ ನಮ್ಮದಾಗಿರಬಾರದು. ನಮ್ಮನ್ನು ನಾವು ತಿದ್ದಿಕೊಂಡು ಬದುಕಬೇಕು. ಅರಿವೇ ಗುರುವಾಗಬೇಕು ಎಂಬುದೇ ತಾತ್ಪರ್ಯ.

         ಬರೀ ಓದು ಗಿಳಿಯ ಪಾಠವಿದ್ದಂತೆ. ನಿಜಬಾದ ಶಿಕ್ಷಣ ಮನುಷ್ಯನಲ್ಲಿ ಮಾನವೀಯತೆಯನ್ನು ಹುಟ್ಟುಹಾಕಬೇಕು“ ನೂರನೋದಿ ನೂರಕೇಳಿದರೇನು? ಆಸೆ ಹರಿಯದ ರೋಷ ಮುರಿಯದ ಮಜ್ಜನಕೆರೆದು ಫಲವೇನು ಮಾತಿನಂತೆ ಮನವಿಲ್ಲದ ಡಾಂಭಿಕ ಭಕ್ತರನೊಲ್ಲಾ ನಮ್ಮ ಕೂಡಲ ಸಂಗಮದೇವಾ’

 ನಡೆನುಡಿ ಒಂದಾದದ್ದೇ ನಿಜವಾದ ಭಕ್ತಿ. ಸಾಧನೆ ನಡೆ ನುಡಿ ಬೇರೆ ಯಾಗಿದ್ದರೆ ಅದು ಭಕ್ತಿಯೇ ಅಲ್ಲ ಎಂಬುದನ್ನು ನಿರ್ಧಾಕ್ಷಿಣ್ಯವಾಗಿ ನುಡಿಯುತ್ತಾರೆ. ಇಂತಹ ಡಾಂಭಿಕ ಭಕ್ತಿಗೆ ದೃಷ್ಟಾಂತವನ್ನು ನೀಡಿದ್ದಾರೆ. `ಒಲವಿಲ್ಲದ ಪೂಜೆ ನೇಹವಿಲ್ಲದಾ ಮಾಟ ಚಿತ್ರದ ಕಬ್ಬಿನಂತೆ ಅಪ್ಪದರೆ ಸುಖವಿಲ್ಲ. ಮೆಲಿದರೆ ಸವಿ ಇಲ್ಲ. ಎಂದು ಭಕ್ತಿಯ ಸ್ವರೂಪವನ್ನು ತಿಲಿಸುತ್ತಾರೆ.

       ಅಹಂಕಾರ ಎಂಬುದು ವ್ಯಕ್ತಿತ್ವ ನಿರ್ಮಾಣದಲ್ಲಿ ತೊಡಕನ್ನು ಉಂಟುಮಾಡುತ್ತದೆ.“ ಹಾವುತಿಂದವರ ನುಡಿಸ ಬಹುದು ಗರಬಡಿದವರ ನುಡಿಸಬಹುದು ಆದರೆ ಸಿರಿಗರ ಬಡೆದವರ ನುಡಿಸಲು ಬಾರದು ನೋಡಯ್ಯ ಎಂದು ನಶ್ವರವದ ಸಂಪತ್ತನ್ನು ನಚ್ಚಬಾರದು. ನಿಜವಾದ ಸಂಸಪತ್ತು ಎಂದರೆ ಜ್ಞಾನ ಮಾತ್ರ ಎಂದು ಅಹಂಕಾರದ ಕುರಿತು ಎಚ್ಚರಿಸುತ್ತಾರೆ.

        ಈ ರೀತಿ ತಿಳಿದು ನೋಡಿದರೆ ಇಲ್ಲಿಯೇ ಸ್ವರ್ಗ ಇಲ್ಲಿಯೇ ನರಕ ಇದೆ. ಅದು ಮೇಲೆ ಇದೆ ಎಂದು ತಿಳಿಯುವುದು ಅಜ್ಞಾನದ ಸಂಕೇತವಾಗಿದೆ. ಹಾವು ಹದ್ದು ಕಾಗೆ ಗೂಗೆ ಹಲವು ಕಾಲ ಬದುಕುತ್ತವೆ. ಅದು ಸಾರ್ಥಕ ಬದುಕೇ? ಮನುಷ್ಯ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು. ಮನುಷ್ಯ ಜನ್ಮ ಬಂದಾಗ ಪ್ರಾಣಿಗÀಳಂತೆ ಅಸನ ವ್ಯಸನಕ್ಕೆ ಬದುಕದೆ ಸಮಾಜ ಮುಖಿಯಾಗಿ ಬದುಕಬೇಕೆಂದು ಸೂಚಿಸುತ್ತಾರೆ. ಈ ಎಲ್ಲಾ ವಿಚಾರಗಳು ಉತ್ತಮ ವ್ಯಕ್ತಿತ್ವ ನಿರ್ಮಾಣಮಾಡುವಲ್ಲಿ ಮುಖ್ಯವಾಗಿವೆ. ಪ್ರತಿಯೊಂದು ವಚನಗಳು  ವ್ಯಕ್ತಿಯ ವ್ಯಕ್ತಿ÷್ವವ ರೂಪಿಸುವಲ್ಲಿ ಸಹಾಯಕಾರಿಯಾಗಿವೆ.

       ಪ್ರಾಚೀನ ಕಾಲದಿಂದಲೂ ವಚನಗಳನ್ನು ಓದುವ ಹಾಡುವ ಪರಿಪಾಠ ಇತ್ತು. ಈಗ ಮುಂದುವರೆದಿದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಉತ್ತಮ ಪ್ರಜೆಗಳನ್ನು ನಿರ್ಮಿಸುವಲ್ಲಿ ವಚನಗಳ ಪಾತ್ರ ಹಿರಿದೆಂದು ತಿಳಿದು ಸಾಂಸ್ಕೃತಿಕ ಸಂಘಸAಸ್ಥೆಗಳು, ಮಠಮಾನ್ಯಗಳು ಮಕ್ಕಳಿಗೆ ವಚನ ಸಾಹಿತ್ಯದ ಕಂಠಪಾಠ ಮಾಡಿಸಿ ಹಾಡಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಮೊದಲು ಮಕ್ಕಳು ಪದಗಳ ಸಂಗ್ರಹ ಮಾಡಿಕೊಳ್ಲುತ್ತಾರೆ. ನಂತರ ಅವುಗಳನ್ನು ಮನನ ಮಾಡಿಕೊಳ್ಳುತ್ತಾರೆ. ಮಕ್ಕಳಿಗೆ ಅರಿವಿಲ್ಲದೆಯೇ ಉತ್ತಮ ವ್ಯಕ್ತಿತ್ವ ನಿರ್ಮಾವಾಗುತ್ತದೆ. ಅದ್ದರಿಂದ ವಚನಗಳು ವಿಶ್ವಮಾನ್ಯವಾಗಿವೆ.

 ಡಾ.ಶೀಲಾದಾಸ,ರಾಯಚೂರು.

 ೯೪೪೮೯೭೩೬೭೦

ಆಕರಗ್ರಂಥಗಳು.

೧)           ಬಸವಣ್ಣನವರ ವಚನಸಂಪುಟ

ಡಾ.ಎಮ್ ಎಮ್ ಕಲಬುರಗಿ

ಪ್ರಧಾನಸಂಪಾದಕರು

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.