ಹರಿದಾಸ ಸಾಹಿತ್ಯಾ ಮತ್ತು ಮಹಿಳಾ ಸಂವೇದನೆ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹರಿದಾಸ ಸಾಹಿತ್ಯ ಜನಪರ ನಿಲುವುಗಳನ್ನು ಮೈಗೂಡಿಸಿಕೊಂಡು ಜನಮುಖಿಯಾಗಿ ಬೆಳೆದು ಬಂದಿದೆ.ಹರಿದಾಸ ಸಾಹಿತ್ಯ ರಚನೆಯಗುವ ಸಂದರ್ಭದಲ್ಲಿ ಭಾರತ ಅನೇಕ ರಾಜಕೀಯ ವಿಪ್ಲವಗಳನ್ನು ಕಂಡಿತ್ತು. ಸಾಮನ್ಯರ ಜೀವನ ಅಸ್ತವ್ಯಸ್ತವಾಗಿತ್ತು.ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡ ಜನರು ಭಯಭೀತರಾಗಿದ್ದರು.ಇಂತಹ ಸಂದರ್ಭದಲ್ಲಿ ಜನರಿಗೆ ಆತ್ಮವಿಶ್ವಾಸ,ದೈರ್ಯ ತುಂಬುತ್ತಾ ಮನೆಮನೆಗೆ ಹೋಗಿ ಸಾಂತ್ವನ ನೀಡಿದರು.ಹೀಗಾಗಿಸಮಾಜದ ಎಲ್ಲಾ ಸ್ಥರದ ಜನರ ಭಾವನೆಗಳು ಹರಿದಾಸ ಸಾಹಿತ್ಯದಲ್ಲಿ ವ್ಯಕ್ತವಾಗಿವೆ.


ಮಹಿಳೆ ಸಮಾಜದ ಅವಿಭಾಜ್ಯ ಅಂಗ. ಮಹಿಳೆ ಇಲ್ಲದ ಸಮಾಜವನ್ನು ಕಲ್ಪಸಿಕೊಳ್ಳುವುದು ಅಸಾದ್ಯವೇ ಸರಿ. ಪ್ರಸ್ತುತ ಹರಿದಾಸ ಸಾಹಿತ್ಯ ಸಮಾಜೋಧರ್ಮಿರಿಕ ನೆಲೆಯಲ್ಲಿ ರೂಪಗೊಂಡದ್ದು. ಆದ್ಯಾತ್ಮದ ಲೋಕದಲ್ಲಿ ಭಕ್ತನಾದವನು ಭಗವಂತನಿಗೆ ಶರಣಾಗಬೇಕು. ಇದನ್ನೇ ಹೆಣ್ಣಾಗುವ ಪ್ರಕ್ರೀಯೆ ಎಂದು ಗುರುತಿಸಲಾಗುತ್ತದೆ. ಒಂದರ್ಥದಲ್ಲಿ ತತ್ತ÷್ವಸಾಹಿತ್ಯವೆಲ್ಲಾ ಮಹಿಳಾದಂವೇದನೆಯನ್ನು ಒಳಗೊಂಡದ್ದು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲಾ. ಈ ವಿಚಾರವನ್ನೆ ವಚನಕಾರರು ಶರಣಸತಿ ಲಿಂಗ ಪತಿ ಎಂದು Pರೆದದ್ದು. ಮುಂದುವರೆದು ಹರಿದಾಸ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳನ್ನು ವಿಪುಲವಾಗಿ ಕಾಣಬಹುದು

Dr. Sheela Kumari Das

Celebrating the richness of Kannada Literature and Culture through research and poetry.

ತ್ವರಿತ ಲಿಂಕ್‌ಗಳು (Quick Links)

Contact Info

Raichur, Karnataka, India
Email: contact@drsheelakumaridas.com

© 2026 Webiste Designed by Programic IT Solutions,Raichur. All Rights Reserved.inar dapibus leo.