ಭಾರvದÀ ಸ್ವಾತಂತ್ರö್ಯಪೂರ್ವದಲ್ಲಿ ಕನ್ನಡನಾಡಿನ ಪ್ರದೇಶ ಮುಂಬೈಪ್ರಾAತ, ಮದ್ರಾಸಪ್ರಾಂತ, ನಿಜಾಂಸAಸ್ಥಾನ ಹಾಗೂ ಮೈಸೂರುಪ್ರಾಂತವೆAಬ ಭಾಗಗಳಾಗಿ ಹಂಚಿಹೋಗಿತ್ತು. ಅದರಲ್ಲಿ ಬೀದರ, ಕಲಬುರಗಿ, ರಾಯಚೂರು ಜಿಲ್ಲೆಗಳು ನಿಜಾಂ ಸರಕಾರದಲ್ಲಿದ್ದವು. ಉರ್ದು ಆಡಳಿತ ಭಾಷೆಯಾಗಿತ್ತು, ತೆಲುಗು ಮತ್ತು ಮರಾಠಿ ಭಾಷೆಗಳ ಪ್ರಭಾವ ಹೆಚ್ಚಾಗಿತ್ತು. ಈ ಪರಸ್ಥಿತಿ ಆಗಿನ ಹಿರಿಯರಿಗೆ ವ್ಯಥೆಯನ್ನುಂಟುಮಾಡಿತ್ತು. ಈ ಸಂದರ್ಭದಲ್ಲಿ ಕನ್ನಡದ ಕಹಳೆಯನ್ನು ಊದಿದವರು ಕಪಟರಾಳ ಕೃಷ್ಣರಾಯರು. ಇವರೊಂದಿಗೆ ಪೂಜ್ಯ ದೊಡ್ಡಪ್ಪ ಅಪ್ಪನವರು ಸಾಥ ನೀಡಿದ್ದರು. ಇವರೊಂದಿಗೆ ಅನೇಕ ಮಹನಿಯರು ಪಲ್ಗೊಂಡಿದ್ದರು. ಅಂಥವರಲ್ಲಿ ತವಗ ಭೀಮಸೇನರಾಯರೂ ಒಬ್ಬರು.
ಇವರು ಮೂಲತಃ ಲಿಂಗಸೂಗೂರು ತಾಲ್ಲೂಕಿನ ತವಗ ಗ್ರಾಮದವರು. ೧೯೦೮ ರಲ್ಲಿ ಜನಿಸಿದರು .ತಂದೆ ಶ್ರೀನಿವಾಸರಾವ ತಾಯಿ ನರಸುಬಾಯಿ. ರಾಮರಾಯ, ಮದ್ವರಾಯ, ಲಕ್ಷö್ಮಣರಾಯ ಸಹೋದರರು ಮತ್ತು ಮೂರುಜನ ಸಹೋದರಿಯರು. ತುಂಬು ಕುಟುಂಬ. ತಂದೆ ತೆರಿಗೆ ಸಂಗ್ರº ಕಚೇರಿಯಲ್ಲಿ ಕಾgಕೂನÀರಾಗಿ ವೃತ್ತಿ ಮಾಡುತ್ತಿದ್ದರು. ಬಾಲ್ಯದಲ್ಲಿ ತವಗರ ಸ್ವಭಾವ ಉಳಿದ ಮಕ್ಕಳಿಗಿಂತ ಭಿನ್ನವಾಗಿತ್ತು. ತಂದೆತಾಯಿಯರ ಪ್ರೀತಿ ಮತ್ತು ಸಿಟ್ಟಿನ ಸಂದರ್ಭಗಳ ಕುರಿತು ಹೀಗೇಕೆ? ಎಂದು ಚಿಂತನೆ ಮಾಡುತ್ತಿದ್ದರು. ಇನ್ನೊಂದು ಸ್ವಭಾವವೆಂದರೆ ಸ್ವಮೂತ್ರ ಸೇವನೆ. ಮೊದಲು ಓದಿನಲ್ಲಿ ಇವರಿಗೆ ಆಸಕ್ತಿ ಇರಲಿಲ್ಲ. ತಂದೆಯ ಅಕಾಲಿಕ ಮರಣ ಕುಟುಂಬವನ್ನು ತಲ್ಲಣಗೊಳಿಸಿತು. ತಾಯಿ ನರಸುಬಾಯಿಯವರು ಧೈರ್ಯವಂತೆ. ಮಕ್ಕಳನ್ನು ಕಷ್ಟಪಟ್ಟು ಸಾಕುತಿದ್ದರು. ಬಾವಿಯಿಂದ ಮನೆಗೆ ನೀರುತರುವುದು, ದನಕರುಗಳಿಗೆ ಮೇವುತರುವುದು, ತಾವೇ ಕಟ್ಟಿಗೆ ಸಂಗ್ರಹ ಮಾಡುತ್ತಿದರು. ಯಾರಾದರೂ ತಂಟೆಗೆ ಬಂದರೆ ಧ್ಯರ್ಯದಿಂದ ಎದುರಿಸುತ್ತಿದ್ದರು. ಇವರ ಕಷ್ಟವನ್ನು ನೋಡಲಾರದೆ ಸೋದರತ್ತೆ ರಿಂದಮ್ಮನವರು ಭೀಮಸೇನರಾಯರನ್ನು ಹುಣಸಿಗಿಗೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಂದ ಅವರ ಜೀವನದ ವಿಧಾನ ಬೇರೆಯಾಗುತ್ತದೆ.
ಹುಣಸಿಗಿಯಲ್ಲಿ ಒಂದರಿAದ ನಾಲ್ಕನೆಯ ತರಗತಿಯವರೆಗೆ ಅಧ್ಯಯನ ಮಾಡುತ್ತಾರೆ. ಬೋರ್ಡ ಪರೀಕ್ಷೆ ಪಾಸುಮಾಡುತ್ತಾರೆ. ಮುಂದಿನ ಅಧ್ಯಯನಕ್ಕಾಗಿ ರಾಯಚೂರಿಗೆ ಬರುತ್ತಾರೆ. ಚಿಕ್ಕಪ್ಪನವರಾದ ಕೆರೂರು ಕೃಷ್ಣರಾಯರ (ತಾಯಿಯ ತಂಗಿಯ ಗಂಡ) ಮನೆಯಲ್ಲಿ ವಾಸ್ತö್ಯವ ಹೂಡುತ್ತಾರೆ. ಇವರು ಕೆಂಡದAಥ ಮನುಷ್ಯರೆಂದೇ ಖ್ಯಾತರಾಗಿರುತ್ತಾರೆ. ಇವರಮನೆಯಲ್ಲಿ ಅಧ್ಯಯನ ಮಾಡುವುದೆಂದರೆ ಭಯವೇ ಆಗಿತ್ತು. ಇವರಿಗೆ ಪಂಡಿತ ತಾರಾನಾಥರು ಸ್ಥಾಪಿಸಿದ ಹಮದರ್ದ ಶಾಲೆಯಲ್ಲಿ ಪ್ರವೇಶ ಕೊಡಿಸುತ್ತಾರೆ. ಇಂಗ್ಲೀಷ ಮಾಧ್ಯಮವಾಗಿರುವುದಿಂದ ಭಯಪಟ್ಟುಕೊಂಡು ಉರ್ದು ಶಾಲೆಗೆ ಸೇರುತ್ತಾರೆ. ಉರ್ದು ಶಾಲೆಯಲ್ಲಿ ಇವರಿಗೆ ಮಾಸಿಕ ಹನ್ನೆರಡುರುಪಾಯಿ ವಿದ್ಯಾರ್ಥಿವೇತನ ಬರುತ್ತದೆ. ಅದನ್ನು ಇಂಗ್ಲೀ಼ಷ ಪುಸ್ತಕ ತೆಗೆದುಕೊಂಡು ಅಧ್ಯಯನ ಮಾಡ ತೊಡಗುತ್ತಾರೆ. ಹೀಗೆ ಮಾಧ್ಯಮಿಕ ಅಧ್ಯಯನ, ಪ್ರೀ ಇಂಟರ್ ಮೀಡಿಯಟ್ ರಾಯಚೂರಿನಲ್ಲಿ ಪೂರೈಸಿ ಇಂಟರ್ ತರಗತಿಗಾಗಿ ಕಲಬುರಗಿಗೆ ಹೋಗುತ್ತಾರೆ. ಅಲ್ಲಿಯೂ ಉರ್ದು ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಆರಂಭವಾಯಿತು. ಅಲ್ಲಿ ವಸತಿ ಮ್ಯಾನೇಜರ ಅಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲಿಂದಲೇ ಅವರ ನಾಯಕತ್ವಗುಣ ಅರಂಭವಾಗುತ್ತದೆ. ಮ್ಯಾಟ್ರಿಕ್ ಪಾಸುಮಾಡುತ್ತಾರೆ. ಮ್ಯಾಟ್ರಿಕ್ ಪಾಸು ಮಾಡಿ ನೌಕರಿಗೆ ಹೋದರೆ ೪೦ ರೂಪಾಯಿ ಸಂಬಳ.ಅವರ ಕುಟುಂಬ ನಿರ್ವಹಿಸಲು ಕನಿಷ್ಟ ಎರಡುನೂರು ರೂಪಾಯಿ ಬೇಕು. ಅದರ ಬದಲು ಬಿಎ ಮಾಡಿದರೆ ಎರಡು ನೂರು ರೂಪಾಯಿ ಬರುತ್ತದೆ ಎಂದು ತಾಯಿ ಬಿ.ಎ. ಮಾಡಲು ಸೂಚಿಸುತ್ತಾಳೆ. ಆರ್ಥಿಕ ಸಮಸ್ಯ ಎದುರಾಗುತ್ತದೆ. ಆದರೆ ಹೆದರದೆ ಪಾಲುಮೂರು ಗೋವಿಂದರಾಯರು, ಚಿಂಚೋಳಿ ಜಯತೀರ್ಥಆಚಾರಿ, ಗಬ್ಬೂರುರಾಘು, ಸೇಡಂ ವೆಂಕೋಬ, ಗೋರ್ಕಲ್ ಆನಂದರಾಯ, ಅನ್ನಪೂರ್ಣಯ್ಯ ನಂತಹ ಸ್ನೇಹಿತರ ಸಹಾಯದಿಂದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಳ್ಳುತ್ತಾರೆ. ಅಲ್ಲಿಯೂ ವಿದ್ಯಾರ್ಥಿವೇತನ ಬರುತ್ತದೆ. ಇದೇ ಸಮಯದಲ್ಲಿ ಸಹೋದರ ಮಧ್ವರಾಯ ಬಡವರಿಗಾಗಿ ಇರುವ ವಸತಿ ಗೃಹದಲ್ಲಿ ವಾಸಮಾಡುತ್ತಿರುತ್ತಾರೆ. ಅಲ್ಲಿ ಅವರಿಗೆ ಊಟ ಸರಿ ಹೋಗುತ್ತಿರಲಿಲ್ಲ. ಆಗ ಇವರು ತಮ್ಮ ಪಾಲಿನ ಊಟವನ್ನು ತಮ್ಮನಿಗೆ ನೀಡುತ್ತಿರುತ್ತಾರೆ. ಒಮ್ಮೆ ಜೂರಟಗಿ ಶ್ರೀನಿವಾಸರಾಯರು ಇವರನ್ನು ಮುಜಮದಾರ ಶ್ರೀನಿವಾಸರಾವ ರನ್ನು ಭೇಟಿ ಮಾಡಿಸುತ್ತಾರೆ. ಇವರು ವೃತ್ತಿಯಿಂದ ವಕೀಲರು. ಇವರಿಗೆ ಮಕ್ಕಳಿರಲಿಲ್ಲ. ಗುಡುಗುಂಟಿ ಸಂಸ್ಥಾನದ ಅಡಳಿತವನ್ನು ಇಲ್ಲಿಂದಲೇ ನೋಡಿ ಕೊಳ್ಳುತ್ತಿದ್ದರು. ಇವರನ್ನು ತಮ್ಮ ಮನೆಯಲ್ಲಿ ಇರಲು ಹೇಳಿ ಬಿಂದುರಾಯನಿಗೆ ಇಂಗ್ಲೀಷ ಪಾಠಮಾಡುವ ಕೆಲಸವನ್ನು ಒಪ್ಪಿಸುತ್ತಾರೆ. ಇಲ್ಲಿಂದ ಇವರ ಬಾಳಿನಲ್ಲಿ ಅಧ್ಯಯನ ಮತ್ತು ಅಧ್ಯಾಪನ ಕೆಲಸ ಆರಂಭವಾಗುತ್ತೆ. ಕನ್ನಡ ಮತ್ತು ಸಂಸ್ಕೃತ ಐಚ್ಛಿಕ ವಿಷಯವನ್ನು ತೆಗೆದುಕೊಂಡು ಬಿ.ಎ. ಪರೀಕ್ಷೆ ಮುಗಿಸುತ್ತಾರೆ. ತಾಯಿಗೆ ಮಾತು ಕೊಟ್ಟಂತೆ ಸಂಸಾರದ ಭಾರ ಹೊತ್ತುಕೊಳ್ಳುತ್ತಾರೆ.
ಕೆಲಸಕ್ಕಾಗಿ ವಿವಿಧ ಇಲಾಖೆಗಳಿಗೆ ತಿರುಗಾಡುತ್ತಾರೆ. ತಂದೆ ಕೆಲಸ ಮಾಡಿದ ಕಚೇರಿಯಲ್ಲಿ ಇವರಿಗೆ ನೌಕರಿ ಸಿಗುತ್ತದೆ. ಆದರೆ ಇವರು ಆ ನೌಕರಿ ಮಾಡಲು ಕುದುರೆ ಸವಾರಿ ಕಲಿಯಬೇಕಾಗಿತ್ತು. ಅದಕ್ಕಾಗಿ ಆ ನೌಕರಿಯನ್ನು ಬಿಡುತ್ತಾರೆ. ಇದೇ ಸಮಯಕ್ಕೆ ಕಲಬುರಗಿಯಲ್ಲಿ ಎರಡು ಇಂಟರ್ ಮೀಡಿಯಟ್ ಕಾಲೇಜು ಆರಂಭವಾಗುತ್ತವೆ. ಒಂದು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರ ಅವಶ್ಯಕತೆಯಿತ್ತು. ಆ ಕಾಲೇಜಿನ ಪ್ರಾಂಶುಪಾಲರಾದ `ಹಕ್ಕಾನಿ’ ಯವರು ಉಪನ್ಯಾಸಕರ ಬೇಡಿಕೆಗಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಇವರ ಗುರುಗಳಾದ ಟಿ.ಆರ್.ರಾಮರಾಯರು ಭೀಮಸೇನರಾಯರ ಹೆಸರನ್ನು ಸಿಫಾರಸ್ ಮಾಡಿಸುತ್ತಾರೆ. ಉಪನ್ಯಾಸಕರಾಗಿ ಕಾರ್ಯ ಆರಂಭಿಸುತ್ತಾರೆ.
ತವಗರನ್ನು ಶಿಷ್ಯರೆಲ್ಲರೂ `ಮಾಸ್ತರ’ ಎಂದೇ ಕರೆಯುತ್ತಿದ್ದರು. ತವಗರು ಮಾಸ್ತರ ಕೆಲಸವನ್ನು ಬಹು ಶಿಸ್ತಿನಿಂದ ಮಾಡಿ ಮಾದರಿಯಾದವರು. ಇವರ ಪಾಠ ಪ್ರವಚನಗಳು ತರಗತಿಗೆ ಸೀಮಿತವಾಗಿರಲಿಲ್ಲ. ತರಗತಿಯ ನಂತರ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕುಮಾರವ್ಯಾಸ ಭಾರತ, ಜೈಮಿನಿಭಾರತ, ರಾಮಪಟ್ಟಾಬಿಷೇಕ ದಂತಹ ಕನ್ನಡದ ಕಾವ್ಯಗಳನ್ನು ಓದಿಸುತ್ತಿದ್ದರು. ಕನ್ನಡದ ಕಾವ, ಜಾಣ ಮುಂತಾದ ಪರೀಕ್ಷೆಗಳನ್ನು ಬರೆಯಿಸಿ ಕನ್ನಡವನ್ನು ಜನಪ್ರೀಯಗೊಳಿಸಿದರು. ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು.
ಇಲ್ಲಿಂದ ಇವರ ಬದುಕು ಕನ್ನಡ ಸೇವೆಗೆ ಸಿದ್ಧವಾಯಿತು. ಇವರನ್ನು ಕಲಬುರಗಿಗೆ ಬರಮಾಡಿಕೊಂಡವರಲ್ಲಿ ಬಿ. ಅಶ್ವಥರಾವ ವಕೀಲರು ಪ್ರಮುಖರು. ಕನ್ನಡದ ಕಾಳಜಿಗೆ ಇವರು ಶಕ್ತಿಯಾದರು. ನೀವು ಗಾಳಿ ನಾನು ಬೆಂಕಿ ಇಬ್ಬರೂ ಸೇರಿ ಕನ್ನಡ ಪರ ಕೆಲಸ ಮಾಡೋಣವೆಂದು ತಿಳಿಸುತ್ತಾರೆ. ಇವರ ಮೇಲೆ ಪ್ರಭಾವ ಬೀರಿದ, ಇವರೊಂದಿಗೆ ಕೈ ಜೋಡಿಸಿದ ಮತ್ತೊಬ್ಬ ಕನ್ನಡಾಭಿಮಾನಿಯಂದರೆ ಕಪಟರಾಳ ಕೃಷ್ಣರಾಯರು. ಇವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಕನ್ನಡದ ವಿರುದ್ಧ ಮಾತನಾಡುವವರಿಗೆ ಉತ್ತರಿಸಲು ಕನ್ನಡವನ್ನು ತಲಸ್ಪರ್ಶೀಯಾಗಿ ಕಲಿಯುತ್ತಾರೆ. ಹಳ್ಳಿಹಳ್ಳಿಗೆ ಹೋಗಿ ಜನಪದಿಗರನ್ನು ಪ್ರೋತ್ಸಾಹಿಸುತ್ತಿದ್ದರು. ಶಬ್ದಮಣಿದರ್ಪಣ ಗ್ರಂಥವನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಮನೆಗೆ ಹಿರಿಯ ಸಾಹಿತಿಗಳನ್ನು ಬರಮಾಡಿಕೊಂಡು ಅತಿಥಿ ಸತ್ಕಾರ ಮಾಡುತ್ತಿದ್ದರು. ಭೀಮಸೇನರಾಯರಿಗೂ ಕಪಟರಾಳರಿಗೂ ವಯಸ್ಸಿನ ಅಂತರ ವಿದ್ದರೂ ವಿಚಾರಗಳ ಸಮಾನತೆ ಇತ್ತು. ಇದ್ದದ್ದನ್ನು ಇದ್ದಂತೆ ನುಡಿಯುವ ಮನೋ ಸ್ಥೆöÊರ್ಯ ಇತ್ತು. ಈ ಗುಣವನ್ನು ಇವರಿಂದ ಕಲಿತಿದ್ದೇನೆ ಎಂದು ತವಗರು ಸ್ಮರಿಸಿಕೊಳ್ಳುತ್ತಾರೆ. ಇವರ ಮೇಲೆ ಪರಿಣಾಮ ಬೀರಿದ ಮತ್ತೊಬ್ಬ ವ್ಯಕ್ತಿಯಂದರೆ ಭೀಮಸೇನರಾವ ದೇಸಾಯಿ. ಇವರು ತವಗರ ಶೀಷ್ಯರು. ಇವರು ವಿದ್ಯಾಭ್ಯಾಸವನ್ನು ನಿಲ್ಲಿಸಿ ಆದ್ಯಾತ್ಮದ ಕಡೆಗೆ ತೊಡಗಿಸಿಕೊಂಡರು. ಜನ ಇವರನ್ನು `ಭೀಮಜ್ಜ’ಎಂದು ಕರೆಯತೊಡಗಿದರು. ಇವರನ್ನು ನೋಡಿದಾಗ ಹಿಂಸೆಯನ್ನು ಗೆದ್ದ ಅಹಿಂಸೆಯAತೆ ಕಾಣುತ್ತಿದ್ದರು. ಮತ್ತೊಬ್ಬ ಪ್ರಭಾವಿ ವ್ಯಕ್ತಿ ಎಂದರೆ ಎಮ್.ಪಿ ಜಾಲಿಯವರು ದಕ್ಷ ಆಡಳಿತಗಾರರು. ಸಾಹಿತ್ಯ ಪರಿಷತ್ತು ಹಾಕಿಕೊಂಡ ಕಾರ್ಯಕ್ರಮಗಳಿಗೆ ಬೆನ್ನೆಲಬಾಗಿ ನಿಂತವರು. ತವಗರ ಕನ್ನಡಪರ ಕಾರ್ಯ ಚಟುವಟಿಕೆಗಳನ್ನು ಮೆಚ್ಚುತ್ತಿದ್ದರು. ಅದಕ್ಕೆ ತವಗರು `ಇವರ ಹೆಸರಿನಲ್ಲಿ ಜಾಲಿ ಇದೆ. ಅದರೆ ಇವರ ಮನಸ್ಸಿನಲ್ಲಿ ಮುಳ್ಳಿಲ್ಲ’ ವೆಂದು ಇವರ ವ್ಯಕ್ತಿತ್ವವನ್ನು ಬಣ್ಣಿಸುತ್ತಾರೆ. ತಮ್ಮ ಸಾದನೆಗೆ ಸಹಕಾರ ಮಾಡಿದವರನ್ನು ಮನದುಂಬಿ ಸ್ಮರಿಸುವ ಸ್ವಭಾವ ತವಗರದು.
ಕಲಬುರಗಿ ಭಾಗದಲ್ಲಿ ಉರ್ದು ಮತ್ತು ಮರಾಠಿ ಭಾಷೆಯ ದಟ್ಟವಾದ ಛಾಯ ಆವರಿಸಿತ್ತು. ಕನ್ನಡಿಗರು ಕನ್ನಡ ಮಾತನಾಡದೆ ಮೌನ ವಹಿಸಿದ್ದರು. ಇಂತಹ ಸಂದರ್ಭದಲ್ಲಿ ಬಿ.ಎಮ್.ಶ್ರೀ, ಗೋಕಾಕ, ರಂ.ಶ್ರೀ.ಮುಗಳಿ, ವಿ.ಸೀ,ಯವರನ್ನು ಬರ ಮಾಡಿ ಕೊಂಡು ಕನ್ನಡ ನಾಡು-ನುಡಿಯ ಕುರಿತು ಉಪನ್ಯಾಸವನ್ನು ಏರ್ಪಡಿಸುತ್ತಾರೆ. ಇದರಿಂದ ಇವರ ಜನಪ್ರೀಯತೆ ಹೆಚ್ಚಾಗಿ ಕನ್ನಡ ಸಂಘ ಸ್ಥಾಪನೆಗೆ ಪ್ರೇರಣೆಯಾಯಿತು. ಸಂಘದ ಕಟ್ಟಡ ನಿರ್ಮಾಣಕ್ಕೆ ಆ ಕಾಲದಲ್ಲಿ ೧೧,೦೦೦/- ರೂಪಾಯಿಗಳು ಬೇಕಾಗಿದ್ದವು. ಪಾಂಡುರAಗರಾವ ದೇಶಮುಖ ಮತ್ತು ಕಕ್ಕೇರಿ ಹನುಮಂತರಾವ ವಕೀಲರು ಪ್ರಧಾನವಾಗಿ ಧನ ಸಹಾಯಮಾಡುತ್ತಾರೆ. ಇನ್ನೂ ಕೆಲದಾನಿಗಳು ಶಕ್ತಾನುಸಾರವಾಗಿ ದಾನ ಮಾಡಿ ಕನ್ನಡ ಸಾಹಿತ್ಯ ಸಂಘದ ಕಟ್ಟಡಕ್ಕೆ ಅನುಕೂಲ ಮಾಡಿ ಕೊಡುತ್ತಾರೆ.
ಕನ್ನಡ ಸಾಹಿತ್ಯ ಸಂಘದ ಸಾಹಿತ್ಯಿಕ ಚಟುವಟಿಕೆಗಳೆಂದರೆ ಉಪನ್ಯಾಸಗಳನ್ನು ಏರ್ಪಡಿಸುವುದು, ನಾಡಹಬ್ಬಗಳನ್ನು ಆಚರಿಸುವುದು, ಸಾಹಿತ್ಯಪರೀಕ್ಷೆಗಳನ್ನು ನಡಿಸುವುದು. ಇದರಲ್ಲಿ ಕುಮಾರವ್ಯಾಸ ಭಾರತದ ಉಪನ್ಯಾಸ ಪ್ರಮುಖವಾದದ್ದು. ಇದು ಭಾರತ ಬಿಂದುರಾಯರಿAದ ಮೂರು ತಿಂಗಳು ಕಾಲ ನೆರವೇರಿತು. ಮೂರು ತಿಂಗಳು ಕಾಲ ಅವರ ವಾಸ್ತವ್ಯ ಇವರ ಮನೆಯಲ್ಲಿಯೇ ಇತ್ತು. ಇವರ ಕಾರ್ಯಕ್ರಮಕ್ಕೆ ಆ ಕಾಲದಲ್ಲಿ ಸಾವಿರಕ್ಕೂ ಹೆಚ್ಚಿನ ಜನ ಸೇರುತ್ತಿದ್ದರು. ಮರಾಠಿ ಮತ್ತು ಉರ್ದು ಮಾತನಾಡುವವರೂ ಆಸಕ್ತಿಯಿಂದ ಸೇರುತ್ತಿದ್ದರು ಎಂಬುದೂ ವಿಶೇಷ. ಜೈಮಿನಿಭಾರತ, ರಾಮಪಟ್ಟಾಭಿಷೇಕದಂತಹ ಗ್ರಂಥಗಳ ವಾಚನ ಕಾರ್ಯಕ್ರಮ ನಡೆಯುತ್ತಿದ್ದವು.
ಇವರು ಪರಿಷತ್ತಿನ ಸಹಾಯದಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ, ಜಾನಪದ ಮಹಾ ಮೇಳಗಳು, ಮಹಿಳಾವರ್ಷ, ಪುಸ್ತಕವರ್ಷ, ಕನ್ನಡ-ಕನ್ನಡ ಕೋಶವನ್ನು ಸಿದ್ಧಪಡಿಸುವುದು, ಇಂತಹ ಚಟುವಟಿಸಕೆಗಳÀನ್ನು ಏರ್ಪಡಿಸಿದ ಹೆಮ್ಮೆ ಇವರದು. ಇದರೊಂದಿಗೆ ಸುರಪುರದ ಕನ್ನಡ ಸಾಹಿತ್ಯಸಂಘ, ರಂಗಮಪೇಟೆಯ ಕನ್ನಡ ಸಾಹಿತ್ಯ ಸಂಘ, ಶಹಬಾದಿನ ಕನ್ನಡ ಸಾಹಿತ್ಯ ಸಂಘಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಯಾಕೆಂದರೆ ಇಲ್ಲಿ ಆಗಮಿಸಿದ ವಿದ್ವಾಂಸರು ಅಲ್ಲಿಯೂ ಹೋಗಿ ಕನ್ನಡಪರ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರಂತೆ. ಇಂತಹ ವಾತಾವರಣ ಸೃಷ್ಟಿಯಾಗುವುದಕ್ಕೆ ತವಗರು ಕಾರಣರಾಗಿದ್ದಾರೆ.
ಇವರು ಎರಡನೆಯ ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೆಳನಕ್ಕೆ ಅಧ್ಯಕ್ಷರಾಗಿ ಅಯ್ಕೆ ಯಾಗುತ್ತಾರೆ. ಇವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ವಿಷಯವೆಂದರೆ ೧)ಲಕ್ಷಿö್ಮÃಶ ಕವಿಯ ಊರು ಸುರಪುರದ ಹತ್ತಿರದ ದೇವಪುರವೆಂಬುದು,ಇನ್ನೊAದು ಗುಲ್ಬರ್ಗಾ ವೆಂಬುದನ್ನು `ಕಲಬುರಗಿ’ ಎಂದು ಪ್ರಚಾರ ಮಾಡುವುದು. ಈಗ ಇವರ ಅಭಿಪ್ರಾಯದಂತೆ ಕಲಬುರಗಿಯಾಗಿ ಬದಲಾಗಿದೆ. ಇವರು ಉತ್ತಮ ವಾಗ್ಮಿಗಳು. ಇವರು ಮಾತನಾಡಲು ಆರಂಬಿಸಿದರೆ ಕೇಳುಗರೆಲ್ಲರೂ ತಲ್ಲೀನವಾಗುತ್ತಿದ್ದರಂತೆ. `ಕುಮಾರವ್ಯಾಸನ ಕಾವ್ಯದಲ್ಲಿ ರೂಪಕಗಳು’ ಎಂಬ ವಿಷಯದ ಕುರಿತಾಗಿ ಮಾತನಾಡಿದಾಗ ಜನರೆಲ್ಲಾ ಬೆರಗಾಗುತ್ತಿದ್ದರಂತೆ.ಅಫಜಲ್ಪುರಕ್ಕೆ ಹೋದಾಗ ಇವರು ಕನ್ನಡಭಾಷೆ ಮತ್ತು ಜನಪದ ಸಾಹಿತ್ಯದ ಕುರಿತಾಗಿ ಮಾತನಾಡಿದಾಗ ಅಲ್ಲಿಯ ಮೌಳೇಶ್ವರ ಮಠದ ಸ್ವಾಮಿಗಳು “ಚಾಮರಸನ ಕಾವ್ಯವನ್ನು ಪಲ್ಲಕ್ಕಿಯಲ್ಲಿಟ್ಟು ಮೆರಸುವಾಗ ಅದರ ರಸ ಕೆಳಗೆ ಚಲ್ಲಬಾರದೆಂದು ಪಲ್ಲಕ್ಕಿಯ ಕೆಳಗೆ ಪಾತ್ರೆಯನ್ನು ಹಿಡಿದಿದ್ದರಂತೆ, ಹಾಗೆ ನಿಮ್ಮ ಮಾತಿನಲ್ಲಿಯ ಅಮೃತ ರಸವು ಮಣ್ಣುಪಾಲಾಗಬಾರದೆಂದು ನನ್ನೆದೆಯ ಬೊಗಸೆಒಡ್ಡಿ ಕುಳಿತಿದ್ದೆ’ ಎಂದು ಹೇಳಿರುವ ಮಾತು ತವಗರ ಮಾತುಗಾರಿಕೆಗೆ ಹಿಡಿದ ಕನ್ನಡಿಯಾಗಿದೆ.
ತವಗರಿಗೆ ಅತ್ಯಂತ ಪ್ರಿಯವಾದ ವಿಷಯವೆಂದರೆ `ಹಾಸ್ಯ.’ ಆದ್ದರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಯಿಂದ ಹಾಸ್ಯ ಪ್ರಸಂಗವನ್ನು ಆಯ್ದು ಕೊಂಡು `ಹಾಸ್ಯದರ್ಶನ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ ಅವರು ಮುನ್ನುಡಿ ಬರೆದಿದ್ದಾರೆ. ಅನೇಕ ಸಮಸ್ಯಗಳನ್ನು ಕಷ್ಟ-ನಷ್ಟಗಳನ್ನು ಎದುರಿಸಿದ್ದು ಈ ಹಾಸ್ಯ ಭಾವದಿಂದ. ಈ ಕೃತಿಯನ್ನು ರಚಿಸಲು ಸುಮಾರು ಇಪ್ಪತೈದು ವರ್ಷಗಳ ಸಮಯವನ್ನು ತೆಗೆದು ಕೊಂಡಿದ್ದಾರೆ. ಜೀವನಾನುಭವವೇ ಇದಕ್ಕೆ ಮೂಲಧಾತು. ಹಾಸ್ಯ ನವ ರಸಗಳಲ್ಲೊಂದು. ಅಳು ಆತ್ಮ ವಿಶ್ವಾಸವನ್ನು ಕಡಿಮೆ ಗೊಳಿಸಿದರೆ ನಗು ಅಂತಃಸತ್ವವನ್ನು ಹೆಚ್ಚಿಸುತ್ತದೆ. ಅದ್ದರಿಂದ ಹಾಸ್ಯ ಎಲ್ಲರೂ ಆಸ್ವಾದಿಸಬೇಕಾದ ರಸ ಎಂಬ ಧೊರಣೆ ತವಗರದು. ಇದಲ್ಲದೇ ತವಗರು ಕಲಬುರಗಿ ಜಿಲ್ಲೆಯ ಪುರಾಣ, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಶಿಲಾಶಾಸನಗ¼ ,ಬಂದೇನವಾಜ, ಶರಣಬಸಪ್ಪ ಅಪ್ಪಾ ವಿಷಯನ್ನೊಳಗೊಂಡ `ಗುಲ್ಬರ್ಗಾ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಓದುವಾಗ ಸಮಗ್ರ ಕಲಬುರಗಿಯ ಪರಿಚಯವಾಗುತ್ತದೆ. ಇದಲ್ಲದೆ `ವಿನೋದ ವಿಹಾರ’, `ದುಃಖಸೇತು’,` ಬಂದದ್ದಲ್ಲಾ ಬಾರಿಸಿದ್ದಲ್ಲಾ’ ಎಂಬ ಇವರ ಲೇಖನಗಳು ಪ್ರಮುಖವಾದವು. ಇದನ್ನು ಐಬಿಎಚ್ ಪ್ರಕಾಶನ ಪ್ರಕಟಿಸಿದೆ. ಆದರೆ ಈ ಪುಸ್ತಕಗಳು ಅಧ್ಯಯನಕ್ಕೆ ಲಭ್ಯವಿಲ್ಲ. ಮೇಧಾವಿಗಳೂ, ಪಂಡಿತರೂ ಆದ ತವಗರಿಗೆ ಸಾಹಿತ್ಯ ರಚನೆ ಏನೂ ಅಸಾಧ್ಯವಾದುದಲ್ಲ. ಸಂಘಟನೆಯಲ್ಲಿ ತೊಡಗಿಸಿಕೊಂಡು ಅನೇಕ ಬರಹಗಾರರನ್ನು ಸೃಷ್ಟಿಸಿದ ಕೀರ್ತಿ ತವಗರದು. ಕನ್ನಡವನ್ನೇ ಮರೆತಿದ್ದ ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಟ್ಟ, ಕನ್ನಡಕ್ಕೆ ಭದ್ರ ಕೋಟೆ ಕಟ್ಟಿದ ವೀರಕನ್ನಡಿಗ. ವಸಂತ ಕುಷ್ಟಗಿ, ದೇವೇಂದ್ರಕುಮಾರ ಹಕಾರಿ, ಸಿದ್ದಯ್ಯ ಪುರಾಣಿಕ, ಶ್ರೀಮತಿ ಶಶಿಕಲಾ ಮೋಳ್ದಿ, ಶೈಲಜಾ ಉಡಚಣ, ಏ.ಕೆ.ರಾಮೇಶ್ವರ ಮುಂತಾದವರು ಗುರುಗಳನ್ನು ಧನ್ಯತಾ ಭಾವದಿಂದ ನೆನೆಯುತ್ತಾರೆ. ೧೯೮೩ `ವ್ಯಾಸ ಪೂರ್ಣಿಮೆ’ ಯಂದು ಇವರನ್ನು ಸನ್ಮಾನಿಸುತ್ತಾರೆ. ಶ್ರೀಜಯತೀರ್ಥ ರಾಪುರೋಹಿತ ಮತ್ತು ಡಾ.ವಸಂತ ಕುಷ್ಟಗಿಯವರ ನೇತೃತ್ವದಲ್ಲಿ ಅಭಿನಂದನಾ ಸಮಿತಿ ರಚನೆಯಾಗಿ ೧೯೮೫ ರಲ್ಲಿ `ತವಗಶ್ರೀ’ ಎಂಬ ಅಭಿನಂದನಾ ಗ್ರಂಥವು ಕನ್ನq ಸಾಹಿತ್ಯÀ ಸಂಘ ಕಲಬುರಗಿಯ ಪ್ರಕಾಶನದಲ್ಲಿ ಪ್ರಕಟವಾಗಿದೆ. ಈ ಗ್ರಂಥ ಪ್ರಕಟವಾಗಲು ಶ್ರೀನಿವಾಸಾಚಾರ್ಯ ಹುಣಸಿಗಿ, ವಿ,ಪಿ ದೇವಳಗಾಂಕರ್, ಹಾಗೂ ಶ್ರೀವಾಮದೇವ ದೀಕ್ಷಿತರ ಬೆಂಬಲ ಹಾಗೂ ಸಮೀತಿಯ ಎಲ್ಲಾ ಸದಸ್ಯರ ಕಾರ್ಯ ಸ್ಮರಣೀಯವಾದುದು.
ತವಗರದು ತುಂಬು ಕುಟುಂಬ. ಶ್ಯಾಮಸುಂದgರಾವÀ ತವಗ,ಗೋಪಾಲರಾವ ತವಗ,ಕಾಂತರಾಜತವಗ ಮೂರು ಜನ ಗಂಡುಮಕ್ಕಳು ಡಾ.ಮಂದಾಕಿನಿಬಾಯಿ,ಸುನAದಾಬಾಯಿ ದೇಶಪಾಂಡೆ,ಜಯಲಕ್ಷಿö್ಮÃ ಚಳಕೇರಿ,ರಮಾಬಾಯಿ ಆದ್ಯ ಸಂಧ್ಯಾಬುದ್ದಿಕೋಟಿ ಐದುಜನ ಹೆಣ್ಣು ಮಕ್ಕಳು. ಮಕ್ಕಳೆಲ್ಲರೂ ಸುಸಂಸ್ಕೃತರು. ಇವರ ಹಿರಿಯ ಮಗಳು ಡಾ.ಮಂದಾಕಿನಿಬಾಯಿ ಮತ್ತು ಅಳಿಯ ಶ್ರೀನರಸಿಂಗರಾಯರು ತವಗರ ದಾರಿಯಲ್ಲಿ ನಡೆದ ಕನ್ನಡಾಬಿಮಾನಿಗಳು. ರಾಯಚೂರಿನಲ್ಲಿ `ದಾಸಸಾಹಿತ್ಯ ಅಧ್ಯಯನಕೇಂದ್ರ’್ರವನ್ನು ರೂಪಿಸಿ ಸಾಹಿತ್ಯ ಚಟುವಟಿಕೆಗಳನ್ನು ರೂಪಿಸಿದವರು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದರು. ಇವರ ಪತ್ನಿ ಲಕ್ಷಿö್ಮÃಬಾಯಿಯವರು ಸಾಕ್ಷಾತ ಅನ್ನಪೂರ್ಣೇಶ್ವರಿಯ ರೂಪ. ಕಲಬುರಗಿ ನಗರಕ್ಕೆ ಬರುವ ಎಲ್ಲಾ ಕನ್ನಡದ ಅತಿಥಿಳಿಗೆ ಆತಿಥ್ಯಮಾಡುವದು ಇವರ ಕಾಯಕ. ಆರ್ಥಿಕವಾಗಿ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿ ಇರದಿದ್ದರೂ ಎಂದೂ ಬೇಸರ ಮಾಡಿಕೊಂಡಿಲ್ಲ. ಇವರ ಪರಸ್ಥಿತಿಯನ್ನು ಅರಿತು ಸ್ನೇಹಿತರು ತವಗರಿಗೆ ಮಾಸಿಕ ಅರವತ್ತರಿಂದ ಎಪ್ಪತ್ತು ರೂಪಾಯಿ ಹಣವನ್ನು ನೀಡುತ್ತಿದ್ದರಂತೆ, ತವಗರು ನಿವೃತ್ತಿ ಹೊಂದಿದ ಮೇಲೆ ಬಂದ ಹಣವನ್ನು ಸ್ನೇಹಿತರಿಗೆ ಮರು ಪಾವತಿಸಿದರಂತೆ. ಕಲಬುರಗಿಯ ತಮ್ಮ ಮನೆಗೆ `ಕನ್ನಡನೀಡು’ ಎಂದು ಹೆಸರಿಟ್ಟಿದ್ದರಂತೆ. ಅದು ಅನ್ವರ್ಥಕವಾಗಿತ್ತು. ಯಾವುದೇ ಪ್ರಶಸ್ತಿ ಪುರಸ್ಕಾರಕ್ಕಾಗಿ ಅವರು ಕನ್ನಡ ಸೇವೆ ಮಾಡಲಿಲ್ಲ. ಕನ್ನಡ ತವಗರ ಉಸಿರಾಗಿತ್ತು. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಘನಸರಕಾರ ಪ್ರತಿ ತಿಂಗಳು ಮಾಶಾಸನವನ್ನು ನೀಡಿ ಗೌರವಿಸಿದೆ.
ಹಿಂದನ ಹೆಜ್ಜೆ ಅರಿಯದೆ ಮುಂದೆ ನಡೆಯಬಾರದೆಂಬ ಅಲ್ಲಮ ಪ್ರಭುಗಳ ಮಾತಿನಂತೆ ನಾವು ಯಾವುದೇ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ನಮ್ಮ ಹಿರಿಯರನ್ನು ಅರಿತುಕೊಳ್ಳಬೇಕು, ಅವರನ್ನು ಅನುಸರಿಸಬೇಕು. ಅವರು ಸಾಧಿಸಿದ ಮಾರ್ಗದಲ್ಲಿ ಸಾಗಬೇಕು. ಪ್ರಸ್ತುತ ಐತಿಹಾಸಿಕ ವ್ಯಕ್ತಿ ತವಗ ಭೀಮಸೇನರಾಯರ ಕನ್ನಡಪರ ಕಾಳಜಿ ನಮಗೆ ಮಾದರಿ ಮತ್ತು ಆದರ್ಶ. ಕನ್ನಡವನ್ನು ಕಟ್ಟುವಲ್ಲಿ ಯಾವುದೇ ಪವಾಡ ಮಾಡಿಲ್ಲ. ಆದರೆ ಇವತ್ತು ಅವರ ಕಾರ್ಯಗಳೆಲ್ಲ ಪವಾಡ ಸದೃಶ್ಯ ಎನ್ನಿಸುತ್ತವೆ. ಗುರುವಾಗಿ ಕನ್ನಡಾಭಿಮಾನಿಯಾಗಿ, ಸಂಘಟಕರಾಗಿ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆ ಸ್ಮರಣೀಯವಾದದ್ದು.
ಅಕರ ಗ್ರಂಥ-`ತವಗಶ್ರೀ’ ಅಭಿನಂದನಾಗ್ರAಥ- ಸಂಪಾದಕರು ಶ್ರಿಜಯತೀರ್ಥ ರಾಜಪುರೋಹಿತ ಮತ್ತು ಡಾ.ವಸಂತಕುಷ್ಟಗಿ.
ಕನ್ನಡ ಸಾಹಿತ್ಯ ಸಂಘ,ಕಲಬುರಗಿ.
ಮೌಖಿಕ ಮಾಹಿತಿ-ಶ್ರೀಮತಿ ರೂಪಾ ಜಯತೀರ್ಥ ಜಾಗಿರದಾರ.
ಲೇ.ಡಾ.ಶೀಲಾದಾಸ
ಪ್ರಾಚಾರ್ಯರು. ಬಿ.ಆರ, ಬಿ. ವಾಣಿಜ್ಯಮಹಾವಿದ್ಯಾಲಯ.
ರಾಯಚೂರು-೫೮೪೧೦೩.
೯೪೪೮೯೭೩೬೭೦